Skip to main content

Posts

Showing posts from 2009

ಚೆಲುವ ಮಲ್ಲಿಗೆ ಹೂವೆ

ಚೆಲುವ ಮಲ್ಲಿಗೆ ಹೂವೆ ಮುಂಜಾನೆ ಮನೆಯಂಗಳದಿ ನಗುಚಲ್ಲಿ ಅರಳಿರುವೆ ನನ್ನ ನಿನ್ನೆಡೆಗೆ ಸೆಳದಿರುವೆ ಒಲವ ಪರಿಮಳ ಚಲ್ಲಿರುವೆ ಒಲಿದು ಬರಲು ಮೌನದಿಂದೇಕಿರುವೆ ನಿನ್ನ ಸವಿ ಮದುವಿಗಾಗಿ ನಾ ಕಾದಿರುವೆ ನಲಿದು ನೀ ನೀಡು ಸವಿಯ ಸವಿವೆ ಮನ ಒಲಿದು ನಿನ್ನ ಕೈಹಿಡಿವೆ ಕೊನೆವರಗೆ ಬಿಡದೆ ಕಣ್ಣಲ್ಲಿ ಕಣ್ಣಾಗಿ ನಿನ್ನ ನಾ ಕಾಪಾಡುವೆ ನಿನಗಾಗಿ ನಾ ಹಂಬಲಿಸುತ್ತಿರುವೆ. - ಕೃಷ್ಣಮೂರ್ತಿ ಅಜ್ಜಹಳ್ಳಿ

ಆ ಒಂದು ಚಲುವೆಯ ನಗು(ಬಣ್ಣದ ಚಿಟ್ಟೆ)

ಒಂದು ದಿನ ಸುಮ್ಮನೆ ನಾ ನೋಡಿದೆ ನಿನ್ನನೇ ನೀ ನಕ್ಕು ಸೇರಿದೆ ಎದೆಗೂಡನೆ ನಿನ್ನ ನಗುವಿಗೆ ನನ್ನ ಮನಸು,ಹೃದಯ ಕೊಟ್ಟೆ ನಿನ್ನ ಕನಸಲ್ಲಿ ನಾ ಮಲಗಿಬಿಟ್ಟೆ ಊಟ ಬಿಟ್ಟೆ ಕೆಲಸ ಬಿಟ್ಟೆ, ಆಟ ಬಿಟ್ಟೆ ,ಅಪ್ಪ ಅಮ್ಮನ ಬಿಟ್ಟೆ ನಿನ್ನ ಪ್ರೀತಿ ಹೊಳೆಯಲ್ಲಿ ಜಾರಿ ಬಿಟ್ಟೆ ನೆನಪುಗಳಲ್ಲಿ ನಲಿದು ಬಿಟ್ಟೆ ಕನವರಿಕೆಯಲ್ಲಿ ಕುಣಿದು ಬಿಟ್ಟೆ ನನ್ನ ತನ ಮರೆತು ಬಿಟ್ಟೆ ನಿನ್ನ ದಾಸನಾಗಿಬಿಟ್ಟೆ ನೀ ಈಗ ಅದೇ ನಗುವಿಂದ ಬಳಿಬಂದು ಬಿಟ್ಟೆ ನಿನ್ನ ಪ್ರಿಯತಮನ ತಂದು ನನ್ನ ಕೈ ಕುಲುಕಿಸಿ ಬಿಟ್ಟೆ ಇವರು ನನ್ನ ಬಾವಿ ಪತಿಎಂದು ಬಿಟ್ಟೆ ವಿರಹ ಸಾಗರದಿ ನನ್ನ ನೂಕಿ ಬಿಟ್ಟೆ ಬಾವಿ ಪತಿಯೊಂದಿಗೆ ಗಾಡಿ ಹತ್ತಿ ಬಿಟ್ಟೆ ನೀ ಎಲ್ಲವ ಮರೆತು ಬಿಟ್ಟೆ ನೋವು,ನೆನಪು,ಕಹಿ,ನನಗೆ ಬಿಟ್ಟೆ ನನಗೆ ಟಾಟಾ ಎಂದು ಬಿಟ್ಟೆ ನನ್ನ ಪಾಲಿಗೆ ಬಣ್ಣದ ಚಿಟ್ಟೆ ನೀನಾಗಿ ಬಿಟ್ಟೆ ನಿನ್ನಿಂದ ನಾ ವಿರಹಿ ಯಾಗಿಬಿಟ್ಟೆ - ಕೃಷ್ಣಮೂರ್ತಿ ಅಜ್ಜಹಳ್ಳಿ

ಬರುವದೊಂದು ದಿನ

ಮುಗಿಲ ಕಡೆ ಮುಖಮಾಡಿ ಮಳೆ ಮೋಡಗಳ ಎಲ್ಲೆಡೆ ನೋಡಿ ಇಳೆಗೆ ಇಳಿಯದ ವರುಣನ ಬೇಡಿ ಮೂಲೆಯಲ್ಲಿದ್ದ ನೇಗಿಲ ಎತ್ತಿ ಮೂಲೆ ಮೂಲೆಯನ್ನು ಉತ್ತಿ ಬಿಡದೆ ಕಾಳನು ಭೂಮಿಗೆ ಬಿತ್ತಿ ಸುರಿವ ರಬಸಕ್ಕೆ ಮುರಿದ ಮಡುವ ಕಟ್ಟು ಹರಿದ ಹೊಲದಲಿ ಚಿಗುರಿದ ಪೈರ ಇಟ್ಟು ಬೆಳೆದ ಕಳೆಯ ಕೊಳೆಯ ಕಿತ್ತಿಟ್ಟು ಎರಚಿ ಗೊಬ್ಬರ ಪರಚಿ ಕುಂಟೆಯ ಎತ್ತಿ ಎಂಟೆಯ ಸುತ್ತಿ ಕುಂಟೆಯ ಕುಯ್ದು ಪೈರನು ಸುತ್ತಿ ಹೊರೆಯ ಬಡಿದು ಹುಲ್ಲನು ಹಿಡಿದು ತೆನೆಯನು ಕೊಡವಿ ಚೀಲವ ಸುರಿದು (ದವಸ)ಕಾಳನು ದವಸ ತರುವ ದಿವಸ ಬರುವದೊಂದು ದಿನ - ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಪ್ರಕಟಣೆ (ಜಾಹಿರಾತು)

ಮಾಗಿಯ ಮೈನಡುಗುವ ಚಳಿಗೆ ಅತ್ಯವಷ್ಯಕ,ಅಮೂಲ್ಯ ಔಷದಿ ಮಡದಿ ! ಇದ್ದರೆ ಪಡೆದುಕೋ ಇಲ್ಲದಿದ್ದರೆ ಹುಡುಕಿಕೋ.... -ವಿ. ಕೃಷ್ಣಮೂರ್ತಿ ಅಜ್ಜಹಳ್ಳಿ

ಕಿಸ್ಸ್(ಚುಂಬನ)

ಚಿತ್ತವ ಬ್ರಮೆಗೊಳಿಸಿ ಕತ್ತಲಲ್ಲೂ ಮೂಡಿಬರುವ ಹುಡುಗಿಯ ಪ್ರೀತಿಯೆಂಬ ವಿದ್ಯುತ್ ಗೆ ಹುಡುಗ ಕೊಡುವ ಬಿಲ್ಲು ಕಿಸ್ಸ್(ಚುಂಬನ) -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಕಾವಲು

ವಸುದೆಯ ಮೇಲೆ ಯಾರೂ ಹಾಕದಂತೆ ಕಣ್ಣು ಕಾವಲಿಟ್ಟಿದ್ದಾನೆ ವರುಣ ಹಗಲಿಗೆ ಸನ್ (SUN) ಇರುಳಿಗೆ ಮೂನ್ (MOON) -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ನಾನು- ಅವಳು

ಅವಳು ನನಗೆ ಬಳುಕುವಾ ಕೋಮಲೆ (ಕಮಲೆ) ನಾನು ಅವಳಿಗೆ ಕಬ್ಬಿಣದ ಕಡಲೆ ! -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಸ್ನೇಹ

ನಯನ ನಿನ್ನವಾದಲ್ಲಿ ಅದರೊಳಗಿನ ಕಂಬನಿ ನನ್ನದಾಗಲಿ ಹೃದಯ ನಿನ್ನದಾದಲ್ಲಿ ಅದರ ಮಿಡಿತ ನನ್ನದಾಗಿರಲಿ ನಮ್ಮ ಸನಿಹ ಎಷ್ಟು ಆಳವೆಂದರೆ ನಿನ್ನ ಉಸಿರು ನಿಲ್ಲುವಂತಾದಾಗ ಸಾವು ನನ್ನದಾಗಿರಲಿ.......... -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಮನದಾಸೆ

ಹೃದಯ ಕಲ್ಲಾಗದಿರಲಿ ಮನಸು ಮುಳ್ಳಾಗದಿರಲಿ ಪ್ರೀತಿ ಅತಿಯಾಗದಿರಲಿ ಮಾತು ಮಿತವಾಗಿರಲಿ ಸ್ನೇಹ ಚಿರವಾಗಿರಲಿ........ -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ನಿತ್ಯ ನಮನ

ಮುಂಜಾನೆ ಎದ್ದು ಮಂಜಿನ ಮಳೆಯಲ್ಲಿ ಮಿಂದು ಹೂದೀಪ ಹಚ್ಚಿ ಪರಿಮಳವ ಚೆಲ್ಲಿ ಹಾಡಿ ಇಂಚರದಲ್ಲಿ ಮರಗಿಡಗಳೆಲ್ಲಾ ಸಲ್ಲಿಸುತ್ತಿವೆ ಬಾನ ಬಾಸ್ಕರನಿಗೆ ನಿತ್ಯ ನಮನ. -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಬರುವೆಯಾ .....

ಗೆಳತಿ ಬರುವುದಾದರೆ ಬಾ ನನ್ನ ಬದುಕೆಂಬ ಕಂಪನಿಗೆ ಪಾಲುದಾರಳಾಗಿ ಸಹ ಬಾಳ್ವೆಯಿಂದ ಬಂದ ಲಾಬ ನಷ್ಟದಲ್ಲಿ ಸಮಪಾಲು ನಮ್ಮಿಬ್ಬರಿಗೆ -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ನ್ಯಾಯವೇ....

ಪ್ರಿಯೆ ! ನಿನ್ನ ಮರೆಯ ಬೇಕೆಂದು ಮಧುರೆಯ ಮತ್ತಲ್ಲಿ ನಾ ಮತ್ತನಾಗಿ ಮಲಗಿರಲು ನೀ ಬಂದು ಮನಕೆ ಮುತ್ತಿಟ್ಟು ನನ್ನ ನಿದ್ದೆಯನು ಸುಟ್ಟು ಚಿಂತೆಯ ಕೊಟ್ಟು ಹೋಗುವುದು ನ್ಯಾಯವೇ ಪುಟ್ಟು ? - ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಮರೆಯಲೇಗೆ......

ನನ್ನೀ ಎದೆಯಲ್ಲಿ ಕಡೆದ ಕಲ್ಲಾಗಿ ನಿನ್ನ ರೂಪ (ವಿರಲು) ಸೇರಿರಲು ನಿನ್ನ ಮರೆಯಲು ನಾ ತೊರೆಯಲು ಸಾದ್ಯವೇ ಗೆಳತಿ. -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಪ್ರೀತಿಸುವ ಹುಡುಗ / ಹುಡುಗಿ ಯರಿಗೆ

ಯಾಕ್ ಮಾಡ್ತೀರ ಲವ್ವು(LOVE) ಸಹಿಸಲಿಕ್ಕಾಗದ ಮೇಲೆ ಅದರಿಂದಾಗೋ ನೋವು ಲವ್ವು ಅನ್ನೋದು ಗ್ಯಾಸ್ ಸ್ಟವು (GAS STOVE) ಹುಷಾರಾಗಿದ್ದರೆ ತುಂಬಾ ಉಪಕಾರ ನಾ ಹೇಳೋದು ಸತ್ಯ ನೂರಕ್ಕೆ ನೂರು ಇದು ಅರ್ಥವಾದ್ರೆ ಇನ್ಮುಂದೆ ಇದ್ಬಿಡಿ ತುಂಬಾ ಹುಷಾರ ಮಾಡದೆ ಲವ್ವು ಯಾರು ಪಡದೆ ತೊಂದರೆ ನೂರ.(೧೦೦) -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಮನಸ್ಸು ಕೊಡುವ ಮುನ್ನ

ಮನಸ್ಸು ಕೊಡುವ ಮುನ್ನ ಪ್ರೀತಿಸುವ ಮನಸ್ಸಿನ ಆಳ ನೋಡು ಮನಸ್ಸು ಕೊಡುವ ಮುನ್ನ ಪ್ರೀತಿಸುವ ಮನಸ್ಸಿನ ಆಳ ನೋಡು ನಂಬಿಕೆ ಬರದಿದ್ರೆ ಸೈಕೋ ಸಿನಿಮಾ ನೋಡು. -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ

ಕಾರಣ

ಆತ ಆಪೀಸಿನಲ್ಲಿ ಹೆಸರು ತಗೊಂಡ ಕಾರಣ ತನ್ನ ನಿಷ್ಟೆ ಆತ ಊರಲ್ಲಿ ಹೆಸರು ಕಳಕೊಂಡ ಕಾರಣ ಹೆಂಡತಿ ಚೇಷ್ಟೆ . -ವಿ ಕೃಷ್ಣಮೂರ್ತಿ ಅಜ್ಜಹಳ್ಳಿ