Skip to main content

Posts

Showing posts from February, 2008

ಹೆಣ್ಣಿನ ಜನುಮ ದೊಡ್ಡದು

ಹೆಣ್ಣಿನ ಜನುಮ ದೊಡ್ಡದುಯಾರು ಅದ ಸಣ್ಣದೆಂದೆನ ಬೇಡಿಅಣ್ಣ ತಮ್ಮ ಬಂಧು ಬಳಗ ಹೆಣ್ಣಿನ ಜನುಮ ದೊಡ್ಡದು ಬಲುದೊಡ್ಡದು "ಪಲ್ಲವಿ" ಹುಟ್ಟಿದ ಮನೆ,ಮಂದಿ ಬಿಟ್ಟುಕಾಲಿಟ್ಟ ಮನೆ,ಮನ ಬೆಳಗಿಮೊಜಗಕ್ಕೆ ಮಾದರಿಯಾಗಿ ಬಾಳುವ"ಹೆಣ್ಣಿನ" ತಾಯಾಗಿ,ತಂಗಿಯಾಗಿ,ಮಗಳಾಗಿ,ಮಡದಿಯು ತಾನಾಗಿಪ್ರೀತಿ,ವಾತ್ಸಲ್ಯ,ಅನುರಾಗಕ್ಕೆ ಬೆಸುಗೆಯಾಗಿ ಪ್ರತಿನಿತ್ಯ ಪರಪಂಚದೊಳಗೆ(ಬಳಲುವ)ಬಾಳುವ "ಹೆಣ್ಣಿನ" ಕಾರ್ಯೇಷುದಾಸಿ,ಕರಣೇಶು ಮಂತ್ರಿ ರೂಪೇಚ ಲಕ್ಷ್ಮಿ,ಶಯನೇಶು ರಂಬ ಕ್ಷಮಯಾದರಿತ್ರಿ,ಭೋಜ್ಯೇಶು ಮಾತೆಯಾಗಿ ಬಾಳುವ"ಹೆಣ್ಣಿನ" ಸತ್ಯಕ್ಕೆ ಸಾವಿತ್ರಿ,ಸೀತೆ,ಅಹಲ್ಯೆಯಾಗಿ ಧರ್ಮಕ್ಕೆ ಚಂದ್ರಮತಿ,ಚಂದ್ರಹಾಸೆಯಾಗಿ ತ್ಯಾಗಕ್ಕೆ ಶಾಂತಲೆ,ಶಕುಂತಲೆಯಾಗಿ ಬಾಳುವ"ಹೆಣ್ಣಿನ" ಕೀರ್ತಿಯಲಿ ಚನ್ನಮ್ಮ ಸ್ಪೂರ್ತಿಗೆ ಸಂಚಿ ಹೊನ್ನಮ್ಮಧೀರತ್ವಕ್ಕೆ ವನಕೆ ಓಬವ್ವ,ಅಕ್ಕಯ್ಯ(ಅಕ್ಕಮಹಾದೇವಿ) ಕನ್ನಡ ನಾಡಿಗೆ ಹೆಸರಾಗಿ ಬಾಳಿದ "ಹೆಣ್ಣಿನ" -ಕೃಷ್ಣಮೊರ್ತಿ

ವಿರಹದಲಿಮನ

ನೀನಿಲ್ಲದೆ ಅನುದಿನ ವಿರಹ ಎನ್ನತುಂಬ ನಿನ್ನ ಮುಗ್ದಮೊಗವೇ ನೀರಲ್ಲರಳಿದ ನಳಿನಬಿಂಬ ಪ್ರತಿ ಇರುಳು ಕಾಡುತಿಹುದು ಮೌನ ಮನಮಾಡುತಿಹುದು ನಿನ್ನ ಹೆಸರದ್ಯಾನ ಯಾರೇ ಅಡ್ಡಿಮಾಡಲಿ ಯಾವುದೇ ಕಷ್ಟಬರಲಿ ನಿನ್ನಲಿಗೆ ಬರುವೆ ಎಲ್ಲವ ತೂರಿ ಗಾಳಿಗೆ ತಾರೆಗಳು ನಗುತಿವೆ ಶಶಿಯಕಂಡು ಶ್ರಾವಣದ ಇರುಳಚಳಿಗೆ ಇಟ್ಟಿರುವೆ ನೀನಿತ್ತ ಮುತ್ತ ಕವನದಲ್ಲಿ ಬರೆಯಲಾರೆ ಎನ್ನ ಮನದ ಉತ್ತರ ನನ್ನವಳೆ ಇಲ್ಲಿ ತಾರೆ ನಿನ್ನ ಅದರ ಹತಿರ ನಿನ್ನ ನಯನ ದರ್ಪಣದಿ ಮರೆವೆ ಮನದ ಎಲ್ಲ ನೋವನು ಹೂಬಳ್ಳಿಯಂತೆ ಬಳುಕೊ ನಡುವ ಕುರಿತು ಕವನ ಕೊರೆವೆನು ಸಂಜೆ ಕೆಂಪು ಪ್ರೀತಿಗೆ ದ್ಯೋತಕ ವಾಗಿದೆ ಹರಿವ ನೀರು ಶೃಂಗಾರಕ್ಕೆ ದ್ಯೋತಕ ವಾಗಿದೆ ಕವನ ಕನಸಿನಾಚೆಗೂ ನಿನ್ನ ಪ್ರೀತಿ ಅಚ್ಚಳಿಯದೆ ಉಳಿವುದು ಓಲವರೀತಿ ನೋವನುಂಗಿ ಬದುಕೆ ಬಾಳೆ ಹೂವಮಲ್ಲಿಗೆ ಕಾಡದಿರು ಇನ್ನ ಮುಂದಾದರೂ ನೀ ಬಾಮೆಲ್ಲಗೆ ಅರಳಿ ಕಂಪಸೂಸೋ ಸಂಜೆ ಮಲ್ಲಿಗೆ -ವಿ ಕೃಷ್ಣಮೊರ್ತಿಅಜ್ಜಹಳ್ಳಿ

*ಪ್ರೇಮಿಗಳ ಹಾಡು*

ಮಾಡಿಮ್ಯಾಲೆನಿಂತುಕೊಂಡು ಮಲ್ಗೆಹೂವಮುಡ್ದುಕೊಂಡುಮೆಲ್ಲಮೆಲ್ಲಗೆ ನಡಿಯೋಳೆ ಮುದ್ದಾದಮೊಗದವಳೆ ನೀನಾರೆಕೊಡವ ಹಿಡಿದು ಕೆರೆಕಡೆಗೆ ಹೊರಟವಳೆ ಕನಕಾಂಗಿ ನಾ ಬರುವೆ ನಿಲ್ಲೆ ಕೆರೆತನಕ ಪಲ್ಲವಿ ಕಿಲಕಿಲನೆ ನಗುತ್ತಾ ನೀರನ್ನು ತುಂಬುತ್ತಾ ಮನಸನ್ನು ಕಲಕಿದವಳೆ ನೀನಾರೆನನಚಲುವೆಎದೆಯ ಕದವನ್ನು ತೆಗೆದವಳೆ ನೀನಾರೆ "ಮಾ" ಅಂದಾನೆ ನಾನೆಂದು ಚಂದಾನೆ ತಾನೆಂದು ಬಿಂಕದಲಿ ನಿಂತವಳು ನೀನ್ಯಾರೆನನಚಲುವೆಬಾವದ ಚಿಲುಮೆ ಚಿಮ್ಮಿಸಿದವಳೆ ನೀನ್ಯಾರೆ"ಮಾ" ಮಂದಹಾಸ ಬೀರುತ್ತಾ ತುಂಬುನಗೆ ಚಲ್ಲುವ ಚಂದಿರನ ಮೊಗದವಳೆ ನೀನ್ಯಾರೆನನ ಚಲುವೆಮನ ಮಂದಿರದಿ ಬೆಳಕ ತಂದವಳೆ ನೀನ್ಯಾರೆ "ಮಾ" ಇಳಿಬಿದ್ದ ಜಡೆಯವಳೆ ಗುಳಿಬಿದ್ದ ಕೆನ್ನೆಯವಳೆ ಸುಳಿದು ಸುಳಿದೆನ್ನ ಕಾಡೋಳೆನನ ಚಲುವೆಸುಮದಂತೆ ಪರಿಮಳ ತಂದವಳೆ ನೀನ್ಯಾರೆ"ಮಾ" ನವಿಲಂತೆ ಕುಣಿಯೋಳೆ ಮಿಚಂತೆ ಹೊಳೆಯೊಳೆನಾಟ್ಯದ ರಾಣಿ ನೀನ್ಯಾರೆನನ ಚಲುವೆ ಎದೆಯಾಗ ತಾಳ ತುಂಬಿದವಳೆ ನೀನ್ಯಾರೆ "ಮಾ" ಮನವೆಲ್ಲ ಹಸಿರಾಗಿ ಜೀವಕ್ಕೆ ಉಸಿರಾದ ಕನಸಿನ ಕಣ್ಮ್ಣಣಿ ನೀನ್ಯಾರೆನನ ಚಲುವೆ ಇರುಳಿಗೆ ಜೊತೆಯಾಗಿ ಬಂದವಳೆ ನೀನ್ಯಾರೆ"ಮಾ" ಮನಸಿನ ಚಿತ್ತಾರ ಪಡೆದು ನೀ ಆಕಾರನನಗಾಗಿ ಎಂದು ನೀ ಬರುವೆನನ ಚಲುವೆ ಕಾಯಲಾರೆ ನಾ ಬಳಿ ಬಾರೆನನಗಾಗಿ ಇಂದು ನೀ ಬಾರೆ "ಮಾ" -ವಿ ಕೃಷ್ಣಮೊರ್ತಿ ಅಜ್ಜಹಳ್ಳಿ

ಜಾನಪದಶೈಲಿಯ ಗೀತೆ

ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡುಗಿಯ ಪಕ್ಕಕೆ ಬಂದು ನಿಂತಿತ್ತ "ಪ" ಹುಡುಗನ ಕಂಡ ಹುಡುಗಿ ಬೆಚ್ಚಿ ದೂರ ಸರಿದಿತ್ತ ಎಲೆಯ ಮರೆಯಲಿ ನಿಂತು ಹುಡುಗನ ಕದ್ದು ನೋಡತಿತ್ತ ಹುಡುಗಿ ತೊಟ್ಟಿದ್ದ ಲಂಗ ದಾವಣಿ ಹುಡುಗನ ಮನದ ಕದವನ ತಟ್ಟಿತ್ತ "ಹ" ಎದ್ದು ಬರುವಂತಿದ್ದ ಉಬ್ಬು-ತಗ್ಗಿಗೆ ಹುಡುಗನ ಮನವು ಉಬ್ಬಿ ಹೊಗಿತ್ತ ಹುಡುಗನ ಕಣ್ಣು ಹುಡುಗಿಯ ಉದ್ದ ಅಗಲ ಲೆಕ್ಕ ಹಾಕತಿತ್ತ ಅದನು ಕಂಡ ಹುಡುಗಿಯ ಕಾಲು ನೆಲದಿ ರಂಗೊಲಿ ಹಾಕತಿತ್ತ "ಹ" ಬಾಯತೆರೆದು ಮಾತಾಡಲೊದ ಹುಡುಗನ ಗಂಟಲೆ ಹಿಡಿದಿತ್ತ ಬಯದಲಿ ಹುಡುಗನ ಕೈಕಾಲು ನಡುಗಿತ್ತ ತೊದಲುತ-ಅಂಜುತ ಹುಡುಗಿ ಕೈಯ ಹಿಡಿದಿತ್ತ ಹಿತವಾಗಿ ಉಲಿದ ಹುಡುಗಿಯ ಕಂಡ ಹುಡುಗನ ಮನ ಮುದವಗೊಂಡಿತ್ತ "ಹ" ಬಳ್ಳಿ ಮರವ ಬಳಸಿದಂತೆ ಹುಡುಗಿ ಹುಡುಗನ ಬಾಚಿತಬ್ಬಿತ್ತ ನಾಚಿ ನಡುಗುತ ಮೆಲ್ಲನೆ ನಗುವ ಚಿಮ್ಮಿತ್ತಾ ಪ್ರೀತಿಯು ಹೊಮ್ಮಿ ಹೊಳೆಯಾಗಿ ಹರಿದಿತ್ತಾ "ಹ"

ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು

ಮನದ ಮೃದಂಗ ನುಡಿಸಿ ಎದೆಯಲ್ಲಿ ಪ್ರೇಮರಾಗ ಮಿಡಿವಂತೆ ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು ಅಂದಕಾರದ ಬದುಕಿಗೆ ಬೆಳಕಾಗಬಲ್ಲ ಅರಿವಿನ ಅ(ಹ)ರಿಣಿ ಅವಳಾಗಬೇಕು ಜೀವಕ್ಕೆ ಉಸಿರು-ಹಸಿರಾಗ ಬಯಸುವ ಚೈತ್ರ ಚಲುವ ಹೆಣ್ಣಾಗಿರಬೇಕು ಬರಡಾದ ಬದುಕಿಗೆ ಜೀವಕಳೆಯ ತುಂಬಬಲ್ಲ ಹೆಣ್ಣು ಅವಳಾಗಬೇಕು ಬತ್ತಿದೆದೆಯಲ್ಲಿ ಬರವಸೆಯ ಜಲವ ತುಂಬುವಂತಹ ತರುಣಿ ಅವಳಾಗಬೇಕು ಮನದ ಮೌನ ಮುರಿದು ಜೀವದಲಿ ಹೊಸಕಳೆಯ ತರಬಲ್ಲ ಹುಡುಗಿಯಾಗಬೇಕು ಮನದ ಬಾವ ಅರಿತು ನಡೆವ ನುಡಿವ ನವ ತರುಣಿಮಣಿ ಅವಳಾಗಬೇಕು ಮನದ ಹಸಿವು-ದಾಹಗಳ ಅರಿತು ತೀರಿಸ ಬಲ್ಲ ಹೆಣ್ಣು ಅವಳಾಗಲುಬೇಕು ವನಪು ವಯ್ಯಾರ ಮರೆತಿರಬೇಕು ಒಲವು-ಛಲವು ಜೊತೆಗಿದ್ದರೆ ಸಾಕು ಬೆಳ್ಳಿಗೆಜ್ಜೆ ಯಾರಿಗೆ ಬೇಕು ಒಳ್ಳೆ ಲಜ್ಜೆ ಅವಳಿಗಿದ್ದರೆ ಸಾಕು ಮುತ್ತು ರತ್ನ ಯಾರಿಗೆ ಬೇಕು ಮುಗುಳ್ನಗೆ ಸದಾಇರಲಿ ಸಾಕು ಸಿರಿ ಸಂಪತ್ತು ಯಾಕೆ ಬೇಕು ಸನ್ನಡತೆಯಲಿ ಎನ್ನ ಪ್ರೀತಿಸುತಿರೆ ಸಾಕು -ವಿ ಕೃಷ್ಣಮೊರ್ತಿ ಅಜ್ಜಹಳ್ಳಿ

ಆಶಯ ಗೆಳೆಯ/ಗೆಳತಿ ಯರಿಗೆ

ಹುಚ್ಚೆದ್ದು ಕುಣಿವ ಹುಚ್ಚು ಮನಸಿನ ಬಾವನೆ ಗಳಿಗೆ ನಿನ್ನ ಹೃದಯದ ಬಾಗಿಲು ಮುಚ್ಚಿರಲಿ ಅಚ್ಚು ಮೆಚ್ಚಿನ ಶುಚಿತ್ವದ ಮನಸಿನ ಬಾವನೆಗಳಿಗೆ ನಿನ್ನ ಹೃದಯದ ಬಾಗಿಲು ಸದಾ ತೆರೆದಿರಲಿ ಎಂದು ಆಶಿಸುತ್ತೇನೆ ಪ್ರಿಯ ಮಿತ್ರರೇ

*ನನ್ನ ಸ್ವಪ್ನ ಸುಂದರಿ*

ಕಣ್ಮುಚಿದರೆ ಬರುವಳು ಮನದ ಮನೆಯೊಳಗೆ ಕುಣಿದು ನಲಿವಳು ನನ್ನ ಸ್ವಪ್ನ ಸುಂದರಿ ನನ್ನವಳು ಚಲುವೆಯರಲ್ಲಿ ಚಲುವೆ ರಂಬೆ ಅಪ್ಸರೆಯ ನಾಚಿಸುವಳು ಪರಿಮಳ ತುಂಬಿದ ಪಾರಿಜಾತ ನನ್ನ ಸ್ವಪ್ನ ಸುಂದರಿ ನನ್ನವಳು ಮಾತು ಕನ್ನಡ ಕಸ್ತೂರಿ ಮಾತಿನಿಂದಲೇ ಮಾಡಿದಳು ನನ್ನ ಮನಸೂರೆ ವಯ್ಯಾರದ ನೀರೆ ನನ್ನ ಸ್ವಪ್ನ ಸುಂದರಿ ನನ್ನವಳು ಮಂದಹಾಸ ಚೆಲ್ಲಿ ನನ್ನ ಸ್ವಾಗತಿಸುವಳು ಹೆಜ್ಜೆ ಮೇಲೆ ಹೆಜ್ಜೆ ಅಂದಿಗೆ ಕಾಲ್ಗೆಜ್ಜೆ ನೀರಾದವಳೇ ನನ್ನ ಸ್ವಪ್ನ ಸುಂದರಿ ನನ್ನವಳು ಕೆನೆ ಹಾಲಕೈಗೆ ನೀಡಿ ಮನೆ ಮಾಡಿದಳು ಎದೆಗೆ ಒಲವ ಚಿಲುಮೆ ಹರಿಯುವಂತೆ ಎದೆಗೂಡಿಗೆ ಮೊಕವಾಯ್ತು ಮನ ಅವಳ ಮೋಡಿಗೆ

ಕವನ "ದೇವರಿಗೊಂದು ಮನವಿ"

ನೀನೆ ಆದಿ ನೀನೆ ಅಂತ್ಯ ನಮ್ಮ ಪಾಲಿಗೆ ನೀನೆ ಶಕ್ತಿ ನೀನೆ ಯುಕ್ತಿ ನಮ್ಮ ಬಾಳಿಗೆ ಆಸರೆ ನೀ ನಮಗೆ ನೀ ಕೈಬಿಟ್ಟರೆ ಸಾವೆಮಗೆ "ಪ" ಯಾರು ತಾಯಿ ಯಾರು ತಂದೆ ನನ್ನ ಪಾಲಿಗೆ ಬಾಳತುಂಬ ಬವಣೆ ಏಕೆ ನಮ್ಮ ಬಾಳಿಗೆ ಯಾವ ತಪ್ಪಿಗೆ ಇಂತ ಶಿಕ್ಷೆಯು ನಮಗೆ "ನೀನೆ" ಹಗಲು ರಾತ್ರಿ ಕಳೆವುದೇಗೆ ಗಾಳಿ ಮಳೆಯ ಸಹಿಪುದೇಗೆ ಅಲೆಯುತಿರುವೆ ದಾರಿ ಕಾಣದೆ "ನೀನೆ" ಬಾಳತುಂಬ ಬವಣೆ ತುಂಬಿ ನಾನು ನೊಂದಿಹೆ ಬಾಳಲಾರೆ ಬದುಕಲಾರೆ ನೀನು ಬಾರದೆ ದಾರಿ ತೊರದೆ "ನೀನೆ" ತಿನ್ನೊಅನ್ನ ಚಿನ್ನವಾಗಿ ಕಣ್ಣನೀರು ನೆತ್ತರಾಗಿ ಕರೆವೆ ಬರುವೆಯಾ ದೇವ ನಮ್ಮ ನೀನು ಮರೆತೆಯಾ "ನೀನು" ಹರಿದ ಬಟ್ಟೆ ಮುರಿದ ತಟ್ಟೆ ಬದುಕು ಎಂಬುದಿಷ್ಟೆ ಎಲ್ಲ ಲೊಳಲೊಟ್ಟೆ ಎಂಬ ಸತ್ಯ ತೆರೆದಿಟ್ಟೆ "ನೀನು"

ಪ್ರೇಮದ ಅಮಲು

ಈ ಪ್ರೇಮ ನಂಬಿದರೆ ಬರಿ ಕಣ್ಣೀರಿನ ಗೋಳು ಹೀಗೇಕೆ ಆಯಿತು ನನ್ನ (ಯೌವ್ವನದ)ಹದಿನೆಂಟರ ಬಾಳು ಈ ಬಾಳೆಲ್ಲ ಬರಿ ವ್ಯತೆಯು ಬರಿ ಕಣ್ಣೀರಿನ ಕಥೆಯು "ಪ" ಪ್ರೀತಿಯೆ ಸತ್ಯ ನೀತಿಯೆ ಧರ್ಮ ಎಂದು ನಾ ತಿಳಿದೆ ಆ ಆ ಆ ಪ್ರೇಮವು ಅಮರ ಪ್ರೀತಿಯು ಮದುರ ಎಂದು ನಾ ತಿಳಿದೆ ಆ ಆ ಆ ಹೆಣ್ಣಿನ ಪ್ರೀತಿಯ ನಂಬಿ ಮೋಸಹೋದೆ ನನ್ನ ಬದುಕಲ್ಲಿ ಕತ್ತಲೆ ತುಂಬಿದೆ "ಈ ಪ್ರೇಮ" ಕಂಡೆ ಹೆಣ್ಣಲಿ ಪ್ರೇಮಾನುರಾಗ ಹೊಮ್ಮಿ ಬಂತು ಪ್ರೀತಿ ಸುಯೋಗ ಎಂದು ನಾ ತಿಳಿದೆ ಆ ಆ ಆ ಎಲ್ಲವ ತೊರೆದು ನಾ ಬಂದೆ ಪ್ರೇಮದ ಸುಖವ ನಾ ಕಾಣಲೆಂದೆ ಪ್ರೀತಿಯ ಮೋಹಕೆ ಸಿಲುಕಿ ಪ್ರೇಮವೆ ಆಸರೆ ಎಂದೆ ಬಾಳಲ್ಲಿ ನಾ ಬಲು ನೊಂದೆ ಬದುಕು ಸಾಕೆಂದೆ "ಈ ಪ್ರೇಮ"

“ಹೇಗಿದೆ ನಮ್ಮೂರು ಹೇಗಿದ್ದಾರೆ ನಮ್ಮೂರೊರು”

ಹಲೋ ಪೂರ್ಣಿಮಾ......... ಹೇಗಿದೆ ನಮ್ಮೂರು ಹೇಗಿದ್ದಾರೆ ನಮ್ಮೂರೊರು ಈಗ ಏಗಿದ್ದಾರೆ ನಮ್ಮೂರ ಜನ ಕುದೂರ ಜನ "ಪ" ಊರಿನುದ್ದಾರಕ್ಕಾಗಿ ಶ್ರಮ ಪಡೊರಿದ್ದಾರಾ ! ಶಾಲೆ,ಕಾಲೇಜು,ಆಸ್ಪತ್ರೆ,ಬ್ಯಾಂಕು ಹೈಟೆಕ್ ಮಾಡವರ "ಹೇಗಿದೆ" ತುಮಕೂರ್ ರಸ್ತೆ,ಶಿವಗಂಗೆ ರಸ್ತೆ.ಮರೂರ್ ರಸ್ತೆ ಬಿಸ್ಕೂರ್ ರಸ್ತೆ,ಸೋಲೂರ್ ರಸ್ತೆ ಸರಿಯಾಗಿ ಮಾಡವರ "ಹೇಗಿದೆ" ಲಕ್ಷ್ಮಮ್ಮ,ಕನ್ನಿಕಾ ಪರಮೇಶ್ವರಿ,ಆಂಜನೇಯ,ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರೆ ವೈಬವ ದಿಂದ ಮಾಡ್ತಾರ ಶ್ರೀರಕ್ಷೆ ಬಿಡದೆ ಪಡೆದವರ "ಹೇಗಿದೆ" ರಾಜ್ಯೋತ್ಸವ,ಸ್ವಾತಂತ್ರ ನಾಡಹಬ್ಬ ಮಾಡ್ತಾರ ಆ ಪಕ್ಷ ಈ ಪಕ್ಷ ಅನ್ಕೋಂಡು ಕಿತ್ತಾಡೊದ ಮರೆತವರ "ಹೇಗಿದೆ" ಈ ಮೇಲು ಇಂಟರ್ ನೆಟ್ಟು ಬ್ರಾಡ್ ಬ್ಯಾಂಡು ಕಂಪ್ಯೂಟರು ತಾಂತ್ರಿಕ ಶಿಕ್ಷಣದ ಅನುಕೂಲ ಮಾಡವರ ಓದುವಂತ ಹುಡುಗರಿಗೆ ಅವಕಾಶ ಕೊಟ್ಟವರ "ಹೇಗಿದೆ" ದಾಕ್ಷಾಯಣಮ್ಮ ಯತಿರಾಜು ಬಾಲರಾಜು ಹನುಮಂತಪ್ಪ ನಂತವರು ಒಟ್ಟಾಗಿ ಕುದೂರಿನೇಳ್ಗೆಗಾಗಿ ದುಡಿತಾವರ "ಹೇಗಿದೆ" ಸರ್ಕಾರಿ ಶಾಲಾ ಕಾಲೇಜಿನ ಫಲಿತಾಂಶ ಹೇಗಿದೆ ಖಾಸಗಿ ಶಾಲಾ ಕಾಲೇಜಿನ ಫಲಿತಾಂಶ ಹೇಗಿದೆ "ಹೇಗಿದೆ" ಚಿತ್ರ ಮಂದಿರಗಳ ಹೈಟೆಕ್ ಮಾಡವರ ಹೊಟೆಲ್ ಗಳ ಶುಚಿಯಾಗಿ ಇಟ್ತವರ ಆರೋಗ್ಯ ಕೇಂದ್ರ ಹೇಗಿದೆ ಖಾಸಗಿ ಕ್ಲಿನಿಕ್ ನಲ್ಲಿ ಟ್ರೀಟ್ ಮೆಂಟು ಎಲ್ಲಿ ಸುಲಬದಲ್ಲಿ ಸಿಗ್ತದೆ "ಹೇ

ಇಳೆಗಿಳಿದ ಮುಂಗಾರಿನ ಮೊದಲ ಮಳೆ

ಮಳೆ ಬಂತು ಮುಂಗಾರು ಮಳೆ ಬಂತು ಇಳೆ ನೆನೆದು ಚೈತ್ರ ನಲಿಯಿತು ಬಾನಿಂದ ಮಳೆ ಬಂತು ಭರಣಿ ಮಳೆ ಬಂತು ಧರಣಿಯೊಡಲು ತಣಿಯಿತು "ಪ" ಸರ್ವಜಿತುವಿನ ಮೊದಲ ಮಳೆ ಉತ್ಸವಕ್ಕೆ ಗಂಟೆ ಗಟ್ಟಲೆ ಹಚ್ಚಿದ ಗುಡುಗು ಸಿಡಿಲಿನ ಮದ್ದುಗುಂಡು ಮಿಂಚಿನ ಮತಾಪು ಕಡ್ಡಿಯ ಸುಸ್ವಾಗತ ಮಳೆಗೆ "ಮಳೆ" ವರ್ಷದಾದಿಯ ಮೊದಲ ದೀಪಾವಳಿಯಾಯ್ತು ಭರಣಿಯು ಧರಣಿಯ ತಣಿಸಿದಂದು ಸರ್ವಜಿತುವಿನ ಮುಂಗಾರಿನ ಮಳೆಯಾಯ್ತು "ಮಳೆ" ಧರೆಯ ಮರಗಿಡ ಹಸಿರಿನಿಂದ ನಳ ನಳಿಸುತ್ತಿದೆ ಮಾಮರದಿ ಕೋಗಿಲೆ ಇಂಚರದಿ ಕೂಗಿದೆ ಹೊ(ಓ)ಣಗಿದ್ದ ಬಯಲಲ್ಲಿ ಹಸಿರ ಚಿಗುರು ಕಾಣುತಿದೆ "ಮಳೆ" ನೊಂದ ರೈತ ಮನಕೆ ಸಣ್ಣ ಬರವಸೆ ಮೂಡಿದೆ ಧರಣಿಗೆ ಭರಣಿಯು ಬಿದ್ದರೆ ಸಂಮೃದ್ದಿ ಎಂಬ ನಾಣ್ನುಡಿಯ ಬರವಸೆಯಲಿ ಮನ ನಂಬಿದೆ "ಮಳೆ" ಮುಂಗಾರಿನ ಮಳೆ ಇಳೆಗಾಗಿದೆ ಎಲ್ಲ ಮನಕೆ ಬರವಸೆಯ ಮೇಣದ ಬತ್ತಿ ಹತ್ತಿಸಿದೆ -ವಿ ಕೃಷ್ಣಮೊರ್ತಿ ಅಜ್ಜಹಳ್ಳಿ

ಪೊಯಟ್ಟು-ಗ್ರೇಟು

ಮೊಮೆಂಟು-ಕಾಮೆಂಟು ಬರೆವ ನಾನು ಪೊಯೆಟ್ಟು ಹಾಗಂತ ಹೇಳುತ್ತಾನೆ ನಮ್ಮ ಪುಟ್ಟು ಹೌದಲ್ಲವೇನೊ ಕಿಟ್ಟು ಹಾಗಾದ್ರೆ ನಾ ಹ್ಯಾಗೊ ಹಾಗೊದು ಗ್ರೇಟು ಬರಿ ನಿನ್ನ ಕಥೆ,ಕವನದಲ್ಲಿ "ಡುಯಟ್ಟು" ಲವ್ ಸಬ್ ಜಕ್ಟು ಇಷ್ಟಿದ್ರೆ ಸಾಕೇನೊ ಪುಟ್ಟು ಸಾಕಾಗೊಲ್ಲ ಕಿಟ್ಟು ಜೊತೆಗೆ ಇರಬೇಕು ಮನಿ-ಮಂತ್ರಿಗಳ ಕನೆಕ್ಟು ಹಾಗ ನೀ ಹಾದ್ರೂ ಆಗ ಬಹುದು ಗ್ರೇಟು

*ನುಡಿಮುತ್ತುಗಳು*

*ಸ್ನೇಹ ಮರಳ ಮೇಲೆ ಬರೆದ ಅಕ್ಷರವಾಗದೆ ಪವಿತ್ರ ಹೃದಯದ ಮೇಲೆ ಬರೆದ ಶಾಶನ ವಾಗಬೇಕು ಗೆಳೆಯ/ಗೆಳತಿ * ದೇವಾಲಯಕ್ಕೆ ಹೊದಾಗ ಭಕ್ತಿ ಇರಬೇಕು ಗ್ರಂಥಾಲಯಕ್ಕೆ ಹೋದಾಗ ನಿಶಬ್ದವಾಗಿರಬೇಕು *ಮನುಷ್ಯನ ಜೀವನಓದಿ ಎಸೆಯುವ ವೃತ್ತಪತ್ರಿಕೆಯಾಗದೆ ಪವಿತ್ರ ಗ್ರಂಥದಂತಾಗಬೇಕು * ಸದ್ಗುಣ ವಿರುವ ಹೆಣ್ಣುಸಕ್ಕರೆಯಂತೆ/ಸವಿಜೇನಿನಂತೆ ಸದ್ಗುಣ ಇರದ ಹೆಣ್ಣುಕೊಕ್ಕರೆಯಂತೆ/ಸಣ್ಣಮೀನಿನಂತೆ * ವಿವೇಕ ವಿಲ್ಲದ (ವಿದ್ಯೆಯು)ವಿದ್ಯಾರ್ಥಿಯು ಪರಿಮಳವಿಲ್ಲದ ಪುಷ್ಪದಂತೆ ವಿನಯ ವಿಲ್ಲದ (ವಿದ್ಯೆಯು)ವಿದ್ಯಾರ್ಥಿಯು ಪೊರೆ ಕಳಚಿದ ಹಾವಿನಂತೆ

*ಪ್ರಿಯಗೆಳತಿಗೆ*

ಹಾರದಿರು ನೀ ಗೆಳತಿ ಬೇಲಿ ಈ ಜಾತಿ ಹಾರಿದರೆ ಪಡುವೆ ನೀ ನೂರು ಪಜೀತಿ ಭಂದು ಬಳಗದ ಪ್ರೀತಿಯ ಪಂಜರ ಬಿಟ್ಟು ಹಾರದಿರು ಎಚ್ಚರ ಮೋಹದಾ ಮಾಯದಾ ಬಲೆಗೆ ನೀ ಬೀಳದಿರು (ಗೆಳತಿ)ಗಿಳಿಯೆ ? ದಾಹ ನಿಟ್ಟುಸಿರು ನಿನಗೆ ತಪ್ಪದು ನೀ ಅರಿಯೆ ಬದುಕಲು ನಿನಗಿಹುದು ಹಲವು ದಾರಿ ಹೋಗಿ ಬಾ ಹರಸುವೆನು ಚಂದಿರ ಚಕೋರಿ ನೀನಾಗು ಆದರ್ಶ ನಾರಿ ಹೋಗದೆ ಪ್ರೀತಿ ಸಾಗರದಿ ಜಾರಿ ಎಚ್ಚರವೆ ನಾರಿ ಮೆಚ್ಚಿರುವೆ ನಿನ್ನ ವಯ್ಯಾರಿ -ವಿ ಕೃಷ್ಣಮೊರ್ತಿಅಜ್ಜಹಳ್ಳಿ

ಸ್ಪೂರ್ತಿಯ ಲೈಟು

ಹುಡುಗಿ ನೀ ಆಗಿರೋದ್ರಿಂದ ಡೀಸೆಂಟು ನನ್ನ ಮನಸ್ಸಿಗೆ ಹಿಡಿಸಿರುವೆ ನೂರ್ ಪರ್ಸೆಂಟು ನೀನು ತೋರಿಸಿದರೆ ಗ್ರೀನ್ ಸಿಗ್ನಲ್ ಸ್ಲೇಟು ನಾನಾಗಿಬಿಡ್ ತೀನಿ ನಿನ್ನ ಒಲವಲ್ಲಿ ಪುಲ್ ಟೈಟು ನನ್ನ ಬದುಕಿನ ಎಲ್ಲ ನೈಟು ನೀ ಬೆರೆತ ನನ್ನ ಬದುಕಂತು ತುಂಬಾ ಬ್ರೈಟು ನಾ ಹೇಳೋದು ಯಾವಾಗ್ಲು ಸ್ಟ್ರೈಟು ಅದಕ್ಕೆ ನಾ ಎಲ್ಲ್ರಿಗೂ ಡಿಸ್ ಕನೆಕ್ಟು ಅವರ ಅಭಿಮಾನ ನನಗೆ ಶೂಟು ಬೂಟು ಗೆಳತಿ ನೀನು ನನ್ನ ಕವನಕ್ಕೆ ಸ್ಪೂರ್ತಿಯ ಲೈಟು

ಹನಿಕವನಗಳು

*ಪರಿಣಾಮ* ಇಳಿದದ್ದೇ ತಪ್ಪಾಯಿತುಪ್ರಿಯೆ ನಿನ್ನ ಪ್ರೀತಿಯಹೊಳೆಯಲ್ಲಿ ನಿತ್ಯ ಬೇಯುತ್ತಿದ್ದೇನೆ ಈಗ ವಿರಹದ ಉರಿಯಲ್ಲಿ. *ಐಕ್ಯ(ಲೀನ)* ಅವಳ ಎದೆ (ಗೂಡಲ್ಲಿ)ಮೇಲೆ ನಾನು ಬಂಗಾರದತುಂಡು ಈ ಬಾಹುಗಳ ನಡುವೆಅವಳು ಬಾಳೆಯದಿಂಡುಒಲವಲ್ಲಿ ನಾವು ಐಕ್ಯಗೊಂಡು. *ಅಶಾಶ್ವತ* ದಿನಬಿಡದೆ ದೇವರ ಸ್ಮರಿಸಿದ ಕನಕ,ಪುರಂದರರಿಲ್ಲ,ಅಕ್ಕ,ಬಸವರಿಲ್ಲ ಗುರುರಾಜ,ಘಂಟಸಾಲರಿಲ್ಲ ಗುಡಿ,ಚರ್ಚು,ಮಸೀದಿ,ಕಟ್ಟಿಸಿದ ರಾಜ,ಪಾದ್ರಿ,ಮಹಮದೀಯರಿಲ್ಲ ಎಂದಮೇಲೆ ಅಲ್ಪರಾದ ನಾವುಅಶಾಶ್ವತರಲ್ಲವೇ. *ಮಡದಿ* ಗಂಡನ ಮನೆಯಲ್ಲಿ ಡಂಬಾಚಾರ(ಡೌಲು) ತೋರದೆದಿಟ್ಟತನದಿಂದ ಸಂಸಾರ ಮಾಡುವವಳೇ ಮಡದಿ. *ಮದುವೆ* ಹಣ,ಅದಿಕಾರ,ಆಸ್ಥಿ,ವಯಸ್ಸು ಇರುವಾಗ ಮದುವೆ ಹಣ,ಅದಿಕಾರ,ಆಸ್ಥಿ,ವಯಸ್ಸು ಇಲ್ಲದಿರುವಾಗ ಯಾಕದುವೆ. *ಹೃದಯ ಮೀಸಲು* ನನ್ನ ಹೃದಯದಲ್ಲಿಗೆಳತಿ...... ನಿನ್ನೊಬ್ಬಳಿಗೆ ಸ್ಥಾನ ಏಕೆಂದರೆಎಲ್ಲರಿಗೂ ಸಮ್ಮತಿಸಲು ಆಗಿಲ್ಲನನ್ನ ಹೃದಯ ದೇವಸ್ಥಾನ. -ವಿ ಕೃಷ್ಣಮೊರ್ತಿಅಜ್ಜಹಳ್ಳಿ

ಭವಿಷ್ಯತ್ತಿಗೆ

ಅಲ್ಲಿಂದ ಇಲ್ಲಿಗೆ ನಾ ಬಂದುದೇಅವಳಿಗೆ(ಅವಳಿಗಾಗೆ) ಅವಳು ಹೇಗಿದ್ದರೇನುಹಿಡಿಸಿದಳು ನನ್ನ ಮನಸ್ಸಿಗೆನಾನು ಬೆಲೆ ಕೊಡುವುದು ಗುಣ ನಡತೆಗೆಬಿಡು ಸೌಂದರ್ಯ ಸೈಡಿಗೆ ಒಳ್ಳೆಮನಸಿದ್ದರೆ ಸಾಕುಚಲೋ ಬಾಳ್ವೆಗೆ ನಾ ಹಿಡಿಸಿದರೆ ಅವಳಿಗೆಮಾತನಾಡಲು ಹೇಳು ನನ್ನೋಟ್ಟಿಗೆ ಕೇಳುವೆಪ್ರಶ್ನೆಗಳ ನಮ್ಮ ಭವಿಷ್ಯತ್ತಿಗೆ.

ಅಭಿಮಾನಿಗಳ ದೃವತಾರೆ *ರಾಜ್ ಕುಮಾರ್*

ಚಾಮರಾಜ ನಗರ ತಾಲೋಕು ಮೈಸೂರು ಜಿಲ್ಲೆ ಸಿಂಗಾನಲ್ಲೂರು ಬಳಿಯ ಗಾಜನೂರಿನ ಪುಟ್ಟಸ್ವಾಮಯ್ಯನವರ ಪುತ್ರರಾಗಿ ಜನಿಸಿದಿರಿ ತಂದೆಯೊಂದಿಗೆ ಗುಬ್ಬಿವೀರಣ್ಣನವರ ನಾಟಕಕಂಪನಿಯ ಗರಡಿಯಲ್ಲಿ ಪಳಗಿದಿರಿ ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದನೀವು "ಆಡುಮುಟ್ಟದ ಸೊಪ್ಪಿಲ್ಲ ರಾಜ್ ಮಾಡದ ಪಾತ್ರವಿಲ್ಲ"ಎಂಬ ಹೆಸರಿಗೆ ಪಾತ್ರರಾದಿರಿ ಪಾರ್ವತಮ್ಮನವರ ಕೈಹಿದಿದ ನೀವು ಶಿವ,ರಾಘವ,ಪುನೀತರೆಂಬಪುತ್ರರತ್ನಗಳನ್ನು ಪಡೆದಿರಿ ಆದರ್ಶಗಳ ಬಿಟ್ಟುಕೊಡದ ರಾಜರಂತೆ ಇದ್ದನೀವು ರಾಜಕುಮಾರರೆಂದು ಪ್ರಖ್ಯಾತಿ ಪಡೆದಿರಿ ನಿಮ್ಮ ಕಲಾಸೇವೆ,ಪ್ರತಿಭೆಗೆಬೆಂಗಳೂರು ವಿಶ್ವವಿದ್ಯಾಲಯದಿಂದಗೌರವ ಡಾಕ್ಟರೇಟ್ ಪಡೆದಿರಿ ಕರ್ನಾಟಕದಲ್ಲಿ ಕನ್ನಡದ ಉಳಿವಿಗಾಗಿ ಪಣತೊಟ್ಟುನಿಂತಿರಿ ಕರುನಾಡ ಜನತೆಯ ಹೃದಯ ಗುಡಿಯಲಿ ನೆಲೆಯಾದಿರಿ ಅಭಿಮಾನಿಗಳ ಆರಾದ್ಯದೈವ ನೀವಾದಿರಿ ಪದ್ಮಭೂಷಣ,ದಾದಾಪಾಲ್ಕೆ,ಗಾನಗಂದರ್ವಪ್ರಶಸ್ತಿಗಳ ಸರಮಾಲೆ ದರಿಸಿದಿರಿ ಕಲಾದೇವಿಯ ಮುಕುಟಮಣಿನೀವಾದಿರಿ ದಾನ,ದ್ಯಾನ,ನೀತಿ,ಯೋಗಬಿಡದೆ ಬಾಳಲ್ಲಿ ಅಳವಡಿಸಿಕೊಂಡಿರಿ ಕನ್ನಡ ಜನರ ಎದೆಯಂಬರದ ದೃವತಾರೆ ನೀವಾದಿರಿ -ವಿ ಕೃಷ್ಣಮೊರ್ತಿಅಜ್ಜಹಳ್ಳಿ

ಪ್ರೀತಿಯ ಹೊಳೆಯಲ್ಲಿ

ನೀ ಬಾ ಎಂದು ಹೇಳಿದ್ದೆಆಲದ ಮರದ ಕಡಿ(ಕಡೆ) ಆದರಾಗ ಬರುತ್ತಿತ್ತು ತುಂತುರು ಜಡಿ(ಮಳೆ) ಆ ಮಳೆಯಲ್ಲೂ ನಾ ಬರುತ್ತಿದ್ದಾಗ ಓಡಿ ನಗುತ್ತಿದ್ದವು ಮಳೆಹನಿನೀನಿಲ್ಲದಿದ್ದರೂ ನೆನೆವ ನನ್ನ ನೋಡಿ ನಿನ್ನ ಮಾತದೇನು ಮೋಡಿಮಾತುತಪ್ಪದ ನನ್ನ ನೀ ಮಳೆಯಲ್ಲಿ ನೆನೆಸಿಮನೆಯಲ್ಲಿ ಕೂರಬಹುದೇನನ್ನ ಬಯಸಿ ಪ್ರೀತಿಸುವುದು ಎಂದರೆ ನೀ ಏನೆಂದುಕೊಂಡೆ ಅದು ನಿನ್ನ ಕೈಲಿರುವ ಚಂಡೇ ನಾ ಎಂದೂ ನೆನೆದವನಲ್ಲ ಮಳೆಯಲ್ಲಿ ಇಂದು ಕೊಚ್ಚಿ ಹೋಗುತ್ತಿದ್ದೇನೆನಿನ್ನ ಪ್ರೀತಿಹೊಳೆಯಲ್ಲಿ

ನಗೆ ಗವನ

ನಮ್ಮ ಕಾಲೇಜು ಹುಡುಗಿ ಪವಿತ್ರ ಅವಳಿಗೆ ಬರೆದ ಹುಡುಗನೊಬ್ಬ ಪ್ರೇಮ ಪತ್ರ ಪವಿತ್ರಳ ಗೆಳತಿ ಓದಿ ಕೊಟ್ಟಳು ಆ ಪತ್ರವನ್ನು ಪ್ರಿನ್ಸಿಪಾಲರ ಹತ್ರ ಪ್ರಿನ್ಸಿಪಾಲರು ಕರೆಸಿದರು ಪತ್ರ ಬರೆದ ಹುಡುಗ ಪಾಲನೇತ್ರ ಹುಡುಗ ಹೇಳಿದ ನೆನ್ನೆ ಕೊನೆ ಕ್ಲಾಸಲ್ಲಿ ನಿಮ್ಮ ಗೆಳತಿ\ಗೆಳೆಯರಿಗೆ ಪ್ರೇಮ ಪತ್ರ ಬರೆಯಲು ಹೇಳಿದ್ದರು ಮಾಸ್ತ್ಟರ ನನದ್ಯಾವ ತಪ್ಪಿಲ್ಲ ಕೇಳಿ ನಮ್ಮ ಸಾರ ಮುಂದೆ ಹೀಗೇ ಮಾಡದಿರ ತಗೆದು ಹಾಕಬೇಕಾಗುತ್ತದೆ ನಿನ್ನ ಹೆಸರ ಎಂದು ಎಚ್ಚರಿಸಿ ಕಳಿಸಿದರು ಸ್ನೇಹಿತರ ಹತ್ರ

ವಿಶ್ವ ಮಹಿಳಾ ದಿನಕ್ಕಾಗಿ *ಕೆಲವು ಅಕ್ಕ ತಂಗಿಯರಿಗೆ*

ಅಕ್ಕತಂಗಿಯರೇ ಕೇಳಿಈ ಕೆಲವು ಮಾತು ಕಳೆಯದಿರಿ ಕಾಲ ಸುಮ್ಮನೆ ಕೂತು ಯಾಕೆ ನೀವು ಬಾಳ ಬೇಕುಕ್ರೂರ ಸಮಾಜಕ್ಕೆ ಸೋತು(ಗಂಡಸರಿಗೆ) ಸ್ವಾತಂತ್ರ ಸಮಾನತೆ ಪ್ರತಿಯೊಬ್ಬರ ಸ್ವತ್ತು ಸ್ವಲ್ಪ ಆಲೋಚಿಸಿ ಕುಳಿತು ಮುಚ್ಚಿಬಿಡಿ ಮನದಲ್ಲಿರುವಭೀತಿಯ ತೂತು(ಬಿರುಕು) ಇನ್ನು ಮುಂದಾದರೂಈ ಕ್ರೂರ ಸಮಾಜಕ್ಕೆ ಎದುರು ನಿಂತು ನಾಳಿನ ಸಮಾಜಕ್ಕೆ ಉತ್ತಮಫಲ ಕೊಡುವವರು ನೀವಾಗಿರುವಾಗ ಏಕೆ ನಿಮಗೆ ಹೆದರಿಕೆಯ ಮಾತುಸಾಕಲ್ಲವೇ ಇಷ್ಟು ಸವಿಮಾತು ಕೇಳಿರಿ ಮಾಡಿಕೊಳ್ಳದೆ ನಿಮ್ಮ ಕಿವಿ ತೂತು ಏತಕ್ಕೆ ನೋಯುವೆ ಬಾರವ ಹೊತ್ತು ಸಂಸ್ಕೃತಿ,ಸಂಪ್ರದಾಯಕ್ಕೆ ಜೋತು ಇಷ್ಟಾದರೂ ಏಕೆ ನಿನಗೆ(ನಿಮಗೆ)ಸಿಗದು ನೆಮ್ಮದಿಯ ಕೈತುತ್ತು.

ಆಹ್ವಾನ ಬರುವೆನೆಂದನಿನಗೆ

ನಾ ಬರಲೇ ಎಂದು ಆ ನಿನ್ನ ಕಣ್ಣುಗಳು ಕೇಳಿವೆ ಗೆಳತಿ ನಿನ್ನ ಮನದ ಮಾತನ್ನು ಹೇಳಿವೆ ನೀ ಬರುವುದಾದರೆ ನನ್ನದಾವ ಅಬ್ಯಂತರವಿಲ್ಲ ಬರುವುದಾದರೆ ಬಾ ನಿನ್ನ ಹಮ್ಮು-ಬಿಮ್ಮುಗಳ ಬಿಟ್ಟು ನಾನೆಂಬುದ ಸುಟ್ಟು,ಕರುಣೆಯೆಂಬ ಕುಪ್ಪಸತೊಟ್ಟು ಹೃದಯವೈಶಾಲ್ಯತೆಯೆಂಬ ಸೀರೆಯುಟ್ಟು ನನ್ನಲ್ಲಿ ಬರವಸೆ ಇಟ್ಟು ಬಾ ಒಲವ ದೀವಿಗೆ ಹಚ್ಚಿಟ್ಟು ನಲಿವ ನಲ್ಲೆ ಲಜ್ಜೆ ಬಿಟ್ಟು ಬಾ ಆಹ್ವಾನ ಬರುವೆನೆಂದನಿನಗೆ -ವಿ ಕೃಷ್ಣಮೊರ್ತಿಅಜ್ಜಹಳ್ಳಿ

ಮನಮೆಚ್ಚಿದ ಹುಡುಗಿ

ಮಾಗಿಚಳಿಯಲ್ಲಿಬೇಗಎದ್ದು ಮಂಜಿನಹನಿ ಹೊದ್ದು ಮನೆಯಂಗಳಗುಡಿಸಿ ಓಲವ ರಂಗವಲ್ಲಿ ಮುಂಬಾಗಿಲಲ್ಲಿ ಮೆದ್ದು ನಲ್ಲನ ಬರುವಿಗಾಗಿ ಸಂತಸದ ಸುಮವ ದಾರಿಗೆಚಲ್ಲಿ ಕಾದಿಹಳು ನನ್ನ ಮನಮೆಚ್ಚಿದ ಹುಡುಗಿ ಮುದ್ದು ಅವಳಿಗೆ ಕೇಳಿಸದು ಯಾವಸದ್ದು ಕಾಣಿಸದು ಏನಿದ್ದೂ ಎಲ್ಲಾ ಅವಳಿಗೆ ತನ್ನ ನಲ್ಲನ ಒಲವೇ ಮದ್ದು ಎಲ್ಲ ಮರೆವಳು ಓಲವಲ್ಲಿ ಬಿದ್ದು. ನಿಂದಿಹಳು ಚಲುವ ಹೊದ್ದು ನನ್ನ ಹೃದಯ ಕದ್ದು ಅವಳೇ ನನ್ನ ಮನಮೆಚ್ಚಿದ ಹುಡುಗಿ ಪದ್ದು. ಕೃಷ್ಣಮೊರ್ತಿ ಅಜ್ಜಹಳ್ಳಿ

ಆ ಒಂದು ಚಲುವೆಯ ನಗು(ಬಣ್ಣದ ಚಿಟ್ಟೆ)

ಒಂದು ದಿನ ಸುಮ್ಮನೆ ನಾ ನೋಡಿದೆ ನಿನ್ನನೇ ನೀ ನಕ್ಕು ಸೇರಿದೆ ಎದೆಗೂಡನೆ ನಿನ್ನ ನಗುವಿಗೆ ನನ್ನ ಮನಸು,ಹೃದಯ ಕೊಟ್ಟೆ ನಿನ್ನ ಕನಸಲ್ಲಿ ನಾ ಮಲಗಿಬಿಟ್ಟೆ ಊಟ ಬಿಟ್ಟೆ ಕೆಲಸ ಬಿಟ್ಟೆ ಆಟ ಬಿಟ್ಟೆ ಅಪ್ಪ ಅಮ್ಮನ ಬಿಟ್ಟೆ ನಿನ್ನ ಪ್ರೀತಿ ಹೊಳೆಯಲ್ಲಿ ಜಾರಿ ಬಿಟ್ಟೆ ನೆನಪುಗಳಲ್ಲಿ ನಲಿದು ಬಿಟ್ಟೆ ಕನವರಿಕೆಯಲ್ಲಿ ಕುಣಿದು ಬಿಟ್ಟೆ ನನ್ನ ತನ ಮರೆತು ಬಿಟ್ಟೆ ನಿನ್ನ ದಾಸನಾಗಿಬಿಟ್ಟೆ ನೀ ಈಗ ಅದೇ ನಗುವಿಂದ ಬಳಿಬಂದು ಬಿಟ್ಟೆ ನಿನ್ನ ಪ್ರಿಯತಮನ ತಂದು ನನ್ನ ಕೈ ಕುಲುಕಿಸಿ ಬಿಟ್ಟೆ ಇವರು ನನ್ನ ಬಾವಿ ಪತಿಎಂದು ಬಿಟ್ಟೆ ವಿರಹ ಸಾಗರದಿ ನನ್ನ ನೂಕಿ ಬಿಟ್ಟೆ ಬಾವಿ ಪತಿಯೊಂದಿಗೆ ಗಾಡಿ ಹತ್ತಿ ಬಿಟ್ಟೆ ನೀ ಎಲ್ಲವ ಮರೆತು ಬಿಟ್ಟೆ ನೋವು,ನೆನಪು,ಕಹಿ,ನನಗೆ ಬಿಟ್ಟೆ ನನಗೆ ಟಾಟಾ ಎಂದು ಬಿಟ್ಟೆ ನನ್ನ ಪಾಲಿಗೆ ಬಣ್ಣದ ಚಿಟ್ಟೆ ನೀನಾಗಿ ಬಿಟ್ಟೆ ನಿನ್ನಿಂದ ನಾ ವಿರಹಿ ಯಾಗಿಬಿಟ್ಟೆ -ವಿ ಕೃಷ್ಣಮೊರ್ತಿಅಜ್ಜಹಳ್ಳಿ

ಚಲುವ ಕನ್ನಡ ಕಸ್ತೂರಿ

ಕೋಟಿ ಕೋಟಿ ಹುಡೂಗಿಯರಲ್ಲಿ ಲಕ್ಷಾಂತರ ಚಲುವೆಯರಲ್ಲಿ ನೀ ಮನಸಿಗೆ ಹಿಡಿಸಿದೆಯಮ್ಮ ಚಲುವ ಕನ್ನಡ ಕಸ್ತೂರಿ ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿ ಭುವನೇಶ್ವರಿಯ ಮುದ್ದಿನ ಮಗಳಾಗಿ ನೀ ಜನಿಸಿರುವೆ ಚಲುವ ಕನ್ನದ ಕಸ್ತೂರಿ ನೂರಾರು ಹುಡುಗಿಯರ ನಾ ನೋಡಿದೆ ಹಿಡಿಸಲಿಲ್ಲ ನನ್ನ ಮನಸಿಗೆ ನಿನ್ನ ಹಾಂಗ್ಯಾರು ನಿನ್ನ ನೋಡಿದಾಗಿಂದ ನಿನ್ನ ಬಿಂಬಎದೆಯಲ್ಲಿ ಚಲುವ ಕನ್ನಡ ಕಸ್ತೂರಿ ಚಲುವೆಯರ ಚಲುವೆ ನೀನು ಚಂದನದ ಗೊಂಬೆ ನೀನು ಚಂದಿರನ ಸೋದರಿ ನೀನು ಇಂದಿರನ ಮಗಳು ನೀನು ಜಕ್ಕಣ್ಣನ ಕಲೆಯು ನೀನು ಚಲುವ ಕನ್ನಡ ಕಸ್ತೂರಿ ಉತ್ತಮ ಸಂಸ್ಕೃತಿಯ ವನಿತೆ ನೀನು ನಿನ್ನಂತವಳ ಎಲ್ಲೂ ಕಾಣೆ ನಾನು ನಿನ್ನ ತಾಳ್ಮೆ ಯಾರಲು ಇಲ್ಲ ನಿನ್ನ ಕರುಣೆ ಎಲ್ಲರಲಿಲ್ಲ ನಿನ್ನದೆ ಕಂಪು ಜಗದಲೆಲ್ಲ ನಿನ್ನ ಮರೆತರೆ ಜೀವನವಿಲ್ಲ ಚಲುವ ಕನ್ನಡ ಕಸ್ತೂರಿ

*ಯುಗಾದಿ*

ಬಂತು ಯುಗಾದಿ ಮನೆ ಮನೆಗೆ ತುಂಬಿ ತಳಿರು ತೋರಣ ಹೊಸ್ತಿಲಿಗೆ ಬಣ್ಣ ಬಣ್ಣದ ರಂಗವಲ್ಲಿಮುಂಬಾಗಿಲಿಗೆ ಅಬ್ಯಂಜನ ಸ್ನಾನ ಜಿಡ್ದು ಹಿಡಿದ ಮೈ ಮನಗಳಿಗೆ ಸಿಹಿ ಬೆಲ್ಲ ಕಹಿ ಬೇವುಎಲ್ಲ ನಾಲಿಗೆಗೆ ನೋವು ನಲಿವು ಸಮ ಪಾಲು ಎಲ್ಲರ ಬಾಳ್ವೆಗೆ ಎಲೆ ಉದುರಿ ಮರಚಿಗುರಿ ಚೈತ್ರ ವಾಯ್ತು ಜಗಕೆ ಮೈತೊಳೆದು ಮಡಿಯುಟ್ಟು ಬೇವು ಬೆಲ್ಲತಿಂದರಾಯ್ತು ಯುಗಾದಿ ಜನಕೆ. -ಕೃಷ್ಣಮೊರ್ತಿ
*ಆಶಯ* ನೀರಿಲ್ಲದೆ ಬಳಲಿ ಬಾಯಾರಿದ ಕರುನಾಡ ಜನತೆಗೆ ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು ದಾಹ ತಣಿಸುವ ತಂಪು ಪಾನಿಯವಾಗಲಿ ಅನ್ನವಿಲ್ಲದೆ ಅಸಿದು ಕೃಷವಾದ ಜನತೆಗೆ ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು ಮೃಷ್ಟಾನ್ನವಾಗಲಿ ಬೇಸರದಿ ಬಸವಳಿದ ಜನತೆಗೆ ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು ಸುಮದುರ ಸಂಗೀತ ರಂಜನೆಯಾಗಿ ಬರಲಿ ಸರ್ವಜಿತ್ ನಾಮ ಸಂವತ್ಸರದ ಯುಗಾದಿಯು ಎಂಬ ಶುಭಾರೈಕೆ.

ಯುಗಾದಿಯ ಶುಭಾಷಯಗಳು

ಮರೆಯಾಗುತ್ತಿರುವ ವರ್ಷ ನೋವ ಮರೆಸಿ ಬರಲಿರುವ ವರ್ಷ ನಲಿವ ತರಿಸಿ ತೊಡಕು ನೂರೆಂಟು ದೂರವಾಗಿ ಬದುಕಿನ ಬಂಡಿ ಸುಖವಾಗಿ ಸಾಗಲಿ ಎಂದು ಸರ್ವಜಿತ್ ನಾಮ ಸಂವತ್ಸರದ ಯುಗಾದಿಯಂದು ಕರುನಾಡ ಜನತೆಗೆಶುಭಾರೈಸುವೆ. ಅರಳಿ ನಗುವ ಚೈತ್ರದ ಹಾಗೆ ಕುಹು ಕುಹು ಕೊರಳ ದನಿಯ ಹಾಗೆ ಅನು ದಿನವೂ ಪ್ರಜ್ವಲಿಸುವಉಷೆಯ ಹಾಗೆ ಕರುನಾಡ ಜನರ ಬದುಕು ಪ್ರಜ್ವಲಿಸಲೆಂದು ಸರ್ವಜಿತ್ ನಾಮ ಸಂವತ್ಸರದ ಯುಗಾದಿಯಂದು ಶುಭಾರೈಸುವೆ.

ನನ್ನ ಬದುಕು

ದಿಟ್ಟೆ ಮನಸು ಏಕೆ ಕೊಟ್ಟೆ ನನ್ನ ಸ್ಥಿತಿ-ಗತಿ ನೋಡಿಷ್ಟೆ ಮುರುಕು ಮನೆ -ಅರಕು ಚಾಪೆ ನನ್ನ ಮನೆಯು ಮುರಿದ ಮನಸ್ಸು ಅರಿದ ಕನಸು ನನ್ನ ಎದೆಯು ಹೊಂಗೆ ನೆರಳು ಎನ್ನ ಸೂರು ಮಾಗಿಯ ಚಳಿಗೆ ನಿನಗೆ-ನಾ-ನನಗೆ ನೀ ಬೇಸಿಗೆಯ ಬಿಸಿಲಿಗೆ ನಿನಗೆ ನನ್ನ ನನಗೆ ನಿನ್ನ ಮೆಲ್ನುಡಿಯ ತಂಗಾಳಿ ಒಲವೇ ನಿನ್ನ ನನ್ನ ಮೈಗೆ ವಸ್ತ್ರ ನಮ್ಮ ಪ್ರೀತಿ ಆಗಲಿಪವಿತ್ರ ನಂಬಿಕೆಯೇ ನಿನಗೆ ನಾ ಕಟ್ಟುವ ತಾಳಿ ಆದರ್ಶವ ಹಂಚೊಣ ಒಂದಾಗಿ ಬಾಳಿ -ವಿ ಕೃಷ್ಣಮೊರ್ತಿಅಜ್ಜಹಳ್ಳಿ

ಯಾರು ನನ್ನವರು

ಬೆವರ ಸುರಿಸಿ ಉತ್ತು ಬಿತ್ತುದವಸ ದಾನ್ಯ ಬೆಳೆದುಇತ್ತವರೇ ತಮಗಿಲ್ಲದಿದ್ದರೂ ನಮಗೆ ನೀಡಿದವರೇ ಸೊಗಸಾಗಿ ಮಾಡಿ ತಿಂದು ಉಂಡುಕಾಲ ಕಳೆವ ಮಡದಿ ಮಕ್ಕಳೇ(ಜನಗಳೆ) ಕಲ್ಲು ಹೊತ್ತು ಕುಳಿ ಕಿತ್ತುಮನೆ ಕಟ್ಟಿ ಬಣ್ಣ ಹೊಡೆದು ನಮಗೆ ನೆಲೆ ಮಾಡಿದವರೆ ಕೂಲಿ ಪಡೆದು ನಮ್ಮ ಮರೆತು ಹೋದವರೆ ಮನೆ ಬಹಳ ದೊಡ್ಡದೆಂದು ಬಂಧು ಬಳಗ ಬಂದು ನೆಲೆಸಿ ನೆರಳ ಸುಖವ ಪಡುವವರೆ ಯಾರು ನನ್ನವರು ಅಂಗಳದಲೆಲ್ಲ ಕಸ ಕಡ್ಡಿ ಹರಡಿ ಮಣ್ಣು ಮಸಿ ಎಲ್ಲ ಕದಡಿ ಮನೆಯಂಗಳದಲ್ಲಿರುವ ಹೊಗಿಡಗಳ ತುಳಿದು ಹಾಳು ಮಾಡುವ ಮನೆ ಮಕ್ಕಳು ಮಹಿಳೆಯೇ ಯಾರು ನನ್ನವರು ಯಾರು ನನ್ನವರು ವಿ ಕೃಷ್ಣಮೊರ್ತಿಅಜ್ಜಹಳ್ಳಿ

ಕವನ "ಜೀವನ"

ಹೂವ ಹಾಸಿಗೆಯೊ ಅಲ್ಲ ಮುಳ್ಳಿನ ಮಂಚವೂ ಅಲ್ಲ ಎಲ್ಲ ಸುಖ ದುಖಗಳ ಅನುಬವಿಸಿದ ಒಳ್ಳೆಯ ಹೃದಯದಲ್ಲಿ ಅರಳಿದ ಕೆಂಪು ಗುಲಾಬಿ -ಕೃಷ್ಣಮೊರ್ತಿ ಅಜ್ಜಹಳ್ಳಿ

ಕವನ "ಜೀವದ ಜೀವವಾದವಳಿಗೆ"

ನನ್ನ ಬದುಕಿಗೆ ಹಸಿರಾದವಳು ನೀನು ನನ್ನ ಉಸಿರಿಗೆ ಮಲ್ಲೆ ಮಲ್ಲಿಗೆ ಪರಿಮಳ ಸುರಿದವಳು ನೀನು ನನ್ನ ಕನಸಿಗೆ ಬಣ್ಣ ಬಳಿದವಳು ನೀನು ನನ್ನ ಜಡನಡಿಗೆಗೆ ಚೈತನ್ಯ ತಂದವಳು ನೀನು ನನ್ನ ಜೀವದ ಜೀವಕ್ಕೀಗ ವಿರಸದ ವಿಷವ ಸುರಿದು ಹೋಗುವೆಯಾ.....? ನೀನು ನನ್ನ ಮರೆತು ಬದುಕಲಿಚ್ಚಿಸುವೆಯಾ...? -ವಿ ಕೃಷ್ಣಮೊರ್ತಿ ಅಜ್ಜಹಳ್ಳಿ