Skip to main content

Posts

Showing posts from March, 2015

ನವಗ್ರಹ ಆಧಾರದ ಮೇಲೆ ವ್ಯಾಧಿ ನಿರ್ಣಯ

ಆರೋಗ್ಯವೇ ಭಾಗ್ಯ. ಆರೋಗ್ಯವು ಜನ್ಮದತ್ತವಾಗಿ, ತಮ್ಮ ಪೂರ್ವ ಪುಣ್ಯಗಳಿಗನುಸಾರವಾಗಿ ಬರುತ್ತದೆ. 'ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿರೂಪೇಣ ಬಾಧ್ಯತೇ' ಎಂಬಂತೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಗನುಸಾರವಾಗಿ ವ್ಯಾಧಿಗಳು ನಮ್ಮನ್ನು ಕಾಡುತ್ತವೆ. ಇದನ್ನು ನಾವು ಜನ್ಮ ಜಾತಕದಿಂದ ತಿಳಿಯಬಹುದು. ಆರೋಗ್ಯ ಜ್ಯೋತಿಷ್ಯದ ಪ್ರಕಾರ ಕಾಲ ಪುರುಷನ ಅಂಗದ ಆಧಾರದ ಮೇಲೆ, ಲಗ್ನದಿಂದ ದ್ವಾದಶ ಭಾವಗಳ ಮೇಲೆ, ನವಗ್ರಹಗಳ ಆಧಾರದ ಮೇಲೆ ವ್ಯಾಧಿಗಳನ್ನು ನಿರ್ಧರಿಸಬಹುದು. 1. ಕಾಲ ಪುರುಷನ ಅಂಗಗಳನ್ನು ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹಂಚಿದ್ದಾರೆ. ಜಾತಕದಲ್ಲಿ ಯಾವ ರಾಶಿಯು ಪೀಡಿತವಾಗಿರುತ್ತದೋ ಆ ರಾಶಿಯ ಅಂಗ ವ್ಯಾಧಿಗ್ರಸ್ತವಾಗುತ್ತದೆ. ಮೇಷ: ತಲೆಯ ಭಾಗ, ಮಿದುಳು, ಬಾಯಿ, ಮನಸು. ವೃಷಭ: ಮುಖ, ಬಲಗಣ್ಣು, ಕಂಠ, ಕುತ್ತಿಗೆ, ಧ್ವನಿ ಪೆಟ್ಟಿಗೆ. ಮಿಥುನ: ಹೆಗಲು, ಬಾಹು, ಬಲಕಿವಿ, ಶ್ವಾಸಕೋಶ, ಉಸಿರಾಟ. ಕಟಕ:ಹೃದಯ, ವಕ್ಷಸ್ಥಳ, ಪಕ್ಕೆಗಳು ಸಿಂಹ: ಬೆನ್ನು, ಹೊಟ್ಟೆ, ಪಿತ್ತಕೋಶ, ರಕ್ತನಾಳಗಳು, ಜಠರ. ಕನ್ಯಾ: ಸೊಂಟ, ನಾಭಿ, ಸಣ್ಣಕರುಳು ತುಲಾ: ಕಿಬ್ಬೊಟ್ಟೆ, ದೊಡ್ಡಕರುಳು, ಪೃಷ್ಟ, ಮೂತ್ರಕೋಶ, ಗರ್ಭಕೋಶ. ವೃಶ್ಚಿಕ: ಗುಪ್ತಾಂಗ, ಜನನಾಂಗ, ಧನುಸ್ಸು: ತೊಡೆ, ಸ್ನಾಯುಗಳು. ಮಕರ:ಮೊಣಕಾಲು, ಮಂಡಿ,ಅಸ್ಥಿಗಳು. ಕುಂಭ:ಎಡ ಹಿಮ್ಮಡಿ, ಎಡ ಕಿವಿ, ಎಡ ಭುಜ, ಮೀನಖಂಡ ಮೀನ: ಪಾದಗಳು, ಕಾಲು ಬೆರಳುಗಳು, ರಸನಾತ್ಮಕ ದ್ರವ್ಯಗಳು, ಎಡಕಣ್ಣು. 2. ಲಗ್ನದಿಂದ ದ

ಉತ್ತಮ ಪುರುಷರ ಲಕ್ಷಣ

ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ. ಉತ್ತಮ ಪುರುಷ, ಮಧ್ಯಮ ಪುರುಷ ಹಾಗೂ ಅಧಮ ಪುರುಷರೆಂದು ವ್ಯಕ್ತಿಯನ್ನು ವಿಂಗಡಿಸಲಾಗುತ್ತದೆ. ಈ ವಿಂಗಡನೆ ಸ್ವಭಾವದಿಂದಲ್ಲ. ಕೇವಲ ಬಾಹ್ಯ ನೋಟದಿಂದ ವಿಂಗಡಿಸಲಾಗಿದೆ. ಇಲ್ಲಿ ಶರೀರದ ಹತ್ತು ವಿಭಾಗಗಳನ್ನು ಕೊಡಲಾಗಿದೆ. ಅವುಗಳ ಆಧಾರದ ಮೇಲೆ ಉತ್ತಮ ಪುರುಷನ ಲಕ್ಷಣಗಳನ್ನು ತಿಳಿಸಲಾಗಿದೆ. ಶರೀರದ ಹತ್ತು ವಿಭಾಗಗಳು 1. ಪಾದದ ಬಿಳಿಯ ಸಂದಿನಿಂದ ಹಿಡಿದು ಕಾಲಿನ ಐದು ಬೆರಳುಗಳ ಭಾಗ 2. ಮೊಣಕಾಲು ಮತ್ತು ಮೀನಖಂಡಗಳು 3. ತೊಡೆಗಳು ಮತ್ತು ಗುಪ್ತಾಂಗ 4. ನಾಭಿ ಮತ್ತು ಅದರ ಕೆಳಗಿನ ಕಟಿ ಪ್ರದೇಶ 5. ಹೊಟ್ಟೆ 6. ಹೃದಯ, ಸ್ತನ ಪ್ರದೇಶ 7. ಹೆಗಲು ಮತ್ತು ಕತ್ತಿನ ಮೂಳೆಗಳು 8. ಕತ್ತು ಮತ್ತು ತುಟಿ 9. ಕಣ್ಣು ಮತ್ತು ಹುಬ್ಬು 10. ತಲೆ ಮನುಷ್ಯನಲ್ಲಿ ಈ ಎಲ್ಲ ಲಕ್ಷಣಗಳು ಸುಲಕ್ಷಣವಾಗಿದ್ದರೆ ಮಹಾಪುರುಷನಾಗುತ್ತಾನೆ. ಕುಲಕ್ಷಣವಾಗಿದ್ದರೆ ರಾಕ್ಷಸ ಅಥವಾ ನರಾಧಮನಾಗುತ್ತಾನೆ. ಉತ್ತಮ ಪುರುಷರ ಸುಲಕ್ಷಣತೆ : * ಪಂಚ ದೀರ್ಘಂ ಚತುರ್ಹಸ್ವಂ ಪಂಚ ಸೂಕ್ಷ್ಮಂ ಷಡುನ್ನತಮ್ ಸಪ್ತ ರಕ್ತಂ ತ್ರಿಗಂಭೀರಂ ತ್ರಿವಿಸ್ತೀರ್ಣ ಪ್ರಶಸ್ಯತೇ * ಪಂಚದೀರ್ಘಂ : ಕಣ್ಣುಗಳು, ಗಲ್ಲ, ಭುಜಗಳು, ಮೂಗು, ಎರಡು ಸ್ತನಗಳ ಮಧ್ಯದ ಅಗಲ, ಈ ಐದು ಅಂಗಗಳು ಭಾಗ್ಯಶಾಲಿ ಪುರುಷರಿಗೆ ದೊಡ್ಡದಾಗಿರುತ್ತದೆ. ಚತುರ್ಹಸ್ವಂ : ಕತ್ತು, ಮೀನಖಂಡಗಳು, ಸೊಂಟ, ಲಿಂಗ ಇವು ನಾಲ್ಕು ಚಿಕ್ಕ ದಾಗಿರಬೇಕು ಮೀನಖಂಡಗಳು ತೊಡೆಗಿಂತ ಸಣ್ಣಗಿರಬೇಕು.

ಆಹಾರ ಸೇವೆನೆಗೊಂದು ವಾರ

ಹಣ್ಣು ಸೇವಿಸುವುದಕ್ಕೂ ವಾರಕ್ಕೂ ಸಂಬಂಧವಿದೆ ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ವಾರಕ್ಕೆ ತಕ್ಕಂತೆ ಆಹಾರ ಸೇವಿಸಬೇಕೆಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಭಾನುವಾರ: ಈ ದಿನ ಹೆಚ್ಚಿನ ಜನರಿಗೆ ರಜೆ ಇರುತ್ತದೆ. ಸೊಪ್ಪು, ಮಾಂಸ ಮತ್ತು ಹಣ್ಣು ಹೀಗೆ ವಿವಿಧ ರೀತಿಯ ಆಹಾರವನ್ನು ಆರಾಮವಾಗಿ ಸೇವಿಸುವ ದಿನವಿದು. ಈ ದಿನ ಸೂರ್ಯನ ವೈಬ್ರೆನ್ಸ್ ಪಸರಿಸುವ ದಿನವಾಗಿರುವುದು ಈ ಆಹಾರ ಈ ದಿನಕ್ಕೆ ಸೂಟ್ ಆಗುತ್ತದೆ. ಸೋಮವಾರ: ಇದು ಚಂದ್ರನ ದಿನ. ಇದು ನೀರಿನ ಅಂಶವನ್ನು ಸೂಚಿಸುತ್ತದೆ. ಹೀಗಾಗಿ ಈ ದಿನ ನೀರಿನಂಶವನ್ನೊಳಗೊಂಡ ಕಲ್ಲಂಗಡಿ, ಸೌತೆಕಾಯಿ ಮತ್ತು ಬೂದು ಕುಂಬಳಕಾಯಿಯನ್ನು ಸೇವಿಸಬೇಕು. ಮಂಗಳವಾರ: ಈ ದಿನವನ್ನು ಮಂಗಳ ಗ್ರಹ ನಿಯಂತ್ರಿಸುತ್ತದೆ ಮತ್ತು ಉಷ್ಣವನ್ನು ಪಸರಿಸುತ್ತದೆ. ಮಾವಿನಹಣ್ಣು, ಖರ್ಚೂರ ಮತ್ತು ಅನಾನಸ್ ಸೇವಿಸಲು ಪ್ರಯತ್ನಿಸಿ. ಬುಧವಾರ: ಇದು ಬುಧ ಗ್ರಹದ ದಿನ. ಇದೊಂದು ಡಲ್ ಗ್ರಹ. ಆದ್ದರಿಂದ ಈ ದಿನ ನೀವು ಎಲ್ಲ ರೀತಿಯ ಆಹಾರವನ್ನು ಸೇವಿಸಬಹುದು. ಗುರುವಾರ: ಇದು ಗುರುವಿನ ದಿನ. ಕಿತ್ತಳೆಹಣ್ಣು ಅಥವಾ ಹಳದಿ ಬಣ್ಣಗಳನ್ನು ಹೊಂದಿರುವ ಹಣ್ಣುಗಳಾದ ಕಿತ್ತಳೆಹಣ್ಣು, ಲಿಂಬೆಹಣ್ಣು ಮತ್ತು ಬಾಳೆಹಣ್ಣು ಸೇವನೆ ಒಳ್ಳೆಯದು. ಶ್ರುಕವಾರ: ಇದು ಬುಧನ ದಿನ. ಬುಧವಾರದಂತೆಯೇ ಇದು ಕೂಡ ಡಲ್ ದಿವಸ. ಹೀಗಾಗಿ ಎಲ್ಲ ರೀತಿಯ ಆಹಾರವನ್ನು ಸೇವಿಸಬಹುದು. ಶನಿವಾರ: ಶನಿಗ್ರಹದ ದಿನ. ಈ ಗ್ರಹ ಎಣ್ಣೆಯನ್ನು ನಿಯಂತ್ರಿಸುವ ಕಾರಣ ಈ ದಿನ

ಭಾವನಾಮೇಳದ ಬಿಂದುವೇ ಶನಿ

ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ' ಎನ್ನುತ್ತಾರೆ ನಿಜಗುಣ ಶಿವಯೋಗಿ. ಆದರೆ ಅವರ ಭಾವವನ್ನು ಗ್ರಹಗಳು ನಿಯಂತ್ರಿಸುತ್ತವೆ ಎನ್ನುವುದು ಜ್ಯೋತಿಷ್ಯದ ಮಾತು. ಶುಭಕಾರಕನಾದ ಶನಿಗ್ರಹ ತನ್ನ ದೃಷ್ಟಿಯನ್ನೀಗ ಮಾರ್ಚ್ 14 ರಂದು ಬದಲಿಸುತ್ತಿದ್ದಾನೆ. ಅದರ ಪರಿಣಾಮ ಏನಿರಬಹುದು? ಬ್ಲ್ಯಾಕ್ ಈಸ್ ಬ್ಯೂಟಿಫುಲ್ ಎನ್ನುವುದು ಆಂಗ್ಲೋಕ್ತಿ. ಆದರೆ ಕಪ್ಪು ಮಾಯೆ, ಪಿಶಾಚರ, ನಿಶಾಚರ ಭಾವ ಎನ್ನುವುದು ಶ್ರೀಸಾಮಾನ್ಯನ ಅಂಬೋಣ. ನಿಮಗೊಂದು ವಿಷಯ ಗೊತ್ತಾ? ಕಪ್ಪು ಬಣ್ಣವೇನಾದರೂ ಇಲ್ಲದಿದ್ದರೆ ನಿಮಗೆ ಬೇರೆ ಬಣ್ಣಗಳ ವ್ಯತ್ಯಾಸವೇ ತಿಳಿಯುತ್ತಿರಲಿಲ್ಲ. ಅಷ್ಟೇಕೆ ಆಗಸದ ಕಡು ನೀಲಿ ಬಣ್ಣವನ್ನು ನೋಡುತ್ತಾ ಖುಷಿ ಪಡಲೂ ಸಾಧ್ಯವಾಗುತ್ತಿರಲಿಲ್ಲ. ಹೌದು, ಕಪ್ಪು ಬೆಳಕಿನ ಕಣ್ಣು, ಛಾಯೆಯಿಲ್ಲದೆ ವಸ್ತುವಿನ ಜೀವಂತಿಕೆಗೆ ಆಧಾರವಿಲ್ಲ ಎನ್ನುವುದು ವಿಜ್ಞಾನದ ಮಾತು. ಕಪ್ಪಿಲ್ಲದ ವಸ್ತುವಿಲ್ಲ, ಭಾವವಿಲ್ಲ ಎನ್ನುವುದು ನಾವು ಕಂಡುಕೊಂಡ ಸತ್ಯ. ಅಷ್ಟಾದರೂ ಕಪ್ಪು ಎಂದಾಕ್ಷಣ ನೆನಪಿಗೆ ಬರುವ ಶನಿಯ (ಯಮಾಗ್ರಜ)ನ ಹೆಸರು ಕೇಳಿದಾಕ್ಷಣ ಅದೇನೋ ಭೀತಿ. ಮೈಯಲ್ಲಿ ನಡುಕ. ನಮ್ಮ ಸೌರಮಂಡಲದಲ್ಲಿ ಲಕ್ಷಾಂತರ ಮೈಲಿಗಳಾಚೆ ಇರುವ ಶನಿ ಅಷ್ಟೊಂದು ಪೀಡಾಕಾರಕನೇ? ಅವನದು ಕ್ರೂರದೃಷ್ಟಿಯೇ? ಒಂದು ವರ್ಗದವರು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವುದಕ್ಕೋಸ್ಕರ ಅಲ್ಪಮತಿಗಳಲ್ಲಿ ಬಿತ್ತಿರುವ ಬೀಜವಿದು ಎಂದರೆ ಅತಿಶಯೋಕ್ತಿಯಲ್ಲ. ಗ್ರಹ ಪ್ರಭಾವವೂ ಕಾಂತತ

ಸಂಖ್ಯೆ ಮತ್ತು ನಿಮ್ಮ ವೃತ್ತಿ ಸಂಖ್ಯಾಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳುವ ಮುನ್ನ ಒಂದಿಷ್ಟು ಅಂಶಗಳತ್ತ ಗಮನ ಹರಿಸೋಣ.

ಸಂಖ್ಯಾಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳುವ ಮುನ್ನ ಒಂದಿಷ್ಟು ಅಂಶಗಳತ್ತ ಗಮನ ಹರಿಸೋಣ. ನಮ್ಮಲ್ಲಿ ಒಂದರಿಂದ ಒಂಬತ್ತು ಸಂಖ್ಯೆಗಳಿವೆ. ಆಯಾ ಸಂಖ್ಯೆಗಳನ್ನು ಆಧರಿಸಿ ವ್ಯಕ್ತಿಯ ಸಾಮರ್ಥ್ಯ ಮತ್ತು ದುರ್ಬಲ ಅಂಶಗಳನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಬಹುದು. ಗೊಂದಲದಲ್ಲಿರುವವರಿಗೆ ಸಂಖ್ಯಾಶಾಸ್ತ್ರ ಒಂದು ಮಾನದಂಡ ಅಥವಾ ಮಾರ್ಗದರ್ಶಕವಾಗಬಹುದೇ ಹೊರತು ಅದುವೇ ಅಂತಿಮವಲ್ಲ. ಒಂದಿಷ್ಟು ಉದಾಹರಣೆಗಳನ್ನು ನಾವಿಲ್ಲಿ ಗಮನಿಸೋಣ. ಜನ್ಮ ದಿನಾಂಕ 1, 10, 19 ಅಥವಾ 28: ಸಂಖ್ಯಾ ಪಟ್ಟಿಯಲ್ಲಿ ಮೊದಲ ಸಂಖ್ಯೆಯೇ ಒಂದು. ವೃತ್ತಿ ಭೂಮಿಕೆಯಲ್ಲಿ ಮುಂದಿರುವವರನ್ನು ನಾವು ಅದ್ವಿತೀಯರು, ಮೊದಲಿಗರು ಎಂದೇ ಗುರುತಿಸುತ್ತೇವೆ. ಜನ್ಮ ಸಂಖ್ಯೆ ಒಂದಾಗಿದ್ದರೆ ನಿಮ್ಮಲ್ಲಿ ಉತ್ತಮ ನಾಯಕತ್ವ ಗುಣಗಳು ಮೇಳೈಸಿರುತ್ತವೆ. ಸಕಾರಾತ್ಮಕ ವರ್ತನೆಗಳನ್ನು ನೋಡಬಹುದು. ಈ ಸಂಖ್ಯೆಯವರು ಆಶಾವಾದಿಗಳು. ನಾಯಕತ್ವ ಗುಣ ಇವರಲ್ಲಿ ಹಾಸು ಹೊಕ್ಕಾಗಿರುತ್ತದೆ. ಉತ್ತಮ ನಾಯಕರು ಎನಿಸಿಕೊಳ್ಳುತ್ತಾರೆ ಮತ್ತು ಪ್ರತಿಷ್ಠಿತ ಉದ್ಯಮಿಗಳಾಗುತ್ತಾರೆ. ನಂಬರ್ ಒಂದರ ಹೊರತಾಗಿ ಜನಿಸಿದವರ ಜತೆಗೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ. ನಿಮಗೊಂದು ವಿಷಯ ಗೊತ್ತಾ ಪ್ರಪಂಚದ ಬಹುತೇಕ ಶ್ರೇಷ್ಠ ಉದ್ಯಮಿಗಳೆಲ್ಲರು ಹುಟ್ಟಿದ ದಿನಾಂಕ ಒಂದೇ ಆಗಿದೆ. ಒಂದು ವೇಳೆ ನೀವು ಉದ್ಯೋಗದಲ್ಲಿದ್ದರೆ ನಿಮಗೆ ವಹಿಸಿದ ಕೆಲಸ, ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ನಿಮಗಿದೆ. ಸ್ವಂತ ಆಲೋಚನಾ ಶಕ್ತ

ಶ್ರೀಮನ್ಮಥ ನಾಮ ಸಂವತ್ಸರದ ವರ್ಷ ಭವಿಷ್ಯ ಯುಗಾದಿ 2015:

ಯುಗಾದಿಯ ದಿನ ಎಲ್ಲರಿಗೂ ತಮ್ಮ ಬದುಕಿನ ಮುಂದಿನ ಒಂದು ವರ್ಷದ ಫಲಾಫಲಗಳನ್ನು ತಿಳಿದುಕೊಳ್ಳುವ ಆಸೆ ಇದ್ದೇ ಇರುತ್ತದೆ. ಹೀಗಾಗಿಯೇ ಹಬ್ಬದ ದಿನ ಸಾಮೂಹಿಕವಾಗಿ ಪಂಚಾಂಗ ಶ್ರವಣ ನಡೆಯುತ್ತದೆ. ಇದರಿಂದ ಒಂದು ಅವ್ಯಕ್ತವಾದ ನಿರಾಳ ಭಾವ ಸಿಗುತ್ತದೆ. ಇಲ್ಲಿದೆ ನೋಡಿ. "ಶ್ರೀ ಮನ್ಮಥ ನಾಮ ಸಂವತ್ಸರ"ದ ದ್ವಾದಶ ರಾಶಿಗಳ ಸಂಕ್ಷಿಪ್ತ ವರ್ಷ ಭವಿಷ್ಯ. ಮೇಷ: ಈ ರಾಶಿಯ ಅಧಿಪತಿ ಕುಜ ಗ್ರಹವಾಗಿದ್ದು, ಇದು ಅಗ್ನಿತತ್ತ್ವದ ರಾಶಿಯಾಗಿದೆ. ಇದು ಕಾಲ ಪುರುಷನ ತಲೆಯಾಗಿದೆ. ಈ ರಾಶಿಯವರಿಗೆ ಜುಲೈವರೆಗೆ ಗುರುಬಲ ಇರುವುದಿಲ್ಲ. ಆ ಸಮಯದಲ್ಲಿ ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ ಕಾರ್ಯಗಳಲ್ಲಿ ಅಡೆತಡೆಯೂ, ಜೊತೆಗೆ ಮನಸ್ಸಿಗೆ ತುಸು ಅಶಾಂತಿಯೂ ಇರುವುದು. ಈ ಸಮಯದಲ್ಲಿ ಕೈಯಲ್ಲೇ ಎಷ್ಟೇ ಹಣವಿದ್ದರೂ ಇದ್ದಕ್ಕಿದ್ದಂತೆಯೇ ವಿಪರೀತ ಖರ್ಚಿನ ಬಾಬತ್ತುಗಳು ಎದುರಾಗುವ ಸಂಭವವಿದೆ. ಜುಲೈ 13ರ ನಂತರ ಗುರು ಐದನೇ ಮನೆಗೆ ಬಂದಾಗ ಗುರುಬಲ ಬರುವುದು. ಆಗ ಶುಭ ಕಾರ್ಯಗಳಾದ ಮದುವೆ, ಗೃಹಪ್ರವೇಶ, ನೀವೇಶ ಖರೀದಿ, ಮಕ್ಕಳ ಮದುವೆ, ಉಪನಯನ ಇತ್ಯಾದಿಗಳು ಜರುಗುವುವು. ವಿದ್ಯಾರ್ಥಿಗಳು ಕೂಡ ಉನ್ನತ ಮಟ್ಟಕ್ಕೆ ಏರುವರು. ಈ ವರ್ಷ ಶನಿ ಅಷ್ಟಮದಲ್ಲಿರುವುದಿಂದ ಪ್ರತಿ ಶನಿವಾರ ಆಂಜನೇಯ ದೇವಾಲಯಕ್ಕೆ ಹೋಗಿ ಭಕ್ತಿಪೂರ್ವಕವಾಗಿ ಪ್ರದಕ್ಷಿಣೆ ಮಾಡುವುದು ಒಳ್ಳೆಯದು. ವೃಷಭ: ಈ ರಾಶಿಯ ಅಧಿಪತಿ ಶುಕ್ರ ಗ್ರಹ. ಇದು ಭೂ ತತ್ತ್ವಕ್ಕೆ ಸಂಬಂಧಿಸಿದ ರಾಶಿಯಾಗಿದೆ. ಈ ರಾಶಿಯವರಿಗೆ ಈ

ಮನಃಶಾಂತಿ ನೀಡುವ ನಕ್ಷತ್ರ ಎಲ್ಲ ನಕ್ಷತ್ರದವರು ಅತಿ ಮುಖ್ಯವಾಗಿ ಅಂಶಗಳು ಈ ರೀತಿ ಇವೆ.

ಮನಃಶಾಂತಿ ನೀಡುವ ನಕ್ಷತ್ರ ನಮ್ಮ ದೈನಂದಿನ ಚಟುವಟಿಕೆಗಳು ಸಫಲವಾಗಲು ಅಥವಾ ವಿಫಲವಾಗಲು ನಮ್ಮ ಜನ್ಮ ನಕ್ಷತ್ರ/ ನಾಮ ನಕ್ಷತ್ರಕ್ಕೂ ಆಯಾ ದಿನಗಳ ನಕ್ಷತ್ರಗಳ ಜತೆ ಇರುವ ಮೂಲ ಸಂಬಂಧವೇ ಕಾರಣ. ಹೀಗಾಗಿ ನಮ್ಮ ನಕ್ಷತ್ರಕ್ಕೂ ದಿನದ ನಕ್ಷತ್ರಕ್ಕೂ ಯಾವ ವಿಚಾರದಲ್ಲಿ ಸಂಬಂಧವಿರುತ್ತದೆ ಎಂಬುದನ್ನು ಅರಿಯಬೇಕು. ನಕ್ಷತ್ರ ಕಿರಣಗಳಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಎಂಬ ಎರಡು ವಿಧಗಳಿವೆ. ಯಾವುದೇ ನಕ್ಷತ್ರದವರಿಗೆ ಸಕಾರಾತ್ಮಕ ಕಿರಣಗಳು ಅನುಕೂಲ. ನಕಾರಾತ್ಮಕ ಕಿರಣಗಳು ಪ್ರತಿಕೂಲ. ಈ ಕಿರಣಗಳು ಮನಸು, ಆರೋಗ್ಯ, ಹಣ, ಕಷ್ಟ-ನಷ್ಟ, ವೈರತ್ವ, ಸಾಧನೆ, ವ್ಯಾಪಾರ-ವ್ಯವಹಾರ, ಮೈತ್ರಿ ಮೊದಲಾದವುಗಳ ಮೇಲೆ ಪ್ರಭಾವ ಬೀರುತ್ತವೆ. ಎಲ್ಲ ನಕ್ಷತ್ರದವರು ಅತಿ ಮುಖ್ಯವಾಗಿ ಅಂಶಗಳು ಈ ರೀತಿ ಇವೆ. ೧ನಿಮ್ಮ ಜನ್ಮ/ನಾಮ ನಕ್ಷತ್ರವಿರುವ ದಿನ ಅನುಕೂಲವಾಗಲಿ, ಅನನುಕೂಲವಾಗಲಿ ಇರುವುದಿಲ್ಲ. ಅಂದರೆ ಸಾಮಾನ್ಯ ಫಲ. ೨ನಿಮ್ಮ ನಕ್ಷತ್ರದ ಮುಂದಿನ ನಕ್ಷತ್ರವೇ ಸಂಪತ್ ತಾರೆ. ಇದು ಹಣ, ಆಭರಣ, ವ್ಯವಹಾರಗಳಿಗೆ ಅನುಕೂಲ. ಧನಲಕ್ಷ್ಮೀ ಪೂಜೆಗೆ ಶ್ರೇಷ್ಠ ದಿನ. ಬರಬೇಕಾಗಿದ್ದ ಹಣ ಬರುವುದು. ಗೌರವ, ಕೀರ್ತಿ, ಉಡುಗೊರೆ ಪ್ರಾಪ್ತವಾಗುವ ದಿನ. ಸಾಲ ಪಡೆಯಲು ಪ್ರಯತ್ನಪಟ್ಟಾಗ ಫಲದಾಯಕವಾಗುವ ದಿನ. 3.ನಿಮ್ಮ ನಕ್ಷತ್ರದಿಂದ 3ನೆಯ ನಕ್ಷತ್ರವೇ ವಿಪತ್ ತಾರೆ. ವಿಪತ್ ತಾರೆ ಇರುವ ದಿನ ಅಪಘಾತ, ಹೊಡೆತ, ಕಲಹ, ನಷ್ಟ ಮೊದಲಾದ ತೊಂದರೆಗಳಾಗುವುದು. ಮೇಲಧಿಕಾರಿಗಳ ಅವಕೃಪೆ ಉಂ

ಸಂಖ್ಯಾಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳುವ ಮುನ್ನ ಒಂದಿಷ್ಟು ಅಂಶಗಳತ್ತ ಗಮನ ಹರಿಸೋಣ.

ಸಂಖ್ಯೆ ಮತ್ತು ನಿಮ್ಮ ವೃತ್ತಿ ಸಂಖ್ಯಾಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳುವ ಮುನ್ನ ಒಂದಿಷ್ಟು ಅಂಶಗಳತ್ತ ಗಮನ ಹರಿಸೋಣ. ನಮ್ಮಲ್ಲಿ ಒಂದರಿಂದ ಒಂಬತ್ತು ಸಂಖ್ಯೆಗಳಿವೆ. ಆಯಾ ಸಂಖ್ಯೆಗಳನ್ನು ಆಧರಿಸಿ ವ್ಯಕ್ತಿಯ ಸಾಮರ್ಥ್ಯ ಮತ್ತು ದುರ್ಬಲ ಅಂಶಗಳನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಬಹುದು. ಗೊಂದಲದಲ್ಲಿರುವವರಿಗೆ ಸಂಖ್ಯಾಶಾಸ್ತ್ರ ಒಂದು ಮಾನದಂಡ ಅಥವಾ ಮಾರ್ಗದರ್ಶಕವಾಗಬಹುದೇ ಹೊರತು ಅದುವೇ ಅಂತಿಮವಲ್ಲ. ಒಂದಿಷ್ಟು ಉದಾಹರಣೆಗಳನ್ನು ನಾವಿಲ್ಲಿ ಗಮನಿಸೋಣ. ಜನ್ಮ ದಿನಾಂಕ 1, 10, 19 ಅಥವಾ 28: ಸಂಖ್ಯಾ ಪಟ್ಟಿಯಲ್ಲಿ ಮೊದಲ ಸಂಖ್ಯೆಯೇ ಒಂದು. ವೃತ್ತಿ ಭೂಮಿಕೆಯಲ್ಲಿ ಮುಂದಿರುವವರನ್ನು ನಾವು ಅದ್ವಿತೀಯರು, ಮೊದಲಿಗರು ಎಂದೇ ಗುರುತಿಸುತ್ತೇವೆ. ಜನ್ಮ ಸಂಖ್ಯೆ ಒಂದಾಗಿದ್ದರೆ ನಿಮ್ಮಲ್ಲಿ ಉತ್ತಮ ನಾಯಕತ್ವ ಗುಣಗಳು ಮೇಳೈಸಿರುತ್ತವೆ. ಸಕಾರಾತ್ಮಕ ವರ್ತನೆಗಳನ್ನು ನೋಡಬಹುದು. ಈ ಸಂಖ್ಯೆಯವರು ಆಶಾವಾದಿಗಳು. ನಾಯಕತ್ವ ಗುಣ ಇವರಲ್ಲಿ ಹಾಸು ಹೊಕ್ಕಾಗಿರುತ್ತದೆ. ಉತ್ತಮ ನಾಯಕರು ಎನಿಸಿಕೊಳ್ಳುತ್ತಾರೆ ಮತ್ತು ಪ್ರತಿಷ್ಠಿತ ಉದ್ಯಮಿಗಳಾಗುತ್ತಾರೆ. ನಂಬರ್ ಒಂದರ ಹೊರತಾಗಿ ಜನಿಸಿದವರ ಜತೆಗೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ. ನಿಮಗೊಂದು ವಿಷಯ ಗೊತ್ತಾ ಪ್ರಪಂಚದ ಬಹುತೇಕ ಶ್ರೇಷ್ಠ ಉದ್ಯಮಿಗಳೆಲ್ಲರು ಹುಟ್ಟಿದ ದಿನಾಂಕ ಒಂದೇ ಆಗಿದೆ. ಒಂದು ವೇಳೆ ನೀವು ಉದ್ಯೋಗದಲ್ಲಿದ್ದರೆ ನಿಮಗೆ ವಹಿಸಿದ ಕೆಲಸ, ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ನ

ನವಗ್ರಹ ದೋಷ ನಿವಾರಣೆಗಾಗಿ ಔಷಧೀಯ ಸ್ನಾನ

ಓಂ ಆರೋಗ್ಯಂ ಪ್ರದದಾತುನೋ ದಿನಕರಃ|| ಚಂದ್ರೋ ಯಶೋ ನಿರ್ಮಲಂ| ಭೂತಿಂಭೂಮಿಸುತಃ|| ಸುಧಾಂಶುತನಯೋ ಪ್ರಜ್ಞಾಂ|ಗುರುಗೌರವಂ|| ಕಾವ್ಯ ಕೋಮಲವಾಗ್ವಿಲಾಸಮತುಲಂ|| ಮಂದೋ ಮುದಂ ಸರ್ವದಾ|ರಾಹುರ್ಬಾಹು ಬಲಂ ಕರೋತು ವಿರೋದ ಶಮನಂ| ಕೇತುಂ ಕುಲಸ್ಯೋನ್ನತಿ ಕುರು ಸರ್ವದಾ|| ನವಗ್ರಹ ದೋಷ ನಿವಾರಣೆಗಾಗಿ ಔಷಧೀಯ ಸ್ನಾನ ಸಾಮಾನ್ಯವಾಗಿ ನವಗ್ರಹಗಳ ಕಾಟದಿಂದ ಮುಕ್ತಿ ಪಡೆದ ವ್ಯಕ್ತಿಗಳು ಇಲ್ಲವೆಂದೇ ಹೇಳಬಹುದು.ಹೀಗಿದ್ದಾಗ್ಯು ಪ್ರಾಪ್ತ ಸಮಯಗಳಲ್ಲಿ ಕೈಗೊಳ್ಳಬಹುದಾದಂತಹ ಕೆಲವು ಉತ್ತಮ ಪರಿಹಾರಗಳು ಈ ನವಗ್ರಹ ದೋಷನಿವಾರಣೆಯಲ್ಲಿ ಪಾತ್ರ ವಹಿಸುತ್ತವೆ. ಹಾಗಿದ್ದರೆ ನವಗ್ರಹ ದೋಷನಿವಾರಣೆಗೆ ಮಾಡ ಬಹುದಾದ ಆರೋಗ್ಯಕರ ಔಷಧೀಯ ಸ್ನಾನದ ಬಗ್ಗೆ ವಿವರವಾಗಿ ತಿಳಿಯೋಣ ಪ್ರಾಚೀನ ಗ್ರಂಥಗಳಲ್ಲಿ ತಿಳಿಸಿರುವಂತೆ ಸ್ನಾನ ಮಾಡುವಲ್ಲಿ ಏಳು ಕ್ರಮಗಳಿವೆ. ೧.ಮಂತ್ರಗಳ ಜಪ ಮಾಡುತ್ತಾ ಕೈಗೊಳ್ಳುವದನ್ನು ಮಂತಸ್ನಾನ ಎನ್ನುವರು. ೨.ಮೃತ್ತಿಕೆ(ವಿಶೇಷ ಪ್ರಕಾರದ ಮಣ್ಣು) ಮೆತ್ತಿಕೊಂಡು ಸ್ನಾನ ಮಾಡುವುದನ್ನು ಬೌಮ ಸ್ನಾನ ಎನ್ನುವರು. ೩.ವಿಭೂತಿಯನ್ನು ದೇಹಕ್ಕೆಲ್ಲಾ ಬಳಿದುಕೊಂಡು ಸ್ನಾನ ಮಾಡುವುದನ್ನು ಭಸ್ಮ ಸ್ನಾನ ಅಥವ ಅಗ್ನಿಸ್ನಾನ ಎನ್ನುವರು. ೪.ಹಸುವಿನ ದೂಳನ್ನು ಮೆತ್ತಿಕೊಂದು ಸ್ನಾನ ಮಾಡುವುದನ್ನು ವಾಯವ್ಯ ಸ್ನಾನ ಎನ್ನುವರು. ೫.ಸೂರ್ಯ ಕಿರಣಗಳು ಪ್ರಖರವಾಗಿ ಇದಾಗ ಈ ಮೊದಲೇ ಸಂಗ್ರಹಿಸಿಟ್ಟುಕೊಂಡಿರ ತಕ್ಕ ಮಳೆಯ ನೀರಿನಲ್ಲಿ ಸ್ನಾನ ಮಾಡುವುದನ್ನು ದಿವ್ಯಸ್ನಾನ ಎನ್ನುವರು. ೬.