Skip to main content

ದುಃಖವಿಲ್ಲದೆ ಸುಖವಿಲ್ಲ ಪಾಪವಿಲ್ಲದೆ ಪುಣ್ಯವಿಲ್ಲ

ದುಃಖವಿಲ್ಲದೆ ಸುಖವಿಲ್ಲ ಪಾಪವಿಲ್ಲದೆ ಪುಣ್ಯವಿಲ್ಲ * ರಾಮಸ್ವಾಮಿ ಮಾತೃ ಪ್ರೇಮವಿಲ್ಲದೆ ಸೃಷ್ಟಿ ಮುಂದುವರಿಯುವುದಿಲ್ಲ. ಯಾವುದೂ ಕೇವಲ ಔತಿಕವೂ ಅಲ್ಲ ಅಥವಾ ಅಚೌತಿಕವೂ ಅಲ್ಲ. ಒಂದು ಮತ್ತೊಂದನ್ನು ಸೂಚಿಸುವುದು. ಈ ಪ್ರಪಂಚಕ್ಕೆ ಒಂದು ಹಿನ್ನೆಲೆ ಇದೆ. ಮಾನವ ದೇಹ ಭಾವನೆಯನ್ನು ಮೀರಿ ಹೋದಾಗ, ಹಿಂದೂಗಳು, ಕ್ರೈಸ್ತರು, ಮಹಮದೀಯರು ಅಥವಾ ಬೌದ್ಧರು ಯಾವುದೇ ಪಂತಕ್ಕೆ ಸೇರಿದವರಾದರೂ ಎಲ್ಲರಿಗೂ ಒಂದೇ ಅನುಭವ ಆಗುತ್ತದೆ. ಅನುಭವವೇ ನಮ್ಮ ನಿಜವಾದ ಜ್ಞಾನ ಅಥವಾ ಧರ್ಮ. ನಾವು ಅನೇಕ ಶತಮಾನಗಳಿಂದ ಅದರ ವಿಷಯವಾಗಿ ಮಾತನಾಡುತ್ತಿದ್ದರೂ ನಮ್ಮ ಆತ್ಮವು ನಮಗೇ ತಿಳಿಸಲಾರದು. ಚಂಚಲತೆ ಇಲ್ಲದೆ ಮಾನವ ಶಕ್ತಿಯನ್ನು ಏಕಾಗ್ರಹಗೊಳಿಸುವುದೊಂದೇ ದೇವರನ್ನು ಅಥವಾ ಅವನ ಶಕ್ತಿಯನ್ನು ನೋಡುವ ಏಕಮಾತ್ರ ಉಪಕರಣ. ಧರ್ಮವು ನಿಮಗೆ ಏನನ್ನು ಕೊಡುವುದಿಲ್ಲ. ಅದು ಇರುವ ಆತಂಕಗಳನ್ನು ನಿವಾರಿಸಿ ನಿಮ್ಮ ಆತ್ಮವನ್ನು ನೋಡಲು ಅವಕಾಶ ಮಾಡಿಕೊಡುವುದು. ಅನಾರೋಗ್ಯವೇ ಮೊದಲನೇ ಆತಂಕ. ಆರೋಗ್ಯವಾದ ದೇಹವೇ ಅತಿ ಮುಖ್ಯವಾದ ಉಪಕರಣ. ನಾವು ದಾಟಲಾರದಂತ ಅಂಶವೆಂದರೆ ಖಿನ್ನತೆ, ಸಂಶಯ, ದೃಢತೆ ಇಲ್ಲದೇ ಇರುವುದು. ನಮ್ಮ ಪೂರ್ವಿಕರು ದೇವರು, ಧರ್ಮ, ನೀತಿ ಮುಂತಾದವುಗಳನ್ನು ಕುರಿತು ಚಿಂತಿಸುತ್ತಿದ್ದರು. ಆದ ಕಾರಣವೇ ನಮ್ಮ ಬುದ್ಧಿ ಅವುಗಳನ್ನೇ ಕುರಿತು ಚಿಂತಿಸುತ್ತದೆ. ಚಿಂತಿಸುವಾಗ ಲೌಕಿಕ ಪ್ರಯೋಜನಕ್ಕೆ ತವಕಪಟ್ಟರೆ ಅವನ್ನು (ದೇವರು, ನೀತಿ ಇವುಗಳನ್ನು) ಪುನಃ ಕಳೆದುಕೊಂಡರೂ ಕಳೆದುಕೊಳ್ಳಬಹುದು. ಆತ್ಮವು ಮನಸ್ಸನ್ನು ಅರಿಯುವುದು. ಮನಸ್ಸಿಗೆ ಸ್ವಯಂ ಪ್ರತಿಭೆ ಇಲ್ಲ. ಆತ್ಮವು ಮತ್ತಾವುದಕ್ಕೂ ಕಾರಣವಾಗಲಾರದು. ಕೆಟ್ಟ ಆಲೋಚನೆ ಕೆಟ್ಟ ಕೆಲಸಕ್ಕೆ ಹಾನಿಕರ. ಮನಸ್ಸನ್ನು ನಿಗ್ರಹಿಸಿ ಇಂದ್ರಿಯರೂ ನಿಮಗೆ ಇರುವ ಸಂದರ್ಭವನ್ನು ತ್ಯಜಿಸಿ. ನಮ್ಮಲ್ಲಿರುವ ಎಲ್ಲ ಸಾಮರ್ಥ್ಯಗಳೂ ಮುಕ್ತಿಯನ್ನು ಗಳಿಸುವುದಕ್ಕೆ ಮಾರ್ಗವಾಗುತ್ತದೆ. ಮನಷ್ಯ ತನ್ನ ಕೆಲಸಕ್ಕೆ ತಾನೇ ಹೊಣೆಯಾಗುತ್ತಾನೆ. ಅವನ ನೋವು ಮತ್ತು ಮೇಲ್ಪಟ್ಟ ಪೂಜೆಯಿಂದ ಯಾರೊಬ್ಬರೂ ಒಳಮನಸ್ಸನ್ನೂ ಬೆಳೆಸಿಕೊಳ್ಳಲು ಸಫಲರಾಗುವುದಿಲ್ಲ. ಧರ್ಮವನ್ನು ಯಾರೂ ಕೊಡಲಿಲ್ಲ. ಯಾರೂ ಹುಟ್ಟಿಸಲಿಲ್ಲ ಮತ್ತು ಅದು ಒಂದು ಅಸಾಧಾರಣ ಕಾನೂನು ಅಲ್ಲ. ನಮ್ಮ ಶರೀರವೇ ಧರ್ಮ, ಮನಸು ಧರ್ಮ, ಧರ್ಮವನ್ನು ಯಾರೂ ನಿಂದಿಸಬಾರದು. ಮನುಷ್ಯರಲ್ಲಿ ದ್ವೇಷ, ಅಸೂಯೆ, ಅಶಾಂತಿ, ಅಹಂ, ಭೇದ, ಕಾಲ್ಪನಿಕ ಅಮಂಗಳ ಸೃಷ್ಟಿಸುವಂತಹ ನೂರಾರು ವಾಕ್ಯಗಳ ಬೋಧನೆಗಿಂತಲೂ ಕೇಳಿದ ಕೂಡಲೇ ಮನಸ್ಸಿಗೆ ಶಾಂತಿ, ಸೌಖ್ಯ, ಮುದ ನೀಡುವಂತಹ ಒಂದೆರಡು ವಾಕ್ಯಗಳು ನೂರುಪಾಲು ಮೇಲು. ಮೃದುತ್ವವು ದೌರ್ಬಲ್ಯದಲ್ಲಿ ಸುಳ್ಳು ಹೇಳುವುದನ್ನು ನಂಬಿಸಿ ಬಿಡುವುದು. ಮೃದು ವಚನ ಪರಿಣತಿಯಲ್ಲ. ಅದು ಆರಂಭ, ಒಂದು ಕಾಸೂ ಖರ್ಚಿಲ್ಲದೇ ಜನರ ಹೃದಯ ಸಿಂಹಾಸನದಲ್ಲಿ ಪ್ರತಿಷ್ಠಿತವಾಗಲು ಇರುವ ಸರಳ ಮಾರ್ಗವೇ ಮೃದು ಭಾಷಣ. ಇವೆಲ್ಲವೂ ರಾಜಕಾರಣಿಗಳ ಮುಖ್ಯ ಅಸ್ತ್ರಗಳು. ಇಂಥ ಮೃದು ವಚನ ಸಾಧು ಸಂತರೂ ಮಠಾಧೀಶರಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಇಂಥದೇ ಗುಣಗಳು ನಿತ್ಯಾನಂದನ ರೋಮ ರೋಮಗಳಲ್ಲಿ ಎಲ್ಲ ರಕ್ತಕಣದಲ್ಲಿ ಹೆಚ್ಚಾಗಿರುವುದೆಂದು ಈ ದೇಶದ ಎಲ್ಲ ಜನತೆಗೂ ಗೊತ್ತಿರೋ ವಿಚಾರ. ನಿಜವಾದ ಮೃದುತ್ವ ನಲಿಗೆಯಲ್ಲಲ್ಲ, ಕೃತಿ ಹಾಗೂ ಅವರ ಹಿಂದಿನ ಅಂತಃಕರಣದಲ್ಲಿರುತ್ತದೆ. ಹೀನ ಭಾವನೆ ಸ್ವಾಭಿಮಾನಶೂನ್ಯತೆ, ಆತ್ಮ ಜ್ಞಾನಿ ಒಳಿತಲ್ಲ. ಇದರಿಂದ ಮನುಷ್ಯ ತನ್ನ ಇಹಪರಗಳಿಗೆ ದಾರಿಗೆ ಅಡ್ಡಗೋಡೆ ಕಟ್ಟಿಕೊಳ್ಳುತ್ತಾನೆ. ತನ್ನ ಬುಡವನ್ನೇ ಕೆಡಿಸಿಕೊಳ್ಳುತ್ತಾನೆ. ಅಹಂಕಾರ ಸ್ವಾರ್ಥಗಳಿಂದಲೂ ಶತ್ರುಗಳನ್ನು ಬೆಳೆಸಿಕೊಳ್ಳುತ್ತಾನೆ. ತನ್ನನ್ನೇ ಸರ್ವಸ್ವವೆಂದು ತಿಳಿದು ಸುತ್ತ ಗೂಡು ಕಟ್ಟಿಕೊಂಡ ಕೀಟದಂತೆ ಒಳಗೊಳಗೇ ಕೊಳೆತು ಸಾಯುತ್ತಾನೆ ಅಥವಾ ರಾವಣ, ಕಂಸ, ಹಿರಣ್ಯಕಶ್ಯಪ್ ಶಿಶುಪಾಲರಂತೆ ಕೆಡುತ್ತಾರೆ. ಸಮರ್ಥನಾದವನೇ ಕ್ಷಮಾಶೀಲನಾಗುವನು, ಕ್ಷಮಾಶೀಲವೇ ಕ್ಷಮಾಪತಿ ಎಂದರೆ ಭೂಲೋಕದ ಒಡೆಯನಾಗಬಲ್ಲ. ಒಂದು ಕಾಲದಲ್ಲಿ ಭಾರತೀಯರು ಜಗತ್ತಿಗೆ ಗುರುಗಳಾಗಿದ್ದೆವು. ಎಲ್ಲ ಕಲೆಗಳಲ್ಲೂ ಅಗ್ರಣ್ಯಗಳಾಗಿದ್ದವು. ವಿದೇಶದಿಂದ ಸಾವಿರಾರು ವಿದ್ಯಾರ್ಥಿಗಳು ಓದಲು ಭಾರತಕ್ಕೆ ಬರುತ್ತಿದ್ದರು. ಇಂದು ತಲೆ ಉರುಳಿಸುವುದರಲ್ಲಿ ಭಾರತ ರುದ್ರಭೂಮಿಯಾಗಿದೆ. ದೇವಾಲಯದಲ್ಲಿ ಪೌರೋಹಿತ್ಯ ಸಮುದಾಯವೇ ಕಳ್ಳರಾಗಿದ್ದಾರೆ. ಸಾಧು ಸಂತರು ನೂರಾರು ವಿದ್ಯಾರ್ಥಿಗಳಿಗೆ ಅನ್ನದಾನ ಮಾಡಿ, ವಿದ್ಯೆ ನೀಡಿ ಸಾವಿರಾರು ಎಕರೆ ಭೂಮಿಯನ್ನು ಲಪಟಾಯಿಸುತ್ತಿದ್ದಾರೆ. ಇನ್ನು ರಾಜಕಾರಣಿಗಳು ಬಾಯಿಬಿಟ್ಟರೆ ಅಸತ್ಯ ಆಶ್ವಾಸನೆ ಅಂಗೈಯಲ್ಲೇ ಆಕಾಶ ತೋರಿಸಿ ಕೊನೆಗೊಂದು ದಿನ ಅವರೇ ಜೈಲಿನಲ್ಲಿ ಕಂಬಿ ಎಣಿಸುತ್ತಾರೆ. ಮನುಷ್ಯ ಬದುಕಿದ್ದಾಗಲೇ ಜ್ಞಾನವಂತನಾಗಬೇಕು, ಧರ್ಮ ರಕ್ಷಕನಾಗಿರಬೇಕು. ಮೋಡಗಳು ನಮಗೆ ಮಳೆಯ ನೀರನ್ನು ದಾನ ಮಾಡುವುದರಿಂದ ಅವು ಬಹಳ ಎತ್ತರದಲ್ಲಿವೆ. ಬಿದ್ದ ಮಳೆಯ ನೀರನ್ನು ಸಂಗ್ರಹ ಮಾಡುವುದರಿಂದಲೇ ಸಮುದ್ರ ಕೆಳಗಡೆಯೇ ಇರುವುದು.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ