Skip to main content

ಮಹಿಳೆಯರ ಜನನಾಂಗ ಸಮಸ್ಯೆಗೆ ಸೂಕ್ತ ಸಲಹೆಗಳು

ನಿಮ್ಮ ಯೋನಿಯು ಯಾವುದೇ ಓನರ್ಸ್ ಮ್ಯಾನುಯಲ್ ಜೊತೆಗೆ ಬರುವುದಿಲ್ಲ. ಆದರೆ ಕೆಲವು ದಶಕಗಳ ನಂತರ ನಿಮ್ಮ ಋತು ಚಕ್ರದ ಜೊತೆಗೆ ಹೆಣಗಾಡಿ, ಪ್ರಸೂತಿ ತಙ್ಞರನ್ನು ಕಂಡ ಮೇಲೆ, ಮಿಲನದಲ್ಲಿ ತೊಡಗಿಸಿಕೊಂಡ ಮೇಲೆ ಮತ್ತು ಮಕ್ಕಳನ್ನು ಹೆತ್ತ ಮೇಲೆ, ನಿಮಗೆ ಗೊತ್ತಾಗುತ್ತೆ ಅದನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂದು. ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ನೀವೇ ತಿಳಿದುಕೊಳ್ಳುವಿರಿ: ಯಾವುದೇ ಡೌಚಿಂಗ್ ಬೇಡ, ಟ್ಯಾಂಪನ್‍ಗಳನ್ನು ತುಂಬಾ ಹೊತ್ತು ಬಿಡಬೇಡಿ ಮತ್ತು ನಿಯಮಿತವಾಗಿ ಪ್ಯಾಪ್ ಟೆಸ್ಟ್‌ಗಳನ್ನು ಮಾಡಿಸಿಕೊಳ್ಳಿ. ಆದರೆ ನೀವು ವಯಸ್ಸಾದಂತೆಲ್ಲ - ಅಂದರೆ ವಿಶೇಷವಾಗಿ ಋತುಮತಿಯಾದಾಗ ಮತ್ತು ಋತು ಚಕ್ರವು ನಡೆಯುವಾಗ ನಿಮ್ಮ ಯೋನಿಗೆ ಸಂಬಂಧಿಸಿದ ಹಲವಾರು ಅಡ್ಡಿ ಆತಂಕಗಳು ನಿಮ್ಮನ್ನು ಭಾದಿಸುತ್ತವೆ. ಆದರೆ ಅವುಗಳನ್ನು ಎದುರಿಸಲು ನೀವು ಸಿದ್ಧರಾಗಿರುವುದಿಲ್ಲ. ಇದರ ಜೊತೆಗೆ ನಿಮ್ಮ ಕೆಟ್ಟ ಹವ್ಯಾಸಗಳೆಲ್ಲವು ಸೇರಿ ನಿಮ್ಮ ಲೈಂಗಿಕ ಜೀವನದ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ, ಕ್ಯಾನ್ಸರ್‌ನ ಆತಂಕವನ್ನು ಸಹ ಉಂಟು ಮಾಡುತ್ತದೆ. ಇಲ್ಲಿ ನಾವು ನಿಮಗಾಗಿ ನಲ್ವತ್ತು ವಯಸ್ಸು ದಾಟಿದ ರೋಗಿಗಳು ತಮ್ಮ ಯೋನಿಯ ಆರೋಗ್ಯವನ್ನು ಹಾಳು ಮಾಡಿಕೊಂಡ ತಪ್ಪುಗಳ ಕುರಿತು ಬೆಳಕು ಚೆಲ್ಲುತ್ತಿದ್ದೇವೆ. ಇವುಗಳನ್ನು ಓದಿ ತಿಳಿದುಕೊಂಡು ನಿಮ್ಮ ಸ್ತ್ರೀತನವನ್ನು ತೋರಿಸುವ ಅಂಗವನ್ನು ಸಂರಕ್ಷಿಸಿಕೊಳ್ಳುವ ಕೆಲಸವನ್ನು ಮಾಡಿ. ಅತಿಯಾಗಿ ಕಾಡುವ ಋತು ಚಕ್ರ ಬಹುಶಃ ನಿಮ್ಮ ಸ್ನೇಹಿತರು ನಿಮಗೆ ಎಚ್ಚರಿಸಿರಬಹುದು. ನಿಮಗೆ ವಯಸ್ಸಾಂದತೆಲ್ಲ ನಿಮ್ಮ ಋತು ಚಕ್ರವು ಅತಿಯಾಗಿ ಹಾಗುತ್ತದೆಯೆಂದು. ಇದು ಯಾವಾಗಲು ನಿಜವಾಗುವುದಿಲ್ಲ.ಬಹುಶಃ ನಿಮ್ಮ ಋತುಸ್ರಾವವು ಹೆಚ್ಚಾಗಬಹುದು ಅಥವಾ ಅವುಗಳು ಆಗಾಗ ಸಂಭವಿಸಬಹುದು ( ಅಂದರೆ ಪ್ರತಿ ಎರಡು ವಾರಗಳಿಗೊಮ್ಮೆ), ಅಥವಾ ಋತು ಚಕ್ರದ ನಡುವೆ ಅಥವಾ ಸಂಭೋಗದ ನಂತರ ನಿಮ್ಮ ಯೋನಿಯಲ್ಲಿ ರಕ್ತ ಸ್ರಾವವಾಗಬಹುದು. ಆಗ ತಡ ಮಾಡದೆ ನಿಮ್ಮ ವೈಧ್ಯರನ್ನು ಸಂಪರ್ಕಿಸಿ. ಅಧಿಕ ರಕ್ತ ಸ್ರಾವವು ಫೈಬ್ರಾಯ್ಡ್‌ಗಳ ( ಸೌಮ್ಯ ಗರ್ಭಕೋಶದ ಗಡ್ಡೆಗಳ), ಅನಿಮಿಯಾ, ಪಾಲಿಸಿಸ್ಟಿಕ್ ಒವರಿಯನ್ ಸಿಂಡ್ರೋಮ್‍ನಂತಹ ಹಾರ್ಮೋನ್ ಸಮಸ್ಯೆ ಅಥವಾ ಅಪರೂಪವಾಗಿ ಗರ್ಭಕಂಠದ, ಗರ್ಭಾಶಯದ ಮತ್ತು ಅಂಡಾಶಯದ ಕ್ಯಾನ್ಸರ್‌ನ ಮುನ್ಸೂಚನೆಯಾಗಿರುತ್ತದೆ. *ಯಾವಾಗ ಯೋನಿಯಲ್ಲಿ ತುರಿಕೆ ಮತ್ತು ಸ್ರಾವವು ಕಂಡು ಬರುತ್ತದೆಯೋ, ಆಗ ಬಹುತೇಕ ಹೆಂಗಸರು ಅದು ಯೀಸ್ಟ್ ಇನ್‍ಫೆಕ್ಷನ್‍ನಿಂದ ಆಗುವ ತೊಂದರೆ ಎಂದು ಭಾವಿಸಿ, ಅದಕ್ಕೆ ಆಂಟಿ-ಫಂಗಲ್ ಕ್ರೀಮನ್ನು ಹಚ್ಚಿ ಅದರಿಂದ ಪಾರಾಗಲು ಹವಣಿಸುತ್ತಾರೆ. ಆದರೆ ನಿಜವಾಗಿ ಆ ಕಾರಣವಾಗಿ ಈ ಸಮಸ್ಯೆ ಕಂಡುಬರುವುದಿಲ್ಲ. ಪ್ರತಿ ಶತ 75ರಷ್ಟು ಮಹಿಳೆಯರಲ್ಲಿ ಯೀಸ್ಟ್ ಸಮಸ್ಯೆಯು ಜೀವನದಲ್ಲಿ ಒಮ್ಮೆಯಾದರು ಕಂಡು ಬರುತ್ತದೆ. ಇದು ಯೋನಿಯನ್ನು ಕಾಡುವ ಪ್ರಮುಖ ಮೂರು ಇನ್‍ಫೆಕ್ಷನ್‍ಗಳಲ್ಲಿ ಒಂದಾಗಿದೆ. ಬ್ಯಾಕೀರಿಯಲ್ ವ್ಯಜಿನೊಸಿಸ್ ( BV) ಎಂಬ ಇನ್‍ಫೆಕ್ಷನ್ ಯೋನಿಯಲ್ಲಿ ಅಧಿಕವಾಗಿ ಬೆಳೆಯುವ ಬ್ಯಾಕ್ಟೀರಿಯಾಗಳಿಂದ ಕಂಡು ಬರುತ್ತದೆ. ಟ್ರಿಕೊಮೊನಿಯಸಿಸ್ (ಟ್ರಿಕ್) ಎಂಬುದು ಲೈಂಗಿಕವಾಗಿ ಹರಡುವ ಇನ್‍ಫೆಕ್ಷನ್ ಆಗಿದೆ. ವ್ಯಜಿನೊಸಿಸ್ ಮತ್ತು ಟ್ರಿಕ್ ಎರಡೂ ಯೀಸ್ಟ್ ಇನ್‍ಫೆಕ್ಷನ್ ಮಾದರಿಯಲ್ಲಿಯೇ ಹಾನಿಯನ್ನು,ಸಮಸ್ಯೆಯನ್ನುಂಟು ಮಾಡುತ್ತವೆ. ಹಾಗಾಗಿ ಇಂತಹ ಸಮಸ್ಯೆ ಆದಾಗ ಅದು ಯೀಸ್ಟ್ ಇನ್‍ಫೆಕ್ಷನ್‍ನಿಂದಲೆ ಆಯಿತೆ ಎಂದು ಮೊದಲು ತಿಳಿದುಕೊಳ್ಳಬೇಕು. BV ಮೊದಲು ಪೆಲ್ವಿಕ್ ಇನ್‍ಫ್ಲೆಮ್ಮೇಟರಿ ಡಿಸೀಸ್‍ಗೆ ಕಾರಣವಾಗುತ್ತದೆ. BV ಮತ್ತು ಟ್ರಿಕ್ ಎರಡೂ ಸಹ ನಿಮ್ಮನ್ನು ಲೈಂಗಿಕವಾಗಿ ಹರಡುವ ರೋಗಗಳಿಗೆ ಗುರಿಯನ್ನಾಗಿಸುತ್ತವೆ. *ಟಾಲ್ಕಂ ಪೌಡರನ್ನು ಲೇಪಿಸುವುದು ನಿಮ್ಮ ಜನನಾಂಗದ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳುವ ಭರದಲ್ಲಿ ಟಾಲ್ಕಂ ಪೌಡರ್, ಬೇಬಿ ಪೌಡರ್ ಅಥವಾ ಇನ್ನಿತರ ಯಾವುದೇ ಉತ್ಪನ್ನಗಳನ್ನು ಬಳಸುವುದು ಅಪಾಯಕಾರಿಯಲ್ಲ. ಆದರೆ ಈ ಅಭ್ಯಾಸವು ಕಾಲ ಕ್ರಮೇಣ ಮುಂದೆ ಸಂಭವಿಸಬಹುದಾದ ಗರ್ಭಾಶಯದ ಕ್ಯಾನ್ಸರ್‌ನ ಸಾಧ್ಯತೆಯನ್ನು ಶೇ.30 ರಷ್ಟು ಹೆಚ್ಚಿಸುತ್ತದೆ ಎಂದು ಅಮೆರಿಕನ್ ಅಸೋಸಿಯೇಷನ್ ಫಾರ್ ಕ್ಯಾನ್ಸರ್ ರಿಸರ್ಚ್ ಸಂಸ್ಥೆಯವರು 2011ರಲ್ಲಿ ನಡೆಸಿದ ವಾರ್ಷಿಕ ಸಮಾವೇಶದಲ್ಲಿ ಪ್ರಸ್ತುತ ಪಡಿಸಲಾದ ಹೊಸ ಅಧ್ಯಯನದಲ್ಲಿ ದೃಢಪಟ್ಟಿದೆ. ಪ್ರತಿನಿತ್ಯ ಇವುಗಳನ್ನು ಬಳಸುವುದರಿಂದಾಗಿ ನಿಮಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಎರಡರಿಂದ ಒಮ್ಮೊಮ್ಮೆ ಮೂರು ಪಟ್ಟು ಸಹ ಅಧಿಕವಾಗುತ್ತದೆ. ಒಂದೊಮ್ಮೆ ನಿಮ್ಮ ಜನನಾಂಗದ ಬಳಿ ನಿಮಗೆ ಅಧಿಕ ಬೆವರು ಬರುತ್ತಿದ್ದರೆ, ಹತ್ತಿಯ ಒಳ ಉಡುಪನ್ನು ಧರಿಸಿ. ಆಗಾಗ ಅದನ್ನು ಬದಲಾಯಿಸುತ್ತ ಇರಿ. ಆದಷ್ಟು ಬಿಗಿಯಾದ ಪ್ಯಾಂಟ್‍ಗಳನ್ನು ಧರಿಸಬೇಡಿ. ಜೊತೆಗೆ ರಾತ್ರಿಯ ಹೊತ್ತು ಕಮಾಂಡೊ( ಜನನಾಂಗ ಭಾಗಕ್ಕೆ ಗಾಳಿಯಾಡುವಂತೆ ಮಾಡುವುದು) ಆಗುವುದು ಒಳಿತು. *ಕೆಗೆಲ್ ವ್ಯಾಯಾಮವನ್ನು ಮರೆತು ಬಿಡುವುದು ಬಹುಶಃ ನೀವು ಗರ್ಭಿಣಿಯಾದಾಗ ಬಿಗಿತ ಬರಲಿ ಎಂದು ಕೆಗೆಲ್ ವ್ಯಾಯಾಮವನ್ನು ಮಾಡಿರುತ್ತೀರಿ. ಆದರೆ ಮುಂದೆ ಇದನ್ನು ಮಾಡುವುದನ್ನು ಬಿಡುವುದರಿಂದ ಮೂತ್ರ ವಿಸರ್ಜನೆಯಲ್ಲಿ ಏರು ಪೇರಾಗಬಹುದು. 40 ತುಂಬಿದ ಬಹುತೇಕ ಮಹಿಳೆಯರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ ಮತ್ತು 50 ತುಂಬಿದ ಹೆಂಗಸರಲ್ಲಿ ಅರ್ಧ ಭಾಗದಷ್ಟು ಜನರಿಗೆ ಈ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಪೆಲ್ವಿಕ್ ಭಾಗದಲ್ಲಿನ ಸ್ನಾಯುಗಳು ನಿಶ್ಶಕ್ತಿಗೊಂಡಾಗ ಈ ಸಮಸ್ಯೆ ಕಂಡು ಬರುತ್ತದೆ. ಕೆಗೆಲ್ ವ್ಯಾಯಾಮವು ಈ ನಿಶ್ಶಕ್ತ ಸ್ನಾಯುಗಳನ್ನು ಗಟ್ಟಿ ಮುಟ್ಟುಗೊಳಿಸುತ್ತದೆ ಮತ್ತು ಸಮಸ್ಯೆಯಿಂದ ನಿಮ್ಮನ್ನು ಬಿಡುಗಡೆಗೊಳಿಸುತ್ತದೆ. *ಜನನ ನಿಯಂತ್ರಣಗಳನ್ನು ಬಳಸದಿರುವುದು ನೀವು ಒಂದು ಅಥವಾ ಎರಡು ಮಾಸಿಕ ಋತು ಚಕ್ರಗಳನ್ನು ತಪ್ಪಿಸಿಕೊಂಡಲ್ಲಿ ಮೊದಲು ಬರುವ ಆಲೋಚನೆ ಯಾವುದು? ನಾನು ಗರ್ಭಿಣಿಯಾಗಿದ್ದೇನೆ! ಅಥವಾ ಆಗುತ್ತಿದ್ದೇನೆ ಎಂದು ತಾನೇ ಆಲೋಚಿಸುತ್ತೀರಿ. ಏಕೆಂದರೆ ನೀವು ಮುಟ್ಟು ನಿಲ್ಲುವ ಕಾಲಕ್ಕೆ ಹತ್ತಿರವಾಗುತ್ತಿರುವಿರಿ ಎಂದು ಭಾವಿಸಬಹುದು. ಆದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಎಲ್ಲಿಯವರೆಗು ನಿಮ್ಮ ಋತು ಚಕ್ರವು ಸಂಭವಿಸುತ್ತ ಇರುತ್ತದೆಯೋ, ಅಂದರೆ ನಿಯಮಿತವಾಗಿ ಇಲ್ಲವೇ ಅನಿಯಮಿತವಾಗಿ ಯಾವಾಗ ಎಂದರೆ ಆವಾಗ, ಅಲ್ಲಿಯವರೆಗು ನಿಮ್ಮ ಗರ್ಭಿಣಿಯಾಗುವ ಕನಸು ನಿಜವಲ್ಲ. ಹಾಗೆಂದು ಅದು ಸುಳ್ಳಾಗುತ್ತದೆ ಎಂದು ಸಹ ಹೇಳಲಾಗುವುದಿಲ್ಲ. ಅದಕ್ಕೆ ಅವಕಾಶವಿರುತ್ತದೆ. ಅದಕ್ಕಾಗಿ ನಿಮಗೆ ಗರ್ಭಿಣಿಯಾಗುವ ಇಚ್ಛೆಯಿದ್ದಲ್ಲಿ ಮಾತ್ರ ಗರ್ಭಿಣಿಯಾಗುವ ಮನಸ್ಸು ಮಾಡಿ. ಇಲ್ಲವಾದಲ್ಲಿ ಜನನ ನಿಯಂತ್ರಣಗಳನ್ನು ಬಳಸಿ. ನಿಮ್ಮ ಕಡೆಯ ಮಾಸಿಕ ಋತು ಚಕ್ರದಿಂದ ಒಂದು ವರ್ಷದ ಅವಧಿಯವರೆಗು ನೀವು ಹೊರಗಾಗದಿದ್ದರು ಸಹ ನೀವು ಗರ್ಭಿಣಿಯಾಗುವ ಅವಕಾಶದಿಂದ ನೀವು ಸುರಕ್ಷಿತರಾಗಿರಬಲ್ಲಿರಿ. *ಗರ್ಭ ನಿರೋಧಕಗಳ ಬಳಕೆಯನ್ನು ನಿಲ್ಲಿಸುವುದು 40 ದಾಟಿದ ವಯಸ್ಕರು ಯುವ ಜನರಿಗಿಂತ ಹೆಚ್ಚಾಗಿ ಕಾಂಡೋಮ್‍ಗಳನ್ನು ಬಳಸುತ್ತಾರೆ. ನೀವು ಹಾರ್ಮೋನಲ್ ಬರ್ತ್ ಕಂಟ್ರೋಲ್ ವಿಧಾನವನ್ನು ಬಳಸುತ್ತಿದ್ದರು ಅಥವಾ ನೀವು ಮುಟ್ಟು ನಿಲ್ಲುವ ಕಾಲವನ್ನು ದಾಟಿದ್ದರು ಮತ್ತು ಗರ್ಭಿಣಿಯಾಗುವ ಅವಕಾಶವನ್ನು ಹೊಂದಿಲ್ಲದಿದ್ದರು ಸಹ ಪ್ರತಿ ಬಾರಿ ಸಂಭೋಗವನ್ನು ಮಾಡುವಾಗ ಕಾಂಡೋಮ್ ಧರಿಸುವುದು ಸುರಕ್ಷಿತ. *ಸಂಭೋಗವನ್ನು ಪಕ್ಕಕ್ಕೆ ಸರಿಸಿದ್ದಕ್ಕೆ ಕಳೆದ ವರ್ಷ ಜರ್ನಲ್ ಆಫ್ ಸೆಕ್ಷುಯಲ್ ಮೆಡಿಸಿನ್ ತನ್ನ ಅಂಕಣದಲ್ಲಿ ಪ್ರಸ್ತಾಪಿಸಿದ ವಿಷಯವೇನಪ್ಪ ಎಂದರೆ, ನಲ್ವತ್ತು ವರ್ಷದ ಶೇ.30 ಮತ್ತು ಐವತ್ತು ವರ್ಷದ ಶೇ. 50 ಮಹಿಳೆಯರು ಕಳೆದ ಒಂದು ವರ್ಷದ ಅವಧಿಯಲ್ಲಿ ಯೋನಿ ಸಂಭೋಗದಲ್ಲಿ ಪಾಲ್ಗೊಂಡಿರಲಿಲ್ಲವಂತೆ. ಕುತೂಹಲಕಾರಿ ವಿಚಾರವೇನೆಂದರೆ ಇಂತಹ ಪರಿಸ್ಥಿತಿಯಲ್ಲೂ ಸಹ ಅವರ ಯೋನಿಯ ಆರೋಗ್ಯದಲ್ಲಿ ಏರು-ಪೇರಾಗಿತ್ತು. ಮುಟ್ಟು ನಿಂತ ಮೇಲೆ ಎಸ್ಟ್ರೋಜೆನ್ ಮಟ್ಟವು ಕುಸಿಯುತ್ತದೆ, ಯೋನಿಯಲ್ಲಿರುವ ಕೋಶಗಳು ಚಪ್ಪಟೆಯಾಗುತ್ತವೆ ಮತ್ತು ತೆಳುವಾಗುತ್ತ ಬರುತ್ತವೆ. ಇದು ಮುಂದೆ ಅವರು ಸಂಭೋಗದಲ್ಲಿ ಪಾಲ್ಗೊಂಡಾಗ ನೋವನ್ನು ತರುತ್ತದೆ. ಜೊತೆಗೆ ತುರಿಕೆ, ಒಣಗುವಿಕೆ, ಉರಿ ಮತ್ತು ಅಸೌಖ್ಯವನ್ನುಂಟು ಮಾಡುತ್ತದೆ. ಆದರೆ ಇದೇ ಅವಧಿಯಲ್ಲಿ ನಿಯಮಿತವಾಗಿ ಸಂಭೋಗದಲ್ಲಿ ಪಾಲ್ಗೊಂಡವರಲ್ಲಿ ಯೋನಿಯು ತನ್ನ ಮೊಯಿಶ್ಚರೈಸರ್ ಉಳಿಸಿಕೊಂಡಿತ್ತು ಮತ್ತು ತನ್ನ ಹಿಗ್ಗುವಿಕೆಯನ್ನು ಸುಧಾರಿಸಿಕೊಂಡಿತ್ತು. ಆಗಾಗ ಪ್ಯಾಂಟಿ ಲೈನರ್ ಬಳಸುವುದು ಒಂದು ವೇಳೆ ನಿಮ್ಮ ಮಾಸಿಕ ಋತು ಚಕ್ರವು ಅನಿಯಮಿತವಾಗಿದ್ದರೆ, ನೀವು ಮುಜುಗರವನ್ನು ತಪ್ಪಿಸಿಕೊಳ್ಳಲು ಪ್ಯಾಂಟಿ ಲೈನರನ್ನು ನಿಯಮಿತವಾಗಿ ಬಳಸುತ್ತಿರುತ್ತೀರಿ. ಇದರಿಂದ ನಿಮಗೆ ಮುಜುಗರವು ತಪ್ಪಬಹುದು. ಆದರೆ ತುರಿಕೆ ಮತ್ತು ಇನ್‍ಫೆಕ್ಷನ್ ಕಾಡಬಹುದು. ಪ್ಯಾಂಟಿ *ಲೈನರ್‌ನಲ್ಲಿರುವ ಪ್ಲಾಸ್ಟಿಕ್ ಹಿಂಬದಿಯು ಗಾಳಿಯು ಸರಾಗವಾಗಿ ಸಾಗಲು ತೊಡಕನ್ನುಂಟು ಮಾಡುತ್ತದೆ. ಇದರಿಂದಾಗಿ ಸೆಕೆ ಮತ್ತು ಬಿಸಿಯು ಯೋನಿಯನ್ನು ಕಾಡುತ್ತದೆ. ಜೊತೆಗೆ ಇದನ್ನು ತುಂಬಾ ಹೊತ್ತು ಹಾಕಿಕೊಳ್ಳುವುದರಿಂದ ಬ್ಯಾಕ್ಟೀರಿಯಾ ಮತ್ತು ಫಂಗಲ್ ಇನ್‍ಫೆಕ್ಷನ್‍ಗಳು ಸಹ ಸಂಭವಿಸುತ್ತವೆ. ಇದಲ್ಲದೆ ಇದು ನಿರಂತರವಾಗಿ ಉಜ್ಜಲ್ಪಡುವುದರಿಂದ ಯೋನಿ ಭಾಗದಲ್ಲಿ ತುರಿಕೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಸದಾ ನಿಮ್ಮ ಬಳಿ ಹೆಚ್ಚು ಟ್ಯಾಂಪನ್‍ಗಳನ್ನು ಅಥವಾ ಪ್ಯಾಡ್‍ಗಳನ್ನು ಇರಿಸಿಕೊಳ್ಳಿ. ಮುಜುಗರದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಆಗಾಗ ಒಳ ಉಡುಪನ್ನು ಬದಲಾಯಿಸುತ್ತಿರಿ. ಅನಿಯಮಿತ ಋತು ಚಕ್ರವನ್ನು ಕೆಗೆಲ್ ಮೂಲಕ ಪರಿಹರಿಸಿಕೊಳ್ಳಿ. ಜೀವನ ಶೈಲಿಯಲ್ಲಿ ಬದಲಾವಣೆ ಅಥವಾ ವೈಧ್ಯೋಪಚಾರವು ಪ್ಯಾಂಟಿ ಲೈನರ್‌ಗಳ ಅವಲಂಬನೆಯನ್ನು ಕಡಿಮೆ ಮಾಡಬಲ್ಲವು. ಯಾವಾಗ ನೀವು ಪ್ಯಾಂಟಿ ಲೈನರ್‌ಗಳನ್ನು ಬಳಸುತ್ತೀರೋ, ಆಗ ಅವುಗಳನ್ನು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಬದಲಾಯಿಸಿ. *ನಿಮ್ಮ ವೈದ್ಯರನ್ನು ಆಗಾಗ ಸಂಪರ್ಕಿಸದಿರುವುದು ತುಂಬಾ ಇತ್ತೀಚಿಗಿನ ಅಮೆರಿಕನ್ ಕಾಲೇಜ್ ಆಫ್ ಅಬ್ಸ್‌ಟೆಟ್ರಿಕನ್ಸ್ ಅಂಡ್ ಗೈನೆಕಾಲೋಜಿಸ್ಟ್ಸ್ ರವರ ಮಾರ್ಗದರ್ಶಿ ಸೂತ್ರಗಳ ಪ್ರಕಾರ 30 ದಾಟಿದ ಪ್ರತಿ ಹೆಂಗಸರು ತಾವು ಮಾಡಿಸಿಕೊಂಡ ಸತತ ಮೂರು ಪ್ಯಾಪ್ ( ಮೊಲೆ ತೊಟ್ಟು) ಪರೀಕ್ಷೆಗಳಲ್ಲಿ, ಮೂರೂ ಪರೀಕ್ಷೆಗಳು ಋಣಾತ್ಮಕವಾಗಿ ಬಂದಿಲ್ಲದಿದ್ದರೆ ( ಅಂದರೆ ಸಾಮಾನ್ಯ) ಅದಕ್ಕೆ ಔಷಧೋಪಚಾರದ ಅಗತ್ಯವಿಲ್ಲ. ಆಗಿದ್ದಾಗ ಪ್ರತಿ ಮೂರು ವರ್ಷಕ್ಕೊಮ್ಮೆ ಪ್ಯಾಪ್ ಪರೀಕ್ಷೆ ಮಾಡಿಸಿ. ಹಾಗೆಂದು ನಿಮ್ಮ ವೈಧ್ಯರನ್ನು ಮರೆತು ಬಿಡಬೇಡಿ. ವರ್ಷಕ್ಕೊಮ್ಮೆಯಾದರು ನಿಮ್ಮ ಸ್ತನಗಳನ್ನು ಪರೀಕ್ಷೆ ಮಾಡಿಸಿ. ಏಕೆಂದರೆ ಇದರ ಜೊತೆಯಲ್ಲಿ ನಡೆಸುವ ಬೈಮ್ಯಾನುಯಲ್ ಪೆಲ್ವಿಕ್ ಪರೀಕ್ಷೆಯು ಕ್ಯಾನ್ಸರ್, ಓವರಿಯನ್ ಸಿಸ್ಟ್‌ಗಳು ಮತ್ತು ಫೈಬ್ರಾಯ್ಡ್‌ಗಳನ್ನು ಗುರುತಿಸಲು ನೆರವಾಗುತ್ತದೆ. ಇದರ ಜೊತೆಗೆ ನಿಮ್ಮ ಜನನ ನಿಯಂತ್ರಣ ಮತ್ತು ಲೈಂಗಿಕ ಸಮಸ್ಯೆಗಳ ಕುರಿತಾಗಿ ಸಲಹೆ ಪಡೆಯಲು ಇದು ಒಳ್ಳೆಯ ಅವಕಾಶವನ್ನೊದಗಿಸುತ್ತದೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ