Skip to main content

ಗ್ಯಾಸ್' ಅಬ್ಬರ: ಇಲ್ಲಿದೆ ಪರಿಹಾರ

ಗ್ಯಾಸ್' ಅಬ್ಬರ: ಇಲ್ಲಿದೆ ಪರಿಹಾರ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಧಿಕ ವಾಯುವಿನ (ಗ್ಯಾಸ್) ಸಂಚಯ ಆಗಲು (ಅಂದರೆ ಅನ್ನನಾಳ, ಜಠರ, ಸಣ್ಣ ಕರುಳು, ದೊಡ್ಡ ಕರುಳು) ಎರಡು ಪ್ರಮುಖ ಕಾರಣಗಳಿವೆ. ಅವುಗಳೆಂದರೆ: * ಹೆಚ್ಚು ಗಾಳಿ ನುಂಗುವುದು ಚ್ಯೂಯಿಂಗ್ ಗಮ್, ತಂಬಾಕು ಉತ್ಪನ್ನಗಳನ್ನು ಜಗಿಯುವುದು, ಐಸ್‌ಕ್ಯಾಂಡಿ ಚೀಪುವುದು, ಕಾರ್ಬನ್ ಇರುವ ಪೇಯಗಳನ್ನು (ಕೋಲಾ) ಕುಡಿಯುವುದು, ಸಡಿಲವಾದ ಕೃತಕ ಹಲ್ಲುಗಳು ಮತ್ತು ಆತಂಕ ಹೆಚ್ಚಾಗಿರುವ ವ್ಯಕ್ತಿಗಳು ಬಾಯಿ ತೆರೆದುಕೊಂಡು ಏದುಸಿರು ಬಿಡುವುದು ಇತ್ಯಾದಿ ಚಟುವಟಿಕೆಗಳಿಂದ ವ್ಯಕ್ತಿ ಹೆಚ್ಚು ಹೆಚ್ಚು ಗಾಳಿಯನ್ನು ನುಂಗುತ್ತಾನೆ. ಹೆಚ್ಚಿನ ಜನ ಈ ಅಧಿಕ ವಾಯುವನ್ನು ತೇಗುವುದರ ಮೂಲಕ ಹೊರಹಾಕುತ್ತಾರೆ. ಇನ್ನುಳಿದ ವಾಯುವು ಕೆಳಕ್ಕೆ ಚಲಿಸಿ ಸಣ್ಣ ಕರುಳನ್ನು ಸೇರುತ್ತದೆ. ಅಲ್ಲಿ ಅಲ್ಪಸ್ವಲ್ಪ ಪ್ರಮಾಣ ಹೀರಿಕೆಯಾಗುತ್ತದೆ. ಇನ್ನುಳಿದ ವಾಯು ಹಾಗೇ ಮುಂದುವರಿದು ದೊಡ್ಡ ಕರುಳನ್ನು ಸೇರಿ, ಗುದ ದ್ವಾರದ ಮೂಲಕ ಹೊರಹೋಗುತ್ತದೆ. ಈ ವಾಯುವನ್ನು ಪರೀಕ್ಷೆಗೆ ಒಳಪಡಿಸಿದರೆ ಇದು ನುಂಗಿದ್ದರಿಂದ ಬಂದಿದ್ದೋ (ಮುಖ್ಯವಾಗಿ ನೈಟ್ರೋಜನ್, ಆಕ್ಸಿಜನ್, ಕಾರ್ಬನ್ ಡೈಆಕ್ಸೈಡ್) ಅಥವಾ ಜೀರ್ಣಾಂಗದಲ್ಲೇ ಉತ್ಪಾದನೆಯಾದದ್ದೋ (ಮುಖ್ಯವಾಗಿ ಕಾರ್ಬನ್ ಮಾನಾಕ್ಸೈಡ್ ಮತ್ತು ಮೀಥೇನ್) ಎಂಬುದು ತಿಳಿಯುತ್ತದೆ. *ಜೀರ್ಣವಾಗದೇ ಉಳಿದಿರುವ ಆಹಾರದ ವಿಘಟನೆ ಸಣ್ಣ ಕರುಳಿನಲ್ಲಿ ಕೆಲವು ರೀತಿಯ ಕಿಣ್ವಗಳ ಕೊರತೆಯಿಂದ ಕೆಲವು ರೀತಿಯ ಪಿಷ್ಟ ಪದಾರ್ಥಗಳು ಜೀರ್ಣವಾಗುವುದಿಲ್ಲ. ಇದರಿಂದ ಸಣ್ಣ ಕರುಳಿಗೆ ಈ ಆಹಾರ ಪದಾರ್ಥಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಆಹಾರ ಮುಂದೆ ಚಲಿಸಿ, ದೊಡ್ಡ ಕರುಳನ್ನು ಸೇರುತ್ತದೆ. ಅಲ್ಲಿರುವ ಬ್ಯಾಕ್ಟೀರಿಯಾಗಳು ಈ ಆಹಾರವನ್ನು ವಿಘಟನೆಗೊಳಿಸಿ, ಹೈಡ್ರೋಜನ್, ಕಾರ್ಬನ್ ಡೈಆಕ್ಸೈಡ್‌ನ್ನು ಉತ್ಪಾದನೆ ಮಾಡುತ್ತವೆ. ಶೇಕಡಾ 3ರಷ್ಟು ಜನರಲ್ಲಿ ಇವು ಮೀಥೇನ್ ಅನ್ನು ಉತ್ಪಾದಿಸುತ್ತವೆ. ಈ ಅನಿಲಗಳು ಗುದ ದ್ವಾರದ ಮೂಲಕ ಹೊರಹೋಗುತ್ತವೆ.ಯಾವುದೇ ಆಹಾರ ಎಲ್ಲರಲ್ಲೂ ವಾಯುವಿನ ತೊಂದರೆಯನ್ನುಂಟು ಮಾಡುತ್ತದೆ ಎಂದು ಹೇಳಲಾಗದು. ಪಿಷ್ಟ ಪದಾರ್ಥಗಳು ಸಾಮಾನ್ಯವಾಗಿ ಹೆಚ್ಚು `ಗ್ಯಾಸ್`ನ್ನು ಉಂಟು ಮಾಡುತ್ತವೆ. ಕೊಬ್ಬು, ಪ್ರೊಟೀನ್ ಪದಾರ್ಥಗಳು ಕಡಿಮೆ ಪ್ರಮಾಣದಲ್ಲಿ `ಗ್ಯಾಸ್` ಸೃಷ್ಟಿಸುತ್ತವೆ. ಗ್ಯಾಸ್‌ನ ಲಕ್ಷಣಗಳು ಈ ತೊಂದರೆಯಿಂದ ಕಂಡುಬರುವ ಲಕ್ಷಣಗಳೆಂದರೆ ಗುದ ದ್ವಾರದಿಂದ ಹೆಚ್ಚು ಹೆಚ್ಚು ಅಪಾನುವಾತ ಹೊರಹೋಗುವುದು. ಹೊಟ್ಟೆಯುಬ್ಬರ ಅಥವಾ ಹೊಟ್ಟೆ ನೋವು ಮತ್ತು ತೇಗು. ಇವುಗಳಲ್ಲಿ ವ್ಯಕ್ತಿಗೆ ಅತ್ಯಂತ ಮುಜುಗರ ಉಂಟು ಮಾಡುವ ಸಂಗತಿಯೆಂದರೆ ಹೂಸಿನ ಶಬ್ದ ಮತ್ತು ಅದರ ಕೆಟ್ಟ ವಾಸನೆ. ಹೊಟ್ಟೆಯುಬ್ಬರ ಹೊಟ್ಟೆಯಲ್ಲಿ `ಗ್ಯಾಸ್` ತುಂಬಿದ್ದರೆ ಮಾತ್ರ ಹೊಟ್ಟೆಯುಬ್ಬರ ಕಂಡುಬರುವುದೆಂದು ಅನೇಕರು ತಿಳಿದಿರುತ್ತಾರೆ. ಹಾಗೆಯೇ ಹೊಟ್ಟೆಯುಬ್ಬರ ಇದೆಯೆಂದು ವೈದ್ಯರನ್ನು ಸಂಪರ್ಕಿಸುವ ಅನೇಕರ ಹೊಟ್ಟೆಯಲ್ಲಿ `ಗ್ಯಾಸ್`ನ ಪ್ರಮಾಣ ಸರಿಯಾಗಿಯೇ ಇರುತ್ತದೆ. ಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳನ್ನು ಸೇವಿಸಿದಾಗ ಜಠರದಿಂದ ಅವು ಹೊರಹೋಗುವ ಕಾಲದಲ್ಲಿ ಆಗುವ ವಿಳಂಬದಿಂದಲೇ ಹೊಟ್ಟೆಯುಬ್ಬರ ಕಂಡುಬರುತ್ತದೆ ವಿನಃ `ಗ್ಯಾಸ್`ನಿಂದಲ್ಲ. ಇದಲ್ಲದೇ ಕರುಳಿನ ಕೆರಳಿಕೆ, ಕ್ರಾನ್ಸ್ ರೋಗ, ಕರುಳಿನ ಕ್ಯಾನ್ಸರ್ ಇತ್ಯಾದಿಗಳಲ್ಲೂ ಹೊಟ್ಟೆಯುಬ್ಬರ ಕಂಡುಬರುತ್ತದೆ. ಹೊಟ್ಟೆಯ ಆಪರೇಷನ್ ಮಾಡಿಸಿಕೊಂಡ ಅಥವಾ ಹರ್ನಿಯಾ ಇರುವ ರೋಗಿಗಳಲ್ಲೂ ಹೊಟ್ಟೆಯುಬ್ಬರದ ಅನುಭವ ಆಗುತ್ತದೆ. ಏಕೆಂದರೆ `ಗ್ಯಾಸ್`ನ ಚಲನೆಗೆ ಅವರು ಅತೀ ಸಂವೇದನಾಶೀಲರಾಗಿರುತ್ತಾರೆ. ಹೊಟ್ಟೆನೋವು ಕೆಲವರ ಕರುಳಿನಲ್ಲಿ `ಗ್ಯಾಸ್` ತುಂಬಿಕೊಂಡು ನೋವು ಕಂಡುಬರುತ್ತದೆ. ಕರುಳಿನ ಎಡಭಾಗದಲ್ಲಿ `ಗ್ಯಾಸ್` ತುಂಬಿಕೊಂಡು ನೋವುಂಟಾದರೆ ಕೆಲವು ರೋಗಿಗಳು ಹೃದ್ರೋಗವೆಂದು ತಿಳಿದು ಕಳವಳಗೊಳ್ಳುತ್ತಾರೆ. ಕರುಳಿನ ಬಲಭಾಗದಲ್ಲಿ `ಗ್ಯಾಸ್` ತುಂಬಿಕೊಂಡು ನೋವುಂಟಾದರೆಅಪೆಂಡಿಕ್ಸ್‌ನ ಉರಿಯೂತ ಅಥವಾ ಪಿತ್ತಕೋಶದ ಹರಳಿನ ತೊಂದರೆ ಎಂದು ಆತಂಕಗೊಳ್ಳುತ್ತಾರೆ. ಸಾಮಾನ್ಯ ದೂರುಗಳು ಕೆಲವು ಅಹಿತಕರ ಮತ್ತು ಮುಜುಗರ ಉಂಟುಮಾಡುವ ಸಮಸ್ಯೆಗಳು ಈ ರೀತಿ ಇರುತ್ತವೆ. ದೊಡ್ಡ ಶಬ್ದದ ಹೂಸು: ಗುದ ದ್ವಾರದ ಸ್ನಾಯುಗಳು ಸಂಕುಚಿತಗೊಂಡು ಬಲವಾಗಿ ವಾಯುವನ್ನು ಹೊರದೂಡುವುದರಿಂದ ಜೋರಾದ ಶಬ್ದ ಬರುತ್ತದೆ. ಸಲಹೆ: ವಾಯುವನ್ನು ಹೊರಹಾಕಬೇಕಾದರೆ ಬಲಪ್ರಯೋಗ ಮಾಡುವುದು ಬೇಡ. ಕಡಿಮೆ `ಗ್ಯಾಸ್` ಉತ್ಪಾದಿಸುವ ಆಹಾರಗಳನ್ನೇ ಸೇವಿಸಿ. ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಕೆಟ್ಟ ವಾಸನೆಯ ಹೂಸು: ಸೇವಿಸಿದ ಕೆಲವು ಆಹಾರಗಳು ಬ್ಯಾಕ್ಟೀರಿಯಾಗಳಿಂದ ಉದ್ರೇಕ ಹೊಂದಿ ಕೆಟ್ಟ ವಾಸನೆಯ ಗ್ಯಾಸ್ ಉತ್ಪತ್ತಿಯಾಗುತ್ತದೆ. ಸಲಹೆ: ಬೆಳ್ಳುಳ್ಳಿ, ಈರುಳ್ಳಿ, ಮಸಾಲೆ ಪದಾರ್ಥಗಳು, ಬಿಯರ್ ಇತ್ಯಾದಿಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿರಿ. ಅತ್ಯಧಿಕ ಹೂಸು: ಗಾಳಿಯನ್ನು ನುಂಗುವುದು, ಅಧಿಕ ನಾರಿನಂಶವುಳ್ಳ ಆಹಾರಗಳ ಸೇವನೆ, ಲ್ಯಾಕ್ಟೋಸ್‌ನ ಕೊರತೆ, ಜೀರ್ಣಾಂಗದ ತೊಂದರೆ ಇತ್ಯಾದಿಗಳಿಂದ ಅತ್ಯಧಿಕ ಹೂಸು ಕಂಡುಬರುತ್ತದೆ. ಸಲಹೆ: ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಂಡು ಕರುಳಿನಲ್ಲಿ `ಗ್ಯಾಸ್`ನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ. ಕೆಲವು ಸಾಮಾನ್ಯ ಆಹಾರಗಳು ಮತ್ತು ಗ್ಯಾಸ್‌ಗೆ ಕಾರಣವಾಗುವ ಘಟಕಗಳು ಬೀನ್ಸ್: ಇದರಲ್ಲಿ ರ‌್ಯಾಫಿನೋಸ್ (Raffinose )ಎಂಬ ಸಂಕೀರ್ಣ ಸಕ್ಕರೆಯ ಅಂಶ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಕೋಸು, ಮೊಳಕೆ ಬರಿಸಿದ ಕಾಳುಗಳು, ಕಾಯಿಪಲ್ಲೆಗಳು, ಕಾಳುಗಳು- ಇವುಗಳಲ್ಲಿಯೂ ರ‌್ಯಾಫಿನೋಸ್ ಸ್ವಲ್ಪ ಪ್ರಮಾಣದಲ್ಲಿರುತ್ತದೆ. ಪಿಷ್ಟ ಪದಾರ್ಥಗಳು: ಹೆಚ್ಚಿನ ಪಿಷ್ಟ ಪದಾರ್ಥಗಳು (ಆಲೂಗಡ್ಡೆ, ಗೋಧಿ, ಮೆಕ್ಕೆಜೋಳ, ಶ್ಯಾವಿಗೆ ಇತ್ಯಾದಿಗಳು) ದೊಡ್ಡ ಕರುಳಿನಲ್ಲಿ ವಿಘಟನೆ ಹೊಂದುವುದರಿಂದ ಹೆಚ್ಚು `ಗ್ಯಾಸ್` ಉತ್ಪತ್ತಿಯಾಗುತ್ತದೆ. `ಗ್ಯಾಸ್` ಸೃಷ್ಟಿಸದ ಒಂದೇ ಒಂದು ಪಿಷ್ಟ ಪದಾರ್ಥವೆಂದರೆ ಅಕ್ಕಿ. ಸಾರ್ಬಿಟಾಲ್: ಸೇಬು, ಅಂಜೂರ ಇತ್ಯಾದಿ ಹಣ್ಣುಗಳಲ್ಲಿ ಕಂಡುಬರುವ ಈ ಸಕ್ಕರೆಯ ಅಂಶವನ್ನು ಸಕ್ಕರೆ ರಹಿತ ಗಮ್, ಕ್ಯಾಂಡಿ, ಮತ್ತಿತರ ಆಹಾರಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರಿಂದಲೂ `ಗ್ಯಾಸ್` ಉತ್ಪತ್ತಿಯಾಗುತ್ತದೆ. ನಾರಿನಂಶ: ಆಹಾರಗಳು ನೀರಿನಲ್ಲಿ ಕರಗುವ ನಾರಿನಂಶ ಮತ್ತು ಕರಗದೇ ಇರುವ ನಾರಿನಂಶಗಳನ್ನು ಹೊಂದಿರುತ್ತವೆ. ನೀರಿನಲ್ಲಿ ಕರಗುವ ನಾರಿನಂಶ ಕರುಳಿನಲ್ಲಿ ಕರಗಿ ಜೆಲ್‌ನಂತಾಗುತ್ತದೆ. ಇದು ಬೀನ್ಸ್, ಕಾಳು ಮತ್ತು ಅನೇಕ ಹಣ್ಣುಗಳಲ್ಲಿ ಕಂಡುಬರುತ್ತದೆ. ಈ ಕರಗುವ ನಾರಿನಂಶ ದೊಡ್ಡ ಕರುಳನ್ನು ತಲುಪುವವರೆಗೂ ವಿಘಟನೆ ಹೊಂದುವುದಿಲ್ಲ. ಅಲ್ಲಿ ವಿಭಜನೆ ಹೊಂದಿ `ಗ್ಯಾಸ್` ಉತ್ಪತ್ತಿಯಾಗುತ್ತದೆ. ಕರಗದಿರುವ ನಾರಿನಂಶ ಏನೇನೂ ಬದಲಾಗದೇ ಕರುಳನ್ನು ದಾಟಿ ಬರುತ್ತದೆ. ಇದು ಸ್ವಲ್ಪವೇ ಪ್ರಮಾಣದಲ್ಲಿ `ಗ್ಯಾಸ್`ನ್ನು ಉಂಟುಮಾಡುತ್ತದೆ. ಲ್ಯಾಕ್ಟೋಸ್‌ನ ಕೊರತೆ: ಲ್ಯಾಕ್ಟೋಸ್ ಹಾಲಿನಲ್ಲಿರುವ ಒಂದು ರೀತಿಯ ಸಕ್ಕರೆ. ಇದು ಎಲ್ಲ ರೀತಿಯ ಹೈನು ಉತ್ಪನ್ನಗಳಲ್ಲೂ, ಉದಾಹರಣೆಗೆ ಗಿಣ್ಣು, ಐಸ್‌ಕ್ರೀಮ್ ಇತ್ಯಾದಿಗಳಲ್ಲಿ ಕಂಡುಬರುತ್ತದೆ. ಲ್ಯಾಕ್ಟೋಸ್‌ನ ಕೊರತೆ ಕಂಡುಬರುವ ವ್ಯಕ್ತಿಗಳಲ್ಲಿ ಭೇದಿ, ಹೊಟ್ಟೆನೋವು, `ಗ್ಯಾಸ್` ಕಂಡುಬರುತ್ತದೆ. ಮಲವನ್ನು ಮೃದುಗೊಳಿಸುವ ಔಷಧಿಗಳು: ಲ್ಯಾಕ್ಟುಲೋಸ್, ಸಾರ್ಬಿಟಾಲ್ ಮತ್ತು ಕೆಲವು ನಾರಿನಂಶ ಇರುವ ಔಷಧಿಗಳು `ಗ್ಯಾಸ್` ಉಂಟುಮಾಡುತ್ತವೆ. ಮಲ ವಿಸರ್ಜನೆಯ ಕ್ರಮ ಬದಲಾಗುವುದೂ ಇದಕ್ಕೆ ಕಾರಣವಾಗಬಹುದು. ಕೆಲವು ವ್ಯಕ್ತಿಗಳಿಗೆ ಪ್ರತಿದಿನ ಗ್ಯಾಸ್ ಹೊರಹಾಕದಿದ್ದರೆ ಸಮಾಧಾನವೇ ಇರುವುದಿಲ್ಲ. ಅಂಥವರಿಗೆ ಜಿಠಿ Mist carminative ಗಳ ಸೇವನೆಯಿಂದ ಸಮಾಧಾನವಾಗುತ್ತದೆ. ಆಯಂಟಿಬಯೊಟಿಕ್ಸ್ ಔಷಧಿಗಳು `ಗ್ಯಾಸ್`ಗೆ ಸಾಮಾನ್ಯ ಕಾರಣಗಳಾಗಿವೆ. ಈ ಔಷಧಿಗಳು ಕರುಳಿನ ಬ್ಯಾಕ್ಟೀರಿಯಾ ಪದರನ್ನೇ ಬದಲಿಸುವುದರಿಂದ `ಗ್ಯಾಸ್` ಉತ್ಪತ್ತಿಯಾಗುತ್ತದೆ. ಆದ್ದರಿಂದ ಆಯಂಟಿಬಯೊಟಿಕ್ಸ್ ಸೇವಿಸುವ ರೋಗಿಗಳು ಅದರಿಂದಾಗುವ ದುಷ್ಪರಿಣಾಮಗಳನ್ನು ತಿಳಿದಿರಬೇಕು. ಇವುಗಳ ಸೇವನೆಯಿಂದ ವಿಪರೀತ `ಗ್ಯಾಸ್`ನ ತೊಂದರೆಯಾಗುತ್ತಿದ್ದರೆ, ವೈದ್ಯರು ಆಯಂಟಿಬಯೊಟಿಕ್ಸ್ ಮಾತ್ರೆಗಳನ್ನೇ ಬದಲಿಸುತ್ತಾರೆ. ಈಗ lactobacilli (ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿ ಮಾಡುವ ಬ್ಯಾಸಿಲಸ್‌ಗಳು) ಇರುವ ಔಷಧಿಗಳು ತುಂಬಾ ಚಾಲ್ತಿಯಲ್ಲಿವೆ. ಆದರೆ ಎಲ್ಲ ಆ್ಯಂಟಿಬಯೊಟಿಕ್ಸ್‌ಗಳನ್ನು ಸೇವಿಸಿದಾಗಲೂ lactobacilli ಮಾತ್ರೆಗಳನ್ನು ಸೇವಿಸಲೇಬೇಕೆಂಬ ನಿಯಮವಿಲ್ಲ. ನಾರಿಕೇಲ ಲವಣದ ಸೇವನೆಯಿಂದ ಉತ್ತಮ ಪರಿಣಾಮ ಕಂಡುಬರುತ್ತದೆ. ಕುಮಾರಿ ಆಸವ, ಹಿಂಗಾಸ್ಟಕ ಚೂರ್ಣ, ಭಾಸ್ಕರ ಲವಣ ಚೂರ್ಣ, ಕ್ರವ್ಯಾದ ರಸ ಸಹ ಉಪಯುಕ್ತ. ಗ್ಯಾಸ್' ಅಬ್ಬರಿಸುತ್ತಿದೆಯೇ? ಪ್ರತಿ ವ್ಯಕ್ತಿಯೂ ಗುದ ದ್ವಾರದಿಂದ ಪ್ರತಿ ದಿನ `ಗ್ಯಾಸ್` ಹೊರಹಾಕುತ್ತಾನೆ. ಪ್ರತಿಯೊಬ್ಬರ ಜಠರ ಮತ್ತು ಕರುಳಿನಲ್ಲಿ ಸ್ವಲ್ಪ ಮಟ್ಟಿನ `ಗ್ಯಾಸ್` ಸಂಚಯ ಯಾವತ್ತೂ ಇದ್ದೆೀ ಇರುತ್ತದೆ. ಸಾಮಾನ್ಯ ಮನುಷ್ಯ ದಿನಕ್ಕೆ ಸುಮಾರು 14 ಸಾರಿ `ಗ್ಯಾಸ್` ಹೊರಹಾಕುವುದು ಸಾಮಾನ್ಯ. ಇದಕ್ಕಿಂತ ಹೆಚ್ಚಾದರೆ ಮಾತ್ರ ತೊಂದರೆ.- ಅಪಾನವಾತ, ಹೂಸು, ವಾಯು ಪ್ರಕೋಪ (flatulence) ಎಂದೆಲ್ಲ ಕರೆಸಿಕೊಳ್ಳುತ್ತಾ ಉದರದಲ್ಲಿ ಸಂಚಯವಾಗುವ ವಾಯುವೇ ಈಗೀಗ ಆಡು ಮಾತಿನಲ್ಲಿ ಇಂಗ್ಲಿಷ್‌ನ `ಗ್ಯಾಸ್` ಎಂದು ಕರೆಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಕರುಳಿನಲ್ಲಿ 500 ರಿಂದ 2000 ಮಿಲಿಯಷ್ಟು `ಗ್ಯಾಸ್` ಉತ್ಪಾದನೆಯಾಗುತ್ತದೆ ಮತ್ತು ಇದು ಗುದ ದ್ವಾರದ ಮೂಲಕ ಹೊರಹೋಗುತ್ತದೆ. ಸಾಮಾನ್ಯವಾಗಿ ಐದು ರೀತಿಯ ವಾಸನೆ ರಹಿತ `ಗ್ಯಾಸ್`ಗಳು ಇರುತ್ತವೆ. ಅವುಗಳೆಂದರೆ ನೈಟ್ರೋಜನ್, ಹೈಡ್ರೋಜನ್, ಕಾರ್ಬನ್ ಡೈ ಆಕ್ಸೈಡ್, ಮೀಥೇನ್ ಮತ್ತು ಆಕ್ಸಿಜನ್. ಇದಲ್ಲದೇ ವಿಶಿಷ್ಟ ವಾಸನೆಯುಳ್ಳ ಸ್ಕೇಟೋಲ್, ಇಂಡೋಲ್ ಮತ್ತು ರಂಜಕಯುಕ್ತ ಗ್ಯಾಸ್‌ಗಳೂ ಉದರದಲ್ಲಿ ಉತ್ಪಾದನೆಯಾಗುತ್ತವೆ. ಉರಿಯುವ ಗುಣವಿರುವ ಗ್ಯಾಸ್‌ನಿಂದ ನೀವು ಬಳಲುತ್ತಿದ್ದರೆ ಇದಕ್ಕೆ ಕಾರಣ ಹೈಡ್ರೋಜನ್ ಮತ್ತು ಮೀಥೇನ್. ಉದರದಲ್ಲಿ ಈ `ಗ್ಯಾಸ್`ನ ಪ್ರಮಾಣ ನೇರವಾಗಿ ನಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳ ಮೇಲೆ, ಅವುಗಳಿಂದಾಗುವ ಹುದುಗುವಿಕೆ (fermentation) ಜೀರ್ಣ ಕ್ರಮ, ಹೀರುವ ಕ್ರಿಯೆ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ವಿವಿಧ ರೀತಿಯ ವಾಸನೆಗಳು `ಗ್ಯಾಸ್`ನ ಪ್ರಮಾಣ ಮತ್ತು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತವೆ. ಕರುಳಿನ ಕೆರಳಿಕೆಯಂತಹ (irritable bowel syndrome) ಕೆಲವು ರೋಗಗಳು ಸಹ ಈ `ಗ್ಯಾಸ್`ಗೆ ಕಾರಣವಾಗಬಹುದು. `ಗ್ಯಾಸ್` ಎಲ್ಲರಲ್ಲೂ ಇದ್ದೇ ಇರುತ್ತದೆ. ಕೆಲವರಲ್ಲಿ ಹೆಚ್ಚು. ಈ `ಗ್ಯಾಸ್` ಹೆಚ್ಚಾದರೆ ಮಾರಣಾಂತಿಕ ಅಲ್ಲದಿದ್ದರೂ, ಸಾಮಾಜಿಕವಾಗಿ ಮುಜುಗರವನ್ನು ಉಂಟು ಮಾಡಬಲ್ಲದು. ಈ ಕಾರಣದಿಂದಲೇ ಈಸಮಸ್ಯೆ ಹೆಚ್ಚಾಗಿರುವ ರೋಗಿಗಳು ವೈದ್ಯರನ್ನು ಸಂಪರ್ಕಿಸುತ್ತಾರೆ. `ಗ್ಯಾಸ್`ಗೂ ಕತೆ ಇದೆ `ಗ್ಯಾಸ್`ನ ಇತಿಹಾಸದಲ್ಲಿ ಅನೇಕ ರೋಚಕ ಕತೆಗಳೇ ದಾಖಲಾಗಿವೆ. ಆಧುನಿಕ ವೈದ್ಯಕೀಯ ಪಿತಾಮಹ ಹಿಪ್ಪೋಕ್ರೇಟಸ್‌ನು `ಅಪಾನವಾತವನ್ನು ಹೊರಬಿಡುವುದು ವ್ಯಕ್ತಿಯ ಆರೋಗ್ಯಕ್ಕೆ ಹಿತಕರ` ಎಂದು ಪ್ರತಿಪಾದಿಸಿದ್ದ. ರೋಮನ್ ಚಕ್ರವರ್ತಿ ಕ್ಲಾಡಿಯಸ್, ಎಲ್ಲ ರೋಮನ್ ಪ್ರಜೆಗಳೂ ಅಗತ್ಯ ಬಿದ್ದಾಗ ಹೂಸನ್ನು ಪಾಸ್ ಮಾಡಬಹುದೆಂದು ಫರ್ಮಾನು ಹೊರಡಿಸಿದ್ದ. ದುರದೃಷ್ಟವಶಾತ್, ಚಕ್ರವರ್ತಿ ಕಾನ್‌ಸ್ಟಾಂಟಿನ್ ಕ್ರಿ.ಪೂ. 315ರಲ್ಲಿ ಈ ರಾಜಾಜ್ಞೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದ. 18ನೇ ಶತಮಾನದ ಮಧ್ಯಭಾಗದಲ್ಲಿ ಫ್ರೆಂಚ್ ಅಣಕು ಕಲಾವಿದ ಜೋಸೆಫ್ ಫ್ಯೂಗೋಲ್‌ ನಿಂದಾಗಿ `ಗ್ಯಾಸ್` ಪ್ರಾಮುಖ್ಯ, ಜನಪ್ರಿಯತೆ ಪಡೆದುಕೊಂಡಿತು. ಕಲಾವಿದ ಫ್ಯೂಗೋಲ್ ತನಗೆ ಬೇಕಾದಾಗ, ಬೇರೆ ಬೇರೆ ಗತಿಗಳಲ್ಲಿ, ಬೇರೆ ಬೇರೆ ಶ್ರುತಿಗಳಲ್ಲಿ ನಿನಾದಗಳನ್ನು ಹುಟ್ಟಿಸಿ ಹೂಸನ್ನು ಬಿಡುತ್ತಿದ್ದ. ಈತನ ಜನಪ್ರಿಯತೆ ಎಷ್ಟಿತ್ತೆಂದರೆ ಈತನ ತರಹವೇ ಅನೇಕ ತದ್ರೂಪಿಗಳು ಹುಟ್ಟಿಕೊಂಡರು. ಆದರೆ ಅವರೆಲ್ಲ ಹೊಟ್ಟೆಯಲ್ಲಿ `ಗ್ಯಾಸ್`ನ ಟ್ಯೂಬ್‌ಗಳನ್ನು ಅಡಗಿಸಿ ಇಟ್ಟುಕೊಂಡಿದ್ದುದು ನಂತರ ಪತ್ತೆಯಾಯಿತು. ಇತ್ತೀಚೆಗೆ ಈ ಗ್ಯಾಸನ್ನು ಅಮರತ್ವಗೊಳಿಸಿದ ಕೀರ್ತಿ ಹಾಲಿವುಡ್ ನಟ ಮೆಲ್‌ಬ್ರೂಕ್‌ನಿಗೆ ಸಲ್ಲಬೇಕು. ಈತ Blazing saddles ಎಂಬ ಸಿನಿಮಾದಲ್ಲಿ ಕಾಳು ತಿಂದು ಹೂಸು ಬಿಡುವ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾನೆ.ಬರುವುದೇಕೆ? -ಆಹಾರದಲ್ಲಿ ನಾರಿನಂಶ ಕೊರತೆ -ಹೊಟ್ಟೆಯಲ್ಲಿ ಪರಾವಲಂಬಿ ಹುಳುಗಳು -ಕರುಳಿನಲ್ಲಿ ಊತ -ಕರುಳಿನಲ್ಲಿ ತಡೆ -ಥೈರಾಯಿಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು -ಮಾದಕ ವಸ್ತು ಸೇವನೆ ವೈದ್ಯರ ಭೇಟಿ ಯಾವಾಗ? ಗುದ ದ್ವಾರದಿಂದ ಅಧಿಕ `ಗ್ಯಾಸ್` ಹೊರಹೋಗುತ್ತಿದ್ದು ಹೊಟ್ಟೆನೋವು ಬರುತ್ತಿದ್ದರೆ, ಮಲ ವಿಸರ್ಜನೆಯ ಕ್ರಮದಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬಂದರೆ, ಭೇದಿ ಆಗುತ್ತಿದ್ದರೆ, ಮಲಬದ್ಧತೆ ಇದ್ದರೆ, ಮಲವು ರಕ್ತ ಮಿಶ್ರಿತವಾಗಿದ್ದರೆ, ಜ್ವರ, ವಾಂತಿ, ವಾಕರಿಕೆಯ ಲಕ್ಷಣಗಳು ಕಂಡುಬಂದರೆ ವಿಳಂಬ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು. -ಡಾ. ಬ್ರಹ್ಮಾನಂದ ನಾಯಕ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ