Skip to main content

ಭಾರತೀಯ ಕ್ರಮದಲ್ಲಿ ಋತುಗಳು

ಭಾರತೀಯ ಕ್ರಮದಲ್ಲಿ ಋತುಗಳು * ಗುರುರಾಜ ಪೋಶೆಟ್ಟಿಹಳ್ಳಿ ಆರು ವಿಧದ ಕಾಲ ವಿಭಾಗದಲ್ಲಿ ಮೂರನೆಯ ವಿಭಾಗ ಋತು. ಇದರ ಪರಮಾಣ ವರ್ಷದ ಆರನೆಯ ಒಂದು ಭಾಗ ಎಂದರೆ ಎರಡು ತಿಂಗಳುಗಳ ಕಾಲ ಅಥವಾ ಅರವತ್ತು ದಿವಸಗಳು. ಒಂದು ವರ್ಷದಲ್ಲಿ ಒಟ್ಟು ಆರು ಋತುಗಳಿವೆ. ಚೈತ್ರ ಶುಕ್ಲ ಪ್ರಥಮ ದಿವಸದಿಂದ ವಸಂತ ಋತು ಪ್ರಾರಂಭವಾಗುತ್ತದೆ. ಇದು ವೈಶಾಖ ಮಾಸ ಅಮಾವಾಸ್ಯೆಯಂದು ಮುಗಿಯುತ್ತದೆ. ಜ್ಯೇಷ್ಠ ಶುಕ್ಲ ಪಾಡ್ಯದಿಂದ ಆಷಾಢ ಅಮಾವಾಸ್ಯೆಯತನಕ ಗ್ರೀಷ್ಮ ಋತು. ಶ್ರಾವಣ ಶುಕ್ಲ ಪ್ರಥಮದಿಂದ ಪುಷ್ಯ ಅಮಾವಾಸ್ಯೆಯತನಕ ಹೇಮಂತ ಋತು. ಮಾಘ ಶುಕ್ಲ ಪ್ರಥಮದಿಂದ ಫಾಲ್ಗುಣ ಅಮಾವಾಸ್ಯೆತನಕ ಹೇಮಂತ ಋತು. ಮಾಘ ಶುಕ್ಲ ಪ್ರಥಮದಿಂದ ಫಾಲ್ಗುಣ ಅಮಾವಾಸ್ಯೆಯತನಕ ಶಿಶಿರ ಋತು. ಈ ಆರು ಋತುಗಳಲ್ಲಿ ಸಾಮಾನ್ಯವಾಗಿ ಶಿಶಿರ, ವಸಂತ ಗ್ರೀಷ್ಮ ಋತುಗಳು ಉತ್ತರಾಯಣಕ್ಕೂ ವರ್ಷ, ಶರತ್, ಹೇಮಂತ ಋತುಗಳು ದಕ್ಷಿಣಾಯಣಕ್ಕೂ ಹೀಗೆ ಶುಕ್ಲ ಪಕ್ಷಾದಿಯಿಂದ ಅಮಾವಾಸ್ಯೆಯವರೆಗೆ ಕಾಲಗಣನೆ ಮಾಡುವ ಋತು ವಿಭಾಗಕ್ಕೆ ಚಾಂದ್ರ ಋತುಗಳೆಂದು ಹೆಸರು. ವಸಂತದಿಂದ ಶಿಶಿರದವರೆಗೆ:ಋತುಚರ್ಯೆಗೆ ಅನುಗುಣವಾಗಿಯೇ ಜೀವನ ಕ್ರಮ ರೂಪಿತವಾಗಿದ್ದು ಧರ್ಮ ಇದನ್ನು ನಿರ್ದೇಶಿಸುತ್ತದೆ. ಪ್ರತಿ ಭಾರತೀಯ ಆಚರಣೆ ಹಿಮದೆಯೂ ಜೀವನ್ಮುಖಿ ಅರ್ಥವಿದೆ. ಸೂರ್ಯನ ಪಥ ಸಂಚಲನೆಯಿಂದ ಪ್ರಕೃತಿಯ ಪರಿವರ್ತನೆ. ಪ್ರಕೃತಿಯ ಈ ಪರಿವರ್ತನೆಯ ಪ್ರವೃತ್ತಿಯನ್ನು ಋತುಗಳೆಂದು ಕರೆದರು. ಒಂದು ವರ್ಷಾವಧಿಯಲ್ಲಿ ಎರಡು ಮಾಸಗಳಿಗೊಂದರಂತೆ ಆರು ಋತುಗಳು. ಋತುಚರ್ಯೆಗಳು ಆಯಾ ಪ್ರದೇಶ, ಜೀವರಾಶಿಯ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಋತುಚರ್ಯೆ ದಿನಚರ್ಯೆ ಎನಿಸಿಕೊಂಡರೆ, ಪ್ರಕೃತಿಯಲ್ಲಿನ ಪರಿವರ್ತನೆಗೆ ಅನುಸರಿಸಿ ನಡೆಯುವುದು ಋತುಚರ್ಯೆ ಎನಿಸಿಕೊಳ್ಳುವುದು. ಋತುಚರ್ಯೆಗೆ ಅನುಗುಣವಾಗಿ ಜೀವನ ಕ್ರಮವಿದೆ. ಧರ್ಮ ಅದನ್ನು ನಿರ್ದೇಶಿಸುತ್ತದೆ. ಋತು ವೈಶಿಷ್ಟ್ಯ:ಆರು ಋತುಗಳಲ್ಲೂ ಹಗಲು ಇರುಳುಗಳ ಅವಧಿಯ ಪ್ರಮಾಣ, ಸೂರ್ಯನ ಬಿಸಿಲು, ಹವಾಮಾನ, ಆಗ ಬೀಸುವ ಗಾಳಿಗಳು ಹೀಗೆ ಪರಿಸರದಲ್ಲಿ ನಾನಾ ವ್ಯತ್ಯಾಸಗಳು ವೈಶಿಷ್ಟ್ಯಗಳು ಜರುಗುತ್ತವೆ. ನಾವು ಒಂದೇ ತೆರನಾದ ಆಹಾರ ವಿಹಾರ ಕ್ರಮಗಳನ್ನು ಅನುಸರಿಸುತ್ತ ಹೋದರೆ ಒಳಿತಾಗುವುದಿಲ್ಲ. ಆರಂಭ ಮತ್ತು ಅಂತ್ಯದಲ್ಲಿ 'ಪರ್ವ'ಗಳೆಂದು ಗುರುತಿಸಲಾಗಿದೆ. ವಸಂತ ವಿಲಾಸ:ವಸಂತ ಋತುವಿನಲ್ಲಿ ಸೂರ್ಯ ಮತ್ತು ಚಂದ್ರ ಇಬ್ಬರೂ ಪೂರ್ಣ ಪ್ರಮಾಣದಲ್ಲಿ ಭೂಮಿಗೆ ಪ್ರಕಾಶ ನೀಡುತ್ತಾರೆ. ಆಕಾಶವು ಶುಭ್ರವಾಗಿರುತ್ತದೆ. ಹೂಗಿಡ ಮರಗಳು ಅರಳಿ ಕಂಗೊಳಿಸುತ್ತವೆ. ವಸಂತ ಋತು ಸಮಯದಲ್ಲಿ ಜೀವರಾಶಿಗಳಲ್ಲಿ ವಿಷಯಾಸಕ್ತಿ ವ್ಯಾಮೋಹ ವೃದ್ಧಿಸುವುದು. ಗ್ರೀಷ್ಮಗಾನ:ಗ್ರೀಷ್ಮ ಋತುವು ಜ್ಯೇಷ್ಠ ಹಾಗೂ ಆಷಾಢ ಮಾಸಗಳನ್ನೊಳಗೊಂಡಿದೆ. ಸೂರ್ಯನು ತನ್ನ ಪ್ರಖರತೆಯಿಂದ ಭೂಮಿ ಹಾಗೂ ಮನುಷ್ಯನ ಸ್ನಿಗ್ಧ ಗುಣವನ್ನು ಹೀರುತ್ತಾನೆ. ಹಣ್ಣು ಹಂಪಲ ಸೇವನೆ, ಸುವಾಸನೆಯ ಪುಷ್ಪಗಳನ್ನು ಮೂಸುವುದು, ಧರಿಸುವುದು, ರಸಿಕತೆ ರಂಜನೆ ಈ ಕಾಲದಲ್ಲಿ ಹಿತಕರ. ವರ್ಷಾಧಾರೆ:ವರ್ಷ ಋತುವಿನಲ್ಲಿ (ಶ್ರಾವಣ ಭಾದಪ್ರದ)ಭೂಮಿಯ ತೇವ ಮೇಘದ ಮಳೆ ಸುರುವಿಕೆಯಿಂದ ದೇಹದಲ್ಲಿ ಜಠರಾಗ್ನಿಯು ಕ್ಷೀಣವಾಗುವುದು. ಆಮ್ಲಪಾಕ ಉಂಟಾಗಿ ಪಿತ್ತಚಯವು,ಮಂದಾಗ್ನಿಯೂ ಆಗುವುದರಿಂದ ತ್ರಿದೋಷಕಾರಕ ಆಹಾರ ಸೇವಿಸಬೇಕು. ಶರತ್ ಋತು:ಆಶ್ವೀಜ-ಕಾರ್ತಿಕ ಮಾಸಗಳನ್ನೊಳಗೊಂಡ ಶರತ್ ಋತುವಿನಲ್ಲಿ ಮಳೆಗಾಲದಲ್ಲಿ ಸಂಚಯವಾಗಿದ್ದ ಪಿತ್ತವು ಪ್ರಕೋಪಗೊಳ್ಳುತ್ತದೆ. ಈ ಋತುವಿನಲ್ಲಿ ಮಂಜು ಬೀಳುವ ಸ್ಥಳ, ಅತಿಭೋಜನ, ಮೊಸರು, ತೈಲ, ಮದ್ಯ, ಹಗಲು ನಿದ್ರೆ ಪೂರ್ವ ದಿಕ್ಕಿಗೆ ಬೀಸುವ ಗಾಳಿಗೆ ಎದುರಾಗಿ ನಡೆಯುವುದು ಇತ್ಯಾದಿಯನ್ನು ವರ್ಜಿಸಬೇಕು. ಹೇಮಂತದ ಹಿಗ್ಗು:ಹೇಮಂತ ಋತುವಿನಲ್ಲಿ ಹಿಮ ಹಾಗೂ ಚಳಿಯಿಂದ ಶರೀರದ ರೋಮ ರಂಧ್ರಗಳೆಲ್ಲ ಆಕುಂಚನವಾಗುವುದರಿಂದ ಶರೀರೋಷ್ಣವು ಹೆಚ್ಚಾಗಿ ಜಠರಾಗ್ನಿಯು ಪ್ರಜ್ವಲಿಸುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ಋತುವಿನಲ್ಲಿ ಈ ಅಗ್ನಿಯನ್ನು ಶಾಂತಗೊಳಿಸುವುದಕ್ಕೆ ಸಹಜಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸಬೇಕಾಗುತ್ತದೆ. ಸ್ತ್ರೀ ಸಂಪರ್ಕ ಈ ಋತುಕಾಲದಲ್ಲಿ ಅತ್ಯಂತ ಸೂಕ್ತವಾದುದು. ಶುಷ್ಕತೆಯ ಶಿಶಿರ:ಶಿಶಿರ ಋತುವಿನಲ್ಲಿ ಗಾಳಿ ಬೀಸುತ್ತಲೇ ಇರುವುದು ವಿಶೇಷ ಉಷ್ಣತೆಯಿರುವ ಮನೆಯಲ್ಲಿದ್ದುಕೊಂಡು ಖಾರ, ಕಹಿ, ಒಗರು ಇತ್ಯಾದಿ ವಾತ ವೃದ್ಧಿಕರವಾದ ಆಹಾರ, ಶೀತಕರವಾದ ಆಹಾರ ಪಾನೀಯಗಳನ್ನು ವರ್ಜಿಸಬೇಕಾಗುವುದು ವಾತ ಪ್ರಕೃತಿಯ ವ್ಯಕ್ತಿಗೆ ಗಾಢ ನಿದ್ರೆ ಇರುವುದಿಲ್ಲ. ಪ್ರಕೃತ್ತಿದತ್ತ:ಪೃಥ್ವಿ, ಆಫ, ತೇಜಸ್ಸು, ವಾಯು ಹಾಗೂ ಆಕಾಶಗಳೆಂಬ ಪಂಚಮಹಾಭೂತಗಳ ಸಂಯೋಗದಿಂದಲೇ ಮಾನವನ ಶರೀರವು ಉತ್ಪತ್ತಿಯಾಗಿದೆ. ನಿಸರ್ಗವೇ ಮಾನವ ಪ್ರಕೃತಿಯ ಹೊರ ಶರೀರವೆನಿಸಿದರೆ ಪ್ರಕೃತಿಯೇ ಅದರ ಒಳ ಶರೀರವೆನಿಸಿದೆ. ಪಂಚಮಹಾಭೂತಗಳ ಮರು ಗುಂಪುಗಳನ್ನು 'ತ್ರಿದೋಷ'ಗಳೆಂದು ಕರೆದರು. ಪೃಥ್ವಿ ಹಾಗೂ ಆಪ್ತತ್ವ್ತಗಳು ಸೇರಿ 'ಕಫ'ವಾಗಿಯೂ ವಾಯು ಆಕಾಶ ಸೇರಿ 'ವಾತ'ವೆಂತಲೂ ಮತ್ತು ತೇಜಸ್ ತತ್ತ್ವ ಪ್ರಧಾನವಾದ ದ್ರವ್ಯಕ್ಕೆ 'ಪಿತ್ತ'ವೆಂತಲೂ ಕರೆದರು. ಇವುಗಳು ಕೂಡ ದ್ರವ್ಯಗಳಾಗಿದ್ದು ಕ್ರಮವಾಗಿ ಕಫವು ಸಂಗ್ರಹಣ ಕ್ರಿಯೆಗೂ, ಪಿತ್ತವು ಸಾತ್ಮೀಕರಣ ಕ್ರಿಯೆಗೂ ಹಾಗೂ ವಾತವು ವಿಷ ವಿಸರ್ಜನ ಕ್ರಿಯೆಗೂ ಅಧಿಕಾರಗಳೆನಿಸಿ ದೈಹಿಕ ಕ್ರಿಯೆಗಳನ್ನು ಮಾಡುತ್ತವೆ. ಪ್ರಕೃತಿಯಲ್ಲಿನ ಈ ಪ್ರವೃತ್ತಿ ಪರಿವರ್ತನೆಯನ್ನೇ ಋತುಚರ್ಯೆಗಳೆಂದು ಕರೆದು ಪಂಚಪರ್ವಗಳನ್ನು ಗುರುತಿಸಿದ್ದಾರೆ. ಋತುಸಂಧಿಯ ಈ ಪರ್ವಗಳ ಆಚರಣೆ, ವಿಧಿ, ವಿಧಾನಗಳು, ನೈವೇದ್ಯಕ್ಕೆಂದು ತಯಾರಿಸುವ ರಸ ಪದಾರ್ಥಗಳು ಒಂದು ರೀತಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳೇ ಆಗಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಭಾರತೀಯ ಆಚರಣೆಗೂ ಊಟೋಪಚಾರ, ಉಡುಗೆ-ತೊಡುಗೆಗೂ ಧರ್ಮಾತೀತವಾದ ಜೀವನ್ಮುಖಿ ಅರ್ಥವಿದೆ ಎನ್ನುವುದು ಉತ್ಪ್ರೇಕ್ಷೆ ಅಲ್ಲ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ