Skip to main content

ಎಚ್‌ಐವಿ/ಏಡ್ಸ್‌ ರೋಗಿಗಳಿಗಾಗಿ ಆಹಾರ ಕ್ರಮಗಳು

ಮನೀಷಾ ಮೋಹನಕುಮಾರ್‌,ಡಯಟೀಷಿಯನ್‌, ಕೆಎಂಸಿ, ಅತ್ತಾವರ, ಮಂಗಳೂರು. | Jun 24, 2013 ಕಳೆದ ಒಂದು ದಶಕದಿಂದ ಈಚೆಗೆ ಎಚ್‌ಐವಿ/ಏಡ್ಸ್‌ ರೋಗಿಗಳ ನಿರ್ವಹಣೆಯಲ್ಲಿ ಉತ್ತಮ ಪೋಷಕಾಂಶಗಳ ಆದ್ಯತೆಯು ಹೆಚ್ಚಾಗುತ್ತಿದೆ. ಏಡ್ಸ್‌ನ ಭಯಾನಕ ಪರಿಣಾಮಗಳ ವಿರುದ್ಧ ಹೋರಾಡುವಲ್ಲಿ ಪೋಷಣಾಭರಿತ ಆಹಾರಗಳು ಮಹತ್ವ ಪೂರ್ಣವಾದ ಸಾಧನಗಳಾಗಬಹುದು ಎಂದು ಇತ್ತೀಚಿನ ಸಂಶೋಧನೆಗಳ ವರದಿಗಳು ಹೇಳುತ್ತಿವೆ. ಉತ್ತಮ ಪೋಷಕಾಂಶಗಳು ಅಂದರೆ, ಸೇವಿಸಿದ ಆಹಾರದಿಂದ ಸಾಕಷ್ಟು ಪ್ರಮಾಣದಲ್ಲಿ ದೊಡ್ಡ ಪೋಷಕಾಂಶಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯುವುದು. ದೊಡ್ಡ ಪೋಷಕಾಂಶಗಳು ಅಂದರೆ - ಕ್ಯಾಲೊರಿಗಳು (ಚೈತನ್ಯ): ಅಂದರೆ ಪ್ರೊಟೀನ್‌ಗಳು , ಕಾಬೋìಹೈಡ್ರೇಟ್ಸ್‌ ಮತ್ತು ಕೊಬ್ಬು. ಇವು ನಿಮ್ಮ ದೇಹದ ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತವೆ. ಸೂಕ್ಷ್ಮ ಪೋಷಕಾಂಶಗಳು ಅಂದರೆ ವಿಟಾಮಿನ್‌ಗಳು ಮತ್ತು ಖನಿಜಾಂಶಗಳು. ಇವು ನಿಮ್ಮ ಜೀವಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಕರಿಸುತ್ತವೆ. ಆದರೆ, ದೇಹದ ತೂಕ ಇಳಿಸುವಲ್ಲಿ ಇವುಗಳ ಪಾತ್ರವೇನೂ ಇಲ್ಲ. ಎಚ್‌ಐವಿ/ಏಡ್ಸ್‌ ಇರುವ ಅನೇಕ ರೋಗಿಗಳಿಗೆ ಉತ್ತಮ ಪೋಷಕಾಂಶಗಳದ್ದೇ ಸಮಸ್ಯೆಯಾಗಿರುತ್ತದೆ. ನಿಮ್ಮ ದೇಹವು ಯಾವುದಾದರೂ ಸೋಂಕಿನ ವಿರುದ್ಧ ಹೋರಾಡುತ್ತಿದೆ ಎಂದಾದರೆ, ಅದು ಹೆಚ್ಚಿನ ಶಕ್ತಿಯನ್ನು ಉಪಯೋಗಿಸುತ್ತಿರುತ್ತದೆ ಮತ್ತು ಇದಕ್ಕಾಗಿ ನೀವು ಸಾಮಾನ್ಯಕ್ಕಿಂತಲೂ ಹೆಚ್ಚಿನ ಆಹಾರವನ್ನು ಸೇವಿಸಬೇಕಾಗುತ್ತದೆ. ಆದರೆ, ಸಾಮಾನ್ಯವಾಗಿ ಅಸೌಖ್ಯವಿರುವಾಗ ನಾವು ಸಾಮಾನ್ಯಕ್ಕಿಂತಲೂ ಕಡಿಮೆ ಆಹಾರವನ್ನು ಸೇವಿಸುತ್ತಿರುತ್ತೇವೆ. ಎಚ್‌ಐವಿ/ಏಡ್ಸ್‌ ನಲ್ಲಿ ಪೋಷಣಾ ಆರೈಕೆಯ ಸಾಮಾನ್ಯ ತತ್ವಗಳು 1. ಸಹಜ ದೇಹ ತೂಕವನ್ನು ಕಾಪಾಡಿಕೊಳ್ಳಿ. ನೀವು ಸೇವಿಸಬಹುದಾದ, ನಿಮಗೆ ಅಗತ್ಯರುವ ಕ್ಯಾಲೊರಿಯ ಬಗ್ಗೆ ಎಚ್ಚರವಿರಲಿ ಮತ್ತು ಸಹಜ ತೂಕವನ್ನು ಕಾಪಾಡಿಕೊಳ್ಳಿ. 2. ಸ್ನಾಯುಗಳನ್ನು ಬೆಳೆಸಿ/ದೇಹ ಸಾಂದ್ರತೆಯನ್ನು ಕಾಪಾಡಿಕೊಳ್ಳಿ. ದೇಹದ ಮಾಂಸಖಂಡಗಳನ್ನು ಬೆಳೆಸಲು ತರಬೇತಿಯನ್ನು ಪಡೆದುಕೊಳ್ಳಿ, ಆವಶ್ಯಕವೆನಿಸಿದರೆ, ಸ್ನಾಯುಗಳನ್ನು ಬೆಳೆಸಲು ಸ್ಟೀರಾಯ್ಡ ಅಥವಾ ಹಾರ್ಮೋನ್‌ಗಳನ್ನು ತೆಗೆದುಕೊಳ್ಳಬಹುದು. 3. ಜೀರ್ಣಶಕ್ತಿಯು ಚೆನ್ನಾಗಿರಲಿ. ಜೀರ್ಣಾಂಗವ್ಯೂಹವು ನಿಮ್ಮ ಆರೋಗ್ಯದ ಮೂಲ - ಸರಳ ನಿಯಮಗಳ ಮೂಲಕ, ಅಂದರೆ ನಿಮ್ಮ ಆಹಾರವನ್ನು ಚೆನ್ನಾಗಿ ಜಗಿದು ಸೇವಿಸುವುದರಿಂದ ಜೀರ್ಣಾಂಗವ್ಯೂಹದ ಕೆಲಸ ಬಹಳ ಸರಾಗವಾಗುತ್ತದೆ! 1-3 ದೊಡ್ಡ ಊಟಕ್ಕಿಂತ 4-6 ಸಲ ಸಣ್ಣ ಸಣ್ಣ ಊಟಗಳನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿ. 4. ಹೆಚ್ಚು ಹೆಚ್ಚು ಉಪಶಮನಕಾರಿ ಆಹಾರಗಳನ್ನು ಸೇವಿಸಿ; ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಸೇವಿಸಿ. 5. ನಿತ್ಯವೂ 6-10 ಕಪ್‌ ಗಳಷ್ಟು ಕೆಫೀನ್‌ ರಹಿತ ಪಾನೀಯವನ್ನು ಸೇವಿಸಿ. 6. ಅಗತ್ಯಕ್ಕೆ ಅನುಗುಣವಾಗಿ ಪೂರಣಗಳನ್ನು ತೆಗೆದುಕೊಳ್ಳಿ. 7. ಸಾಮಾಜಿಕ ಮತ್ತು ಭಾವನಾತ್ಮಕ ಪ್ರತ್ಯೇಕತೆಯನ್ನು ಬಗೆಹರಿಸಿಕೊಳ್ಳಿ. ಯಾಕೆಂದರೆ, ಈ ಅಂಶಗಳು ನಿಮ್ಮ ಆಹಾರ ಆಯ್ಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಆಹಾರ ನಿರ್ವಹಣೆ ಹಣ್ಣುಗಳು ಮತ್ತು ತರಕಾರಿಗಳು: ಹಣ್ಣು ಮತ್ತು ತರಕಾರಿಗಳಲ್ಲಿ ವಿಟಾಮಿನ್‌ಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡಾಂಟ್‌ಗಳು ಹೇರಳವಾಗಿರುತ್ತವೆ. ಈ ಅಂಶಗಳು ಸೋಂಕು ಮತ್ತು ಕಾಯಿಲೆಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ದಿನದಲ್ಲಿ ಐದರಿಂದ ಆರು ಸರ್ವಿಂಗ್ಸ್‌ ಗಳಷ್ಟು ಅಥವಾ 3 ಕಪ್‌ಗ್ಳಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ತಾಜಾ, ಮತ್ತು ಬಣ್ಣ ಬಣ್ಣದ ವೈವಿಧ್ಯಮಯ ಬಣ್ಣದ ಬೆರ್ರಿಗಳನ್ನು, ಸಿಟ್ರಸ್‌ ಹಣ್ಣುಗಳನ್ನು, ಸೇಬುಗಳನ್ನು, ಕೆಂಪು ದ್ರಾಕ್ಷಿಗಳನ್ನು , ಟೊಮ್ಯಾಟೋಗಳನ್ನು, ಸೊಪ್ಪು$ ತರಕಾರಿಗಳನ್ನು, ಬ್ರಾಕಲಿ ಮತ್ತು ಮೊಳಕೆ ಕಟ್ಟಿದ ಆಹಾರಗಳನ್ನು ಸೇವಿಸಿ, ಆಂಟಿ ಆಕ್ಸಿಡಾಂಟ್‌ಗಳ ಗರಿಷ್ಠ ಪ್ರಯೋಜನಗಳನ್ನು ಪಡೆಯಿರಿ. ಅಧಿಕ-ಗುಣಮಟ್ಟದ ಪ್ರೊಟೀನ್‌: ಪ್ರೊಟೀನ್‌ಗಳು ಅಮೈನೋ ಆಸಿಡ್‌ಗಳನ್ನು ಒದಗಿಸುತ್ತವೆ - ಇವು ತೆಳು ಅಂಗಾಂಶಗಳ ಸಂರಚನಾ ಘಟಕಗಳಾಗಿರುತ್ತವೆ. ಪ್ರೊಟೀನ್‌ ಸಮೃದ್ಧ ಆಹಾರಗಳು ದೇಹದ ರೋಗನಿರೋಧಕ ವ್ಯವಸ್ಥೆಯನ್ನು, ಚಲನ ವಲನ ಸಾಮರ್ಥ್ಯವನ್ನು ಮತ್ತು ಅಂಗಾಂಶಗಳ ಪುನರ್ರಚನೆಯನ್ನು ಬಲಪಡಿಸುತ್ತವೆ. ಇಂತಹ ಆಹಾರಗಳು ಅಂದರೆ - ಸಾವಯವ ಮೊಟ್ಟೆಗಳು, ತೆಳು ಮಾಂಸ, ಸೋಯಾ ಮತ್ತು ಹಾಲಿನ ಉತ್ಪನ್ನಗಳು... ಇತ್ಯಾದಿ. ಏಎಚ್‌ಐವಿ/ಏಡ್ಸ್‌ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಉಂಟಾಗುವ ಸ್ನಾಯು ಅಂಗಾಂಶಗಳ ಕುಸಿತ ಮತ್ತು ತೂಕ ಇಳಿಕೆಯಂತಹ ತೊಂದರೆಗಳನ್ನು ತಪ್ಪಿಸಲು ಪ್ರೊಟೀನ್‌ಯುಕ್ತ ಆಹಾರ ಗಳು ಉಪಯುಕ್ತ. ಪ್ರೊಟೀನ್‌ ಸಮೃ ದ್ಧಿತ ಆಹಾರಗಳೆಂದರೆ, ಸ್ಕಿನ್‌ ಲೆಸ್‌ ಚಿಕನ್‌ ಅಥವಾ ಟರ್ಕಿ ಬ್ರೆಸ್ಟ್‌, ಮೊಟ್ಟೆ ಅಥವಾ ತರಕಾರಿಯ ಆಮ್ಲೆಟ್‌ಗಳು, ಟೋಫ‌ು, ಗ್ರಿಲ್‌ ಮಾಡಿದ ಮೀನು ಅಥವಾ ಕಡಿಮೆ ಕೊಬ್ಬಿನ ಹಾಲು, ಯೋಗರ್ಟ್‌, ಕಾಟೇಜ್‌ ಚೀಸ್‌ ಇತ್ಯಾದಿ. ಇಡೀ ಧಾನ್ಯಗಳು ಇಡೀ ಧಾನ್ಯಗಳು ಎಚ್‌ಐವಿ/ಏಡ್ಸ್‌ ರೋಗಿಗಳಿಗೆ ಆವಶ್ಯಕವಿರುವ ಕಬ್ಬಿಣ ಇತ್ಯಾದಿ ಪೋಷಕಾಂಶಗಳ ಮತ್ತು ನಾರಿನ ಉತ್ತಮ ಮೂಲಗಳಾಗಿವೆ. ಅಂದರೆ, ಸಮೃದ್ಧಗೊಳಿಸಿದ ಬ್ರೆಡ್‌ಗಳು, ಉಪಾಹಾರಗಳು ಮತ್ತು ಸಂಕೀರ್ಣ ಮೂಲಗಳು ಅಂದರೆ ಇಡೀ ಧಾನ್ಯಗಳು. ಉತ್ತಮ ಫ‌ಲಿತಾಂಶವನ್ನು ಪಡೆಯಲು ವೈವಿಧ್ಯಮಯ ಇಡಿ ಧಾನ್ಯಗಳನ್ನು ಅಂದರೆ ಓಟ್ಸ್‌, ಇಡೀ ಗೋಧಿ, ವೈಲ್ಡ್‌ ರೈಸ್‌, ಕುಚ್ಚಲಕ್ಕಿ, ಬಾರ್ಲಿ ಮತ್ತು ಜೋಳ ಇವುಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ನಿಯಮಿತವಾಗಿ ಉಪಯೋಗಿಸಿ. ಇಡಿಯ ಧಾನ್ಯಗಳ ಆಹಾರಗಳನ್ನು ಕೊಳ್ಳುವಾಗ, ಅದರಲ್ಲಿ ಪ್ರಧಾನ ಧಾನ್ಯವಾಗಿ ಇಡಿಯ ಧಾನ್ಯಗಳನ್ನೇ ಉಪಯೋಗಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆರೋಗ್ಯಕರ ಕೊಬ್ಬುಗಳು ಆಹಾರದಲ್ಲಿರುವ ಕೊಬ್ಬುಗಳು, ವಿಟಾಮಿನ್‌ ಕೆ ಮತ್ತು ಇ ಇತ್ಯಾದಿ ಕೆಲವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ, ಮಾತ್ರವಲ್ಲ ಇವು ಆಹಾರದ ಸಾಂದ್ರತೆ, ತಲೆಗೂದಲು ಮತ್ತು ಚರ್ಮದ ಆರೋಗ್ಯ ಮತ್ತು ಮೆದುಳಿನ ಚಟುವಟಿಕೆಯನ್ನು ಉತ್ತಮಗೊಳಿಸುತ್ತವೆ. ದಿನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಆರೋಗ್ಯಕರ ಕೊಬ್ಬಿನ ಮೂಲಗಳಾದ ಬೀಜಗಳು ಅಥವಾ ಕಾಳುಗಳನ್ನು ಸೇವಿಸಿ. ಹೆಚ್ಚಾಗಿ ಆರೋಗ್ಯಕರವಾದ ಕೊಬ್ಬಿನ ಮೂಲಗಳನ್ನು ಆರಿಸಿಕೊಳ್ಳಿ, ಅಂದರೆ ಆಲಿವ್‌ ಎಣ್ಣೆ, ರಿಫೈನ್‌x ಎಣ್ಣೆ, ಕುಂಬಳ ಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು, ವಾಲ್‌ ನಟ್‌ ಗಳು, ಬಾದಾಮಿಗಳು, ಬಟಾಣಿಗಳು, ಅವೊಕ್ಯಾಡೋ ಮತ್ತು ಕೊಬ್ಬಿನ ಮೀನುಗಳಾದ ಸಾಲ್ಮನ್‌, ಟ್ಯೂನಾ ಮತ್ತು ಸಾರ್ಡಿನ್‌ಗಳು ಇತ್ಯಾದಿ. ಒಂದು ಉತ್ತಮ ಆಹಾರ ಯೋಜನೆಯ ಜೊತೆ ಜೊತೆಗೆಯೇ ತಾಳುವಿಕೆಯ ವ್ಯಾಯಾಮಗಳನ್ನೂ ಸಹ ರೂಢಿಸಿಕೊಳ್ಳಬೇಕು. ಸ್ನಾಯು ಗಳ ಬೆಳವಣಿಗೆ ಮತ್ತು ದೇಹದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಲಘುವಾಗಿ ಭಾರ ಎತ್ತುವ ವ್ಯಾಯಾ ಮಗಳು ಮತ್ತು ಏರೋಬಿಕ್‌ ವ್ಯಾಯಾಮಗಳಾದ ನಡಿಗೆ, ಈಜು ವುದು, ನೃತ್ಯ - ಹೀಗೆ ನಿಮ್ಮ ಹೃದಯದ ಗತಿಯು ಮಾಮೂಲಿಗಿಂತ ಸ್ವಲ್ಪ$ ವೇಗವಾಗಿ ಹೊಡೆದುಕೊಳ್ಳುವಂತೆ ಮಾಡುವ ಯಾವುದಾದರೂ ರೀತಿಯ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ. ಎಚ್‌ಐವಿ/ಏಡ್ಸ್‌ ಇರುವ ಒಬ್ಬ ವ್ಯಕ್ತಿಯು ದೇಹವನ್ನು ಸದೃಢಗೊಳಿಸಿಕೊಂಡು, ಆಂಟಿರಿಟ್ರೋವೈರಲ್‌ ಔಷಧಿಗಳನ್ನು ಉಪಯೋಗಿಸಿಕೊಂಡು, ವೈರಸ್‌ ನ ವೇಗಕ್ಕೆ ತಡೆಹಾಕಿ, ಯಶಸ್ವೀ ಜೀವನವನ್ನು ಸಾಗಿಸಬಹುದು.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ