Skip to main content

Posts

Showing posts from January, 2015

ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ಸಂಖ್ಯಾ ಶಾಸ್ತ್ರದ ಪೂರ್ವೋತ್ತರಗಳು:-

*ಐಂ*ಓಂ ಶ್ರೀ ಲಕ್ಷ್ಮಿವೆಂಕಟೇಶ್ವರಾಯ ನಮಃ* ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ರಚಿಸಿದವರು: ವಿದ್ಯಾವಿಶಾರದ ಕೀಳಾತ್ತೂರು ಶ್ರೀನಿವಾಸಾಚಾರ್ಯ,ಪಿ.ಓ.ಎಲ್ ಶಿರೋಮಣಿ ಮತ್ತು ಹಿಂದಿ ವಿಶಾರದ ಮುನ್ನುಡಿ:- ಜ್ಯೋತಿಷ್ಯ,ಹಸ್ತರೇಖೆ,ಸಂಖ್ಯಾ,ಈ ಮೂರು ಶಾಸ್ತ್ರಗಳು ಒಂದಕ್ಕೊಂದು ಹೆಣೆದುಕೊಂಡು ಇರುವ ಶಾಸ್ತ್ರಗಳು.ಕ್ರೈಸ್ತನಿಗಿಂತಲೂ ಪೂರ್ವದಲ್ಲಿಯೇ ಈ ಮೂರು ಶಾಸ್ತ್ರಗಳೂ ಭಾರತದಲ್ಲಿಯೂ ಗ್ರೀಸ್ ದೇಶದಲ್ಲಿಯೂ ಒಂದೇ ರೀತಿಯಾಗಿ ಅಭಿವೃದ್ದಿ ಹೊಂದುತ್ತಾ ಪ್ರಸಿದ್ದಿಗೆ ಬಂದಿತು. ಆದರೆ ಈ ಕಾಲದಲ್ಲಿ ಈ ಮೂರು ಶಾಸ್ತ್ರಗಳನ್ನು ಆಧಾರವಾಗಿಟ್ಟುಕೊಂಡು ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಭೂತ,ಭವಿಷ್ಯ,ವರ್ತಮಾನ ಕಾಲಗಳ ಫಲಗಳನ್ನು ತಿಳಿಸುವ ಪಂಡಿತಮಣಿಗಳು ಅಮೇರಿಕಾ,ಬ್ರಿಟನ್,ಜರ್ಮನಿ,ಜಪಾನ್ ಮೊದಲಾದ ದೇಶಗಳಲ್ಲಿ ಈಗಲೂ ಇರುವರು,ಎಂದರೆ ಅತಿಶಯೋಕ್ತಿಯಾಗಲಾರದು. ಮಾನವನ ಭವಿಷ್ಯವನ್ನು ತಿಳಿಸುವ ಈ ಮೂರು ಶಾಸ್ತ್ರಗಳ ಮಹತ್ವವು ಸಮಾನವಾಗಿಯೇ ಇದ್ದರೂ ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡಕ್ಕಿಂತಲೂ ಸಂಖ್ಯಾ ಶಾಸ್ತ್ರ(ನ್ಯೂಮರಾಲಜಿ)ದಲ್ಲಿ ಮಾತ್ರ ಒಂದು ವೈಶಿಷ್ಟ್ಯ ಇದೆ. ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡೂ ಭವಿಷ್ಯವನ್ನು ಮಾತ್ರವೇ ತಿಳಿಸುವುದು. ಆದರೆ ಸಂಖ್ಯಾಶಾಸ್ತ್ರಾ ಆ ಬಗೆಯ ಭವಿಷ್ಯವನ್ನು ಸ್ವಾಗತಿಸಲು ಮತ್ತು ಸ್ವಲ್ಪ ಮಟ್ಟಿಗೆ ಹೆಚ್ಚು ಕಡಿಮೆ ಮಾಡಿಕೊಳ್ಳಲು ಬೇಕಾದ ಸಲಹೆಗಳನ್ನು ಕೊಡುತ್ತದೆ.

ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ.

ಭವಿಷ್ಯ ಪುರಾಣ 102ನೇ ಅಧ್ಯಾಯದಲ್ಲಿ ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ವ್ಯಕ್ತಿಗಳ ಜನ್ಮಕಾಲದಲ್ಲಿಯ ನಕ್ಷತ್ರವನ್ನು ತಿಳಿದು ಆಚರಿಸಿದರೆ. ದೋಷಗಳು ಪರಿಹಾರವಾಗಿ, ಶುಭಫಲವನ್ನೇ ನೀಡುತ್ತವೆ. ನಿಯಮಗಳನ್ನು ತಿಳಿದು ಆಚರಿಸಬೇಕು. ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರಾಗಿದ್ದು, ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು ಉಂಟಾಗುತ್ತದೆ. ಭರಣಿ ನಕ್ಷತ್ರದ ಅಧಿದೇವತೆ ಯಮನಾಗಿದ್ದು, ಭರಣಿ ನಕ್ಷತ್ರದ ದಿವಸ ಯಮನನ್ನು ನೀಲಿ ಬಣ್ಣದ ಹೂವುಗಳಿಂದ ಪೂಜಿಸಿದರೆ, ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು. ಕೃತಿಕೆ ನಕ್ಷತ್ರದ ಅಧಿದೇವತೆ ಅಗ್ನಿಯಾಗಿದ್ದು, ಕೃತಿಕ ನಕ್ಷತ್ರದ ದಿವಸ ಅಗ್ನಿ ದೇವತೆಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ, ಅಪೇಕ್ಷಿಸಿದ ಕಾರ್ಯಗಳು ಫಲಿಸುತ್ತದೆ. ರೋಹಿಣಿ ನಕ್ಷತ್ರದ ಅಧಿದೇವತೆ ಬ್ರಹ್ಮನಾಗಿದ್ದು, ರೋಹಿಣಿ ನಕ್ಷತ್ರದ ದಿವಸ ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ಅಭಿವೃದ್ದಿ ಹೊಂದುತ್ತದೆ. ಮೃಗಶಿರ ನಕ್ಷತ್ರದ ಅಧಿದೇವತೆ ಚಂದ್ರನಾಗಿದ್ದು, ಮೃಗಶಿರ ನಕ್ಷತ್ರದ ದಿವಸ ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ವೃದ್ದಿಯಾಗುತ್ತದೆ. ಆರಿದ್ರ ನಕ್ಷತ್ರದ ಅಧಿದೇವತೆ ಶಿವನಾಗಿದ್ದು, ಆರಿದ್ರಾ ನಕ್ಷತ್ರದ ದಿವಸ ಶಿವನನ್ನು ತಾವರೆ ಹೂವುಗಳಿಂದ ಪೂಜಿಸಿದರೆ, ಸ್ಪರ್ಧೆಗಳಲ್ಲಿ ಜಯ ಉಂಟಾಗು

ಉದ್ಯೋಗ ದೊರೆಯತ್ತಿಲ್ಲವೆ? ಉದ್ಯೋಗ ಪಡೆಯಲು ಇಲ್ಲಿವೆ ಜ್ಯೋತಿಷ್ಯ ಸಲಹೆಗಳು

ಒಂದು ವೇಳೆ ನಿಮಗೆ ಉದ್ಯೋಗ ಬೇಕು ಎಂದರೆ ಯಾವುದಾದರು ಜ್ಯೋತಿಷಿಯನ್ನು ಭೇಟಿಯಾಗಿ. ಯಾವ ಗ್ರಹದ ಕಾರಣ ನಿಮಗೆ ಉದ್ಯೋಗ ದೊರೆಯುತ್ತಿಲ್ಲ ಎಂದು ತಿಳಿದುಕೊಳ್ಳಿ. ಯಾವ ಗ್ರಹದಿಂದ ಉದ್ಯೋಗ ಸಿಗುತ್ತಿಲ್ಲ ಎಂದು ಗೊತ್ತಾದರೆ ಈ ಕೆಳಗೆ ನೀಡಿದ ತರಹದ ಉಪಾಯ ಓದಿ ಮತ್ತು ನೌಕರಿ ಗಿಟ್ಟಿಸಿಕೊಳ್ಳಿ. * ಸೂರ್ಯನ ಕಾರಣ ನಿಮಗೆ ನೌಕರಿ ಸಿಗಲಿಲ್ಲ ಎಂದಾದರೆ ಆಕಳಿಗೆ ರೊಟ್ಟಿ ನೀಡಲು ಪ್ರಾರಂಭಿಸಿ. ಕಪ್ಪು ಅಥವಾ ಹಳದಿ ಆಕಳಿಗೆ ಮಾತ್ರ ರೊಟ್ಟಿ ತಿನಿಸಿ. * ಚಂದ್ರ ದೋಷವಿದ್ದರೆ , ರಾತ್ರಿ ಹಾಲನ್ನು ಸೇವಿಸಬೇಡಿ ಮತ್ತು ಪ್ರತಿನಿತ್ಯ ರಾತ್ರಿ ನಿಮ್ಮ ತಂದೆಗೆ ನೀವೇ ಸ್ವತಃ ಹಾಲನ್ನು ಕುಡಿಸಿರಿ. * ಬುಧ ಗ್ರಹದ ದೋಷವಿದ್ದರೆ ಬೆಳ್ಳಿಯ ಆಭರಣ ಧರಿಸಿ ಮತ್ತು ಚಿನ್ನವನ್ನು ಖರೀದಿಸಿ. ಮನೆಯಲ್ಲಿ ನಿಮ್ಮ ಸ್ನಂತ ಕೈಯಿಂದ ಗಿಡ-ಬಳ್ಳಿಗಳನ್ನು ಹಚ್ಚಬೇಡಿ. * ಗುರ ಗ್ರಹದ ದೋಷವಿದ್ದರೆ ಕೆಂಪು ಬಣ್ಣದ ಗುಲಗಂಜಿ ಅಥವಾ ಚಿನ್ನದ ನಾಣ್ಯ ಹಳದಿ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿ ಯಾವುದಾದರು ಒಂದು ಸ್ಥಾನದಲ್ಲಿ ಇಡಿ. ಮತ್ತು ಚಿನ್ನದ ಆಭರಣ ಧರಿಸಬೇಡಿ. ಆಕಳಿಗೆ ಬೆಲ್ಲ ಮತ್ತು ಬೇಳೆ ತಿನಿಸಿ. *ಶುಕ್ರ ಗ್ರಹದ ಕಾರಣ ನಿಮಗೆ ಉದ್ಯೋಗ ಸಿಗದಿದ್ದರೆ, ಮನೆಯ ಹಿರಿಯ ಮಹಿಳೆಯರ ಪಾದ ಸ್ಪರ್ಶ ಮಾಡಿರಿ ಈ ನಿಯಮ ಪ್ರತಿನಿತ್ಯ ಅನುಸರಿಸಿ. * ಶನಿಯ ದೋಷದಿಂದ ನಿಮಗೆ ಉದ್ಯೋಗ ಲಭಿಸಲಿಲ್ಲ ಎಂದಾದರೆ, ಎಳ್ಳಿನ ಎಣ್ಣೆಯಲ್ಲಿ ನಿಮ್ಮ ಪ್ರತಿಬಿಂಬ ನೋಡಿ ನಂತರ ಬಿಕ್ಷುಕರಿಗೆ ದಾನ ಮಾಡಿ

ಅಡಿಗೆ ಅರಮನೆ

ಬಿಸಿಬೇಳೆ ಹುಳಿ ಅನ್ನ ಬೇಕಾದ ಪದಾರ್ಥಗಳು, ಅಕ್ಕಿ ಒಂದುಸೇರು ತುಗರಿಬೇಳೆ ಒಂದು ಸೇರು ಕೊತ್ತಂಬರಿ ಬೀಜ ಅರ್ದಪಾವು ಬ್ಯಾಡಗಿ ಮೆಣಸಿನಕಾಯಿ ೨೫ ಮೆಣಸು ಒಂದು ಟೀಚಮಚ ಮೆಂತ್ಯ ಒಂದು ಟೀಚಮಚ ಹುಣಸೇಹಣ್ಣು ಒಂದು ಕಿತ್ತಳೆ ಹಾಣ್ಣಿನಷ್ಟುಗಾತ್ರ ಬೆಲ್ಲ ಒಂದು ಟೇಬಲ್ ಚಮಚ ಕೊಬ್ಬರಿ ಒಂದು ಉಂಡೆ ಅರಿಸಿನ ಪುಡಿ ೨ಟೀಚಮಚ ಕಡಲೇ ಬೇಳೆ ೨ಟೇಬಲ್ ಚಮಚ ಲವಂಗ+ದಾಲ್ಚಿನ್ನಿ ೮+೮ ಜೀರಿಗೆ ೧ಟೀಚಮಚ ಇಂಗು ಒಂದು ಕಡಲೇ ಕಾಳಿನಷ್ಟು ಗಸಗಸೆ ೧ಟೇಬಲ್ ಚಮಚ. ಮಾಡುವ ವಿಧಾನ, ಪುಳಿಯೋಗರೆ; ಬೇಕಾದ ಪದಾರ್ಥಗಳು, ಅಕ್ಕಿ ೧ಸೇರು ಎಣ್ಣೆ ಒಂದುವರೆಪಾವು ಹುಣಸೇಹಣ್ಣು ಒಂದು ಕಿತ್ತಳೆ ಹಣ್ಣಿನಷ್ಟುಗಾತ್ರ ಕಡಲೇ ಬೇಳೆ ೧೦೦ಗ್ರಾಂ ಇಂಗು ೧ಕಡ್ಲೇಕಾಳಿನಷ್ಟು ಬೆಲ್ಲ ೨ಟೀ ಸ್ಪೂನ್ ಕೊಬ್ಬರಿ ೧ಉಂಡೆ ಕೊತ್ತಂಬರಿಬೀಜ ೧೦೦ಗ್ರಾಂ ಬ್ಯಾಡಗಿಮೆಣಸಿನ ಕಾಯಿ ೨೫ಕಾಯಿ ಮೆಂತ್ಯ+ಜೀರಿಗೆ ೧ಟೀಸ್ಪೂನ್ ಮೆಣಸು ಒಂದೊವರೆ ಟೀಸ್ಪೂನ್ ಸಾಸಿವೆ+ಕರಿಬೇವು (ಒಗ್ಗರಣೆಗೆ) ಮಾಡುವ ವಿಧಾನ. ವಾಂಗಿ ಬಾತ್ ಅಕ್ಕಿ ೧ಸೇರು ಕೊತ್ತಂಬರಿಬೀಜ ೧೦೦ಗ್ರಾಂ ಬ್ಯಾಡಗಿಮೆಣಸಿನ ಕಾಯಿ ೨೫ಕಾಯಿ ಕಡಲೇ ಬೇಳೆ ೧೦೦ಗ್ರಾಂ ಉದ್ದಿನಬೇಳೆ ೧೦೦ಗ್ರಾಂ ಕೊಬ್ಬರಿ ೧ಉಂಡೆ ಎಣ್ಣೆ ಒಂದುವರೆಪಾವು(೨೫೦ಗ್ರಾಂ) ತುಪ್ಪ ಒಂದುವರೆಪಾವು(೨೦೦ಗ್ರಾಂ) ತರಕಾರಿಗಳು ಒಂದುವರೆ ಕಿಲೋ(೧೫೦೦ಗ್ರಾಂ) ಲವಂಗ+ದಾಲ್ಚಿನ್ನಿ ೮+೮

ಫಲಜ್ಯೋತಿಷ್ಯದ ಸೂತ್ರಗಳು

ಜನ್ಮ ಕುಂಡಲಿಯಲ್ಲಿ ಗ್ರಹಗಳ ಸ್ಥಿತಿಯನ್ನು ಅಭ್ಯಸಮಾಡಿಕೊಂಡು ಈ ಕೆಳಗಿನ ಸೂತ್ರಗಳನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳಬಹುದು. ೧.ಮಕರಸ್ಥ ಚಂದ್ರನು ಕುಂಡಲಿಯ ಯಾವ ಭಾವದಲ್ಲಿದ್ದರೂ ಜಾತಕನು ಜೀವನದಲ್ಲಿ ಒಂದು ಭಯಂಕರ ವೈಪಲ್ಯವನ್ನು ಅನುಭವಿಸಬೇಕಾಗುತ್ತದೆ.ಮತ್ತು ಅದರಿಂದ ಜನರಿಗೆ ತನ್ನ ಮುಖತೋರಿಸಲು ಸಂಕೋಚವಾಗುತ್ತದೆ. ೨.ಶನಿ,ರಾಹು,ಅಥವ ಕುಜ ರಾಹು ಗಳಂತಹ ದುಷ್ಟಗ್ರಹಗಳು ಚಂದ್ರನೊಂದಿಗೆ ಒಂದೇ ಭಾವದಲ್ಲಿದ್ದರೆ ಜಾತಕನು ಹುಚ್ಚನಾಗುವ ಮಟ್ಟಿಗೆ ಮಾನಸಿಕ ವೇದನೆಯನ್ನು ಅನುಭವಿಸುತ್ತಾನೆ. ೩.ಚಂದ್ರನು ಶನಿ,ರಾಹು,ಕೇತು ಕುಜರಲ್ಲಿ ಯಾವುದಾದರೂ ಎರಡುಗ್ರಹಗಳೊಂದಿಗೆ ಯಾವುದೇ ಭಾವದಲ್ಲಿರಬಹುದು,ಎರಡು ಅಥವ ಹೆಚ್ಚು ದುಷ್ಟಗ್ರಹಗಳು ಅನ್ಯ ಬಾವಗಳಲ್ಲಿದ್ದು ಚಂದ್ರನ ಮೇಲೆ ದೃಷ್ಟಿ ಬೀರುತಿದ್ದರೆ ಮಿಶ್ರ ಫಲಗಳಿರುತ್ತವೆ. ಎರಡು ದುಷ್ಟಗ್ರಹಗಳು ಚಂದ್ರನ ಜೊತೆಯಲ್ಲಿರದೆ ಚಂದ್ರನ ಹಿಂದೆ-ಮುಂದೆ ಇದ್ದರೆ ಮತ್ತು ಚಂದ್ರನ ಮೇಲೆ ಕ್ರೂರದೃಷ್ಟಿ ಬೀರುತ್ತಿದ್ದರೆ ಜಾತಕನು ಮಾನಸಿಕ ಯಾತನೆಯ ಅನುಭವವನ್ನು ಪಡೆಯುವುದು ಖಚಿತ. ೩.ಯಾವುದೇ ಜನ್ಮ ಕುಂಡಾಲಿಯಲ್ಲಿ ಕುಜ ಶುಕ್ರ ಒಂದೇ ಭಾವದಲ್ಲಿದ್ದರೆ ಜಾತಕನಿಗೆ ವಿವಾಹೇತರ ಸಂಭಂದವಿರುವ ಸಂಭವ ಇರುತ್ತದೆ.ಜಾತಕನು ಸಂಯಮಿ,ಸದಾಚಾರಿ ಮತ್ತು ವಿಹೀನರಾಗಿದ್ದರೂ ಸಂಭವನೀಯವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ೪,ಶನಿಯು ತುಲಾ ಲಗ್ನದಲ್ಲಿರುವಾಗ(ಉಚ್ಚನಾಗಿರುವಾಗ)ಜಾತಕನು ಪ್ರಥಮ ದರ್ಜೆಯ ವಿದ್ಯಾರ್ಥಿಯಾಗಿರುತ್ತಾನೆ ಮತ್ತು

ಜನ್ಮ ಕುಂಡಲಿಯಲ್ಲಿ ವಿವಾಹಯೋಗ

ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಿಂದ ಸತಿ ಪತಿಯರ ವಿಚಾರವನ್ನು ಪರಿಶೀಲಿಸಬೇಕು. *ಸಪ್ತಮೇಶನು ಶುಭ ಗ್ರಹವಾಗಿದ್ದರೆ ಶುಕ್ರನು ಸ್ವಕ್ಷೇತ್ರ ಅಥವ ಉಚ್ಚದಲ್ಲಿದ್ದರೆ ಜಾತಕನ ವಿವಾಹವು ೧೯ನೇ ವಯಸ್ಸಿನಲ್ಲಾಗುತ್ತದೆ *ರವಿಯು ಸಪ್ತಮದಲ್ಲಿದ್ದು ಶುಕ್ರನಿಂದ ಯುಕ್ತವಾಗಿದ್ದರೆ ೨೧ನೇ ವರ್ಷದೊಳಗೆ ವಿವಾಹವಾಗುತ್ತದೆ. *ಲಗ್ನ ಕುಂಡಲಿಯಲ್ಲಿ ದ್ವಿತೀಯ ಸ್ಥಾನಕ್ಕೆ ಕುಟುಂಬ ಸ್ಥಾನ ವೆಂದು ಕರೆಯುತ್ತಾರೆ. *ಲಗ್ನದ ಸಪ್ತಮ ಸ್ಥಾನವನ್ನು ಪತ್ನಿಸ್ಥಾನ ವೆನ್ನುವರು ೨ ಮತ್ತು ೭ನೇ ಸ್ಥಾನದಲ್ಲಿ ಶುಭಗ್ರಹಗಳು ಇದ್ದರೆ ವಿವಾಹ ಜೀವನ ಸುಖವಾಗಿರುತ್ತದೆ ಗುರು ಶುಕ್ರ ಲಗ್ನ ಅಥವ ಸಪ್ತಮದಲ್ಲಿದ್ದರೆ ೨೦ನೇ ವರ್ಷಕ್ಕೆ ವಿವಾಹವಾಗುತ್ತದೆ. *೭ನೇ ಸ್ಥಾನಾಧಿಪತಿ ೧೧ನೇಲಾಭಸ್ಥಾನದಲ್ಲಿದ್ದರೆ ೨೦ನೇ ವರ್ಷಕ್ಕೆ ವಿವಾಹವಾಗುತ್ತದೆ ಎಂದು ತಿಳಿಯಬೇಕು. *ಶುಕ್ರ ಮತ್ತು ಏಕಾದಶದಲ್ಲಿರುವ ಸಪ್ತಮೇಶರು ಶುಭದಯಕವಾಗಿದ್ದರೆ ಶುಭಫಲ,ನೀಚರಾದರೆ ಅಶುಭಫಲ ವಿವಾಹವೇ ಆಗುವುದಿಲ್ಲವೆಂದು ಹೇಳಬೇಕು. *ಶುಕ್ರನು ಕೇಂದ್ರದಲ್ಲಿದ್ದು ಲಗ್ನಾಧಿಪತಿಯು ಕುಂಭ,ಮಕರ ರಾಶಿಯಲ್ಲಿದ್ದರೆ ೨೧ನೇ ವರ್ಷಕ್ಕೆ ವಿವಾಹವಾಗುತ್ತದೆ,ಎಂದು ತಿಳಿಯಬೇಕು. *ಕುಟುಂಬಸ್ಥಾನ,ಸಪ್ತಮಸ್ಥಾನ,ಶುಕ್ರಸ್ಥಾನ ಲಗ್ನೇಶಸ್ಥಾನಗಳಲ್ಲಿ ವಿವೇಚಿಸಬೇಕು.ಕೇಂದ್ರದಲ್ಲಿ ಶುಕ್ರನಿಂದ ಅವನ ೭ನೇಸ್ಥಾನದಲ್ಲಿ ಶನಿ ಇದ್ದರೆ ೨೯ನೇ ವರ್ಷಕ್ಕೆ ವಿವಾಹಯೋಗ ಎಂದು ನಿರ್ದರಿಸಬೇಕು. *ಚಂದ್ರನು ಸಪ್ತಮದಲ್ಲಿದ್ದು ಏಕಾಕ್ಷಿಯು (ಶುಕ್ರ)೭ನೇ

ಕಳಸವಿಲ್ಲದೆ ಅಷ್ಟಲಕ್ಷ್ಮಿ ಪೂಜೆಯನ್ನು ದೀಪಗಳನ್ನಿಟ್ಟು ಮಾಡುವುದರ ವಿಶೇಷವೇನು ?

ಪೂರ್ವ-ಆದಿಲಕ್ಷ್ಮಿ / ಆಗ್ನೇಯ-ಧನಲಕ್ಷ್ಮಿ/ ದಕ್ಷಿಣ-ದೈರ್ಯ ಲಕ್ಷ್ಮಿ/ ನೈರುತ್ಯ-ಧನಲಕ್ಷ್ಮಿ/ಪಶ್ಚಿಮ-ವಿದ್ಯಾಲಕ್ಷ್ಮಿ/ವಾಯುವ್ಯ-ಸಂತಾನಲಕ್ಷ್ಮಿ/ಉತ್ತರ-ವಿಜಯಲಕ್ಶ್ಮಿ/ಈಶಾನ್ಯ-ಗಜಲಕ್ಷ್ಮಿ/ಮದ್ಯೆ-ವೈಭವಲಕ್ಷ್ಮಿ(ವರಲಕ್ಷ್ಮಿ) ಮದ್ಯದ ದೀಪಕ್ಕೆ ತುಪ್ಪವನ್ನು ಉಳಿದೆಲ್ಲ ದೀಪಕ್ಕೆ ಕೊಬ್ಬರಿ ಎಣ್ನೆಯನ್ನು ಹಾಕಿ ಮಣ್ಣಿನದೀಪವನ್ನು ಹಚ್ಚಿ ಅಷ್ಟ ಲಕ್ಷ್ಮಿಯರನ್ನು ಆಹ್ವಾನಿಸಿ ಸಂಕಲ್ಪಪೂಜೆನಂತರ ಶೋಡಶೋಪಚಾರ ಪೂಜೆ ಮಾಡಿ ಲಕ್ಷ್ಮಿಯ ಯಾವುದಾದರೂ ಒಂದು ಮಂತ್ರವನ್ನು ೧೦೮ ಸಲ ಹೇಳಿದನಂತರ ಕಾಂಚನ ಮುದ್ರೆಯಿಂದ ಓಂ ಹ್ರೀಂ ಶ್ರೀಂ ಕಮಲೆ ಕಮಲಾಲಯೇ ಶ್ರೀ ಮಹಾಲಕ್ಷ್ಮಿಯೇ ನಮಃ ಎಂದು ೧೦೮ ಸಲ ಹೇಳಿ ಪೂಜೆ ಮಾಡುವುದು ಎಲೆ ಅಡಿಕೆ ತಾಂಬೂಲದಲ್ಲಿ ದಕ್ಷಿಣೆ ಇಟ್ಟು ಪೂಜಿಸಿ ಪಂಚಾಂಮೃತವನ್ನು ಅರ್ಪಿಸುವುದು ಅಕ್ಷತೆಯನ್ನು ಮದ್ಯದ ದೀಪದ ಬಳಿ ಹಾಕುವುದು ಎಳ್ಳನ್ನು ಆಗ್ನೇಯದಲ್ಲಿದೀಪದ ಬಳಿ ಇಟ್ಟು ಪೂಜಾನಂತರ ಮನೆಯ ಪಶ್ಚಿಮದಲ್ಲಿನ ಕಾಲಿ ಸ್ಥಳದಲ್ಲಿ ಹಾಕಿದರೆ ಆ ಮನೆಯವರಿಗೆ ಇರುವ ಶನಿ ದೋಷ,ಮಾಟ,ಪೈಶಾಚಿಕ ದೋಷ ನಿವಾರಣೆಯಾಗುತ್ತದೆ.ಈ ಪೂಜೆಯನ್ನು ತ್ರಯೋದಶಿ ತಿಥಿ ಇರುವದಿನ ಮತ್ತು ಶುಕ್ರವಾರ/ಸೋಮವಾರ ಅಮಾವಾಸೆ/ಹುಣ್ಣಿಮೆ ಬಂದಾಗ ಬೆಳಗ್ಗೆ/ಸಾಯಂಕಾಲ ಮಾಡುವುದು ಸೂಕ್ತವಾಗಿದೆ.ನಿಮ್ಮ ಸಕಲ ಕಷ್ಟ,ದುಖಃ,ದಾರಿದ್ರ್ಯನಿವಾರಣೆ,ವಿದ್ಯೆ,ಆರೋಗ್ಯ,ವ್ಯವಹಾರ,ನವಗ್ರಹದೋಷ,ಜಾತಕದೋಷ,ವಾಸ್ತುದೋಷ ಇತ್ಯಾದಿಗಳು ನಿವಾರಣೆಯಾಗುತ್ತವೆ. ಎಂದು ಲಕ್ಷ್ಮಿ ತಂತ್ರ ಸಾರಗ್ರಂಥದಲ್ಲಿ ಉ

ಚಕ್ರದೀಪಾರಾದನೆ ಪೂಜಾವಿಧಾನ ಮತ್ತು ಉಪಯೋಗ

ದಿಕ್ಕು,ಅದಿದೇವತೆ,ಎಣ್ಣೆ,ದೇವತಾಮಂತ್ರ,ಯಾವದೋಷನಿವಾರಣೆಗಾಗಿ ಇತ್ಯಾದಿ ವಿವರ ಪೂರ್ವ-ಲಕ್ಷ್ಮಿ-ತುಪ್ಪ-ಓಂ ಮಹಾಲಕ್ಷ್ಮಿಯಾಯೈ ನಮಃ(ಹಣಕಾಸು,ಸಾಲಬಾದೆ,ಸುಖ ಸೌಖ್ಯ) ಆಗ್ನೇಯ-ಖಡ್ಗದಾರಿಣಿ-ಹಿಪ್ಪೆ ಎಣ್ಣೆ-ಓಂ ಖಡ್ಗಧಾರಿಣಿಯೇ ನಮಃ(ಜಾತಕದೋಷ,ನವ್ಗ್ರಹದೋಷ) ದಕ್ಷಿಣ-ವಾರಿಣೆ-ಎಳ್ಳೆಣ್ಣೆ-ಓಂ ವಾರಿಣಿಯೇ ನಮಃ (ಶನಿ ದೋಷನಿವಾರಣೆ,ಪೀಡೆ.ಪಿಶಾಚಿ ದೋಷನಿವಾರಣೆ) ನೈರುತ್ಯ-ಮೃಗವಾಹಿನಿ-ಕೊಬ್ಬರಿ ಎಣ್ಣೆ-ಓಂ ಮೃಗವಾಹಿನಿಯೇ ನಮಃ(ಸಂತಾನದೋಷ,ಸರ್ಪದೋಷ,ಕುಜದೋಷನಿವಾರಣೆ) ಪಶ್ಚಿಮ-ಕೌಮಾರಿ-ಅರಳೆಣ್ಣೆ-ಓಂ ಕೌಮಾರಿಯೇ ನಮಃ (ಪಿತೃದೋಷ,ಕುಲದೇವತಾ ಆಶ್ರೀರ್ವಾದಕ್ಕಾಗಿ ವಾಯುವ್ಯ-ಶೂಲಧಾರಿಣಿ-ಸಾಸಿವೆ ಎಣ್ಣೆ-ಓಂ ಶೂಲಧಾರಿನಿಯೇ ನಮಃ (ಶತೃ ಸಂಹಾರ,ಶತೃನಾಶಕ್ಕಾಗಿ) ಉತ್ತರ-ಬ್ರಾಹ್ಮಿ-ಅಕ್ಕಿತೌಡಿನ ಎಣ್ಣೆ-ಓಂ ಬ್ರಾಹ್ಮಿಯಾಯೈ ನಮಃ (ವಿದ್ಯೆ,ಬುದ್ದಿ,ಅನ್ನದ ಕೊರತೆ ನಿವಾರಣೆಗಾಗಿ,ಕೀರ್ತಿ ಸಂಪಾದನೆಗಾಗಿ) ಈಶಾನ್ಯ-ಸಿಂಹವಾಹಿನಿ-ಬೇವಿನ ಎಣ್ಣೆ-ಓಂ ಸಿಂಹವಾಹಿನಿಯೇ ನಮಃ(ವೈರಿ ನಾಶ,ಶಕ್ತಿ ದೇವತೆಗಳ ಕೃಪೆಗಾಗಿ) ಮದ್ಯೆ-ವಿಜಯದುರ್ಗ-ಹೊಂಗೇ ಎಣ್ಣೆ-ಓಂ ದುಂದುಂ ವಿಜಯದುರ್ಗಾಯಾಯೈ ನಮಃ (ಸಕಲೈಶ್ವರ್ಯ ಪ್ರಾಪ್ತಿಗಾಗಿ) ತುಪ್ಪ ಮತ್ತು ಹೊಂಗೆ ಎಣ್ಣೆ ಮದ್ಯೆ ವೈಷಣವಿದೇವಿ(ದುರ್ಗ)ಮೋಕ್ಷ ದಾಯಿನಿ-ಎಲ್ಲಾ ಎಣ್ಣೆ- ಓಂ ವೈಷ್ಣವಿದೇವಿಯೇ ನಮಃ (ಮುಕ್ತಿ ಸಂಪಾದನೆಗಾಗಿ) ಈ ಎಲ್ಲಾ ದೀಪಗಳ ಆರಾಧನೆಯನ್ನು ದಶದೇವತಾ ಚಕ್ರದೀಪಾರಾಧನೆ ಎಂದು ಕರೆಯುತ್ತಾರೆ ಈ ದೀಪಾರಾಧನೆ ಮಾಡುವ ವಿಧಾನ ಈ

ಧ್ವನಿಮುದ್ರಿಕೆ: ಎಲ್ಲಿ ಹನುಮನೋ ಅಲ್ಲಿ ರಾಮನು

ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ.ರಾಜ್‍ಕುಮಾರ್ ಎತ್ತಲೋ ಮಾಯವಾದ.. ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ಎತ್ತಿ ತಂದೆ ಎಲ್ಲಿಂದ ರಾಯ ಮುತ್ತೆತ್ತ ರಾಯ ಅಕ್ಕ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ ನಗೆಯ ತಂದೆಯ ಮಹನೀಯ.. ಆ.. ಮಾರುತಿ ರಾಯ ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ಎತ್ತಿ ತಂದೆ ಎಲ್ಲಿಂದ ರಾಯ ಮುತ್ತೆತ್ತ ರಾಯ ಸೀತಮ್ಮ ಸ್ನಾನ ಮಾಡಿ ಮೂಗುತಿಯ ಹುಡುಕಾಡಿ ನಿನ್ನ ಕೂಗಿದಳೇನು ಹನುಮಂತ ರಾಯ ನೀರಲ್ಲಿ ಬಾಲಬಿಟ್ಟು ನದಿಯನ್ಣೇ ಶೋಧಿಸಿದೆ ಎಂಥ ಶ್ರದ್ಧೆಯೋ ಮಹನೀಯ.. ಆ.. ಹನುಮಂತ ರಾಯ ಅಮ್ಮ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ ಮುತ್ತೆತ್ತ ರಾಯನೆಂದು ಹರಸಿದಳೇನು ನಿನ್ನಂಥ ದಾಸನನು ಪಡೆಯ ಆ ರಾಮನು ಎಂಧ ಭಾಗ್ಯವಂತನಯ್ಯ.. ಆ.. ಮಾರುತಿ ರಾಯ ನಿನ್ನಂತೆ ಭಕ್ತಿಯಿಲ್ಲ ನಿನ್ನಂತೆ ಶಕ್ತಿಯಿಲ್ಲ ಏನೂ ಇಲ್ಲದ ಜೀವ ನನ್ನದು ಸ್ವಾಮಿ ನಿನ್ನೇ ನಾ ನಂಬಿ ಬಂದೆ ನೀನೇ ನನ್ನ ತಾಯಿ ತಂದೆ ಕಾಪಾಡುವ ಹೊಣೆಯು ನಿನ್ನದು.. ತಂದೆ ನಿನ್ನದು ಆಂಜನೇಯನ ಮನದಲಿ ನೆನೆದರೆ ಸಾಲದೆ ಅವನಿಂದಾಗದ ಕಾರ್ಯ ಜಗದಲಿ ಏನಿದೆ ಆ ಸುಂದರ ಮೂರುತಿ ಮನದಲಿ ನಿಂತರೆ ಸಾಲದೆ ಮಾರುತಿ ರಾಯನು ಒಲಿದರೆ ಚಿಂತೆಯು ಏನಿದೆ ರಾಮಚಂದ್ರನ ದುಃಖವ ಕಳೆವನಲ್ಲವೆ ನಿನ್ನ ದುಃಖವ ಕಳೆವುದು ಅವನಿಗಸಾಧ್ಯವೆ ದುಷ್ಟರಕ್ಕಸರ ನಾಶ ಮಾಡಿದವನಲ್ಲವೆ ನಿನ್ನ ದುಷ್ಠಗುಣಗಳ ಅಳಿಸಲು ಅವನಿಗಸಾಧ್ಯವೆ ಸಾಗರವನ್ನೆ ದಾಟಿದ ಸಾಹಸಿಯಲ್ಲವೆ ಸಂಸಾರ ಸಾಗರವ ದಾಟಿಸಲವನಿಗ

ಆಹಾರದಲ್ಲಿ ಕಬ್ಬಿಣ ಸತ್ವದ ಪ್ರಾಮುಖ್ಯತೆ.

ಅನೀಮಿಯಾ ಅಥವಾ ಕಬ್ಬಿಣದ ಸತ್ವ ದ ನ್ಯೂನತೆಯನ್ನು ಕಡಿಮೆ ಮಾಡಲು ಕಬ್ಬಿಣದ ಅಂಶವು ಹೇರಳವಾಗಿರುವ ಅಹಾರಗಳ ಪಟ್ಟಿ ಮಾಡಲಾಗಿದೆ. ನಿಮಗೆ ಅನೀಮಿಯಾ ಇದ್ದಲ್ಲಿ, ಸೂಚಿಸಿರುವ ಈ ಆಹಾರಗಳಲ್ಲಿ ಕಬ್ಬಿಣದ ಅಂಶವು ಹೇರಳವಿರುವ ಆಹಾರವನ್ನು ಸೇವಿಸಿ. ದೇಹದಲ್ಲಿ ಕಬ್ಬಿಣದ ಕಡಿಮೆಯಾಗುವ ಕಾರಣದಿಂದ ಅನೀಮಿಯಾ ಅಥವಾ ಹೆಮೊಗ್ಲೋಬಿನ್‌ ಕೊರತೆ ಬಾಧಿಸುತ್ತದೆ. ಕಬ್ಬಿಣದ ಸತ್ವವಿರುವ ಅಹಾರಗಳು ಕೆಳಗೆ ಸೂಚಿಸಿರುವ 100 ಗ್ರಾಂ ಅಹಾರಗಳಲ್ಲಿ, 8ಗ್ರಾಂ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಸತ್ವವಿರುತ್ತದೆ. 1. ಧಾನ್ಯಗಳು ಹಾಗೂ ಕಾಳುಗಳು: ಬಾರ್ಲಿ, ಅಕ್ಕಿಯ ತರಿ. 2. ಬೇಳೆಗಳು ಹಾಗೂ ಬೀನ್ಸ್‌ : ಹುರುಳಿ, ಅವರೆ, ಕೋಡುಗಳು, ಸೋಯಾಬೀನ್ಸ್‌, ಕೋಸು. ಇವು ಕಬ್ಬಿಣದ ಸತ್ವವು ಹೇರಳವಾಗಿರುವ ಅಹಾರ. ಈ ಆಹಾರಗಳಲ್ಲಿ ಕಬ್ಬಿಣದ ಸತ್ವ ಮಾತ್ರವಲ್ಲದೆ ವಿಟಮಿನ್‌ ಸಿ ಸಹ ಹೇರಳವಾಗಿದ್ದು , ಕಬ್ಬಿಣದ ಸತ್ವದ ಹೀರುವಿಕೆಗೆ ನೆರವಾಗುತ್ತದೆ. 3. ಸಮುದ್ರದ ತರಕಾರಿಗಳಲ್ಲಿಯೂ ಕಬ್ಬಿಣದ ಸತ್ವವು ಹೇರಳವಾಗಿರುತ್ತದೆ. 4. ಹಣ್ಣುಗಳು : ಒಣ ಖರ್ಜೂರ , ಕಲ್ಲಂಗಡಿ, ಒಣದ್ರಾಕ್ಷಿ. 5. ಮೀನು ಹಾಗೂ ಕೆಂಪು ಮಾಂಸ 6. ಪ್ರಾಣಿಜನ್ಯ ಮಾಂಸಾಹಾರದಲ್ಲಿ (ಹೇಯಿಮ್‌ ಕಬ್ಬಿಣದ ಸತ್ವವು ಹೇರಳವಾಗಿರುತ್ತದೆ.) ಸಸ್ಯಾಹಾರವನ್ನೇ ಸೇವಿಸಿ ದೇಹಕ್ಕೆ ಅಗತ್ಯ ವಿರುವ ದೈನಂದಿನ ಕಬ್ಬಿಣದ ಸತ್ವವನ್ನು ಪೂರೈಸಿಕೊಳ್ಳಬಹುದು. ಉದಾಹರಣೆಗೆ ,