Skip to main content

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ ತುಳಸಿ, ದೂರ್ವಾ, ಬಿಲ್ವ ಪತ್ರಾ ಹಣ್ಣುಗಳು ರಂಗೋಲಿ ಕಲಶ ಕಾಯಿ ಅಕ್ಕಿ ಮಣೆ, ಚೌರಂಗ , ಬಾಳೇ ಎಲೆಗಳು, ದೇವರನ್ನು ಇಡಲು, ದೇವರ ಮೂರ್ತಿ ಅಥವಾ ಫೋಟೊ ನೈವೇದ್ಯಕ್ಕೆ ಮಾಡಿದ ಅನ್ನ, ಪಾಯಸ ಮುಂತಾದವು ಕುಳಿತುಕೊಳ್ಳಲು ಆಸನ, ಮಣೆ ಅಥವಾ ಚಾಪೆ ಪಂಚಾಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ) ಪೂಜೆಗೆ ಶುದ್ಧ ನೀರು ದೊಡ್ಡ ಹರಿವಾಣ( ಪ್ಲೇಟು) ವಾಟಿ( ಹಳದಿ, ಕುಂಕುಮ ಹಾಕಲು) ಪಂಚಪಾತ್ರೆ (ಲೋಟ, ಚಮಚ, ತಾಟು, ಕಲಶ) ಗಂಟೆ ಆರತಿ ಈ ಎಲ್ಲವನ್ನು ಪೂಜೆಗೆ ಮೊದಲು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ೧) ನಾವು ಪೂಜೆಸುವ ದೇವರನ್ನು ಪೂರ್ವಕ್ಕೆ ಅಥವಾ ಉತ್ತರಕ್ಕೆ ಮುಖವಾಗಿ ಇಡಬೇಕು. ೨) ದೇವರ ಮುಖ ಪೂರ್ವಕ್ಕೆ ಇರುವಾಗ ನಾವು ಉತ್ತರಕ್ಕೆ ಮುಖ ಮಾಡಿ ದೇವರ ಬಲಗಡೆ ಕುಳಿತುಕೊಳ್ಳಬೇಕು. ಒಂದು ವೇಳೆ ನಮ್ಮ ಮುಖ ಉತ್ತರಕ್ಕೆ ಇರುವಂತೆ ಕುಳಿತುಕೊಳ್ಳಲು ಆಗದಿದ್ದರೆ ದೇವರ ನೇರ ಎದುರು ಕುಳಿತುಕೊಳ್ಳದೇ ಪಶ್ಚಿಮಕ್ಕೆ ಮುಖ ಮಾಡಿ ಸ್ವಲ್ಪ ಬದಿಯಲ್ಲಿ ಕುಳಿತುಕೊಳ್ಳಬೇಕು. ೩) ದೇವರ ಮುಖ ಉತ್ತರಕ್ಕೆ ಇರುವಾಗ ನಮ್ಮ ಮುಖ ದಕ್ಷಿಣಕ್ಕೆ ಇರದಂತೆ ಕುಳಿತುಕೊಳ್ಳಬೇಕು. ೪) ದೇವರ ಮುಖ ಪಶ್ಚಿಮಕ್ಕೆ (ಪೂರ್ವ- ಪಶ್ಚಿಮ) ಇರುವಾಗ ಸ್ವಲ್ಪ ಬದಿಯಲ್ಲಿ ಪೂರ್ವಕ್ಕೆ ಮುಖವಾಗಿ ನಾವು ಕುಳಿತು ಪೂಜಿಸಬೇಕು. ಒಟ್ಟಿನಲ್ಲಿ ದಕ್ಷಿಣಕ್ಕೆ ಮುಖವಾಗಿ ಕುಳಿತು ಪೂಜಾಕಾರ್ಯವನ್ನು ಮಾಡಬಾರದು. ಕೇವಲ ಪಿತೃ ಕಾರ್ಯವನ್ನು ಮಾತ್ರ ದಕ್ಷಿಣಕ್ಕೆ ಮುಖ ಮಾಡಿ ಕುಳಿತು ಮಾಡಬೇಕು. ಅಲ್ಲದೇ ದೇವರ ಮುಖ ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಇಡಬಾರದು. ಪೂಜಾದಿ ಕಾರ್ಯಗಳನ್ನು ನೆಲದ ಮೇಲೆ ಚಾಪೆ ಅಥವಾ ಮಣೆ ಹಾಕಿಕೊಂಡು ಕುಳಿತು ಮಾಡಬೇಕು. ನೇರವಾಗಿ ನೆಲದ ಮೇಲೆ ಕುಳಿತುಕೊಳ್ಳಬಾರದು. ನಿಂತುಕೊಂಡು ಅಥವಾ ಕುರ್ಸಿಯ ಮೇಲೆ ಕುಳಿತು ಪೂಜೆ ಮಾಡುವುದು ಸರಿಯಲ್ಲ. ಪೂಜೆಗೆಂದು ತೊಳೆದು ಹಾಕಿದ ಧೋತಿಯನ್ನೇ ಅಥವಾ ಮಡಿ ಧರಿಸಿ ಪೂಜೆಗೆ ಕುಳಿತುಕೊಳ್ಳಬೇಕು. ಇಲ್ಲಿ ಹೀಗೆ ಎಕೆ ಮಾಡಬೇಕು ಹಾಗೆ ಎಕೆ ಮಾಡಬಾರದು ಎಂಬ ಪ್ರಶ್ನೆ ಬೇಡ. ಇಲ್ಲಿ ಆಚಾರಕ್ಕೆ ಅತಿ ಮಹತ್ವವಿದೆ. ಇದೇ ನಮ್ಮ ಸಂಸ್ಕೃತಿಯ ಮೊದಲನೇ ಹೆಜ್ಜೆ. ಆಚಾರ-ಶ್ರದ್ಧೆ-ಭಕ್ತಿಯಿಂದ ಮಾಡುವ ಪೂಜೆಗಳಿಂದ ನಮ್ಮ ಮನೋಕಾಮನೆಗಳು ನಿಃಸಂದೇಹವಾಗಿ ಪೂರ್ಣವಾಗುತ್ತದೆ. ನಾವು ಎಷ್ಟು ಪೂಜೆ ಮಾಡಿದರೂ ಕಷ್ಟ ಪರಿಹಾರವಾಗುವುದಿಲ್ಲ ಎಂದುಕೊಳ್ಳಬಾರದು. ನಾವು ಈ ಜೀವನದಲ್ಲಿ ಅನುಭವಿಸುತ್ತಿರುವುದು ಹಿಂದಿನ ಜನ್ಮಾಂತರದ ಪಾಪ ಪುಣ್ಯ ಕರ್ಮದ ಫಲ. ಈ ಪಾಪಕರ್ಮ ಎನ್ನುವುದು ಪರ್ವತವಿದ್ದಂತೆ. ಇದು ಅಚಲವಾದುದು. ಇದನ್ನು ಭಗವಂತನ ನಾಮ ಎಂಬ ಆಯುಧದಿಂದ ಕೊರೆದು ಇನ್ನೊಂದು ಬದಿಯನ್ನು ಸೇರಬಹುದು. ಅದು ನಮ್ಮ ಜೀವನದಲ್ಲಿ ಸಫಲತೆಯನ್ನು ಪಡೆದಂತೆ. ಪೂಜೆಯನ್ನು ಹೀಗೆ ಮಾಡಬೇಕು: ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯವನ್ನು ಸಜ್ಜುಗೊಳಿಸಿಕೊಂಡು ಚಾಪೆ ಅಥವಾ ಮಣೆಯ ಮೇಲೆ ಶಾಂತ ಚಿತ್ತರಾಗಿ ಪತ್ನಿಯ ಸಮೇತರಾಗಿ ಕುಳಿತುಕೊಳ್ಳಿ. ನಿಮ್ಮ ಪತ್ನಿ ನಿಮ್ಮ ಬಲಗಡೆ ಕುಳಿತುಕೊಳ್ಳಲಿ. ಪೂಜೆಯನ್ನು ಪ್ರಾರಂಭಿಸಿ. ಮೊದಲು ದೀಪವನ್ನು ಹಚ್ಚಬೇಕು. ಆಚಮ್ಯ ಪಂಚಪಾತ್ರಗೆ ನೀರನ್ನು ಹಾಕಿಕೊಳ್ಳಿ. ಎಡಗೈಯಲ್ಲಿ ಚಮಚ ತೆಗೆದುಕೊಂಡು ಬಲಗೈಗೆ ಬೇರೆ ಬೇರೆಯಾಗಿ ೩ ಸಲ ನೀರನ್ನು ಹಾಕಿ, ಮಂತ್ರ ಹೇಳುತಾ ೩ ಸಲ ಕುಡಿಯಬೇಕು. ೪ನೇ ಚಮಚ ನೀರನ್ನು ಕೈಯಲ್ಲಿ ಹಾಕಿಕೊಂಡು ಪ್ಲೇಟಿನಲ್ಲಿ ಬಿಡಬೇಕು. ಇದನ್ನು ಆಚಮ್ಯ ಎನ್ನುತ್ತಾರೆ. ಕೇಶವಾಯ ನಮಃ --- ನೀರನ್ನು ಕುಡಿಯಬೇಕು. ನಾರಾಯಣಾಯ ನಮಃ --- ನೀರನ್ನು ಕುಡಿಯಬೇಕು. ಮಾಧವಾಯ ನಮಃ --- ನೀರನ್ನು ಕುಡಿಯಬೇಕು. ಗೋವಿಂದಾಯ ನಮಃ -- ಕೈಗೆ ನೀರನ್ನು ಹಾಕಿ ಕೆಳಗೆ ಬಿಡಿರಿ. ಕೈಮುಗಿದುಕೊಂಡು ಮುಂದಿನ ನಾಮವನ್ನು ಹೇಳುತ್ತಿರಿ. -- ವಿಷ್ಣವೇ ನಮಃ, ಮಧುಸೂದನಾಯ ನಮಃ, ತ್ರಿವಿಕ್ರಮಾಯ ನಮಃ, ವಾಮನಾಯ ನಮಃ, ಶ್ರೀಧರಾಯ ನಮಃ, ಹೃಶೀಕೇಶಾಯ ನಮಃ, ಪದ್ಮನಾಭಾಯ ನಮಃ, ದಾಮೋಧರಾಯ ನಮಃ, ಸಂಕರ್ಷಣಾಯ ನಮಃ, ವಾಸುದೇವಾಯ ನಮಃ, ಪ್ರದ್ಯುಮ್ನಾಯ ನಮಃ, ಅನಿರುದ್ಧಾಯ ನಮಃ, ಪುರುಷೋತ್ತಮಾಯ ನಮಃ, ಅಧೋಕ್ಷಜಾಯ ನಮಃ, ನಾರಸಿಂಹಾಯ ನಮಃ, ಅಚ್ಯುತಾಯ ನಮಃ, ಜನಾರ್ಧನಾಯ ನಮಃ, ಉಪೇಂದ್ರಾಯ ನಮಃ, ಹರಯೇ ನಮಃ, ಶ್ರೀ ಕೃಷ್ಣಾಯ ನಮಃ ಘಂಟಾನಾದ ಘಂಟೆಯನ್ನು ತೆಗೆದುಕೊಂಡು ಬಲಗೈಯಿಂದ ೧ ಚಮಚ ನೀರನ್ನು ಘಂಟೆಯ ಮೇಲೆ ಹಾಕಿ ಗಂಧ, ಹೂವು, ಅಕ್ಷತೆಯನ್ನು ಹಾಕಿ ಘಂಟೆಯನ್ನು ಬಾರಿಸುತ್ತಾ ಹೀಗೆ ಮಂತ್ರವನ್ನು ಹೇಳಬೇಕು. ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ | ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ || ಆಸನ ಶುದ್ಧಿ ನಾವು ಕುಳಿತಿರುವ ಆಸನದ ಮೇಲೆ ಹೂವು, ಗಂಧ, ಅಕ್ಷತವನ್ನು ಹಾಕಬೇಕು ಮತ್ತು ಈ ಮಂತ್ರವನ್ನು ಹೇಳಬೇಕು. ಆಧಾರ ಶಕ್ತಿ ಕಮಲಾಸನಾಯ ನಮಃ || ಸಕಲ ಆರಾಧನೈಃ ಸುಅರ್ಚಿತಂ ಅಸ್ತಂ || ಪ್ರಾರ್ಥನೆ ಕೈಮುಗಿದು ಈ ಶ್ಲೋಕವನ್ನು ಹೇಳುತ್ತಿರಬೇಕು. ಸುಮುಖಶ್ಚೈಃಕದಂತಶ್ಚ ಕಪಿಲೋ ಗಜಕರ್ಣಕಃ ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ | ಧೂಮೃಕೇತು ರ್ಗಣಾಧ್ಯಕ್ಷೋ ಭಾಲಚಂದ್ರೋ ಗಜಾನನಃ || ತದೇವ ಲಗ್ನಂ ಸುದಿನಂ ತದೇವ | ತಾರಾಬಲಂ ಚಂದ್ರ ಬಲಂ ತದೇವ ವಿದ್ಯಾ ಬಲಂ ದೈವ ಬಲಂ ತದೇವ ಲಕ್ಷ್ಮೀಪತೇಃ ಅಂಘ್ರಿ ಯುಗಂ ಸ್ಮರಾಮಿ || ಕುಲದೇವತಾದಿ ಸರ್ವೇಭ್ಯೋ ದೇವೇಭ್ಯೋ ನಮಃ| ಸರ್ವಾಭ್ಯೋ ದೇವತಾಭ್ಯೋ ನಮೋ ನಮಃ| ಪ್ರಾರಂಭ ಕಾಲಃ ಸುಮುಹೂರ್ತೋ ಸ್ತ್ವಿತಿ ಭವಂತು | ಪ್ರಾರಂಭ ಕಾಲಃ ಸೂಮುಹೂರ್ತೋಸ್ತು || ಸಂಕಲ್ಪ ಕೈಯಲ್ಲಿ ಹೂವು ಅಕ್ಷತೆ ತೆಗೆದುಕೊಂಡು ಎಡಕೈಯಲ್ಲಿ ಹಾಕಿ ಬಲಗೈಯನ್ನು ಮುಚ್ಚಿ , ಬಲ ತೊಡೆಯ ಮೇಲೆ ಇಟ್ಟುಕೊಂಡು ಹೇಳಬೇಕು. ನಮಃ ಶುಭಾಭ್ಯಾರಿ ಶುಭೇ ಶೋಭನೇ ಮೂಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ, ಶ್ರೀಹರೇಃ ಶ್ವೇತವರಾಹ ಕಲ್ಪೇ ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮ ಪಾದೇ, ಜಂಬೂದ್ವೀಪೇ, ದಂಡಕಾರಣ್ಯೇ, ಭರತ ಖಂಡೇ, ಭಾರತ ವರ್ಷೇ, ಮೇರೋಃ ದಕ್ಷಿಣ ತೀರೇ, ಶಾಲಿವಾಹನ ಶಕೇ, ಚೌದ್ಧಾವತಾರೇ, ಅಸ್ಮಿನ್ , ವರ್ತಮಾನೇ, ವ್ಯಾವಹಾರಿಕೇ, ಪ್ರಭವಾದಿ ಷಷ್ಠಿ ಸಂವತ್ಸರಾಣಾಂ ಮಧ್ಯೇ -- ನಾಮ ಸಂವತ್ಸರೇ, -- ಅಯನೇ, -- ಋತೌ, -- ಮಾಸೇ, -- ಪಕ್ಷೇ, -- ತಿಥೌ, -- ವಾಸರಾಯುಕ್ತಾ ಯಾಂ, ಶುಭ ನಕ್ಷತ್ರ, ಶುಭ ಯೋಗ, ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯಾಯಾಂ ಪುಣ್ಯ ಕಾಲೇ, ಮಹಾಪುಣ್ಯ ಶುಭ ತಿಥೌ || ( ಇಲ್ಲಿ ಪೂಜೆ ಮಾಡುವ ದಿನದ ಸಂವತ್ಸರ, ಅಯನ, ಋತು, ಮಾಸ, ಪಕ್ಷ, ತಿಥಿ, ವಾರ ಯಾವುದಿದೆಯೆಂದು ಹೇಳಬೇಕಾಗುತ್ತದೆ. ಇದು ಶಕ್ಯವಿಲ್ಲದಿದ್ದರೆ ಇಲ್ಲಿಂದ ಮುಂದಿನ ಭಾಗವನ್ನು ಹೇಳಬೇಕು). ಮಮ ಉಪಾತ್ತ ಸಮಸ್ತ ದುರಿತ ಕ್ಷಯದ್ವಾರಾ| ಶ್ರೀ ಪರಮೇಶ್ವರ ಪ್ರೀತ್ಯರ್ಥ್ಯಂ| ಅಸ್ಮಾಕಂ ಸಹ ಕುಟುಂಬಾನಾಂ ಕ್ಷೇಮ-ಸ್ಥೈರ್ಯ-ಧೈರ್ಯ-ವಿಜಯ-ಆಯುಃ-ಆರೋಗ್ಯ-ಆನಂದ-ಐಶ್ವರ್ಯ, ಅಭಿವೃದ್ಧ್ಯರ್ಥಂ ಧರ್ಮ-ಅರ್ಥ-ಕಾಮ -ಮೋಕ್ಷ, ಚತುರ್ವಿಧ ಫಲ ಪುರುಷಾರ್ಥ ಸಿಧ್ಯರ್ಥಂ, ಸಮಸ್ತ ದುರಿತ ಉಪಶಮನಾರ್ಥಂ, ಸಮಸ್ತ ಸನ್ ಮಂಗಳಾ ಅವಾಪ್ತ್ಯರ್ಥಂ ------(ಇಲ್ಲಿ ------ ಇರುವಲ್ಲಿ ನಾವು ಪೂಜಿಸುತ್ತಿರುವ ದೇವರ ಹೆಸರನ್ನು ಹಾಕಿಕೊಳ್ಳಬೇಕು) ದೇವತಾ ಪ್ರೀತ್ಯರ್ಥಂ ಧ್ಯಾನ ಆವಾಹನಾದಿ ಷೋಢಶೋಪಚಾರ ಪೂಜಾಂ ಕರಿಷ್ಯೇ|| ಎಡಗೈಯಲ್ಲಿ ಇರುವ ಹೂ ಅಕ್ಷತವನ್ನು ಬಲಗೈಗೆ ಹಾಕಿ ಎಡಗೈಯಿಂದ ಒಂದು ಚಮಚ ನೀರು ಹಾಕಿ ಕೆಳಗೆ ಬಿಡಬೇಕು. ನಿರ್ವಿಘ್ನತಾ ಸಿಧ್ಯರ್ಥಂ ಮಹಾಗಣಪತಿ ಪೂಜಾಂ ಕರಿಷ್ಯೇ || ನಿರ್ವಿಘ್ನ ಗಣಪತಿ ಪೂಜೆ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಗಣಪತಿ ಪೂಜೆ ಮಾಡಬೇಕು. ನಿರ್ವಿಘ್ನ ಗಣಪತಿಯನ್ನು ಅಡಿಕೆ, ಕಾಯಿ ಅಥವಾ ಹರಿದ್ರಾ(ಹಳದಿ) ಈ ಮೂರರಲ್ಲಿ ನಿಮ್ಮ ಶಿಷ್ಟಾಚಾರದಂತೆ ಯಾವುದನ್ನಾದರೂ ಬಳಸಿ ಗಣಪತಿಯನ್ನು ಪೂಜೆ ಮಾಡಬೇಕು. ಪ್ರಧಾನ ಕಲಶಸ ಎದುರಿಗೆ ಇದನ್ನು ತಾಟು ಅಥವಾ ಬಾಳೆಯ ಮೇಲಿಟ್ಟು ಪೂಜಿಸಬೇಕು. (ಕೈಯಲ್ಲಿ ದೂರ್ವಾ, ಹೂವು, ಅಕ್ಷತಯನ್ನು ಹಿಡಿದುಕೊಂಡು ಗಣಪತಿಯನ್ನು ಪ್ರಾರ್ಥಿಸಬೇಕು). ನಮೋ ನಮೋ ಗಣೇಶಾಯ ವಿಘ್ನೇಶಾಯ ನಮೋ ನಮಃ| ವಿನಾಯಕಾಯ ವೈತುಭ್ಯಂ ವಿಕ್ರತಾಯ ನಮೋ ನಮಃ| ಮಹಾಗಣಪತಯೇ ನಮಃ ಧ್ಯಾಯಾಮಿ -- ಹೀಗೆಂದು ನಿರ್ವಿಘ್ನ ಗಣಪತಿಯ ಮೇಲೆ ಹಾಕಬೇಕು. ಮಹಾಗಣಪತಯೇ ನಮಃ ಆವಾಹಯಾಮಿ (ಸ್ವಲ್ಪ ಅಕ್ಷತ ಹಾಕಬೇಕು). ಮಹಾಗಣಪತಯೇ ನಮಃ ಆಸನಂ ಸಮರ್ಪಯಾಮಿ (ಸ್ವಲ್ಪ ಅಕ್ಷತೆಯನ್ನು ಗಣಪತಿಯ ಮೇಲೆ ಹಾಕಬೇಕು). ಮಹಾಗಣಪತಯೇ ನಮಃ ಪಾದ್ಯಂ ಸಮರ್ಪಯಾಮಿ (ಒಂದು ಚಮಚ ನೀರನ್ನು ಬಲಗೈಯಿಂದ ಕೆಳಗೆ ಬಿಡಿ). ಮಹಾಗಣಪತಯೇ ನಮಃ ಅರ್ಘ್ಯಂ ಸಮರ್ಪಯಾಮಿ (ಒಂದು ಚಮಚ ನೀರನ್ನು ಬಲಗೈಯಿಂದ ಕೆಳಗೆ ಬಿಡಿ). ಮಹಾಗಣಪತಯೇ ನಮಃ ಸ್ನಾನಂ ಸಮರ್ಪಯಾಮಿ (ಒಂದು ಹೂವಿನಿಂದ ನೀರನ್ನು ದೇವರ ಮೇಲೆ ಪ್ರೋಕ್ಷಿಸಿ). ಮಹಾಗಣಪತಯೇ ನಮಃ ಸ್ನಾನಂ ನಂತರೇಣ ಆಚಮನಂ ಸಮರ್ಪಯಾಮಿ (ಒಂದು ಚಮಚ ನೀರನ್ನು ಬಲಗೈಯಿಂದ ಕೆಳಗೆ ಬಿಡಿ). ಮಹಾಗಣಪತಯೇ ನಮಃ ವಸ್ತ್ರಂ ಸಮರ್ಪಯಾಮಿ (ಸ್ವಲ್ಪ ಅಕ್ಷತೆಯನ್ನು ಗಣಪತಿಯ ಮೇಲೆ ಹಾಕಬೇಕು). ಮಹಾಗಣಪತಯೇ ನಮಃ ಉಪವೀತಂ ಸಮರ್ಪಯಾಮಿ (ಸ್ವಲ್ಪ ಅಕ್ಷತೆಯನ್ನು ಗಣಪತಿಯ ಮೇಲೆ ಹಾಕಬೇಕು) ಮಹಾಗಣಪತಯೇ ನಮಃ ಆಭರಣಂ ಸಮರ್ಪಯಾಮಿ (ಸ್ವಲ್ಪ ಅಕ್ಷತೆಯನ್ನು ದೇವರ ಮೇಲೆ ಹಾಕಬೇಕು). ಮಹಾಗಣಪತಯೇ ನಮಃ ಗಂಧಂ ಸಮರ್ಪಯಾಮಿ (ಸ್ವಲ್ಪ ಗಂಧವನ್ನು ದೇವರಿಗೆ ಹಚ್ಚಬೇಕು) ಮಹಾಗಣಪತಯೇ ನಮಃ ಹರಿದ್ರಾ ಕುಂಕುಮಂ ಸಮರ್ಪಯಾಮಿ (ಗಣಪತಿಯ ಮೇಲೆ ಹಳದಿ ಮತ್ತು ಕುಂಕುಮವನ್ನು ಹಾಕಬೇಕು) ಮಹಾಗಣಪತಯೇ ನಮಃ ಅಕ್ಷತಾಂ ಸಮರ್ಪಯಾಮಿ (ಸ್ವಲ್ಪ ಅಕ್ಷತವನ್ನು ದೇವರ ಮೇಲೆ ಹಾಕಬೇಕು) ಮಹಾಗಣಪತಯೇ ನಮಃ ಪುಷ್ಪಾಣಿ ಸಮರ್ಪಯಾಮಿ (ಸ್ವಲ್ಪ ಹೂವನ್ನು ದೇವರ ಮೇಲೆ ಹಾಕಬೇಕು) ಮಹಾಗಣಪತಯೇ ನಮಃ ಧೂಪಂ ಆಗ್ರಾಪಯಾಮಿ (ಗಣಪತಿಗೆ ಧೂಪ ಅಥವಾ ಅಗರಬತ್ತಿಯನ್ನು ತೋರಿಸಿ) ಮಹಾಗಣಪತಯೇ ನಮಃ ದೀಪಂ ದರ್ಶಯಾಮಿ (ಗಣಪತಿಗೆ ದೀಪವನ್ನು ತೋರಿಸಬೇಕು) ಮಹಾಗಣಪತಯೇ ನಮಃ ಪೂರತಃ ಸ್ಥಿತ ನಾನಾ ವಿಧ ಫಲೋಪಹಾರಾ ನಿವೇದಯಾಮಿ(ಕೈಯಲ್ಲಿ ಹೂವನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ನೀರನ್ನು ಹಾಕಿ ಗಣಪತಿಯ ಮುಂದೆ ಇರುವ ಹಣ್ಣುಗಳ ಮೇಲೆ ಸುತ್ತಿ ದೇವರಿಗೆ ಹಾಕಬೇಕು) ಮಹಾಗಣಪತಯೇ ನಮಃ ತಾಂಬೂಲಂ ಸಮರ್ಪಯಾಮಿ (ಹೀಗೆಂದು ಎರಡು ವೀಳದೆಲೆ, ಒಂದು ಅಡಿಕೆ, ಒಂದು ನಾಣ್ಯವನ್ನು ದೇವರ ಮುಂದೆ ಇಟ್ಟು ಅದರ ಮೇಲೆ ನೀರನ್ನು ಬಿಡಬೇಕು) ಮಹಾಗಣಪತಯೇ ನಮಃ ನೀರಾಜನಂ ದರ್ಶಯಾಮಿ (ಹೀಗೆಂದು ಗಣಪತಿಗೆ ಆರತಿಯನ್ನು ತೋರಿಸಬೇಕು) ಮಹಾಗಣಪತಯೇ ನಮಃ ಮಂತ್ರಪುಷ್ಪಂ ಸಮರ್ಪಯಾಮಿ (ಸ್ವಲ್ಪ ಹೂವನ್ನು ಗಣಪತಿಗೆ ಸಮರ್ಪಿಸಿರಿ) ಮಹಾಗಣಪತಯೇ ನಮಃ ಪ್ರದಕ್ಷಿಣ ನಮಸ್ಕಾರಂ ಸಮರ್ಪಯಾಮಿ (ಹೀಗೆಂದು ಗಣಪತಿಗೆ ನಮಸ್ಕಾರವನ್ನು ಮಾಡಬೇಕು) ಮಹಾಗಣಪತಯೇ ಸರ್ವೋಪಚಾರ ಪೂಜಾರ್ಥಂ ಅಕ್ಷತಾಂ ಸಮರ್ಪಯಾಮಿ (ಹೀಗೆಂದು ಅಕ್ಷತವನ್ನು ಗಣಪತಿಯ ಮೇಲೆ ಹಾಕಬೇಕು) ಕೃತ ಪೂಜಾರಾಧನೇನ ಮಹಾಗಣಪತಿ ಪ್ರೀಯತಾಂ (ಹೀಗೆಂದು ಅಕ್ಷತೆ ಮತ್ತು ನೀರನ್ನು ಬಿಡಬೇಕು) (ಗಣಪತಿ ಸ್ಮರಣೆ ಮಾಡುವುದು) ವಕ್ರತುಂಡ ಮಹಾಕಾಯ ಸೂರ್ಯ ಕೋಟೀ ಸಮಪ್ರಭ| ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ || ಕಲಶ ಪೂಜೆ ಪೂಜೆಗಾಗಿ ಹೆಚ್ಚಿನ ನೀರನ್ನು ತುಂಬಿಕೊಂಡಿರುವ ಪಾತ್ರೆ ಅಥವಾ ಚಂಬು(ಕಲಶ) ಇದಕ್ಕೆ ಪೂಜೆ, ಹೂವು, ಅಕ್ಷತ ಕಲಶದ ಒಳಗೆ ಇಟ್ಟುಕೊಂಡು ಈ ಮಂತ್ರವನ್ನು ಹೇಳಬೇಕು. ಕಲಶಸ್ಯ ಮುಖೇ ವಿಷ್ಣು: ಕಂಠೇ ರುದ್ರ ಸಮಾಶ್ರಿತಃ| ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇ ಮಾತೃಗಣಾಃ ಸ್ಮೃತಾಃ || ಕುಕ್ಷೌತು ಸಾಗರಾಸ್ಸರ್ವೇ ಸಪ್ತ ದ್ವೀಪಾ ವಸುಂಧರಾ| ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು || (ನೀರಿನ ಕಲಶ ಅಲಂಕರಿಸಿರಿ). ಶಂಖ ಪೂಜೆ ಶಂಖವನ್ನು ಕಲಶೋದಕದಿಂದ ತೊಳೆಯಬೇಕು. ನೀರಿನಿಂದ ಭೂಮಿಯ ಮೇಲೆ ಚೌಕಾಕಾರದ ಮಂಡಲ ಮಾಡಿ, ಶಂಖ ಇಡುವ ಪಾತ್ರವನ್ನು ಅದರ ಮೇಲಿಟ್ಟು ಶಂಖವನ್ನು ಇಡಬೇಕು. ನೀರನ್ನು ತುಂಬಿ ಶಂಖದ ಮೇಲೆ ಹೂ, ಗಂಧ ಇಡಬೇಕು. ಶಂಖವನ್ನು ಮುಚ್ಚಿಕೊಂಡು ಈ ಮಂತ್ರವನ್ನು ಹೇಳಬೇಕು. ಶಂಖಂ ಚಂದ್ರಾರ್ಕ ದೈವತ್ಯಂ ಮಧ್ಯೇ ವರುಣ ದೇವತಾಃ | ಪೃಷ್ಟೇ ಪ್ರಜಾಪತಿಸ್ತತ್ರ ಅಗ್ರೇ ಗಂಗಾ ಸರಸ್ವತಿ || ಪಾಂಚಜನ್ಯಾಯ ವಿದ್ಮಹೇ ಪದ್ಮ ಗರ್ಭಾಯ ಧೀಮಹಿ| ತನ್ನಃ ಶಂಖ ಪ್ರಚೋದಯಾತ್|| ನೀರನ್ನು ಪೂಜೆಯ ನೀರಿನ ಕಲಶದೊಳಗೆ ಸ್ವಲ್ಪ ಹಾಕಬೇಕು. ಸ್ವಲ್ಪ ನೀರನ್ನು ಬಲಗೈಯಿಂದ ದೇವರಿಗೆ ಮತ್ತು ಪೂಜೆಯ ದ್ರವ್ಯದ ಮೇಲೆ ಪ್ರೋಕ್ಷಿಸಬೇಕು. ನಿಮ್ಮ ಮೇಲೆ ಸ್ವಲ್ಪ ನೀರನ್ನು ಪ್ರೋಕ್ಷಿಸಿ ಉಳಿದ ನೀರನ್ನು ಕೆಳಗೆ ಹಾಕಿ ಖಾಲಿ ಶಂಖವನ್ನು ಆಧಾರ ಪೀಠದ ಜೆತೆಗೆ ದೇವರ ಪೀಠದಲ್ಲಿಡಿ. ದ್ವಾರ ಪೂಜಾಂ ಕರಿಷ್ಯೇ || ಪೂರ್ವ ದ್ವಾರೇ ದ್ವಾರ ಶ್ರೀಯೈ ನಮಃ: ಜಯಾಯ ನಮಃ ವಿಜಯಾಯ ನಮಃ| --- (ಹೀಗೆ ಹೇಳುತ್ತಾ ಪೀಠದ ಪೂರ್ವ ದಿಕ್ಕಿನ ದ್ವಾರಕ್ಕೆ ಅಕ್ಷತ ಹಾಕಬೇಕು). ದಕ್ಷಿಣ ದ್ವಾರೇ ದ್ವಾರ ಶ್ರೀಯೈ ನಮಃ: ಬಲಾಯ ನಮಃ ಪ್ರಚಲಾಯ ನಮಃ | -- (ದಕ್ಷಿಣದ ಕಡೆಗೆ ಅಕ್ಷತೆಯನ್ನು ಹಾಕಬೇಕು) ಪಶ್ಚಿಮ ದ್ವಾರೇ ದ್ವಾರ ಶ್ರೀಯೈ ನಮಃ: ಕುಮುದಾಯ ನಮಃ ಕುಮುದಾಕ್ಷಾಯ ನಮಃ | -- (ಹೀಗೆಂದು ಪಶ್ಚಿಮಕ್ಕೆ ಅಕ್ಷತೆಯನ್ನು ಹಾಕಬೇಕು) ಉತ್ತರ ದ್ವಾರೇ ದ್ವಾರ ಶ್ರೀಯೈ ನಮಃ: ಶಂಖ ನಿಧಯೇ ನಮಃ ಪದ್ಮ ನಿಧಯೇ ನಮಃ | -- (ಹೀಗೆಂದು ಉತ್ತರ ದಿಕ್ಕಿಗೆ ಅಕ್ಷತೆಯನ್ನು ಹಾಕಿರಿ) ಪೀಠ ಪೂಜಾಂ ಕರಿಷ್ಯೇ || ಆಧಾರ ಶಕ್ತ್ಯೈ ನಮಃ, ಮೂಲ ಪ್ರಕೃತ್ಯೈ ನಮಃ, ಆದಿಕೂರ್ಮಾಯ ನಮಃ, ಅನಂತಾಯ ನಮಃ, ವರಾಹಾಯ ನಮಃ, ಪೃಥಿವ್ಯೈ ನಮಃ, ಇಕ್ಷುಸಾಗರಾಯ ನಮಃ, ಸುವರ್ಣದ್ವಿಪಾಯ ನಮಃ, ಮಣಿಮಂಡಪಾಯ ನಮಃ, ಕಲ್ಪವೃಕ್ಷಾಯ ನಮಃ, ರತ್ನ ಸಿಂಹಾಸನಾಯ ನಮಃ, ಧರ್ಮಾಯ ನಮಃ, ಜ್ಞಾನಾಯ ನಮಃ, ವೈರಾಗ್ಯಾಯ ನಮಃ, ಐಶ್ವರ್ಯಾಯ ನಮಃ, ಅಧರ್ಮಾಯ ನಮಃ, ಅಜ್ಞಾನಾಯ ನಮಃ, ಅವೈರಾಗ್ಯಾಯ ನಮಃ, ಅನೈಶ್ವರ್ಯಾಯ ನಮಃ, ಸರ್ವ ತತ್ವ ಪದ್ಮಾಯ ನಮಃ, ಆಧಾರ ಶಕ್ತಿ ಪೀಠ ದೇವತಾಭ್ಯೋ ನಮಃ (ಹೀಗೆ ಒಂದೊಂದು ನಾಮ ಹೇಳುತ್ತಾ ದೇವರ ಪೀಠದ ಮೇಲೆ ಅಕ್ಷತ ಹಾಕಬೇಕು.) ನವಶಕ್ತಿ ಪೂಜಾಂ ಕರಿಷ್ಯೇ ಇಲ್ಲಿ ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಇಂತಹ ಮುಖ್ಯ ಪಂಚಯತನ ದೇವರಿಗೆ ನವಶಕ್ತಿ ಪೂಜೆ ಬೇರೆ ಬೇರೆ ಇರುವುದರಿಂದ ನಾವು ಯಾವ ದೇವರ ಪೂಜೆ ಮಾಡುತ್ತಿದ್ದೇವೆ ಆ ನವಶಕ್ತಿ ಮಂತ್ರವನ್ನು ಉಪಯೋಗಿಸಬೇಕು ಸೂರ್ಯ ನವಶಕ್ತಿ ಓಂ ದೀಪ್ತಾಯೈ ನಮಃ ಸೂಕ್ಷ್ಮಾಯೈ ನಮಃ ಜಯಾಯೈ ನಮಃ ಭದ್ರಾಯೈ ನಮಃ ವಿಭೂತ್ಯೈ ನಮಃ ವಿಮಲಾಯೈ ನಮಃ ಓಂ ಅಮೋಘಾಯೈ ನಮಃ ಓಂ ವಿದ್ಯುತಾಯೈ ನಮಃ ಓಂ ಸರ್ವತೋ ಮುಖ್ಯೈ ನಮಃ || ಗಣಪತಿ ನವಶಕ್ತಿ ಓಂ ತೀವ್ರಾಯೈ ನಮಃ | ಜ್ವಾಲಿನ್ಯೈ ನಮಃ | ನಂದಾಯೈ ನಮಃ| ಭೋಗದಾಯೈ ನಮಃ| ಕಾಮರೂಪಿಣ್ಯೈ ನಮಃ| ಉಗ್ರಾಯೈ ನಮಃ| ತೇಜೋವತ್ಯೈ ನಮಃ | ಸತ್ಯಾಯೈ ನಮಃ| ವಿಘ್ನನಾಶಿನ್ಯೈ ನಮಃ|| ದೇವಿ(ಅಂಬಿಕಾ) ನವಶಕ್ತಿ ಓಂ ಪ್ರಭಾಯೈ ನಮಃ| ಮಾಯಾಯೈ ನಮಃ| ಜಯಾಯೈ ನಮಃ| ಸೂಕ್ಷ್ಮಾಯೈ ನಮಃ| ಶುದ್ಧಾಯೈ ನಮಃ| ನಂದಿನ್ಯೈ ನಮಃ| ಸುಪ್ರಭಾತಯೈ ನಮಃ| ವಿಜಯಾಯೈ ನಮಃ| ಸರ್ವಸಿದ್ಧಿದಾಯೈ ನಮಃ|| ೧೭. ಶಿವ ನವಶಕ್ತಿ ಓಂ ವಾಮಾಯೈ ನಮಃ| ಜ್ಯೇಷ್ಠಾಯೈ ನಮಃ | ರೌದ್ರೈ ನಮಃ| ಕಾಲ್ಯೈ ನಮಃ| ಕಲವಿಕರಿಣ್ಯೈ ನಮಃ| ಬಲವಿಕರಿಣ್ಯೈ ನಮಃ| ಬಲಪ್ರಮಥಿನ್ಯೈ ನಮಃ| ಸರ್ವಭೂತದಮನ್ಯೈ ನಮಃ| ಮನೋನ್ಮನ್ಯೈ ನಮಃ| ವಿಷ್ಣು ನವಶಕ್ತಿ ಓಂ ವಿಮಲಾಯೈ ನಮಃ| ಉತ್ಕರ್ಷಿಣ್ಯೈ ನಮಃ| ಜ್ಞಾನಾಯೈ ನಮಃ| ಕ್ರಿಯಾಯೈ ನಮಃ| ಯೋಗಾಯೈ ನಮಃ| ಪ್ರಹ್ವ್ಯೈ ನಮಃ| ಸತ್ಯಾಯೈ ನಮಃ| ಈಶಾನಾಯೈ ನಮಃ| ಅನುಗ್ರಹಾಯೈ ನಮಃ|| (ಹೀಗೆ ೯ ನಾಮ ಹೇಳಿ ೯ ಸಲ ಅಕ್ಷತ ಹಾಕಬೇಕು) ಅಥ ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ || (ಬಲಗೈಯಿಂದ ಒಂದು ಚಮಚ ನೀರನ್ನು ಕೆಳಗೆ ಬಿಡಬೇಕು). ಕೈಯಲ್ಲಿ ಹೂವು, ಅಕ್ಷತ, ಗಂಧ ಹಿಡಿದುಕೊಂಡು ನಾವು ಯಾವ ದೇವರನ್ನು ಪೂಜಿಸುತ್ತಿದ್ದೇವೆಯೋ ಆ ದೇವರನ್ನು ಮನದಲ್ಲಿ ಸ್ಮರಣೆ ಮಾಡುತ್ತಾ ಆ ದೇವರ ಮಂತ್ರವನ್ನು ಹೇಳಬೇಕು.) ಸೂರ್ಯದೇವರ ಆವಾಹನ ಮಂತ್ರ || ಧ್ಯೇಯಃ ಸದಾ ಸವಿತೃಮಂಡಲ ಮಧ್ಯವರ್ತೀ ನಾರಾಯಣಃ ಸರಸಿಜಾಸನ ಸನ್ನಿವಿಷ್ಟಃ| ಕೇಯೂರವಾನ್ ಮಕರ ಕುಂಡಲವಾನ್ ಕಿರೀಟಿ ಹಾರೀಹಿರಣ್ಮಯ ವಪುಃ ಧೃತಃ ಶಂಖ ಚಕ್ರಃ|| ಗಣಪತಿ ಆವಾಹನ ಶ್ಲೋಕ || ಗಜವದನಮಚಿತ್ಯಂ ತೀಕ್ಷ್ಣದಂಷ್ಟ್ರಂ ತ್ರಿನೇತ್ರಂ ಬೃಹದುದರಮಶೇಷಂ ಭೂತಿರೂಪಂ ಪುರಾಣಂ| ಅಮರವರಸುಪೂಜ್ಯಂ ರಕ್ತವರ್ಣಂ ಸುರೇಶಂ ಪಶುಪತಿಸುತಮೀಶಂ ವಿಘ್ನರಾಜಂ ನಮಾಮಿ || ದೇವಿ ಆವಾಹನೆಗೆ ಶ್ಲೋಕ || ಓಂ ಜಯಂತೀ ಮಂಗಳಾ ಕಾಳೀ ಭದ್ರಕಾಳೀ ಕಪಾಲಿನೀ|| ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಧಾ ಸ್ವಾಹಾ ನಮೋಸ್ತುತೇ|| ಶಿವ ಆವಾಹನೆಗೆ ಶ್ಲೋಕ || ಓಂ ಮಹಾದೇವಂ ಮಹೇಶಾನಂ ಮಹೇಶ್ವರಮುಮಾಪತಿಂ| ಮಹಾಸೇನ ಗುರುಂ ವಂದೇ ಮಹಾಭಯ ನಿವಾರಣಂ|| ವಿಷ್ಣು ಆವಾಹನೆಗೆ ಶ್ಲೋಕ|| ಉದ್ಯದಾದಿತ್ಯ ಸಂಕಾಶಂ ಪೀತವಾಸಸಮಚ್ಯುತಂ| ಶಂಖ, ಚಕ್ರ, ಗದಾ ಪಾಣಿಂ ಧ್ಯಾಯೇತ್ ಲಕ್ಷ್ಮೀಪತಿಂ ಹರಿಂ|| (ಹೀಗೆ ಪೂಜಿಸುತ್ತಿರುವ ದೇವರ ಮಂತ್ರ ಹೇಳಿ ಕೈಯಲ್ಲಿ ಇರುವ ಹೂವು ಅಕ್ಷತೆಗಳನ್ನು ದೇವರ ಮೇಲೆ ಹಾಕಬೇಕು) ಒಂದು ವೇಳೆ ೨ ಅಥವಾ ೩ ದೇವರ ಅಥವಾ ಪಂಚಾಯತನ(೫) ದೇವರ ಪೂಜೆ ಮಾಡುವುದಾದಲ್ಲಿ "ಆವಾಹಿತ ದೇವತಾಭ್ಯೋ ನಮಃ" ಎಂದು ಹೇಳಬೇಕು(ಬಹುವಚನ). ಯಾವುದಾದರೂ ಒಂದೇ ದೇವರ ಪೂಜೆ ಆದಲ್ಲಿ ಉದಾ| ಮಹಾಗಣಪಯೇ ನಮಃ ಮಹಾವಿಷ್ಣುವೇ ನಮಃ (ಇತ್ಯಾದಿ) ಹೀಗೆ ಹೇಳಬೇಕು). ನಾವಿಲ್ಲಿ ಪಂಚಾಯತನ(೫) ಕ್ರಮ ತೆಗೆದುಕೊಂಡಿರುತ್ತೇವೆ. ಆವಾಹಿತ ದೇವತಾಭ್ಯೋ ನಮಃ| ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ|| (ಅಕ್ಷತ ಹಾಕಬೇಕು) ಆವಾಹಿತ ದೇವತಾಭ್ಯೋ ನಮಃ| ಆವಾಹಯಾಮಿ ಆಸನಂ ಸಮರ್ಪಯಾಮಿ || (ದೇವರ ಮೇಲೆ ಅಕ್ಷತ ಹಾಕಬೇಕು) ಆವಾಹಿತ ದೇವತಾಭ್ಯೋ ನಮಃ|ಪಾದಾರವಿಂದಯೋಃ ಪಾದ್ಯಂ ಸಮರ್ಪಯಾಮಿ || (ಒಂದು ಚಮಚ ನೀರನ್ನು ಕೆಳಗೆ ಬಿಡಬೇಕು) ಆವಾಹಿತ ದೇವತಾಭ್ಯೋ ನಮಃ| ಹಸ್ತಯೋಃ ಅರ್ಘ್ಯಂ ಸಮರ್ಪಯಾಮಿ|| (ಒಂದು ಚಮಚ ನೀರನ್ನು ಬಲಗೈಯಿಂದ ಹಾಕಿ ಕೆಳಗೆ ಬಿಡಬೇಕು) ಆವಾಹಿತ ದೇವತಾಭ್ಯೋ ನಮಃ| ಮುಖೆ ಆಚಮನಂ ಸಮರ್ಪಯಾಮಿ|| (ಒಂದು ಚಮಚ ನೀರನ್ನು ಕೆಳಗೆ ಬಿಡಬೇಕು) ಆವಾಹಿತ ದೇವತಾಭ್ಯೋ ನಮಃ|ಮಧುಪರ್ಕಂ ಸಮರ್ಪಯಾಮಿ || (ಸ್ವಲ್ಪ ಅಕ್ಷತ ದೇವರ ಮೇಲೆ ಹಾಕಬೇಕು) ಆವಾಹಿತ ದೇವತಾಭ್ಯೋ ನಮಃ|ಸ್ನಾನಂ ಸಮರ್ಪಯಾಮಿ || (ಒಂದು ಹೂವನ್ನು ನೀರಲ್ಲಿ ಅದ್ದಿ ದೇವರಿಗೆ ಪ್ರೋಕ್ಷಣೆ ಮಾಡಬೇಕು) ಆವಾಹಿತ ದೇವತಾಭ್ಯೋ ನಮಃ|ಸ್ನಾನಾನಂತರೇಣ ಆಚಮನಂ ಸಮರ್ಪಯಾಮಿ || (ಒಂದು ಚಮಚ ನೀರನ್ನು ಕೆಳಗೆ ಬಿಡಬೇಕು) ಆವಾಹಿತ ದೇವತಾಭ್ಯೋ ನಮಃ| ವಸ್ತ್ರಂ ಸಮರ್ಪಯಾಮಿ || (ಸ್ವಲ್ಪ ಅಕ್ಷತ ದೇವರ ಮೇಲೆ ಹಾಕಬೇಕು. ವಸ್ತ್ರವಿದ್ದರೆ ಹಾಕಬೇಕು) ಆವಾಹಿತ ದೇವತಾಭ್ಯೋ ನಮಃ|ಉಪವೀತಂ ಸಮರ್ಪಯಾಮಿ || (ದೇವರಿಗೆ ಜನಿವಾರ ಹಾಕಬೇಕು) ಆವಾಹಿತ ದೇವತಾಭ್ಯೋ ನಮಃ|ಆಭರಣಂ ಸಮರ್ಪಯಾಮಿ|| (ಆಭರಣವಿದ್ದರೆ ಹಾಕಬೇಕು. ಇಲ್ಲವಾದರೆ ಅಕ್ಷತ ಹಾಕಬೇಕು) ಆವಾಹಿತ ದೇವತಾಭ್ಯೋ ನಮಃ| ಗಂಧಂ ಸಮರ್ಪಯಾಮಿ || (ದೇವರಿಗೆ ಗಂಧ ಮತ್ತು ಹಳದಿ, ಕುಂಕುಮ ಹಾಕಬೇಕು) ಆವಾಹಿತ ದೇವತಾಭ್ಯೋ ನಮಃ|ಅಕ್ಷತಾಂ ಸಮರ್ಪಯಾಮಿ || (ಅಕ್ಷತೆಯನ್ನು ದೇವರ ಮೇಲೆ ಹಾಕಬೇಕು) ಆವಾಹಿತ ದೇವತಾಭ್ಯೋ ನಮಃ|ಪುಷ್ಪಾಣಿ ಸಮರ್ಪಯಾಮಿ || (ದೇವರಿಗೆ ಹೂವು, ಪತ್ರೆ, ತುಳಸಿ ಹಾಕಬೇಕು) ಆವಾಹಿತ ದೇವತಾಭ್ಯೋ ನಮಃ|ಧೂಪಂ ಆಘ್ರಾಪಯಾಮಿ || (ದೇವರಿಗೆ ಧೂಪ ತೋರಿಸಬೇಕು) ಆವಾಹಿತ ದೇವತಾಭ್ಯೋ ನಮಃ|ದೀಪಂ ದರ್ಶಯಾಮಿ || (ದೇವರಿಗೆ ದೀಪವನ್ನು ಬೆಳಗಬೇಕು) ಆವಾಹಿತ ದೇವತಾಭ್ಯೋ ನಮಃ|ನೈವೇದ್ಯಂ ನಿವೇದಯಾಮಿ || (ದೇವರ ಎದುರಿನಲ್ಲಿ ಹಣ್ಣು, ಕಾಯಿ, ಅನ್ನ, ಪಾಯಸ, ಇತ್ಯಾದಿಗಳನ್ನು ಇಟ್ಟು ಕೈಯಲ್ಲಿ ಹೂವನ್ನು ತೆಗೆದುಕೊಂಡು ಅದರ ಮೇಲೆ ನೀರನ್ನು ಹಾಕಿ ಎಲ್ಲಾ ನೈವೇದ್ಯಕ್ಕೆ ಇಟ್ಟಿರುವ ಖಾದ್ಯ, ಫಲ ಇತ್ಯಾದಿ ಮೇಲೆ ಸುತ್ತಿ ದೇವರ ಮೇಲೆ ಹಾಕಿ ಹೀಗೆ ಹೇಳಬೇಕು -- ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಾಯ ಸ್ವಾಹಾ) ಆವಾಹಿತ ದೇವತಾಭ್ಯೋ ನಮಃ|ನೈವೇದ್ಯಾನಂತರೇಣ ಆಚಮನಂ ಸಮರ್ಪಯಾಮಿ || (ಒಂದು ಚಮಚ ನೀರನ್ನು ಕೆಳಗೆ ಬಿಡಬೇಕು) ಆವಾಹಿತ ದೇವತಾಭ್ಯೋ ನಮಃ|ಮುಖವಾಸಾರ್ತಂ ಫೂಗೀ ಫಲ ತಾಂಬೂಲಂ ಸಮರ್ಪಯಾಮಿ|| (೨ ಎಲೆ, ೧ ಅಡಿಕೆ, ೧ ನಾಣ್ಯ ದೇವರ ಮುಂದೆ ಇಟ್ಟು ಒಂದು ಚಮಚ ನೀರನ್ನು ಬಿಡಬೇಕು) ಆವಾಹಿತ ದೇವತಾಭ್ಯೋ ನಮಃ|ಮಂಗಳ ನೀರಾಜನಂ ದರ್ಶಯಾಮಿ || (ಇಲ್ಲಿ ಅವರವರ ತಿಳುವಳಿಕೆ ಅನುಸಾರ, ಮಂತ್ರ, ಶ್ಲೋಕ, ಇಲ್ಲವೆ ದೇವರ ಹಾಡನ್ನು ಹೇಳುತ್ತಾ ಇಚ್ಛಾನುಸಾರ ೧,೨,೫,೭,೯ ಆರತಿ ಮಾಡಬೇಕು) ಆವಾಹಿತ ದೇವತಾಭ್ಯೋ ನಮಃ| ರಕ್ಷಾಂ ಧಾರಯಾಮಿ|| (ಎಲ್ಲಾ ಆರತಿ ಮುಗಿದ ಮೇಲೆ ಕೊನೆಯಲ್ಲಿ ಕರ್ಪೂರ ಆರತಿ ಮಾಡಿ ಆ ಆರತಿಯ ರಕ್ಷೆಯನ್ನು ತೆಗೆದುಕೊಳ್ಳಬೇಕು). ಆವಾಹಿತ ದೇವತಾಭ್ಯೋ ನಮಃ| ಮಂತ್ರ ಪುಷ್ಪಾಂಜಲಿಂ ಸಮರ್ಪಯಾಮಿ || (ಇಲ್ಲಿ ಅವರ ತಿಳುವಳಿಕೆ ಅನುಸಾರ ಮಂತ್ರ ಪುಷ್ಪವನ್ನು ಹೇಳಿ ಹೂವನ್ನು ದೇವರ ಮೇಲೆ ಹಾಕಬೇಕು) ಆವಾಹಿತ ದೇವತಾಭ್ಯೋ ನಮಃ|ಪ್ರದಕ್ಷಿಣ ನಮಸ್ಕಾರಮ್ ಸಮರ್ಪಯಾಮಿ|| (ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿಚ ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ| ಪಾಪೋಹಂ ಪಾಪ ಕರ್ಮಾಹಂ ಪಾಪಾತ್ಮಾ ಪಾಪ ಸಂಭವ| ತ್ರಾಹಿ ಮಾಂ ಕೃಪಾಯ ದೇವ ಶರಣಾಗತ ವತ್ಸಲ| ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ| ತಸ್ಮಾತ್ ಕಾರುಣ್ಯ ಭಾವೇನ ರಕ್ಷಮಾಂ ಜಗದೀಶ್ವರ. ಹೀಗೆ ಹೇಳುತ್ತಾ೩ ಪ್ರದಕ್ಷಿಣೆ ಮಾಡಿ ಸಾಷ್ಟಾಂಗ ನಮಸ್ಕಾರ ಮಾಡಬೇಕು. ಮತ್ತೆ ನೀವು ಕುಳಿತಿರುವ ಜಾಗದಲ್ಲಿಯೇ ಕುಳಿತುಕೊಳ್ಳಬೇಕು.) ಆವಾಹಿತ ದೇವತಾಭ್ಯೋ ನಮಃ|ಛತ್ರ ಚಾಮರಾದಿ ಸರ್ವ ಉಪಚಾರಾರ್ಥಂ ಅಕ್ಷತಾಂ ಸಮರ್ಪಯಾಮಿ|| (ಹೀಗೆ ಹೇಳುತ್ತಾ ದೇವರಿಗೆ ಅಕ್ಷತೆಯನ್ನು ಸಮರ್ಪಿಸಬೇಕು.) ಪ್ರಾರ್ಥನಂ ಕರಿಷ್ಯೇ ಅಪರಾಧ ಸಹಸ್ರಾಣಿ ಕ್ರಿಯತೇ ಅಹರ್ನಿಶಂ ಮಯಾ | ದಾಸೋಯ ಮಿತಿಮಾಂ ಮತ್ವಾ ಕ್ಷಮಸ್ವ ಪುರುಷೊತ್ತಮ|| (ಹೀಗೆ ಹೇಳುತ್ತಾ ದೇವರಿಗೆ ಹೂವು ಅಕ್ಷತ ಸಮರ್ಪಿಸಬೇಕು. ಮತ್ತು ಮನಸ್ಸಿನಲ್ಲಿರುವ ಮನೋಕಾಮನೆ(ಬಯಕೆ) ಪೂರೈಸಬೇಕೇಂದು ಕೋರಬೇಕು) (ಕೈಯಲ್ಲಿ ಅಕ್ಷತ ಮತ್ತು ಹೂವನ್ನು ತೆಗೆದುಕೊಂಡು ಹೇಳಬೇಕು) ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್| ಕರೋಮಿಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ|| ಅನೇನ ಮಯಾಕೃತ ಪೂಜಾ-ಆರಾಧನೇನ ಆವಾಹಿತ ದೇವತಾಃ ಪ್ರೀಯತಾಂ|| (ಕೈಯಲ್ಲಿರುವ ಅಕ್ಷತ, ಹೂವಿನಮೇಲೆ ೧ ಚಮಚ ನೀರನ್ನು ಹಾಕಿ ನೀರನ್ನು ಕೆಳಗೆ ಬಿಡಬೇಕು. ಹೂವನ್ನು ದೇವರ ಮೇಲೆ ಹಾಕಬೇಕು. ನಮಸ್ಕಾರ ಮಾಡಿ ಆಮೇಲೆ ದೇವರ ಮೇಲಿರುವ ಹೂವನ್ನು ಪ್ರಸಾದ ರೂಪವಾಗಿ ತೆಗೆದುಕೊಂಡು ಮುಡಿದುಕೊಳ್ಳಬೇಕು. ) ಯಾಂತು ದೇವ ಗಣಾಃ ಸರ್ವೇ ಪೂಜಾಮಾದಾಯಪಾರ್ಥಿವೇ| ಇಷ್ಟಕಾಮ್ಯಾರ್ಥ ಸಿಧ್ಯರ್ಥಂ ಪುನರಾಗಮನಾಯಚ|| (ಒಂದು ವೇಳೆ ದೇವರನ್ನು ಉದ್ವಾಸನೆ ಮಾಡುವುದಾದರೆ ಮೇಲಿನ ಮಂತ್ರ ಹೇಳುತ್ತಾ ದೇವರ ಮೇಲೆ ಅಕ್ಷತವನ್ನು ಹಾಕಬೇಕು. ಇಲ್ಲವಾದರೆ ಸಾಯಂಕಾಲ ಮೇಲಿನ ಮಂತ್ರ ಹೇಳಿ ಅಕ್ಷತ ಹಾಕಬೇಕು. ಪೂಜೆ ಆದ ಮೇಲೆ ಪುನಃ ೩ ಸಲ ನೀರನ್ನು ಮಂತ್ರ ಸಮೇತವಾಗಿ ಕುಡಿಯಬೇಕು.) ಕೇಶವಾಯ ನಮಃ ನಾರಾಯಣಾಯ ನಮಃ ಮಾಧವಾಯ ನಮಃ ಗೋವಿಂದಾಯ ನಮಃ | (ಒಂದು ಚಮಚ ನೀರನ್ನು ಕೈಮೇಲೆ ಹಾಕಿಕೊಂಡು ಕೆಳಗೆ ಬಿಡಬೇಕು) (ಪೂಜ ವಿಧಾನ ಮುಗಿದುವುದು) ಇಲ್ಲಿ ನಾವು ತಿಳಿಸಿರುವ ಪೂಜಾವಿಧಿಯು ಸರ್ವೇ ಸಾಮಾನ್ಯರ ಅನುಕೂಲಕ್ಕಾಗಿ ಇದೆ. ಆದ್ದರಿಂದ ವೇದೋಕ್ತ ಮಂತ್ರವನ್ನು ಬಳಸಿರುವುದಿಲ್ಲ ಮತ್ತು ಪ್ರಾಣ ಪ್ರತಿಷ್ಠಾ ವಿಧಿಯನ್ನು ಅವಶ್ಯಕವಿದ್ದಲ್ಲಿ ಬಳಸಬಹುದು. ಸಾಮಾನ್ಯ ಪೂಜೆಗೆ ಈ ವಿಧಿಯು ಸಾಕಾಗುತ್ತದೆ. ಕಲಶ ಸ್ಥಾಪನೆ ಮತ್ತು ಪ್ರಾಣ ಪ್ರತಿಷ್ಠಾ ಈ ಭಾಗವನ್ನು ಪ್ರತ್ಯೇಕವಾಗಿ ಬರೆದಿರುತ್ತೇವೆ. ಕಲಶ ಸ್ಥಾಪನೆಯ ಕಾರಣ ಏನು? ಮತ್ತು ವಿಧಾನವೇನು? ನಾವು ಸಾಮಾನ್ಯವಾಗಿ ಎಲ್ಲಾ ಪೂಜಾ ಕಾರ್ಯಗಳಲ್ಲಿ ಕಲಶವನ್ನಿಟ್ಟು ದೇವರನ್ನು ಆವಾಹಿಸಿ ಪೂಜೆ ಮಾಡುವುದು ಸಹಜ. ಆದರೆ ನಮಗೆ ಕಲಶ ಸ್ಥಾಪನೆಯ ಪ್ರಾಮುಖ್ಯತೆ ಮತ್ತು ಇಲ್ಲಿ ಬಳಸುವ ಪ್ರತಿಯೊಂದು ವಸ್ತುವಿನ ಬಳಕೆಯ ಕಾರಣ ತಿಳಿಯಲೇಬೇಕು. ಈ ಶ್ಲೋಕವನ್ನು ಗಮನಿಸಿರಿ. ಪದ್ಮಂ ಯದ್ಗೃಹ ಮುಚ್ಯತೇ ಪದಯುಗಂ ಶಾಲೀ ತಥಾ ತಂಡುಲಂ ಜಾನುಭ್ಯಾಂ ಕೂರ್ಚಲಿಂಗಂ ಘಟಮಪಿ ಚ ತನುಂ ಚರ್ಮವಸ್ತ್ರೇಚನಾಡ್ಯಃ | ತತುಂ ತನ್ಮಾಂಸಯುಕ್ತಂ ರುಧಿರಮಪಿ ಜಲಂ ಸ್ವರ್ಣಕಂ ಪ್ರಾಣರೂಪಂ| ರತ್ನಾನ್ಯಸ್ಥೀ ನಿಚಾಸ್ಯಃ ಫಲಮಪಿ ಚ ಶಿರಃ ಪಲ್ಲವಾಃ ಕೇಶಜಾಲಃ|| ಸುಂದರವಾಗಿ ಬರೆದ ರಂಗೋಲಿ - ಮನೆಯಂತೆ ಬಾಳೇ ಎಲೆಯಲ್ಲಿ ಹಾಕಿರುವ ಗೋಧಿ ಅಥವಾ ಧಾನ್ಯ- ಕಾಲುಗಳು ಧಾನ್ಯದ ಮೇಲೆ ಪುನಃ ಎಲೆ ಹಾಕಿ ಹಾಕುವ ಅಕ್ಕಿಯು - ತೊಡೆಯ ಭಾಗವಿದ್ದಂತೆ ಕಲಶದಲ್ಲಿ ಇಡುವ ದರ್ಭೆಯ ಕೂರ್ಚ -- ಲಿಂಗವಿದ್ದಂತೆ ತಾಮ್ರದ ಕಲಶವಿದು ದೇವರ -- ದೇಹವಿದ್ದಂತೆ ಕಲಶದ ಮೇಲಿಡುವ ವಸ್ತ್ರವಿದು - ಚರ್ಮವಿದ್ದಂತೆ ಕಲಶಕ್ಕೆ ಸುತ್ತಿದ ದಾರವಿದು -- ದೇಹದಲ್ಲಿರುವ ಮಾಂಸವಿದ್ದಂತೆ ಕಲಶದಲ್ಲಿ ಹಾಕುವ ನೀರು -- ದೇಹದಲ್ಲಿಯ ರಕ್ತವಿದ್ದಂತೆ ಕಲಶದಲ್ಲಿ ಹಾಕುವ ಸ್ವರ್ಣವು - ದೇಹದಲ್ಲಿ ಆತ್ಮವಿದ್ದಂತೆ ಕಲಶದಲ್ಲಿ ಹಾಕುವ ರತ್ನಗಳು - ದೇಹದಲ್ಲಿ ಮೂಳೆಗಳಿದ್ದಂತೆ ಕಲಶದ ಮೇಲಿಡುವ ಕಾಯಿ - ದೇವರ ಶಿರ (ತಲೆ) ಇದ್ದಂತೆ ಕಲಶಕ್ಕೆ ಹಾಕುವ ೫ ಎಲೆಗಳು - ತಲೆಯಲ್ಲಿರುವ ಕೂದಲುಗಳು ಹೀಗೆ ಸಂಪೂರ್ಣ ದೇವರ ರೂಪದಿಂದ ಕಲಶವನ್ನು ಸ್ಥಾಪಿಸಿ ಪೂಜಿಸುತ್ತೇವೆ. ಪೂರ್ವದಲ್ಲಿ ತಿಳಿಸಿದಂತೆ ಆಚಮ್ಯದಿಂದ ಪೀಠ ಪೂಜೆಯವರೆಗೆ ಮಾಡಿಕೊಂಡು ಆಮೇಲೆ ನಾವು ಪೂಜಿಸುವ ದೇವರ ನವಶಕ್ತಿ ಪೂಜೆಯನ್ನು ಮಾಡಿಕೊಳ್ಳಬೇಕು. ಈಗ ಕಲಶ ಸ್ಥಾಪಿಸಬೇಕು. ಮೊದಲು ಕಲಶವಿಡುವ ಕ್ರಮ ತಿಳಿಯೋಣ ೧) ಚೌರಂಗ, ಮಣೆಯ ಮೇಲೆ ರಂಗೋಲಿ(೮ ದಲ ಪದ್ಮ)ಬಿಡಿಸಬೇಕು. ೨) ಎಲೆಯನ್ನು ರಂಗೋಲಿಯ ಮೇಲೆ ಇಡಬೇಕು. ಅಗ್ರ ನಮ್ಮಕಡೆ ಬರುವಂತೆ ಇರಲಿ. ೩) ಎಲೆಯ ಮೇಲೆ ಗೋಧಿ ಅಥವಾ ಭತ್ತವನ್ನು ಹಾಕಿರಿ ೪) ಮತ್ತೆ ಧಾನ್ಯದ ಮೇಲೆ ಎಲೆಯನ್ನು ಇಡಬೇಕು. ೫) ಎಲೆಯ ಮೇಲೆ ಅಕ್ಕಿಯನ್ನು ಹಾಕಬೇಕು. ೬) ದಾರವನ್ನು ಸುತ್ತಿ ಸಿಂಗರಿಸಿದ ಕಲಶವನ್ನು ಅಕ್ಕಿಯ ಮೇಲೆ ಇಡಬೇಕು. ೭) ಕಲಶದೊಳಗೆ ನೀರು, ಗಂಧ, ದೂರ್ವೆ, ಚಿನ್ನ, ರತ್ನ ಇತ್ಯಾದಿಗಳನ್ನು ಹಾಕಬೇಕು. ೮) ೫ ಎಲೆ(ಪಂಚ ವೃಕ್ಷದವು)ಗಳನ್ನು ಕಲಶದೊಳಗೆ ಹಾಕಬೇಕು. ೯) ಕಲಶದ ಮೇಲೆ ಕಾಯನ್ನು ಇಡಬೇಕು. ೧೦) ಕಾಯಿಯ ಮೇಲೆ ವಸ್ತ್ರವನ್ನು ಇಡಬೇಕು. (೨) ೧೧) ದರ್ಭೆಯ ಕೂರ್ಚವನ್ನು ಇಡಬೇಕು. ೧೨) ಹೂವಿನ ಹಾರದಿಂದ ಅಲಂಕರಿಸಬೇಕು. ಈಗ ಪೂಜೆಗೆ ಕಲಶ ತಯಾರಾದಂತಾಯಿತು. ಕೆಳಗಿನ ಮೊಂತ್ರವನ್ನು ಹೇಳುತ್ತಾ ಕಲಶವನ್ನು ಬಲಗೈಯಿಂದ ಸಾವಕಾಶ ಮುಟ್ಟಿಹಿಡಿದುಕೊಳ್ಳಬೇಕು. ಓಂ ಚತುರ್ಭುಜೆ ಶುಕ್ಲವರ್ಣೇ ದಿವ್ಯಾಭರಣಭೂಷಿತೇ| ಚತುರ್ದಿಙನಾಗ ಪೃಷ್ಠಸ್ಥೇ ಭೂಮೇ ತ್ವಾಂ ಸಂಸ್ಪೃಶಾಮ್ಯಹಂ ಸರ್ವದೇವಮಯಂ ಧಾನ್ಯಂ ಸರ್ವೋತ್ಪತ್ತಿಕರಂ ಮಹತ್ ಪ್ರಾಣಿನಾಂ ಜೀವನೋಪಾಯಂ ಸ್ಥಾಪಯಾಮೀಷ್ಟಸಿದ್ಧಯೇ ದೇವಾಸುರೈರ್ಮಥ್ಯಮಾನಾದುತ್ವನ್ನೋಸಿ ಮಹೋದದೇಃ| ಕುಂಭತ್ವಯಿ ಸುರಾಃ ಸರ್ವೇ ತೀರ್ಥಾನಿ ಜಲದಾ ನದಾಃ| ತಿಷ್ಠಂತಿ ಕಾಮಫಲದಾ ರುದ್ರಾದಿತ್ಯಾದಯೋಪಿ ಚ| ಆತೋತ್ರ ಧಾನ್ಯರಾಶೌ ತ್ವಾಂ ಪೂಜಾರ್ಥಂ ಸ್ಥಾಪಯಾಮ್ಯಹಂ| ಗಂಗೇ ಚ ಯಮುನೇಚೈವ ಗೋದಾವರೀ ಸರಸ್ವತಿ ನರ್ಮದೇ ಸಿಂಧ ಕಾವೇರಿ ಕುಂಭೇಸ್ಮಿನ್ ಸನ್ನಿಧಿಂ ಕುರು | ಕಸೂರಿ ಕುಂಕುಮೋಪೇತಂ ಕರ್ಪೂರೇಣ ಚ ಸಂಯುತಂ ಚಂದನಂ ಸರ್ವಗಂಧಾಢ್ಯಂ ಕುಂಭೇಸ್ಮಿನ್ಪ್ರಕ್ಷಿಪಾಮ್ಯಹಂ | ತ್ವಂ ದೂರ್ವೇ ಮೃತಜನ್ಮಾಸಿ ವಂದಿತಾಸಿ ಸುರಾಸುರೈಃ| ಸೌಭಾಗ್ಯಂ ಸಂತತಿಂ ದೇಹಿ ಸರ್ವಕಾರ್ಯಕರೀಭವ|| ಅಶ್ವತ್ಥೋ ದುಂಭರಪ್ಲಕ್ಷಚೂತ ಸ್ಯಗ್ರೋಧಪಲ್ಲವಾನ್| ಅಸ್ಮಿನ್ನುಂಭೇ ಪ್ರಕ್ಷಿಪಾಮಿ ಸರ್ವ ಕರ್ಮ ಸಂಶೋಭನಾನ್| ಗಜಾಶ್ವರಥವಲ್ಮೀಕ ಸಂಗಮಹ್ರದಗೋಕುಲಾತ್| ಮೃದಮಾನೀಯ ಕುಂಭೇಸ್ಮಿನ್ಪ್ರಕ್ಷೀಪಾಮಿ ಚ ಚಚ್ವರಾತ್ ಇತ್ಯಷ್ಟಮೃದಃ| ಫಲಂ ಮನೋಹರಂ ಸ್ವಾದಂ ಮುನಿದೇವಪ್ರಿಯಂ ಸದಾ| ಅಸ್ಮಿನ್ಕುಂಭೇ ಪ್ರಕ್ಷೀಪಾಮಿ ಸರ್ವಾದಾ ಮಂಗಲಪ್ರದಂ|| ಸುವರ್ಣಂ ರಜತಂ ಮುಕ್ತಾ ರಾಜಾವರ್ತಂ ಪ್ರವಾಲಿಕಂ| ಇಮಾನಿ ಪಂಚರತ್ನಾನಿ ಕಲಶೇ ಪೃಕ್ಷೀಪಾಮ್ಯಹಂ|| ಹಿರಣ್ಯ ಗರ್ಭ ಗರ್ಭಸ್ಥಂ ಹೇಮಬೀಜಂ ವಿಭಾವಸೊಃ| ಅನಂತ ಪುಣ್ಯಫಲದ ಮತಃ ಶಾಂತಿಂಪ್ರಯಚ್ಛ ಮೇ ಇತಿ ಹಿರಣ್ಯಂ|| ಈಷದ್ಧೌತೇನ ಶುದ್ಧೇನ ಸದಶೇನಾಹತೇನ ಚ| ಸಂವೇಷ್ಟಯಾಮಿ ಕಲಶಂ ನೂತನೇನ ಸುವಾಸಸಾ ಇತಿ ವಸ್ತ್ರಂ| ಪೂರ್ಣಪಾತ್ರಂ ತಾಮ್ರ ಮಯಂ ಶಾಲಿ ತಂಡುಲ ಪೂರಿತಂ| ಪ್ರಧಾನ ದೇವ ಪೂಜಾರ್ಥಂನ್ಯಸಾಮಿ ಕಲಶೋಪರಿ || ಇತಿ ತಂಡುಲ ಪೂರ್ಣ ಪಾತ್ರಂ ನಿಧಾಯ| ಪಾಶಹಸ್ತಂಚ ವರುಣಂ ಯಾದಸಾಮಭಸಾಂಪತಿಂ| ಆವಾಹಯಾಮಿ ಕುಂಭೇಸ್ಮಿನ್ ದೇವಂ ಮಕರವಾಹನಂ|| ಈ ಮಂತ್ರವನ್ನು ಹೇಳಿ ಕೈಯಲ್ಲಿ ಹೂವು ಅಕ್ಷತ ತೆಗೆದುಕೊಂಡು ಕಲಶದ ಮೇಲೆ ಹಾಕಬೇಕು. ಕಲಶಕ್ಕೆ ಗಂಧ, ಹಳದಿ, ಕುಂಕುಮ ಹಚ್ಚಬೇಕು. ವರುಣಾಯ ನಮಃ ಸರ್ವೋಪಚಾರ ಪೂಜಾಂ ಸಮರ್ಪಯಾಮಿ || (ಕಲಶದ ಮೇಲೆ ಅಕ್ಷತವನ್ನು ಹಾಕಬೇಕು) ಕೃತ ಪೂಜಾರಾಧನೇನ ವರುಣಃ ಪ್ರೀಯತಾಂ(ಅಕ್ಷತ ನೀರನ್ನು ಕೆಳಗೆ ಬಿಡಬೇಕು) ಇಲ್ಲಿಯವರೆಗಿನ ಕ್ರಮ ಮುಗಿದ ಮೇಲೆ ಕೈಯಲ್ಲಿ ಹೂವು, ಅಕ್ಷತ ಹಿಡಿದುಕೊಂಡು ಕಲಶದಲ್ಲಿ ನಾವು ಪೂಜಿಸಬೇಕಾದ ದೇವರ ಆವಾಹನೆ ಮಂತ್ರವನ್ನು (ಹಿಂದೆ ತಿಳಿಸಿದಂತೆ) ಹೇಳಬೇಕು ಮತ್ತು ಕೈಯಲ್ಲಿ ಇರುವ ಹೂವು, ಅಕ್ಷತೆ ಕಲಶದ ಮೇಲೆ ಹಾಕಿ ಬಾಕಿ "ಧ್ಯಾಯಾಮಿ ಧ್ಯಾನಂ" ಇತ್ಯಾದಿ ಪೂಜೆಯನ್ನು ಕೊನೆಯರೆಗೆ ಮಾಡಬೇಕು. ಪ್ರಾಣ ಪ್ರತಿಷ್ಠೆಯ ಕ್ರಮ|| ಹಿಂದೆ ತಿಳಿಸಿದಂತೆ ಆರಂಭದಿಂದ ಪೂಜಿಸುವ ದೇವರ ಆವಾಹನೆ ಮಂತ್ರವನ್ನು ಹೇಳಿ ಹೂವು, ಅಕ್ಷತೆ ಕಲಶ ಅಥವಾ ಮೂರ್ತಿಯ ಮೇಲೆ ಹಾಕಬೇಕು. ಈ ವೇಳೆಯಲ್ಲ್ಲಿ ಪ್ರಾಣಪ್ರತಿಷ್ಠೆ ಮಾಡಬೇಕು. ಓಂ ಅಸ್ಯಶ್ರೀ ಪ್ರಾಣಪ್ರತಿಷ್ಠಾ ಮಹಾ ಮಂತ್ರಸ್ಯ ಬ್ರಹ್ಮ ವಿಷ್ಣು ಮಹೇಸ್ವರಾ ಋಷಯಃ| ಋಗ್, ಯಜುಃ ಸಾಮ ಅಥರ್ವಾಣಿ ಛಂದಾಂಸಿ| ಪ್ರಾಣ ಶಕ್ತಿಃ ದೇವತಾ| ಪ್ರಾಣಪ್ರತಿಷ್ಠಾಪನೇ ವಿನಿಯೋಗಃ|| (ಕೈಮುಗಿದುಕೊಂಡು ಈ ಮಂತ್ರವನ್ನು ಹೇಳಿದ ಮೇಲೆ ಎಡಗೈನಿಂದ ನಮ್ಮ ಎದೆಯನ್ನು ಮುಟ್ಟಿಕೊಂಡು, ಬಲಗೈಯಿಂದ ಮೂರ್ತಿ ಹೃದಯ ಅಥವಾ ಕಲಶವನ್ನು ಸಾವಕಾಶ ಮುಟ್ಟಿ ಹಿಡಿದುಕೊಂಡು ಈ ಕೆಳಗಿನ ಮಂತವನ್ನು ಮನಸ್ಸಿನಲ್ಲಿ ಹೇಳಬೇಕು) ಓಂ, ಆಂ, ಹ್ರೀಂ, ಕ್ರೋಂ ಆವಾಹಿತ ದೇವತಾಃಪ್ರಾಣಾ ಇಹ ಪ್ರಾಣಾಃ|| ಓಂ, ಆಂ, ಹ್ರೀಂ, ಕ್ರೋಂ ಆವಾಹಿತ ದೇವತಾ ಜೀವ ಇಹ ಸ್ಥಿತಃ ಓಂ, ಆಂ, ಹ್ರೀಂ, ಕ್ರೋಂ ಆವಾಹಿತ ದೇವತಾಃ ಸರ್ವೇಂದ್ರಿಯಾಣಿ ವಾಙ್ಮನಃ ಚಕ್ಷು, ಶ್ರೋತ್ರ ಜಿಹ್ವಾಘ್ರಾಣವಕ್ ಪಾಣಿ ಪಾದ ಪಾಯೋಪಸ್ಥ ಸುಖಂ ಚಿರಂ ತಿಷ್ಠಂತು ಸ್ವಾಹಾ|| (ಈ ಮಂತ್ರವನ್ನು ಹೇಳಿದ ನಂತರ ಮೂರ್ತಿಯ ಕಣ್ಣಿಗೆ ಸ್ವಲ್ಪ ತುಪ್ಪವನ್ನು ಹಚ್ಚಿ ಕಣ್ಣನ್ನು ತೆರೆಯಬೇಕು ಮತ್ತು ಮೂರ್ತಿ ಹೃದಯವನ್ನು ಮುಟ್ಟಿ ೧೫ ಬಾರಿ "ಓಂ" ಅಥವಾ "ಹ್ರೀಂ" ಎಂಬ ಮಂತ್ರವನ್ನು ಹೇಳಬೇಕು. ಆಮೇಲೆ ದೇವರ ಮೂರ್ತಿ ಅಥವಾ ಕಲಶಕ್ಕೆ ಗಂಧ, ಹೂವು, ಅಕ್ಷತ ಹಾಕಬೇಕು ನಮಸ್ಕರಿಸಬೇಕು). ಆಮೇಲೆ "ಧ್ಯಾಯಾಮಿ ಧ್ಯಾನಂ" ಇಲ್ಲಿಂದ ಕೊನೆಯವರೆಗಿನ ಪೂಜಾ ಕ್ರಮವನ್ನು ಮಾಡಬೇಕು.

Comments

Nagesh Talekar said…
ಮಾನ್ಯರೆ, ಗಣೇಶ ಚತುರ್ಥಿ "ಗಣಪತಿ ಪೂಜಾ ವಿಧಾನ" ಸವಿಸ್ತಾರವಾಗಿ ಕೊಟ್ಟ ಪುಸ್ತಕದ ಹೆಸರು, ಪ್ರಕಾಶಕರು, ಕೃತಿ ರಚನೆ ರವರು ತಿಳಿಸಲು ವಿನಂತಿ.

Popular posts from this blog

ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ಸಂಖ್ಯಾ ಶಾಸ್ತ್ರದ ಪೂರ್ವೋತ್ತರಗಳು:-

*ಐಂ*ಓಂ ಶ್ರೀ ಲಕ್ಷ್ಮಿವೆಂಕಟೇಶ್ವರಾಯ ನಮಃ* ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ರಚಿಸಿದವರು: ವಿದ್ಯಾವಿಶಾರದ ಕೀಳಾತ್ತೂರು ಶ್ರೀನಿವಾಸಾಚಾರ್ಯ,ಪಿ.ಓ.ಎಲ್ ಶಿರೋಮಣಿ ಮತ್ತು ಹಿಂದಿ ವಿಶಾರದ ಮುನ್ನುಡಿ:- ಜ್ಯೋತಿಷ್ಯ,ಹಸ್ತರೇಖೆ,ಸಂಖ್ಯಾ,ಈ ಮೂರು ಶಾಸ್ತ್ರಗಳು ಒಂದಕ್ಕೊಂದು ಹೆಣೆದುಕೊಂಡು ಇರುವ ಶಾಸ್ತ್ರಗಳು.ಕ್ರೈಸ್ತನಿಗಿಂತಲೂ ಪೂರ್ವದಲ್ಲಿಯೇ ಈ ಮೂರು ಶಾಸ್ತ್ರಗಳೂ ಭಾರತದಲ್ಲಿಯೂ ಗ್ರೀಸ್ ದೇಶದಲ್ಲಿಯೂ ಒಂದೇ ರೀತಿಯಾಗಿ ಅಭಿವೃದ್ದಿ ಹೊಂದುತ್ತಾ ಪ್ರಸಿದ್ದಿಗೆ ಬಂದಿತು. ಆದರೆ ಈ ಕಾಲದಲ್ಲಿ ಈ ಮೂರು ಶಾಸ್ತ್ರಗಳನ್ನು ಆಧಾರವಾಗಿಟ್ಟುಕೊಂಡು ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಭೂತ,ಭವಿಷ್ಯ,ವರ್ತಮಾನ ಕಾಲಗಳ ಫಲಗಳನ್ನು ತಿಳಿಸುವ ಪಂಡಿತಮಣಿಗಳು ಅಮೇರಿಕಾ,ಬ್ರಿಟನ್,ಜರ್ಮನಿ,ಜಪಾನ್ ಮೊದಲಾದ ದೇಶಗಳಲ್ಲಿ ಈಗಲೂ ಇರುವರು,ಎಂದರೆ ಅತಿಶಯೋಕ್ತಿಯಾಗಲಾರದು. ಮಾನವನ ಭವಿಷ್ಯವನ್ನು ತಿಳಿಸುವ ಈ ಮೂರು ಶಾಸ್ತ್ರಗಳ ಮಹತ್ವವು ಸಮಾನವಾಗಿಯೇ ಇದ್ದರೂ ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡಕ್ಕಿಂತಲೂ ಸಂಖ್ಯಾ ಶಾಸ್ತ್ರ(ನ್ಯೂಮರಾಲಜಿ)ದಲ್ಲಿ ಮಾತ್ರ ಒಂದು ವೈಶಿಷ್ಟ್ಯ ಇದೆ. ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡೂ ಭವಿಷ್ಯವನ್ನು ಮಾತ್ರವೇ ತಿಳಿಸುವುದು. ಆದರೆ ಸಂಖ್ಯಾಶಾಸ್ತ್ರಾ ಆ ಬಗೆಯ ಭವಿಷ್ಯವನ್ನು ಸ್ವಾಗತಿಸಲು ಮತ್ತು ಸ್ವಲ್ಪ ಮಟ್ಟಿಗೆ ಹೆಚ್ಚು ಕಡಿಮೆ ಮಾಡಿಕೊಳ್ಳಲು ಬೇಕಾದ ಸಲಹೆಗಳನ್ನು ಕೊಡುತ್ತದೆ. …

ಮಾಟ,ಮಂತ್ರ ದೋಷನಿವಾರಣೆಗೆ ಮಂತ್ರಗಳು

ಮಾಟ,ಮಂತ್ರ ದೋಷನಿವಾರಣೆಗೆ ಮಂತ್ರಗಳು ಅಯ್ಯಪ್ಪ ಗಾಯತ್ರಿ ಓಂ ಭೂತನಾತಾಯ ವಿದ್ಮಹೇ ಮಹಾದೇವಾಯ ಧೀಮಹೀ ತನ್ನೋ ಶಾಸ್ತ್ರ ಪ್ರಚೋದಯಾತ್ ಸುದರ್ಶನ ಗಾಯತ್ರಿ ಮಂತ್ರ ಓಂ ಸುದರ್ಶನಾಯ ವಿದ್ಮಹೇ ಮಹಾಜ್ವಾಲಾಯ ಧೀಮಹೀ ತನ್ನೋ ಚಕ್ರಪ್ರಚೋದಯಾತ್ ಓಂ ನಮೋ ಭಗವತಿ ರಾಜರಾಜೇಶ್ವರಿ ಸಾಗರತೀರೇ ಮಹಾಮದ್ಯರ್ನಿವಾಸಿನಿ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಅನ್ನಪೂರ್ಣ ಅಂಬೇ ಮಾತಾ ಉದಯೋಸ್ತು ಉದಯೋಸ್ತು ಐಂ ಹ್ರೀಂ ಶ್ರೀಂ ಯಾಂ ರಂ ಲಂ ಶಂ ದಂ ವಂ ತಂ ಓಂ ||ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ದಕ್ಷಿಣ ಕಾಳಿಕೆ ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ಸ್ವಾಹಾ|| ||ಓಂ ಹ್ರೀಂ ಹ್ರೀಂ ಹುಂ ಹುಂ ಕ್ರೀಂ ಕ್ರೀಂ ಕ್ರೀಂ ದಕ್ಷಿಣ ಕಾಳಿಕೆ ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ || ||ಓಂ ನಮೋ ಭಗವತೇ ಮಹಾಕಾಲಬೈರವಾಯ (ಅಮುಕಂ) ಶತೃ ಮಾರಯ|ಕಾಲಾಗ್ನಿತೇಜಸೇ ಫೋತಯ ಹುಂ ಫಟ್ ಸ್ವಾಹಾ|| ಓಂ ಮಹಾಕಾಳೇಶ್ವರಾಯ ನಮಃ ಓಂ ಮಹಾಂ ಕಾಲಾಯ ನಮಃ ಅಮಾವಾಸ್ಯೆ ಹುಣ್ಣಿಮೆಯಂದು ರಾತ್ರಿ ಸ್ವಲ್ಪ ಅಕ್ಕಿ, ಮೊಸರು,ಗುಲಾಲ್ ಅನ್ನು ಒಂದು ಬಿಳಿ ಹಾಳೆಯಲ್ಲಿ ಹಾಕಿ ಮಾಟ ಆಗಿರುವ ವ್ಯಕ್ತಿಯನ್ನು ನೆಲದಮೇಲೆ ಕೂರಿಸಿ ನೆತ್ತಿಯಿಂದ ಪಾದದ ವರೆಗೆ ೯ ಬಾರಿ ಅಥವ ಆ ವ್ಯಕ್ತಿಗೆ ಆಗಿರುವ ವಯಸ್ಸಿನಷ್ಟು ಸಲ ಇಳಿತಗೆದು ೪ದಾರಿ ಕೂಡಿರುವಕಡೇ ಎಸೆದು ಬರಬೇಕು. ಅಥವ ಮೊಟ್ಟೆಗಾತ್ರದ ಒಂದು ಉತ್ತಮವಾದ ನಿಂಬೆಹಣ್ಣು ತಗೆದುಕೊಂಡು ಮಾಟ ಆಗಿರುವ ವ್ಯಕ್ತಿಯನ್ನು ನೆ…

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ…