Skip to main content

Posts

Showing posts from April, 2014

ನಿಮ್ಮ ಯಾವುದೇ ರೀತಿಯ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ.

1.ಗೋಧಿ 2.ಮುಸುಕಿನ ಜೋಳ 3.ಬಿಳಿಜೋಳ 4.ಕಡಲೆ ಬೀಜ 5.ಕಡಲೆ ಕಾಳು 6.ಹುರಿಗಡಲೆ 7.ಅಕ್ಕಿ ತರಿ 8.ತುಗರಿ ಬೇಳೆ ಇವೆಲ್ಲವುಗಳನ್ನು 1ಕಿಲೋನಂತೆ ಕಲೆಸಿಕೊಂಡು ನಿತ್ಯ ಮುಂಜಾನೆ 7 ಹಿಡಿ ಗಳನ್ನು ತಗೆದುಕೊಂಡು ತಲೆಗೆ ಪ್ರದಕ್ಷಿಣೆ ಹಾಕಿ(ತಿರುಗಿಸಿ) ಗುಬ್ಬಿ/ ಪಾರಿವಾಳ ಗಳಿಗೆ ಹಾಕಿರಿ ನಿಮ್ಮ ಯಾವುದೇ ರೀತಿಯ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ.

ಪಾಯಪೂಜೆಗೆ ಬೇಕಾದ ಅಗತ್ಯ ಪೂಜಾ ಸಾಮಗ್ರಿಗಳು

*ಓಂ ವಿಶ್ವಕರ್ಮಣೇನಮಃ ವಾಸ್ತುದೇವತಾಭ್ಯೋನಮಃ* ಪಾಯಪೂಜೆಗೆ ಬೇಕಾದ ಅಗತ್ಯ ಪೂಜಾ ಸಾಮಗ್ರಿಗಳು 1.ಅರಿಸಿನ 2.ಕುಂಕುಮ 3.ಹೂವು 4.ಬಾಳೆಹಣ್ಣು 5.ಎಲೆ 6.ಅಡಿಕೆ 6.ತೆಂಗಿನಕಾಯಿ 7.ನವದಾನ್ಯದಗಂಟು ೯ (ಅಕ್ಕಿ,ಗೋಧಿ.ತುಗರಿ,ಹೆಸರು,ಕಡಲೆ,ಅವರೆ,ಎಳ್ಳು,ಉದ್ದು,ಉರುಳಿ) 8.ಪಂಚರತ್ನ(ಚಿನ್ನ,ಬೆಳ್ಳಿ,ತಾಮ್ರ,ಮುತ್ತು,ಹವಳ) 9.ಪಂಚಾಮೃತ(ಹಾಲು,ಮೊಸರು,ಜೇನು,ಕಲ್ಲುಸಕ್ಕರೆ,ಆಕಳತುಪ್ಪ) 10.ಬಾಳೆ ಎಲೆ 11.ಒಂದು ಕಳಸ(ತಾಮ್ರ ಅಥವ ಬೆಳ್ಳಿ ಚಂಬಿನ ಎಲೆ ಮತ್ತು ತೆಂಗಿನಕಾಯಿ,ಕಳಸದಸಾಮಾನುಗಳು) 12.ನೈವೇದ್ಯ(ಅವಲಕ್ಕಿ,ಹೆಸರುಬೇಳೆ,ಬಾಳೆಹಣ್ಣಿನ ರಸಾಯನ ಮಾಡಬಹುದು) ಪೂಜೆ ಮಾಡುವವಿದಾನ:- ವಿನಾಯಕನನ್ನು ಪ್ರತಿಸ್ಠಾಪಿಸಿ ಕಳಸವನ್ನಿಟ್ಟು ಒಂದು ನಾಲ್ಕು ಬಾಗ ಸಮನಾಗಿರುವ ಕಲ್ಲನ್ನು ತೊಳೆದುಕೊಂಡು ಸೈಟಿನ ಈಶಾನ್ಯಭಾಗವನ್ನು ಶುಚಿಗೊಳಿಸಿ ಕಲ್ಲನ್ನು ನಿಲ್ಲಿಸಿ ಅದರ ಪಕ್ಕದಲ್ಲಿ ಎಲೆಯಮೇಲೆ ಪಂಚಲೋಹ,ರತ್ನವನ್ನು ಇಟ್ಟು ಕೆಲಸದಸಾಮಾನುಗಳಾದ ಗುದ್ದಲಿ ಆರೆ ಪಿಕಾಶಿ ಇತ್ಯಾದಿಗಳನ್ನು ಇಟ್ಟು ವಿನಾಯಕನ ಪ್ರಾಥನೆಯೊಂದಿಗೆ ಆರಂಬಿಸಿ ತದನಂತರ ಮನೆದೇವರ ಪ್ರಾರ್ಥನೆ ಹಾಗು ವಾಸ್ತುದೇವನ ದ್ಯಾನ ಆವಾಹನಾದಿ ಶೋಡಶೋಪಚಾರ ಪೂಜೆಯನ್ನು ಮಾಡಿ ನಂತರ ಹಾಲು ತುಪ್ಪವನ್ನು ಅತ್ತಿ ಸೊಪ್ಪು,ಅಂಕೋಲೆ ಸಮೇತವಾದ ಕಲ್ಲಿಗೆ ಮನೆಯವರು ಬಿಡುವುದು.ನಂತರ ಐದುಜನ ಹಿರಿಯ ಮುತೈದೆಯರಿಗೆ ಅರಿಸಿನ ಕುಂಕುಮ ತಾಂಬೂಲನೀಡಿ ಅವರ ಆಶೀರ್ವಾದ ಪಡೆದು ಆನಂತರ ಅವರಿಂದ ಕಲ್ಲಿಗೆ ಪೂಜೆಮಾಡಿಸಿ ಹಾಲುತುಪ್ಪ ಬಿಡ

ಶ್ರೀ ಮಹದೇವನ ಸ್ಮರಣೆ (ಸ್ತೋತ್ರ)

ಶ್ರೀ ಮಹದೇವನ ಸ್ಮರಣೆ (ಸ್ತೋತ್ರ) ಶರಣೆನ್ನಿರೋ ಎಲ್ಲ ಶರಣೆನ್ನಿರೋ ಕಲಿಯುಗ ದೈವನಿಗೆ ನಲಿಯುವ ಮಹದೇವನಿಗೆ ಶರಣೆನ್ನಿರೋ ಎಲ್ಲ ಶರಣೆನ್ನಿರೋ ಕರುಣೆಯಿಂದಲಿ ನಮ್ಮ ಕಾಯೆನ್ನಿರೋ ಕಷ್ಟ,ಅನಿಷ್ಟಗಳ ಕಳೆಯೆನ್ನಿರೋ ||ಪ|| ಮಲೆ ಮಾದಪ್ಪನಿಗೆ ಶರಣೆನ್ನಿರೋ ಮನೆ ಮನವ ಶುದ್ದಿಯಗೊಳಿಸೆನ್ನಿರೋ ಶ್ರೀ ಮಂಜುನಾಥನಿಗೆ ಶರಣೆನ್ನಿರೋ ಶ್ರೀರಕ್ಷೆ ಯಿತ್ತೆಮ್ಮ ಕಾಯೆನ್ನಿರೋ ಭೂತನಾತನಿಗೆ ಶರಣೆನ್ನಿರೋ ನಮ್ಮ ಭಯಭೀತಿಗಳ ಕಳೆಯೆನ್ನಿರೋ ||ಶರಣೆನ್ನಿರೋ|| ಚುಂಚನಗಿರಿಯೋಡೆಯನಿಗೆ ಶರಣೆನ್ನಿರೋ ಚಂದದಿ ಬಂದನವ ಕಳೆಯೆನ್ನಿರೋ ಮುಕ್ಕಣ್ಣ ದೇವನಿಗೆ ಶರಣೆನ್ನಿರೋ ನಮ್ಮ ಸೊಕ್ಕುಗಳನೆಲ್ಲ ಅಳಿಸೆನ್ನಿರೋ ನಂಜುಂಡಸ್ವಾಮಿಗೆ ಶರಣೆನ್ನಿರೋ ನಾನು ನನ್ನದೆಂಬುದ ಮರೆಸೆನ್ನಿರೋ ||ಶರಣೆನ್ನಿರೋ|| ವಿಶ್ವನಾಥನಿಗೆ ಶರಣೆನ್ನಿರೋ ನಮ್ಮ ವಿಪ್ಪತ್ತುಗಳನೆಲ್ಲ ಕಳೆಯೆನ್ನಿರೋ ವೀರಭದ್ರಸ್ವಾಮಿಗೆ ಶರಣೆನ್ನಿರೋ ನಮ್ಮ ವಿರೋಧಿಗಳನೆಲ್ಲ ಅಳಿಸೆನ್ನಿರೋ ವಿಶ್ವೇಶ್ವರಸ್ವಾಮಿಗೆ ಶರಣೆನ್ನಿರೋ ನಮ್ಮ ವಿಘ್ನಗಳನೆಲ್ಲ ಕಳೆಯೆನ್ನಿರೋ ||ಶರಣೆನ್ನಿರೋ|| ಪಶುಪತಿನಾಥನಿಗೆ ಶರಣೆನ್ನಿರೋ ನಮ್ಮ ಪಾಪಗಳನೀ ಪರಿಹರಿಸೆನ್ನಿರೋ ರುದ್ರದೇವನಿಗೆ ಶರಣೆನ್ನಿರೋ ನಮ್ಮ ರೋಗರುಜಿನಗಳ ಕಳೆಯೆನ್ನಿರೋ ಶಂಕರದೇವನಿಗೆ ಶರಣೆನ್ನಿರೋ ನಮ್ಮ ಸಂಕಟಗಳನೆಲ್ಲ ಕಳೆಯೆನ್ನಿರೋ ||ಶರಣೆನ್ನಿರೋ||

||ಶ್ರೀ ಸಿಭೀಶ ಇಚ್ಚಾ ಜಯತುಃ||

||ಶ್ರೀ ಸಿಭೀಶ ಇಚ್ಚಾ ಜಯತುಃ|| ಶ್ರೀ ಗುರುಭ್ಯೋ ನಮಃ ( ಸರ್ವ ಕಾರ್ಯ ಸಿದ್ದಿಗಾಗಿ,ಆಪತ್ತು ಪರಿಹಾರಕ್ಕಾಗಿ ಶ್ರೀ ಸಿಭೀಶ ಲಕ್ಷ್ಮಿನರಸಿಂಹಸ್ವಾಮಿ ಸ್ತೋತ್ರ) "ಓಂ ಕ್ಷಂ" ಶ್ರೀ ಲಕ್ಷ್ಮಿ ನರಸಿಂಹದೇವಾ ಕಟ್ಟು ಕಟ್ಟು ಹೇ ಸಿಭೀ ವಾಸ ಕಟ್ಟು ಕಟ್ಟು ದೃಷ್ಟಗ್ರಹಛಾಯಾಗಳನ್ನು ಕಟ್ಟು ಒಟ್ಟು ದಶದಿಕ್ಕನು ಕಟ್ಟು ಕಟ್ಟು ಸರ್ವ ಕೆಟ್ಟ ಯಂತ್ರ-ಮಂತ್ರ-ತಂತ್ರ ಮೆಟ್ಟು ಮೆಟ್ಟು ಹಿಮ್ಮೆಟ್ಟು ದುಷ್ಟರಾ ಹೆಡೆ ಮುರಿಯ ಕಟ್ಟು,ಬಂಧನವ ಮಾಡು ಖೂಳ ದೈತ್ಯರ,ನರ,ವಾಕ್.ನೇತ್ರ,ದೇಹ,ಬುದ್ದಿಸ್ತಂಬನ ಮಾಡು ದುರುಳರಿಗೆ ಕಾಣು ನೀ ಕರಾಳ ರೂಪವ ತೋರು ತೋರೋ ನಿನ್ನ ಶರಣೆಂದವರಿಗೆ ಮಾಡು ಮಾಡು ಸಕಲತ್ರ ಭದ್ರಮಯ ನೀಡು ನೀಡು ನಿನ್ನ ದಾಸರ ಸಂಘ ಹೌದಭಯಕರ ವರ ಕರುಣಾಕರ ರಕ್ಷಿಸು ಮನ್ನಿಸು ಕಾಯೋ ಕೃಪಾಕರ (ಶ್ರೀ) ಸಿರಿ ಜಯ ಸಿಭೀಶ ಲಕ್ಷ್ಮಿನರಸಿಂಹ... ನಿನ್ನ ಸ್ಮರಣೆಯ ನಿತ್ತು ಸಕಲತ್ರ ಕಾಯೋ ನಿನ್ನ ದಾಸರ ದಾಸರನು ಕಟ್ಟು ಕಟ್ಟು ಕಂಕಣವ ತೊಟ್ಟು ಎನ್ನೊಡೆಯ ಶ್ರೀ ಗುರು ಪೊರಮೊಟ್ಟು ಶ್ರೀ ತತ್ವಾಭಿಮಾನಿ ದೇವತೆಗಳಂತರ್ಗತ ಶ್ರೀ ಸಿಭೀ ವಾಸ ಶೋಡಶಬಾಹುವೇ,ಎನ್ನ ಸರ್ವ ದೋಶಗಳನ್ನು ದಹಿಸು ಹೇ ಕ್ಷಮಾಸಾಗರಾ...... ಸಿರಿ ಜಯ ಸಿಭೀನಾರಸಿಂಹಾ ನಿನ್ನ ಸ್ಮರಣೆಯನಿತ್ತು ಸಕಲತ್ರ ಕಾಯೋ ನಿನ್ನ ದಾಸರ ದಾಸರನು ಸೂಚನೆ:ದಿನಕ್ಕೆ ೧೧ ಸಲ,೨೧ಸಲ,ಅಥವ ೧೦೮ಸಲ ಪರಿಶುದ್ದ ಮನಸ್ಸಿನಿಂದ ಪಠಿಸಬೇಕು ಪ್ರತಿಫಲ ನಿಶ್ಚಯ.

ಬಂಧಕಶಕ್ತಿಯೇ ರಾಹು-ಕೇತು

ಬಂಧಕಶಕ್ತಿಯೇ ರಾಹು-ಕೇತು ಸೂರ್ಯನ ಮಂಡಲದಲ್ಲಿ ಭೂಮಿಗೆ ಆಕರ್ಷಣೆ ಇರುವ ಏಳು ಗ್ರಹಗಳೂ (ಸೂರ್ಯನೂ ಸೇರಿ), 27 ನಕ್ಷತ್ರಗಳೂ, 12 ರಾಶಿಗಳಲ್ಲಿ ತ್ರಿಸರ್ಗ ಸೃಷ್ಟಿಯು ಹರಡಿಕೊಂಡಿದೆ. ಈ ಆಕರ್ಷಣೆ ಸೂರ್ಯ ಗ್ರಹದ್ದು, ಏಕಮೇವವಾಗಿ, ಸೂರ್ಯನ ಏಕ ತೇಜಸ್ಸು ಸಮಸ್ತ ಗ್ರಹಗೋಲವನ್ನು ತಿರುಗುತ್ತ ಸೃಷ್ಟಿ ಇರುವಿಕೆಗೆ ಆಧಾರವಾಗಿದೆ. ಇದಲ್ಲದೇ ಇನ್ನೂ ಕೋಟ್ಯಂತರ ಗೋಲಗಳೂ ಇವೆ. ಆದರೆ ಇವೇ ಏಕೆ ಹೆಣೆಯಲಾಗಿದೆ? ಇಷ್ಟು ಕರಾರುವಾಕ್ಕಾಗಿ ಜೋಡಿಸಿದಂತೆ ಇರುವುದು, ಅದು ತನ್ನಿಂತಾನೇ ಆಗುವಂಥದ್ದಲ್ಲ ಎಂದು ಬಾಲರಿಗೂ ತಿಳಿಯುವುದು. ಈ ಜೋಡಣೆ ಅನೂಹ್ಯ ಎಂದಿರುವರು ಆಂಗ್ಲ ವಿಜ್ಞಾನಿಗಳು. ಈ ಅನೂಹ್ಯವನ್ನೇ ವೇದಗಳು 'ಪರಬ್ರಹ್ಮ' ಎಂದಿರುವುದು. ಶಬ್ದಗಳು ಬೇರೆಯಾದರೆ ಅರ್ಥ ಬೇರೆಯಾಗಬೇಕೆಂಬ ನಿಯಮವೇನಿಲ್ಲವಷ್ಟೆ! ಹಾಗಾಗಿ ನಾವು ಗ್ರಹಗಳ ಕಾರಕತ್ವ ಅರ್ಥ ಮಾಡಿಕೊಳ್ಳಬೇಕಾದರೆ, ಭಗವಂತನ ಆ 'ಅನೂಹ್ಯ'ದ ಇರುವನ್ನು ಒಪ್ಪಿಯೇ ಮುನ್ನಡೆಯಬೇಕಾಗುತ್ತದೆ. ಈ ಗ್ರಹಗಳಿಗೆ ತಮ್ಮದೇ ಆದ ದೈವಶಕ್ತಿ ಚೇತನರಿದ್ದಾರೆ. ಆಯಾ ಗ್ರಹರ ಹೆಸರಲ್ಲೇ ಆ ಚೇತನರನ್ನು ಕರೆಯಲಾಗುವುದು. ಈ ಗ್ರಹಗಳು ತಮ್ಮ ಕಕ್ಷೆಯಲ್ಲಿ ಇದ್ದು, ಸುತ್ತುತ್ತಾ ಭೂಮಿಯನ್ನು ಒಳಗೊಂಡು ಸೂರ್ಯನನ್ನು ಸುತ್ತುವುದು. ಈ ತ್ರಿಪುಟಿಯನ್ನೇ 'ತ್ರಿಕಾಲ'ದ ಹೊರಪರಿಧಿ ಎನ್ನುವುದು. ನಾವು ಬದುಕುವುದು ಒಳಪರಿಧಿಯಲ್ಲಿ. ಈ ತಿರುಗುವ ಸಾಲಿಗೆ ಸೂರ್ಯನು ಬಾರನು, ಆತ ಸ್ಥಿರ, ಮತ್ತೆಲ್ಲವೂ ಆತನಿಂ

ಅಪರಿಚಿತ ಗ್ರಹಗಳ ಮಹತ್ವ

ಭಾರತೀಯ ಜ್ಯೋತಿಷ್ಯಶಾಸ್ತ್ರದ ಅನುಸಾರ ಏಳು ಪ್ರಮುಖ ಗ್ರಹಗಳು ಮತ್ತು ಎರಡು ಛಾಯಾ ಗ್ರಹಗಳು ಜನ ಜೀವನದ ಮೇಲೆ ಪ್ರಭಾವ ಬೀರುವುದನ್ನು ಸ್ವೀಕರಿಸಲಾಗಿದೆ. ಪಾಶ್ಚಾತ್ಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಏಳು ಗ್ರಹಗಳು ಹೊರತಾಗಿ ಹರ್ಷಲ್, ಪ್ಲೂಟೊ ಮತ್ತು ನೆಪ್ಚೂನ್ ಮೂರು ಗ್ರಹಗಳನ್ನು ಪರಿಗಣಿಸಲಾಗುತ್ತಿದೆ. ಆಳವಾದ ವಿಶ್ಲೇಷಣೆ ಮತ್ತು ಅಧ್ಯಯನದ ನಂತರ ಈ ಗ್ರಹಗಳು ಮಾನವ ಜೀವನದ ಮೇಲೆ ಬೀರುವ ಪ್ರಭಾವವನ್ನು ಒಪ್ಪಿಕೊಳ್ಳಬೇಕಾಗಿದೆ. *ಜನ್ಮ ಕುಂಡಲಿಯಲ್ಲಿ ನೆಪ್ಚೂನ್ ಮೀನ ರಾಶಿಗತನಾಗಿ ಯಾವುದೇ ಭಾವದಲ್ಲಿದ್ದರೂ ಅದರ ಶುಭತ್ವವು ಪ್ರಾಪ್ತವಾಗುತ್ತದೆ. *ನೆಪ್ಚೂನ್‌ದೊಂದಿಗೆ ಗುರುವೂ ಇದ್ದರೆ ಆ ಭಾವದ ಶುಭತ್ವವು ವೃದ್ಧಿಯಾಗುತ್ತದೆ. *ಪಂಚಮ ಭಾವದಲ್ಲಿ ನೆಪ್ಚೂನದೊಂದಿಗೆ ಮಂಗಲ ಅಥವಾ ರಾಹುವಿದ್ದರೆ ಸಂತಾನ ಸಂಬಂಧಿ ಕಷ್ಟವಿರುತ್ತದೆ. ಸ್ತ್ರೀಯರೇ ಜಾತಕದಲ್ಲಿ ಈ ಯೋಗವು ಗರ್ಭಪಾತ ಮಾಡಿಸುತ್ತದೆ. *ನೀಚ ರಾಶಿಯ ಸಪ್ತಮೇಶನೊಂದಿಗೆ ನೆಪ್ಚೂನ್ ಇದ್ದರೆ ದಾಂಪತ್ಯ ಸುಖ ಕಷ್ಟವಾಗುತ್ತದೆ. *ನೆಪ್ಚೂನ್ ಮತ್ತು ಶನಿ ಮಕರ ಅಥವಾ ಕುಂಭ ರಾಶಿಯಲ್ಲಿದ್ದು ದಶಮ ಭಾವದಲ್ಲಿದ್ದರೆ ವ್ಯವಹಾರದಲ್ಲಿ ಸಫಲತೆಯನ್ನು ನೀಡುತ್ತದೆ. ಆದರೆ ಪಿತೃ ಸುಖದಲ್ಲಿ ಕೊರತೆಯಾಗುತ್ತದೆ. *ದ್ವಾದಶ ಭಾವದಲ್ಲಿ ಕೇವಲ ನೆಪ್ಚೂನ್ ಇದ್ದರೆ ಅನೇಕ ಪ್ರಕಾರದ ಶುಭಫಲಗಳಿರುತ್ತವೆ. ಪಾಪ ಗ್ರಹದಿಂದ ಗ್ರಸ್ತವಾಗಿದ್ದರೆ ಧನಾಭಾವವಿರುತ್ತದೆ. *ಯಾವುದೇ ಭಾವದಲ್ಲಿ ನೆಪ್ಚೂನ್ ಶುಕ್ರ-ಬುಧ-ಚಂದ್ರ ಅಥ

*ಗ್ರಹಗಳು ಮತ್ತು ಅವುಗಳ ವಿದ್ಯೆ*

ರವಿ ಎಲ್ಲಾ ಇಂಜಿನಿಯರಿಂಗ್(ಮೊಲತಂತ್ರಜ್ನಾನ,ಕೋರ್ ಸಬ್ಜಕ್ಟ್ ಮೆಕಾನಿಕಲ್,ಎಲೆಕ್ಟ್ರಿಕಲ್,ಸಿವಿಲ್,ಐಎಪ್ ಎಸ್, ಆರ್ಕ್,ಐ ಪಿ ಎಸ್. ಚಂದ್ರ ಸಿ ಎಸ್, ಕೆಮಿಕಲ್,ಪ್ಯಾಷನ್ ಟೆಕ್ನಾಲಜಿ,ಮನೋವಿಜ್ನಾನ,ಎಂಬಿಬಿಎಸ್,ಅಕೌಂಟ್ಸ್,ಎಂಬಿಎ,ಮಾರ್ಕೇಟಿಂಗ್. ಕುಜ ಎಲ್ಲಾಬಗೆಯ ಇಂಜನಿಯರಿಂಗ್,ಪ್ರಾಕ್ಟಿಕಲ್ ಇಂಜಿನಿಯರಿಂಗ್. ಬುಧ ತರ್ಕಶಾಸ್ತ್ರ,ವಿಜ್ನಾನ,(ಶುಕ್ರ)ವ್ಯಾಪಾರ,ಎಂ ಸಿ ಎ,ಎಂಬಿಎ,(ಬುದ,ಗುರು) ಗುರು ಎಂ ಬಿ ಎ,ಎಂ ಎಸ್ ಡ್ಬ್ಯು,ಬಯೋಟೆಕ್,ಎಸ್ ಪಿ ಎ,ಬಿಇಡಿ,ಎಂಇಡಿ.ಆಟೋಮೊಬೈಲ್ ಇಂಜಿನಿಯರಿಂಗ್,ಬಾಷಾತಜ್ನರು,ಎಕಾನಮಿಕ್ಸ್. ಶುಕ್ರ ಎಲ್ಲಾಕಲೆ,ವಿನ್ಯಾಸ,ಭರತನಾಟ್ಯ,ವಾದ್ಯಸಂಗೀತ,(ಲಲಿತಕಲೆಗಳು)ಸಂಗೀತ,ರೆಕಾರ್ಡಿಂಗ್,ನಟನೆ,ಕೊರಿಯೋಗ್ರಪಿ,ಸಿದ್ದ ಉಡುಪುಗಳವಿನ್ಯಾಸ,ಕಲೆಮತ್ತು ವಿಜ್ನಾನ,ವಿಜ್ನಾನಗಳ ಸಂಶೋದನೆ(ಕುಜ,ಶುಕ್ರ) ಶಿಕ್ಷಕ,ಬರಹಗಾರ,ಕಸ್ಮೆಟಾಲಜಿ,ಸರ್ಜರಿ,ಪರ್ಲರ್ಸ್. ಶನಿ ಮೆಟಲ್,ಕಬ್ಬಿಣ(ಪೌಂಡ್ರಿ)ಜಿಯಾಲಜಿ,ಮೆಟಾಲಜಿ,ಮೈನಿಂಗ್,ಎಂಇ,ಎರೋನಾಟಿಕ್ ಇಂಜಿನಿಯರಿಂಗ್,ಸರ್ಜರಿ,ಪಿಡ್ಬ್ಯುಡಿ,ಎಂಎಸ್ ಡಬ್ಲ್ಯು,ಸಾಪ್ಟ್ವೇರ್ ಇಂಜಿನಿಯರಿಂಗ್.

ಜಾತಕದಲ್ಲಿ ಗೃಹ ಯೋಗ

ವಾಸಯೋಗ್ಯವಾದ ಮನೆಯಿದ್ದರೂ, ಇನ್ನಿಲ್ಲದ ಅಡಚಣೆ. ಛೇ ಎಲ್ಲವೂ ಈ ಮನೆಯಿಂದ ಅಂತ ಗೊಣಗುವವರಿಗೇನು ಕಡಿಮೆಯಿಲ್ಲ. ಇನ್ನೂ ಎಷ್ಟೋ ಮಂದಿ ಮನೆ ಕಟ್ಟಿಸುತ್ತಾರೆ. ಆದರೆ ಕಟ್ಟಿಸಿದ ಮನೆಯಲ್ಲಿ ವಾಸ ಮಾಡಲಿಕ್ಕೆ ಅಗುವುದಿಲ್ಲ. ಇದೇಕೆ ಹೀಗೆ? ಎನ್ನುತ್ತಾರೆ. ಗೃಹನಾಶ ಯೋಗ : ನಿಮ್ಮ ಜಾತಕದಲ್ಲಿ ಚತುರ್ಥಧಿಪತಿಯು ವ್ಯಯ ಸ್ಥಾನವಾದ 12 ರಲ್ಲಿ ಪಾಪ ಗ್ರಹಗಳಿಂದ ಕೂಡಿದ್ದರೆ ಇಲ್ಲವೆ ವ್ಯಯಾಧಿಪತಿಯ ದೃಷ್ಟಿ ಇದ್ದರು ಗೃಹನಾಶ ಯೋಗ ಆಗುವುದು. ಇಂತಹ ಜಾತಕರಿಗೆ ಮನೆ ಇದ್ದರೂ ವಾಸಿಸಲು ಆಗುವುದಿಲ್ಲ. ಚತುರ್ಥಾಧಿಪತಿಯು ನವಾಂಶ ಕುಂಡಲಿಯಲ್ಲಿ ವ್ಯಯ ಸ್ಥಾನದಲ್ಲಿದ್ದರೆ ಮನೆಯ ಸಂಬಂಧವಾಗಿ ಹಣ ಮತ್ತು ಮನೆ ಎರಡನ್ನು ಕಳೆದು ಕೊಳ್ಳುವ ಸಂಭವ ಇರುತ್ತದೆ. ಚತುರ್ಥ ಸ್ಥಾನದಲ್ಲಿ ಪಾಪ ಗ್ರಹಗಳೇ ಇದ್ದರೆ ಅನೇಕ ರೀತಿಯ ಸಮಸ್ಯೆಗಳಿಗೆ ಸಿಲುಕಿ ಮನೆಯೇ ಬೇಡ ಎನ್ನುವ ತೀರ್ಮಾನಕ್ಕೆ ಬಂದು ಬಿಡುತ್ತಾರೆ ಅಥವಾ ಮನೆಯನ್ನು ಯಾರಿಗಾದರೂ ಮಾರಾಟ ಮಾಡಿ ಬಿಡುತ್ತಾರೆ. ಕಟ್ಟಿದ ಮನೆಯನ್ನು ಯಾರಾದರೂ ಖರೀದಿ ಮಾಡಬೇಕೆಂದು ಪ್ರಶ್ನೆ ಕೇಳಿದರೆ ಪ್ರಶ್ನಾಲಗ್ನ ಚತುರ್ಥ ಸ್ಥಾನಾಧಿಪತಿಗಳು ಕೇಂದ್ರ ತ್ರಿಕೋನದಲ್ಲಿ (1,4,7,10,5,9) ಉಚ್ಚ ಮಿತ್ರ ಸ್ವಕ್ಷೇತ್ರದಲ್ಲಿ ಇದ್ದರೆ ಯಾವುದೇ ಆಸ್ತಿ ಮನೆಯನ್ನು ತೆಗೆದು ಕೊಳ್ಳಬಹುದು. ಲಗ್ನ ಚತುರ್ಥಾಧಿಪತಿಗಳು 6,8,12ನೇ ಭಾವಗಳಲ್ಲಿ ಇದ್ದು ಲಗ್ನ ಮತ್ತು ಚತುರ್ಥ ಭಾವದಲ್ಲಿ ಶನಿ, ರಾಹು ಭಗವಾನರು ಇದ್ದರೆ ಆ ಆಸ್ತಿ ಅಥವಾ ಮನೆಯಿಂದ ಕಷ್ಟ, ತೊ

ಅಭಿವೃದ್ಧಿಯ ಸಂಕೇತ 'ಗಜಕೇಸರಿ ಯೋಗ'

ಜಾತಕನ ಕುಂಡಲಿಯಲ್ಲಿ ಗುರು ಮತ್ತು ಚಂದ್ರ ಒಂದೇ ಸ್ಥಾನದಲ್ಲಿದ್ದರೆ ಅಥವಾ ಚಂದ್ರನ ಕೇಂದ್ರ ಸ್ಥಾನದಲ್ಲಿ ಗುರು ಗ್ರಹವಿದ್ದರೆ ಅಂತಹ ಜಾತಕನಿಗೆ ಗಜಕೇಸರಿ ಯೋಗವಿದೆ ಎನ್ನುತ್ತಾರೆ. ಇದನ್ನು ಕೆಲವೊಮ್ಮೆ ಕೇಸರಿ ಯೋಗ ಎಂದೂ ಕರೆಯುತ್ತಾರೆ. ಕುಂಡಲಿಯ ಲಗ್ನ ಭಾವದಿಂದ 1, 4, 7 ಮತ್ತು 10ನೇ ಸ್ಥಾನಗಳನ್ನು ಚಂದ್ರ ಕೇಂದ್ರಸ್ಥಾನಗಳೆನ್ನುತ್ತಾರೆ. ಗುರು ಗ್ರಹವು ಐಶ್ವರ್ಯ, ಜ್ಞಾನ, ಜನಪ್ರಿಯತೆ, ಅದೃಷ್ಟ ಮತ್ತು ಸಂತಾನ ಭಾಗ್ಯದ ಸಂಕೇತವಾಗಿದೆ. ಚಂದ್ರನು ಮನೋಕಾರಕ, ಮೃದುಭಾಷಿ, ಸಂವಾಹಕ, ಸಂತೋಷ ಮತ್ತು ಅಭಿವೃದ್ಧಿಯ ಸಂಕೇತನಾಗಿದ್ದಾನೆ. ಆ ಕಾರಣದಿಂದಲೇ ಚಂದ್ರನ ಕೇಂದ್ರ ಸ್ಥಾನದಲ್ಲಿ ಗುರುವಿನ ಇರುವಿಕೆಗೆ ವಿಶೇಷ ಗಮನವನ್ನು ನಮ್ಮ ಪ್ರಾಚೀನರು ಕೊಟ್ಟಿದ್ದಾರೆ. ಜಾತಕದಲ್ಲಿ ಗಜಕೇಸರಿ ಯೋಗವು ಶ್ರೇಯಸ್ಸನ್ನು, ಜೀವನದಲ್ಲಿ ಅಭಿವೃದ್ಧಿಯನ್ನು ಸೂಚಿಸುತ್ತದೆ. ಅಂತಹವರು ಉತ್ತಮ ಆದಾಯ ಗಳಿಸುತ್ತಾರೆ. ದೀರ್ಘಾಯುಷ್ಯ ಉಳ್ಳವರಾಗಿರುತ್ತಾರೆ. ಅಷ್ಟೇ ಅಲ್ಲ, ಸಾಮಾಜಿಕ ಜೀವನದಲ್ಲಿ ಪ್ರತಿಷ್ಠೆ, ಗೌರವವನ್ನು ಪಡೆಯುತ್ತಾರೆ. ಜೀವನದಲ್ಲಿ ಎದುರಾಗುವ ಅಡಚಣೆಗಳನ್ನು ನಿವಾರಿಸಿಕೊಂಡು ಉತ್ತಮ ಜೀವನ ನಡೆಸುತ್ತಾರೆ. ವೇದಿಕ್ ಅಸ್ಟ್ರಾಲಜಿ ಪ್ರಕಾರ ಗಜಕೇಸರಿ ಯೋಗವು ಅತ್ಯಂತ ಶ್ರೇಷ್ಠ ಯೋಗವಾಗಿದೆ. ಆನೆ (ಗಜ) ಮತ್ತು ಸಿಂಹ (ಕೇಸರಿ) ಎರಡೂ ಬಲಿಷ್ಠ ಪ್ರಾಣಿಗಳು. ತಮ್ಮ ನಡೆ, ನುಡಿಗಳಿಂದ ಬೇರೆ ಪ್ರಾಣಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ. ಪರಾಶರ ಮುನಿಗಳು
ಲಗ್ನಾದಿ ದ್ವಾದಶ ಭಾವಗಳು-ಸ್ಥಾನಗಳು ಜಾತಕ ಅಥವಾ ಕುಂಡಲಿಗಳಲ್ಲಿ ಹನ್ನೆರಡು ಮನೆಗಳಿರುತ್ತವೆ, ಅವುಗಳನ್ನು ಭಾವ ಅಥವಾ ಸ್ಥಾನಗಳೆಂದು ಕರೆಯಲಾಗುತ್ತದೆ. ಈ ಹನ್ನೆರಡು ಭಾವಗಳು ಮನುಷ್ಯನ ಜೀವನದ ವಿವಿಧ ವಿಷಯಗಳ ಸೂಚಕಗಳಾಗಿವೆ. ದ್ವಾದಶ ಭಾವಗಳ ಸೂಕ್ಷ್ಮ ಪರಿಚಯವು ಜ್ಯೋತಿಷ್ಯ ಮತ್ತು ಫಲನಿರ್ದೇಶಕ್ಕೆ ಅತ್ಯಂತ ಅವಶ್ಯಕ. ಈ ಲೇಖನದಲ್ಲಿ ಇವುಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳೋಣ. ನಮ್ಮ ದೇಶದಲ್ಲಿ ಜಾತಕವನ್ನು ಬರೆಯುವ ಅನೇಕ ಪ್ರಕಾರಗಳಿವೆ. ಮುಖ್ಯವಾಗಿ ಉತ್ತರದೇಶ ಮತ್ತು ದಕ್ಷಿಣದೇಶೀಯ ಎಂಬ ಎರಡು ಪ್ರಕಾರಗಳು ಪ್ರಸಿದ್ಧ. ನಾನು ಹೆಚ್ಚು ಉತ್ತರದೇಶೀಯ ಕುಂಡಲಿಪ್ರಕಾರವನ್ನು ಅನುಸರಿಸುತ್ತೇನೆ, ಈ ಪ್ರಕಾರಕ್ಕೆ ಕೆಲವು ಸೌಲಭ್ಯಗಳಿವೆ. ಆದರೆ ಎಲ್ಲ ಲೇಖನಗಳಲ್ಲಿ ಮೇಲೆ ಹೇಳಿದ ಎರಡೂ ಪ್ರಕಾರಗಳನ್ನು ಕೊಡುತ್ತೇನೆ. (ಕೆಳಗೆ ಕೊಟ್ಟಿರುವ ಎರಡು ಚಿತ್ರಗಳನ್ನು ನೋಡಿ, ಸ್ಥಾನಗಳನ್ನು ಎಣಿಸುವ ಪ್ರಕಾರವನ್ನು ತಿಳಿದುಕೊಳ್ಳಿ). ಈ ಜಾತಕಗಳನ್ನು ನೋಡುವ (ಅಥವಾ ಓದುವ) ರೀತಿಯು ಸ್ವಲ್ಪ ಭಿನ್ನವಾಗಿದ್ದು ಈ ಬಗ್ಗೆ ಮುಂಬರುವ ಲೇಖನಗಳಲ್ಲಿ ಹೇಳುತ್ತೇನೆ. ಜಾತಕವನ್ನು ಜನ್ಮ ಕುಂಡಲಿ, ಜನ್ಮ ಪತ್ರಿಕೆ, ಜನ್ಮ ಚಕ್ರ ಇತ್ಯಾದಿ ದೇಶ-ಭಾಷಾನುಸಾರಿಯಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಜನ್ಮ ಸಮಯದ ಗ್ರಹಗಳ ಗತಿ ಮತ್ತು ಆಕಾಶದಲ್ಲಿ ಅವುಗಳ ಸ್ಥಾನವಿಶೇಷಗಳನ್ನು ಗಣಿತಾಗತವಾಗಿ ಚಿತ್ರಿಸುವುದನ್ನೆ ಜಾತಕವೆಂದು ಸ್ಥೂಲವಾಗಿ ಕರೆಯಬಹುದು. ಜಾತಕಗಳ ರಚನೆಗೆ ಪಂಚಾಂ

ನವಗ್ರಹ ಪರಿಚಯ

ನವಗ್ರಹ ಪರಿಚಯ ವೈದಿಕ ಜ್ಯೋತಿಷ್ಯದ ಅಧ್ಯಯನವೆಂದರೆ ನವಗ್ರಹಗಳ ಅಧ್ಯಯನವೇ ಆಗಿದೆ. ಸೂರ್ಯಾದಿ ನವಗ್ರಹಗಳು, ಮೇಷಾದಿ ರಾಶಿಗಳು ಮತ್ತು ಲಗ್ನಾದಿ ದ್ವಾದಶ ಭಾವಗಳು, ಇವು ಜ್ಯೋತಿಷ್ಯದ ಅಧ್ಯಯನದ ಮೊದಲ ಪಾಠ. ನವಗ್ರಗಗಳಿಂದಲೆ ನಮ್ಮ ಜೀವನದ ಕಾರ್ಯಕಲಾಪ. ಗ್ರಹಗಳೇ ಪ್ರೇರಕ ಮತ್ತು ಕಾರಕಗಳಾಗಿ ನಮ್ಮ ಬದುಕಿನ ಸಮಗ್ರ ಚಟುವಟಿಕೆಗಳಿಗೆ ಕಾರಣಗಳಾಗಿವೆ. ಗ್ರಹಾಧೀನಂ ಜಗತ್ಸರ್ವಂ ಗ್ರಹಾಧೀನಾ ನರಾವರಾಃ | ಸೃಷ್ಟಿಸಂರಕ್ಷಣಸಂಹಾರಾಃ ಸರ್ವೇ ಚಾಪಿ ಗ್ರಹಾನುಗಾಃ || ಸಮಸ್ತ ಜಗತ್ತು ಗ್ರಹಗಳ ಅಧೀನತೆಯಲ್ಲಿದೆ, ಮನುಷ್ಯ ಮತ್ತು ಸರ್ವ ಜೀವರಾಶಿ ಗ್ರಹಾಧೀನವಾಗಿಯೇ ಇರುತ್ತವೆ. ಜಗತ್ತಿನ ಸೃಷ್ಟಿ, ಸಂರಕ್ಷಣೆ ಮತ್ತು ಸಂಹಾರ ಎಲ್ಲವೂ ಗ್ರಹಗಳಿಗೆ ಅನುಗಾಮಿ-ಅನುಯಾಯಿಯಾಗಿ ನಡೆಯುತ್ತದೆ. ಭಾರತೀಯ ಜ್ಯೋತಿಷ್ಯದಲ್ಲಿ ಅನೇಕ ಅವಕಾಶೀಯ ಕಾಯಗಳ ಉಲ್ಲೇಖ ಬರುತ್ತದೆ. ಗ್ರಹ, ನಕ್ಷತ್ರ, ತಾರೆ, ಉಪಗ್ರಹ, ಕ್ಷುದ್ರಗ್ರಹ, ಕೇತು, ಉಲ್ಕೆಗಳು ಇತ್ಯಾದಿ. ಇಷ್ಟೇ ಅಲ್ಲದೆ ಇನ್ನೂ ಅನೇಕ ದೇವತಾ, ಯಕ್ಷ ಸಮೂಹವೂ ಗ್ರಹಗಳೆಂತಲೆ ಕರೆಯಿಸಿಕೊಳ್ಳುತ್ತವೆ. ಆದರೆ ಎಲ್ಲದರಲ್ಲಿಯೂ ನವಗ್ರಹಗಳಿಗೆ ಪ್ರಾಧಾನ್ಯತೆಯಿದೆ. ಸೂರ್ಯಃ ಸೋಮೋ ಮಹೀಪುತ್ರಃ ಸೋಮಪುತ್ರೋ ಬೃಹಸ್ಪತಿಃ | ಶುಕ್ರಃ ಶನೈಶ್ಚರೋ ರಾಹುಃ ಕೇತುಶ್ಚೇತಿ ಗ್ರಹಾಃ ಸ್ಮೃತಾಃ || (ಯಾಜ್ಞ್ಯವಲ್ಕ್ಯ ಸ್ಮೃತಿ) ಸೂರ್ಯ, ಚಂದ್ರ, ಭೂಮಿಪುತ್ರನಾದ ಕುಜ, ಚಂದ್ರಪುತ್ರನಾದ ಬುಧ, ದೇವಗುರು ಬೃಹಸ್ಪತಿ, ಅಸುರಗುರು ಶುಕ್ರ, ಶನೈಶ್ಚರ ಮತ್ತು ಛ

ಕಾಲಗಣನೆ – ಯುಗಗಳು, ಮನ್ವಂತರಗಳು

ಕಾಲಗಣನೆ – ಯುಗಗಳು, ಮನ್ವಂತರಗಳು ಯುಗಗಳ ಗಣನೆ ಎರಡು ಪ್ರಕಾರದ್ದಾಗಿರುತ್ತದೆ. ವೇದಾಂಗ ಜ್ಯೋತಿಷ್ಯದಲ್ಲಿ ಐದು ವರ್ಷಗಳ ಯುಗ ಪರಿಕಲ್ಪನೆ ಇದೆ. ಆದರೆ ಈ ಲೇಖನದಲ್ಲಿ ಹೆಚ್ಚು ಪ್ರಖ್ಯಾತವಾದ ಪಂಚಾಂಗಗಣಿತರೀತ್ಯಾ ಬಳಕೆಯಲ್ಲಿರುವ ಯುಗಮಾನಗಳನ್ನು ನೋಡಲಿದ್ದೇವೆ. ನಾಲ್ಕು ಯುಗಗಳಿವೆ. ಅವುಗಳ ವರ್ಷಪ್ರಮಾಣ ಅಘಾದವಷ್ಟೇ ಅಲ್ಲ ಆಶ್ಚರ್ಯಕಾರಕವೂ ಆಗಿದೆ. ವೈದಿಕ ಶಾಸ್ತ್ರಗಳನ್ನು ಬಿಟ್ಟು ಜಗತ್ತಿನ ಯಾವುದೇ ಬೇರೆ ಸಭ್ಯತೆಗಳಲ್ಲಾಗಲಿ, ಧರ್ಮಗ್ರಂಥಗಲ್ಲಾಗಲಿ ಇಷ್ಟು ಅಗಾಧ ಮೊತ್ತದ ಸಂಖ್ಯೆಗಳು ಕಂಡುಬರುವುದಿಲ್ಲ. ಕಾಲಕ್ಕೆ ಆದಿ ಮತ್ತು ಅಂತ್ಯಗಳು ಇಲ್ಲ ಎಂಬ ಚಿಂತನೆಯೆ ಈ ಗಣಿತಕ್ಕೆ ತಳಹದಿಯಾಗಿರುತ್ತದೆ. ಕಾಲಚಕ್ರ ಎಂಬುವುದು ಎಂದಿಗೂ ನಿಲ್ಲದ, ನಿರಂತರ ತಿರುಗುತ್ತಿರುವ ಚಿತ್ರಣ ನಮ್ಮ ವೈದಿಕ ಶಾಸ್ತ್ರಗಳು ನಮಗೆ ಕೊಡುತ್ತವೆ. ಚತ್ವಾರಿ ಭಾರತೇ ವರ್ಷೇ ಯುಗಾನಿ ಕವಯೋsಭ್ರುವನ್ | ಕೃತಂ ತ್ರೇತಾ ದ್ವಾಪರಂ ಚ ಕಲಿಶ್ಚೇತಿ ಚತುಷ್ಟಯಮ್ || (ಬ್ರಹ್ಮಾಂಡ ಪುರಾಣ ೨೯-೩೨) ಕೃತಯುಗ (ಸತ್ಯಯುಗ), ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ – ಎಂಬ ನಾಲ್ಕು ಯುಗಗಳು ಭರತಖಂಡದಲ್ಲಿವೆ ಎಂದು ಜ್ಞಾನಿಗಳು ಹೇಳಿರುತ್ತಾರೆ. ಈ ನಾಲ್ಕು ಯುಗಗಳನ್ನು ಸೇರಿಸಿ ಒಂದು “ಮಹಾಯುಗ’ ಅಥವಾ ಕೇವಲ “ಯುಗ’ ಎಂಬ ಸಂಜ್ಞೆಯಿಂದ ಕರೆಯುತ್ತಾರೆ. ಯುಗಗಳ ಪ್ರಮಾಣ : ಯುಗಗಳ ಗಣಿತವು ಎರಡು ಮಾನಗಳಿಂದ ಮಾಡಬಹುದಾಗಿದೆ ದೇವತಾಮಾನ ಮತ್ತು ಮನುಷ್ಯಮಾನ. ಪುರಾಣಗಳು ದೇವತಾಮಾನದ ಎಣಿಕೆಯನ್ನು

ಪಂಚಾಂಗ ಪರಿಚಯ – ದಿವಸಗಳು

ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲವನ್ನು ನಾವು “ಹಗಲು” ಎಂತಲೂ, ಮತ್ತು ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಕಾಲವನ್ನು “ರಾತ್ರಿ” ಎಂತಲೂ ಕರೆಯುತ್ತೆವೆ. ಹಗಲು ಮತ್ತು ರಾತ್ರಿಗಳನ್ನು ಸೇರಿಸಿ ಒಂದು ದಿನ ಅಥವಾ ದಿವಸ ಎಂದು ಕರೆಯುತ್ತೆವೆ. ಹಗಲಿನ ಪ್ರಮಾಣವನ್ನು “ದಿನಮಾನ” ಎಂತಲೂ, ರಾತ್ರಿಯ ಪ್ರಮಾಣವನ್ನು “ರಾತ್ರಿಮಾನ” ಎಂತಲೂ ಕರೆಯಲಾಗಿದೆ. ಆಯನಗತಿಯ ಪ್ರಭಾವದಿಂದ ಈ ದಿನಮಾನ – ರಾತ್ರಿಮನಗಳ ಪ್ರಮಾಣ ಸಮಾನವಾಗಿರದೆ, ಬದಲಾಗುತ್ತಲಿರುತ್ತದೆ. ದಿನಮಾನ ವಿಷಯವನ್ನು ಮುಂದೆ ವಿಷದವಾಗಿ ಹೇಳಲಿದ್ದೆನೆ. ಧರ್ಮಾಚರಣೆಗಳಿಗೆ ಅನುಗುಣವಾಗಿ ದಿವಸ ಅಥವಾ ದಿನ ಶಬ್ದವನ್ನು ವ್ಯವಹಾರಿಕವಾಗಿ ಎರಡು ಅರ್ಥಗಳಲ್ಲಿ ಬಳಸಲಾಗುತ್ತದೆ. ಮೊದಲನೇಯದಾಗಿ ದಿವಸವನ್ನು ಹಗಲು ಎಂಬರ್ಥದಲ್ಲಿ ಉಪಯೋಗಿಸಲಾಗುತ್ತದೆ. ಎರಡನೇಯದಾಗಿ ಹಗಲು ಮತ್ತು ರಾತ್ರಿ ಸೇರಿ ಆಗುವ ೨೪ ಘಂಟೆಗಳ ಕಾಲಾವಧಿಯನ್ನು ಸಹ ದಿವಸವೆಂದೆ ಕರೆಯಲಾಗುತ್ತದೆ. ಇದಕ್ಕೆ ಜ್ಯೋತಿಷ್ಯದಲ್ಲಿ “ಅಹೋರಾತ್ರ” ಎಂದು ಕರೆಯಲಾಗಿದೆ. ಪಂಚಾಂಗಗಣಿತದ ಪ್ರಕಾರ ನಲ್ಕು ಪ್ರಕಾರದ ದಿವಸಗಳಿವೆ. ಚಾಂದ್ರ ದಿವಸ, ಸಾವನ ದಿವಸ, ಸೌರ ದಿವಸ, ನಾಕ್ಷತ್ರ ದಿವಸ. (೧) ಚಾಂದ್ರ ದಿವಸ (Lunar Day) – ಪಂಚಾಂಗದಲ್ಲಿ ಮೊದಲನೇಯ ಅಂಗವಾದ “ತಿಥಿ”ಯೇ ಚಾಂದ್ರ ದಿವಸವಾಗಿದೆ. ಇದು ಸೂರ್ಯ-ಚಂದ್ರರ ಗತಿಗಳನ್ನು ಅನುಸರಿಸುತ್ತದೆ. ಇದರ ಗಣಿತವನ್ನು ಮುಂದೆ ತಿಥಿಯ ಬಗ್ಗೆ ಹೇಳುವಾಗ ವಿಷದೀಕರಿಸುತ್ತೆನೆ. (೨) ಸಾವನ ದಿವಸ (Civil

ಗೋಪೂಜಾ ವಿದಾನ

ಬೇಕಾದ ಸಾಮಗ್ರಿ:- ಹೊಸ ಮೊರ ಹರಿಸಿನ ಕುಂಕುಮ ಹಸಿರುಬಳೆ ಸೀರೆ,ಕುಪ್ಪಸ ಬಾಳೆಹಣ್ಣು(೩,೫,೭,೯) ತೆಂಗಿನಕಾಯಿ ಹೂವು ಎಲೆ ಅಡಿಕೆ ಬೆಲ್ಲ ಎರಡು ಅಚ್ಚು ಒಂದು ಸೇರು ಅಕ್ಕಿ ಮೂರು ಹಿಡಿ ಅವಲಕ್ಕಿ ಕೊಬ್ಬರಿ ದಕ್ಷಿಣೆ ಈ ಎಲ್ಲಾ ವಸ್ತುಗಳನ್ನು ತಗೆದುಕೊಂಡು ಹೋಗಿ ಗೋವಿಗೆ ಸ್ನಾನಾದಿಗಳನ್ನು ಮಾಡಿಸಿ ನಂತರ ಗೋವನ್ನು ಅರಿಸಿನ ಕುಂಕುಮಗಳಿಂದ ಹೂವು ವಸ್ತ್ರಗಳಿಂದ ಅಲಂಕರಿಸಿ ಬಕ್ತಿಪೂರ್ವಕವಾಗಿ ಗೋಮಾತೆಯನ್ನು (ಹಾಲುನೀಡುವ ಕರುಸಮೇತವಾಗಿರುವ ಗೋವನ್ನು) ಮಂಗಳವಾರ(ಕನಕಾಂಬರ,ಕೆಂಪುಕಣಗಲೆ,ಕೆಂಪು ಹೂವಿಂದ) ಮುಂಜಾನೆ ಅಥವ ಮುಸ್ಸಂಜೆ ಪೂಜಿಸುವುದರಿಂದ ಗೃಹ ಶಾಂತಿ,ಪತಿ ಪತ್ನಿ ಅತ್ತೆ ಸೊಸೆಯರ ವೈಮಸ್ಸುಗಳು ನಿವಾರಣೆಯಾಗುತ್ತವೆ,ಗೃಹಶಾಂತಿ ಉಂಟಾಗುತ್ತದೆ. ಇದೇರೀತಿ ಶುಕ್ರವಾರ(ಮಲ್ಲಿಗೆ ಅಥವ ಬಿಳಿಹೂವುಗಳಿಂದ)ಪೂಜೆ ಮಾಡುವುದರಿಂದ ನಿಮಗಿರುವ ಸಾಲದ ಬಾದೆ, ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ. (ಸೂಚನೆ:- ನೀವು ಪರಿಶುದ್ದರಾಗಿ ಕಾಮಧೇನುಪೂಜೆ (ಗೋಪೂಜೆ)ಮಾಡಿದಾಗ ನಿಮ್ಮ ಕಷ್ಟ ನಿವಾರಣೆ ಆಗುವುದೆ ಇಲ್ಲವೆ ಎಂಬುದಕ್ಕೆ ಗೋವು ನೀವು ಪೂಜೆ ಮಾಡುವಾಗ ಮಲ(ಸಗಣಿ) ಮೂತ್ರ (ಗಂಜಲ) ಹಾಕಿದರೆ ವಿಶೇಷ ಫಲಗಳು ನಿಮಗೆ ದೊರೆಯುತ್ತವೆ. ನೀವು ಪೂಜೆ ಮಾಡಲು ನಿರ್ದಾರ ಮಾಡಿದ ಹಿಂದಿನ ದಿನವೇ (ಅಕ್ಕಿ,ಗೋಧಿ,ತುಗರಿ,ಅವರೆ,ಕಡಲೆ,ಎಳ್ಳು,ಉದ್ದು,ಉರುಳಿ,(ಅಕ್ಕಿಒಂದುಹಿಡಿ,ಎಳ್ಳು ಒಂದುಹಿಡಿಹಾಕಿಉಳಿದವನ್ನು ಪ್ರತಿಯೊಂದು ದಾನ್ಯವನ್ನು ಕನಿಷ್ಟ ೨೫೦ಗ್ರಾಂಗಳಂತೆ ಹಾಕಿ,) ನವದಾ

ವೃಶ್ಚಿಕರಾಶಿಯಲ್ಲಿ ಮಂಗಳ ಗೋಚಾರ

ಅಂಗಾರಕ ಮಂಗಳ ಗ್ರಹ – ಭೂಮಿಪುತ್ರನಾದ ಮಂಗಳನು ಕ್ರೂರಗ್ರಹವೆಂದೇ ಶಾಸ್ತ್ರಗಳಲ್ಲಿ ಕರೆಯಲ್ಪಟ್ಟಿದ್ದಾನೆ. ಇವನ ಫಲವು ನೈಸರ್ಗಿಕವಾಗಿ ಅಶುಭವಾಗಿರುತ್ತದೆ. ಮಂಗಳನು ಉಗ್ರ ಸ್ವಾಭಾವದ ಪುರುಷ ಗ್ರಹ, ಅಗ್ನಿ ತತ್ತ್ವಕ್ಕೆ ಅಭಿಮಾನಿ, ದೇಹದಲ್ಲಿ ರಕ್ತ ಮತ್ತು ಪಿತ್ತದ ಕಾರಕ, ದಕ್ಷಿಣ ದಿಕ್ಕಿನ ಸೂಚಕ, ಸಹೋದರ ಕಾರಕ ಮತ್ತು ತಮೋಗುಣವನ್ನು ಹೊಂದಿರುವ ಗ್ರಹ. ಮಂಗಳನು ಮೇಷ ಮತ್ತು ವೃಶ್ಚಿಕರಾಶಿಯ ಅಧಿಪರಿಯಾಗಿರುತ್ತನೆ. ಮಕರವು ಅವನ ಉಚ್ಚ ಕ್ಷೇತ್ರ ಮತ್ತು ಕರ್ಕವು ನೀಚ ಕ್ಷೇತ್ರ. ಮೇಷ ಮೂಲತ್ರಿಕೋಣ ರಾಶಿಯಾಗಿದೆ. ಸಂಪೂರ್ಣ ರಾಶಿಚಕ್ರವನ್ನು ಸುತ್ತಲು ಕುಜನು ತೆಗೆದುಕೊಳ್ಳುವ ಸರಿಸುಮಾರು ಕಾಲಾವಕಾಶ 18 ತಿಂಗಳುಗಳು. ಎಂದರೆ ಪ್ರತಿ ರಾಶಿಯಲ್ಲಿ 45 ದಿನಗಳ ಸಂಚಾರ. ಗುರು, ರಾಹು ಮತ್ತು ಶನಿಗಳಿಗೆ ಹೋಲಿಸಿದಾಗ ಈ ಕಾಲಾವಕಾಶ ಅಲ್ಪವಾದದ್ದೇ, ಆದರೆ ಕುಜನು ಪ್ರಖರ ಗ್ರಹ ಮತ್ತು ಶೀಘ್ರಫಲದಾಯಕನೂ ಆಗಿರುವದರಿಂದ ಈ ಗ್ರಹದ ಗೋಚಾರವು ನಮ್ಮ ಜೀವನದ ಕೆಲವು ವಿಷಯಗಳ ಮೇಲೆ ನಿಖರವಾದ ಪರಿಣಾಮಗಳನ್ನು ಬೀರಿತ್ತದೆ. ಮಂಗಳನ ಕಾರಕತ್ತ್ವಗಳು – ಸತ್ವಂ ಭೂಫಲಿತಂ ಸಹೋದರಗುಣಂ ಕ್ರೌರ್ಯಂ ರಣಂ ಸಾಹಸಂ ವಿದ್ವೇಷಂ ಚ ಮಹಾನಸಾಗ್ನಿಕನಕಜ್ಞಾತ್ಯಸ್ತ್ರಚೋರಾನ್ರಿಪೂನ್ | ಉತ್ಸಾಹಂ ಪರಕಾಮಿನೀರತಮಸತ್ಯೋಕ್ತಿಂ ಮಹೀಜಾದ್ವದೇತ್ ವೀರ್ಯಂ ಚಿತ್ತಸಮುನ್ನತಿಂ ಚ ಕಲುಷಂ ಸೇನಾಧಿಪತ್ಯಂ ಕ್ಷತಮ್ || (ಫಲದೀಪಿಕಾ) ಬಲ, ಭೂಮಿಯ ಸಫಲತೆ, ಸಹೋದರನ ಗುಣ, ಕ್ರೂರತ್ವ, ಯುದ್ಧ, ಸಾಹಸ,

ಶ್ರೀಭದ್ರಲಕ್ಷ್ಮೀ ಸ್ತೋತ್ರಮ್

ಧನುರ್ಮಾಸದಲ್ಲಿ ಪ್ರಾತಃಕಾಲ ಶ್ರೀಲಕ್ಷ್ಮೀನಾರಾಯಣರ ಆರಾಧನೆ ಮಹಾ ಪುಣ್ಯಪ್ರದವೆಂದು ಹೇಳಲಾಗಿದೆ. ಸೂರ್ಯೋದಯಕ್ಕೆ ಮೊದಲು ಶ್ರೀಲಕ್ಷ್ಮೀನಾರಾಯಣರ ಪೂಜೆಯನ್ನು ಮಾಡಿ ಹವಿಷ್ಯಾನ್ನವನ್ನು (ಹೆಸರುಬೇಳೆ ಮತ್ತು ಅಕ್ಕಿಯಿಂದ ಮಾಡಿದ ಹುಗ್ಗಿ) ನಿವೇದಿಸಿದವರಿಗೆ ಎಲ್ಲಜನ್ಮಗಳ ಪಾಪ ನಾಶವಾಗಿ ದಿವ್ಯಾನುಗ್ರಹವು ಪ್ರಾಪ್ತವಾಗುತ್ತದೆ. ಮಾರ್ಗಶೀರ್ಷ ಮಾಸದಲ್ಲಿ ರವಿಯು ಧನುರಾಶಿಯಲ್ಲಿರುವಾಗ ಧನುರ್ಮಾಸವು ಪ್ರಾಪ್ತವಾಗುತ್ತದೆ. ಈ ಮಾಸದಲ್ಲಿ ಪ್ರಾತಃಕಾಲ ಸ್ನಾನದಿಂದ ಗಂಗಾಸ್ನಾನದಷ್ಟು ಪುಣ್ಯವನ್ನು ಶಾಸ್ತ್ರಗಳಲ್ಲಿ ಸಾರಲಾಗೆದೆ. ಈ ಕೆಳಗೆ ಕೊಟ್ಟಿರುವ ಭದ್ರಲಕ್ಷ್ಮೀ ಸ್ತೋತ್ರವು ಧನುರ್ಮಾಸದಲ್ಲಿ ಪ್ರಾತಃಕಾಲದಲ್ಲಿ ಪಠಿಸುವದರಿಂದ ಸಮಸ್ತ ದುಃಖಗಳು ಪರಿಹಾರವಾಗಿ ಶ್ರೀಲಕ್ಷ್ಮೀಮಾತೆಯ ಅನುಗ್ರಹವುಂಟಾಗುತ್ತದೆ. ಈ ಚಿಕ್ಕ ಸ್ತೋತ್ರವನ್ನು ಧನುರ್ಮಾಸ ಮಾತ್ರವಲ್ಲದೆ ಪ್ರತಿನಿತ್ಯವೂ ಲಕ್ಷ್ಮೀ ಅನುಗ್ರಹಕ್ಕೋಸ್ಕರ ಪಠಿಸಬಹುದು. ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ | ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || ೧ || ಪಂಚಮಂ ವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ | ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || ೨ || ನವಮಂ ಶಾರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವಿಕಾ | ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ || ೩ || ಶ್ರೀಃ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರಿಲೋಕೇಶ್ವರೀ | ಮಾ ಕ್ಷೀರಾಬ್ಧಿ ಸುತಾಽರವಿಂದಜನನೀ ವಿದ

ಶ್ರೀನವಗ್ರಹಸ್ತೋತ್ರಮ್ (ಶ್ರೀವಾದಿರಾಜಯತಿ ವಿರಚಿತ)

ಶ್ರೀ ವಾದಿರಾಜ ಯತಿಗಳಿಂದ ವಿರಚಿತವಾದ ಈ ನವಗ್ರಹಸ್ತೋತ್ರವು ಅತ್ಯಂತ ಫಲಪ್ರದವಾಗಿದೆ, ನಿತ್ಯಪಾರಾಯಣಕ್ಕೆ ಅನುಕೂಲವಾಗಿದೆ. ಎಲ್ಲ ಶುಭಕಾರ್ಯಗಳಲ್ಲಿ ನವಗ್ರಹ ದೇವತೆಗಳ ಪ್ರಾರ್ಥನೆ ಪೂಜೆ ಅವಶ್ಯವಾಗಿರುತ್ತದೆ, ಆ ಸಂದರ್ಭಗಳಲ್ಲಿ ಈ ಸ್ತೋತ್ರವನ್ನು ಪಠಿಸಬಹುದು. ಚಿಕ್ಕದಾದ ಈ ಸ್ತೋತ್ರದ ಪ್ರತಿನಿತ್ಯ ಪಾರಾಯಣದಿಂದ ಎಲ್ಲಗ್ರಹದೋಷಗಳಿಂದ ಪರಿಹಾರ ಅನುಭವ ಸಿದ್ಧವಾಗಿದೆ. ಶ್ರೀನವಗ್ರಹಸ್ತೋತ್ರಮ್ (ಶ್ರೀವಾದಿರಾಜಯತಿ ವಿರಚಿತ) ಶ್ರೀನವಗ್ರಹಸ್ತೋತ್ರಮ್ (ಶ್ರೀವಾದಿರಾಜಯತಿ ವಿರಚಿತ) ಭಾಸ್ವಾನ್ ಮೇ ಭಾಸಯೇತ್ ತತ್ತ್ವಂ ಚಂದ್ರಶ್ಚಾಹ್ಲಾದಕೃದ್ ಭವೇತ್ | ಮಂಗಲೋ ಮಂಗಲಂ ದದ್ಯಾತ್ ಬುಧಶ್ಚ ಬುಧತಾಂ ದಿಶೇತ್ || ೧ || ಗುರುರ್ಮೇ ಗುರುತಾಂ ದದ್ಯಾತ್ ಕವಿಶ್ಚ ಕವಿತಾಂ ದಿಶೇತ್ | ಶನಿಶ್ಚ ಶಂ ಪ್ರಾಪಯತು ಕೇತುಃ ಕೇತುಂ ಜಯೇಽರ್ಪಯೇತ್ || ೨ || ರಾಹುರ್ಮೇ ರಾಹಯೇದ್ರೋಗಂ ಗ್ರಹಾಃ ಸಂತು ಕರಗ್ರಹಾಃ | ನವಂ ನವಂ ಮಮೈಶ್ವರ್ಯಂ ದಿಶಂತ್ವೇತೇ ನವಗ್ರಹಾಃ || ೩ || ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ | ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ ಕುರು ಸಂಕಟಮ್ || ೪ || ಹರೇರನುಗ್ರಹಾರ್ಥಾಯ ಶತ್ರೂಣಾಂ ನಿಗ್ರಹಾಯ ಚ | ವಾದಿರಾಜಯತಿಪ್ರೋಕ್ತಂ ಗ್ರಹಸ್ತೋತ್ರಂ ಸದಾ ಪಠೇತ್ || ೫ || || ಇತಿ ಶ್ರೀವಾದಿರಾಜಯತಿವಿರಚಿತಂ ನವಗ್ರಹಸ್ತೋತ್ರಮ್ ||

ಶ್ರೀನವಗ್ರಹ ಸ್ತೊತ್ರಮ್ (ಶ್ರೀವೇದವ್ಯಾಸವಿರಚಿತ)

ಪ್ರಸಿದ್ಧವಾದ ಶ್ರೀವೇದವ್ಯಾಸ ವಿರಚಿತವಾದ ನವಗ್ರಹ ಸ್ತೋತ್ರವನ್ನು ಫಲಜ್ಯೋತಿಷ್ಯದಲ್ಲಿ ಸಾದರ ಪಡಿಸಲು ಬಹಳ ಸಂತೋಷವಾಗುತ್ತಿದೆ. ಪ್ರಾಯಶಃ ಎಲ್ಲ ನವಗ್ರಹ ಸ್ತೋತ್ರಗಳಲ್ಲಿಯೇ ಈ ಸ್ತೋತ್ರ ಬಹಳ ಪ್ರಚಾರದಲ್ಲಿರುವುದೇ ಜನಮಾನ್ಯರಲ್ಲಿ ಇದರ ಪ್ರಸಿದ್ಧಿಗೆ ಕಾರಣ. ಇಲ್ಲಿ ಪ್ರತಿಯೊಂದು ಗ್ರಹವನ್ನು ಸುಂದರವಾಗಿ ಸ್ತುತಿಸಲಾಗಿದೆ. ಅತ್ಯಂತ ಮತ್ತು ಶೀಘ್ರ ಪ್ರಭಾವಕಾರೀ ಮಂತ್ರಗಳನ್ನೊಳಗೊಂಡ ಈ ಸ್ತೋತ್ರವನ್ನು ನಿತ್ಯ ಪಾರಾಯಣಮಾಡಬೇಕು. ಸ್ತೋತ್ರದ ಫಲಶ್ರುತಿಯಲ್ಲಿ ಹೇಳಿರುವಂತೆ ಹಗಲಾಗಲಿ ರಾತ್ರಿಯಾಗಲಿ ಯಾವಾಗಲಾದರೂ ಈ ಸ್ತೋತ್ರವನ್ನು ಪಠಿಸಿ ವಿಘ್ನಗಳಿಂದ ಮುಕ್ತಿ ಹೊಂದಬಹುದು. ನವಗ್ರಹ ಜಪಗಳನ್ನು ಮಾಡುವಾಗ ಈ ಸ್ತೋತ್ರದಲ್ಲಿ ಕೊಡಲಾದ ಆಯಾ ಗ್ರಹದ ಮಂತ್ರವನ್ನೇ ಜಪಸಂಖ್ಯಾನುಸಾರ ಜಪ ಮಾಡುವುದು ಹೆಚ್ಚು ಪ್ರಶಸ್ತ. ಶ್ರೀನವಗ್ರಹ ಸ್ತೊತ್ರಮ್ (ಶ್ರೀವೇದವ್ಯಾಸವಿರಚಿತ) ಶ್ರೀಗಣೇಶಾಯನಮಃ || ಅಸ್ಯ ಶ್ರೀನವಗ್ರಹಸ್ತೋತ್ರಮಂತ್ರಸ್ಯ ವೇದವ್ಯಾಸ ಋಷಿಃ | ಅನುಷ್ಟುಪ್ ಛಂದಃ | ಮಮ ಗ್ರಹಾನುಕೂಲ್ಯಾರ್ಥೇ ನವಗ್ರಹಸ್ತೋತ್ರ ಜಪೇ (ಪಾರಾಯಣೇ) ವಿನಿಯೋಗಃ || ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹದ್ಯುತಿಮ್ | ತಮೋಽರಿಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ || ೧ || ದಧಿಶಂಖತುಷಾರಾಭಂ ಕ್ಷೀರೋದಾರ್ಣವ ಸಂಭವಮ್ | ನಮಾಮಿ ಶಶಿನಂ ಸೋಮಂ ಶಂಭೊರ್ಮುಕುಟ ಭೂಷಣಮ್ || ೨ || ಧರಣಿ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ | ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ

ಜಯನಾಮ ಸಂವತ್ಸರ – ಶಾಲಿವಾಹನ ಶಕೆ 1936 – ಸಂವತ್ಸರ ಫಲ

ಮಾರ್ಚ 31, ಸೋಮವಾರದಂದು ನೂತನ ಭಾರತೀಯ ವರ್ಷಾರಂಭ. ಈ ದಿನವನ್ನು ಚಾಂದ್ರಮಾನ್ ಯುಗಾದಿ ಎಂದು ಕರೆಯಲಾಗುತ್ತದೆ. ಈ ದಿನದಂದೇ ಚತುರ್ಮುಖ ಬ್ರಹ್ಮದೇವನು ಅಖಿಲ ವಿಶ್ವವನ್ನು ಸೃಷ್ಟಿ ಮಾಡಿದ್ದರಿಂದ ಈ ದಿನಕ್ಕೆ ಯುಗಾದಿ ಎಂಬ ಸಂಜ್ಞೆ. ಈ ಬಾರಿಯ ಸಂವತ್ಸರದ ಹೆಸರು ಜಯ. ಶಾಲಿವಾಹನ ಶಕವರ್ಷ 1936. ಕಲಿಯುಗಾರಂಭದಿಂದ ಇಲ್ಲಿಯವರೆಗೆ 5115 ವರ್ಷಗಳು ಸಂದಿವೆ, ಬಾಕಿ 4,26,885 ವರ್ಷಗಳು ಉಳಿದಿವೆ. ಸಂವತ್ಸರ ವರ್ಷದ ಕೆಲವು ಮಾಹಿತಿಗಳನ್ನು ನೋಡೋಣ. ಅಬ್ದಾದೌ ಮಿತ್ರಸಂಯುಕ್ತೋ ಮಂಗಲಸ್ನಾನಮಾಚರೇತ್ | ವಸ್ತ್ರೈರಾಭರಣೈರ್ದೇಹಮಲಂಕೃತ್ಯ ದ್ವಿಜೈಃ ಸಹ || ದೇವದ್ವಿಜಾನ್ ಸಮಭ್ಯರ್ಚ ಪ್ರಗ್ರಹ್ಯ ಬ್ರಾಹ್ಮಣಾಶಿಷಃ | ಭಕ್ಷಯಿತ್ವಾ ನಿಂಬಪತ್ರಂ ಶ್ರುಣುಯಾದ್ ವರ್ಷಜಂ ಫಲಮ್ || ವರ್ಷಾರಂಬದ ಶುಭ ಮುಹೂರ್ತದಲ್ಲಿ ಸುಗಂಧತೈಲಯುಕ್ತವಾದ ಅಭ್ಯಂಜನ ಸ್ನಾನವನ್ನು ಮಾಡಿ, ನೂತನ ವಸ್ತ್ರ ಆಭೂಷಣಗಳನ್ನು ಧರಿಸಿ ದೇವರ ಪೂಜೆ ದರ್ಶನಾದಿಗಳನ್ನು, ಬ್ರಾಹ್ಮಣರ ದರ್ಶನ ಆಶೀರ್ವಾದಗಳನ್ನು ಪಡೆಯಬೇಕು. ನಂತರ ನಿಂಬಪತ್ರ (ಬೇವಿನ ಎಲೆ) ಭಕ್ಷಣೆಯನ್ನು ಮಾಡಿ ಆ ವರ್ಷದ ಪಂಚಾಂಗ, ಸಂವತ್ಸರಾಧಿಪತಿಗಳ ಫಲವನ್ನು ಶ್ರವಣ ಮಾಡಬೇಕು. ತೈಲಾಭ್ಯಂಗಸ್ನಾನಮಾದೌ ಚ ಕೃತ್ವಾ ಪೀಯೋಷೋತ್ಥಂ ಪಾರಿಭದ್ರಸ್ಯ ಪತ್ರಮ್ | ಭಕ್ಷೇತ್ ಸೌಖ್ಯಂ ಮಾನವೋ ವ್ಯಾಧಿನಾಶಂ ವಿದ್ಯಾಯುಃ ಶ್ರೀರ್ವಿಂದತೇ ವರ್ಷಮೂಲೇ || ವರ್ಷಾರಂಭದಲ್ಲಿ ಮೊದಲು ತೈಲಸಹಿತ ಅಭ್ಯಂಗ ಸ್ನಾನವನ್ನು ಮಾಡಿ, ಅಮೃತದಿಂದ ಹುಟ್ಟಿಬಂದಿರುವ

ಗುರು ಮಿಥುನ ರಾಶಿ ಗೋಚಾರ

ಎಲ್ಲ ಗ್ರಹಗಳಲ್ಲಿ ಗುರುಗ್ರಹವು ನೈಸರ್ಗಿಕವಾಗಿ ಹೆಚ್ಚು ಶುಭ ಎಂದು ಹೇಳಲಾಗಿದೆ. ಸಂಪತ್ತು, ಧನಪ್ರಾಪ್ತಿ, ಒಳ್ಳೆಯ ಸ್ಥಾನಮಾನ, ಕೌಟುಂಬಿಕ ಸುಖ ಶಾಂತಿ, ವಿವಾಹ ಯೋಗ, ಸಂತಾನ ಸುಖ, ಆರೋಗ್ಯ ಭಾಗ್ಯ, ಬುದ್ಧಿಶಕ್ತಿಗಳ ಕಾರಕನಾದ ಗುರುವು ತನ್ನ ಪ್ರತಿವಾರ್ಷಿಕ ಗೋಚಾರದಿಂದ ದ್ವಾದಶ ರಾಶಿಗಳ ಮೇಲೆ ಗುರುತರವಾದ ಪ್ರಭಾವವನ್ನು ಬೀರುತ್ತಾನೆ. ದೇವಗುರುವು ಪ್ರತಿ ವರ್ಷ ಒಂದು ರಾಶಿಯಂತೆ ಹನ್ನೆರಡು ವರ್ಷಕಾಲದಲ್ಲಿ ಸಂಪೂರ್ಣ ರಾಶಿಚಕ್ರವನ್ನು ಒಂದು ಬಾರಿ ಸುತ್ತುತ್ತಾನೆ. ಈ ಹನ್ನೆರಡು ವರ್ಷಗಳ ಕಾಲವನ್ನು ಬಾರ್ಹಸ್ಪತ್ಯ ಸಂವತ್ಸರಚಕ್ರವೆಂದು ಕರೆಯಲಾಗುತ್ತದೆ. ಪ್ರಾಚೀನ ವೈದಿಕ ಕಾಲದಲ್ಲಿ ಈ ಕಾಲಮಾನಕ್ಕೆ ಬಹಳ ಮಹತ್ವವಿತ್ತು. ಗುರು ಗ್ರಹದಿನಾಂಕ 31 ಮೇ 2013 ರಂದು ಬೆಳಿಗ್ಗೆ 6 – 48ಕ್ಕೆ ಗುರುವು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಮಿಥುನವು ಭುಧನ ಆಧಿಪತ್ಯ ಹೊಂದಿದ ರಾಶಿಯಾಗಿದ್ದು ಗುರುವಿನ ಶತ್ರುಗ್ರಹದ ರಾಶಿಯಾಗಿರುತ್ತದೆ. ಆದರೂ ಮಿಥುನದಲ್ಲಿ ಗುರು ಸಂಚಾರ ವೃಷಭದ ಗುರುಚಾರಕ್ಕಿಂತಲೂ ಅನೇಕ ಪಟ್ಟು ಒಳ್ಳೆಯ ಫಲಗಳನ್ನು ಕೊಡುತ್ತದೆ. ವೃಷಭವು ದೇವಗುರುವಿನ ಪರಮ ಶತ್ರುವಾದ ದೈತ್ಯಗುರು ಶುಕ್ರನ ರಾಶಿಯಾಗಿರುವುದೇ ಇದಕ್ಕೆ ಕಾರಣ. ಮಿಥುನದಲ್ಲಿ ಗುರು ಗೋಚಾರ ಅನುಕುಲಕಾರಿಯಾಗಿರುತ್ತದೆ. ಮಿಥುನದಲ್ಲಿ ಗುರುವು 2014 ಜುಲೈ 19 ರ ವರೆಗೆ ಸ್ಥಿತನಾಗಿರುತ್ತಾನೆ. ಮುಂದೆ ತನ್ನ ಉಚ್ಚ ರಾಶಿಯಾದ ಕರ್ಕಕ್ಕೆ ಪ್ರವೇಶಮಾಡುತ್ತಾನೆ. ಮಿಥುನದಲ್ಲಿ ಗುರು

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,

ಉಭಯಚರಿ ಯೋಗ

ವಾಸಿ ಮತ್ತು ವೇಶಿಯೋಗಗಳ ಸಾಲಿನಲ್ಲಿ ಸೇರುವ ಸೂರ್ಯನಿಂದ ನೋಡಲ್ಪಡುವ ಈ ಯೋಗವು ರಾಜಯೋಗವೆಂದೇ ಜ್ಯೋತಿಷ್ಯ ಗ್ರಂಥಗಳಲ್ಲಿ ಪರಿಗಣಿಸಲ್ಪಟ್ಟಿದೆ. ಇಂದಿನ ಕಾಲದಲ್ಲಿ ರಾಜಾದಿಗಳು ಇಲ್ಲವಾದರು ಮಹಾಜನರೆಂದು, ಪ್ರಭಾವೀ ವ್ಯಕ್ತಿಗಳೆಂದು ಕರೆಯಲ್ಪಡುವ ಅತ್ಯಂತ ಯಶಸ್ವಿ ವ್ಯಕ್ತಿಗಳ ಜಾತಕದಲ್ಲಿ ಈ ಯೋಗವು ಸ್ಪಷ್ಟವಾಗಿ ಕಾಣಸಿಗುತ್ತದೆ. ಈ ವ್ಯಕ್ತಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ, ಇವರು ಜನಸಾಮಾನ್ಯರಿಗೆ ಆದರ್ಶಪ್ರಾಯರಾಗಿರುತ್ತಾರೆ. ರವಿಯ ಇಕ್ಕೆಲಗಳಲ್ಲಿ ಎಂದರೆ ದ್ವಿತೀಯ ಮತ್ತು ದ್ವಾದಶಗಳಲ್ಲಿ ಚಂದ್ರನನ್ನು ಹೊರತುಪಡಿಸಿ ಉಳಿದ ಗ್ರಹಗಳು ಇದ್ದಾಗ ಉಭಯಚರಿ ಯೋಗವೆಂದು ಹೇಳಲಾಗುತ್ತದೆ. ಈ ಉಳಿದಗ್ರಹಗಳು ಶುಭಗ್ರಹಗಳಾಗಿದ್ದರೆ ಶುಭಉಭಯಚರಿ ಯೋಗ, ಪಾಪಗ್ರಹಗಳಾಗಿದ್ದರೆ ಅಶುಭಉಭಯಚರಿ ಯೋಗ ಎರ್ಪಡುತ್ತದೆ. ಜಾತಕ ಪಾರಿಜಾತ ಮತ್ತು ಫಲದೀಪಿಕಾ ಗ್ರಂಥಗಳು ಈ ಯೋಗವನ್ನು ಸುಂದರವಾಗಿ ವಿವರಿಸುತ್ತವೆ - ಸೌಮ್ಯಾನ್ವಿತೋಭಯಚಾರಿಪ್ರಭವಾ ನರೇಂದ್ರಾ- ಸ್ತತ್ತುಲ್ಯವಿತ್ತಸುಖಶೀಲದಯಾನುರಕ್ತಾಃ | ಪಾಪಾನ್ವಿತೋಭಯಚರೌ ಯದಿ ಪಾಪಕೃತ್ಯಾ ರೋಗಾಭಿಭೂತಪರಕರ್ಮರತಾ ದರಿದ್ರಾಃ || (ಜಾ.ಪಾ ರಾಜಯೋಗಾಧ್ಯಾಯ-೧೨೪) ಚಾರ್ವಾಂಗಃ ಪ್ರಿಯವಾಕ್ಪ್ರಪಂಚರಸಿಕೋ ವಾಗ್ಮೀ ಯಶಸ್ವೀ ಧನೀ (ಫ.ದೀ ೬-೯) ಲೋಕೇ ಸ್ಯಾದಪಕೀರ್ತಿದುಃಖಿತಮನಾ ವಿದ್ಯಾರ್ಥಭಾಗ್ಯೈಶ್ಚ್ಯುತೋ (ಫ-ದೀ ೬-೧೦) ಶುಭಉಭಯಚರಿಯೋಗಜಾತನು ರಾಜ ಅಥವಾ ರಾಜತುಲ್ಯ (ರಾಜ

ವಾಸಿ ಮತ್ತು ವೇಶಿಯೋಗಗಳು – ಭಾಗ ೧

ನಾವು ಜ್ಯೋತಿಷಿಗಳ ಹತ್ತಿರ ಹೋದಾಗ ರಾಜಯೋಗ, ವಿಪರೀತ ರಾಜಯೋಗ, ಮೃತ್ಯುಯೋಗ, ಷಡಷ್ಟಕ ಯೋಗ, ಕಾಳಸರ್ಪ ಯೋಗ ಇತ್ಯಾದಿ ಅನೇಕ ಭಯಜನಕ ಯೋಗನಾಮಗಳನ್ನು ಕೇಳುತ್ತೇವೆ. ಆದರೆ ಈ ಭಯ ಹುಟ್ಟಿಸುವ ಯೋಗಗಳ ಗುರಿ ಭಯಜನಕ ಯೋಗಗಳಾಗಿ ಮಾತ್ರ, ಜೀವಮಾನದ ಕೇವಲ ಕೆಲವು ಸಂದರ್ಭ ಅಥವಾ ಕಾಲಖಂಡಗಳಲ್ಲಿ ಅವುಗಳು ಅನುಭವಕ್ಕೆ ಬರುತ್ತವೆ. ಇದರರ್ಥ ಇವು ನಿರರ್ಥಕ ಅಥವಾ ಉಪೇಕ್ಷಣೀಯವೆಂದು ಸರ್ವಥಾ ಅಲ್ಲ, ಇಂಥ ಯೋಗಗಳಿದ್ದಾಗ ಸೂಕ್ತ ಉಪಾಯ ಅಗತ್ಯ. ಜ್ಯೋತಿಷ್ಯದಲ್ಲಿ ಅನೇಕ ಯೋಗಗಳಿವೆ, ಕೆಲವು ಜಾತಕದಲ್ಲಿ ಅತ್ಯಂತ ಸ್ಪಷ್ಟವಾಗಿ ಗೋಚರಿಸತಕ್ಕಂಥವು. ಇವುಗಳ ಪ್ರಾಮುಖ್ಯತೆ ಎಷ್ಟೆಂದರೆ ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಇವುಗಳ ಪ್ರಭಾವ-ಫಲಗಳನ್ನು ನಿರ್ದಿಷ್ಟವಾಗಿ ಗುರುತಿಸಬಹುದು. ಆಯುರ್ಮಾನವಿಡೀ ಇವುಗಳ ಪ್ರಭಾವ. ಇವು ದೋಷಗಳಲ್ಲ, ಆದ್ದರಿಂದ ಯಾವುದೇ ಪ್ರಾಯಶ್ಚಿತ್ತ, ಶಾಂತಿಕರ್ಮಗಳ ಅವಶ್ಯಕತೆಯೂ ಇಲ್ಲ. ಆದರೆ ಈ ಯೋಗಗಳನ್ನು ಗುರುತಿಸಿಕೊಂಡು ಇವುಗಳಿಂದ ಆಗುವ ಫಲಾಫಲಗಳನ್ನು ಅರಿತು ನಾವು ನಮ್ಮ ಜೀವನದ ಪ್ರತಿಯೊಂದು ಕೆಲಸ ಕಲಾಪಗಳಲ್ಲಿ ಮಾರ್ಗದರ್ಶಕಗಳಾಗಿ ಇವುಗಳನ್ನು ಬಳಸಿಕೊಳ್ಳಬಹುದು. ಇವತ್ತಿನ ಪ್ರಾಯಃ ಅನೇಕ ಜ್ಯೋತಿಷ್ಯರು ಇಂಥ ಉಪಯುಕ್ತ, ಸಹಾಯಕ ಯೋಗಗಳ ಬಗ್ಗೆ ತಾಳಿರುವ ನಿರ್ಲಕ್ಷ ವಿಚಿತ್ರವಾದದ್ದು (ಬೆದರಿಕೆ ಯೋಗ ಹೇಳಿ ಹೇಳಿ ಅಭ್ಯಾಸವಾಗಿದ್ದಿರಬಹುದೇನೋ!). ಇಂಥಹ ಕೆಲವು ಯೋಗಗಳನ್ನು ಪರಿಚಯಿಸಿದರೆ ವಾಚಕವೃಂದಕ್ಕೆ ಸಹಾಯಕವಾಗುವುದು ಎಂದು ನಂಬಿದ್ದೇನೆ. ಈ