Skip to main content

ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆ --ಅನಿಮಿಯಾ ಎಂದರೇನು?

ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆ ಅನಿಮಿಯಾ ಎಂದರೇನು? ನಿಮ್ಮ ರಕ್ತದಲ್ಲಿ ಹೆಮೊಗ್ಲೋಬಿನ್‌ ಅಂಶವು ಸಹಜ ಮಟ್ಟಕ್ಕಿಂತ ಕಡಿಮೆ ಇರುವ ಸ್ಥಿತಿಗೆ ಅನಿಮಿಯಾ ಅಥವಾ ರಕ್ತಹೀನತೆ ಎಂದು ಹೆಸರು. ಹೆಮೊಗ್ಲೋಬಿನ್‌ ಶರೀರದ ಕೆಂಪು ರಕ್ತಕಣಗಳಲ್ಲಿ ಇರುವ ಒಂದು ಅಂಶ. ಇದು ಶರೀರಕ್ಕೆ ಆಮ್ಲಜನಕವನ್ನು ಸರಬರಾಜು ಮಾಡಿ, ಇಂಗಾಲದ ಡೈ ಆಕ್ಸೆ„ಡ್‌ಅನ್ನು (ತ್ಯಾಜ್ಯ ಉತ್ಪನ್ನ) ದೇಹದಿಂದ ಹೊರಗೆ ತೆಗೆದು ಹಾಕುತ್ತದೆ. ಕಬ್ಬಿಣದ ಅಂಶದ ಕೊರತೆಯ ಅನಿಮಿಯಾ ಎಂದರೇನು? ಶರೀರದಲ್ಲಿ ಕಬ್ಬಿಣದ ಅಂಶದ ಕೊರತೆಯ ಕಾರಣದಿಂದಾಗಿ ಹೆಮೊಗ್ಲೋಬಿನ್‌ ಮಟ್ಟವು ಕುಸಿಯುವ ಸ್ಥಿತಿಗೆ ಕಬ್ಬಿಣದ ಅಂಶದ ಕೊರತೆಯ ಅನಿಮಿಯಾ ಎಂದು ಹೆಸರು. ಇದು ಜಗತ್ತಿನಾದ್ಯಂತ ಜನ ಸಾಮಾನ್ಯರಲ್ಲಿ ಕಂಡುಬರುವ ಬಹಳ ಸಾಮಾನ್ಯ ರೀತಿಯ ಅನಿಮಿಯಾ. ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆ ಹೇಗೆ ಉಂಟಾಗುತ್ತದೆ? ಸಾಮಾನ್ಯವಾಗಿ, ಕಳಪೆ ಆಹಾರ ಸೇವನೆ ಅಥವಾ ಆಹಾರದಲ್ಲಿರುವ ಕಬ್ಬಿಣದ ಅಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಆಗದಿರುವ ಶರೀರದ ಅಸಾಮರ್ಥ್ಯಗಳ ಕಾರಣದಿಂದಾಗಿ ಕಬ್ಬಿಣದ ಅಂಶದ ಕೊರತೆ ಬಾಧಿಸುತ್ತದೆ. ಈ ಸ್ಥಿತಿಯಲ್ಲಿ , ಕ್ರಮೇಣ ಶರೀರವು ಆರೋಗ್ಯವಂತ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಅಸಮರ್ಥವಾಗುತ್ತದೆ. ಸಾಕಷ್ಟು ಕಬ್ಬಿಣದ ಅಂಶಗಳು ಇಲ್ಲದೇ ಹೋದಾಗ, ಶರೀರವು ತಾನು ಈ ಹಿಂದೆ ಸಂಗ್ರಹಿಸಿದ ಕಬ್ಬಿಣದ ಅಂಶಗಳನ್ನು ಉಪಯೋಗಿಸಲು ಆರಂಭಿಸುತ್ತದೆ. ಕ್ರಮೇಣ ಈ ಸಂಗ್ರಹಿತ ಅಂಶವೂ ಸಹ ಮುಗಿದು ಹೋಗುತ್ತದೆ; ಆಗ ಶರೀರದಲ್ಲಿ ಹೆಮೊಗ್ಲೋಬಿನ್‌ ಅಂಶವೂ ಸಹ ಕುಸಿಯುತ್ತದೆ, ಅಥವಾ ಹೆಮೊಗ್ಲೋಬಿನ್‌ ಕೊರತೆ ಕಾಣಿಸಿಕೊಳ್ಳುತ್ತದೆ. ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆಯ ಲಕ್ಷಣಗಳೇನು? ಕಬ್ಬಿಣದ ಕೊರತೆಯ ಚಿಹ್ನೆ ಮತ್ತು ಲಕ್ಷಣಗಳು ಎಂದರೆ, ಉಗುರುಗಳು ಚಪ್ಪಟೆಯಾಗುವುದು, ನಾಲಗೆಯಲ್ಲಿ ಹುಣ್ಣುಗಳಾಗುವುದು, ಬಾಯಿಯ ಬದಿಗಳಲ್ಲಿ ಬಿರುಕುಗಳಾಗುವುದು, ಪ್ಲೀಹವು ಹಿಗ್ಗುವುದು ಮತ್ತು ಆಗಾಗ ಸೋಂಕುಗಳು ಕಾಣಿಸಿಕೊಳ್ಳುವುದು. ಕಬ್ಬಿಣದ ಅಂಶದ ಕೊರತೆ ಇರುವ ಜನರಿಗೆ ಅಸಹಜ ರೀತಿಯಲ್ಲಿ ಆಹಾರವಲ್ಲದ ಅಂಶಗಳನ್ನು ತಿನ್ನುವ ಹಂಬಲಗಳಿರುತ್ತವೆ, ಅಂದರೆ ಮಂಜುಗಡ್ಡೆ, ಕೊಳೆ, ಪೈಂಟ್‌ ಅಥವಾ ಗಂಜಿ... ಇತ್ಯಾದಿಗಳು. ಈ ಹಂಬಲಕ್ಕೆ ಪಿಕಾ (ಟಜಿcಚ) ಅಥವಾ ವಿಷಾಹಾರ ಸೇವನೆ ಎಂಬ ಹೆಸರೂ ಇದೆ. ಕಬ್ಬಿಣದ ಅಂಶದ ಕೊರತೆ ಇರುವ ಕೆಲವು ಜನರಿಗೆ ವಿರಾಮರಹಿತ ಕಾಲಿನ ಲಕ್ಷಣಗಳೂ ಇರುತ್ತವೆ. ಈ ಅಸಹಜತೆ ಇರುವ ಜನರಿಗೆ ಕಾಲುಗಳನ್ನು ಅಲ್ಲಾಡಿಸುವ ತೀವ್ರ ತುರ್ತು ಇರುತ್ತದೆ. ಹೆಚ್ಚಾಗಿ ಕಾಲಿನಲ್ಲಿ ಉಂಟಾಗುವ ವಿಚಿತ್ರ ಮತ್ತು ಅಹಿತಕರ ಸಂವೇದನೆಯಿಂದಾಗಿ ಕಾಲನ್ನು ಅಲ್ಲಾಡಿಸುವ ತುರ್ತು ಉಂಟಾಗುತ್ತದೆ. ಈ ರೀತಿಯ ವಿರಾಮ ರಹಿತ ಕಾಲಿನ ಅಸಹಜತೆ ಇರುವ ಜನರಿಗೆ, ನಿದ್ದೆ ಮಾಡಲು ಕಷ್ಟವಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಹೆಮೊಗ್ಲೋಬಿನ್‌ ಕೊರತೆ ಇದ್ದರೆ , ಅಂದರೆ, ಹೆಮೊಗ್ಲೋಬಿನ್‌ಮಟ್ಟವು 9-11ಞಜ/ಛl ಮಧ್ಯೆ ಇದ್ದಾಗ, ವ್ಯಕ್ತಿಯು ಸುಲಭವಾಗಿ ನಿಶ್ಯಕ್ತನಾಗುತ್ತಾನೆ, ಕೆಲಸ ಮಾಡುವ ಸಾಮರ್ಥ್ಯ ಕುಸಿಯುತ್ತದೆ, ಏಕಾಗ್ರತೆ ಕಡಿಮೆಯಾಗುತ್ತದೆ, ಮಕ್ಕಳಲ್ಲಿ ಕಲಿಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ತಲೆಗೂದಲು ಉದುರುತ್ತದೆ. ಮಧ್ಯಮ ಪ್ರಮಾಣದ ಹೆಮೊಗ್ಲೋಬಿನ್‌ಕೊರತೆ ಇದ್ದಾಗ, ಅಂದರೆ ಹೆಮೊಗ್ಲೋಬಿನ್‌ ಮಟ್ಟವು 7-9ಞಜ/ಛl ಮಧ್ಯೆ ಇದ್ದಾಗ, ಮೇಲೆ ಹೇಳಿದ ಲಕ್ಷಣಗಳ ಜೊತೆಗೆ, ವ್ಯಕ್ತಿಗೆ ನೋವು ನಿವಾರಕಗಳಿಗೆ ಕಡಿಮೆಯೇ ಆಗದ ತೀವ್ರ ತಲೆನೋವು ಬಾಧಿಸಬಹುದು. ಮಕ್ಕಳು ಸಾಮಾನ್ಯವಾಗಿ ತರಗತಿಯಲ್ಲಿ ಏಕಾಗ್ರತೆಯನ್ನು ಸಾಧಿಸಲಾಗದ ತೊಂದರೆಯನ್ನು ಎದುರಿಸಬಹುದು ಮತ್ತು ಪರೀಕ್ಷೆಯಲ್ಲಿ ಅವರ ನಿರ್ವಹಣೆ ಕುಸಿಯಬಹುದು. ತೀವ್ರ ರಕ್ತ ಹೀನತೆ ಇದ್ದಾಗ, ಅಂದರೆ ಹೆಮೊಗ್ಲೋಬಿನ್‌ ಮಟ್ಟವು 6-7 ಞಜ/ಛl ಮಧ್ಯೆ ಇದ್ದಾಗ, ವ್ಯಕ್ತಿಯ ಉಸಿರು ಕಿರಿದಾಗಬಹುದು, ಎದೆನೋವು ಉಂಟಾಗಬಹುದು ಮತ್ತು ತಲೆಸುತ್ತು ಬರಬಹುದು. ಕಬ್ಬಿಣದ ಅಂಶದ ತೀವ್ರ ಕೊರತೆಯಿಂದಾಗಿ, ವ್ಯಕ್ತಿಗೆ ಹೃದಯದ ತೊಂದರೆಗಳು, ಸೋಂಕುಗಳು, ಮಕ್ಕಳಲ್ಲಿ ಬೆಳವಣಿಗೆ ಮತ್ತು ವಿಕಸನದ ತೊಂದರೆಗಳು ಮತ್ತು ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಯಾರಿಗೆಲ್ಲಾ ಕಬ್ಬಿಣದ ಅಂಶ ಕೊರತೆಯ ಅಪಾಯವಿದೆ? 1. ನವಜಾತ ಶಿಶುಗಳು ಮತ್ತು ಎಳೆಯ ಮಕ್ಕಳು. 2. ಅನಿಯಮಿತ ಋತುಚಕ್ರ ಮತ್ತು ಅಧಿಕ ಮಾಸಿಕ ಸ್ರಾವವಿರುವ ಮಹಿಳೆಯರಲ್ಲಿ, ಗರ್ಭಿಣಿಯರಲ್ಲಿ ಮತ್ತು ಹಾಲೂಡಿಸುವ ತಾಯಂದಿರಿಗೆ. 3. ವೃದ್ಧರಿಗೆ. 4. ತೂಕವನ್ನು ಇಳಿಸಿಕೊಳ್ಳಲು ಕಠಿನ ಪಥ್ಯದಲ್ಲಿ ತೊಡಗಿರುವ ಜನರಿಗೆ. 5. ಹೆಚ್ಚು ಕಳಪೆ ಆಹಾರಗಳನ್ನು ಸೇವಿಸುವವರಿಗೆ ಮತ್ತು ಕಾಬೊìನೇಟೆಡ್‌ ಲಘುಪಾನೀಯಗಳನ್ನು ಸೇವಿಸುವವರಿಗೆ. ಕಬ್ಬಿಣದ ಅಂಶದ ರಕ್ತ ಹೀನತೆಯ ತಪಾಸಣೆ ಹೇಗೆ ಮಾಡುತ್ತಾರೆ? ರಕ್ತ ಪರೀಕ್ಷೆಯಲ್ಲಿ, ದೇಹದಲ್ಲಿರುವ ಕಬ್ಬಿಣದ ಅಂಶದ ಸಂಗ್ರಹವನ್ನು ವಿಶ್ಲೇಷಣೆ ಮಾಡುವ ಮೂಲಕ, ಕಬ್ಬಿಣದ ಅಂಶದ ರಕ್ತ ಹೀನತೆಯ ತಪಾಸಣೆ ಮಾಡುತ್ತಾರೆ. ಕಬ್ಬಿಣದ ಅಂಶದ ರಕ್ತ ಹೀನತೆಗೆ ಕಾರಣಗಳೇನು? ಅಧಿಕ ರಕ್ತಸ್ರಾವ, ಕಳಪೆ ಆಹಾರ ಅಥವಾ ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ಸಾಕಷ್ಟು ಹೀರಲು ಆಗದಿರುವ ಅಸಾಮರ್ಥ್ಯ ಅಥವಾ ಹೆಚ್ಚಿದ ಆವಶ್ಯಕತೆ... ಇವೆಲ್ಲವೂ ಕಬ್ಬಿಣದ ಅಂಶದ ರಕ್ತ ಹೀನತೆ ಕಾಣಿಸಿಕೊಳ್ಳಲು ಇರುವ ಸಾಮಾನ್ಯ ಕಾರಣಗಳು. ರಕ್ತ ನಷ್ಟವಾಗುವಿಕೆ ಅಥವಾ ರಕ್ತ ಸ್ರಾವ ಅಧಿಕ ರಕ್ತ ನಷ್ಟವಾದರೆ ಅಥವಾ ಅಧಿಕ ರಕ್ತ ಸ್ರಾವವಾದರೆ, ದೇಹದಲ್ಲಿರುವ ಕಬ್ಬಿಣದ ಅಂಶವೂ ಸಹ ನಷ್ಟವಾಗುತ್ತದೆ. ನಷ್ಟವಾದ ಕಬ್ಬಿಣದ ಅಂಶಕ್ಕೆ ಬದಲಿಯಾಗಿ, ನಮ್ಮ ದೇಹದಲ್ಲಿ ಸಾಕಷ್ಟು ಕಬ್ಬಿಣದ ಅಂಶದ ಸಂಗ್ರಹ ಇಲ್ಲದಿದ್ದರೆ, ನಮ್ಮಲ್ಲಿ ಕಬ್ಬಿಣದ ಅಂಶದ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ, ಅದರಲ್ಲೂ ವಿಶೇಷವಾಗಿ ಋತು ಸ್ರಾವದ ಅವಧಿ ದೀರ್ಘ‌ವಿರುವ ಮಹಿಳೆಯರಲ್ಲಿ ಅಥವಾ ತೀವ್ರವಾಗಿ ರಕ್ತ ಸ್ರಾವವಾಗುವ ಸಮಸ್ಯೆ ಇರುವವರಲ್ಲಿ, ಅಂಡಾಶಯಗಳಲ್ಲಿ ರಕ್ತಸ್ರಾವವಾಗುವ ನಾರುಗಡ್ಡೆಗಳು ಇರುವ ಮಹಿಳೆಯರ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಕಾಣಿಸಿಕೊಳ್ಳುತ್ತದೆ. ಪ್ರಸವದ ಸಮಯದಲ್ಲಿ ಸಂಭವಿಸುವ ಅಧಿಕ ರಕ್ತ ಸ್ರಾವವು ಮಹಿಳೆಯರಲ್ಲಿ ರಕ್ತ ಹೀನತೆಯನ್ನು ಉಂಟು ಮಾಡುವ ಅಥವಾ ಕಬ್ಬಿಣದ ಅಂಶದ ಕೊರತೆ ಉಂಟು ಮಾಡುವ ಮತ್ತೂಂದು ಕಾರಣ. ಆಂತರಿಕ ಸ್ರಾವಗಳ (ದೇಹದ ಒಳಭಾಗದಲ್ಲಿ ರಕ್ತ ಸ್ರಾವವಾಗುವುದು) ಕಾರಣದಿಂದಲೂ ಸಹ ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆ ಬಾಧಿಸಬಹುದು. ಈ ರೀತಿಯ ರಕ್ತ ನಷ್ಟವು ಯಾವಾಗಲೂ ಸ್ಪಷ್ಟ ರೂಪದಲ್ಲಿರದೆ, ನಿಧಾನ ಗತಿಯಲ್ಲಿ ಸಾಗಬಹುದು. ಆಂತರಿಕ ರಕ್ತ ಸ್ರಾವಗಳಿಗೆ ಇರುವ ಕೆಲವು ಕಾರಣಗಳು ಅಂದರೆ: < ಕರುಳು ಅಥವಾ ಹೊಟ್ಟೆಯ ಹುಣ್ಣುಗಳಿಂದ ರಕ್ತ ಸ್ರಾವವಾಗುತ್ತಿರುವುದು. < ಮೂಲವ್ಯಾಧಿ ಮತ್ತು ಫಿಸ್ತುಲಾ ವ್ಯಾಧಿ < ನಿಯಮಿತವಾಗಿ ಆಸ್ಪಿರಿನ್‌ ಅಥವಾ ಇತರ ಔಷಧಿಗಳನ್ನು, ಅಂದರೆ ಸ್ಟೀರಾಯ್ಡ ರಹಿತ ಉರಿಯೂತ ನಿರೋಧಕ ಔಷಧಿಗಳನ್ನು (ಉದಾಹರಣೆಗೆ ಇಬುಪ್ರೋಫೆನ್‌ ಮತ್ತು ನೆಪ್ರಾಕ್ಸಿನ್‌) ಉಪಯೋಗಿಸುವುದು. < ಮೂತ್ರಜನಕಾಂಗವ್ಯೂಹದ ರಕ್ತ ಸ್ರಾವ. < ತೀವ್ರ ಜಖಂಗಳು, ಶಸ್ತ್ರಚಿಕಿತ್ಸೆಗಳು ಅಥವಾ ಆಗಾಗ ರಕ್ತ ತೆಗೆಯವಿಕೆಯಿಂದ ಆಗುವ ರಕ್ತ ಸ್ರಾವಗಳ ಕಾರಣದಿಂದಲೂ ಸಹ ಕಬ್ಬಿಣದ ಅಂಶದ ಕೊರತೆಯ ರಕ್ತ ಹೀನತೆಯು ಬಾಧಿಸಬಹುದು.ಹೆಚ್ಚಿದ ಆವಶ್ಯಕತೆ ಜೀವನದ ಕೆಲವು ಘಟ್ಟಗಳಲ್ಲಿ, ಅಂದರೆ ಗರ್ಭಧಾರಣೆ ಮತ್ತು ಬಾಲ್ಯದ ಅವಧಿಯಲ್ಲಿ ಆಹಾರದ ಮೂಲಕ ಸಾಕಷ್ಟು ಕಬ್ಬಿಣದ ಅಂಶವನ್ನು ಪಡೆಯುವುದು ಅಸಾಧ್ಯವಾಗಬಹುದು. ಬೆಳವಣಿಗೆ ಮತ್ತು ವಿಕಾಸಕ್ಕಾಗಿ, ಈ ಅವಧಿಯಲ್ಲಿ ಕಬ್ಬಿಣದ ಅಂಶಗಳ ಆವಶ್ಯಕತೆ ಹೆಚ್ಚಾಗಿರುತ್ತದೆ. ಸಾಕಷ್ಟು ಕಬ್ಬಿಣದ ಅಂಶಗಳನ್ನು ಹೀರಲು ಆಗದಿರುವ ಅಸಾಮರ್ಥ್ಯ ನಮ್ಮ ಆಹಾರದಲ್ಲಿ ಸಾಕಷ್ಟು ಕಬ್ಬಿಣದ ಅಂಶ ಇದ್ದರೂ ಸಹ, ನಮ್ಮ ಶರೀರಕ್ಕೆ ಅದನ್ನು ಹೀರುವ ಅಸಾಮರ್ಥ್ಯ ಇರಬಹುದು. ಕರುಳಿನ ಶಸ್ತ್ರ ಚಿಕಿತ್ಸೆ ಆದಾಗ ( ಅಂದರೆ ಗ್ಯಾಸ್ಟ್ರಿಕ್‌ ಬೈಪಾಸ್‌), ಕರುಳಿನ ಕಾಯಿಲೆ ಇದ್ದಾಗ (ಅಂದರೆ ಕ್ರಾನ್ಸ್‌ ಕಾಯಿಲೆ ಅಥವಾ ಸೆಲಿಯಾಕ್‌ ಕಾಯಿಲೆ), ಈ ರೀತಿ ಆಗುತ್ತದೆ. ಅಂದರೆ, ಕಬ್ಬಿಣದ ಅಂಶವನ್ನು ಹೀರುವ ಶರೀರದ ಸಾಮರ್ಥ್ಯ ಕುಸಿಯುತ್ತದೆ. ಅಂದರೆ ಅಂಟಾಸಿಡ್‌ಗಳ ಅಧಿಕ ಮತ್ತು ಅನಿಯಮಿತ ಸೇವನೆಯು, ಹೊಟ್ಟೆಯ ಆಮ್ಲದ ಮಟ್ಟವನ್ನು ತಗ್ಗಿಸುತ್ತದೆ ಮತ್ತು ಕಬ್ಬಿಣದ ಅಂಶದ ಹೀರುವಿಕೆಗೆ ತಡೆ ಉಂಟು ಮಾಡುತ್ತದೆ. ಯಾವ ವಿಶೇಷ ಪರೀಕ್ಷೆಗಳನ್ನು ನಡೆಸುವ ಅಗತ್ಯವಿದೆ? ನಿಮ್ಮ ರೋಗಲಕ್ಷಣಗಳನ್ನು ಆಧರಿಸಿ ಕೊಂಡು, ಯಾವ ಕಾರಣದಿಂದಾಗಿ ಕೊರತೆ ಕಾಣಿಸಿಕೊಂಡಿದೆ ಎಂಬುದನ್ನು ಪತ್ತೆ ಮಾಡಲು ವೈದ್ಯರು ಕೆಲವು ಪರೀಕ್ಷೆಗಳನ್ನು ಸೂಚಿಸಬಹುದು. ಅವುಗಳೆಂದರೆ, ಹೊಟ್ಟೆಯ ಸ್ಕ್ಯಾನಿಂಗ್‌, ವಿಶೇಷವಾಗಿ ಅಂಡಾಶಯದಲ್ಲಿನ ಅಸಹಜತೆಗಳನ್ನು ನೋಡಲು. ಹೊಟ್ಟೆ ಮತ್ತು ಕರುಳಿನ ಸ್ಥಿತಿಗಳನ್ನು ತಿಳಿಯಲು ಮಾಡುವ ಎಂಡೊಸ್ಕೋಪಿಕ್‌ ಪ್ರಕ್ರಿಯೆಗಳು, ಮತ್ತು ರಕ್ತದಲ್ಲಿ ಹೆಚ್ಚುವರಿ ಸಮಸ್ಯೆಗಳು ಇವೆಯೇ ಎಂದು ನೋಡಲು ಮಾಡುವ ಅಸ್ಥಿ ಮಜ್ಜೆಯ ಪರೀಕ್ಷೆ ಇತ್ಯಾದಿ. ಕಬ್ಬಿಣದ ಅಂಶದ ರಕ್ತಹೀನತೆಗೆ ಚಿಕಿತ್ಸೆ ಹೇಗೆ ಮಾಡುತ್ತಾರೆ? ಕಬ್ಬಿಣದ ಅಂಶದ ರಕ್ತಹೀನತೆಯ ಕಾರಣ ಮತ್ತು ತೀವ್ರತೆಗಳನ್ನು ಆಧರಿಸಿಕೊಂಡು, ಅದಕ್ಕೆ ಚಿಕಿತ್ಸೆಯನ್ನು ನೀಡಲಾಗುವುದು. ಆಹಾರದ ಬದಲಾವಣೆಗಳು, ಪೂರಣಗಳು, ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಯ ರೂಪದ ಚಿಕಿತ್ಸೆಗಳನ್ನು ನೀಡಬಹುದು. ತೀವ್ರ ರೂಪದ ಕಬ್ಬಿಣದ ಕೊರತೆಯ ರಕ್ತಹೀನತೆಗೆ ರಕ್ತ ಪೂರಣ, ಕಬ್ಬಿಣದ ಇಂಜೆಕ್ಷನ್‌ಗಳು ಅಥವಾ ಇಂಟ್ರಾವೇನಸ್‌ ಐರನ್‌ ಥೆರಪಿಯಂತಹ ಚಿಕಿತ್ಸೆ ಗಳನ್ನು ನೀಡುವುದು ಅನಿವಾರ್ಯವಾಗಬಹುದು. ಈ ಚಿಕಿತ್ಸೆಗಳಿಗೆ ಆಸ್ಪತ್ರೆಗೆ ದಾಖಲಾಗುವುದು ಆವಶ್ಯಕ ಎನಿಸಬಹುದು. ಹಿನ್ನೆಲೆಯಲ್ಲಿರುವ ರೋಗ ಕಾರಣಕ್ಕೆ ಚಿಕಿತ್ಸೆ ನೀಡುವುದು ಮತ್ತು ಕೆಂಪು ರಕ್ತ ಕಣಗಳು, ಹೆಮೊಗ್ಲೋಬಿನ್‌ಮತ್ತು ಕಬ್ಬಿಣದ ಅಂಶಗಳ ಸಹಜ ಮಟ್ಟವನ್ನು ಕಾಪಾಡಿಕೊಳ್ಳುವುದು ಕಬ್ಬಿಣದ ಅಂಶದ ಕೊರತೆಯ ರಕ್ತ ಹೀನತೆಯ ಚಿಕಿತ್ಸೆಯ ಪ್ರಮುಖ ಉದ್ದೇಶ. ಕಬ್ಬಿಣದ ಕೊರತೆಯ ರಕ್ತಹೀನತೆಗೆ ಸಂಪೂರ್ಣ ಚಿಕಿತ್ಸೆ ಸಾಧ್ಯದೆಯೇ? ಕಬ್ಬಿಣದ ಕೊರತೆಯ ರಕ್ತಹೀನತೆಗೆ ವೈದ್ಯರು ಸಾಮಾನ್ಯವಾಗಿ ಯಶಸ್ವೀ ಚಿಕಿತ್ಸೆಯನ್ನು ನೀಡುತ್ತಾರೆ. ಸಾಮಾನ್ಯ ಚಿಕಿತ್ಸೆಯಲ್ಲಿ ಕಬ್ಬಿಣದ ಅಂಶಗಳ ಪೂರಣಗಳನ್ನು ನೀಡುವುದು ಮತ್ತು ಹಿನ್ನೆಲೆಯಲ್ಲಿರುವ ರೋಗ ಕಾರಣಕ್ಕೆ ಚಿಕಿತ್ಸೆಯನ್ನು ನೀಡುವುದು ಸೇರಿದೆ. ತೀವ್ರ ರಕ್ತಹೀನತೆ ಇದ್ದಾಗ ಆಸ್ಪತ್ರೆಗೆ ದಾಖಲಾಗಿ, ಕಬ್ಬಿಣದ ಅಂಶಗಳ ಇಂಜೆಕ್ಷನ್‌ ಪಡೆಯುವಂತಹ ಚಿಕಿತ್ಸೆಗಳನ್ನು ಪಡೆಯಬೇಕಾಗಬಹುದು. ಸಾಮಾನ್ಯವಾಗಿ ಸೂಚಿಸುವ ಆಹಾರದ ಬದಲಾವಣೆಗಳು ಮತ್ತು ಪೂರಣಗಳು ಯಾವುವು? ಕಬ್ಬಿಣದ ಅಂಶಗಳ ಪೂರಣಗಳು ನಮ್ಮಲ್ಲಿನ ಕಬ್ಬಿಣದ ಅಂಶಗಳ ಕೊರತೆಯನ್ನು ಸೇವಿಸುವ ಒಂದು ತಿಂಗಳೊಳಗೆ ಸರಿದೂಗಿಸುತ್ತವೆ. ಈ ಪೂರಣಗಳು ಮಾತ್ರೆಗಳ ರೂಪದಲ್ಲಿ ಮತ್ತು ಮಕ್ಕಳಿಗೆ ಕೊಡುವ ಡ್ರಾಪ್ಸ್‌ ರೂಪದಲ್ಲಿ ದೊರೆಯುತ್ತವೆ. ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣದ ಅಂಶಗಳಿರುವುದೂ ಸಹ ಒಳ್ಳೆಯದಲ್ಲ, ಹಾಗಾಗಿ, ನಿಮ್ಮ ವೈದ್ಯರು ಶಿಫಾರಸು ಮಾಡಿದ ಅಷ್ಟೇ ಪ್ರಮಾಣದಲ್ಲಿ ಕಬ್ಬಿಣದ ಪೂರಣಗಳನ್ನು ತೆಗೆದುಕೊಳ್ಳಿ. ಈ ಕಬ್ಬಿಣದ ಪೂರಣ ಗಳನ್ನು ಮಕ್ಕಳ ಕೈಗೆ ಸಿಗದಂತೆ ಇರಿಸಿ. ಮಕ್ಕಳು ಅಧಿಕ ಪ್ರಮಾಣದಲ್ಲಿ ಕಬ್ಬಿಣದ ಪೂರಣ° ಸೇವಿಸದಂತೆ ಅವರನ್ನು ರಕ್ಷಿಸಿ. ಕಬ್ಬಿಣದ ಅಂಶಗಳ ಪೂರಣಗಳ ಸೇವನೆಯಿಂದ ಅಡ್ಡ ಪರಿಣಾಮಗಳೂ ಸಹ ಉಂಟಾಗಬಹುದು, ಅಂದರೆ ದಟ್ಟ ಬಣ್ಣದ ಮಲವಿಸರ್ಜನೆ, ಹೊಟ್ಟೆಯಲ್ಲಿ ಕಿರಿಕಿರಿ ಮತ್ತು ಎದೆ ಉರಿ... ಇತ್ಯಾದಿ. ಮಲಬದ್ಧತೆಯೂ ಉಂಟಾಗಬಹುದು. ಹೀಗಾದರೆ, ನಿಮ್ಮ ವೈದ್ಯರು ಮಲಪ್ರವೃತ್ತಿಯನ್ನು ಉತ್ತಮಗೊಳಿಸಲು ಔಷಧಿಗಳನ್ನು ಸೂಚಿಸಬಹುದು.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ