Skip to main content

ಪಂಚ ಮಹಾಪುರುಷ ಯೋಗ - -ತ್ರಿಗ್ರಹ ಯೋಗ ಇದರ ಫಲವೇನು ?

ಪಂಚ ಮಹಾಪುರುಷ ಯೋಗ - ವಿದ್ವಾನ್ ಸುಬ್ರಹ್ಮಣ್ಯ ಶರ್ಮಾ ತನಗೆ ಸುಖ ಮಾತ್ರ ಬರಬೇಕು, ದುಃಖ ಎಂದಿಗೂ ಬರಬಾರದು ಎಂಬುದಾಗಿ ಪ್ರತಿಯೊಬ್ಬರೂ ಯೋಚಿಸುತ್ತಾರೆ. ಆದರೆ ಕರ್ಮಫಲಗಳೇ ಬೇರೆ. ಈ ಜನ್ಮದಲ್ಲಿ ನವಗ್ರಹಗಳ ಮೂಲಕ ಜನ್ಮಾಂತರದ ಕರ್ಮಫಲಗಳಿಂದ ಶುಭಾಶುಭಗಳು ಉಂಟಾಗುತ್ತವೆ. ಅಂತಹ ಗ್ರಹಗಳು ಕೆಲವೊಂದು ಮಹಾಯೋಗಗಳನ್ನು ಉಂಟುಮಾಡುತ್ತವೆ. ಸಾಮಾನ್ಯರ ಪ್ರಕಾರ ಯೋಗವೆಂದರೆ ಕೇವಲ ಒಳ್ಳೆಯದು ಮಾತ್ರ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಳ್ಳೆಯದರ ಜತೆಗೆ ಕೆಟ್ಟ ಯೋಗಗಳೂ ಇರುತ್ತವೆ. ಶುಭಯೋಗದಲ್ಲಿ ಹುಟ್ಟಿದವರು ವಿದ್ಯೆ, ಕೀರ್ತಿ, ಸುಖ, ದೀರ್ಘಾಯುಷ್ಯವೇ ಮೊದಲಾದ ಉತ್ತಮ ಫಲಗಳನ್ನು ಪಡೆಯುತ್ತಾರೆ. ಆದರೆ ಅಶುಭಯೋಗದಲ್ಲಿ ಜನಿಸಿದವರು ದುಷ್ಕರ್ಮಿಗಳಾಗಿ, ದುಃಖಿತರಾಗಿ, ಅನಾರೋಗ್ಯಾದಿಗಳಿಂದ ಪೀಡಿತರಾಗಿ ಕಷ್ಟಪಡುತ್ತಾರೆ. ಇಲ್ಲಿ ಐದು ಶುಭಯೋಗಗಳ ಕುರಿತು ನೋಡೋಣ. ರುಚಕ ಭದ್ರಕ ಹಂಸಕ ಮಾಲವಾಃ ಸ ಶಶಕಾ ಇತಿ ಪಂಚ ಚ ಕೀರ್ತಿತಾಃ ಸ್ವಭವನೋಚ್ಚಗತೇಷು ಚತುಷ್ಟಯೇ ಕ್ಷಿತಿಸುತಾದಿಷು ತಾನ್ ಕ್ರಮಶೋ ವದೇತ್ ಎಂದು ಈ ಯೋಗಗಳ ಬಗ್ಗೆ ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ರುಚಕ, ಭದ್ರಕ, ಹಂಸಕ, ಮಾಲವ, ಶಶ ಎನ್ನುವ ಈ ಪಂಚ ಮಹಾಪುರುಷ ಯೋಗಗಳು ಕ್ರಮವಾಗಿ ಮಂಗಳ, ಬುಧ, ಗುರು, ಶುಕ್ರ, ಶನಿ ಗ್ರಹಗಳಿಂದ ಉಂಟಾಗುತ್ತವೆ. ೧. ರುಚಕ ಯೋಗ ಮಂಗಳ ಗ್ರಹನು ತನ್ನ ಕ್ಷೇತ್ರವಾದ ಮೇಷ ಮತ್ತು ವೃಶ್ಚಿಕ ರಾಶಿಯಲ್ಲಿ ಅಥವಾ ಉಚ್ಚ ಕ್ಷೇತ್ರವಾದ ಮಕರ ರಾಶಿಯಲ್ಲಿ ಇರಬೇಕು. ಲಗ್ನದಿಂದ ೧, ೪, ೭ ಅಥವಾ ೧೦ನೇ ರಾಶಿಯಲ್ಲಿ ಈ ಗ್ರಹನು ಇರಬೇಕು. ಹೀಗಿದ್ದರೆ ರುಚಕ ಯೋಗ ಉಂಟಾಗುತ್ತದೆ. ಈ ಯೋಗ ಉಳ್ಳವರು ವಿಶೇಷವಾಗಿ ಸಾಹಸ ಪ್ರವೃತ್ತಿ ಹೊಂದಿದವರಾಗಿರುತ್ತಾರೆ. ೨. ಭದ್ರಕ ಯೋಗ ಬುಧ ಗ್ರಹನು ತನ್ನ ಉಚ್ಚ ಮತ್ತು ಸ್ವಕ್ಷೇತ್ರವಾದ ಕನ್ಯಾ ಮತ್ತು ಮಿಥುನ ರಾಶಿಯಲ್ಲಿ ಇರಬೇಕು. ಬುಧನಿರುವ ರಾಶಿಯು ಲಗ್ನದಿಂದ ೧, ೪, ೭ ಅಥವಾ ೧೦ನೇ ರಾಶಿ ಆಗಿರುವಾಗ ಜನಿಸಿದವರು ಭದ್ರ ಎಂಬ ಯೋಗವುಳ್ಳವರಾಗಿರುತ್ತಾರೆ. ಇವರು ಎಲ್ಲ ವಿಷಯಗಳಲ್ಲಿಯೂ ಬುದ್ಧಿವಂತರಾಗಿರುತ್ತಾರೆ. ೩. ಹಂಸ ಯೋಗ ಗುರು ಗ್ರಹನು ಸ್ವಕ್ಷೇತ್ರವಾದ ಧನು ಮತ್ತು ಮೀನ ರಾಶಿಯಲ್ಲಿ ಇರಬೇಕು ಅಥವಾ ಉಚ್ಚ ಕ್ಷೇತ್ರವಾದ ಕರ್ಕ ರಾಶಿಯಲ್ಲಿ ಇರಬೇಕು. ಈ ಗ್ರಹನಿರುವ ರಾಶಿಯು ಲಗ್ನದಿಂದ ೧, ೪, ೭ ಅಥವಾ ೧೦ನೇ ರಾಶಿಯಾಗಿದ್ದರೆ ಆ ವ್ಯಕ್ತಿಗಳಿಗೆ ಹಂಸ ಎಂಬ ಯೋಗವುಂಟಾಗುತ್ತದೆ. ಈ ಯೋಗ ಉಳ್ಳವರು ರಾಜ ಸಮಾನ ವ್ಯಕ್ತಿಯಾಗುತ್ತಾರೆ. ೪. ಮಾಲವ ಯೋಗ ಶುಕ್ರ ಗ್ರಹನು ತನ್ನ ಕ್ಷೇತ್ರವಾದ ವೃಷಭ ಮತ್ತು ತುಲಾ ರಾಶಿಯಲ್ಲಿರಬೇಕು ಅಥವಾ ಉಚ್ಚ ಕ್ಷೇತ್ರವಾದ ಮೀನ ರಾಶಿಯಲ್ಲಿರಬೇಕು. ಆ ಗ್ರಹನ ರಾಶಿಯು ಜನ್ಮಕುಂಡಲಿಯಲ್ಲಿ ಲಗ್ನದಿಂದ ೧, ೪, ೭ ಅಥವಾ ೧೦ನೇ ರಾಶಿ ಆಗಿರುವಾಗ ಹುಟ್ಟಿದವರಿಗೆ ಮಾಲವ ಯೋಗ ಉಂಟಾಗುತ್ತದೆ. ಈ ಯೋಗವಿರುವ ವ್ಯಕ್ತಿಗಳು ಹಣವಂತರು, ವಾಹನಗಳನ್ನು ಹೊಂದಿದವರು, ಸುಖವಂತರು ಆಗಿರುತ್ತಾರೆ. ೫. ಶಶ ಯೋಗ ಶನಿ ಗ್ರಹನು ಸ್ವಕ್ಷೇತ್ರವಾದ ಮಕರ ಮತ್ತು ಕುಂಭ ರಾಶಿಯಲ್ಲಿ ಇರಬೇಕು ಅಥವಾ ತನ್ನ ಉಚ್ಚ ಕ್ಷೇತ್ರವಾದ ತುಲಾ ರಾಶಿಯಲ್ಲಿ ಇರಬೇಕು. ಈ ಗ್ರಹನಿರುವ ರಾಶಿಯು ಲಗ್ನದಿಂದ ೧, ೪, ೭ ಅಥವಾ ೧೦ನೇ ರಾಶಿಯಾಗಿದ್ದರೆ ಅಂತಹ ಜಾತಕದವರು ಶಶ ಎಂಬ ಮಹಾಯೋಗ ಹೊಂದಿದವರಾಗಿರುತ್ತಾರೆ. ಅಂಥವರು ಉತ್ತಮ ಸೇವಕರುಳ್ಳವರು, ಬಲಿಷ್ಠರು ಮತ್ತು ಸುಖವಂತರಾಗಿರುತ್ತಾರೆ. ವ್ಯಕ್ತಿಗಳಿಗೆ ಯಾವ ಗ್ರಹಗಳಿಂದ ಯಾವ ಯೋಗವು ಉಂಟಾಗಿದೆಯೋ ಆ ಗ್ರಹಗಳ ದಶಾ ಅಥವಾ ಭುಕ್ತಿ ಕಾಲದಲ್ಲಿ ಹೆಚ್ಚಿನ ಸುಖ ಸಂತೋಷಗಳು ಲಭಿಸುತ್ತವೆ. ತ್ರಿಗ್ರಹ ಯೋಗ ಇದರ ಫಲವೇನು ? ,- ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಜನನ ಕಾಲದಲ್ಲಿ ಮೂರು ಗ್ರಹಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವರಿಗೆ ತ್ರಿಗ್ರಹಯೋಗವಾಗುತ್ತದೆ. ರವಿ, ಬುಧ, ಗುರುಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಕಣ್ಣಿನ ತೊಂದರೆ ಇರುವವನೂ, ಮಹಾ ಧನವಂತನೂ, ಶಾಸ್ತ್ರ ತಿಳಿದವನೂ, ಶಿಲ್ಪಿಯೂ, ಲೇಖಕನೂ ಆಗುತ್ತಾನೆ. ರವಿ, ಬುಧ, ಶುಕ್ರಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಅಹಂಕಾರಿಯೂ, ಮನಸ್ಸಿಗೆ ಬಂದ ಕಡೆ ಹೋಗುವವನೂ ಮತ್ತು ಸ್ತ್ರೀ ನಿಮಿತ್ತವಾಗಿ ಸಂಕಟವನ್ನು ಅನುಭವಿಸುವವನೂ ಆಗುತ್ತಾನೆ. ರವಿ, ಗುರು, ಶುಕ್ರ ಒಂದೇ ರಾಶಿಯಲ್ಲಿರುವಾಗ ಜನಿಸಿದವನು ದೊಡ್ಡ ಸ್ಥಾನದಲ್ಲಿದ್ದರೂ ಧನಹೀನನೂ, ಕ್ರೂರ ದೃಷ್ಟಿಯುಳ್ಳ್ಳವನೂ, ಪಾಂಡಿತ್ಯವುಳ್ಳವನೂ, ಪರಕರ್ಮದಲ್ಲಿ ಆಸಕ್ತಿಯಳ್ಳವನೂ, ಸಹ ಆಗುತ್ತಾನೆ. ರವಿ, ಬುಧ, ಶನಿಗಳು ಒಂದೇ ರಾಶಿಯಲ್ಲಿರವಾಗ ಜನಿಸಿದವನು ದುರಾಚಾರಿಯೂ, ಯುದ್ಧದಲ್ಲಿ ಪರಾಜಿತನೂ, ಬಂಧುಗಳಿಂದ ತ್ಯಜಿಸಲ್ಪಡತಕ್ಕವನೂ, ಅತ್ಯಾಸೆಯುಳ್ಳವನೂ, ಆಗುತ್ತಾನೆ. ರವಿ, ಶನಿ, ಶುಕ್ರರು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಸೂಕ್ಷ್ಮ ಬುದ್ಧಿಯುಳ್ಳವನೂ, ಮಾನವರ್ಜಿತನೂ, ಕುಷ್ಠ ರೋಗಿಯೂ, ಶತ್ರುಗಳಿಂದ ಅಪಜಯ ಹೊಂದುವವನೂ, ದುರಾಚಾರಿಯೂ ಅಗುತ್ತಾನೆ. ರವಿ, ಶನಿ, ಗುರುಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಪುತ್ರ ಮಿತ್ರ ಸಂಬಂಕರಿಂದ ಸೌಖ್ಯವುಳ್ಳವನೂ, ಭಯ ವರ್ಜಿತನೂ, ರಾಜ ಕಾರ್ಯದಲ್ಲಿ ನಿಷ್ಠನೂ, ಕ್ರೂರಿಯೂ, ಬಂಧು ಜನ ದ್ವೇಷಿಯೂ ಆಗುತ್ತಾನೆ. ರವಿ, ಶನಿ, ಕುಜರು ಒಂದೇ ರಾಶಿಯಲ್ಲಿ ಸೇರಿದಾಗ ಜನಿಸಿದವನು ಮೂರ್ಖನೂ, ಗೋಧನ ವರ್ಜಿತನೂ, ರೋಗಗ್ರಸ್ತನೂ, ಸ್ವಜನರಿಲ್ಲದವನೂ, ಅಂಗವೈಕಲ್ಯವುಳ್ಳವನೂ, ಕಲಹ ಪ್ರ್ರಾಯನೂ ಕೂಡಾ ಆಗುತ್ತಾನೆ. ರವಿ, ಕುಜ, ಶುಕ್ರರು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಭಾಗ್ಯವಂತನೂ, ಸತ್ಕುಲ ಪ್ರಸೂತನೂ, ವಿಷಯಾಸಕ್ತನೂ ಆಗಿರುತ್ತಾನೆ. ರವಿ, ಕುಜ, ಗುರುಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಪ್ರಚಂಡನೂ, ಸತ್ಯಭಾಷಿಯೂ, ರಾಜನ ಮಂತ್ರಿಯೂ, ವಾಕ್ಚಾತುರ್ಯವುಳ್ಳವನೂ, ಸಹ ಆಗುತ್ತಾನೆ. ರವಿ, ಕುಜ, ಬುಧ ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಪ್ರಖ್ಯಾತನೂ, ಸಾಹಸಿಯೂ, ನಿಷ್ಠುರಭಾಷಿಯೂ, ದ್ರವ್ಯ, ಸ್ತ್ರೀ ಪುತ್ರರಿಂದ ಪೀಡಿಸಲ್ಪಡುವವನೂ ಆಗುತ್ತಾನೆ. ಚಂದ್ರ, ಕುಜ, ಶನಿಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಬಾಲ್ಯದಲ್ಲಿಯೇ ಮಾತೃ ವಿಯೋಗವುಳ್ಳವನೂ, ಕ್ಷುದ್ರ ಗುಣವುಳ್ಳವನೂ, ಎಲ್ಲರಲ್ಲಿಯೂ ವಿರೋಧ ಕಟ್ಟಿಕೊಳ್ಳುವವನೂ, ವಿಷಮವಾದ ಸ್ವಭಾವವುಳ್ಳವನೂ ಆಗುತ್ತಾನೆ. ಚಂದ್ರ, ಕುಜ, ಶುಕ್ರರು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಸದಾ ಸಂಚಾರಶೀಲನೂ, ಶೀತಭೀರುವೂ ಆಗುತ್ತಾನೆ. ಚಂದ್ರ, ಕುಜ, ಗುರುಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಸ್ತ್ರೀ ಲೋಲನೂ, ದೇಹದಲ್ಲಿ ವ್ರಣವುಳ್ಳವನೂ, ಸ್ತ್ರೀವಶವರ್ತಿಯೂ, ಮುಖ ಸೌಂದರ್ಯವುಳ್ಳವನೂ ಆಗುತ್ತಾನೆ. ಚಂದ್ರ, ಕುಜ, ಬುಧರು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಅನಾಚಾರವಂತನೂ, ಪಾಪ ಕರ್ಮಗಳಲ್ಲಿ ಆಸಕ್ತಿ ಇರುವವನೂ, ಬಂದು ಹೀನನೂ ಆಗುತ್ತಾನೆ. ಚಂದ್ರ, ಶುಕ್ರ, ಶನಿಗಳು ಒಂದೇ ರಾಶಿಯಲ್ಲಿದ್ದರೆ ಜಾತಕನು ವೇದಪಾಠಿಯೂ, ಲೇಖಕನೂ, ಪುರೋಹಿತರ ಕುಲದಲ್ಲಿ ಹುಟ್ಟಿದವನೂ ಆಗುತ್ತಾನೆ. ಚಂದ್ರ, ಬುಧ, ಶನಿಗಳು ಒಟ್ಟಿಗೆ ಒಂದೇ ರಾಶಿಯಲಿದ್ದರೆ ಜಾತಕನು ಸಾಧುವೂ, ಪಾಂಡಿತ್ಯವುಳ್ಳ ಪುತ್ರನನ್ನು ಪಡೆಯುತ್ತಾನೆ. ಪತಿವ್ರತಾ ಶಿರೋಮಣಿಯಾದ ಮಾತೃವುಳ್ಳವನೂ, ಎಲ್ಲಾ ಶಾಸವನ್ನು ತಿಳಿದವನೂ ಐಶ್ವರ್ಯವಂತನೂ ಆಗುತ್ತಾನೆ. ಚಂದ್ರ, ಬುಧ, ಶುಕ್ರರು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ವಿದ್ಯಾವಂತನೂ, ಅಸೂಯಪರನೂ, ಧನವಂತನೂ, ಲೋಭಿಯೂ, ನೀಚವಾದ ಆಚಾರವುಳ್ಳವನೂ ಆಗುತ್ತಾನೆ. ಚಂದ್ರ, ಗುರು, ಶನಿಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ರೋಗರಹಿತನೂ, ನೀತಿ ಶಾಸ್ತ್ರ ತಿಳಿದವನೂ, ಸ್ತ್ರೀ ಸೌಖ್ಯವುಳ್ಳವನೂ, ಗ್ರಾಮ ಮತ್ತು ನಗರಾಪತಿಯೂ ಆಗುತ್ತಾನೆ. ಚಂದ್ರ, ಬುಧ, ಗುರುಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಯಶೋವಂತನೂ, ಧನವಂತನೂ, ಪುತ್ರಮಿತ್ರಾದಿಗಳಿಂದ ಕೂಡಿದವನೂ, ವಾಗ್ಮಿಯೂ, ಪ್ರಖ್ಯಾತನೂ, ಕೀರ್ತಿವಂತನೂ ಸಹ ಆಗುತ್ತಾನೆ. ಚಂದ್ರ, ಬುಧ, ಶನಿಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಪ್ರಾಜ್ಞನೂ, ರಾಜ ಪೂಜಿತನೂ, ಅತ್ಯಂತ ಉದ್ದವಾದ ಮತ್ತು ಪುಷ್ಟವಾದ ಶರೀರವುಳ್ಳ್ಳವನೂ, ವಾಚಾಳಿಯೂ ಸಹ ಆಗುತ್ತಾನೆ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ