Skip to main content

ಚಂದ್ರನ ಮಹತ್ವ?

ಲಗ್ನದ ಚಂದ್ರನ ಮಹತ್ವ? ಕುಂಡಲಿಯ ಲಗ್ನದಲ್ಲಿ ಪೂರ್ಣಿಮಾ ಚಂದ್ರನು ಇದ್ದರೆ ಇಂತಹ ಜಾತಕದವರು ಉತ್ತಮ ರೂಪ, ಮೃದುತ್ವದ ದೇಹ ಹೊಂದಿರುತ್ತಾರೆ. ವೃಷಭ, ಮೇಷ ಕರ್ಕಾಟಕ ಲಗ್ನವಾಗಿ ಇಲ್ಲಿ ಚಂದ್ರನಿದ್ದರೆ ಇವರು ರೂಪವಂತರೂ, ಹಣವಂತರೂ ಆಗುತ್ತಾರೆ. ಬೇರೆ ರಾಶಿಗಳಲ್ಲಿ ಚಂದ್ರನಿದ್ದರೆ ಇವರು ಜಡತೆ ರೋಗ, ಬಡತನವನ್ನು ಅನುಭವಿಸುತ್ತಾರೆ. ಕರ್ಕಾಟಕ, ವೃಷಭ, ಮೇಷ ಲಗ್ನದಲ್ಲಿ ಚಂದ್ರನಿದ್ದರೆ ದಯೆ, ದಾಕ್ಷಿಣ್ಯ, ಚತುರತೆ, ಸುಂದರ, ಧನಿಕ, ಗುಣವಂತರು ಆಗಿರುತ್ತಾರೆ. ಲಗ್ನದಲ್ಲಿರುವ ಚಂದ್ರನಿಂದ ಇಪ್ಪತ್ತೇಳನೇ ವರ್ಷದಲ್ಲಿ ಕಾಯಿಲೆಗಳು ಬರುತ್ತವೆ. ಲಗ್ನದಲ್ಲಿ ಚಂದ್ರ ಪಾಪಗ್ರಹ ಯುತನಾಗಿದ್ದರೆ ಇವರಿಗೆ ಆಗಾಗ ಶೀತ ಬಾಧೆ ಇರುತ್ತದೆ. ಲಗ್ನದಲ್ಲಿ ಬಲಿಷ್ಠವಾದ ಚಂದ್ರನು ಇದ್ದರೆ ಇಂತಹ ಜಾತಕದವರು ಮಹಾ ಚತುರರೂ, ಅಲ್ಲದೆ ಮುಖಂಡತ್ವವನ್ನು ವಹಿಸುವವರೂ ಆಗಿರುತ್ತಾರೆ. ಸ್ತ್ರೀಯರಿಂದ ಗೌರವ, ಸ್ಥಾನಮಾನಗಳು ಸಿಗುತ್ತದೆ. ಇವರು ಪರಾಕ್ರಮಿಗಳಾಗಿದ್ದು, ರಾಜ ವೈಭವವನ್ನು ಹೊಂದುತ್ತಾರೆ. ಚಂದ್ರನು ಚರ ರಾಶಿ ಅಥವಾ ಉಭಯ ರಾಶಿ ಗತನಾದರೆ ಸಂಚಾರಿ, ಸ್ಥಿರ ಇಲ್ಲದ ಬುದ್ಧಿ, ಸ್ತ್ರೀಯರ ಸ್ವಭಾವ, ಮಿತ್ರ ವತ್ಸಲ, ದಯಾಳು, ಸಮಾಜದೊಂದಿಗೆ ಬೆರೆತುಕೊಂಡಿರುತ್ತಾರೆ. ಸ್ತ್ರೀಯರಿಗೆ ಪ್ರಿಯನಾಗಿದ್ದು, ಮಿತ್ರರೊಂದಿಗೆ ಇರುವವನೂ, ಉದಾರಿಯೂ, ಸಜ್ಜನನೂ ಆಗಿರುತ್ತಾನೆ. ಸಾರ್ವಜನಿಕ ಹಿತಾಸಕ್ತಿಯುಳ್ಳವನಾಗಿದ್ದು, ಬಹು ಜನರೊಂದಿಗೆ ಬೆರೆತು ನೀಚ ಜನರಿಂದ ಮಾನ್ಯತೆ ಪಡೆಯುತ್ತಾರೆ. ಲಗ್ನ ಮೇಷವಾಗಿ ಇಲ್ಲಿ ಚಂದ್ರನಿದ್ದರೆ ಇವರು ಅಭಿಮಾನ ದೃಷ್ಟಿಯುಳ್ಳವರೂ, ಒಂದೇ ಕಡೆ ಸ್ಥಿರವಾಗಿರುವವರೂ, ವ್ಯವಸಾಯ ಪರಿಣತರೂ ಆಗಿರುತ್ತಾರೆ. ಮಕರ, ವೃಶ್ಚಿಕ ಲಗ್ನವಾಗಿ ಅಲ್ಲಿ ಚಂದ್ರನಿದ್ದರೆ ಇವರು ಯಾವುದಾದರೂ ದುರಾಭ್ಯಾಸವನ್ನು ಹೊಂದುತ್ತಾರೆ. ನೀಚ ಜನರೊಂದಿಗೆ ಇರುತ್ತಾರೆ. ಭಯ ಹುಟ್ಟಿಸುವ ಮಾತಿನವರಾಗುತ್ತಾರೆ. ಚಂದ್ರ ಇತರ ಅಶುಭ ಗ್ರಹಗಳ ಸಂಪರ್ಕ ಹೊಂದಿದ್ದರೆ ಇವರು ಅಶುಭ ಫಲಗಳನ್ನು ಅನುಭವಿಸುತ್ತಾರೆ. ಚಂದ್ರ ಶುಭಗ್ರಹ ಯೋಗ ಹೊಂದಿದ್ದರೆ ಇವರು ಶುಭ ಫಲವನ್ನು ಅನುಭವಿಸುತ್ತಾರೆ. ಮಿಥುನ, ತುಲಾ, ಕುಂಭ ಲಗ್ನವಾಗಿ ಇಲ್ಲಿ ಚಂದ್ರನಿದ್ದರೆ ವಿದ್ವಾಂಸ, ಶಾಸ್ತ್ರೀಯ ವಿಷಯದಲ್ಲಿ ಆಸಕ್ತರಾಗುತ್ತಾರೆ. ಓದುವುದರಲ್ಲಿ, ಜ್ಯೋತಿಷ್ಯದಲ್ಲಿ ಬಹಳ ಆಸಕ್ತಿ ಹೊಂದುತ್ತಾರೆ. ಇವರು ಭಾಷೆಯಲ್ಲಿ ಪರಿಣತರಾಗಿದ್ದು, ಲೇಖಕರು ಅಥವಾ ಮಾತುಗಾರರಾಗುತ್ತಾರೆ. ಕರ್ಕಾಟಕ ಮೀನ ಲಗ್ನವಾಗಿ ಇಲ್ಲಿ ಚಂದ್ರನಿದ್ದರೆ ಇವರು ಧಾರ್ಮಿಕ ವಿಷಯದಲ್ಲಿ ಆಸಕ್ತಿ ಹೊಂದಿ ಜನರಿಂದ ಮನ್ನಣೆ ಪಡೆಯುತ್ತಾರೆ. ಇವರಿಗೆ ಕುಟುಂಬದವರೊಡನೆ ಅನ್ಯೋನ್ಯತೆ ಇರುತ್ತದೆ. ಕೃಷಿ ಕಾರ್ಯದಲ್ಲಿ ಆಸಕ್ತಿ ಹೊಂದುತ್ತಾರೆ. ವೃಷಭ ಲಗ್ನವಾಗಿ ಇಲ್ಲಿ ಚಂದ್ರನಿದ್ದರೆ ಇವರು ಸ್ಥಿರವಾಗಿ ಗಂಭೀರವಾಗಿರುತ್ತಾರೆ. ಯಾವುದೇ ಕೆಲಸವನ್ನು ಸರಿಯಾಗಿ ಮನಸಿಟ್ಟು ಮಾಡುತ್ತಾರೆ. ಇವರು ಯಾವುದೇ ಉದ್ಯೋಗವನ್ನೂ ಸರಿಯಾಗಿ ನಿರ್ವಹಿಸುತ್ತಾರೆ. ಇವರು ಭಾಗ್ಯಶಾಲಿಯಾಗಿದ್ದು, ವೈಭವದಲ್ಲಿ ಆಸಕ್ತಿ ಹೊಂದಿರುತ್ತಾರೆ. ಕುಟುಂಬದವರೊಂದಿಗೆ ಇದ್ದು, ಬೆಳವಣಿಗೆ ಹೊಂದುತ್ತಾರೆ. ಪುರುಷ ರಾಶಿಯ ಪೂರ್ಣಿಮಾ, ಚಂದ್ರನು ಚೆಲುವ ಆಕೃತಿ, ಮೃದು ಗುಣ ಕೊಡುವನು. ಇವರು ಧನವಂತರಾಗುವುದಿಲ್ಲ. ಚಂದ್ರನು ಸಂಪತ್ತಿನ ಕಾರಕನಲ್ಲ. ಮನೋಕಾರಕ, ವಿಲಾಸ, ಚಂಚಲ ಪ್ರಕಾಶಕ ಗ್ರಹ. ಕೆಟ್ಟ ಫಲಗಳು ಸ್ತ್ರೀ ರಾಶಿಯ ಚಂದ್ರನಿಂದಾಗಿ ಬರುತ್ತದೆ. ಆಲಸ್ಯ ಕೃತಘ್ನತೆಯ ಫಲ. ಪುರುಷ ರಾಶಿಯ ಚಂದ್ರನು ಶುಭ ಫಲವನ್ನು ಕೊಡುತ್ತದೆ. ಮೇಷ, ವೃಷಭ, ಕರ್ಕಾಟಕ ರಾಶಿಗಳ ಲಗ್ನದ ಚಂದ್ರ ಶುಭ ಫಲ ಅಧಿಕ ಇದ್ದರೆ ಶುಭ ಫಲ ಬರುತ್ತದೆ. ಮೇಷ, ಮಕರ, ಕುಂಭ ಲಕ್ಷಣಗಳ ಚಂದ್ರ ಕಪ್ಪು ಬಣ್ಣ ಕೊಡುತ್ತಾನೆ. ಸ್ತ್ರೀ ರಾಶಿಯ ಚಂದ್ರ ಇಪ್ಪತ್ತೇಳನೇ ಪ್ರಾಯದಲ್ಲಿ ಅನಾರೋಗ್ಯ ತರುತ್ತಾನೆ. ವೃಶ್ಚಿಕದಲ್ಲಿರುವ ಚಂದ್ರನಿಗೆ ಪಾಪಗ್ರಹದ ಯೋಗ ಸಂಬಂಧ ಇದ್ದರೆ ಅಶುಭ ಫಲವನ್ನು ಕೊಡುತ್ತಾನೆ. ಮೇಷ, ಸಿಂಹ, ಧನು ರಾಶಿಗಳ ಲಗ್ನದಲ್ಲಿ ಚಂದ್ರನಿದ್ದರೆ ಇವರು ಯಾರನ್ನೂ ಕೇಳದೆ ತಮ್ಮ ಕೆಲಸವನ್ನು ಮಾಡುವರು. ಧನುವಿನಲ್ಲಿರುವ ಚಂದ್ರ ಕಾಮದಲ್ಲಿ ವಿಶೇಷ ಆಸಕ್ತಿಯನ್ನು ಕೊಡುತ್ತದೆ. ಇಂತಹವರ ಹೆಂಡತಿಗೆ ಸುಖ ಇರುವುದಿಲ್ಲ. ವೃಷಭ, ಕನ್ಯಾ, ಮಕರ ಲಗ್ನದಲ್ಲಿ ಚಂದ್ರನಿದ್ದರೆ ಇವರು ಯಾರಿಗೂ ಬೆಲೆ ಕೊಡುವುದಿಲ್ಲ. ಅನ್ಯರು, ತುಚ್ಛರು ಎಂಬ ಅಹಂಕಾರವನ್ನು ಹೊಂದುತ್ತಾರೆ. ಬಡಾಯಿ ಕೊಚ್ಚುವವರಾಗಿದ್ದು, ಸಮಾಜದಲ್ಲಿ ಬೆಳಕಿಗೆ ಬರುವುದಿಲ್ಲ. ವೃಷಭದಲ್ಲಿರುವ ಚಂದ್ರ ಸಂಸಾರ ಸುಖಕ್ಕೆ ಧಕ್ಕೆ ಕೊಡುತ್ತದೆ. ಮಧ್ಯ ವಯಸ್ಸಿನಲ್ಲಿ ಹೆಂಡತಿಗೆ ಕಷ್ಟ ಬರುತ್ತದೆ. ಇವರಿಗೆ ಪರ ಸ್ತ್ರೀಯರ ಸಂಪರ್ಕ ಇರುತ್ತದೆ. ಮಿಥುನ, ತುಲಾ, ಕುಂಭ ಲಗ್ನವಾಗಿ ಅದರಲ್ಲಿ ಚಂದ್ರನಿದ್ದರೆ ಇವರು ಮುಖಂಡರಾಗುವುದಕ್ಕೆ ಆಸೆಯುಳ್ಳವರಾಗಿ ತಮ್ಮ ವರ್ಚಸ್ಸು ಹೊಂದಲು ಬಹಳ ಪ್ರಯತ್ನ ಪಡುತ್ತಾರೆ. ತಮ್ಮ ಸ್ವಾರ್ಥ ಸಾಧಿಸಲು ನೋಡುತ್ತಾರೆ. ಕರ್ಕಾಟಕ, ವೃಶ್ಚಿಕ, ಮೀನ ಲಗ್ನವಾಗಿ ಅಲ್ಲಿ ಚಂದ್ರನಿದ್ದರೆ ಇವರಿಗೆ ತಮ್ಮ ಹೆಂಡತಿ ಮಕ್ಕಳ ಚಿಂತೆಯೇ ಇರುವುದಿಲ್ಲ. ತಮ್ಮ ದಾರಿ ಯಾವುದು ಎಂದು ಕೇಳಿದರೆ ಬೇರೆಯೇ ಹೇಳುತ್ತಾರೆ. * ಹರಿಶ್ಚಂದ್ರ ಪಿ. ಸಾಲಿಯಾನ್ ಧನಭಾವದಲ್ಲಿ ಚಂದ್ರನಿದ್ದರೆ ಶುಭ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಧನ ಭಾವದಲ್ಲಿರುವ ಚಂದ್ರನು ತನ್ನ ಇಪ್ಪತ್ತೇಳನೇಯ ಪ್ರಾಯದಲ್ಲಿ ಧನ ಭಾವವನ್ನು ಕೊಡುತ್ತದೆ. ಚಂದ್ರನು ಧನ ಭಾವದಲ್ಲಿದ್ದರೆ ಬಹು ಪುತ್ರ ಸಂತಾನವಂತರೂ, ಧನವಂತರೂ, ಭೂಮಿಯಲ್ಲಿ ಜನಪ್ರಿಯರೂ ಆಗುತ್ತಾರೆ. ಧನ ಭಾವದಲ್ಲಿ ಚಂದ್ರನಿದ್ದರೆ ಅಥವಾ ಅದಕ್ಕೆ ದೃಷ್ಟಿ ಇದ್ದರೂ ಇಂತಹ ಜಾತಕದವರು ಧನಿಕರಾಗುತ್ತಾರೆ. ಇವರ ಸೋದರಿಯರು, ಅವರ ಮಕ್ಕಳು ಇವರ ಸಂಪತ್ತಿನೊಂದಿಗೆ ಜೀವಿಸುತ್ತಾರೆ. ಧನ ಭಾಗದಲ್ಲಿ ಕ್ಷೀಣ ಚಂದ್ರನಿದ್ದು, ಅದಕ್ಕೆ ಶುಭ ಗ್ರಹದ ದೃಷ್ಟಿ ಇದ್ದರೂ, ಇವರ ಪೂರ್ವಾರ್ಜಿತ ಧನ ನಾಶವಾಗುತ್ತದೆ. ಯಾವುದೇ ಧನ ಲಾಭವಾಗುವುದಕ್ಕೆ ತೊಂದರೆಯಾಗುತ್ತದೆ. ಧನ ಭಾವದಲ್ಲಿ ಪೂರ್ಣ ಚಂದ್ರನಿದ್ದರೆ ಇವರಿಗೆ ಪುತ್ರ ಸುಖ, ಹೊಟ್ಟೆಯ ಸ್ಥಿತಿ ಒಳ್ಳೆಯದಿದ್ದು, ಒಳ್ಳೆಯ ಕುಟುಂಬದಿಂದ ಕೂಡಿರುತ್ತಾರೆ. ಧನ ಭಾವ ಮಿತ್ರ ಕ್ಷೇತ್ರ ಉಚ್ಛ ಸ್ವಕ್ಷೇತ್ರಗಳಲ್ಲಿದ್ದರೆ ಉತ್ತಮ ಲಾಭ ಫಲದಾಯಕರಾಗುತ್ತಾರೆ. ಪಾಶ್ಚಾತ್ಯರು ಧನ ಭಾವದ ಚಂದ್ರನು ಬಲವಂತನಾಗಿ ಶುಭ ಸಂಬಂಧ ಹೊಂದಿದ್ದರೆ ಇವರಿಗೆ ಸಂಪತ್ತು ಬರುತ್ತದೆ ಎಂದು ಹೇಳಿದ್ದಾರೆ. ವಿವಿಧ ಮನೆ ಅಲಂಕಾರದ ವಸ್ತುಗಳನ್ನು ಸಂಗ್ರಹ ಮಾಡುತ್ತಾರೆ. ದ್ವಿತೀಯ ಚಂದ್ರ ಉಚ್ಛನಾಗಿದ್ದರೆ ಬಹಳ ಸಂಪತ್ತು, ಸ್ತ್ರೀಯರ ಮೂಲಕ ಸಹಾಯ ಸಿಗುತ್ತದೆ. ಇವರು ಸಾರ್ವಜನಿಕ ಕೆಲಸಗಳಲ್ಲಿ ಭಾಗವಹಿಸುತ್ತಾರೆ. ಇದರಿಂದ ಜನಪ್ರಿಯರಾಗುತ್ತಾರೆ. ಧನ ಸ್ಥಾನವು ವೃಶ್ಚಿಕ ಮಕರವಾಗಿದ್ದು, ಅಲ್ಲಿ ಚಂದ್ರನಿದ್ದರೆ ಇವರಿಗೆ ಕೆಟ್ಟ ಫಲ ಕೊಡುತ್ತದೆ. ಸಂಪತ್ತಿನ ಸುಖವು ವ್ಯತ್ಯಯವಾಗುವುದು. ಇವರಿಗೆ ಕಣ್ಣಿನ ತೊಂದರೆಗಳು ಬರುತ್ತದೆ. ಪ್ರಾಯ ಜಾಸ್ತಿಯಾದಂತೆ ಇವರ ಸಂಪತ್ತು ನಷ್ಟವಾಗುವುದು. ಬಂಧು ಬಳಗದವರಿಂದ ತೊಂದರೆ ಅನುಭವಿಸುತ್ತಾರೆ. ಪ್ರವಾಸದಲ್ಲಿ ಅಪಯಶಸ್ಸನ್ನು ಅನುಭವಿಸುತ್ತಾರೆ. ವೃಶ್ಚಿಕದ ಚಂದ್ರನು ತನ್ನಿಂದ ಸಂಪತ್ತನ್ನು ನಾಶ ಮಾಡುತ್ತದೆ. ಇವರಿಗೆ ಎಷ್ಟೇ ಸಂಪತ್ತಿದ್ದರೂ ಇವರು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ದೂರದ ಸ್ಥಳದಲ್ಲಿ ನೆಲೆಸಿದರೆ ಇವರಿಗೆ ಭಾಗ್ಯೋದಯವಾಗುತ್ತದೆ. ಸಾರ್ವಜನಿಕ ಹಿತ ಕಾರ್ಯಗಳಿಂದ ಉನ್ನತಿ ಕಾಣುತ್ತಾರೆ. ಸಂಪತ್ತಿನ ವಿಷಯದಲ್ಲಿ ಸಮುದ್ರದ ತೆರೆಗಳಂತೆ ಏರಿಳಿತವಾಗುತ್ತದೆ. ಧನ ಭಾಗದಲ್ಲಿರುವ ಚಂದ್ರ ವಿವಾಹವಾದ ಪತ್ನಿಯ ಮೂಲಕ ಚಂದ್ರ ಬಲದಂತೆ ಲಾಭ ಅಥವಾ ಹಾನಿ ಕೊಡುತ್ತದೆ ಎಂದು ಹೇಳಿದ್ದಾರೆ. ದ್ವಿತೀಯದ ಚಂದ್ರ ಹಿರಿಯರ ಸಂಪತ್ತನ್ನು ಹಾನಿಗೊಳಿಸುವನು. ತಾನು ದುಡಿದು ಬಂದ ಸಂಪಾದನೆಯಿಂದ ಜೀವನ ನಡೆಸುತ್ತಾನೆ. ಊಟ ಉಪಚಾರಗಳಿಗೆ ಕೊರತೆ ಇರುವುದಿಲ್ಲ. ಅನ್ನ ಬಟ್ಟೆಗಳಿಗೆ ಕೊರತೆ ಬರದಂತೆ ಅನ್ಯರನ್ನು ಪೋಷಿಸುವ ಜವಾಬ್ದಾರಿ ಇರುತ್ತದೆ. ಚಂದ್ರ ಪ್ರಕಾಶ ಗ್ರಹನಾಗಿ ಅನ್ಯರನ್ನು ಸಂತೋಷಗೊಳಿಸುವುದರಿಂದ ಈ ಚಂದ್ರನು ಪರರ ಪೋಷಣೆಯನ್ನು ಮಾಡುತ್ತದೆ. ಪರರ ಹಿತದ ಕೆಲಸಗಳು ಈ ಚಂದ್ರನಿಂದ ಆಗುತ್ತದೆ. ಪುರುಷ ರಾಶಿಯ ಚಂದ್ರ ಶುಭ. ಸ್ತ್ರೀ ರಾಶಿಯ ಚಂದ್ರ ಅಶುಭ. ಧನ ಭಾವ ವೃಷಭ, ಕರ್ಕಾಟಕ ಆಗಿದ್ದು ಇದರಲ್ಲಿ ಚಂದ್ರನಿದ್ದರೆ ಇವರಿಗೆ ಆರ್ಥಿಕ ಸಂಪತ್ತು ಬರುತ್ತದೆ. ಇವರಿಗೆ ಬೇಗನೇ ಸ್ಥಿರ ಸಂಪತ್ತು ಬರುವುದಿಲ್ಲ. ಧನ ಭಾವ ಮಕರ ಕುಂಭವಾಗಿದ್ದು, ಇಲ್ಲಿ ಚಂದ್ರನಿದ್ದರೆ ಇವರಿಗೆ ಒಳ್ಳೆಯ ಫಲ ಕಡಿಮೆ ಇರುತ್ತದೆ. ಧನ ಭಾವ ಕನ್ಯಾ, ವೃಶ್ಚಿಕಗಳಲ್ಲಿದ್ದು, ಅಲ್ಲಿ ಚಂದ್ರನಿದ್ದರೆ ಇವರಿಗೆ ಒಳ್ಳೆಯ ಫಲಗಳು ಕಡಿಮೆ ಇರುತ್ತದೆ. ಧನ ಭಾವ ಮೇಷ, ಮಿಥುನ, ಸಿಂಹ, ತುಲಾ, ಧನು, ಮೀನ ರಾಶಿಗಳಲ್ಲಿದ್ದರೆ ಇವರಿಗೆ ದೊಡ್ಡ ದೊಡ್ಡ ಉದ್ಯೋಗಸ್ಥರ ಸಂಪರ್ಕ ಇರುತ್ತದೆ. ಇವರು ಮಿತವಾಗಿ ಮಧುರವಾದ ಮಾತನ್ನಾಡುತ್ತಾರೆ. ಈ ಚಂದ್ರನು ನ್ಯಾಯವಾದಿಗಳಿಗೆ ಒಳ್ಳೆಯ ಫಲ ಕೊಡುತ್ತದೆ. ನ್ಯಾಯವಾದ ಮಾತನ್ನು ಅಭಿನಯ ಮೂಲಕ ಮೃದುವಾಗಿ ತಿಳಿಯಪಡಿಸಲು ಶಕ್ತರಿರುತ್ತಾರೆ. ಅದರಂತೆ ವೈದ್ಯಕೀಯ ವೃತ್ತಿಯವರಿಗೂ ಶುಭ ಫಲ ಕೊಡುತ್ತದೆ. ಚಂದ್ರನು ಏರಿಳಿತ ಉಳ್ಳವನು. ನಿಯಮಿತ ರೀತಿಯಿಂದ ಶುಕ್ಲ ಕೃಷ್ಣ ಪಕ್ಷಗಳು ಆಗುವವು. ಇವರಿಂದ ನಿಯಮಿತ ರೀತಿಯಿಂದ ಉದ್ಯಮ ಸ್ಥಿರತೆಗೊಂಡಿರುವುದು. ಸಹಜ ಭಾವದ ಚಂದ್ರನಿಂದ ಕುಟುಂಬ ಸುಖ ಇರುವುದಿಲ್ಲ? ತೃತೀಯದಲ್ಲಿ ಚಂದ್ರನು ಇದ್ದರೆ ಬಲದಿಂದ ಕೂಡಿರುವರೂ, ಸಂತೋಷದಿಂದಿರುವವರೂ, ಸತ್ಕರ್ಮ ಮಾಡುವವರೂ ಆಗಿರುತ್ತಾರೆ. ತೃತೀಯದಲ್ಲಿ ಚಂದ್ರನಿದ್ದವರು ಹಿಂಸಕ, ಗರ್ವಿಷ್ಠ, ಕೃಪಣ, ಅಲ್ಪ ವ ದಯಾ ಭೀತಿ ರಹಿತವಾಗಿರುತ್ತಾರೆ. ಪ್ರವಾಸಕ್ತರೂ, ಸದಾ ಸಂಚಾರದಲ್ಲಿಯೂ, ಕೆಲವು ಮುಖ್ಯ ವಿಷಯಗಳಲ್ಲಿ ಬಹಳ ಆಸಕ್ತಿಯಿಂದ ಇರುತ್ತಾರೆ. ಇವರ ಉದ್ಯೋಗದಲ್ಲಿ ಆಗಾಗ ಅದಲು ಬದಲು ಆಗುತ್ತಿರುತ್ತದೆ. ಚಮತ್ಕಾರ, ಚಿಂತನಾ ವ್ಯವಹಾರಗಾರರು, ಅಮಲು ಪದಾರ್ಥ ಸೇವನೆ ಮಾಡುವವರೂ, ಅನಿಶ್ಚಿತ ಸ್ವಭಾವದವರೂ ಆಗಿರುತ್ತಾರೆ. ತೃತೀಯದಲ್ಲಿ ಬಲಿಷ್ಠನಾದ ಚಂದ್ರ್ರನು ಇದ್ದರೆ ಭ್ರಾತೃ ಜನ ಅಥವಾ ಭಗಿನಿಯರ ಸೌಖ್ಯ ಚೆನ್ನಾಗಿರುತ್ತದೆ. ಜಂಟಿ ವ್ಯಾಪಾರದಿಂದ ಚೆನ್ನಾಗಿ ನೆಲೆಗೊಳ್ಳುತ್ತಾರೆ. ಇಪ್ಪತ್ತೊಂದನೇ ಪ್ರಾಯದಿಂದ ಪ್ರವಾಸ ಸಂಪರ್ಕವಾಗುವುದು. ಇದರಿಂದ ಅಭಿವೃದ್ಧಿಗೆ ಬರುವ ಒಳ್ಳೆಯ ಕೆಲಸಗಳಾಗುವುದು. ಕೀರ್ತಿ ಯಾ ಪ್ರಸಿದ್ಧಿಯ ಕಾರ್ಯಾರಂಭವಾಗುವುದು. ಕುಂಭ ರಾಶಿಯ ತೃತೀಯದ ಚಂದ್ರನಲ್ಲಿ ಉದ್ಯೋಗದಲ್ಲಿ ಹಲವಾರು ಬದಲಾವಣೆಯಾಗುವುದು. ಅನಿಶ್ಚಿತ ಸ್ವಭಾವವು ಕಾಣುವುದು. ಹೆಚ್ಚಾಗಿ ಮೂರರ ಚಂದ್ರ ಸೋದರ ಸುಖಕ್ಕೆ ಅನುಕೂಲತೆ ಕೊಡುವುದಿಲ್ಲ. ಅನುಕೂಲತೆ ಹೊಂದಿದರೂ ದೀರ್ಘಾಯಸ್ಸು ಇರುವುದಿಲ್ಲ. ಜತೆಯಾಗಿರುವ ಅವಕಾಶ ಇರುವುದಿಲ್ಲ. ತೃತೀಯದ ರವಿಯ ಅಕ್ಕ ತಂಗಿಯರಲ್ಲೊಬ್ಬರಿಗೆ ಪತಿ ಸುಖ ಇರುವುದಿಲ್ಲ. ವೈಮನಸ್ಸು ಇರುತ್ತದೆ. ಹಣಕಾಸಿನ ತೊಂದರೆ ಯಾ ಸಂತಾನ ಸುಖಾಭಾವ ಅಥವಾ ಯಾವುದಾದರೂ ಅಂಗವಿಕಲತೆಯ ಯೋಗ, ಕೆಲವೊಮ್ಮೆ ಸೋದರನೊಬ್ಬನಿಗೆ ಸಂತತಿ ಇರುವುದಿಲ್ಲ. ಸೋದರ ಭಾವದಲ್ಲಿ ಚಂದ್ರನಿದ್ದರೆ ಹಿಂಸಾಶೀಲನಾಗುತ್ತಾನೆ. ಮೂರರಲ್ಲಿ ಚಂದ್ರನಿದ್ದು, ಮೂರು ಪಾಪಗ್ರಹನಿಂದ ದೃಷ್ಟನಾಗಿ ಶುಭ ಗ್ರಹ ದೃಷಿ ವಿರಹಿತನಾಗಿದ್ದರೆ ಭ್ರಾತೃ ಜನರ ಹಾನಿಯಾಗುವುದು. ಮೂರನೇ ಮನೆಯ ರವಿ ಅಗ್ರಜರನ್ನೂ, ಮೂರರ ಕುಜ ಅನುಜಾತರನ್ನೂ ಮೂರರ ಶನಿ ಮೊದಲ ಮತ್ತು ಮುಂದಿನವರನ್ನು ನಾಶ ಮಾಡುತ್ತಾರೆ. ತೃತೀಯದಲ್ಲಿ ಪೂರ್ಣ ಚಂದ್ರನಿದ್ದರೆ ಪರಕ್ರಮಿ, ಒಳ್ಳೆಯ ನಡತೆ, ಆಕಸ್ಮಿಕ ಲಾಭಕ್ಕಾಗಿ ತುಚ್ಛ ದೃಷ್ಟಿಯವರಾಗಿರುತ್ತಾರೆ. -ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಚತುರ್ಥ ಭಾವದ ಚಂದ್ರನಿಂದ ಭೂ ಸಂಪತ್ತು * ಮೂಲ್ಕಿ ಹರಿಶ್ಚಂದ್ರ ಪಿ. ಸಾಲ್ಯಾನ್ ಚತುರ್ಥದ ಚಂದ್ರ ಗ್ರಹ, ಭೂ ಸಂಪತ್ತು, ಕೃಷಿಗಳ ಸುಖ ಕೊಡುವನು. ಚತುರ್ಥದ ಚಂದ್ರ ಚರ ರಾಶಿಗತನಾದರೆ ಇವರು ಆಗಾಗ ಮನೆ ಬದಲಾವಣೆಯನ್ನು ಮಾಡುತ್ತಾರೆ. ಜೀವನದಲ್ಲಿ ಹತ್ತಾರು ಘಟನೆ ಸ್ಥಿತ್ಯಂತರಗೊಳಿಸುವನು. ಮಾತೃ ಧನ ವಾರೀಸು ಸಂಪತ್ತು ಹೊಂದಲು ಅವಕಾಶ ಇರುತ್ತದೆ. ತಾಯಿಯ ಮೂಲಕ ಭಾಗ್ಯದ ಬೆಳವಣಿಗೊಳ್ಳುವುದು. ತಾಯಿಯ ಭಕ್ತ ಜೀವನದ ಉತ್ತರ ಭಾಗ ಬಹಳ ಸುಖದಿಂದ ಇರುವುದು. ವಾಹನದ ಸುಖ ಚೆನ್ನಾಗಿರುತ್ತದೆ. ಇವರು ವಾಹನ ಕಂಪನಿಯನ್ನೇ ನಡೆಸುತ್ತಾರೆ. ಆರೋಗ್ಯ ಒಳ್ಳೆಯದಿದ್ದು, ಪುಷ್ಟಿ ಶರೀರ ಇರುವುದು. ತಿಂಡಿ ತಿನಿಸುಗಳ ವ್ಯವಸಾಯದಿಂದ ಲಾಭವಾಗುವುದು. ಚಂದ್ರನು ನಾಲ್ಕರಲ್ಲಿ ಬಲಿಷ್ಠನಾಗಿದ್ದಾನೆ. ವಿರಹದ ನಂತರ ಪ್ರಗತಿಯಾಗುವುದು. ಸ್ತ್ರೀ ಧನ, ಭೂ ಸಂಪತ್ತು ಹೊಂದುತ್ತಾನೆ. ಚತುರ್ಥವು ಕರ್ಕಾಟಕ, ವಶ್ಚಿಕ, ಮೀನ ಆಗಿದ್ದು, ಅಲ್ಲಿ ಚಂದ್ರನಿದ್ದರೆ ಇವರಿಗೆ ಸಂಪತ್ತು ಬರುತ್ತದೆ. ಮಕರ ರಾಶಿ ಚತುರ್ಥವಾಗಿ ಅಲ್ಲಿ ಚಂದ್ರನಿದ್ದರೆ ಇವರಿಗೆ ಬಂಧು ವಿರೋಧ ಇರುತ್ತದೆ. ಆಯುಷ್ಯದ ಉತ್ತರ ಭಾಗದಲ್ಲಿ ಸುಖ, ಪೂರ್ವ ಭಾಗದಲ್ಲಿ ತ್ರಾಸ ಫಲವನ್ನು ಅನುಭವಿಸುತ್ತಾರೆ. ಮೇಷ, ಸಿಂಹ ಮತ್ತು ಧನು ಮತ್ತು ವಷಭ, ಕನ್ಯಾ, ಮಕರ ರಾಶಿಗಳು ಚತುರ್ಥರಾಗಿದ್ದು, ಅಲ್ಲಿ ಚಂದ್ರನಿದ್ದರೆ ಇವರಿಗೆ ಮನೆಯಲ್ಲಿ ಸುಖ ಇರುತ್ತದೆ. ಚತುರ್ಥವು ಪುರುಷ ರಾಶಿಯಾಗಿದ್ದು., ಅಲ್ಲಿ ಚಂದ್ರನಿದ್ದರೆ ಅಂತಹವರು ಜೀವನದಲ್ಲಿ ಹೊಸ ಮನೆಯನ್ನು ನಿರ್ಮಾಣ ಮಾಡುತ್ತಾರೆ. ಪುರುಷ ರಾಶಿಯ ಚಂದ್ರನು ಒಳ್ಳೆಯ ಫಲವನ್ನು ಕೊಡುತ್ತಾನೆ. ವೃಷಭ, ಕನ್ಯಾ, ಮಕರಗಳು ನಾಲ್ಕನೇ ಮನೆಯಾಗಿದ್ದು, ಅಲ್ಲಿ ಚಂದ್ರನಿದ್ದರೆ ಇವರು ತಿಂಡಿ ತಿನಿಸು, ಹೋಟೆಲು ಕೆಲಸ ಮಾಡಿದರೆ ಒಳ್ಳೆಯ ಲಾಭವನ್ನು ಪಡೆಯುತ್ತಾರೆ. ನಾಲ್ಕನೇ ಮನೆ ಪುರುಷ ರಾಶಿಯಾಗಿರುವ ಮೇಷ, ಸಿಂಹ, ಧನುಗಳಲ್ಲಿ ಚಂದ್ರನಿದ್ದರೆ ಇವರಿಗೆ ಹಿರಿಯರ ಸಂಪತ್ತಿನ ಸುಖ ಅನುಭವಿಸಲು ಸಿಗುತ್ತದೆ. ವಷಭ, ಕನ್ಯಾ, ಮಕರ, ವಶ್ಚಿಕಗಳ ನಾಲ್ಕರ ಚಂದ್ರ ಇವರಿಗೆ ಪೂರ್ವಾರ್ಜಿತ ಆಸ್ತಿ, ಧನ ಸಿಗುವುದಿಲ್ಲ. ಮಿಥುನ, ಕುಂಭ ರಾಶಿಗಳ ಚಂದ್ರ ಹಿರಿಯರ ಭೂ ಸಂಪತ್ತು ಅನುಭವಿಸಲು ಕೊಡುತ್ತಾನೆ. ಆದರೆ ಜೀವನದ ಕೊನೆಗೆ ಉಳಿಯುವುದಿಲ್ಲ. ಕರ್ಕಾಟಕ, ಮೀನ, ತುಲಾ ರಾಶಿಗಳ ನಾಲ್ಕರ ಚಂದ್ರನು ಹಿರಿಯರ ಭೂ ಸಂಪತ್ತನ್ನು ಕೊಡುತ್ತಾನೆ. ನಂತರ ಇದನ್ನು ವದ್ಧಿಗೊಳಿಸುತ್ತಾರೆ. ಪುರುಷ ರಾಶಿಗತನಾದ ನಾಲ್ಕರ ಚಂದ್ರ ವಿವಾಹ ನಂತರ ವದ್ಧಿ ಮಾಡುತ್ತಾನೆ. ನಾಲ್ಕರ ಚಂದ್ರನು ಇದ್ದವರು ಕುಟುಂಬದಲ್ಲಿ ಒಬ್ಬರು ದೀರ್ಘಾಯಸ್ಸು ಹೊಂದಿದವರಾಗಿದ್ದು, ಅಂತಹವರು ಇತರರೊಂದಿಗೆ ಅನ್ಯೋನ್ಯವಾಗಿರುವುದಿಲ್ಲ. ಮೂವತ್ತೆರಡನೇ ಪ್ರಾಯದ ನಂತರ ಇವರು ವಿವಾಹವಾಗಿ ಸಂಪತ್ತನ್ನು ಸಂಪಾದಿಸುತ್ತಾರೆ. ನಾಲ್ಕರ ಚಂದ್ರ ಕುಲದೇವತಾ ಪ್ರೀತಿದಾಯಕ. ಈ ಚಂದ್ರ ಆಶ್ರಿತ ರಾಶಿ ಸಂಬಂಧದ ಗ್ರಹ. ದೇವತೆಯ ಭಕ್ತಿ ಕಾರ್ಯಗೊಳ್ಳುವುದರಿಂದ ಸಾಂಸಾರಿಕ ಸುಖಕ್ಕೆ ಒಳ್ಳೆಯದಾಗುವುದು. ಸುತ ಭಾವದ ಚಂದ್ರನಿಂದ ಪುತ್ರ ಸಂತತಿಗೆ ತಡೆ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಪಂಚಮದಲ್ಲಿ ಚಂದ್ರನಿದ್ದರೆ ಇವರಿಗೆ ಹೆಂಗಸರ ಬುದ್ಧಿ ಇರುತ್ತದೆ. ಬಹಳ ಶ್ರಮ ಪಟ್ಟು ಹಣ ಸಂಪಾದನೆ ಮಾಡುತ್ತಾರೆ. ಪಂಚಮದಲ್ಲಿ ಚಂದ್ರನಿದ್ದು, ಬೇರೆ ಗ್ರಹಗಳು ಇಲ್ಲದಿದ್ದರೆ ಇವರಿಗೆ ಕನ್ಯಾ ಸಂತತಿ ಮಾತ್ರ ಇರುತ್ತದೆ. ಪುತ್ರ ಸಂತತಿ ಇರುವುದಿಲ್ಲ. ಚಂದ್ರನು ಕ್ಷೀಣಯುತನಾದರೆ ಚಂಚಲ ಪುತ್ರಿಯನ್ನು ಹೊಂದುತ್ತಾರೆ. ಇವರು ರೋಗಿಯೂ, ಭಯಾನಕರೂ ಆಗುವರು. ಪಂಚಮದ ಚಂದ್ರನು ಆರನೇ ವರ್ಷದಲ್ಲಿ ಅಗ್ನಿ ಯಾ ಬಿಸಿಯಿಂದ ತೊಂದರೆಯನ್ನು ಅನುಭವಿಸುತ್ತಾರೆ. ಇದರಲ್ಲಿ ಚಂದ್ರನಿರಲು ಧೈರ್ಯ, ಒಳ್ಳೆಯ ಬುದ್ಧಿ, ಅಭಿವೃದ್ಧಿ ಹೊಂದುತ್ತಾರೆ. ಇವರದ್ದು ದೊಡ್ಡ, ಚೆಲುವಾದ ದೇಹ. ತೇಜಸ್ವಿ, ಮುಕ್ತ ವಿಚಾರಶೀಲರೂ ಆಗುತ್ತಾರೆ. ಇವರು ರಾಜಕೀಯದಲ್ಲಿ ಬಹಳ ಹೆಸರು ಮಾಡುತ್ತಾರೆ. ನಾಲ್ಕರ ಚಂದ್ರ ವಿಲಾಸ, ವಿನೋದ, ಮನೋರಂಜನೆಯಲ್ಲಿ ಆಸಕ್ತಿ ಇರುವವರೂ, ಮಕ್ಕಳಲ್ಲಿ, ಹೆಂಗಸರಲ್ಲಿ ಮೆಚ್ಚುಗೆ ಗಳಿಸುವವರೂ ಆಗುತ್ತಾರೆ. ಇವರ ಮಕ್ಕಳು ಚೆಲುವಾದ ದೇಹವನ್ನು ಹೊಂದುತ್ತಾರೆ. ಚಂದ್ರ ಬಲಿಷ್ಠನಾಗಿದ್ದರೆ ಇವರು ಮಟ್ಕಾ, ಜುಗಾರಿಯಲ್ಲಿ ಭಾರಿ ಲಾಭ ಪಡೆಯುತ್ತಾರೆ. ಚತುರ್ಥಮ ದ್ವಿಭಾವ ರಾಶಿಯಾಗಿದ್ದರೆ ಇವರಿಗೆ ಅವಳಿ ಜವಳಿ ಮಕ್ಕಳಾಗುತ್ತದೆ. ಪಂಚಮದ ಚಂದ್ರನನ್ನು ಶನಿ ನೋಡುತ್ತಿದ್ದರೆ ಇವರು ವಂಚಕ, ಕಪಟ ಬುದ್ಧಿಯುಳ್ಳವರಾಗಿರತ್ತಾರೆ. ಮಾತಿನಿಂದ ಮರಳುಗೊಳಿಸಿ ಆಪ್ತ ಜನರನ್ನು ಕಷ್ಟಕ್ಕೆ ಈಡು ಮಾಡಿ ಹಣ ಸಂಗ್ರಹ ಮಾಡುತ್ತಾರೆ. ಈ ರಾತ್ರಿ ಚಂದ್ರ ಸಂತಾನ ಫಲ ಕೊಡುತ್ತಾನೆ. ಚಂದ್ರನೊಂದಿಗೆ ಕುಜನಿದ್ದರೆ ಇವರು ಸಾಹಸ ಮನೋವೃತ್ತಿಯುಳ್ಳವರಾಗುತ್ತಾರೆ. ಚಂದ್ರನು ಪಂಚಮದಲ್ಲಿ ಬಲಿಷ್ಠನಾಗಿದ್ದರೆ ಮಕ್ಕಳು ಭಾಗ್ಯವಂತರಾಗುತ್ತಾರೆ. ಇವರು ಮೇಧಾವಿ, ಮೆಲ್ಲ ಮೆಲ್ಲನೇ ನಡೆಯುವ ಮಂತ್ರಿಯಾಗುತ್ತಾರೆ. ಪಂಚಮ ಸ್ಥಾನವು ವೃಷಭ, ಕನ್ಯಾ, ಮಕರವಾದರೆ ಇವರಿಗೆ ಹೆಣ್ಣು ಮಕ್ಕಳು ಜಾಸ್ತಿಯಾಗುತ್ತರೆ. ಇವರಿಗೆ ವಿಳಂಬವಾಗಿ ನಲ್ವತ್ತೆರಡು ಪ್ರಾಯವಾಗುವಾಗ ಒಂದು ಗಂಡು ಮಗುವಾಗುವುದು. ಪಂಚಮವು ಮಿಥುನ, ತುಲಾ, ಕುಂಭವಾಗಿ ಅಲ್ಲಿ ಚಂದ್ರನಿದ್ದರೆ ಇವರಿಗೆ ಗಂಡು ಸಂತತಿಯಾಗಲು ದೋಷ ಇದ್ದು, ಸ್ತ್ರೀ ಸಂತಾನ ಇರುತ್ತದೆ. ಪಂಚಮ ಕರ್ಕಾಟಕ, ವಶ್ಚಿಕ, ಮೀನ, ಮೇಷ, ಸಿಂಹ, ಧನುಗಳ ಚಂದ್ರ ಪುತ್ರ ಸಂತಾನಕ್ಕೆ ಅನಿಷ್ಟದಾಯಕನಾಗುತ್ತಾನೆ. ಮೊದಲನೆಯ ಪುತ್ರ ಸಂತಾನ ನಷ್ಟವಾಗಿ ಬಳಿಕ ಸ್ತ್ರೀ ಸಂತಾನ ಹೊಂದಿ ಬಳಿಕ ಪುತ್ರ ಸಂತಾನವಾಗುವುದು. ಅನ್ಯರ ಮನಸ್ಸನ್ನು ಬದಲುಗೊಳಿಸುವ ಪೌರುಷ ಸಾಧನೆ ಚಂದ್ರನಿಂದಾಗುವುದು. ಕಲಾವಿದರು ನಾಟಕದಲ್ಲಿ ಪೌರುಷ ತೋರಿಸುವುದು ಚಂದ್ರನಿಂದಾಗಿ. ನಪುಂಸಕತ್ವದ ಚಂದ್ರ, ಮಿಥುನ, ತುಲಾ, ಕುಂಭವು ಪಂಚಮ ಭಾವವಾದರೆ ಆಗುವ ಸಂಭವ ಇದೆ. ಪಂಚಮವು ಪುರುಷ ರಾಶಿ ಅಂದರೆ ಮೇಷ, ಮಿಥುನ, ಸಿಂಹ, ತುಲಾ, ಧನು ಮತ್ತು ಕುಂಭ ಈ ಭಾವವು ಶುಭ ಫಲವನ್ನು ಹೊಂದುತ್ತದೆ. ಮೇಷ, ಸಿಂಹ, ಧನು ರಾಶಿಗಳು ಪಂಚಮವಾಗಿ ಅಲ್ಲಿ ಚಂದ್ರನಿದ್ದು, ಅದಕ್ಕೆ ಕುಜನ ದೃಷ್ಟಿ ಇದ್ದರೆ ಇವರಿಗೆ ಅಗ್ನಿ ಬಾಧೆಗಳು ಬರುತ್ತದೆ. ಪಂಚಮವು ಮೇಷ, ಸಿಂಹ, ಧನು ರಾಶಿಗಳಾಗಿ ಅದರಲ್ಲಿ ಚಂದ್ರನು ಇದ್ದವರ ವಿದ್ಯೆಯು ಅಪೂರ್ಣವಾಗುವುದು. ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿಯು ಚೆನ್ನಾಗಿರುವುದಿಲ್ಲ. ವೃಷಭ, ಕನ್ಯಾ, ಮಕರ ಇದು ಪಂಚಮವಾಗಿ ಇಲ್ಲಿ ಚಂದ್ರನಿದ್ದರೆ ಇವರ ವಿದ್ಯಾಭ್ಯಾಸವು ಮೊಟಕುಗೊಳ್ಳುವುದು. ಇವರು ಸಾರ್ವಜನಿಕ ಹಿತ ಖಾತೆ, ಬ್ಯಾಂಕ್, ಅಂಚೆ ಕಚೇರಿಯಲ್ಲಿ ಉದ್ಯೋಗ ಹೊಂದುವರು. ಕರ್ಕಾಟಕ, ವಶ್ಚಿಕ, ಮೀನ ರಾಶಿಗಳು ಪಂಚಮವಾಗಿ ಅಲ್ಲಿ ಚಂದ್ರನಿದ್ದರೆ ಇವರು ವಕೀಲರೂ, ವೈದ್ಯರೂ ಆಗುತ್ತಾರೆ. ಜೀವನ ಮಾರ್ಗದಲ್ಲಿ ಜನತೆಯಲ್ಲಿ ಮುಂದುವರಿದು ಬರುವ ಮಹತ್ವಾಕಾಂಕ್ಷೆ ಇವರಲ್ಲಿ ತುಂಬಿರುತ್ತದೆ. ಮಿಥುನ, ತುಲಾ, ಕುಂಭ ಪಂಚಮವಾಗಿ ಅಲ್ಲಿ ಚಂದ್ರನಿದ್ದರೆ ಇವರ ಕೆಲಸವು ಜಯವಾಗುವುದು. ಹಣಕಾಸಿನ ಆಸೆ ಜಾಸ್ತಿಯಾಗಿ ದಾಂಪತ್ಯ ವಿಷಯಾಸಕ್ತಿಗಳಿಂದ ದೂರಗೊಳ್ಳುತ್ತಾರೆ. ಸಂತಾನ ವಿಷಯದಲ್ಲಿ ಈ ಚಂದ್ರ ಶುಭನಾಗಿರುವುದಿಲ್ಲ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ