Skip to main content

ಮುಖದಿಂದ ಲಗ್ನ ಪತ್ತೆ

'ಲಗ್ನ ದೇಹೋ' ಎಂಬಂತೆ ಲಗ್ನದ ಅನುಸಾರವಾಗಿ ವ್ಯಕ್ತಿಯ ಶರೀರ ರೂಪುಗೊಂಡಿರುತ್ತದೆ. ಮುಖಾಕೃತಿಯ ಮೇಲೂ ಲಗ್ನದ ಪರಿಣಾಮ ಇದ್ದೇ ಇರುವುದರಿಂದ ಮುಖವನ್ನು ನೋಡಿ ಲಗ್ನ ತಿಳಿಯಬಹುದಾಗಿದೆ. ಈಗ ಹನ್ನೆರಡು ಲಗ್ನಗಳ ಮುಖ ಹೇಗಿರುವುದೆಂದು ತಿಳಿದುಕೊಳ್ಳೋಣ. ಮೇಷ ಲಗ್ನದ ಮುಖ : ಮೇಷ ಲಗ್ನ ಜಾತಕರ ಮುಖದಲ್ಲಿ ಎರಡೂ ಕಣ್ಣುಗಳು ವರ್ತುಲಾಕಾರವಾಗಿರುತ್ತದೆ. ಕಣ್ಣು ಕೆಂಪಾಗಿರುತ್ತದೆ ತಲೆಯ ಮುಂಭಾಗ ಹಣೆಯ ಕಡೆ ಚಿಕ್ಕದಾಗಿ ಗುಂಡಗೆ (ಉಬ್ಬಿ) ಇರುತ್ತದೆ. ಮುಂದುಗಡೆಯಿಂದ ನೋಡಿದಾಗ ಉದ್ದ ಮುಖದಂತೆಯೂ, ಪಾರ್ಶ್ವದಿಂದ ನೋಡಿದಾಗ ಕೋಲು ಮುಖದಂತೆಯೂ ಕಾಣುತ್ತದೆ. ಇವರ ತಲೆ ಅಥವಾ ಮುಖದಲ್ಲಿ ಗಾಯ ಇದ್ದೇ ಇರುತ್ತದೆ. ಮುಖದಲ್ಲಿ ಹಳ್ಳವಾದ ಗಲ್ಲ, ಕಣ್ಣುಗಳ ಕೆಳಗಡೆ ಉಬ್ಬಿದಂತೆ, ದಟ್ಟವಾದ ಹುಬ್ಬು, ಸಂಕೀರ್ಣವಾದ ಹಣೆ, ತಲೆಯ ಕೂದಲು ಹಣೆಯ ಎರಡೂ ಪಾರ್ಶ್ವದಲ್ಲಿ ಹರಡಿದಂತಿದ್ದರೆ, ಜಾತಕರು ಮೇಷ ಲಗ್ನದವರಾಗಿರುತ್ತಾರೆ. ಹಲ್ಲುಗಳು ಚಿಕ್ಕದಾಗಿದ್ದು, ಒಂದಕ್ಕೊಂದು ಅಂಟಿಕೊಂಡಿದ್ದರೆ, ಸಾಲುಸಾಲಾಗಿದ್ದರೆ, ನುಣುಪಾಗಿದ್ದರೆ ಮೇಷ ಲಗ್ನವೆಂದು ಹೇಳಬಹುದು. ವೃಷಭ : ವ್ಯಕ್ತಿಯ ಮುಖವು ತುಂಬಿಕೊಂಡಂತೆ, ಸುಂದರವಾಗಿರುತ್ತದೆ. ಅಗಲವಾದ ಮುಖ, ಎತ್ತರವಾದ ಹಣೆ, ಕಪ್ಪು ಹುಬ್ಬು ಬಾಣಾಕಾರವಾಗಿರುತ್ತದೆ. ಮುಖವು ಆಕರ್ಷಕವಾಗಿರುತ್ತದೆ. ಸದೃಢ ದಂತಪಂಕ್ತಿ, ಮುಖ, ಬೆನ್ನು ಅಥವಾ ಎದೆಯಲ್ಲಿ ಗುರುತಿರುತ್ತದೆ. ಇಲ್ಲವೇ ಮಚ್ಚೆ ಇರುತ್ತದೆ, ಇಲ್ಲವೇ ಗಾಯವಿರುತ್ತದೆ. ಭುಜ ಹಾಗೂ ಕತ್ತನ್ನು ಮುಂದೆ ಬಾಗಿಸಿದರೆ ಅಥವಾ ಬಾಗಿದಂತೆ ಕಂಡರೆ ಅವರು ವೃಷಭ ಲಗ್ನದವರೆಂದು ಹೇಳಬಹುದು. ವ್ಯಕ್ತಿಯ ವೇಷ ಭೂಷಣ ಆಕರ್ಷಕವಾಗಿದ್ದರೆ, ಬೆಲೆಬಾಳುವ ವಸ್ತ್ರವನ್ನು ಧರಿಸಿದ್ದರೆ, ಕೋಮಲವಾಗಿ ಮಾತಾಡುವನಾಗಿದ್ದರೆ, ನಾಚಿಕೆಯ ವರ್ತನೆ ಇದ್ದರೆ, ಕೇಶ ವಿನ್ಯಾಸ ಸುಂದರವಾಗಿದ್ದರೆ, ಮುಖ ಹೊಳೆಯುವಂತಿದ್ದರೆ ವೃಷಭ ಲಗ್ನವೆಂದು ತಿಳಿಯಬೇಕು. ಮಿಥುನ: ಇವರ ಮುಖದಲ್ಲಿ ಯಾವಾಗಲು ಸ್ಮಿತವದನ ಹಾಗೂ ಹಾಸ್ಯದ ಛಾಯೆ ಇರುತ್ತದೆ. ಆದರೂ ಇವರದು ಗಂಭೀರ ಮಾತುಕತೆ. ಇವರು ಎತ್ತರ ಕಾಯದವರು, ಗುಂಡಾದ ಅವಯವಗಳನ್ನು ಹೊಂದಿದವರೂ ಆಗಿರುತ್ತಾರೆ. ಅಗಲವಾದ ಶರೀರವನ್ನು ಹೊಂದಿರುತ್ತಾರೆ. ಕಟಕ: ಇವರ ಮುಖ ತೇಜಸ್ಸಿನಿಂದ ಕೂಡಿರುತ್ತದೆ. ಮುಖವು ಬಹಳ ಆಕರ್ಷಕವಾಗಿರುತ್ತದೆ. ಕಣ್ಣಿನಲ್ಲಿ ಹೊಳಪಿರುತ್ತದೆ. ದಂತಪಂಕ್ತಿಗಳೂ ಸುಂದರವಾಗಿರುತ್ತವೆ. ಅಧಿಕವಾಗಿ ನೀರು ಕುಡಿಯಲು ಬಯಸುತ್ತಾರೆ. ಇವರ ಕತ್ತು ದಪ್ಪವಾಗಿರುತ್ತದೆ. ಗದ್ದದ ಕೆಳಗೆ ಮಾಂಸ ತುಂಬಿಕೊಂಡು ಜೋಲಾಡುತ್ತಿರುತ್ತದೆ. ಇವರು ದಪ್ಪಗಿರುತ್ತಾರೆ. ಇವರು ಮುಂದುಗಡೆ ಬಗ್ಗಿದಂತೆ ಕಾಣುತ್ತಾರೆ. ಇವರ ಕೈಯಲ್ಲಿ ಮೀನು ಅಥವಾ ಶಂಖದ ಚಿಹ್ನೆ ಇದ್ದೇಇರುತ್ತದೆ. ಸಿಂಹ: ಇವರ ಮುಖ ಅದರ ಆಕಾರಕ್ಕಿಂತ ಹೆಚ್ಚು ಉದ್ದವಾಗಿದ್ದರೆ ಹಾಗೂ ಅಗಲವಾಗಿದ್ದರೆ, ಉದ್ದವಾದ ಹುಬ್ಬುಗಳಿದ್ದರೆ, ದಟ್ಟವಾದ ಕೇಶರಾಶಿ, ಉದ್ದವಾದ ಕೂದಲನ್ನು ತಲೆಯ ಹಿಂಬದಿಯಲ್ಲಿ ಇಳಿಬಿಟ್ಟಿದ್ದರೆ, ಸಿಂಹಲಗ್ನದವರೆನ್ನಬಹುದು. ಮುಖದ ಮೇಲ್ಭಾಗ ಅಗಲವಾಗಿದ್ದು ಕೆಳಗೆ ಬರಬರುತ್ತಾ ಸಣ್ಣದಾಗಿದ್ದರೆ, ದಂತಪಂಕ್ತಿಗಳು ನುಣುಪಾಗಿದ್ದರೆ, ಕಣ್ಣುಗಳಲ್ಲಿ ಗಂಭೀರತೆ ಇದ್ದರೆ, ನೋಡಿದರೆ ಕಠೋರತೆ ಹಾಗೂ ದೃಢ ನಿಶ್ಚಯದಂತೆ ಮುಖವು ಇದ್ದರೆ ಸಿಂಹಲಗ್ನದವರೆಂದು ತಿಳಿಯಬಹುದು. ಕನ್ಯಾ: ಕನ್ಯಾಲಗ್ನದವರ ಮುಖವು ಅಗಲ ಹಾಗೂ ಉದ್ದ ಸಮಾನವಾಗಿರುತ್ತದೆ. ಇವರ ಮುಖದಲ್ಲಿ ಚಂಚಲತೆ ಇರುತ್ತದೆ. ಇವರದು ಮಧ್ಯಮಗಾತ್ರದ ದೇಹ. ಗುರುವಿನ ದೃಷ್ಟಿ ಇದ್ದರೆ ನಲವತ್ತು ವರ್ಷದ ನಂತರ ಹೊಟ್ಟೆ ಬರುತ್ತದೆ. ಇವರಿಗೆ ಕನ್ಯಾ ಸಂತತಿ ಅಧಿಕವಾಗಿರುತ್ತದೆ. ತುಲಾ: ಇವರು ಎತ್ತರ ಕಾಯದವರಾಗಿರುತ್ತಾರೆ. ಇವರದು ಉದ್ದ ಮುಖ. ಇವರು ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಇವರದು ಅಂತಹ ಬಿಳುಪಲ್ಲದ ಸಾಮಾನ್ಯ ವರ್ಣವಾಗಿರುತ್ತದೆ. ಆಕರ್ಷಕ ಕಣ್ಣುಗಳು, ಬಿಲ್ಲಿನಂತಹ ಹುಬ್ಬು, ದಟ್ಟವಾದ ಕೇಶರಾಶಿ, ಸುಂದರ ದಂತಪಕ್ತಿ, ಕಡಿಮೆ ಮಾತನಾಡುವವರು, ಮಾತನಾಡಿದರೆ ತರ್ಕಬದ್ಧವಾಗಿ, ಸಾರಗರ್ಭಿತವಾಗಿ, ಭಾವಪೂರ್ಣವಾಗಿರುತ್ತದೆ ವೃಶ್ಚಿಕ: ಇವರದು ಕುಳ್ಳ ಕತ್ತು, ಸಾಧಾರಣ ಎತ್ತರ. ಇವರು ಬಲಹೀನರಾಗಲು ಸಾಧ್ಯವೇ ಇಲ್ಲ. ಸಾಧಾರಣ ಮೈಕಟ್ಟು ಬಲಶಾಲಿಗಳಾಗಿರುತ್ತಾರೆ. ಇವರ ಮೂಗು ಮುಖದಲ್ಲಿ ಎದ್ದು ಕಾಣುತ್ತಿರುತ್ತದೆ. ಸಾಧಾರಣ ಹಣೆ, ಅರ್ಧ ವೃತ್ತಾಕಾರದ ಹುಬ್ಬುಗಳು, ಹಣೆ ಹಾಗೂ ಕಪೋಲದ ಮೂಳೆಗಳು ತುಂಬಿಕೊಂಡಿರುತ್ತವೆ. ಒಟ್ಟಿನಲ್ಲಿ ಪ್ರಶಸ್ತ ಮುಖ ಇವರದಾಗಿರುತ್ತದೆ ಧನು : ಇವರ ಹಣೆ ಅಗಲವಾಗಿರುತ್ತದೆ ಮತ್ತು ನೀಳವಾಗಿರುತ್ತದೆ. ದಷ್ಟಪುಷ್ಟವಾದ ಶರೀರ ಇವರದು. ಭವ್ಯವಾದ ಮುಖ, ಅಗಲವಾದ ದಂತಪಂಕ್ತಿ, ದೊಡ್ಡತಲೆ, ಸ್ಪಷ್ಟ ಮಾತು ಇವರದಾಗಿರುತ್ತದೆ. ಮಕರ : ಚೌಕಾಕಾರದ ಮುಖ, ತುಂಬಿದ ಮುಖ, ಅಗಲವಾದ ಹಣೆ, ಅಗಲವಾದ ತಲೆ, ಬಾಯಿ ಹಸುವಿನ ರೀತಿ ಅಥವಾ ಕುರಿಯ ರೀತಿ ಇರುತ್ತದೆ. ಕಣ್ಣುಗಳು ಆಳವಾಗಿರುತ್ತದೆ. ಕಾಂತಿಹೀನ ಹಾಗೂ ಆಕರ್ಷಕವಾಗಿರುವುದಿಲ್ಲ. ದಟ್ಟವಾದ ಕೇಶರಾಶಿ, ದಟ್ಟವಾದ ಹುಬ್ಬು, ಅಗಲವಾದ ಭುಜ, ದೃಢವಾದ ದಂತಪಕ್ತಿ, ಅಗಲವಾದ ಮುಖ, ಕಠಿಣ ಪರಿಶ್ರಮಿಯಾಗಿರುತ್ತಾನೆ. ಕುಂಭ: ಇವರ ತಲೆ ಮುಖಕ್ಕಿಂತ ದೊಡ್ಡದಾಗಿರುತ್ತದೆ. ಮಾಂಸದಿಂದ ತುಂಬಿಕೊಂಡಂತಿರುತ್ತದೆ. ಸೊಂಟವು ಸಣ್ಣದಾಗಿದ್ದು, ಶರೀರವು ದಪ್ಪವಾಗಿ ತೂಕವಾಗಿರುತ್ತದೆ. ಕಣ್ಣುಗಳು ಆಕರ್ಷಕವಾಗಿರುವುದಿಲ್ಲ. ಕಣ್ಣುಗಳು ಗುಂಡಗಿರುತ್ತವೆ ಕಣ್ಣುಗಳು ಒಳಗೆ ಹೋಗಿರುವುದರಿಂದ ಕಣ್ಣಿನ ಎವೆ ಎದ್ದಂತೆ ಕಾಣುತ್ತದೆ. ಮೀನ: ಇವರದು ಕುಳ್ಳ ಶರೀರ. ಸುಂದರರೂ, ಚೆನ್ನಾಗಿ ಮಾತನಾಡುವವರೂ ಆಗಿರುತ್ತಾರೆ. - ಡಾ.ಅನಸೂಯ ಎಸ್.ರಾಜೀವ್

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ