Skip to main content

ಸರ್ಪಸುತ್ತಿನ ನಂತರದ ನರವೇದನೆ

ಸರ್ಪಸುತ್ತಿನ ನಂತರದ ನರವೇದನೆ ಡಾ| ಶಿವಾನಂದ ಪೈ,ನರರೋಗ ತಜ್ಞರು ಕೆಎಂಸಿ, ಅಂಬೇಡ್ಕರ್‌ ವೃತ್ತ, ಮಂಗಳೂರು ಪೋಸ್ಟ್‌ ಹಪೆìಟಿಕ್‌ ನ್ಯುರಾಲ್ಜಿಯಾ ಅಂದರೆ, ಸರ್ಪಸುತ್ತಿನ ನಂತರ ನರಗಳಲ್ಲಿ ಕಾಣಿಸಿಕೊಳ್ಳುವ ನೋವು. ಇದನ್ನು ಸರ್ಪಸುತ್ತಿನ ನಂತರದ ನರವೇದನೆ ಎಂದು ಕರೆಯಬಹುದು. ಇದು ಹಪೆìಸ್‌ ಝೋಸ್ಟರ್‌ ಅಥವಾ ಸರ್ಪಸುತ್ತಿನ ಕಾಯಿಲೆಯಲ್ಲಿ ಕಂಡು ಬರುವ ಬಹಳ ಸಾಮಾನ್ಯ ತೊಂದರೆ. ಸ್ಥೂಲವಾಗಿ, ಸರ್ಪಸುತ್ತಿನ ಲಕ್ಷಣಗಳು ಅಥವಾ ಗುಳ್ಳೆಗಳು ಮರೆಯಾದ ಬಳಿಕ, ಅಂದರೆ ಸುಮಾರು ಮೂರು ತಿಂಗಳವರೆಗೆ ಬಾಧಿಸುವ ನೋವು ಎಂಬುದಾಗಿ ಇದನ್ನು ವಿವರಿಸಬಹುದು. ಸರ್ಪಸುತ್ತು ಅಥವಾ ಹಪೆìಸ್‌ ಝೋಸ್ಟರ್‌ ನರಗಳನ್ನು ಬಾಧಿಸುವ ವೈರಸ್‌ ಸೋಂಕು. ಇದರಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆಗಳು ಬಹಳ ನೋವಿನಿಂದ ಕೂಡಿರುತ್ತವೆ. ಸರ್ಪಸುತ್ತು ಬಾಧಿತವಾದ ನರಗಳು ಅಪರೂಪಕ್ಕೆ ಕೆಲವು ಸಲ ಕಾಯಿಲೆಯು ಗುಣವಾದ ಬಳಿಕವೂ ತೀವ್ರ ಯಾತನೆಯನ್ನು ಉಂಟು ಮಾಡುವುದಿದೆ. ಸರ್ಪಸುತ್ತಿನ ಗುಳ್ಳೆಗಳು, ಚರ್ಮದ ಮೇಲೆ ನೀರಿನ ಗುಳ್ಳೆಗಳ ಗೆರೆಗಳ ರೀತಿಯಲ್ಲಿ, ನರಗಳ ಮೇಲಿನ ಚರ್ಮದಲ್ಲಿ ಪಟ್ಟೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಪಟ್ಟೆಯು, ವೈರಸ್‌ ಚರ್ಮಕ್ಕೆ ಹರಡುವುದಕ್ಕೆ ಮೊದಲು, ಬಾಧಿತ ನರಗಳಿಗೆ ಹರಡುತ್ತದೆ. ಸರ್ಪಸುತ್ತು ಮಹಿಳೆ ಮತ್ತು ಪುರುಷರಿಬ್ಬರಲ್ಲಿಯೂ ಸಮಾನವಾಗಿ ಕಾಣಿಸಿಕೊಳ್ಳುತ್ತದೆ. ಚಿಕನ್‌ಪಾಕ್ಸ್‌ ಅಥವಾ ಸೀತಾಳೆ ಸಿಡುಬನ್ನು ಹರಡುವ ಅದೇ ವೈರಸ್‌ (ವೆರಿಸೆಲ್ಲಾ ಝೊàಸ್ಟರ್‌) ಈ ಕಾಯಿಲೆಯನ್ನೂ ಸಹ ಹರಡುತ್ತದೆ. ಸೀತಾಳೆ ಸಿಡುಬು ಸಾಮಾನ್ಯವಾಗಿ ಹದಿಹರೆಯದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ತುರಿಸುವ ನೀರಿನ ಗುಳ್ಳೆಗಳು ದೇಹದಾದ್ಯಂತ ಕಾಣಿಸಿಕೊಳ್ಳುತ್ತವೆ. ಒಂದು ಸಲ ಈ ಲಕ್ಷಣಗಳು ಮರೆಯಾದ ಬಳಿಕ, ವೆರಿಸೆಲ್ಲಾ ಝೊàಸ್ಟರ್‌ ವೈರಸ್‌ ಬೆನ್ನುಮೂಳೆಯ ಹತ್ತಿರದ ನರಗಳಲ್ಲಿ ತಳವೂರುತ್ತದೆ. ಅಂದರೆ ಇಲ್ಲಿ ವೈರಸ್‌ ಸುಪ್ತಾವಸ್ಥೆಯಲ್ಲಿ ಇರುತ್ತದೆ. ಸುಪ್ತಾವಸ್ಥೆಯಲ್ಲಿ ಇರುವ ಈ ವೈರಾಣು, ದೇಹದ ಪ್ರತಿರೋಧಕ ವ್ಯವಸ್ಥೆಯು ದುರ್ಬಲವಾದ ಕೂಡಲೇ ಮತ್ತೆ ಜಾಗೃತವಾಗುತ್ತದೆ. ಆ ಮೇಲೆ ವೈರಸ್‌ ನರಗಳಲ್ಲಿ ಬೆಳವಣಿಗೆ ಹೊಂದುತ್ತದೆ ಮತ್ತು ಈ ಕಾರಣದಿಂದಾಗಿ ತೀವ್ರ ನೋವು ಬಾಧಿಸುತ್ತದೆ. ಯಾವಾಗ ವೈರಸ್‌ ಚರ್ಮಕ್ಕೆ ಹರಡುತ್ತದೆಯೋ, ಆಗ ಚರ್ಮದ ಮೇಲೆ ಸರ್ಪಸುತ್ತಿನ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಲಕ್ಷಣಗಳು ಮರೆಯಾಗುವವರೆಗೂ ಕಾಯಿಲೆಯ ತೀವ್ರಸ್ಥಿತಿಯು ಮುಂದುವರಿ ಯುತ್ತದೆ. ಸಾಮಾನ್ಯವಾಗಿ ಗುಳ್ಳೆಗಳು ಒಮ್ಮಿಂದೊಮ್ಮೆಗೇ ಕಾಣಿಸಿಕೊಂಡು, ಕೆಲವು ವಾರಗಳವರೆಗೆ ನೋವು ಇರುತ್ತದೆ. ಪೋಸ್ಟ್‌ ಹಪೆìಟಿಕ್‌ ನ್ಯುರಾಲ್ಜಿಯಾವನ್ನು ಸರ್ಪಸುತ್ತು ಕಾಯಿಲೆಯ ತೀವ್ರಸ್ಥಿತಿಯ ನಂತರ ನರಗಳಲ್ಲಿ ಮರುಕಳಿಸುವ ನೋವು ಎಂಬುದಾಗಿ ವಿವರಿಸಬಹುದು. ಆದರೆ ನಿಖರವಾಗಿ ಯಾವ ಘಟ್ಟದಲ್ಲಿ ತೀವ್ರ ಸರ್ಪಸುತ್ತು, ಪೋಸ್ಟ್‌ ಹಪೆìಟಿಕ್‌ ನ್ಯುರಾಲ್ಜಿಯಾ ಆಗಿ ಪರಿವರ್ತಿತವಾಗುತ್ತದೆ ಹೇಳುವುದು ಅಸಾಧ್ಯ. ಕೆಲವು ತಜ್ಞರ ಪ್ರಕಾರ, ಸರ್ಪಸುತ್ತಿನ ತೀವ್ರ ನೋವು ಕೊನೆಗೊಂಡ ಮೂರು ತಿಂಗಳ ಬಳಿಕ, ಅಂದರೆ ಲಕ್ಷಣಗಳೆಲ್ಲ ಮರೆಯಾದ ಬಳಿಕ ಪೋಸ್ಟ್‌ ಹಪೆìಟಿಕ್‌ ನ್ಯುರಾಲ್ಜಿಯಾ ಕಾಣಿಸಿಕೊಳ್ಳುತ್ತದೆ ಅಥವಾ ಚರ್ಮದಲ್ಲಿ ಲಕ್ಷಣಗಳು ಕಾಣಿಸಿಕೊಂಡ ಆರಂಭದಿಂದಲೇ 3ರಿಂದ 6ತಿಂಗಳ ವರೆಗೆ ನೋವು ಮರುಕಳಿಸುತ್ತದೆ ಎಂಬುದು ಒಂದು ವಾದವಾದರೆ, ಚರ್ಮದಲ್ಲಿ ಗುಳ್ಳೆಗಳು ಕಾಣಿಸಿಕೊಂಡ ನಾಲ್ಕು ವಾರಗಳ ನಂತರ ನೋವು ಆಗಾಗ ಮರುಕಳಿಸುತ್ತದೆ ಇದು ಪೋಸ್ಟ್‌ ಹಪೆìಟಿಕ್‌ ನ್ಯುರಾಲ್ಜಿಯಾ ಎಂಬುದು ಇನ್ನು ಕೆಲವರ ಅನಿಸಿಕೆ. ಪೋಸ್ಟ್‌ ಹಪೆìಟಿಕ್‌ ನ್ಯುರಾಲ್ಜಿಯಾ ಅಥವಾ ಸರ್ಪಸುತ್ತಿನ ಅನಂತರದ ನರವೇದನೆ ಅಥವಾ ನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ, ಇದರ ಬಾಧೆಗೊಳಗಾದ ಸುಮಾರು 11-15%ನಷ್ಟು ಜನರು ನೋವಿನ ಕ್ಲಿನಿಕ್‌ಗೆ ದಾಖಲಾಗಬೇಕಾಗುತ್ತದೆ. ಬಾಧೆಗೆ ಕಾರಣವಾಗುವ ಅಂಶಗಳು ಚಿಕನ್‌ ಪಾಕ್ಸ್‌ ಅಥವಾ ಸೀತಾಳೆ ಸಿಡುಬನ್ನು ಉಂಟು ಮಾಡುವ ವೈರಸ್‌ ಸರ್ಪಸುತ್ತನ್ನೂ ಉಂಟು ಮಾಡುವ ಕಾರಣದಿಂದ, ಈ ಹಿಂದೆ ಚಿಕನ್‌ ಪಾಕ್ಸ್‌ ಆಗಿದ್ದ ಜನರಿಗೆ ಸರ್ಪಸುತ್ತು ಆಗುವ ಸಾಧ್ಯತೆಗಳು ಇವೆ. ವ್ಯಕ್ತಿಯ ದೇಹದಲ್ಲಿ ಪ್ರತಿರಕ್ಷಣಾ ಶಕ್ತಿ ಕಡಿಮೆಯಾದ ಬಳಿಕ ಸರ್ಪಸುತ್ತು ಕಾಣಿಸಿಕೊಳ್ಳುತ್ತದೆ. ಮನುಷ್ಯರಿಗೆ ವಯಸ್ಸಾಗುತ್ತಿದ್ದಂತೆ, ಸಹಜ ವಾಗಿಯೇ ಅವರ ದೇಹದ ಪ್ರತಿರಕ್ಷಣಾ ಶಕ್ತಿಯು ದುರ್ಬಲಗೊಳ್ಳುತ್ತದೆ. ಹಾಗಾಗಿ, ವಯ ಸ್ಸಾದವರಿಗೆ ಸರ್ಪಸುತ್ತು ಆಗುವ ಅಪಾಯಗಳ ಸಾಧ್ಯತೆ ಹೆಚ್ಚು. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲ ಗೊಳಿಸುವ ಯಾವುದೇ ಅಂಶಗಳು - ಅಂದರೆ ಏಡ್ಸ್‌, ಮಧುಮೇಹ, ಹಾಡಿRನ್ಸ್‌ ಕಾಯಿಲೆ, ರಕ್ತದ ಕ್ಯಾನ್ಸರ್‌ ಮತ್ತು ಕೆಲವು ರೀತಿಯ ಔಷಧಿಗಳಾದ ಸ್ಟೀರಾಯ್ಡ್ಸ್ ಇತ್ಯಾದಿಗಳು ಸರ್ಪಸುತ್ತು ಆಗುವ ಅಪಾಯವನ್ನು ಹೆಚ್ಚಿಸುತ್ತವೆ. ಮನುಷ್ಯರಿಗೆ ವಯಸ್ಸಾದ ಮೇಲೆ ಸರ್ಪಸುತ್ತು ಕಾಯಿಲೆ ಆದರೆ, ಅವರಿಗೆ ಸರ್ಪಸುತ್ತಿನ ನಂತರದ ನ್ಯುರಾಲ್ಜಿಯಾ ಅಥವಾ ನರವೇದನೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ವಯಸ್ಸಾಗುವಿಕೆಗೆ ಸಂಬಂಧಿಸಿದ ಇಂತಹ ಪ್ರಕರಣಗಳು ಹೆಚ್ಚುವುದಷ್ಟೇ ಅಲ್ಲದೆ, ಹಿರಿಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಸರ್ಪ ಸುತ್ತಿನ ನಂತರದ ನೋವಿನ ತೀವ್ರತೆ ಮತ್ತು ಅವಧಿಯೂ ಹೆಚ್ಚಾಗಿರುತ್ತದೆ. ಹದಿಹರೆಯದವರಿಗೂ ಸಹ ಸರ್ಪಸುತ್ತು ಮತ್ತು ಆ ಬಳಿಕದ ನರವೇದನೆ ಕಾಣಿಸಿಕೊಳ್ಳಬಹುದು; ಆದರೆ ಅದು ಬಹಳ ಅಪರೂಪ. ಸರ್ಪಸುತ್ತು ಮತ್ತು ಆ ಬಳಿಕದ ನರವೇದನೆಯ ತೊಡಕನ್ನು ಹೆಚ್ಚಿಸುವ ಇನ್ನಿತರ ಅಪಾಯಗಳೆಂದರೆ, ಒತ್ತೂತ್ತಾಗಿ ಕಾಣಿಸಿಕೊಳ್ಳುವ ಸರ್ಪಸುತ್ತಿನ ಗುಳ್ಳೆಗಳದ್ದು. ಅಧ್ಯಯನಗಳು ಹೇಳುವ ಪ್ರಕಾರ, ಕಾಯಿಲೆಯ ಆರಂಭಿಕ ಹಂತದಲ್ಲಿ ಬಹಳ ನೋವು ಇದ್ದ ರೋಗಿಗಳಿಗೆ, ಸರ್ಪಸುತ್ತಿನ ಅನಂತರದ ನರವೇದನೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಗುಳ್ಳೆಗಳ ತೀವ್ರತೆ ಮತ್ತು ಆ ಅವಧಿಯಲ್ಲಿ ರೋಗಿಯನ್ನು ಬಾಧಿಸುವ ಮಾನಸಿಕ ಕಿರಿಕಿರಿಗಳೂ ಸಹ ಅಪಾಯ ಪೂರಕ ಅಂಶಗಳೇ ಆಗಿವೆ. ಇಷ್ಟು ಮಾತ್ರವಲ್ಲದೆ, ಸರ್ಪಸುತ್ತು ಬಾಧಿತನಾದ ರೋಗಿಯ ಹಣೆ ಮತ್ತು ಕಣ್ಣುಗಳೂ ಸಹ ರೋಗದ ಪ್ರಭಾವಕ್ಕೆ ಒಳಗಾಗುತ್ತವೆ. ಈ ಸ್ಥಿತಿಗೆ, ಆಪ್‌ಥಾಲಿ¾ಕ್‌ ಸರ್ಪಸುತ್ತು ಎಂದು ಹೆಸರು. ಸರ್ಪಸುತ್ತಿನ ನಂತರ ನರವೇದನೆ ಕಾಣಿಸಿಕೊಂಡರೆ, ಹೀಗಾಗುವ ಅಪಾಯ ಇನ್ನೂ ಹೆಚ್ಚು. ಸರ್ಪಸುತ್ತಿನ ನಂತರದ ನರವೇದನೆಯ ಲಕ್ಷಣಗಳು ಸರ್ಪಸುತ್ತು ಕಾಯಿಲೆಯು ದೇಹದ ಒಂದು ಬದಿಯಲ್ಲಿ ಪಟ್ಟಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಗುಳ್ಳೆಗಳು ಸಾಮಾನ್ಯವಾಗಿ ಎದೆಯ ಮೇಲೆ ಕಾಣಿಸಿಕೊಳ್ಳುತ್ತವೆ, ಆದರೆ ಈ ಗುಳ್ಳೆಗಳು ಹಣೆ, ಹೊಟ್ಟೆ ಅಥವಾ ದೇಹದ ಇನ್ನಾವುದೇ ಭಾಗದಲ್ಲಿಯಾದರೂ ಕಾಣಿಸಿಕೊಳ್ಳಬಹುದು. ಗುಳ್ಳೆಗಳು ಕಾಣಿಸಿಕೊಳ್ಳುವುದಕ್ಕೆ ಸ್ವಲ್ಪ ದಿನಗಳ ಮೊದಲು ಸರ್ಪಸುತ್ತಿಗೆ ಸಂಬಂಧಿಸಿದ ನೋವು ಕಾಣಿಸಿಕೊಳ್ಳುತ್ತದೆ. ಕ್ರಮೇಣ ನೀರಿನ ಗುಳ್ಳೆಗಳು ಗುಣವಾಗುತ್ತವೆ ಮತ್ತು ಹೆರುಪೆಗಳು ಉದುರುತ್ತವೆ, ಆದರೆ ನೋವು ಹಾಗೆಯೇ ಮುಂದುವರಿಯಬಹುದು. ಸರ್ಪಸುತ್ತಿನ ಕಾಯಿಲೆಯ ಇನ್ನಿತರ ಲಕ್ಷಣಗಳು ಅಂದÃ,ೆ (ಅದು ಕಾಣಿಸಿಕೊಂಡಿರುವ ಜಾಗವನ್ನು ಆಧರಿಸಿಕೊಂಡು) ದುಗ್ಧ ಗ್ರಂಥಿಗಳ ಬಾವು, ದೃಷ್ಟಿಯ ಅಸಹಜತೆ, ರುಚಿಯ ಅಸಹಜತೆ, ಕಣ್ಣಿನ ರೆಪ್ಪೆಗಳು ಜೋತು ಬೀಳುವುದು, ಕಣ್ಣಿನ ಚಲನೆ ನಷ್ಟವಾಗುವುದು, ಶ್ರವಣ ಶಕ್ತಿ ಕಡಿಮೆಯಾಗುವುದು, ಸಂಧಿಗಳಲ್ಲಿ ನೋವು, ಜನನಾಂಗದಲ್ಲಿ ರೋಗಲಕ್ಷಣಗಳು ಮತ್ತು ಕಿಬ್ಬೊಟ್ಟೆಯಲ್ಲಿ ನೋವು. ಮುಖದ ಮೇಲಿನ ಭಾಗದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡರೆ, (ವಿಶೇಷವಾಗಿ ಮೂಗಿನ ತುದಿಯಲ್ಲಿ) ಅದು ಕಾಯಿಲೆಯು ಕಣ್ಣು ಮತ್ತು ಚರ್ಮವನ್ನು ಆವರಿಸಿರುವ ಸೂಚನೆಯಾಗಿರುತ್ತದೆ. ಇಂತಹ ರೋಗ ಸ್ಥಿತಿಯು ದೀರ್ಘ‌ಕಾಲಿಕ ಉರಿಯೂತ ಮತ್ತು ದೃಷ್ಟಿ ಹಾನಿಯಂತಹ ಅಪಾಯಗಳನ್ನು ತರಬಹುದು. ಒಂದು ವೇಳೆ ಈ ಲಕ್ಷಣಗಳು ಕಂಡು ಬಂದರೆ, ಆ ಕೂಡಲೆ ಕಣ್ಣಿನ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಸರ್ಪಸುತ್ತಿನ ಆರಂಭಿಕ ಹಂತದಲ್ಲಿ ತಲೆನೋವು, ವಾಕರಿಕೆ, ಜ್ವರ ಮತ್ತು ಚಳಿ ಇತ್ಯಾದಿ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮಾತ್ರವಲ್ಲದೆ, ದೇಹ ಅಥವಾ ಮುಖದ ಒಂದು ಭಾಗದಲ್ಲಿ ನೋವು, ಉರಿ, ತುರಿಕೆ ಅಥವಾ ಜುಮುಗುಡುವಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಆರಂಭಿಕ ಲಕ್ಷಣಗಳು ಇನ್ನಿತರ ಕಾಯಿಲೆಗಳ ಲಕ್ಷಣಗಳಂತೆಯೇ ಇರುವ ಕಾರಣಕ್ಕಾಗಿ, ಸರ್ಪಸುತ್ತು ಕಾಯಿಲೆಯು ಕೆಲವು ಸಲ ತಪ್ಪು ತಪಾಸಣೆಯಾಗುವುದಿದೆ. ಕೆಲವು ವೈದ್ಯರುಗಳಿಗೆ ಸರ್ಪಸುತ್ತು ಮತ್ತು ಇತರ ಕಾಯಿಲೆಗಳ ವ್ಯತ್ಯಾಸ ತಿಳಿಯುವುದಿಲ್ಲ ಅಥವಾ ಗೊಂದಲವಾಗುವುದಿದೆ. ಅಂದರೆ, ಫ‌ೂ ಜ್ವರದ ಆರಂಭಿಕ ಹಂತದ ಲಕ್ಷಣಗಳು ಹೀಗೆಯೇ ಇರುವ ಕಾರಣ ಗೊಂದಲಕ್ಕೆ ಅದೂ ಒಂದು ಕಾರಣ ಎಂದು ಹೇಳಬಹುದು. ಸರ್ಪಸುತ್ತಿಗೆ ವಿಶೇಷವಾಗಿ ಈ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡುವುದು ಅತ್ಯವಶ್ಯ. ಯಾಕೆಂದರೆ, ಈ ಹಂತದಲ್ಲಿ ಸರ್ಪಸುತ್ತಿಗೆ ಚಿಕಿತ್ಸೆ ನೀಡದಿದ್ದರೆ, ಆ ಬಳಿಕ ಸರ್ಪಸುತ್ತಿನ ನಂತರದ ನರವೇದನೆ ಕಾಣಿಸಿಕೊಳ್ಳುವ ಅಪಾಯ ಸಾಧ್ಯತೆ ಹೆಚ್ಚು. ಸರ್ಪಸುತ್ತಿಗೆ ಸಂಬಂಧಿಸಿದ ನೋವು ಸಾಮಾನ್ಯವಾಗಿ ಮರೆಯಾಗುತ್ತದೆ; ಆದರೆ ಗುರುತಿಸಿರುವಂತೆ, ಅನೇಕ ಹಿರಿಯ ವಯಸ್ಸಿನ ರೋಗಿಗಳಲ್ಲಿ ನೋವು ದೀರ್ಘ‌ಕಾಲಿಕವಾಗಿರುತ್ತದೆ ಮತ್ತು ಇದು ನಂತರದ ನರವ್ಯಾಧಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ರೋಗಿಗಳಿಗೆ ಈ ದೀರ್ಘ‌ಕಾಲಿಕ ನೋವು ಕ್ರಮೇಣ ಸರಿಹೋಗುತ್ತದೆ, ಆದರೆ ಕೆಲವರಿಗೆ ಹಾಗಾಗದೆ ನೋವು ದೀರ್ಘ‌ಕಾಲಿಕವಾಗಬಹುದು. ಸರ್ಪಸುತ್ತಿನ ಅನಂತರದ ನೋವು, ಸರ್ಪಸುತ್ತು ಆಗಿದ್ದ ಅದೇ ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ, ಈ ಭಾಗದ ಚರ್ಮದ ಸಂವೇದನಾಶೀಲತೆ ಸಹಜವಾಗಿರಬಹುದು, ಕಡಿಮೆ ಸಂವೇದನಾಶೀಲತೆ ಇರಬಹುದು ಅಥವಾ ಸಂವೇದನಾಶೀಲತೆ ಹೆಚ್ಚಾಗಬಹುದು. ನೋವು ಹೆಚ್ಚು - ಕಡಿಮೆಯಾಗುತ್ತಾ ಮುಂದುವರಿಯಬಹುದು ಅಥವಾ ಸೆಳೆತದ ರೂಪದಲ್ಲಿ ಕಾಣಿಸಿಕೊಳ್ಳಬಹುದು. ನೋವಿನ ವಿಧಗಳಲ್ಲೂ ವೈವಿಧ್ಯತೆ ಇರುತ್ತದೆ. ಅಂದರೆ, ನಿರಂತರವಾಗಿ ಬಾಧಿಸುವ ನೋವು ಉರಿಯುವಂತೆ, ಮಿಡಿಯುವಂತೆ, ಜುಮುಗುಡುವಂತೆ, ಇರಿಯುವಂತೆ, ಚುಚ್ಚುವಂತೆ, ತಿವಿಯುವಂತೆ, ತೀಕ್ಷ್ಣವಾಗಿ ಅಥವಾ ಯಾತನಾಮಯವಾಗಿರಬಹುದು. ನೋವು ಇರುವ ಜಾಗದಲ್ಲಿ ತೀವ್ರ ತುರಿಕೆಯೂ ಸಹ ಇರಬಹುದು. ಚರ್ಮವನ್ನು ಮುಟ್ಟಿದಾಗ ಅಥವಾ ಉಷ್ಣತೆಯಲ್ಲಿ ಬದಲಾವಣೆಗಳಾದಾಗ, ನೋವು ಕಾಣಿಸಿಕೊಳ್ಳಬಹುದು. ಪ್ರಚೋದನೆ ಗಳಿಂದ ಹುಟ್ಟಿಕೊಳ್ಳುವ ನೋವು ಹೆಚ್ಚು ಬಾಧೆ ಕೊಡುವುದಿಲ್ಲ. ಈ ನೋವಿಗೆ ಅಲ್ಲೋಡಿನಿಯಾ ಎಂದು ಹೆಸರು. ಕೆಲವು ರೋಗಿಗಳಿಗೆ ಸ್ಪರ್ಷಿಸದೆಯೇ ತೀವ್ರ ಸಂವೇದನಾ ನಷ್ಟ ಕಾಣಿಸಿಕೊಳ್ಳಬಹುದು - ಇದು ಇವೋಕ್ಡ್ ಅಲ್ಲೋಡಿನಿಯಾ. ಇನ್ನು ಕೆಲವು ರೋಗಿಗಳಿಗೆ ತೀವ್ರ ನೋವು ಮತ್ತು ಅಲ್ಲೋಡಿನಿಯಾ ಇದ್ದರೂ, ಸ್ವಲ್ಪವೇ ಸಂವೇದನೆ ನಷ್ಟವಾಗಬಹುದು ಅಥವಾ ಸಂವೇದನೆ ನಷ್ಟವಿಲ್ಲದಿರಬಹುದು. ಕೆಲವು ಸಲ ಸರ್ಪಸುತ್ತು ಕಾಣಿಸಿಕೊಂಡ ಆರಂಭಿಕ ಜಾಗಕ್ಕಿಂತಲೂ ನೋವು ವಿಸ್ತಾರವಾಗಿ ಹರಡಬಹುದು. ಸರ್ಪಸುತ್ತಿನ ಅನಂತರದ ನರವೇದನೆ ಕಾಣಿಸಿಕೊಂಡ ಜನರು ತೀವ್ರ ನೋವಿನ ಕಾರಣದಿಂದಾಗಿ ಖನ್ನತೆಗೆ ಒಳಗಾಗುತ್ತಾರೆ, ಆತಂಕಕ್ಕೊಳ ಗಾಗುತ್ತಾರೆ, ಅನಾಸಕ್ತರಾಗುತ್ತಾರೆ ಮತ್ತು ಅವರಿಗೆ ನಿದ್ರಿಸಲು ಕಷ್ಟವಾಗುತ್ತದೆ. ಒಂದುವೇಳೆ ರೋಗಿಯು ಈ ಭಾವನಾತ್ಮಕ ವ್ಯತ್ಯಾಸಗಳನ್ನು ಮತ್ತು ನಿದ್ದೆಯಲ್ಲಿನ ವ್ಯತ್ಯಾಸಗಳನ್ನು ವರದಿ ಮಾಡಿದರೆ, ರೋಗಿಗೆ ಉಪಶಮನ ದೊರಕಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು. ಯಾಕೆಂದರೆ ದೀರ್ಘ‌ಕಾಲಿಕ ನೋವು ಹೆಚ್ಚಾಗಿ ನಿದ್ದೆಯ ನಷ್ಟ, ನಿದ್ರಾಹೀನತೆಗಳನ್ನು ಉಂಟು ಮಾಡಬಹುದು; ಇದರಿಂದಾಗಿ ವ್ಯಕ್ತಿಗೆ ದೈನಂದಿನ ಸರಳ ಕೆಲಸಗಳನ್ನು ಪೂರೈಸಿಕೊಳ್ಳಲೂ ಸಹ ಕಷ್ಟವಾಗುತ್ತದೆ. ಸರ್ಪಸುತ್ತಿನ ಅನಂತರದ ನರವೇದನೆ : ತಪಾಸಣೆ ಸರ್ಪಸುತ್ತಿನ ಅನಂತರದ ನರವೇದನೆಯ ತಪಾಸಣೆ ಬಹಳ ಸರಳವಾದುದು. ಸರ್ಪಸುತ್ತಿನ ಗುಳ್ಳೆಗಳು ಕಾಣಿಸಿಕೊಂಡ ಜಾಗದಲ್ಲಿ ರೋಗಿಗೆ ದೀರ್ಘ‌ಕಾಲಿಕ ನೋವು ಕಾಣಿಸಿಕೊಂಡರೆ, ಅದು ಹರ್ಪಿಸ್‌ ಅನಂತರದ ನರವೇದನೆಯಾಗಿರುತ್ತದೆ. ಹರ್ಪಿಸ್‌ ಅನಂತರದ ನರವೇದನೆ ಕಾಣಿಸಿಕೊಳ್ಳುವ ಸ್ಥಳವು ಸರ್ಪಸುತ್ತಿನ ಗುಳ್ಳೆಗಳು ಕಾಣಿಸಿಕೊಂಡಿದ್ದ ಜಾಗಕ್ಕಿಂತ ಸಣ್ಣಕಿರಬಹುದು ಅಥವಾ ಅದಕ್ಕಿಂತ ಕೆಲವು ಇಂಚುಗಳಷ್ಟು ಹೆಚ್ಚು ವಿಸ್ತಾರ ವಾಗಿ ಹರಡಿರಬಹುದು. ಬೇರೆ ಯಾವುದೋ ಕಾರಣಗಳಿಂದ ನೋವು ಬಾಧಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು, ವೈದ್ಯರು ನೋವಿನ ಕಾರಣವನ್ನು ಸರಿಯಾಗಿ ವಿಶ್ಲೇಷಿಸಬೇಕಾಗುವುದು. ವೈರಸ್‌-ನಿರೋಧಕ ಚಿಕಿತ್ಸೆಯು ಕಾಯಿಲೆಯ ಅವಧಿ, ಸರ್ಪಸುತ್ತಿನ ಅನಂತರದ ನರವೇದನೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುವುದಕ್ಕೆ ಬಲವಾದ ಆಧಾರಗಳಿವೆ. ಒಂದು ಅಧ್ಯಯನದ ಪ್ರಕಾರ, ಕಡಿಮೆ-ಪ್ರಮಾಣದ ಟ್ರೆಸೈಕ್ಲಿಕ್‌ ಆಂಟಿಡಿಪ್ರಸೆಂಟ್‌ಗಳನ್ನು (ಅಮಿಟ್ರಿಪ್ಟಿಲೈನ್‌ ಅಥವಾ ನಾರ್‌ಟ್ರಿಪ್ಟಿಲೈನ್‌) ತೀವ್ರ ಸರ್ಪಸುತ್ತಿನ ತಪಾಸಣೆಯ ಸಮಯದಲ್ಲಿ ಕೊಡುವುದರಿಂದ, ಹರ್ಪಿಸ್‌ ಅನಂತರದ ನರವೇದನೆಯನ್ನು ಶೇಕಡಾ 50ರಷ್ಟು ಕಡಿಮೆ ಮಾಡಿಕೊಳ್ಳಬಹುದು. ಸರ್ಪಸುತ್ತಿನ ಅನಂತರದ ನರವೇದನೆ: ಸಮಗ್ರ ನೋವಿನ ಚಿಕಿತ್ಸೆ ಸರ್ಪಸುತ್ತಿನ ಅನಂತರದ ನರವೇದನೆಯ ಚಿಕಿತ್ಸೆಯ ಪ್ರಾಥಮಿಕ ಉದ್ದೇಶ ಅಂದರೆ, ನೋವಿನಿಂದ ಉಪಶಮನ ಪಡೆಯುವುದು ಮತ್ತು ಜೀವನ ಮಟ್ಟವನ್ನು ಸುಧಾರಿಸುವುದು. ಸರ್ಪಸುತ್ತಿನ ಅನಂತರದ ನರ ವೇದನೆ ಇರುವ ರೋಗಿಗಳಿಗೆ, ಟ್ರೆಸೈಕ್ಲಿಕ್‌ ಆಂಟಿಡಿಪ್ರಸೆಂಟ್ಸ್‌, ಟಾಪಿಕಲ್‌ ಲಿಡೋಕೈನ್‌ ಪ್ಯಾಚಸ್‌, ಟಾಪಿಕಲ್‌ ಕ್ಯಾಪ್ಸೆ„ಸಿನ್‌ 0.075%, ಗಾಬಾಪೆಂಟೀನ್‌ (ಒಂದು ಆಂಟಿ ಕನ್‌ವಲ್ಸೆಂಟ್‌) ಮತ್ತು ನಿಯಂತ್ರಿತ ಬಿಡುಗಡೆಯ ಆಕ್ಸಿಕೊಡೋನ್‌ (ಒಂದು ಓಪಿಯೋಯ್ಡ) ಚಿಕಿತ್ಸೆಯು ಪರಿಣಾಮಕಾರಿಯಾಗಿರುವುದು ಕ್ಲಿನಿಕಲ್‌ ಟ್ರಯಲ್‌ಗ‌ಳಿಂದ ಸಾಬೀತಾ ಗಿದೆ. ಈ ಚಿಕಿತ್ಸೆಗಳ ಪರಿಣಾ ಮಕಾರಿ ಪುರಾವೆಗಳಿಂದಾಗಿ, ಇನ್ನಿತರ ಅನೇಕ ಔಷಧಿಗಳನ್ನು ಪರಿಗಣಿಸಲು ನೋವು ನಿಭಾವಣಾ ತಜ್ಞರಿಗೆ ಸಹಾಯವಾಗಿದೆ ( ಇನ್ನಿತರ ಅನಾಲೆjಸಿಕ್‌ ಆಂಟಿಡಿಪ್ರಸೆಂಟ್‌ಗಳು, ಅನಾಲೆjಸಿಕ್‌ ಆಂಟಿಕನ್‌ ವಲ್ಸೆಂಟ್‌ಗಳು, ಓಪಿಯೋಯ್ಡಗಳು ಮತ್ತು ಸಂಬಂಧಿಸಿರದ ಔಷಧಿಗಳು). ಒಂದು ಔಷಧಿಯನ್ನು ಪ್ರಯತ್ನಿಸಿದ ಮೂರನೇ ಒಂದು ಭಾಗದಿಂದ ಎರಡನೇ ಒಂದು ಭಾಗದಷ್ಟು ರೋಗಿಗಳಿಗೆ ಸುಮಾರು 50%ನಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೋವಿನಿಂದ ಉಪಶಮನವನ್ನು ಒದಗಿಸಬಹುದು ಎಂಬುದು ವೈಜಾnನಿಕ ಅಧ್ಯಯನಗಳ ಅಭಿಪ್ರಾಯ. ಸರ್ಪಸುತ್ತಿನ ಚಿಕಿತ್ಸೆಯಲ್ಲಿ ಕೇವಲ 10%ನಷ್ಟು ರೋಗಿಗಳಿಗೆ ಮಾತ್ರವೇ ನೋವಿನಿಂದ ಸಂಪೂರ್ಣ ಉಪಶಮನ ದೊರಕುವ ಕಾರಣ, ಸರ್ಪಸುತ್ತಿನ ಅನಂತರದ ನರವೇದನೆಗೆ ಬಹು ಚಿಕಿತ್ಸಾ ಕ್ರಮಗಳು ಆವಶ್ಯಕವೆನಿಸಿವೆ. ಈ ಚಿಕಿತ್ಸೆಗಳ ವಿರುದ್ಧ ಪರಿಣಾಮಗಳು ಅಥವಾ ವೆಚ್ಚಗಳನ್ನು ವೈಯಕ್ತಿಕ ನೆಲೆಯಲ್ಲಿ ಪರಿಗಣಿಸಬೇಕಾಗುತ್ತದೆ. ಸರ್ಪಸುತ್ತಿನ ಅನಂತರದ ನರವೇದನೆ: ಶಿಫಾರಸುಗಳು 1. ಚಿಕಿತ್ಸೆಯನ್ನು ಆದಷ್ಟು ಶೀಘ್ರವಾಗಿ ಆರಂಭಿಸಿ. 2. ಕಾಯಿಲೆಯನ್ನು ಸರಿಯಾಗಿ ನಿಭಾಯಿಸಲು, ಮನಸ್ಸು , ನಿದ್ರೆಯ ಕಿರಿಕಿರಿಗಳನ್ನು ತಪ್ಪಿಸಲು ಮನಸ್ಸು ಮತ್ತು ದೇಹಗಳ ನಿರ್ವಹಣಾ ಕೌಶಲಗಳನ್ನು ಅಳವಡಿಸಿಕೊಳ್ಳಿ. 3. ಹದದಿಂದ ಸಾಧಾರಣ ನೋವು ಇದ್ದರೆ, ಹಚ್ಚುವಂತಹ ಮುಲಾಮು ಇತ್ಯಾದಿಗಳನ್ನು ಮತ್ತು ದೈಹಿಕ ನೋವು ಉಪಶಮನಕಾರಿಗಳನ್ನು ಉಪಯೋಗಿಸಬಹುದು; ಅಂದರೆ ಲಿಡೋಕೈನ್‌ ಪ್ಯಾಚ್‌, ಕ್ಯಾಪ್ಸೆಸಿನ್‌ ಕ್ರೀಂ ಇತ್ಯಾದಿಗಳನ್ನು ಉಪಯೋಗಿಸಬಹುದು. ನೋವು ಮತ್ತೆ ಮತ್ತೆ ಮರುಕಳಿಸಿದರೆ, ಹೆಚ್ಚುವರಿಯಾಗಿ ನಾರ್‌ಟ್ರಿಪ್ಟಿಲೈನ್‌ ನಂತಹ ಆಂಟಿಡಿಪ್ರಸೆಂಟ್‌ ಔಷಧಿ ಅಥವಾ ಗಾಬಾಪೆಂಟೀನ್‌ ನಂತಹ ಆಂಟಿಕನ್ವಲ್ಸೆಂಟ್‌ಗಳನ್ನು ಪ್ರಯತ್ನಿಸಬಹುದು. 4. ನೋವು ಬಹಳ ತೀವ್ರವಾಗಿ ದ್ದರೆ, ಲಿಡೋಕೈನ್‌ ಪ್ಯಾಚ್‌ಜೊತೆಗೆ ಆಂಟಿಡಿಪ್ರಸೆಂಟ್‌ಅಥವಾ ಆಂಟಿಕನ್ವಲ್ಸೆಂಟ್‌ಗಳನ್ನು ಆರಂಭಿಸಬೇಕು. ಒಂದು ವೇಳೆ ನೋವು ಕಡಿಮೆಯಾಗದಿದ್ದರೆ, ಓಪಿಯೋಯ್ಡ ಸೇರಿದಂತೆ (ಸೂಕ್ತ ಪ್ರಮಾಣದಲ್ಲಿ)ಇನ್ನಿತರ ಸೂಕ್ತ ಔಷಧಿಗಳನ್ನು ಪರಿಗಣಿಸಬಹುದು.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ