Skip to main content

Posts

Showing posts from October, 2015

ಶ್ರೀವ್ಯಾಸ ವಿರಚಿತಂ ನವಗ್ರಹ ಸ್ತೊತ್ರಮ್

ಶ್ರೀಗಣೇಶಾಯನಮಃ || ಅಸ್ಯ ಶ್ರೀನವಗ್ರಹಸ್ತೋತ್ರಮಂತ್ರಸ್ಯ ವೇದವ್ಯಾಸ ಋಷಿಃ | ಅನುಷ್ಟುಪ್ ಛಂದಃ | ಮಮ ಗ್ರಹಾನುಕೂಲ್ಯಾರ್ಥೇ ನವಗ್ರಹಸ್ತೋತ್ರ ಜಪೇ (ಪಾರಾಯಣೇ) ವಿನಿಯೋಗಃ || ಜಪಾಕುಸುಮ-ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ | ತಮೋಽರಿಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ || ೧ || (ಸೂರ್ಯ) ದಧಿ-ಶಂಖ-ತುಷಾರಾಭಂ ಕ್ಷೀರೋದಾರ್ಣವ-ಸಂಭವಂ | ನಮಾಮಿ ಶಶಿನಂ ಸೋಮಂ ಶಂಭೊರ್ಮುಕುಟ-ಭೂಷಣಮ್ || ೨ || (ಚಂದ್ರ) ಧರಣೀಗರ್ಭ-ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಂ | ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ || ೩ || (ಕುಜ-ಮಂಗಳ) ಪ್ರಿಯಂಗು-ಕಲಿಕಾ-ಶ್ಯಾಮಂ ರೂಪೇಣಾಪ್ರತಿಮಂ ಬುಧಂ | ಸೌಮ್ಯಂ ಸೌಮ್ಯ-ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ || ೪ || (ಬುಧ) ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನ-ಸನ್ನಿಭಂ | ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ || ೫ || (ಗುರು-ಬೃಹಸ್ಪತಿ) ಹಿಮಕುಂದ-ಮೃಣಾಲಾಭಮ್ ದೈತ್ಯಾನಾಂ ಪರಮಂ ಗುರುಂ | ಸರ್ವಶಾಸ್ತ್ರ-ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ || ೬ || (ಶುಕ್ರ)

ಫಲಜ್ಯೋತಿಷ್ಯ – ಶುಭಾರಂಭ

|| ಶ್ರೀ ಶ್ರೀ ವಿಶ್ವಂಭರಮೂರ್ತಯೇ ನಮಃ || || ಶ್ರೀ ಗಜಾನನಾಯ ನಮಃ || ಶ್ರೀ ಸರಸ್ವತ್ಯೈ ನಮಃ || ಶ್ರೀ ವೇದವ್ಯಾಸಾಯ ನಮಃ || ಶ್ರೀಶನಂಘ್ರಿಸರೋಜಭೃಂಗ ಮ | ಹೇಶಸಂಭವ ಮನ್ಮನದೊಳು ಪ್ರ | ಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ | ನೀ ಸಲಹು ಸಜ್ಜನರ ವೇದ | ವ್ಯಾಸಕರುಣಾಪಾತ್ರ ಮಹದಾ | ಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು || ಶೂರ್ಪಕರ್ಣದ್ವಯ ವಿಜಿತಕಂ | ದರ್ಪಶರ ಉದಿತಾರ್ಕಸನ್ನಿಭ | ಸರ್ಪವರಕಟಿಸೂತ್ರ ವೈಕ್ರತಗಾತ್ರ ಸುಚರಿತ್ರ | ಸ್ವರ್ಪಿತಾಂಕುಶಪಾಶಕರ ಖಳ | ದರ್ಪಭಂಜನ ಕರ್ಮಸಾಕ್ಷಿಗ | ತರ್ಪಕನು ನೀನಾಗಿ ತೃಪ್ತಿಯ ಪಡಿಸು ಸಜ್ಜನರ || ಏಕವಿಂಶತಿಮೋದಕಪ್ರಿಯ | ಮೂಕರನು ವಾಗ್ಮಿಗಳ ಮಾಳ್ಪೆ ಕೃ | ಪಾಕರೇಶ ಕೃತಜ್ಞಕಾಮದ ಕಾಯೋ ಕೈಪಿಡಿದು | ಲೇಖಕಾಗ್ರಣಿ ಮನ್ಮನದ ದು | ರ್ವ್ಯಾಕುಲವ ಪರಿಹರಿಸು ದಯದಿ ಪಿ- ನಾಕಿಭಾರ್ಯಾತನುಜ ಮೃಧ್ಭವ ಪ್ರಾರ್ಥಿಸುವೆ ನಿನಗೆ || ಜಯ ಜಯತು ವಿಘ್ನೇಶ ತಾಪ | ತ್ರಯವಿನಾಶನ ವಿಶ್ವಮಂಗಳ | ಜಯ ಜಯತು ವಿದ್ಯಾಪ್ರದಾಯಕ ವೀತಭಯಶೋಕ | ಜಯ ಜಯತು ಚಾರ್ವಾಂಗ ಕರುಣಾ | ನಯದಿಂದಲಿ ನೋಡಿ ಜನುಮಾ | ಮಯಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ || ಜ್ಯೋತಿಷ್ಯ ಹಾಗು ವಾಸ್ತುಶಾಸ್ತ್ರ ಭಾವಿಕ ಬಳಗಕ್ಕೆ ಆದರದ ನಮಸ್ಕಾರಗಳು. ಈ ಅಂತರ್ಜಾಲ ತಾಣ ಮುಖ್ಯವಾಗಿ ಫಲಜ್ಯೋತಿಷ್ಯಶಾಸ್ತ್ರದ ಕುರಿತದ್ದಾಗಿದೆ. ಜ್ಯೋತಿಷ್ಯ ಮತ್ತು ಸಂಬಂಧಿತ ಶಾಸ್ತ್ರಗಳ ಬಗ್ಗೆ ಜನರಲ್ಲಿ ಶುದ್ಧ ಅರಿವು ಮೂಡಿಸು

ಜ್ಯೋತಿಷ್ಯ – ಶಾಸ್ತ್ರ ಪರಿಚಯ

ಭಾರತೀಯ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶ್ವದಾದ್ಯಂತ ಶ್ರೇಷ್ಠವಾದ ಗೌರವ ಮತ್ತು ಮಾನ್ಯತೆ ಇದೆ. ಖಗೋಳ ಗಣಿತವನ್ನು ಜಗತ್ತಿಗೆ ಕೊಟ್ಟ ಹಿರಿಮೆ ವೈದಿಕ ವಾಙ್ಞಯಕ್ಕೆ ಸಲ್ಲುತ್ತದೆ. ವಿಶ್ವದ ಪ್ರಾಚೀನತಮ ಗ್ರಂಥವಾಗ ಋಗ್ವೇದದಲ್ಲಿ ಗ್ರಹ ನಕ್ಷತ್ರಗಳ ಕುರಿತಾದ ಜಿಜ್ಞಾಸೆ ಮಾನವನ ಇತಿಹಾಸದಲ್ಲಿ ಪ್ರಪ್ರಥಮಬಾರಿ ಕಂಡು ಬರುತ್ತದೆ. ಜ್ಯೋತಿಷ್ಯವೆಂದರೆ ಬೆಳಕಿನ ಶಾಸ್ತ್ರ, ಬೆಳಕು ಕೊಡುವ ಸೂರ್ಯ-ಚಂದ್ರ-ನಕ್ಷತ್ರಾದಿ ಬೆಳಕಿನ ಪುಂಜಗಳ ಕುರಿತಾದ ಶಾಸ್ತ್ರ. ಜ್ಯೋತಿಗಳು ಎಂದರೆ ಅವಕಾಶದಲ್ಲಿ ಬೆಳಗುವ ಗೋಲಗಳು. “ಜ್ಯೋತೀಂಷಿ ಗ್ರಹನಕ್ಷತ್ರಾಃ ತದಧಿಕೃತಂ ಶಾಸ್ತ್ರಂ ಜ್ಯೋತಿಷ್ಯಮ್” ಆಕಾಶದಲ್ಲಿರುವ ಗ್ರಹನಕ್ಷತ್ರಾದಿ ಜ್ಯೋತಿಃ ಪುಂಜಗಳು ಮತ್ತು ಅವುಗಳನ್ನು ಆಧರಿಸಿರುವ ಶಾಸ್ತ್ರ ಜ್ಯೋತಿಷ್ಯ. ಇವತ್ತು ಉಪಲಬ್ಧವಿರುವ ಎಲ್ಲ ಪ್ರಾಚೀನ ಜ್ಯೋತಿಷ್ಯ ಗ್ರಂಥಗಳಲ್ಲಿ ಲಗಧಾಚಾರ್ಯ ಪ್ರಣೀತವಾದ ವೇದಾಂಗ ಜ್ಯೋತಿಷ್ಯ ಪ್ರಾಚೀನತಮವಾಗಿದೆ. ಈ ಗ್ರಂಥದಲ್ಲಿ ಶಾಸ್ತ್ರಪ್ರಶಂಸೆಯನ್ನು ಹೀಗೆ ಮಾಡಲಾಗಿದೆ – ಯಥಾ ಶಿಖಾ ಮಯೂರಾಣಾಂ ನಾಗಾನಾಂ ಮಣಯೋ ಯಥಾ | ತದ್ವದ್‍ವೇದಾಂಗ ಶಾಸ್ತ್ರಾಣಾಂ ಜ್ಯೌತಿಷಂ ಮೂರ್ಧನಿ ಸ್ಥಿತಂ || (ವೇದಾಂಗ ಜ್ಯೋತಿಷ್ಯ 4) ನವಿಲುಗಳ ತಲೆಯ ಮೇಲಿರುವ ಶಿಖೆಗಳಂತೆ, ನಾಗಗಳ ಹೆಡೆಯ ಮೇಲಿರುವ ಮಣಿಗಳಂತೆ, ಆರು ವೇದಾಂಗ ಶಾಸ್ತ್ರಗಳ ಮಧ್ಯದಲ್ಲಿ ಜ್ಯೋತಿಷ್ಯವು ಶಿರಸ್ಥಾನದಲ್ಲಿದೆ. ಅಪ್ರತ್ಯಾಕ್ಷಾಣಿ ಶಾಸ್ತ್ರಾಣಿ ವಿವಾದಸ್ತೇಷು ಕೇವಲಂ | ಪ್ರತ್ಯಕ್ಷಂ ಜ

ಗುರು ಗೋಚಾರ ಪೀಡಾಪರಿಹಾರಾರ್ಥ ಜಪಮಂತ್ರಗಳು -

ದೇವಾನಾಂ ಚ ಋಷಿಣಾಂ ಚ ಗುರುಂ ಕಾಂಚನ ಸನ್ನಿಭಮ್ | ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ || (ದೇವತೆಗಳಿಗೂ ಮತ್ತು ಋಷಿಗಳಿಗೂ ಗುರುವಾದ, ಚಿನ್ನದ ಕಾಂತಿಗೆ ಸದೃಶವಾದ ಕಾಂತಿಯುಳ್ಳ, ಮೂರೂ ಲೋಕದಲ್ಲಿ ಅತುಲನೀಯ ಬುದ್ಧಿವಂತನಾದ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.) ಇದು ಪ್ರಸಿದ್ಧವಾದ ಪುರಾಣೋಕ್ತ ಗುರು ಜಪಮಂತ್ರ. ಶ್ರೀವೇದವ್ಯಾಸ ವಿರಚಿತ ನವಗ್ರಹ ಸ್ತೋತ್ರಾಂತರ್ಗತವಾದದ್ದು. ಪ್ರತಿನಿತ್ಯ ಜಪಿಸುವುದರಿಂದ ಶೀಘ್ರವಾಗಿ ಫಲಪ್ರಾಪ್ತಿಯಾಗುತ್ತದೆ. ಗುರು ಪ್ರಸಾದಕ್ಕಾಗಿ ಜಪಸಂಖ್ಯೆ 19000. ಈ ಕೆಳಗಿನ ಮಂತ್ರವು ಬ್ರಹ್ಮಾಂಡಪುರಾಣೋಕ್ತ ಪೀಡಾಪರಿಹಾರಕ ಸ್ತೋತ್ರಾಂತರ್ಗತವಾಗಿದೆ. ಇದೂ ಸಹ ಶೀಘ್ರ ಫಲಪ್ರದ ಮಂತ್ರವಾಗಿದೆ, ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ | ಅನೇಕಶಿಷ್ಯಸಂಪೂರ್ಣಃ ಪೀಡಾಂ ಹರತು ಮೇ ಗುರುಃ || (ದೇವತೆಗಳ ಮಂತ್ರಿಯಾದ, ವಿಶಾಲವದ ನೇತ್ರಗಳುಳ್ಳ (ದೃಷ್ಟಿಯುಳ್ಳ), ಸರ್ವದಾ ಲೋಕಹಿತವನ್ನೇ ಚಿಂತಿಸುತ್ತಿರುವ, ಅನೇಕ ಶಿಷ್ಯರಿಂದ ಸಂಪನ್ನನಾದ ಹೇ ದೇವಗುರು ನನಗೆ ಒದಗಿದ ಪೀಡೆಗಳನ್ನು ಪರಿಹರಿಸು.) ಈ ಮಂತ್ರವನ್ನು ಪ್ರತಿನಿತ್ಯ ಕನಿಷ್ಟ ಪಕ್ಷ 108 ಬಾರಿಯಷ್ಟು ಜಪಿಸುವುದರಿಂದ ಗುರು ಗೋಚಾರ ಸೂಚಿತ ಅನಿಷ್ಟಗಳ ನಿವೃತ್ತಿಯಾಗುತ್ತದೆ. ಮೇಲಿನ ಎರಡೂ ಮಂತ್ರಗಳನ್ನು ಗುರು ಅಶುಭ ಗೋಚಾರವಿರುವ ರಾಶಿಯವರು ಅವಶ್ಯವಾಗಿ ಜಪಿಸಬೇಕು. ಗುರು ಪ್ರಸನ್ನತೆಗಾಗಿ ಪ್ರತೀ ಗುರುವಾರದಂದು ಗುರುಗಳ ಮಠ, ದೇವಸ್ಥಾನಗಳ ದರ್ಶನವನ್ನು ಮ

ಆದಿತ್ಯ ಹೃದಯ ಸ್ತೋತ್ರ

ಸೂರ್ಯ ಪ್ರತ್ಯಕ್ಷ ದೇವತೆ. ವೇದ ಗರ್ಭವೆನಿಸಿದ ಗಾಯತ್ರೀ ಮಂತ್ರದ ಪ್ರತಿಪಾದ್ಯ ದೇವತೆ. ಭಾರತೀಯ ವೈದಿಕ ಸಂಸ್ಕೃತಿಯ ಆಧಾರ ಸ್ವರೂಪ. ನಮ್ಮ ಎಲ್ಲ ಕರ್ಮಗಳು ಸೂರ್ಯನನ್ನು ಅನುಸರಿಸಿಯೇ ನಡೆಯುತ್ತವೆ, ಎಲ್ಲದಕ್ಕೂ ಸೂರ್ಯನು ಪ್ರತ್ಯಕ್ಷ ಸಾಕ್ಷಿಯಾಗಿರುತ್ತಾನೆ. ಆದುದರಿಂದ ಸೂರ್ಯನನ್ನು ಶಾಸ್ತ್ರಗಳು ವಿಶ್ವದ ಕಣ್ಣು (ಜಗದೇಕ ಚಕ್ಷುಃ) ಎಂದು ಕರೆದಿವೆ. ಸಮಸ್ತ ಜೀವ ಜಡಾತ್ಮಕ ಜಗತ್ತಿನ ಎಕೈಕ ಪ್ರೇರಕ ಶಕ್ತಿಯು ಸೂರ್ಯ. ಸೂರ್ಯನು ಜಗತ್ತಿನ ಆತ್ಮನೆಂದು ಋಗ್ವೇದ ಕೊಂಡಾಡಿದೆ (ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ). “ಷು ಪ್ರೇರಣೇ” ಎಂಬ ಧಾತು ನಿಷ್ಪನ್ನವಾದ ಸೂರ್ಯ ಶಬ್ದದ ಅರ್ಥವೇ ಸರ್ವ ಪ್ರೇರಕನೆಂದು. ಎಲ್ಲ ಜೀವರಾಶಿಗಳಲ್ಲಿ ಚೈತನ್ಯ ರೂಪದಿಂದಿರುವ ಪರಮಾತ್ಮ ತತ್ತ್ವವು ಬಾಹ್ಯ ಲೋಕದಲ್ಲಿ ಸೂರ್ಯ ರೂಪದಿಂದ ಕರ್ಮ ಪ್ರೇರಕವಾಗಿದೆ (ಸುವತಿ ಕರ್ಮಣಿ ಲೋಕಂ ಪ್ರೇರಯತೀತಿ ಸೂರ್ಯಃ). ವೇದಕಾಲದಾರಭ್ಯ ಇಂದಿನ ವರೆಗೂ ಬ್ರಹ್ಮನಿಷ್ಠರು ಮೂರು ಸಂಧ್ಯಾಕಾಲದಲ್ಲಿ ಈ ಪ್ರತ್ಯಕ್ಷ ದೇವನ ಅಂತರ್ಗತ ಹಿರಣ್ಮಯ ಪುರುಷ ಪರತತ್ತ್ವ ನಾರಾಯಣನನ್ನೇ ಗಾಯತ್ರೀಯಲ್ಲಿ ಧ್ಯಾನಿಸುತ್ತಾರೆ ಮತ್ತು ಹೋಮಿಸುತ್ತಾರೆ. ಯಾವ್ಯಾವ ದೇವತೆಗಳಿಂದ ಏನನ್ನು ಪ್ರಾರ್ಥಿಸಬೇಕು ಎಂಬುದನ್ನು ಹೇಳುವ ಒಂದು ಬಹಳ ಪ್ರಸಿದ್ಧವಾದ ಸುಭಾಶಿತವಿದೆ ಆರೋಗ್ಯಂ ಭಾಸ್ಕರಾದಿಚ್ಛೇದ್ ಧನಮಿಚ್ಛೇದ್ಧುತಾಶನಾತ್ | ಈಶ್ವರಾಜ್ಞಾನಮಿಚ್ಛೇತ್ ಮೋಕ್ಷಮಿಚ್ಛೇಜ್ಜನಾರ್ದನಾತ್ || ಆರೋಗ್ಯವನ್ನು ಸೂರ್ಯನಿಂದ, ಧನವನ್ನ

ನವಗ್ರಹ ಪೀಡಾಪರಿಹಾರಕ ಸ್ತೋತ್ರ

ಆದಿತ್ಯಾದ್ಯಾ ಗ್ರಹಾಃ ಸರ್ವೇ ದುಷ್ಟಸ್ಥಾನಸ್ಥಿತಾ ನೃಣಾಮ್ | ತದಾ ಕುರ್ವಂತಿ ಸರ್ವತ್ರ ಪೀಡಾ ನಾನಾವಿಧಾ ಧ್ರುವಮ್ || ಆದಿತ್ಯಾದಿ ನವಗ್ರಹಗಳು ಜಾತಕದಲ್ಲಾಗಲಿ ಅಥವಾ ಗೋಚರದಲ್ಲಾಗಲಿ ದುಷ್ಟಸ್ಥಾನಗಳಲ್ಲಿ ಸ್ಥಿತರಾಗಿದ್ದರೆ ಅಥವಾ ಸಂಚಾರ ಮಾಡಿದರೆ, ತತ್ಪರಿಣಾಮವಾಗಿ ನಾನಾವಿಧ ಪಿಡೆಗಳು ಆಗುತ್ತವೆ, ಇದು ಸತ್ಯ. ನವಗ್ರಹ ಪೀಡಾ ಪರಿಹಾರಕ ಸ್ತೋತ್ರ ಹೆಸರೇ ಸೂಚಿಸುವಂತೆ ನವಗ್ರಹ ಪಿಡೆಯಿಂದ ಪರಿಹಾರಕ್ಕಾಗಿ ಇರುವ ಸ್ತೋತ್ರ. ಇದು ಶೀಘ್ರ ಪರಿಣಾಮವನ್ನು ಕೊಡುವ ಸ್ತೋತ್ರ. ಇಲ್ಲಿ ಪ್ರತಿ ಗ್ರಹಕ್ಕೊಂದರಂತೆ ಒಂಬತ್ತು ಶ್ಲೋಕಗಳಿವೆ. ಜಾತಕ ಅಥವಾ ಗೋಚರದಲ್ಲಿ ಸೂಚಿತವಾದ ಅನಿಷ್ಟಫಲವನ್ನು ಕೊಡುತ್ತಿರುವ ಗ್ರಹದ ಸ್ತೋತ್ರವನ್ನು ಪ್ರತಿದಿನ 108 ಬಾರಿ ಜಪಿಸಿದರೆ ಶೀಘ್ರವಾಗಿ ಕಷ್ಟಪರಿಹಾರವಾಗುತ್ತದೆ. ನವಗ್ರಹ ಪೀಡಾ ಶಾಂತಿಗಾಗಿ ಪ್ರತಿನಿತ್ಯ ಸಮಗ್ರ ಸ್ತೋತ್ರವನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಸಂಧ್ಯಾ ಸಮಯಗಳಲ್ಲಿ ಪಠಿಸಬಹುದು. ಮಹರ್ದಶಾಧಿಪತಿ ಅಂತರ್ದಶಾಧಿಪತಿಯಿಂದ ಸೂಚಿತ ಅನಿಷ್ಟ ಫಲನಿವಾರಣೆಗಾಗಿ ಸಹ ಈ ಸ್ತೋತ್ರಗಳಿಂದ ಜಪ ಮಾಡಬಹುದು. ಸಂಕ್ರಮಣ, ಗ್ರಹಣಕಾಲದಲ್ಲಿ ಪಾರಾಯಣದಿಂದ ದೋಷ ಪರಿಹಾರ. ನವಗ್ರಹ ಪೀಡಾಪರಿಹಾರಕ ಸ್ತೋತ್ರನವಗ್ರಹ ಪೀಡಾಪರಿಹಾರಕಸ್ತೋತ್ರಮ್ (ಬ್ರಹ್ಮಾಂಡ ಪುರಾಣಾಂತರ್ಗತ) ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ | ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ರವಿಃ || ೧ || ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ | ವಿ

ನವಗ್ರಹಗಳು – ಪರಿಚಯ

ಇದು ನವಗ್ರಹಗಳ ಕುರಿತಾದ ಹೊಸ ಲೇಖನ ಮಾಲಿಕೆ. ಪ್ರತಿಯೊಂದು ಗ್ರಹದ ಬಗ್ಗೆ ವಿವರವಾದ ಮಾಹಿತಿಯನ್ನು ಈ ಮಾಲಿಕೆಯಲ್ಲಿ ಕೊಡಲಾಗುವುದು. ಪ್ರಸಕ್ತ ಈ ಲೇಖನದಲ್ಲಿ ನವಗ್ರಹಗಳ ಕುರಿತ ಕೆಲವು ಮೂಲಭೂತ ವಿಷಯಗಳನ್ನು ನೋಡೊಣ. ಸೂರ್ಯಃ ಸೋಮೋ ಮಹೀಪುತ್ರಃ ಸೋಮಪುತ್ರೋ ಬೃಹಸ್ಪತೀ | ಶುಕ್ರಃ ಶನೈಶ್ಚರೋ ರಾಹುಃ ಕೇತುಶ್ಚೇತಿ ಗ್ರಹಾಃ ಸ್ಮೃತಾಃ || (ಯಾಜ್ಞವಲ್ಕ್ಯ ಸ್ಮೃತಿ 13-02) ಸೂರ್ಯ, ಚಂದ್ರ, ಭೂಮಿಪುತ್ರನಾದ ಕುಜ, ಚಂದ್ರಪುತ್ರನಾದ ಬುಧ, ಬೃಹಸ್ಪತಿ, ಶುಕ್ರ, ಶನೈಶ್ಚರ, ರಾಹು ಮತ್ತು ಕೇತು ಇವರನ್ನು ಗ್ರಹಗಳೆಂದು ಹೇಳಲಾಗಿದೆ. ಸೂರ್ಯಃ ಸೋಮಸ್ತಥಾ ಭೌಮೋ ಬುಧಜೀವಸಿತಾರ್ಕಜಾಃ | ರಾಹುಃ ಕೇತುರಿತಿ ಪ್ರೋಕ್ತಾ ಗ್ರಹಾ ಲೋಕಹಿತಾವಹಾಃ || (ಮತ್ಸ್ಯಪುರಾಣ 69-10) ಸೂರ್ಯ, ಸೋಮ (ಚಂದ್ರ), ಭೌಮ (ಮಂಗಳ), ಬುಧ, ಸಿತ (ಶುಕ್ರ), ಅರ್ಕಜ (ಶನಿ), ರಾಹು ಮತ್ತು ಕೇತುಗಳನ್ನು ಲೋಕಕ್ಕೆ ಹಿತವನ್ನುಂಟುಮಾಡುವ ಗ್ರಹಗಳು ಎಂದು ಕರೆಯಲಾಗುತ್ತದೆ. ನವಗ್ರಹಗಳು ಸನಾತನ ಧರ್ಮಾವಲಂಬಿಗಳಾದ ಭಾರತೀಯಯಲ್ಲಿ ನವಗ್ರಹಗಳ ಆರಾಧನೆ ಅತ್ಯಂತ ಪ್ರಾಚೀನಕಾಲದಿಂದ ನಡೆದುಬಂದಿದೆ. ಪ್ರತಿಯೊಂದು ವೈದಿಕ ಕರ್ಮದಲ್ಲಿ ಗ್ರಹಪೂಜೆಯು ಅವಿಭಾಜ್ಯ ಅಂಗವಾಗಿರುತ್ತದೆ. ಈ ಗ್ರಹಗಳು ಸಮಸ್ತ ಜೀವಜಾಲದ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆಯೆಂದು ಆಸ್ತಿಕನಾದ ಪ್ರತಿಯೊಬ್ಬ ಭಾರತೀಯನ ವಿಶ್ವಾಸ. ಈ ನವಗ್ರಹಗಳ ಅಧ್ಯಯನವೇ ವೈದಿಕ ಜ್ಯೋತಿಷ್ಯ ಶಾಸ್ತ್ರ. ವಿವಿಧ ಗತಿಗಳಿಂದ ಆಕಾಶದಲ್ಲಿ ಸಂಚಾರಮ

ಅಧಿಕಮಾಸ ಹೇಗೆ?

ಯಾವ ಚಾಂದ್ರಮಾಸದಲ್ಲಿ ಸೂರ್ಯನ ಸಂಕ್ರಮಣವು ಇರುವುದಿಲ್ಲವೋ ಅದೇ ಅತಿರಿಕ್ತವಾಗಿ ಬರುವಂಥಹ ಅಧಿಕಮಾಸ. “ಸಂಕ್ರಾಂತಿರಹಿತೋ ಮಾಸೋಽಧಿಮಾಸ” – ಸಂಕ್ರಾಂತಿಯಿಂದ ರಹಿತವಾದ ಮಾಸ ಅಧಿಕಮಾಸ. ಈ ಅಧಿಕಮಾಸಕ್ಕೆ ಮೊದಲಿನ ಮಾಸದಲ್ಲಿ ಒಂದು ಸಂಕ್ರಮಣ ನಂತರದ ಮಾಸದಲ್ಲಿ ಒಂದು ಸಂಕ್ರಮಣ ಹೀಗೆ ಉಂಟಾಗಿ ಶುಕ್ಲ-ಕೃಷ್ಣಾದಿ ಉಭಯಪಕ್ಷಗಳಲ್ಲಿ ಸಂಕ್ರಮಣ ಬಾರದೇ ಇರುವುದೇ ಅಧಿಕ ಮಾಸದ ಉಪಲಬ್ಧಿಗೆ ಕಾರಣ. ಸೌರವರ್ಷ ಮತ್ತು ಚಾಂದ್ರವರ್ಷಗಳಲ್ಲಿ ವಾರ್ಷಿಕವಾಗಿ ಆಗುವ ಅಂತರದ ಫಲವಾಗಿ ಸರಿಸುಮಾರು ಮೂವತ್ಮೂರು ಮಾಸಗಳಿಗೊಮ್ಮೆ ನಮ್ಮ ಪಂಚಾಂಗಗಳಲ್ಲಿ ಅಧಿಕಮಾಸವನ್ನು ಸೇರಿಸಿ ಈ ಅಂತರವನ್ನು ಸರಿಹೊಂದಿಸಲಾಗುತ್ತದೆ. ಅಧಿಕಮಾಸವಿರುವ ಸಂವತ್ಸರದಲ್ಲಿ ಹದಿಮೂರು ಮಾಸಗಳಿರುತ್ತವೆ. ಭಾರತದಾದ್ಯಂತ ನಾವು ಸೌರ-ಚಾಂದ್ರ ಹೀಗೆ ಮಿಶ್ರ ಸ್ವರೂಪದ ಪಂಚಾಂಗವನ್ನು ಅರ್ಥಾತ್ ಕಾಲಗಣನೆಯನ್ನು ಅನುಸರಿಸುತ್ತೇವೆ. ಸೌರವರ್ಷದಲ್ಲಿ ಸುಮಾರು 365 ದಿವಸಗಳಿರುತ್ತವೆ ಹಾಗು ಚಾಂದ್ರ ವರ್ಷದಲ್ಲಿ ಸರಾಸರಿ 354 ದಿವಸಗಳಿರುತ್ತವೆ. ಸೌರವರ್ಷ ಮತ್ತು ಚಾಂದ್ರವರ್ಷಗಳ ಮಧ್ಯೆ ಪ್ರತಿವರ್ಷ ಸರಾಸರಿ ಹನ್ನೊಂದು ದಿನಗಳ ಅಂತರವುಂಟಾಗುತ್ತದೆ. ಮೂರು ವರ್ಷಗಳಿಗೊಮ್ಮೆ ಈ ರೀತಿ ಲಭ್ಯವಾದ ಅತಿರಿಕ್ತ ದಿನಗಳನ್ನು ಒಂದು ಅಧಿಕಮಾಸವಾಗಿ ಚಾಂದ್ರವರ್ಷದಲ್ಲಿ ಸೇರಿಸಲಾಗುತ್ತದೆ. ಹಿಂದಿನ ಅಧಿಕಮಾಸದಿಂದ ಸುಮಾರಾಗಿ 32 ಮಾಸ 16 ದಿನಗಳು ಸಲ್ಲಲು ಹೊಸ ಅಧಿಕಮಾಸದ ಪ್ರಾಪ್ತಿಯಾಗುತ್ತದೆ. ಈ ರೀತಿ ಉಂಟಾದ ಮಾಸದಲ್ಲಿ ಸೂರ

ಆಷಾಢ ಏಕಾದಶೀ – ಶಯನೀ ಏಕಾದಶೀ

ಭಾರತೀಯ ಸನಾತನ ಧರ್ಮದಲ್ಲಿ ಏಕಾದಶೀ ಮತ್ತು ಉಪವಾಸ ಇವು ಪರ್ಯಾಯ ವಾಚಕಗಳಾಗಿವೆ. ನಮ್ಮ ಧರ್ಮಶಾಸ್ತ್ರಗಳಲ್ಲಿ ಅನೇಕ ರೀತಿಯ ಉಪವಾಸ ವ್ರತಗಳಿದ್ದು ಎಲ್ಲವುಗಳಿಗೂ ತನ್ನದೇ ಆದ ಮಹತ್ವವಿದೆ ಮತ್ತು ಅವುಗಳನ್ನು ನಿಷ್ಠೆಯಿಂದ ಪಾಲಿಸುವ ಶ್ರದ್ಧೇಯ ಬಳಗವಿದೆ. ಆದರೆ ಏಕಾದಶಿಯ ಉಪವಾಸಕ್ಕಿರುವ ಮಹತ್ವ ಮತ್ತು ಪ್ರಧಾನತೆ ಬೇರೆ ಇನ್ಯಾವುದೇ ವ್ರತಕ್ಕಾಗಲೀ ಉಪವಾಸಕ್ಕಾಗಲೀ ಇಲ್ಲ. ಹಾಗೆಯೇ ಏಕಾದಶಿಯ ಪ್ರಾಚೀನತೆಯು ಸಹ ಇನ್ನಾವುದೇ ಉಪವಾಸ ವ್ರತಕ್ಕಿಲ್ಲ. ವೈದಿಕ ಸಾಹಿತ್ಯ, ಇತಿಹಾಸ, ಪುರಾಣ, ತಂತ್ರಾಗಮ, ಧರ್ಮಶಾಸ್ತ್ರ, ಸ್ಮೃತಿಗಳು, ನಿಬಂಧ ಗ್ರಂಥಗಳು, ಶಾಸ್ತ್ರ ಕಾವ್ಯಗಳು, ಜ್ಯೋತಿಷ್ಯ – ಹೀಗೆ ಏಕಾದಶಿಯ ಕುರಿತು ನಿರ್ಣಯಮಾಡದ ಗ್ರಂಥಗಳೇ ಇಲ್ಲ. ಈ ವ್ರತವು ಭಾರತದಾದ್ಯಂತ (ಇಂದು ಜಗದಾದ್ಯಂತವೂ ಸಹ!) ಎಲ್ಲ ವೈಷ್ಣವ-ಭಾಗವತ ಸಂಪ್ರದಾಯದ ಅನುಯಾಯಿಗಳಿಗೆ ನಿತ್ಯವ್ರತವಾಗಿದೆ. ಜನ್ಮಾಂತರದ ಪಾಪಗಳನ್ನು ಕಳೆಯುವುದರಲ್ಲಿ, ಶ್ರೀಹರಿಯ ಕೃಪೆಯನ್ನು ತಂದು ಕೊಡುವುದರಲ್ಲಿ ಏಕಾದಶಿಗೆ ಸಮನಾದ ವ್ರತವು ಇನ್ನೊಂದಿಲ್ಲ. ಅಂತಃಕರಣ ಶುದ್ಧಿ, ಬಹಿರಂಗ ಶುದ್ಧಿ, ಆರೋಗ್ಯ ಭಾಗ್ಯ, ಸಕಲ ದೋಷಗಳ ಪರಿಹಾರ ಈ ವ್ರತಾಚರಣೆಯ ಫಲಪ್ರಸಾದವಾಗಿದೆ. ಏಕಾದಶೀ ಉಪವಾಸದ ಹಿರಿಮೆ ಏಕಾದಶೀಸಮುತ್ಥೇನ ವಹ್ನಿನಾ ಪಾತಕೇಂಧನಮ್ | ಭಸ್ಮೀಭವತಿ ರಾಜೇಂದ್ರ ಅಪಿ ಜನ್ಮಶತೋದ್ಭವಮ್ || (ಪದ್ಮಪುರಾಣ ಉತ್ತರಖಂಡ ೨೬೨-೧೦) ಏಕಾದಶೀ ಎಂಬ ವ್ರತಾಗ್ನಿಯಿಂದ ಹುಟ್ಟುವ ಅಗ್ನಿಯು ನೂರಾರು ಜನ್ಮಗಳಿಂದ ಸಂಚಿ

ಚಾತುರ್ಮಾಸ

ಮನುಷ್ಯಮಾನದ ಒಂದು ವರ್ಷವು ದೇವತೆಗಳಿಗೆ ಒಂದು ದಿನ (ಅಹೋರಾತ್ರ). ಉತ್ತರಾಯಣವು ದೇವತೆಗಳ ಹಗಲು ಮತ್ತು ದಕ್ಷಿಣಾಯಣವು ರಾತ್ರಿ. ಸೂರ್ಯನ ಕರ್ಕರಾಶಿ ಪ್ರವೇಶದೊಂದಿಗೆ ದಕ್ಷಿಣಾಯಣವು ಪ್ರಾರಂಭವಾಗುತ್ತದೆ. ದಕ್ಷಿಣಾಯಣವು ಆರು ತಿಂಗಳುಗಳ ಕಾಲವಿರುತ್ತದೆ. ಈ ಕರ್ಕಮಾಸದಲ್ಲಿ ಬರುವ ಆಷಾಢ ಶುಕ್ಲ ಏಕಾದಶೀಯಿಂದ ನಾಲ್ಕು ತಿಂಗಳುಗಳಷ್ಟು ಕಾಲವನ್ನು ದೇವತೆಗಳು ನಿದ್ರಿಸುವ ಸಮಯವೆಂದು ಕರೆಯಲಾಗಿದೆ. ಈ ನಾಲ್ಕು ತಿಂಗಳುಗಳ ಕಾಲ ಆಚರಿಸಲಾಗುವ ವ್ರತವನ್ನು ಚಾತುರ್ಮಾಸ ವ್ರತವೆಂದು ಕರೆಯಲಾಗುತ್ತದೆ. ಚಾತುರ್ಮಾಸವು ಆಷಾಡ ಶುಕ್ಲ ಏಕಾದಶೀಯಿಂದ ಆರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶೀ ಅಥವಾ ಪೌರ್ಣಮೆಯಂದು ಸಮಾಪನಗೊಳ್ಳುತ್ತದೆ. ಆಷಾಢ ಶುಕ್ಲ ಏಕಾದಶೀಯಂದು ದೇವದೇವೋತ್ತಮನಾದ ಶ್ರೀಹರಿಯು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ತೊಡಗುವುದರ ಪ್ರತೀಕವಾಗಿ ಹರಿಶಯನೋತ್ಸವ ಅಥವಾ ವಿಷ್ಣುಶಯನೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಶಯನೀ ಏಕಾದಶೀಯೆಂದು ಕರೆಯಲಾಗುತ್ತದೆ. ಕಾರ್ತೀಕ ಮಾಸದ ಶುಕ್ಲೈಕಾದಶೀಯಂದು ಪರಮಾತ್ಮನು ನಿದ್ರೆಯಿಂದ ಎಚ್ಚರಗೊಳ್ಳುವುದರಿಂದ ಅಂದು ಜಾಗರೋತ್ಸವ ಅಥವಾ ಪ್ರಬೋಧೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಉತ್ಥಾನ ಏಕಾದಶೀ ಅಥವಾ ಪ್ರಬೋಧಿನಿ ಏಕಾದಶೀ ಎಂದು ಕರೆಯಲಾಗುತ್ತದೆ. ಚಾತುರ್ಮಾಸ ವ್ರತ ಎಲ್ಲರಿಗೂ ವಿಹಿತ- ಚಾತುರ್ಮಾಸ ವ್ರತವು ಮಹಾಪುಣ್ಯಪ್ರದವಾಗಿದ್ದು ಇದರ ಆಚರಣೆಯಿಂದ ಸರ್ವವಿಧ ಪಾಪರಾಶಿಗಳ ನಾಶವಾ

ಪುರಂದರ ದಾಸರು-ದಾಸನ ಮಾಡಿಕೊ ಎನ್ನ ಸ್ವಾಮಿ

ಯಾದವ ನೀ ಬಾ ಯದುಕುಲನಂದನ | ಮಾಧವ ಮಧುಸೂಧನ ಬಾರೋ ||ಪಲ್ಲವಿ|| ಸೋದರ ಮಾವನ ಮಧುರೆಲಿ ಮಡುಹಿದ ಯಶೋದೆ ಕಂದ ನೀ ಬಾರೋ ||ಅನುಪಲ್ಲವಿ|| ಚರಣ ಶಂಖಚಕ್ರವು ಕೈಯಲಿ ಹೊಳೆಯುತ | ಬಿಂಕದ ಗೋವಳ ನೀ ಬಾರೋ || ಅಕಳಂಕ ಮಹಿಮನೆ ಆದಿನಾರಾಯಣ | ಬೇಕೆಂಬ ಭಕುತರಿಗೊಲಿಬಾರೋ ||1|| ಕಣಕಾಲಂದುಗೆ ಘಲುಘಲುರೆನುತಲಿ | ಝಣಝಣ ವೇಣುನಾದದಲಿ || ಚಿಣಿಕೋಲು ಚೆಂಡು ಬುಗುರಿಯನಾಡುತ | ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ||2|| ಖಗವಾಹನನೇ ಬಗೆಬಗೆ ರೂಪನೇ | ನಗುಮೊಗದರಸನೇ ನೀ ಬಾರೋ || ಜಗದೊಳು ನಿನ್ನಯ ಮಹಿಮೆಯ ಪೊಗಳುವೆ| ಪುರಂದರವಿಠಲ ನೀ ಬಾರೋ ||3|| ರಚನೆ: ಪುರಂದರ ದಾಸ ರಾಗ : ಮೋಹನ ತಾಳ : ಖಂಡ ಛಾಪು ಭಾಷೆ : ಕನ್ನಡ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ || ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆತಾಯಿಯು ನೀನೆ ಬಂಧುಬಳಗವು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||1|| ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ಕಡುನೊಂದೆ ನಾನು ಸನಕಾದಿಮುನಿವಂದ್ಯ ವನಜಸಂಭವ ಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||2|| ಭಕ್ತವತ್ಸಲನೆಂಬೊ ಬಿರುದು ಪೊತ್ತಾ ಮೇಲೆ ಭಕ್ತರಾಧೀನನಾಗಿರಬೇಡವೆ ಮುಕ್ತಿದಾಯಕ ನೀನು ಹೊನ್ನೂರುಪುರವಾಸ ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||3|| ರಾಗ: ನಾದನಾಮಕ್ರಿಯ ತಾಳ: ಆದಿ ರಚನೆ : ಪುರಂದರ ದಾಸರು ದಾಸನ ಮಾಡಿಕೊ ಎನ್ನ ಸ್ವಾಮಿ ಸಾ

ನವರತ್ನಗಳ ಪರೀಕ್ಷಾ ವಿಧಾನ

ನೈಜ ರತ್ನಗಳನ್ನು ಪರೀಕ್ಸಿಸುವ ವಿಧಾನ ಮಾಣಿಕ್ಯ ಬೆಳ್ಳಿಯ ತಟ್ಟೆಯಲ್ಲಿ ಈ ಮಾಣಿಕ್ಯ ರತ್ನವನ್ನು ಇಟ್ಟು ಸೂರ್ಯನ ಕಿರಣ ಅದರ ಮೇಲೆ ಬೀಳುವಂತೆ ಮಾಡಿದರೆ ತಟ್ಟೆಯು ಕೇಸರಿ ಬಣ್ಣ ಹೊಂದಿರುವಂತೆ ಕಾಣಿಸುವುದು.ಇದು ನೈಜ ಮಾಣಿಕ್ಯವನ್ನು ಪರೀಕ್ಷೆಮಾಡುವ ವಿಧಾನವಾಗಿದೆ. ಮುತ್ತು ಗೋಮೂತ್ರದಲ್ಲಿ(ಗಂಜಲ)ಒಮ್ದು ದಿನ ಮುತ್ತನ್ನು ಇಡಬೇಕು ಆಗ ಕೃತಕ ಮುತ್ತಾದರೆ ಸೀಳುತ್ತದ್ದೆ,ತನ್ನ ಬಣ್ಣ ಬದಲಾವಣೆಯಾಗುತ್ತದೆ,ಆದರೆ ನಿಜವಾದ ಮುತ್ತು ಶುದ್ದವಾದ ಮುತ್ತು ಯಾವುದೇ ರೀತಿಯಲ್ಲಿ ಬದಲಾವಣೆಹೊಂದುವುದಿಲ್ಲ. ಹವಳ ನೈಜ ಹವಳವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಉಂಗುರ,ವಿಗ್ರಹ,ಆಭರಣ ಮುಂತಾದವುಗಳನ್ನು ತಯಾರಿಸಬಹುದಾಗಿದೆ ಆದರೆ ಕೃತಕ ಹವಳವನ್ನು ಇಷ್ಟ ಬಂದ ಆಕಾರಕ್ಕೆ ಕತ್ತರಿಸಲು ಸಾದ್ಯವಿಲ್ಲ, ಮತ್ತು ನೈಜ ಹವಳವನ್ನು ಅಂಗೈಯಲ್ಲಿಟ್ಟು ಮುಷ್ಟಿ ಮುಚ್ಚಿದರೆ ಸ್ವಲ್ಪ ಸಮಯದಲ್ಲೇ ಅಂಗೈ ಬಿಸಿಯ ಅನುಭವ ಪಡೆಯುವುದು. ಪಚ್ಚೆ ನಿಜವಾದ ಪಚ್ಚೆಯನ್ನು ಒಂದೇ ಸಮನೆ ನೋಡಿದಾಗ ಅಥವ ಅದರತ್ತ ದೃಷ್ಟಿಯನ್ನು ಕೇಂದ್ರೀಕರಿಸಿದರೆ ಕಣ್ಣು ಉರಿಯಾಗುವುದಿಲ್ಲ ಹಾಗು ತಂಪಾದ ಅನುಭವ ಉಂಟಾಗುತ್ತದೆ.ಆದರೆ ಕೃತಕ ಪಚ್ಚೆಯನ್ನು ದೃಷ್ಟೀಕರಿಸಿದರೆ ಕಣ್ಣುಗಳಲ್ಲಿ ಉರಿ ಪ್ರಾರಂಭವಾಗುತ್ತದೆ. ಪುಷ್ಯರಾಗ(ಕನಕ ಪುಷ್ಯರಾಗ) ನೈಜ ಪುಷ್ಯರಾಗ ರತ್ನವು ವಿಷ ವಸ್ತುಗಳ ಮುಂದೆ ತನ್ನ ಬಣ್ಣ ಬದಲಾಯಿಸಿಕೊಳ್ಳುತ್ತದೆ. ವಜ್ರದಷ್ಟೇ ಪ್ರಕಾಶಮಾನವುಳ್ಳ ಪುಷ್ಯರಾಗವನ್ನು ವಜ್ರಕ್ಕೆ ಬದಲಾಗಿ ಮೋಸಗೊಳಿಸಲ

ಕುಶ್ಮಾಂಡ ಬಲಿಪೂಜೆ ಮಾಡುವ ವಿಧಿ ವಿದಾನಗಳು

ಕುಶ್ಮಾಂಡ ಬಲಿಪೂಜೆ ಮಾಡುವ ವಿಧಿ ವಿದಾನಗಳು ಸಾಮಾನ್ಯವಾಗಿ ಸಂತಾನ ದೋಷಕ್ಕೆ,ಗರ್ಭಪಾತಕ್ಕೆ ಕುಶ್ಮಾಂಡ ಬಲಿಪೂಜೆ ಮಾಡುವ ವಿಧಿ ವಿದಾನಗಳನ್ನು ಜೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.ಆಗಿಂದಾಗ್ಗೆ ಆಗುವ ಗರ್ಭಪಾತ, ಗರ್ಭಕೋಶದ ಸಮಸ್ಯೆ,ಅಂಡಾಣು ಸಮಸ್ಯೆ,ವೀರ್ಯಾಣು ಕೊರತೆ,ತಿಂಗಳ ಮುಟ್ಟಿನ ಸಮಸ್ಯೆಯಿಂದ ಸಂತಾನಕ್ಕೆ ತೊಂದರೆಯಾಗುವುದು ಸರ್ವೇಸಾಮಾನ್ಯವಾಗಿರುತ್ತದೆ. ಅಲ್ಲದೆ ಸ್ತ್ರೀಯರಲ್ಲಿ ಸಪ್ತದಾತುವಿನಲ್ಲಿ( ರಸ,ರಕ್ತ,ಮಾಂಸ,ಅಸ್ತಿ,ಮಜ್ಜೆ ಶುಕ್ರ,ಮೇದಸ್ಸು(ಕೊಬ್ಬು)ಇವುಗಳ ಅಸಮತೋಲನ ದಿಂದಲೂ ಕೂಡ ಗರ್ಭದರಿಸಿದ ನಂತರ ಶಿಶುವಿಗೆ ಅಂಗವೈಕಲ್ಯತೆ ಉಂಟಾಗುವ ಸಾದ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಇಂತಹ ಸಮಯದಲ್ಲಿ ಗರ್ಭ ಧರಿಸಿದ ಸ್ತ್ರೀಯು ತನ್ನ ಗರ್ಭವನ್ನು ಸುರಕ್ಷಿತವಾಗಿರಿಸಿಕೊಂಡು ಆರೋಗ್ಯಯುತವಾದ ರೂಪಯುತವಾದ,ವಿದ್ಯಾವಂತನಾಗಬಲ್ಲಂತ ಒಳ್ಳೆಯ ಮಗುವನ್ನು ಪಡೆಯಲಿಚ್ಚಿಸುವ ಸ್ತ್ರೀಯರು ತಮ್ಮ ಗರ್ಭದಾರಣೆಯ ನಂತರ ೩,೬,೮ನೇ ತಿಂಗಳಿನಲ್ಲಿ ಕುಶ್ಮಾಂಡಪೂಜೆಯನ್ನು ಮಾಡುವುದರಿಂದ ತಮಗೆ ಜನಿಸುವ ಮಗುವು ಈ ಮೇಲಿನ ಯಾವುದೇ ತೊಂದರೆಯಿಂದ ಮುಕ್ತವಾಗಿ ಯಾವುದೇ ತೊಂದರೆಇಲ್ಲದೆ ಸುಖ ಪ್ರಸವವನ್ನು ಗರ್ಬಿಣಿಯು ಪಡೆಯುವಲ್ಲಿ ಯಶವನ್ನು ಹೊಂದುವಳು.ಒಂದುವೇಳೆ ಗರ್ಭದಲ್ಲಿನ ಶಿಶುವಿಗೇನಾದರು ಅಂಗಾಗವು ವಿಕಲವಾಗಿದೆಯೆಂಬ ವಿಷಯವು ಗರ್ಭದಲ್ಲಿದ್ದಾಗಲೇ ತಿಳಿದಲ್ಲಿ ಈ ಕುಶ್ಮಾಂಡಬಲಿ ಪೂಜೆಮಾಡುವುದರಿಂದ ಆ ನ್ಯೂನತೆಯಿಂದ ಗರ್ಭದಲ್ಲಿರುವ ಮಗುವನ್ನು ರಕ್ಷಿಸಬಹುದಾಗಿ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಯಾವುದೇ ನಿವೇಶನದ ಆಯವನ್ನು ನಿರ್ಣಯಿಸಲು ಈ ಕೆಳಗಿನ ಮೂಲ ಸೂತ್ರಗಳನ್ನು ಅನುಸರಿಸಬೇಕು

ಯಾವುದೇ ನಿವೇಶನದ ಆಯವನ್ನು ನಿರ್ಣಯಿಸಲು ಈ ಕೆಳಗಿನ ಮೂಲ ಸೂತ್ರಗಳನ್ನು ಅನುಸರಿಸಬೇಕು (ಆದಾರ:-ಓಂಟಿಕೊಪ್ಪಲ್ ಪಂಚಾಂಗ) *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ನವಗ್ರಹಗಳಿಂದ ಗುಣಿಸಿ ದಿಕ್ಪಾಲಕರಿಂದ ಭಾಗಿಸಿದಾಗ ಉಳಿಯುವ ಶೇಷವೇ ಆ ನಿವೇಶನಕ್ಕೆ ಧ್ವಜ,ಗಜ,ವೃಷಭ,ಸಿಂಹ,ಸ್ವಾನ,ಖರ,ಕಾಕ,ಆಯವಾಗುತ್ತದೆ.(ವಾಸದ ಮನೆಗಳಿಗೆ ಧ್ವಜ,ಗಜ,ವೃಷಭ,ಸಿಂಹ ಆಯಗಳು ಶುಭ) *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು (8)ದಿಕ್ಪಾಲಕರಿಂದ ಗುಣಿಸಿ (12)ಮಾಸಗಳಿಂದ ಭಾಗಿಸಿದಾಗ ಉಳಿಯುವ ಶೇಷವೇ ಧನಾಂಶವಾಗುತ್ತದೆ. *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ತ್ರಿಮೂರ್ತಿಗಳಿಂದ(3) ಗುಣಿಸಿ (8)ದಿಕ್ಪಾಲಕರಿಂದ ಭಾಗಿಸಿದಾಗ ಉಳಿಯುವ ಶೇಷವೇ ಋಣಾಂಶವಾಗುತ್ತದೆ. *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ನವಗ್ರಹಗಳಿಂದ ಗುಣಿಸಿ (೨) 2ಸಂವತ್ಸರಗಳಿಂದ(120) ಭಾಗಿಸಿದಾಗ ಉಳಿಯುವ ಶೇಷವೇ ಆ ಮನೆಗೆ ಆಯುಷ್ಯವಾಗುತ್ತದೆ. ಸೂ:- ಯಾವುದೇ ಮನೆಗೆ ಬಾಗಿಲನ್ನು ಇಡಲು ಮೂರು ವಿಧಾನಗಳನ್ನು ಅನುಸರಿಸಬಹುದಾಗಿದೆ. 1) ಮನೆಯ ಯಜಮಾನನ ಜನ್ಮ ರಾಶಿಯಂತೆ 2)ಆಯದ ಅನುಸಾರ3)ತಮ್ಮ ಹಿರಿಯರು ಅನುಸರಿಸಿಕೊಂಡು ಬಂದರೀತಿ(ಈ ಮೂರರಲ್ಲಿ ಯಾವುದಾದರು ಒಂದುರೀತಿಯಲ್ಲಿ ಬಾಗಿಲಿಡಬಹುದು. ಆಯದ ಪ್ರಕಾರ ಬಾಗಿಲಿಡುವುದು ಅತ್ಯಂತ ಶುಭಕರವಾಗಿರುತ್ತದೆ. 2) ವಾಸದ ಮನೆಗೆ ಯಾವಾಗಲು ಒಳಆಯವನ್ನು ಇಡುವುದು ಸೂಕ್ತ.(ಅಂದರೆ ಕಟ್ಟಡವನ್ನು ಕಳೆದು ನಾಲ್ಕು ಗೋಡೆಯ ಒಳಬಾಗವನ್ನು ಆಯಕ್ಕೆ ತಗೆದುಕೊಳ್ಳಬೇಕು)

ಮಾಟ,ಮಂತ್ರ ದೋಷನಿವಾರಣೆಗೆ ಮಂತ್ರಗಳು

ಮಾಟ,ಮಂತ್ರ ದೋಷನಿವಾರಣೆಗೆ ಮಂತ್ರಗಳು ಅಯ್ಯಪ್ಪ ಗಾಯತ್ರಿ ಓಂ ಭೂತನಾತಾಯ ವಿದ್ಮಹೇ ಮಹಾದೇವಾಯ ಧೀಮಹೀ ತನ್ನೋ ಶಾಸ್ತ್ರ ಪ್ರಚೋದಯಾತ್ ಸುದರ್ಶನ ಗಾಯತ್ರಿ ಮಂತ್ರ ಓಂ ಸುದರ್ಶನಾಯ ವಿದ್ಮಹೇ ಮಹಾಜ್ವಾಲಾಯ ಧೀಮಹೀ ತನ್ನೋ ಚಕ್ರಪ್ರಚೋದಯಾತ್ ಓಂ ನಮೋ ಭಗವತಿ ರಾಜರಾಜೇಶ್ವರಿ ಸಾಗರತೀರೇ ಮಹಾಮದ್ಯರ್ನಿವಾಸಿನಿ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಅನ್ನಪೂರ್ಣ ಅಂಬೇ ಮಾತಾ ಉದಯೋಸ್ತು ಉದಯೋಸ್ತು ಐಂ ಹ್ರೀಂ ಶ್ರೀಂ ಯಾಂ ರಂ ಲಂ ಶಂ ದಂ ವಂ ತಂ ಓಂ ||ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ದಕ್ಷಿಣ ಕಾಳಿಕೆ ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ಸ್ವಾಹಾ|| ||ಓಂ ಹ್ರೀಂ ಹ್ರೀಂ ಹುಂ ಹುಂ ಕ್ರೀಂ ಕ್ರೀಂ ಕ್ರೀಂ ದಕ್ಷಿಣ ಕಾಳಿಕೆ ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ || ||ಓಂ ನಮೋ ಭಗವತೇ ಮಹಾಕಾಲಬೈರವಾಯ (ಅಮುಕಂ) ಶತೃ ಮಾರಯ|ಕಾಲಾಗ್ನಿತೇಜಸೇ ಫೋತಯ ಹುಂ ಫಟ್ ಸ್ವಾಹಾ|| ಓಂ ಮಹಾಕಾಳೇಶ್ವರಾಯ ನಮಃ ಓಂ ಮಹಾಂ ಕಾಲಾಯ ನಮಃ ಅಮಾವಾಸ್ಯೆ ಹುಣ್ಣಿಮೆಯಂದು ರಾತ್ರಿ ಸ್ವಲ್ಪ ಅಕ್ಕಿ, ಮೊಸರು,ಗುಲಾಲ್ ಅನ್ನು ಒಂದು ಬಿಳಿ ಹಾಳೆಯಲ್ಲಿ ಹಾಕಿ ಮಾಟ ಆಗಿರುವ ವ್ಯಕ್ತಿಯನ್ನು ನೆಲದಮೇಲೆ ಕೂರಿಸಿ ನೆತ್ತಿಯಿಂದ ಪಾದದ ವರೆಗೆ ೯ ಬಾರಿ ಅಥವ ಆ ವ್ಯಕ್ತಿಗೆ ಆಗಿರುವ ವಯಸ್ಸಿನಷ್ಟು ಸಲ ಇಳಿತಗೆದು ೪ದಾರಿ ಕೂಡಿರುವಕಡೇ ಎಸೆದು ಬರಬೇಕು. ಅಥವ ಮೊಟ್ಟೆಗಾತ್ರದ ಒಂದು ಉತ್ತಮವಾದ ನಿಂಬೆಹಣ್ಣು ತಗೆದುಕೊಂಡು ಮಾಟ ಆಗಿರುವ ವ್ಯಕ್ತಿಯನ್ನು ನೆಲ

ಸಂತಾನ ಭಂಗ ದೋಷ ಪರಿಹಾರ ವ್ರತ ವಿಚಾರ

ಅನೇಕ ಹೆಣ್ಣು ಮಕ್ಕಳು ಪೂರ್ವ ಜನ್ಮದ ಕರ್ಮದಿಂದಲೋ ಸರ್ಪ ಶಾಪ,ಪಿಶಾಚಿ ಶಾಪ,ಬಾಲಗ್ರಹ ದೋಷದಿಂದಲೋ ಮಕ್ಕಳು ಹುಟ್ಟಿ ಸಾಯುವಿಕೆ,ಗರ್ಭದಲ್ಲಿಸಾಯುವಿಕೆ,ಗರ್ಭಪತನ,ಬಹಳವರ್ಷಮಕ್ಕಳಾಗದಿರುವಿಕೆ,ಮಾಸಿಕಮುಟ್ಟುಸರಿಯಾಗಿಆಗದಿರುವಿಕೆ,ಕೆಟ್ಟಕನಸುಬೀಳುವಿಕೆ,ಕೈಕಾಲುನೋವು,ನಡು,ಬೆನ್ನು ಹೊಡೆಯುವಿಕೆ,ಇತ್ಯಾದಿ ದೈನಿಕ ದುರ್ಲಕ್ಷಣಗಳು ತೋರುತ್ತಾ ಹೋಗಿ ಹೆಣ್ಣುಮಕ್ಕಳನ್ನು ಚಿಂತೆಗೆ ಈಡುಮಾಡುವುವು. ಇವುಗಳ ಪರಿಹಾರಕ್ಕೆ ಸಂತಾನ ಭಂಗದೋಷವ್ರತ ವನ್ನು ಆಚರಿಸುವುದರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಸಂತಾನವನ್ನು ಪಡೆಯಬಹುದು. ವ್ರತವಿಚಾರ: ಸ್ತ್ರೀಯರು ಶುಭ ದಿನದಂದು ಸ್ನಾನವನ್ನು ಮಾಡಿ ಪೂಜಾ ಸಾಮಗ್ರಿಗಳನ್ನು ತಗೆದುಕೊಂಡು ಹುತ್ತವಿದ್ದಲ್ಲಿಗೆ ಹೋಗಿ ಆ ಹುತ್ತವನ್ನು ಭಕ್ತಿಯಿಂದ ಪೂರ್ವಾಭಿಮುಖವಾಗಿ ನಿಂತು ಪೂಜಿಸಿ ಆಮೇಲೆ ಹುತ್ತದಮಣ್ಣಿನಿಂದ ಹಾವಿನ ಮೂರ್ತಿಯನ್ನು ಮಾಡಿ ಅದನ್ನು ಒಂದು ತಟ್ಟೆಯಲ್ಲಿರಿಸಿ ಪೂಜೆಯನ್ನು ಮಾಡಿ ಕಾಯಿ ಹೊಡೆದು ನೈವೇದ್ಯವನ್ನು ಮಾಡಿ ನಮಸ್ಕರಿಸಿ ಆ ಮಣ್ಣಿನ ಮೂರ್ತಿಯನ್ನು ಮನೆಗೆ ತಂದು ದೇವರ ಸಾನಿದ್ಯದಲ್ಲಿರಿಸಿ ಮತ್ತೊಮ್ಮೆ ಸಂಕಲ್ಪಪೂರಕವಾಗಿ ಪೂಜಿಸಿ ಊಟಮಾಡಬೇಕು. ಈ ಮೂರ್ತಿಯನ್ನು ಮನೆಯಲ್ಲಿ 5ದಿನಗಳವರೆಗೆ ಪೂಜಿಸಿ 5ನೇ ದಿನ ಒಂದು ಬೆಳ್ಳಿಯ ನಾಗಮೂರ್ತಿಯನ್ನು ಮಾಡಿಸಿ ಎರಡನ್ನು ಪೂಜೆಮಾಡಿ ಮಣ್ಣಿನಮೂರ್ತಿಯನ್ನು ಈಶ್ವರದೇವಾಲಯದಲ್ಲಿಟ್ಟು ಬರಬೇಕು.ಬೆಳ್ಳಿಯಮೂರ್ತಿಯನ್ನು ಸೋಮವಾರ ಮತ್ತು ಶುಕ್ರವಾರ ಪೂಜಿಸುತ್ತಾಹೋಗಬೇಕ