Skip to main content

12 ಲಗ್ನಗಳು,ಲಕ್ಷಣ ಫಲ, ದೋಷಗಳು

ವೃಷಭ ಲಗ್ನದ ಲಕ್ಷಣ ಫಲ, ದೋಷಗಳು * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ವಷಭ ಲಗ್ನವು ರಾತ್ರಿ ಬಲ ರಾಶಿ, ಪ್ರಷ್ಠೋದಯ ರಾಶಿ, ಸ್ಥಿರ ರಾಶಿ, ಭೂ ತತ್ವ ರಾಶಿ, ಸ್ತ್ರೀ ಮತ್ತು ಯುಗ್ಮ ರಾಶಿ, ವೈಶ್ಯ ವರ್ಣ ರಾಶಿ, ರಜೋ ಗುಣ ರಾಶಿ. ವೃಷಭ ಮತ್ತು ವಶ್ಚಿಕ ರಾಶಿಗೆ ಶುಕ್ರಗ್ರಹ ಅಧಿಪತಿ. ವೃಷಭ ಲಗ್ನದಲ್ಲಿ ಹುಟ್ಟಿದವರು ವಿಶಾಲವಾದ ಹಣೆಯುಳ್ಳವರೂ, ಸ್ಥೂಲವಾದ ತುಟಿಯುಳ್ಳವರೂ, ಉಬ್ಬಿದ ಕೆನ್ನೆಗಳುಳ್ಳವರೂ ಆಗಿರುತ್ತಾರೆ. ಅವರಿಗೆ ಶರೀರದಲ್ಲಿ ಶೀತ, ವಾತ ಧಾತುಗಳೇ ಅಧಿಕ. ಉದಾರ ಗುಣವುಳ್ಳವರೂ, ಸಮಯ ಬಿದ್ದರೆ ಯಾರ ಲಂಗು ಲಗಾಮು ಇಲ್ಲದೇ ಖರ್ಚು ಮಾಡುವವ ಜನ ಇವರು. ಇವರಿಗೆ ಅಲ್ಪ ಪುತ್ರ ಸಂತಾನ ಇರುತ್ತದೆ. ಸ್ತ್ರೀ ಸಂತತಿ ಅಧಿಕವಾಗಿರುತ್ತದೆ. ತಂದೆ ತಾಯಿಗಳಿಂದ ದೂರವಾಗಿರುವವರೂ, ಅಧರ್ಮ ಕಾರ್ಯಗಳಲ್ಲಿ ತೊಡಗಿ ದ್ರವ್ಯಾರ್ಜನೆ ಮಾಡ ತಕ್ಕವರೂ ಆಗಿರುತ್ತಾರೆ. ಈ ಲಗ್ನದ ಹೆಣ್ಣು ಮಕ್ಕಳು ಸದಾ ಕಾಲ ಪತಿಯ ಸಮ್ಮುಖದಲ್ಲಿರಲು ಅಪೇಕ್ಷೆ ಪಡುತ್ತಾರೆ. ಸ್ವಜನ ಸಂಪರ್ಕ ಇಲ್ಲದವರೂ, ಬಂಧುಗಳಿಂದ ತಿರಸ್ಕರಿಸಲ್ಪಟ್ಟವರಾಗಿರುತ್ತಾರೆ. ಇವರ ಕೋಪ ಶೀಘ್ರವಾಗಿ ಶಮನವಾಗುವುದಿಲ್ಲ. ಇವರದ್ದು ಎದುರಾಳಿಗಳ ಮೇಲೆ ಬಿದ್ದು ಕಾದಾಡುವ ಸ್ವಭಾವ. ಸಾಧಾರಣ ಐಹಿಕ ಸುಖಾಭಿಲಾಷೆ, ಸ್ವತಂತ್ರ ಮನೋಭಾವ, ಹೆಚ್ಚಿನ ತಾಳ್ಮೆ ಯೂ ಇವರಗೆ ಸಿದ್ಧಿಸಿರುತ್ತದೆ. ಹೀಗಾಗಿ ಇನ್ನೊಬ್ಬರೊಂದಿಗೆ ಸಿಕ್ಕಿಕೊಳ್ಳುವುದೇ ಇಲ್ಲ. ಇವರು ಯಾವುದೇ ಕೆಲಸ ಕೈಗೊಂಡರೂ, ಬಹಳ ತಾಳ್ಮೆಯಿಂದ ಸಾಧನೆ ಮಾಡುತ್ತಾರೆ. ಹೀಗೆ ಕೆಲಸಗಳು ಫಲಪ್ರದವಾಗುತ್ತವೆ. ಹಣ, ಆಸ್ತಿ ಪಾಸ್ತಿ ಸಂಪಾದನೆಯ ಬಗ್ಗೆ ಬಹಳ ಮುತುವರ್ಜಿ ವಹಿಸುತ್ತಾರೆ. ಜೀವನದಲ್ಲಿ ಸುಖ ಅನುಭವಿಸಲು ಪ್ರಯತ್ನಿಸುವ ಇವರು, ಅದನ್ನು ಕೈಗೂಡಿಸಿಕೊಳ್ಳುತ್ತಾರೆ. ಆರೋಗ್ಯದ ವಿಷಯದಲ್ಲಿ ಜಾಗ್ರತೆಯಿಂದಿರುತ್ತಾರೆ. ನೇರನುಡಿಯಾದರೂ, ಇವರು ದುಡುಕುವುದಿಲ್ಲ. ವಷಭ ಲಗ್ನದಲ್ಲಿ ಹುಟ್ಟಿದವರು ಬಂಧು ಬಾಂಧವರ ಜತೆ ವಿಶ್ವಾಸವಿಟ್ಟುಕೊಳ್ಳುತ್ತಾರೆ. ಇವರು ಶ್ರೀಮಂತ ವರ್ಗಕ್ಕೆ ಸೇರಿದವರಾಗುತ್ತಾರೆ. ಇವರಿಗೆ ಎಲ್ಲ ರೀತಿಯ ಅನುಕೂಲ ಇರುತ್ತದೆ. ತಮ್ಮ ಬುದ್ಧಿಯಿಂದಲೇ ಕೆಲಸ ಮಾಡುತ್ತಾರೆ. ಯಾವಾಗಲೂ ತಪ್ಪು ದಾರಿ ಹಿಡಿಯುವುದಿಲ್ಲ. ವಕೀಲರಾದರೆ ಇವರ ವಾದ ಪ್ರಖರವಾಗಿರುತ್ತದೆ. ಈ ಲಗ್ನದಲ್ಲಿ ಹುಟ್ಟಿದವರಿಗೆ ಅನಾರೋಗ್ಯ ಇದ್ದರೂ ಇತರರಿಗೆ ತೋರಿಸಿಕೊಳ್ಳುವುದಿಲ್ಲ. ಕಲೆ, ಸಂಗೀತ, ನತ್ಯದಲ್ಲಿ ವಿಶೇಷ ಆಸಕ್ತಿಯಿಂದ ಇರುತ್ತಾರೆ. ಈ ಲಗ್ನಕ್ಕೆ ಗುರು, ಚಂದ್ರರಿಂದ ಅಶುಭ ಫಲ. ರವಿ-ಶನಿ ಶುಭ ಫಲ ಕೊಡುತ್ತಾರೆ. ಈ ಲಗ್ನಕ್ಕೆ ಶನಿ ಮಾತ್ರ ರಾಜಯೋಗಕರ. ಈ ಲಗ್ನಕ್ಕೆ ನವಮ ಮತ್ತು ದಶಮ ಸ್ಥಾನಗಳ ಅಧಿಪತಿಯು ಶನಿ. ಈ ಲಗ್ನದ ನವಮ ಸ್ಥಾನ ಮಕರ. ದಶಮ ಸ್ಥಾನ ಕುಂಭ. ಇದರ ಅಧಿಪತಿಯು ಶನಿ. ಈ ಸ್ಥಾನಗಳ ಅಧಿಪತಿಯು ಪ್ರಚಂಡ ರಾಜಯೋಗವನ್ನು ಕೊಡುತ್ತದೆ. ಶನಿಗೆ ಅಶುಭ ಗ್ರಹಗಳು ಮತ್ತು ಶತ್ರುಗಳ ದಷ್ಟಿ ಇದ್ದರೆ ರಾಜ ಯೋಗಕ್ಕೆ ಧಕ್ಕೆ ಬರುತ್ತದೆ. ವಷಭ ಲಗ್ನಕ್ಕೆ ನಲ್ಕನೆಯ ಸ್ಥಾನದ ಅಧಿಪತಿಯು ರವಿ. ರವಿಯು ಅಶುಭ ಗ್ರಹವಿದ್ದು, ಕೇಂದ್ರಾಧಿಪತಿಯಿರುವುದರಿಂದ ಶುಭ ಫಲದಾಯಕನಾಗುವನು. ಅಷ್ಟಮ ಮತ್ತು ಏಕಾದಶ ಸ್ಥಾನಗಳ ಅಧಿಪತಿಯು ಗುರು. ತತೀಯ ಸ್ಥಾನದ ಅಧಿಪತಿ ಚಂದ್ರ. ಅಷ್ಟಮ ಏಕಾದಶದ ಪಷ್ಟ ಮತ್ತು ತತೀಯ ಈ ಸ್ಥಾನಗಳು ಅಶುಭ ಸ್ಥಾನಗಳು. ಈ ಲಗ್ನಕ್ಕೆ ಎಲ್ಲ ಶುಭತ್ವವನ್ನು ಶನಿಗೆ ಒಪ್ಪಿಸಿರುವುದು ಮಾರಕ ಸ್ಥಾನಗಳಲ್ಲಿ ಅಶುಭ ಶತ್ರು ಗ್ರಹಗಳು ಇದ್ದರೆ ಇವರಿಗೆ ಅಶುಭ ಫಲವನ್ನು ಕೊಡುತ್ತದೆ. ಈ ಲಗ್ನದಲ್ಲಿ ಹುಟ್ಟಿದ ಅವರಿಗೆ 10ನೇ ಸ್ಥಾನ ಕುಂಭ. ಇದರ ಅಧಿಪತಿ ಶನಿ. ಗುರು ಮತ್ತು ಶನಿ ಮಿತ್ರರು. ಇದರಿಂದ ಇವರಿಗೆ ವ್ಯವಸಾಯದಲ್ಲಿ ಆಸಕ್ತಿ ಇರುತ್ತದೆ. ಇವರು ಆಸ್ತಿ ಪಾಸ್ತಿಯ ವಿಷಯದಲ್ಲಿ ಲಾಭ ಗಳಿಸುತ್ತಾರೆ. ಇವರು ಹಣಕಾಸಿನ ಸಂಸ್ಥೆ ಮಾಡಿದರೆ ಲಾಭ ಬರುತ್ತದೆ. ಇವರು ಶಂಗಾರ ಸಾಧನಗಳಾದ ಬೆಳ್ಳಿ, ಬಂಗಾರ ವ್ಯಾಪಾರದಲ್ಲಿ ಲಾಭ ಗಳಿಸುತ್ತಾರೆ. ಇವರು ಉನ್ನತ ವ್ಯಾಸಾಂಗ ಅಂದರೆ ಐ.ಎ.ಎಸ್. ಅಧಿಕಾರಿಯಾಗುತ್ತಾರೆ. ರಾಜಕೀಯದಲ್ಲೂ ಸ್ಥಾನಮಾನ ಗಳಿಸುತ್ತಾರೆ. ಇವರಿಗೆ ಒಳ್ಳೆಯ ಮಕ್ಕಳು ಹುಟ್ಟುತ್ತಾರೆ. ಈ ಲಗ್ನದವರಿಗೆ ಶುಕ್ರವಾರ, ಬುಧವಾರ, ಶನಿವಾರ ಒಳ್ಳೆಯ ವಾರ. ಇವರ ಅದಷ್ಟ ಸಂಖ್ಯೆ 5, 6, 8. ಅದಷ್ಟದ ಹರಳು ನೀಲ, ಪಚ್ಚೆ, ವಜ್ರ. ಉಪಯೋಗಿಸುವ ಬಣ್ಣಗಳು ಹಸಿರು, ಬಿಳುಪು ಮತ್ತು ತಿಳಿಗೆಂಪು. ಮಿಥುನ ಲಗ್ನದ ಅಧಿಪತಿ ಬುಧ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಬುಧ ಗ್ರಹ ಮಿಥುನ ಲಗ್ನದ ಅಧಿಪತಿಯಾಗಿರುತ್ತದೆ. ಈ ಲಗ್ನದವರು ತೀಕ್ಷ್ಣ ದಷ್ಟಿಯವರು ಮತ್ತು ಬಹಳ ಬುದ್ಧಿವಂತರೂ ಆಗಿರುತ್ತಾರೆ. ತಮ್ಮ ಸ್ವಂತ ಹಣ ಖರ್ಚು ಮಾಡಿಯಾದರೂ ಇತರರ ಕೆಲಸ ಮಾಡಿಕೊಡುವ ಉದಾರ ಗುಣ ಇವರಲ್ಲಿ ಕಾಣಬಹುದು. ಮಿಥುನ ಲಗ್ನದ ಕಾರಕ ಮಾರಕಗಳು. ಮಿಥುನ ರಾಶಿಯು ದ್ವೀಪದ ರಾಶಿ. ರಾತ್ರಿ ಬಲ ರಾಶಿ. ಶೀರ್ಷೋದಯ ರಾಶಿ. ಉಭಯ ರಾಶಿ. ವಾಯು ತತ್ತ್ವ ರಾಶಿ. ಪುರುಷ ರಾಶಿ. ವನ ಚರ ರಾಶಿ. ರಜೋಗುಣ ರಾಶಿ. ಶೂದ್ರ ವರ್ಣ ರಾಶಿ. ದೊಡ್ಡ ಶಬ್ಧ ರಾಶಿ. ಮಿಥುನ ಲಗ್ನದ ಅಧಿಪತಿಯು ಬುಧ. ಬುಧನು ಕನ್ಯಾ ರಾಶಿಯ ಅಧಿಪತಿಯೂ ಆಗಿದ್ದಾನೆ. ಈ ಲಗ್ನದಲ್ಲಿ ಹುಟ್ಟಿದವರು ಎತ್ತರವಾಗಿರುತ್ತಾರೆ. ಇವರ ದೇಹವು ಸುಂದರವಾಗಿರುತ್ತದೆ. ಇವರ ದಷ್ಟಿಯು ತೀಕ್ಷ್ಣವಾಗಿರುತ್ತದೆ. ಇವರು ಬಹಳ ಬುದ್ಧಿವಂತರಾಗಿರುತ್ತಾರೆ. ತಾವು ಮಾಡುವ ಕೆಲಸವನ್ನು ಅಲೋಚನೆ ಮಾಡದೆ ಮಾಡುತ್ತಾರೆ. ಪ್ರಿಯ ಭಾಷಣವುಳ್ಳವರೂ, ಕಾರ್ಯ ತತ್ಪರರೂ, ವಾತ, ಪಿತ್ತ ಕಫಗಳೆಂಬ ತ್ರಿಧಾತುಗಳು ಸಮವಾಗಿರುವ ಶರೀರವುಳ್ಳವರೂ ಆಗಿರುತ್ತಾರೆ. ಇವರು ದೊಡ್ಡವರಲ್ಲಿಯೂ ಸಜ್ಜನರಲ್ಲಿಯೂ ಪೂಜ್ಯರಾಗುತ್ತಾರೆ. ಶೌರ್ಯಗಳಿಂದ ಕೂಡಿ ಶತ್ರುಗಳನ್ನು ಜಯಿಸಲು ಸಮರ್ಥರಾಗಿರುತ್ತಾರೆ. ಇವರ ಅನೇಕ ಕೆಲಸಗಳಲ್ಲಿ ಪ್ರವತ್ತಿಯುಳ್ಳವರೂ, ಧರ್ಮದಲ್ಲಿಯೇ ನಡೆಯಲು ಅಪೇಕ್ಷೆಯುಳ್ಳವರೂ ಆಗಿರುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರು ಕವಿಗಳಾಗಿ ಬಹಳ ಗ್ರಂಥಗಳನ್ನು ಬರೆಯುತ್ತಾರೆ. ಇವರ ಬರವಣಿಗೆಯು ಬಹಳ ಒಳ್ಳೆಯದಿರುತ್ತದೆ. ಇವರು ಇತರರ ಕೆಲಸವೆಂದರೆ ಬಹಳ ಆಸಕ್ತಿಯಿಂದ ಮಾಡುತ್ತಾರೆ. ಅದಕ್ಕೆ ತಮ್ಮ ಸ್ವಂತ ಹಣ ಖರ್ಚು ಮಾಡುತ್ತಾರೆ. ಇತರರೊಂದಿಗೆ ಸದಾ ಬೆರೆತು ಕೆಲಸ ಮಾಡುತ್ತಾರೆ. ಇವರ ಅಭಿಪ್ರಾಯ ಭಿನ್ನವಾಗಿರುತ್ತದೆ. ಒಂದು ಸಾರಿ ಒಂದು ನಿರ್ಧಾರಕ್ಕೆ ಬಂದು ಅದನ್ನು ಕೂಡಲೇ ಬದಲಾಯಿಸುತ್ತಾರೆ. ಇವರು ಕೈಗೊಂಡ ಕೆಲಸವನ್ನು ಪೂರ್ತಿ ಮಾಡುವುದೇ ಕಡಿಮೆ. ಇವರು ಚಂಚಲ ಸ್ವಭಾವದವರಾಗಿರುತ್ತಾರೆ. ಇವರು ಒಂದು ವಿಷಯವನ್ನು ಬಹಳ ಗಾಢವಾಗಿ ಅಭ್ಯಾಸ ಮಾಡಿ ಅದನ್ನು ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇನ್ನೊಬ್ಬರ ವಿಷಯವನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ವಿಷಯವನ್ನು ತಾವು ಇಟ್ಟುಕೊಳ್ಳದೆ, ಇನ್ನೊಬ್ಬರಲ್ಲಿ ಹೇಳಿ, ಬಹಿರಂಗಪಡಿಸುವು ಸ್ವಭಾವ ಇವರದ್ದು. ಮಿಥುನ ಲಗ್ನಕ್ಕೆ ಮಂಗಳ, ಗುರು ಮತ್ತು ರವಿ ಇವು ಮಾರಕ ಗ್ರಹಗಳು. ಶುಕ್ರನೊಬ್ಬನೇ ಈ ಲಗ್ನಕ್ಕೆ ಕಾರಕ ಗ್ರಹ. ಷಷ್ಠ ಮತ್ತು ಏಕಾದಶದ ಸ್ಥಾನಗಳ ಅಧಿಪತಿ ಕುಜ. ಸಪ್ತಮ ಮತ್ತು ದಶಮದ ಅಧಿಪತಿ ಗುರು. ತತೀಯ, ಷಷ್ಠ ಮತ್ತು ಏಕಾದಶ ಇದು ಮಾರಕ ಸ್ಥಾನಗಳು. ಗುರುವು ಕೇಂದ್ರಾಧಿಪತ್ಯವಾದರೂ ಆತನು ಎಂದೂ ಶುಭ ಫಲವನ್ನು ಕೊಡುವುದಿಲ್ಲ. ಗುರುವು ಮಾರಕ ಗ್ರಹಗಳಲ್ಲಿ ಸೇರಿಕೊಳ್ಳುತ್ತದೆ. ಶುಕ್ರನು ಪಂಚಮ ಮತ್ತು ದ್ವಾದಶ ಸ್ಥಾನಗಳಲ್ಲಿ ಅಧಿಪತಿಯಾಗಿದೆ. ಲಗ್ನದ ಅಧಿಪತಿ ಶುಕ್ರನ ಮಿತ್ರನು ಮಿಥುನ ಲಗ್ನದಲ್ಲಿ ಶುಕ್ರನು ಯಾವುದೇ ಸ್ಥಾನದಲ್ಲಿದ್ದರೂ ಇದು ಶುಭ ಫಲವನ್ನು ಕೊಡುತ್ತದೆ. ಶುಕ್ರ, ಬುಧ ಯೋಗವು ಖಂಡಿತಾ ರಾಜಯೋಗವಾಗುತ್ತದೆ. ಶನಿಗೆ ಮಾರಕ ಲಕ್ಷಣ ಬಂದರೂ, ಶನಿ ಮಾರಕವಾಗುವುದಿಲ್ಲ. ಗುರುವಿನೊಂದಿಗೆ ಶುಭ ಗ್ರಹ ಇದ್ದರೂ ಗುರು ಶುಭ ಫಲವನ್ನು ಕೊಡುವುದೇ ಇಲ್ಲ. ಆದುದರಿಂದ, ಮಿಥುನ ಲಗ್ನದವರಿಗೆ ದಶಾಭುಕ್ತಿ ಕಾಲದಲ್ಲಿ ಗುರುಭುಕ್ತಿಯು ಅಶುಭ ಫಲಗಳನ್ನು ಜಾತಕನಿಗೆ ಕೊಡುತ್ತದೆ. ಈ ಲಗ್ನದಲ್ಲಿ ಹುಟ್ಟಿದವರು ವಿಜ್ಞಾನಿಗಳು, ಬುದ್ಧಿವಂತರು, ಪತ್ರಕರ್ತರೂ ಆಗುತ್ತಾರೆ. ಇವರಿಗೆ ಸತ್ಯಧರ್ಮದ ಮೇಲೆ ಅಪಾರ ನಂಬಿಕೆ ಇರುತ್ತದೆ ಮತ್ತು ದೈವ ದೇವರ ಮೇಲೆ ನಂಬಿಕೆಯಿಂದ ಇದ್ದು, ಧಾರ್ಮಿಕ ಕ್ಷೇತ್ರಗಳ ಅಭಿವದ್ಧಿಗೆ ಪ್ರಯತ್ನಿಸುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರಿಗೆ ಒಳ್ಳೆಯ ಹೆಂಡತಿ ಸಿಗುತ್ತಾಳೆ. ಈ ಲಗ್ನದಲ್ಲಿ ಹುಟ್ಟಿದವರು ಸುಖಿಗಳು. ಇವರ ವೈವಾವಿಕ ಜೀವನ ಸುಖಮಯವಾಗಿರುತ್ತದೆ. ಇವರ ಅದಷ್ಟ ಸಂಖ್ಯೆ: 3, 5, 6. ಇವರು ಉಪಯೋಗಿಸುವ ಬಣ್ಣ ಕೆಂಪು, ನೀಲಿಯಾಗಿರುತ್ತದೆ. ಇವರ ಅದಷ್ಟದ ಹರಳು ಪಚ್ಚೆ, ಹಸಿರು, ಕನಕಪುಷ್ಯರಾಗ. ಕರ್ಕಾಟಕ ಲಗ್ನದ ಕಾರಕ ಮಾರಕ ಗ್ರಹಗಳು * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಕರ್ಕಾಟಕ ರಾಶಿಯು ಜಲ ರಾಶಿ. ಬಹು ಪದ ರಾಶಿ. ರಾತ್ರಿ ಬಲ ರಾಶಿ. ಪ್ರಷ್ಠೋದಯ ರಾಶಿ, ಚರ ರಾಶಿ, ಜಲ ತತ್ತ್ವ ರಾಶಿ. ಸ್ತ್ರೀ ಮತ್ತು ಯುಗ್ನ ರಾಶಿ. ಸತ್ವ ಗುಣ ರಾಶಿ. ಬ್ರಾಹ್ಮಣ ವರ್ಣ ರಾಶಿ. ಧಾತು ರಾಶಿ. ಕರ್ಕಾಟಕ ರಾಶಿಯ ಅಧಿಪತಿಯು ಚಂದ್ರ. ಇದು ಮನುಷ್ಯನ ಸ್ವಭಾವವನ್ನು ಸೂಚಿಸುತ್ತದೆ. ಈ ಲಗ್ನದಲ್ಲಿ ಹುಟ್ಟಿದವರು ಹುಣ್ಣಿಮೆ ಕಾಲದಲ್ಲಿ ಬಹಳ ಲವಲವಿಕೆಯಿಂದ ಇರುತ್ತಾರೆ. ಇವರಿಗೆ ಭಾರಿ ಬೇಗ ಕೋಪ ಬರುತ್ತದೆ. ಇವರು ಬಂಧು ಬಾಂಧವರೊಂದಿಗೆ ಅನ್ಯೋನ್ಯವಾಗಿರುತ್ತಾರೆ. ಇವರಿಗೆ ಜ್ಞಾಪಕ ಶಕ್ತಿ ಬಹಳ ಇದೆ. ಯಾವುದೇ ಕೆಲಸವನ್ನು ಮಾಡಿ ಮುಗಿಸುವ ಛಲದಲ್ಲಿರುತ್ತಾರೆ. ಈ ಲಗ್ನದ ಪೂರ್ವ ಭಾಗದಲ್ಲಿ ಜನನವಾದವರಿಗೆ ಸ್ತಿಮಿತವಾದ ಬುದ್ಧಿ ಇರುವುದಿಲ್ಲ. ಸಾಧಾರಣವಾಗಿ ಕರ್ಕಾಟಕ ಲಗ್ನದಲ್ಲಿ ಹುಟ್ಟಿದವರು ಭಯ ಪಡುವ ಸ್ವಭಾವದವರೂ, ಕಲಿತ ವಿಷಯವನ್ನು ಮರೆಯದೆ ಜ್ಞಾಪಕದಲ್ಲಿಟ್ಟುಕೊಂಡಿರುವವರೂ, ಸ್ವಜನರಲ್ಲಿ ಅಹಂಕಾರವುಳ್ಳವರೂ ಮತ್ತು ಸ್ವಜನರಿಂದ ಬಿಟ್ಟವರೂ, ಅಸ್ಥಿರವಾದ ಸಂತತಿಯುಳ್ಳವರೂ, ಪರರ ಅಧಿಕಾರಕ್ಕೆ ಸಿಕ್ಕಿ ನರಳುವಂತವರೂ, ಶತ್ರುಗಳಿಂದ ಸೋಲಿಗೆ ಒಳಗಾಗುವವರೂ ಆಗಿರುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರು ತೆಳ್ಳನೆಯ ಮೈಕಟ್ಟು, ಅಗಲವಾದ ಮುಖ, ದೊಡ್ಡದಾದ ಬಾಯಿ ಇರುತ್ತದೆ. ಇವರು ಉಪಾಧ್ಯಾಯರಾಗುವುದು ಜಾಸ್ತಿ. ಹರಿಕಥೆ, ಗಾಯನಗಳನ್ನು ಹೇಳುವುದರಲ್ಲಿ ಬಹಳ ಜಾಣರಿರುತ್ತಾರೆ. ಇವರು ಜನರೊಂದಿಗೆ ಇದ್ದು, ಸಂಘಟನೆ ಮಾಡುವುದರಲ್ಲಿ ಬಹಳ ಪ್ರಮುಖರಾಗುತ್ತಾರೆ. ತಾವು ಬಹಳ ವಿಷಯಗಳನ್ನು ತಿಳಿದು, ಇನ್ನೊಬ್ಬರಿಗೆ ಅದನ್ನು ಹೇಳದೆ, ಸಮಯ ಬಂದಾಗ ಹೇಳುತ್ತಾರೆ. ಇವರು ಚಿಂತೆ ಮಾಡುವುದರಿಂದ ಅನಾರೋಗ್ಯ ಬರುತ್ತದೆ. ಸಣ್ಣಪುಟ್ಟ ಕಾಯಿಲೆಗಳು ಆಗಾಗ ಬರುತ್ತಾ ಇರುತ್ತದೆ. ಕರ್ಕಾಟಕ ಲಗ್ನಕ್ಕೆ ಶುಕ್ರ, ಶನಿ, ಬುಧ, ಗುರು ಮತ್ತು ರವಿ ಮಾರಕ ಗ್ರಹಗಳು. ಕುಜನು ಈ ಲಗ್ನಕ್ಕೆ ಯೋಗಕಾರಕ. ಕುಂಡಲಿಯಲ್ಲಿ ಗುರು, ಮಂಗಳ ಯೋಗ ಇದ್ದರೆ, ಇವರಿಗೆ ರಾಜಯೋಗವಾಗುವುದು. ರವಿಯು ಮಾರಕ ಗ್ರಹವಾಗಿದ್ದರೂ, ಆತನು ಕೇಡು ಮಾಡದೆ, ಅದು ಇನ್ನೊಂದು ಗ್ರಹಕ್ಕೆ ಕೇಡು ಮಾಡುವುದನ್ನು ವಹಿಸಿ ಕೊಡುತ್ತದೆ. ಕರ್ಕಾಟಕ ಲಗ್ನಕ್ಕೆ ಪಂಚಮಾಧಿಪತಿ ಮತ್ತು ದಶಮಾಧಿಪತಿಯು ಮಂಗಳವಾಗಿದೆ. 6ನೇ ಸ್ಥಾನ ಅಶುಭ ಮತ್ತು 9ನೇ ಸ್ಥಾನ ಶುಭವಾಗಿದೆ. ಈ ಲಗ್ನಕ್ಕೆ ಮಂಗಳನು ಪ್ರಬಲ ರಾಜಯೋಗಕಾರಕ ಗ್ರಹ. ಈ ಲಗ್ನದವರಿಗೆ ಹನ್ನೊಂದನೇ ಮನೆಯ ಅಧಿಪತಿ ಶುಕ್ರ ಮತ್ತು ಸಪ್ತಮದ ಅಧಿಪತಿಯು ಶನಿಯು, ಮಿತ್ರರಾಗಿರುವುದರಿಂದ ಈ ಲಗ್ನದವರು ಪತ್ನಿಯೊಂದಿಗೆ ಬಹಳ ಅನ್ಯೋನ್ಯತೆಯಿಂದ ಇರುತ್ತಾರೆ. ಈ ಲಗ್ನದ ಅಧಿಪತಿ ಚಂದ್ರ. ಈ ಗ್ರಹ ಮನೋಕಾರಕನಾಗಿರುವುದರಿಂದ ಇವರು ಹೆಂಡತಿಯ ಮೇಲೆ ಬಹಳ ಆಸೆಯುಳ್ಳವರಾಗಿರುತ್ತಾರೆ. ಆದರೆ, ಈ ಲಗ್ನದವರಿಗೆ ಶನಿ ಮತ್ತು ರವಿಯ ಪಾತ್ರ ಮುಖ್ಯವಾಗಿದೆ. ಈ ಗ್ರಹಗಳಿಂದ ಇವರ ದಾಂಪತ್ಯದಲ್ಲಿ ವಿರಸ ಬರುವ ಸಂದರ್ಭ ಜಾಸ್ತಿಯಾಗಿದೆ. ಈ ಲಗ್ನದವರು ತಮ್ಮ ಮಕ್ಕಳನ್ನು ಬಹಳ ಪ್ರೀತಿಯಿಂದ ಸಾಕಿ, ಅವರ ಏಳಿಗೆಗಾಗಿ ಶ್ರಮಿಸುತ್ತಾರೆ. ಈ ಲಗ್ನಕ್ಕೆ ದಶಮ ಸ್ಥಾನ ಮೇಷ ರಾಶಿಯಾಗುತ್ತದೆ. ಇದರ ಅಧಿಪತಿಯು ಕುಜನಾಗಿರುವುದರಿಂದ ದಶ ಸ್ಥಾನಕ್ಕೆ ಇದರ ದೃಷ್ಟಿ ಇದ್ದರೆ ಇವರು ವೈದ್ಯರಾಗುವ ಸಾಧ್ಯತೆ ಇದೆ. ಇವರು ರಾಜಕೀಯದಲ್ಲಿ ಬಹಳ ಪ್ರಮುಖರಾಗುತ್ತಾರೆ. ಇವರಿಗೆ ಯಂತ್ರಗಳಿಂದ ಮಾಡುವ ಸಾಮಗ್ರಿಗಳಿಗೆ ಬಹಳ ಬೇಡಿಕೆ ಇರುತ್ತದೆ. ಈ ಲಗ್ನದವರಿಗೆ ಅದೃಷ್ಟ ಹರಳು, ವಜ್ರ, ಹವಳ. ಅದೃಷ್ಟದ ಬಣ್ಣ ಹಳದಿ, ಕೆಂಪು. ಇವರಿಗೆ ಅದೃಷ್ಟದ ಸಂಖ್ಯೆ 1, 3, 6, 9. ಅದೃಷ್ಟ ವಾರ ಮಂಗಳವಾರ, ಶುಕ್ರವಾರ, ಬುಧವಾರ. ಸಿಂಹ ಲಗ್ನದವರಿಗೆ ಕಾರಕ ಮಾರಕಗಳು * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಸಿಂಹ ರಾಶಿಯು ಚತುಷ್ಪಥ ರಾಶಿ. ಅಗ್ನಿ ತತ್ತ್ವ ರಾಶಿ. ಕ್ರೂರ ಸ್ವಭಾವದ ರಾಶಿ. ಸತ್ವ ಗುಣ ರಾಶಿ. ಕ್ಷತ್ರಿಯ ರಾಶಿ ಮೂಲ ರಾಶಿ. ಸಿಂಹ ಲಗ್ನದ ಅಧಿಪತಿ ರವಿ. ಈ ಲಗ್ನದಲ್ಲಿ ಹುಟ್ಟಿದವರಿಗೆ ಸರಿಯಾದ ಗಟ್ಟಿಮುಟ್ಟಾದ ಎಲುಬಿನಿಂದ ಕೂಡಿದ ದಷ್ಟಪುಷ್ಟ ದೇಹ ಇರುತ್ತದೆ. ವಿಶಾಲವಾದ ಹಣೆ, ಮುಖ, ಭುಜ, ಎತ್ತರವಾದ ಮೈಕಟ್ಟು, ಬಲಿಷ್ಠ ಸ್ನಾಯುಗಳು, ನೋಡಲು ಬಹಳ ಆಕರ್ಷಕವಾಗಿರುತ್ತಾರೆ. ಕಠಿಣ ನಡವಳಿಕೆಯುಳ್ಳವರೂ, ಮಾಂಸ ಭೋಜನದಲ್ಲಿ ಪ್ರಿಯರೂ, ಪಿತ್ತ ರೋಗ ವಿಕಾರವುಳ್ಳವರೂ, ವಿಶಲವಾದ ಮೂಗುಳ್ಳವರೂ, ಅನೇಕ ಕೆಲಸಗಳನ್ನು ಆರಂಭಿಸುವಂತಹವರೂ, ದೊಡ್ಡ ಕುಟುಂಬವುಳ್ಳವರೂ, ಲುಬ್ಧ ಗುಣವುಳ್ಳವರೂ, ಪ್ರಸಿದ್ಧ ಪುರುಷರೂ ಆಗಿರುತ್ತಾರೆ. ಇವರಿಗೆ ದುರ್ವ್ಯಸನಗಳೂ, ಸ್ವಜನರಲ್ಲಿ ವಿರೋಧವೂ, ಪರಾಕ್ರಮವೂ, ಕಾರ್ಯತತ್ಪರತೆಯೂ, ಅನೇಕ ವಿಧವಾದ ಯುಕ್ತಿಗಳ ಮೂಲಕ ಧನ ಸಂಗ್ರಹ ಮಾಡುವುದರಲ್ಲಿ ಆಸಕ್ತಿಯೂ ಇರುತ್ತದೆ. ಈ ಲಗ್ನದವರಿಗೆ ಒಳ್ಳೆಯ ಗುಣ, ಒಳ್ಳೆಯ ಮನಸು, ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ, ಇವರಿಗೆ ಸರಕಾರಿ, ಇನ್ನಿತರ ಒಳ್ಳೆಯ ಉದ್ಯೋಗ, ಪದವಿ ದೊರೆಯುತ್ತದೆ. ಎಲ್ಲದಕ್ಕೂ ಹೊಂದಿಕೊಂಡು ಹೋಗುತ್ತಾರೆ. ಕುಟುಂಬ, ಸಂಬಂಧಿಕರಲ್ಲಿ ಬಹಳ ನಂಬಿಕೆ ಇದೆ. ಇನ್ನೊಬ್ಬರ ಅಪತ್ಕಾಲದಲ್ಲಿ ಸಹಾಯ ಮಾಡುವವರಾಗಿರುತ್ತಾರೆ. ಈ ಜಾತಕದವರು ತಮ್ಮ ಕೆಲಸಗಳಲ್ಲಿ ಯಾವಗಲೂ ಮುಖಂಡತ್ವ ವಹಿಸುತ್ತಾರೆ. ಇವರು ಎಲ್ಲಿ ಕೆಲಸ ಮಾಡಿದರೂ ಅಲ್ಲಿ ಒಳ್ಳೆಯ ಕರ್ತವ್ಯ ನಿರ್ವಹಿಸಿ ಒಳ್ಳೆಯ ಹೆಸರು ಸಂಪಾದಿಸುತ್ತಾರೆ. ಮಾತಿಗಿಂತ ಕೃತಿಯೇ ಮುಖ್ಯ. ಮಾತನಾಡುವುದು ಕಡಿಮೆ. ಇನ್ನೊಬ್ಬರ ಕಷ್ಟವನ್ನು ಅರಿತು, ಅವರಿಗೆ ಸಹಾಯ ಮಾಡುತ್ತಾರೆ. ಎಲ್ಲವನ್ನೂ ಪರಿಶೀಲಿಸಿ ಒಳ್ಳೆಯ ತೀರ್ಪು ನೀಡುತ್ತಾರೆ. ಸಾರ್ವಜನಿಕ ಕೆಲಸದಲ್ಲಿ ಬಹಳ ಆಸಕ್ತಿ ವಹಿಸುತ್ತಾರೆ. ಮಾನವೀಯತೆಯಲ್ಲಿ ಅಪಾರ ನಂಬಿಕೆಯನ್ನು ಇಟ್ಟುಕೊಂಡು ಅದರಂತೆ ನಡೆಯುತ್ತಾರೆ. ಕೆಟ್ಟ ಅಲೋಚನೆಯನ್ನು ಮಾಡುವುದೇ ಇಲ್ಲ. ಇನ್ನೊಬ್ಬರ ಕಷ್ಟವನ್ನು ತಿಳಿದು ನಡೆಯುತ್ತಾರೆ. ಎಲ್ಲರ ಮಾತಿಗೆ ಬೆಲೆ ಕೊಡುತ್ತಾರೆ. ಹಿಡಿದ ಕೆಲಸವನ್ನು ಕೈಗೂಡುವವರೆಗೆ ಕೈಬಿಡದೆ ಪ್ರಯತ್ನ ಮುಂದುವರಿಸುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರಿಗೆ ಕ್ರೀಡೆಗಳಲ್ಲಿ ಬಹಳ ಆಸಕ್ತಿ ಇರುತ್ತದೆ. ಜತೆಗೆ ಸಂಗೀತ, ನೃತ್ಯದಲ್ಲಿ ಬಹಳ ಆಸಕ್ತಿ ಇರುತ್ತದೆ. ಯಾವುದೇ ತೊಂದರೆ ಎದುರಾದರೂ ಅದನ್ನು ಪರಿಹರಿಸಲು ಶ್ರದ್ಧೆಯಿಂದ ಪ್ರಯತ್ನಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ತಮ್ಮ ಕೆಲಸವನ್ನು ಜಯಿಸಲು ಮುಂದಾದರೆ ಖಂಡಿತವಾಗಿಯೂ ಜಯವಾಗುತ್ತದೆ. ಇನ್ನೊಬ್ಬರನ್ನು ಹೀಯಾಳಿಸಿ ಮಾತನಾಡುವುದೇ ಇಲ್ಲ. ಬಹಳ ಕೋಪವಂತರಾದರೂ ತಾಳ್ಮಯಿಂದಿರುತ್ತಾರೆ. ಪರೋಪಕಾರಿ. ಇತರರಿಗೆ ಮಾಡಿದ ಸಹಾಯವನ್ನು ಮರೆಯುವಂತಹವರಲ್ಲ. ಸ್ವತಂತ್ರ ಜೀವಿಗಳು. ಇನ್ನೊಬ್ಬರ ಕೆಳಗೆ ಕೆಲಸ ಮಾಡುವವರಲ್ಲ. ಇವರ ಮೇಲೆ ಇನ್ನೊಬ್ಬರು ಅಧಿಕಾರ ಚಲಾಯಿಸಲು ಸಾಧ್ಯವೇ ಇಲ್ಲ. ಇವರಿಗೆ ಬೇರೆಯವರೆಲ್ಲ ತಲೆಬಾಗಲೇಬೇಕು. ಶನಿ, ಬುಧ, ಶುಕ್ರ ಮಾರಕ ಗ್ರಹಗಳು ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಶನಿ, ಬುಧ ಮತ್ತು ಶುಕ್ರರು ಮಾರಕ ಗ್ರಹಗಳು. ಮಂಗಳ ಮಾತ್ರ ತಾರಕ ಗ್ರಹ. ಕುಂಡಲಿಯಲ್ಲಿ ಗುರು, ಶುಕ್ರ ಯೋಗವು ಬಹಳ ಶುಭ ಫಲ ಕೊಡುತ್ತದೆ. ಬುಧ ಗ್ರಹ ಈ ಲಗ್ನದವರಿಗೆ ಮಾರಕ ಗ್ರಹ. ಇವನು ಅಶುಭ ಫಲವನ್ನು ಕೊಡಬೇಕಾದರೆ, ಅಶುಭ ಸ್ಥಾನದಲ್ಲಿರಬೇಕು. ಸಿಂಹ ಲಗ್ನಕ್ಕೆ ಭಾಗ್ಯಾಧಿಪತಿ ಮತ್ತು ನಾಲ್ಕನೇ ಅಧಿಪತಿಯಾದ ಮಂಗಳನು ಶುಭ ಫಲವನ್ನು ಕೊಡುತ್ತಾನೆ. ಸಿಂಹ ಲಗ್ನದವರು ಕಾಯಿಲೆಗೆ ಹೆದರುವುದೇ ಇಲ್ಲ. ಇವರಿಗೆ ಕೇಂದ್ರ, ತ್ರಿಕೋನ, ಉಚ್ಚ, ಮಿತ್ರ ಕ್ಷೇತ್ರಗಳಲ್ಲಿ ಗುರು ಇದ್ದರೆ ಒಳ್ಳೆಯ ಸಂತಾನವಾಗುತ್ತದೆ. ಈ ಲಗ್ನದವರಿಗೆ ದಶಮದ ಅಧಿಪತಿ ಶುಕ್ರವಾಗಿರುವುದರಿಂದ ದಶಮದ ಅಧಿಪತಿಗೆ ಯೋಗಕಾರಕ ಕುಜನ ದೃಷ್ಟಿ ಇದ್ದರೆ, ಇವರಿಗೆ ಸರಕಾರಿ ಕೆಲಸ ಸಿಗುತ್ತದೆ ಮತ್ತು ಉನ್ನತ ವೃತ್ತಿಗೆ ಹೋಗುತ್ತಾರೆ. ಈ ಲಗ್ನದವರಿಗೆ ಮಂಗಳವಾರ, ಬುಧವಾರ, ಗುರುವಾರ, ಭಾನುವಾರ ಶುಭ ದಿನಗಳು. ಈ ಲಗ್ನಕ್ಕೆ ಶುಭ ಸಂಖ್ಯೆ 1, 5, 9. ಅದಷ್ಟದ ಹರಳು ಕೆಂಪು, ಪಚ್ಚೆ. ಅದೃಷ್ಟದ ಬಣ್ಣ ಕಂದು, ಕಿತ್ತಳೆ, ಹಸಿರು. ಕನ್ಯಾ ಲಗ್ನದವರಿಗೆ ಕಾರಕ ಮಾರಕ * ಹರಿಶ್ಚಂದ್ರ ಪಿ. ಸಾಲ್ಯಾನ್ ಕನ್ಯಾ ರಾಶಿಯು ಉಭಯ ರಾಶಿ. ಭೂ ತತ್ತ್ವರಾಶಿ. ಸ್ತ್ರೀ ಮತ್ತು ಯುಗ್ಮ ರಾಶಿ. ವೈಶ್ಯ ವರ್ಣ ರಾಶಿ, ಜೀವ ರಾಶಿ. ಕನ್ಯಾ ಲಗ್ನದ ಅಧಿಪತಿ ಬುಧ. ಈ ಲಗ್ನದಲ್ಲಿ ಹುಟ್ಟಿದವರಿಗೆ ಎತ್ತರವಾದ, ದೃಢಕಾಯವಾದ ದೇಹ ಇರುತ್ತದೆ. ಇವರ ನಡೆನುಡಿ ತುಂಬಾ ಚುರುಕು. ಇವರ ವಯಸು ತಿಳಿಯುವುದೇ ಇಲ್ಲ. 60 ವರ್ಷವಾದರೂ 45 ವರ್ಷಕ್ಕಿಂತ ಚಿಕ್ಕವರಾಗಿ ಕಾಣುತ್ತಾರೆ. ಇವರು ಕಿವಿಗಿಂಪಾದ ಮಾತನಾಡತಕ್ಕವರಾಗಿಯೂ, ಉದ್ದವಾದ ಕೈಕಾಲುಗಳುಳ್ಳವರಾಗಿಯೂ, ಸುಲಕ್ಷಣ ಸಂಪನ್ನರಾಗಿಯೂ ಇರುತ್ತಾರೆ. ಇವರು ಐಶ್ವರ್ಯವಂತರಾಗಿಯೂ, ಸ್ತ್ರೀ ಸಂತತಿ ಹೆಚ್ಚಾಗಿ ಉಳ್ಳವರೂ, ಅಣ್ಣ ತಮ್ಮಂದಿರಲ್ಲಿ ಮನಸ್ತಾಪವುಳ್ಳವರೂ, ಧರ್ಮದಲ್ಲಿ ಪ್ರವೃತ್ತಿಯುಳ್ಳವರೂ, ಕಾರ್ಯವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವವರೂ ಆಗಿರುತ್ತಾರೆ. ಇವರು ತಮ್ಮ ನಿಲುವನ್ನು ಯಾವಾಗಲೂ ಬದಲಾವಣೆ ಮಾಡುತ್ತಲೇ ಇರುತ್ತಾರೆ. ಯಾವುದೇ ಕೆಲಸವನ್ನು ಧೈರ್ಯದಿಂದ ಹಾಗೂ ಬುದ್ಧಿವಂತಿಕೆಯಿಂದ ಮಾಡುತ್ತಾರೆ. ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಹಣ ಸಂಪಾದನೆ ಮಾಡುವುದಕ್ಕೆ ತಮ್ಮ ಬುದ್ಧಿಯನ್ನು ಉಪಯೋಗಿಸಿ, ಆದಷ್ಟೂ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಾರೆ. ಕನ್ಯಾ ಲಗ್ನದಲ್ಲಿ ಹುಟ್ಟಿದವರು ಯಾವ ಕೆಲಸವೇ ಆಗಲಿ ಅದನ್ನು ಸರಿಯಾದ, ಸಮರ್ಪಕ ರೀತಿಯಿಂದ ಮಾಡುತ್ತಾರೆ. ಇಂಥ ಜಾತಕದವರು ವಹಿಸಿಕೊಂಡ ಕೆಲಸವನ್ನು ಯಾವುದೇ ಎಡರು ತೊಡರು ಇಲ್ಲದೆ ಯಶಸ್ವಿಯಾಗಿ ಮುಗಿಸಲು ಶ್ರದ್ಧೆ ವಹಿಸಿ ಪ್ರಯತ್ನಿಸುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರು ಆರೋಗ್ಯವನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ. ಜೀವನವು ಸಂತೋಷ, ನೆಮ್ಮದಿಯಿಂದ ಇರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಇವರು ತಮ್ಮ ವಿಶ್ವಾಸ ಪಾತ್ರ ಮಿತ್ರರ ಮಾತಿಗೆ ಬೆಲೆ ಕೊಡುತ್ತಾರೆ. ಇವರಿಗೆ ತಕ್ಕಂತಹ ಪತ್ನಿಯೂ ಸಿಕ್ಕಿ, ಜೀವನವು ಸುಖಮಯವಾಗಿರುತ್ತದೆ. ಒಳ್ಳೆಯ ಸಂತತಿಯನ್ನೂ ಪಡೆಯುತ್ತಾರೆ. ಈ ಜಾತಕದವರು ಸಂಸಾರದ ಕಡೆಗೆ ಹೆಚ್ಚಿನ ಗಮನ ಕೊಟ್ಟು, ಬಾಳು ಒಳ್ಳೆಯದಾಗಲು ಸದಾ ಶ್ರಮಿಸುತ್ತಾರೆ. ಕನ್ಯಾ ಲಗ್ನಕ್ಕೆ ಕುಜ, ಗುರು ಮತ್ತು ಚಂದ್ರ ಅಶುಭ ಫಲದಾಯಕರು. ಶುಕ್ರ ಒಬ್ಬನೇ ಶುಭ ಫಲವನ್ನು ಕೊಡುವ ಗ್ರಹ. ಬುಧ, ಶುಕ್ರ, ಯೋಗವು ಈ ಲಗ್ನಕ್ಕೆ ಯೋಗಕಾರಕ. ಈ ಲಗ್ನದ ಚತುರ್ಥ ಮತ್ತು ಸಪ್ತಮದ ಅಧಿಪತಿ ಗುರು. ಇವು ಕೇಂದ್ರ ಸ್ಥಾನಗಳು. ಯಾವುದೇ ಲಗ್ನಕ್ಕೆ ಶುಭ ಗ್ರಹವು ಕೇಂದ್ರ ಸ್ಥಾನಗಳ ಅಧಿಪತಿಯಾಗಿರುವುದರಿಂದ ಇದು ಶುಭವಲ್ಲ. ಈ ಲಗ್ನದ ಏಕಾದಶದ ಅಧಿಪತಿಯಾದ ಚಂದ್ರನು ಕ್ಷೀಣನಾಗಿದ್ದರೆ, ಅಶುಭ ಫಲವನ್ನು ಕೊಡುತ್ತಾನೆ. ಅಷ್ಟಮ ಹಾಗೂ ತೃತೀಯ ಸ್ಥಾನಗಳ ಅಧಿಪತಿಯು ಮಂಗಳ. ಈತ ಮಾರಕ ಸ್ಥಾನಗಳ ಅಧಿಪತಿ. ಹೆಸರಿಗೆ ಮಂಗಳನಾದರೂ ಈ ಲಗ್ನಕ್ಕೆ ಶುಭ ಫಲವನ್ನು ಕೊಡುವುದಿಲ್ಲ. ದ್ವಿತೀಯ ಸ್ಥಾನದ ಅಧಿಪತಿ ಶುಕ್ರ. ಶುಕ್ರ ಕನ್ಯಾ ಲಗ್ನಕ್ಕೆ ಶುಭ ಫಲವನ್ನು ಕೊಡುತ್ತಾನೆ. ಲಗ್ನಾಧಿಪತಿಯು ದಶಮದ ಅಧಿಪತಿಯಾಗಿದ್ದು, ನವಮದ ಅಧಿಪತಿ ಮತ್ತು ದಶಮದ ಅಧಿಪತಿ ಯೋಗವು ಈ ಲಗ್ನಕ್ಕೆ ಯೋಗಕಾರಕವಾಗಿದೆ. ಕನ್ಯಾ ಲಗ್ನದಲ್ಲಿ ಹುಟ್ಟಿದವರಿಗೆ ವ್ಯವಸಾಯ ಕೆಲಸಗಳು ಕೈಗೂಡುತ್ತವೆ. ಇವರು ಕಂಪ್ಯೂಟರ್ ಎಂಜಿನಿಯರ್ ಅಥವಾ ವೈದ್ಯರು ಆಗಬಹುದು. ಬರವಣಿಗೆಯಲ್ಲಿ ಆಸಕ್ತಿ ಇರುತ್ತದೆ. ಒಳ್ಳೆಯ ಕಥೆ, ಗ್ರಂಥಗಳನ್ನು ಬರೆಯುತ್ತಾರೆ. ಇವರಿಗೆ ಪ್ರಕಟಣಾಲಯಗಳು ಬಹಳ ಲಾಭ ತರುತ್ತದೆ. ಕನ್ಯಾ ಲಗ್ನದವರಿಗೆ ಅದೃಷ್ಟದ ಹರಳು ಕನಕ ಪುಷ್ಯರಾಗ. ಶುಭ ತರುವ ಬಣ್ಣಗಳು ಹಸಿರು, ಬಿಳಿ, ಹಳದಿ. ಅದೃಷ್ಟದ ಸಂಖ್ಯೆ 2, 3, 5, 6, 7. ಶುಭ ವಾರ : ಬುಧವಾರ, ಗುರುವಾರ, ಶುಕ್ರವಾರ. ತುಲಾ ಲಗ್ನದ ಅಧಿಪತಿ ಶುಕ್ರ * ಹರಿಶ್ಚಂದ್ರ ಪಿ. ಸಾಲ್ಯಾನ್ ತುಲಾ ದ್ವಿಪಾದ ರಾಶಿ. ದಿವಾ ಬಲ ರಾಶಿ. ಶೀರ್ಷೋದಯರಾಶಿ. ಚರ ರಾಶಿ ವಾಯು ತತ್ತ್ವ ರಾಶಿ. ಪುರುಷ ಮತ್ತು ಓಜ ರಾಶಿ. ರಜೋಗುಣ ರಾಶಿ. ಶೂದ್ರ ವರ್ಣ ರಾಶಿ. ಧಾತು ರಾಶಿ. ದೊಡ್ಡ ಶಬ್ದ ರಾಶಿ. ತುಲಾ ರಾಶಿಯ ಅಧಿಪತಿ ಶುಕ್ರ. ತುಲಾ ಲಗ್ನದಲ್ಲಿ ಜನಿಸಿದವರು ಎಲ್ಲ ಅಂಗಗಳು ಸಮವಾಗಿರದೆ ಒಂದು ಅಂಗ ಹೆಚ್ಚಾಗಿಯೂ ಇನ್ನೊಂದು ಹ್ರಸ್ವವಾಗಿಯೂ ಇರುವಂತವವರಾಗಿಯೂ, ಶೀತ ಪ್ರಕತಿಯುಳ್ಳವರಾಗಿಯೂ, ಸ್ಥಿರ ಬುದ್ಧಿ ಇಲ್ಲದವರಾಗಿಯೂ, ಗಿಡ್ಡವಾದ ಕುತ್ತಿಗೆಯುಳ್ಳವರಾಗಿಯೂ ಉಪಕಾರ ಸ್ಮರಣೆ ಇರುವಂಥವರಾಗಿಯೂ, ಬಹು ಖರ್ಚು ಮಾಡಿ ಪ್ರಖ್ಯಾತಿ ಹೊಂದುವವರಾಗಿಯೂ ಇರುತ್ತಾರೆ. ಅಲ್ಲದೆ ಇವರು ಗುರು ಹಿರಿಯರನ್ನು ಸದಾ ನೆನೆಸುತ್ತಾರೆ. ಇವರಿಗೆ ಸಂಚಾರದಲ್ಲಿ ಅಭಿರುಚಿಯೂ, ಧರ್ಮದಲ್ಲಿ ಆಸಕ್ತಿಯೂ ಇರುತ್ತದೆ. ಇವರು ಗಣ್ಯರಲ್ಲಿ ವಿರೋಧ ಕಟ್ಟಿಕೊಳ್ಳುತ್ತಾರೆ. ಇವರು ಉಪವಾಸ ಮಾಡುವುದರಲ್ಲಿ ಆಸಕ್ತಿ ಹೊಂದುತ್ತಾರೆ. ತುಲಾ ಲಗ್ನದಲ್ಲಿ ಹುಟ್ಟಿದವರ ಆಯಸ್ಸು ಸುದೀರ್ಘವಾಗಿರುತ್ತದೆ. ದೇಹ ಸುಂದರವಾಗಿರುತ್ತದೆ. ತಮ್ಮ ಕೆಲಸದಲ್ಲಿ ನಿಷ್ಠೆ ಇರುತ್ತದೆ. ಮೂಗು ಉದ್ದವಾಗಿರುತ್ತದೆ. ಲಕ್ಷಣವಾದ ಮುಖ. ಈ ಲಗ್ನದಲ್ಲಿ ಹುಟ್ಟಿದವರ ತಲೆಕೂದಲು ಮಧ್ಯ ವಯಸ್ಸಿನಲ್ಲಿ ಉದುರಿ ಬೊಕ್ಕ ತಲೆಯಾಗುತ್ತದೆ. ಇವರು ಅಲೋಚನೆ ಮಾಡಿ ಯಾವುದೇ ಕೆಲಸಗಳನ್ನು ಮಾಡುತ್ತಾರೆ. ಪರೋಪಕಾರಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧ. ಈ ಲಗ್ನದವರು ಬಹಳ ಅಂದ ಚಂದದ ಉಡುಪು ಧರಿಸುತ್ತಾರೆ. ಯಾವಾಗಲೂ ಸುಗಂಧ ದ್ರವ್ಯಗಳನ್ನು ಉಪಯೋಗಿಸುತ್ತಾರೆ. ಆಭರಣಗಳನ್ನೂ ಆಸಕ್ತಿಯಿಂದ ಧರಿಸುತ್ತಾರೆ. ಬಹಳ ಸಮಾಧಾನದಿಂದಿದ್ದು, ಇನ್ನೊಬ್ಬರಿಗೆ ಸಹಾಯ ಮಾಡುವಂಥ ಮನಸ್ಸುಳ್ಳವರು. ಸಂಗೀತ ಪ್ರಿಯರೂ, ಕವಿಗಳೂ ಆಗುವ ಸಾಧ್ಯತೆ ಇರುತ್ತದೆ. ಪತ್ರಕರ್ತರೂ ಆಗಬಹುದು. ಸದಾ ಇನ್ನೊಬ್ಬರ ಸುಖವನ್ನು ಬಯಸುತ್ತಾರೆ. ಪ್ರತಿಯೊಂದು ಕೆಲಸಗಳಲ್ಲಿ ಬಹಳ ಬುದ್ಧಿವಂತಿಕೆಯನ್ನು ಉಪಯೋಗಿಸಿ ಕೆಲಸ ಮಾಡುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರು ಜ್ಯೋತಿಷ್ಯವನ್ನು ಕಲಿಯುವ ಮನಸು ಉಳ್ಳವರಾಗಿರುತ್ತಾರೆ. ಇತರರ ಮನ ನೋಯಿಸುವ ಯಾವುದೇ ಶಬ್ದಗಳನ್ನು ಉಪಯೋಗಿಸುವುದಿಲ್ಲ. ಕುಟುಂಬದ ಸದಸ್ಯರಲ್ಲಿ ಬಹಳ ಪ್ರೀತಿ ಇರುತ್ತದೆ. ವೈವಾಹಿಕ ಜೀವನದಲ್ಲಿ ಅನ್ಯೋನ್ಯದಿಂದ ಸರ್ವದಾ ಸುಖಿಗಳಾಗುತ್ತಾರೆ. ತುಲ ಲಗ್ನದ ಅಧಿಪತಿ ಶುಕ್ರ. ಗುರು ಶುಕ್ರನ ಶತ್ರು. ಮೂರನೇ ಮತ್ತು ಆರನೇ ಮನೆಯ ಅಧಿಪತಿ ಗುರು. ಮಾರಕ ಸ್ಥಾನಗಳ ಅಧಿಪತಿ ಗುರು. ಎರಡನೇ ಮತ್ತು ಸಪ್ತಮದ ಅಧಿಪತಿ ಕುಜ. ಅಶುಭ ಗ್ರಹ ಕೇಂದ್ರದ ಅಧಿಪತಿಯಾದರೆ, ಅದು ಶುಭ ಫಲವನ್ನು ಕೊಡುತ್ತದೆ. ಧನ ಸ್ಥಾನಕ್ಕೆ ಕುಜನು ಶುಭಗ್ರಹ. ನಾಲ್ಕನೇ ಮತ್ತು ಪಂಚಮ ಸ್ಥಾನಗಳ ಅಧಿಪತಿಯು ಶನಿ. ಇದು ಲಗ್ನಕ್ಕೆ ಮಾರಕನಲ್ಲ. ನವಮ ಹಾಗೂ ದಶಮ ಸ್ಥಾನಗಳ ಅಧಿಪತಿ ಬುಧ. ಬುಧ, ಶುಕ್ರ ಯೋಗವು ಈ ಲಗ್ನಕ್ಕೆ ಒಳ್ಳೆಯ ಫಲವನ್ನು ಕೊಡುತ್ತದೆ. ಈ ಲಗ್ನಕ್ಕೆ ಮಾರಕ ಗ್ರಹ ಗುರು. ಲಗ್ನಾಧಿಪತಿ ಶುಕ್ರನಾಗಿರುವುದರಿಂದ ಈ ಲಗ್ನದವರಿಗೆ ಚಂದದ, ಗುಣವಂತೆಯಾದ ಪತ್ನಿ ಸಿಗುತ್ತಾಳೆ. ಸರಕಾರದಲ್ಲಿ ಒಳ್ಳೆಯ ಉದ್ಯೋಗ ಸಿಗುತ್ತದೆ. ಐಎಎಸ್ ಮಾಡುವ ಸಾಧ್ಯತೆಯೂ ಉಂಟು. ಇವರು ಕೃಷಿಕರಾಗಿ, ಒಳ್ಳೆಯ ವ್ಯವಸಾಯಗಾರರಾಗಿ ಭಾರಿ ಬೆಳೆ ಬೆಳೆಯುವಂಥವರು. ವೈದ್ಯರು, ಎಂಜಿನಿಯರ್, ಮದ್ಯದ ವ್ಯಾಪಾರಿಗಳೂ ಆಗುವ ಸಾಧ್ಯತೆ. ಇವುಗಳ ಮೂಲಕ ಒಳ್ಳೆಯ ಲಾಭವನ್ನು ಗಳಿಸುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರಿಗೆ ಬ್ರಹ್ಮನೀಲ, ಹವಳ ಅತ್ಯುಪಯುಕ್ತ ಹಾಗೂ ಅತ್ಯಂತ ಪರಿಣಾಮಕಾರಿಯಾದ ಹರಳುಗಳು. ಆದ್ದರಿಂದ ಈ ಪೈಕಿ ಸರಿ ಹೊಂದುವಂಥ ಹರಳನ್ನು ಧರಿಸಬಹುದು. ಭಾನುವಾರ, ಸೋಮವಾರ, ಮಂಗಳವಾರ ಒಳ್ಳೆಯ ವಾರಗಳಾದ್ದರಿಂದ ಈ ದಿನಗಳಂದು ಮಾಡಿದ ಕಾರ್ಯ ಯಶಸ್ವಿಯಾಗುತ್ತದೆ. ಕೆಂಪು, ಕಿತ್ತಳೆ, ತಿಳಿ ಹಳದಿ ಒಳ್ಳೆಯ ಬಣ್ಣವಾಗಿದೆ. 1, 2, 7 ಇವು ಶುಭ ಸಂಖ್ಯೆಗಳು. ವೃಶ್ಚಿಕ ಲಗ್ನದವರಿಗೆ ಜ್ಞಾಪಕ ಶಕ್ತಿ ಅಧಿಕ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ವೃಶ್ಚಿಕ ರಾಶಿಯು ಬಹುಪದ ರಾಶಿ. ದಿವಾಬಲ ರಾಶಿ. ಶೀರ್ಷೋದಯ ರಾಶಿ. ಸ್ಥಿರ ರಾಶಿ, ಜಲತತ್ತ್ವ ರಾಶಿ. ಸ್ತ್ರೀ ಮತ್ತು ಯುಗ್ಮ ರಾಶಿ. ಸೌಮ್ಯ ಸ್ವಭಾವದ ರಾಶಿ. ತಮೋಗುಣ ರಾಶಿ. ಬ್ರಾಹ್ಮಣ ವರ್ಣ ರಾಶಿ. ಮೂಲ ರಾಶಿ. ಇದರ ಅಪತಿಯು ಬುಧ. ವೃಶ್ಚಿಕ ಲಗ್ನದಲ್ಲಿ ಹುಟ್ಟಿದವರು ಒಳ್ಳೆಯ ಆರೋಗ್ಯ ಹೊಂದಿ ದಢಕಾಯದವರಾಗಿರುತ್ತಾರೆ. ಉದ್ದನೆಯ ಕೈ, ಸಾಮಾನ್ಯ ಎತ್ತರ ಹಾಗೂ ಗುಂಗುರು ಕೂದಲು ಹೊಂದಿರುತ್ತಾರೆ. ಆಕರ್ಷಕವಾದ ಮುಖ ಲಕ್ಷಣ ಹೊಂದಿರುತ್ತಾರೆ. ಇವರಿಗೆ ಒಳ್ಳೆಯ ಜ್ಞಾಪಕ ಶಕ್ತಿ ಇರುತ್ತದೆ. ಇವರಿಗೆ ಬಹಳ ಬೇಗ ಕೋಪ ಬರುತ್ತದೆ. ಬಹಳ ಅಲೋಚನೆ ಮಾಡಿ ಕೆಲಸ ಮಾಡುತ್ತಾರೆ. ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಹೇಳುತ್ತಾರೆ. ಬುದ್ಧವಂತಿಕೆಯಿಂದ ಕೆಲಸಗಳನ್ನು ಮಾಡುತ್ತಾರೆ. ಇತರರನ್ನು ಮಾತಿನಲ್ಲಿ ಸೋಲಿಸುತ್ತಾರೆ. ಇವರು ಸ್ವಂತ ಜೀವನ ಮಾಡುತ್ತಾರೆ. ಪರೋಪಕಾರಿಯಾಗಿ ಇನ್ನೊಬ್ಬರ ಕೆಲಸದಲ್ಲಿ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ. ಕೈ ಹಾಕಿದ ಕೆಲಸಗಳು ಯಶಸ್ವಿಯಾಗುತ್ತದೆ. ಸಂಶೋಧನಾ ಕೆಲಸದಲ್ಲಿ ನಿರತರಾಗುತ್ತಾರೆ. ವೃಶ್ಚಿಕ ಲಗ್ನದಲ್ಲಿ ಹುಟ್ಟಿದವರು ಸಾಮಾನ್ಯವಾಗಿ ಒಳ್ಳೆಯ ಜ್ಞಾನವಂತರಾಗಿ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್, ಸಂಘಟನೆಗಳ ಮುಖಂಡರು ಆಗುತ್ತಾರೆ. ಯಾವುದೇ ದೊಡ್ಡ ಯೋಜನೆಯ ಮುಖಂಡರಾಗಿ ಅದನ್ನು ಮಾಡಿ ಮುಗಿಸುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರು ಒಳ್ಳೆಯ ಸತಿ-ಪತಿಯನ್ನು ಹೊಂದಿ ಸುಖಮಯ ದಾಂಪತ್ಯ ಜೀವನವನ್ನು ಅನುಭವಿಸುತ್ತಾರೆ. ಕುಟುಂಬದ ಮೇಲೆ ಬಹಳ ಪ್ರೀತಿಯುಳ್ಳವರಾಗಿರುತ್ತಾರೆ. ಈ ಲಗ್ನದ ಅಪತಿ ಶುಕ್ರನಾಗಿರುವುದರಿಂದ ಇವರಿಗೆ ಸುಂದರವಾದ ಹೆಂಡತಿ ಸಿಗುತ್ತಾಳೆ. ಇವರು ತಮ್ಮ ಪರಿಸರವನ್ನು ಸುಂದರವಾಗಿ ಇಟ್ಟುಕೊಳ್ಳುತ್ತಾರೆ. ಇವರು ಬಂಧು ವರ್ಗದವರೊಂದಿಗೆ ಅನ್ಯೋನ್ಯ ಪ್ರೀತಿಯಿಂದ ಇದ್ದು, ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿರುತ್ತಾರೆ. ವೃಶ್ಚಿಕ ಲಗ್ನದ ಅಪತಿ ಕುಜ. ತೃಥೀಯ ಮತ್ತು ಚತುರ್ಥ ಸ್ಥಾನಗಳ ಅಪತಿ ಶನಿ. ಶನಿ ಲಗ್ನಾಪತಿ ಕುಜನಿಗೆ ಕಡುವೈರಿ. ಶನಿಯಲ್ಲಿ ತೃತೀಯ ಸ್ಥಾನ ಅಪತ್ಯ ಬಂದುದರಿಂದ ಅಶುಭತ್ವವು ಮತ್ತು ಕೇಂದ್ರ ಸ್ಥಾನದ ಅಪತಿಯಾಗಿರುವುದರಿಂದ ಶುಭತ್ವವು ಕೂಡಿಕೊಂಡಿರುವುದು. ಲಗ್ನದ ಅಪತಿಯು ಶತ್ರು ಇರುವ ಕಾರಣ ಅವರಲ್ಲಿ ಶುಭತ್ವವು ಲಯವಾಗುವುದು. ಈ ಲಗ್ನಕ್ಕೆ ಶನಿಯು ಮಾರಕ. ಸಪ್ತಮ ಮತ್ತು ದ್ವಾದಶ ಸ್ಥಾನಗಳ ಅಪತಿಯಾದ ಶುಕ್ರನು ಈ ಲಗ್ನಕ್ಕೆ ಕಾರಕನಾಗಲಾರನು. ಕುಜನ ವೈರಿಯಾದ ಬುಧನು ಅಷ್ಟಮ ಮತ್ತು ಏಕಾದಶ ಎರಡು ಮಾರಕ ಸ್ಥಾನಗಳ ಅಪತಿಯಾಗಿರುವುದರಿಂದ ಆತನು ಈ ಲಗ್ನಕ್ಕೆ ಬಹಳ ಮಾರಕನಾಗುತ್ತಾನೆ. ದ್ವಿತೀಯ ಮತ್ತು ಪಂಚಮ ಸ್ಥಾನಗಳ ಸ್ವಾಮಿಯಾದ ಗುರುವು ಈ ಲಗ್ನದ ಕಾರಕ ಗ್ರಹ. ಈ ಲಗ್ನದ ನವಮದ ಅಪತಿಯೇ ದಶಮದ ಅಪತಿ. ರವಿಯು ಲಗ್ನಾಪತಿ ಶುಕ್ರನ ಮಿತ್ರ. ರವಿ ಚಂದ್ರ ಯೋಗವು ಈ ಲಗ್ನಕ್ಕೆ ಬಹಳ ಒಳ್ಳೆಯದು. ಈ ಲಗ್ನಕ್ಕೆ ಶುಕ್ರ, ಬುಧ ಮತ್ತು ಶನಿ ಮಾರಕ ಗ್ರಹಗಳು. ರವಿ, ಚಂದ್ರ, ಗುರು ಇವರು ತಾರಕ ಗ್ರಹಗಳು. ಈ ಲಗ್ನಕ್ಕೆ ದ್ವಿತೀಯ ಮತ್ತು ಪಂಚಮಾಪತಿ ಗುರು ಇರುವುದರಿಂದ ಇವರಿಗೆ ಒಳ್ಳೆಯ ಅಪತಿಯಾಗುತ್ತದೆ. ಇವರ ಮಕ್ಕಳು ಒಳ್ಳೆಯ ವಿದ್ಯಾವಂತರೂ, ಬುದ್ಧಿವಂತರೂ ಆಗುತ್ತಾರೆ. ಇವರಿಗೆ ಕನಕ ಪುಷ್ಯರಾಗ, ಪಚ್ಚೆ, ವಜ್ರ, ಶುಭ ಹರಳು. ಭಾನುವಾರ, ಸೋಮವಾರ, ಗುರುವಾರ ಒಳ್ಳೆಯ ವಾರ. ಈ ಲಗ್ನದಲ್ಲಿ ಹುಟ್ಟಿದವರಿಗೆ 1, 4, 7, 9 ಶುಭ ಸಂಖ್ಯೆ. ಧನು ಲಗ್ನದವರು ಧೈರ್ಯಶಾಲಿ * ಹರಿಶ್ಚಂದ್ರ ಪಿ. ಸಾಲ್ಯಾನ್ ಧನು ರಾಶಿಯು ಚತುಷ್ಪದ ರಾಶಿ. ದ್ವಿಪಾದ ರಾಶಿ. ರಾತ್ರಿ ಬಲ ರಾಶಿ. ಪ್ರಷ್ಠೋದಯ ರಾಶಿ. ಉಭಯ ರಾಶಿ. ಅಗ್ನಿ ತತ್ತ್ವ ರಾಶಿ. ಪುರು ಮತ್ತು ಓಜ ರಾಶಿ. ಸತ್ವ ಗುಣ ರಾಶಿ. ಕ್ಷತ್ರಿಯ ಮೌನ ರಾಶಿ. ಜೀವ ರಾಶಿ. ಈ ರಾಶಿಯ ಅಧಿಪತಿ ಗುರು. ಧನು ಲಗ್ನದಲ್ಲಿ ಜನಿಸಿದವರು ಶೀತೋಷ್ಣ ಪ್ರಕತಿಯುಳ್ಳವರಾಗಿಯೂ, ತೊಡೆಗಳಲ್ಲಿಯೂ, ಭುಜಗಳಲ್ಲಿಯೂ ಮಾಂಸ ಪುಷ್ಟಿಯುಳ್ಳವರಾಗಿಯೂ, ಮೊಟಕಾದ ನಖಗಳುಳ್ಳವರಾಗಿಯೂ, ಕಾರ್ಯಗಳಲ್ಲಿ ಬಹು ಪ್ರಯತ್ನಶಾಲಿಗಳಾಗಿಯೂ, ಯುದ್ಧದಲ್ಲಿ ಶೂರರಾಗಿಯೂ, ಕಳ್ಳರಿಂದಾಗಲೀ, ಅಗ್ನಿ ಮೂಲಕದಿಂದಾಗಲೀ, ರಾಜದಂಡ ಮೂಲದಿಂದಾಗಲೀ, ದ್ರವ್ಯ ನಾಶವುಳ್ಳವರಾಗಿಯೂ, ಚತುರ ಬುದ್ಧಿಯುಳ್ಳವರಾಗಿಯೂ, ದಾಯಾದಿಗಳನ್ನು ಹಿಂಸಿಸುವುದರಲ್ಲಿ ಸಮರ್ಥರಾಗಿಯೂ ಇರುತ್ತಾರೆ. ಇವರು ಪರದೇಶದಲ್ಲಿ ತಮಗಿಷ್ಟವಾಗಿ ಕೆಲಸ ಮಾಡುವವರೂ, ಧರ್ಮದಲ್ಲಿ ಮಧ್ಯಮ ತರವಾದ ಬುದ್ಧಿ ಇರುವಂಥವರಾಗಿಯೂ ಇರುತ್ತಾರೆ. ಕಾಂತಿಯುಕ್ತವಾದ ಕಣ್ಣುಗಳು, ಉದ್ದವಾದ ಮುಖ ಹುಬ್ಬಿನ ಕೂದಲುಗಳೂ ದಟ್ಟವಾಗಿಯೂ ಇರುತ್ತದೆ. ಒಳ್ಳೆಯ ಹಲ್ಲುಗಳಿರುತ್ತದೆ. ಇವರು ಧೈರ್ಯಶಾಲಿಯಾಗುತ್ತಾರೆ. ಇವರು ಯಾವಾಗಲೂ ತಮ್ಮ ಕೆಲಸವು ಜಯವಾಗುವ ನಿರೀಕ್ಷೆಯನ್ನು ಮಾಡುತ್ತಾರೆ. ಕೆಲಸಕ್ಕೆ ತೊಡರು ಬಂದರೆ ಅದನ್ನು ಲಕ್ಷಿಸದೆ ತಮ್ಮ ಕೆಲಸದಲ್ಲಿ ಜಯ ಸಾಧಿಸುತ್ತಾರೆ. ಕೆಲಸದ ಬಗ್ಗೆ ಸಾಕಷ್ಟು ತಿಳಿದುಕೊಂಡು ಮುನ್ನುಗ್ಗುತ್ತಾರೆ. ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಿ ಮುಗಿಸುತ್ತಾರೆ. ಸತ್ಯ, ಧರ್ಮ ನ್ಯಾಯದಲ್ಲಿ ಬಹಳ ವಿಶ್ವಾಸ ಇಟ್ಟುಕೊಂಡಿರುತ್ತಾರೆ. ಇವರಿಗೆ ಒಳ್ಳೆಯ ಸಂತತಿ ಪ್ರಾಪ್ತಿಗಾಗಿ ಇವರು ಒಂದೇ ಲಗ್ನ ರಾಶಿಯವರನ್ನು ಮದುವೆಯಾದರೆ ಒಳ್ಳೆಯದು. ಇವರ ಲಗ್ನ ಅಗ್ನಿ ರಾಶಿಯಾಗಿರುವುದರಿಂದ ಇವರು ಅಗ್ನಿಯಂತಹ ಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ. ಧನು ಲಗ್ನಕ್ಕೆ ಗುರುವು ಅಧಿಪತಿ. ಎರಡನೆಯ ಮತ್ತು ತೃತೀಯದ ಅಧಿಪತಿ ಶನಿ. ಪಂಚಮ ಮತ್ತು ದ್ವಾದಶದ ಅಧಿಪತಿ ಕುಜ. ಷಷ್ಠ ಮತ್ತು ಏಕಾದಶದ ಅಧಿಪತಿ ಶುಕ್ರ. ಇದು ಧನು ಲಗ್ನಕ್ಕೆ ಮಾರಕ. ಸಪ್ತಮ ಮತ್ತು ದಶಮದ ಅಧಿಪತಿ ಬುಧ. ಅಷ್ಟಮದ ಅಧಿಪತಿ ಚಂದ್ರ. ನವಮದ ಅಧಿಪತಿ ರವಿ. ಅಂಗಾರಕ ಈ ಲಗ್ನಕ್ಕೆ ಶುಭನೂ ಅಲ್ಲ. ಅಶುಭನೂ ಅಲ್ಲ. ನವಮದ ಅಧಿಪತಿ ರವಿಯು ದಶಮದ ಅಧಿಪತಿ ಬುಧನೊಡನೆ ಯೋಗ ಮಾಡಿದರೆ ಈ ಲಗ್ನಕ್ಕೆ ಅದು ರಾಜ ಯೋಗ. ಈ ಲಗ್ನದಲ್ಲಿ ಹುಟ್ಟಿದವರಿಗೆ ಪಚ್ಚೆ ಬ್ರಹ್ಮ ನೀಲ, ಕನಕ ಪುಷ್ಯ ರಾಗ ಒಳ್ಳೆಯ ಹರಳು. ಗುರುವಾರ, ಶುಕ್ರವಾರ, ಶನಿವಾರ ಶುಭ ದಿನ. ಈ ಲಗ್ನದಲ್ಲಿ ಹುಟ್ಟಿದವರಿಗೆ 3, 5, 6 ಶುಭ ಸಂಖ್ಯೆ. ಈ ಲಗ್ನದಲ್ಲಿ ಹುಟ್ಟಿದವರಿಗೆ ಕೆಂಪು, ಕಿತ್ತಳೆ, ತಿಳಿ ನೀಲಿ ಉತ್ತಮ ಬಣ್ಣಗಳು. ಮಕರ ಲಗ್ನಕ್ಕೆ ಶುಕ್ರ ರಾಜಯೋಗಕಾರಕ ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಮಕರ ರಾಶಿಯು ಜಲರಾಶಿ. ರಾತ್ರಿ ಬಲ ರಾಶಿ. ಷಷ್ಠೋದಯ ರಾಶಿ. ಚರ ರಾಶಿ. ಭೂತತ್ವ ರಾಶಿ. ಸ್ತ್ರೀ ಮತ್ತು ಯುಗ್ಮ ರಾಶಿ. ತಮೋಗುಣ ರಾಶಿ. ವೈಶ್ಯ ವರ್ಣ ರಾಶಿ. ಧಾತು ರಾಶಿ. ಈ ರಾಶಿಯ ಅಧಿಪತಿ ಶನಿ. ಮಕರ ಲಗ್ನದಲ್ಲಿ ಹುಟ್ಟಿದವರು ಉದ್ದ ಮೂಗು, ಸುಂದರವಾದ ಕಣ್ಣುಗಳನ್ನು ಹೊಂದುತ್ತಾರೆ. ಇವರು ಹಣದ ಮೇಲೆ ಬಹಳ ಆಸೆಯುಳ್ಳವರಾಗುತ್ತಾರೆ. ಇವರು ಯಾವುದೇ ಕೆಲಸ ಮಾಡುವಾಗ ಮೂಗಿನ ಹೊಳ್ಳೆಗಳು ಚಿಕ್ಕದಾಗಿರುತ್ತದೆ. ಅಗಲವಾದ ಬಾಯಿ, ನೀಳವಾದ ಕೈ ಕಾಲುಗಳು, ಮೃಗದ ಮುಖದಂತೆ ಆಕೃತಿ, ಸ್ವಲ್ಪ ಭಯ ಪಡುವ ಸ್ವಭಾವ, ಚಂಚಲ ಬುದ್ಧಿ, ಪರರ ಕೈಗೆ ಸಿಕ್ಕಿ ಬೀಳುವಂತವರಾಗಿರುತ್ತಾರೆ. ಮಕರ ಲಗ್ನದಲ್ಲಿ ಮಂಗಳ, ಗುರು, ಚಂದ್ರರು ಅಶುಭ ಫಲ ಕೊಡುವರು. ಬುಧ ಶುಕ್ರರು ಶುಭ ಫಲ ಕೊಡುವರು. ಈ ಲಗ್ನಕ್ಕೆ ಶುಕ್ರನೊಬ್ಬನೇ ರಾಜಯೋಗಕಾರಕ. ಮಂಗಳನೊಂದಿಗೆ ಶನಿ ಇದ್ದರೆ ಆಗ ಅದು ಮಾರಕವಾಗುವುದು. ಬುಧ, ಶುಕ್ರ ಯೋಗವು ಈ ಲಗ್ನಕ್ಕೆ ಫಲಕಾರಿ. ತೃತೀಯ ದ್ವಾದಶ ಸ್ಥಾನಗಳ ಅಧಿಪತಿ ಗುರು. ಎರಡೂ ಮಾರಕ ಸ್ಥಾನಗಳು. ಆದುದರಿಂದ ಗುರುವು ಈ ಲಗ್ನಕ್ಕೆ ಅಶುಭ. ಚತುರ್ಥ ಮತ್ತು ಏಕಾದಶ ಸ್ಥಾನಗಳ ಅಧಿಪತಿ ಅಂಗಾರಕ ಚತುರ್ಥದ ಅಧಿಪತಿಯಾಗಿರುವುದರಿಂದ ಮಂಗಳನು ಶುಭಫಲವನ್ನು ಏಕಾದಶ ಸ್ಥಾನದ ಅಧಿಪತಿ ಇರುವುದರಿಂದ ಅಶುಭವನ್ನು ಕೊಡುತ್ತದೆ. ತ್ರಿಕೋಣ ಹಾಗೂ ಕೇಂದ್ರದ ಅಧಿಪತ್ಯವು ಒಂದೇ ಗಹದಲ್ಲಿ ಒಟ್ಟಾದರೆ ಫಲದಾಯಕವಾಗುವುದು. ತ್ರಿಕೋಣದ ಅಧಿಪತಿಯು ಕೇಂದ್ರದ ಅಧಿಪತಿ ಇದ್ದಾಗ ಆ ಗ್ರಹವು ಶುಭವೆಂದು ತಿಳಿಯಬೇಕು. ಮಕರ ಲಗ್ನಕ್ಕೆ ಶುಕ್ರನು ತಾರಕನಾಗುವನು. ಸಪ್ತಮ ಸ್ಥಾನದ ಅಧಿಪತಿ ಚಂದ್ರ ಕ್ಷೀಣವಾಗಿದ್ದಾಗ ಶುಭನೂ, ಪೂರ್ಣನಾದಾಗ ಅಶುಭನೂ ಈ ಲಗ್ನಕ್ಕೆ ಆಗುವನು. ಈ ಲಗ್ನದಲ್ಲಿ ಹುಟ್ಟಿದವರು ಸಾಮಾನ್ಯವಾಗಿ ಎಂಜಿನಿಯರ್, ವೈದ್ಯರು, ವಕೀಲರು, ವ್ಯವಸಾಯದಲ್ಲಿ ಬಹಳ ಪರಿಣತರೂ ಆಗುತ್ತಾರೆ. ಇವರಿಗೆ ಸರಿಯಾದ ಸಮಯಕ್ಕೆ ಮದುವೆಯಾಗುತ್ತದೆ. ಸುಂದರವಾದ ಪತ್ನಿ ಮತ್ತು ಮಕ್ಕಳನ್ನು ಹೊಂದುವರು. ಪತ್ನಿ ಮತ್ತು ಮಕ್ಕಳಲ್ಲಿ ಹೆಚ್ಚಿನ ಪ್ರೀತಿ ಇಟ್ಟಿರುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರಿಗೆ ವಜ್ರ, ಬ್ರಹ್ಮ ನೀಲ, ಹವಳ ಉತ್ತಮ ಹರಳು. ಇವರಿಗೆ ಶುಭ ಸಂಖ್ಯೆ 6, 9, 8. ಇವರಿಗೆ ಬಿಳಿ, ನೀಲಿ ಉತ್ತಮ ಬಣ್ಣ. ಕುಂಭ ಲಗ್ನದವರು ಬುದ್ಧಿವಂತರು * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಕುಂಬ ರಾಶಿಯು ದಿವಾ ಬಲ ರಾಶಿ. ನೀರ್ಪೋದಯ ರಾಶಿ, ಸ್ಥಿರ ರಾಶಿ. ವಾಯು ತತ್ತ್ವದ ರಾಶಿ. ಪುರುಷ ಮತ್ತು ಓಜ ರಾಶಿ. ತಮೋ ಗುಣ ರಾಶಿ. ಶೂದ್ರ ವರ್ಣ ರಾಶಿ. ಮಧ್ಯಮ ಶಬ್ದ ರಾಶಿ. ಇದರ ಅಧಿಪತಿ ಶನಿ. ಕುಂಭ ಲಗ್ನದಲ್ಲಿ ಹುಟ್ಟಿದವರು ತೆಳ್ಳಗೆ ಶರೀರ ಹೊಂದಿರುತ್ತಾರೆ. ಉದ್ದವಾಗಿದ್ದು, ಸುಂದರವಾದ ಮುಖ ಇರುತ್ತದೆ. ಬಹಳ ಬಲಶಾಲಿಯಾಗಿರುತ್ತಾರೆ. ಇವರು ಬಹಳ ಬುದ್ಧಿವಂತರಾಗಿರುತ್ತಾರೆ. ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಂಡು ನಡೆಯುತ್ತಾರೆ. ಯಾವುದೇ ಕೆಲಸವನ್ನು ಬಹಳ ಪ್ರಯತ್ನಪಟ್ಟು, ಒಳ್ಳೆಯ ರೀತಿಯಿಂದ ಮಾಡಿ ಮುಗಿಸುತ್ತಾರೆ. ಹೊಸ ಹೊಸ ಕೆಲಸಗಳನ್ನು ಕಂಡು ಹಿಡಿಯುತ್ತಾರೆ. ಸಾಮಾನ್ಯವಾಗಿ ಕುಂಭ ಲಗ್ನದಲ್ಲಿ ಹುಟ್ಟಿದವರ ಬುದ್ಧಿಯಲ್ಲಿ ಏರಿಳಿತವಿರುತ್ತದೆ. ಉಗ್ರವಾದ ಬಡವಳಿಕೆ ಉಳ್ಳವರೂ, ಕುಟುಂಬದಲ್ಲಿ ಪೂಜ್ಯರಾದವರೂ, ಪಿತ್ತ ವಾತ ಶರೀರವುಳ್ಳವರೂ, ಬಂದ ಆದಾಯವನ್ನು ಕಳೆದುಕೊಳ್ಳುವವರೂ, ತಮ್ಮ ಕುಟುಂಬದ ಹಿರಿಯರಲ್ಲಿಯೂ, ಸ್ವಜನರಲ್ಲಿಯೂ ವಿರೋಧ ಮನಸ್ಸುಳ್ಳವರಾಗಿರುತ್ತಾರೆ. ಇವರಿಗೆ ಚಿಕ್ಕ ವಯಸ್ಸಿನಲ್ಲಿ ವಿವಾಹವಾಗುತ್ತದೆ. ಆದರೆ ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆಗಾಗಿ ಸ್ವಲ್ಪ ಶ್ರಮಪಡಬೇಕು. ಇವರು ಆಡಂಬರಕ್ಕೆ ಧಾರ್ಮಿಕ ಕೆಲಸ ಮಾಡುತ್ತಾರೆ. ಕಾರ್ಯತತ್ಪರರಾಗಿರುತ್ತಾರೆ. ಇವರ ಜೀವನದಲ್ಲಿ ಉನ್ನತಿ, ಅವನತಿ ಒಂದರ ನಂತರ ಒಂದು ಇರುತ್ತದೆ. ಈ ಲಗ್ನದವರಿಗೆ ಶಾಶ್ವತವಾದ ಸುಖ ಸಂಪತ್ತು ಸಿಗುವುದು ಕಷ್ಟ. ಎಲ್ಲ ಲಗ್ನಕ್ಕಿಂತ ಕುಂಭ ಲಗ್ನ ಅಶುಭ ಲಗ್ನ. ಎಷ್ಟೋ ಶುಭ ಯೋಗಗಳಿದ್ದರೂ ಈ ಲಗ್ನದಲ್ಲಿ ಜನಿಸಿದವರು ತನ್ನ ಜೀವನದ ಕೊನೆಯ ದಿನಗಳನ್ನು ಜಗತ್ತಿನಿಂದ ದೂರ ಇರುವಂತೆ ಮಾಡುತ್ತಾರೆ. ಇವರು ಬಹಳ ತೊಂದರೆಯನ್ನು ಅನುಭವಿಸಿ ತಮ್ಮ ಕೊನೆಯನ್ನು ಕಾಣುತ್ತಾರೆ. ಸಾವಿರಾರು ಅಶುಭ ಯೋಗಗಳಿದ್ದರೂ ವೃಷಭ ಲಗ್ನ ಬೇಕು. ಈ ಲಗ್ನದಲ್ಲಿ ಹುಟ್ಟಿದವರಿಗೆ ಮೊದಲು ಆನಂದ. ಕೊನೆಗೆ ಬಹಳ ಕಷ್ಟದ ದಿನಗಳು ಬಂದೇ ಬರುತ್ತದೆ. ಇದರಿಂದ ಇವರಿಗೆ ಮಾನವ ಜನ್ಮವೇ ಬೇಡವೆಂದು ಅನಿಸುತ್ತದೆ. ಕುಂಬ ಲಗ್ನಕ್ಕೆ ಮಂಗಳ, ಗುರು ಮತ್ತು ಚಂದ್ರ ಅಶುಭ ಗ್ರಹಗಳು. ಶುಕ್ರನೊಬ್ಬನೇ ಶುಭ ಗ್ರಹ. ಶುಕ್ರ ಮಂಗಳ ಯೋಗವು ಈ ಲಗ್ನಕ್ಕೆ ರಾಜ ಯೋಗ. ಈ ಲಗ್ನಕ್ಕೆ ಬಹಳ ಮಾರಕ ಗ್ರಹ ಚಂದ್ರ. ಈ ಲಗ್ನದಲ್ಲಿ ಹುಟ್ಟಿದವರು ಎಂಜಿನಿಯರ್, ಬಹಳ ಆಸ್ತಿ ಪಾಸ್ತಿ ಹೊಂದಿದವರು ಆಗುತ್ತಾರೆ. ಆಡಳಿತ ತಜ್ಞರೂ, ಉನ್ನತ ವ್ಯಾಸಾಂಗದಲ್ಲಿ ಆಸಕ್ತಿಯುಳ್ಳವರೂ ಆಗುತ್ತಾರೆ. ಈ ಲಗ್ನದವರಿಗೆ ವಜ್ರ, ರೂಬಿ, ಕನಕ, ಪುಷ್ಯರಾಗ ಒಳ್ಳೆಯ ಹರಳು. ಮಂಗಳವಾರ, ಗುರುವಾರ, ಶುಕ್ರವಾರ ಒಳ್ಳೆಯ ವಾರ. 2, 3, 7 ಇವು ಶುಭ ಸಂಖ್ಯೆಗಳು. ಮೀನ ಲಗ್ನಕ್ಕೆ 1, 3, 9 ಶುಭ ಸಂಖ್ಯೆ * ಹರಿಶ್ಚಂದ್ರ ಪಿ. ಸಾಲ್ಯಾನ್ ಮೀನ ರಾಶಿ ದಿವಾ ಬಲ ರಾಶಿ. ಉಭಯ ರಾಶಿ ಜಲ ತತ್ತ್ವರಾಶಿ, ಸತ್ವ ಗುಣ ರಾಶಿ. ಬ್ರಾಹ್ಮಣ ವರ್ಣ ರಾಶಿ, ಜೀವ ರಾಶಿ, ದ್ವಿಸ್ವಭಾವ ರಾಶಿ. ಇದರ ಅಧಿಪತಿಯು ಗುರು. ಮೀನ ಲಗ್ನದಲ್ಲಿ ಹುಟ್ಡಿದವರು ಮೀನಿನ ಹಾಗೆ ಹೊಳೆಯುತ್ತಿರುವ ಕಣ್ಣುಗಳು ಉಳ್ಳವರು. ತುಟಿ, ಮೂಗು ದಪ್ಪವಗಿರುವವರೂ, ಘನವಾದ ಮನಸ್ಸುಳ್ಳವರಾಗಿಯೂ, ಚರ್ಮದ ರೋಗವುಳ್ಳವರಾಗಿಯೂ, ಚಂಚಲ ಬುದ್ಧಿಯುಳ್ಳವರಾಗಿಯೂ ಇರುತ್ತಾರೆ. ಇವರು ಸ್ವಜನರಲ್ಲಿಯೂ, ಸ್ತ್ರೀಯರಲ್ಲಿಯೂ ಪೂಜ್ಯತೆಯನ್ನು ಪಡೆಯುತ್ತಾರೆ. ಇವರು ತಮ್ಮ ಸೋದರರ ಮೇಲೆ ಅಧಿಕಾರ ತೋರತಕ್ಕವರೂ ತಂದೆಗಿಂತ ಹೆಚ್ಚು ಅಭಿವೃದ್ಧಿ ಹೊಂದತಕ್ಕವರು. ಇವರು ಪರದೇಶಕ್ಕೆ ಹೋಗುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರು ಸ್ವಾರ್ಥಿಗಳಾಗಿ ಇತರರಿಗೆ ಉಪಕಾರ ಮಾಡುವುದರಲ್ಲಿ ಹಿಂಜರಿಯುತ್ತಾರೆ. ಇವರು ಎಲ್ಲರೊಂದಿಗೂ ಒಳ್ಳೆಯವರಾಗಿರುತ್ತಾರೆ. ಮಾತಿನಿಂದಲೇ ಮರುಳು ಮಾಡುತ್ತಾರೆ. ಇತರರ ಮನ ನೋಯಿಸುವಂತಹ ಯಾವುದೇ ಮಾತನ್ನು ಆಡುವುದಿಲ್ಲ. ಇವರ ಕುಂಠಿತ ಸ್ವಭಾವದಿಂದ ಇವರು ಜೀವನದಲ್ಲಿ ಮುಂದುವರಿಯುವುದು ಕಡಿಮೆ. ದ್ವಿಸ್ವಭಾವ ರಾಶಿಯಾಗಿರುವುದರಿಂದ ಇವರಲ್ಲಿ ದ್ವಂದ್ವ ಗುಣ ಇರುತ್ತದೆ. ಇವರಿಗೆ ಒಂದೇ ಬುದ್ಧಿ ಇರುವುದು ಕಡಿಮೆ. ಇವರು ಇನ್ನೊಬ್ಬರ ಮನಸ್ಸನ್ನು ಚಂಚಲ ಮಾಡುತ್ತಾರೆ. ಇವರು ತಮ್ಮ ನಿಲುವನ್ನು ಬದಲಾವಣೆ ಮಾಡುತ್ತಾ ಮುಂದುವರಿಯುತ್ತಾರೆ. ಮೀನ ಲಗ್ನಕ್ಕೆ ಶನಿ ಶುಕ್ರ ರವಿ ಮತ್ತು ಬುದ ಅಶುಭ ಫಲವನ್ನು ಕೊಡುತ್ತದೆ. ಈ ಲಗ್ನಕ್ಕೆ ಚಂದ್ರ ಮತ್ತು ಮಂಗಳರು ಶುಭ ಫಲವನ್ನು ಕೊಡುತ್ತಾರೆ. ಗುರು ಮಂಗಳ ಯೋಗವು ಈ ಲಗ್ನಕ್ಕೆ ರಾಜ ಯೋಗವನ್ನು ಕೊಡುತ್ತದೆ. ಗುರುವು ಲಗ್ನಾದಿಪತಿ ಮತ್ತು ದಶಮದ ಅಧಿಪತಿ ಮಂಗಳನು ದ್ವಿತೀಯಾಧಿಪತಿ ಮತ್ತು ನವಮಾಧಿಪತಿ ಇರುವರು. ಕೇಂದ್ರದ ಅಧಿಪತಿಯು ಗುರು ಇರುವುದರಿಂದ ಆತನಿಗೆ ಶುಭ ಫಲಕತ್ವವು ಬರುವುದಿಲ್ಲ. ಆದರೆ ಭಾಗ್ಯಾಧಿಪತಿ ಮಂಗಳನಿಂದ ಯುಕ್ತನಾದರೆ ಮಾತ್ರ ಆತನು ಶುಭಫಲವನ್ನು ಕೊಡುವನು. ಶುಕ್ರ ರವಿಯ ಯೋಗವು ಈ ಲಗ್ನದವರಿಗೆ ಬಹಳ ತೊಂದರೆ ಕೊಡುತ್ತದೆ. ಷಷ್ಟದ ಅಧಿಪತಿ ರವಿ ಅಷ್ಟಮ ಸ್ಥಾನದ ಅಧಿಪತಿ ಶುಕ್ರ ಷಷ್ಟ ಮತ್ತು ಅಷ್ಟಮದ ಅಧಿಪತಿಯ ಯೋಗವು ಒಳ್ಳೆಯದಲ್ಲ. ಮೀನ ಲಗ್ನದಲ್ಲಿ ಹುಟ್ಟಿದವರು ಸಿನಿಮಾಗಳಲ್ಲಿ ಆಸಕ್ತಿ, ವಿವಿಧ ದಶ್ಯಗಳನ್ನು ಸೆರೆ ಹಿಡಿಯುವುದರಲ್ಲಿ ಬಹಳ ಜಾಣರಿರುತ್ತಾರೆ. ಇವರು ಕಲಾಕಾರರು, ಕವಿಗಳು, ಪತ್ರಕರ್ತರಾಗುತ್ತಾರೆ. ಇವರು ಅಧ್ಯಾಪಕರು, ವೈದ್ಯರು, ಎಂಜಿನಿಯರ್, ಧಾರ್ಮಿಕ ವಿಷಯದಲ್ಲಿ ಬಹಳ ಆಸಕ್ತಿಯಿಂದ ಇದ್ದು, ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಈ ಲಗ್ನದಲ್ಲಿ ಹುಟ್ಟಿದವರು ಒಳ್ಳೆಯ ಪತಿ ಪತ್ನಿಯವರನ್ನು ಪಡೆಯುತ್ತಾರೆ. ಮೀನ ಲಗ್ನದವರಿಗೆ ಕನಕ ಪುಷ್ಯರಾಗ, ಹವಳ, ಮುತ್ತು ಉತ್ತಮ ಹರಳು. ಮಂಗಳವಾರ, ಗುರುವಾರ, ಭಾನುವಾರ, ಶುಭ ವಾರ. ನಸು ಹಳದಿ, ಗುಲಾಬಿ, ಕಿತ್ತಳೆ, ಕೆಂಪು ಬಣ್ಣ ಉತ್ತಮವಾದ ಬಣ್ಣ. 1, 3, 9 ಶುಭ ಸಂಖ್ಯೆ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ