Skip to main content

*ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ಚಂದ್ರ:-

ಚಂದ್ರ:- ಜನನ ಕುಂಡಲಿಯಲ್ಲಿ ಚಂದ್ರನು ರಾಹು ಮತ್ತು ಶನಿಗಳ ಸಂಪರ್ಕದಲ್ಲಿ ಮತ್ತು ಕ್ಷೀಣನಾಗಿದ್ದರೆ,ಬಾವನಾತ್ಮಕತೆಯಲ್ಲಿ ಅಸಮತೋಲನ,ಇತರರಬಗ್ಗೆ ಆತ್ಮೀಯತೆಯಿಂದಿರಲು ಹೆದರಿಕೆ,ಜೀವನದಲ್ಲಿ ತುಮುಲಗಳನ್ನು ಸಹಿಸಲಾರರು ಸಂತೃಪ್ತಿ ಇರುವುದಿಲ್ಲ ರಹಸ್ಯಗಳನ್ನು ಕಾಪಾಡಲಾರರು,ಋಣಾತ್ಮಕತೆ,ಮಂಕು ಮುಚ್ಚಿದ ಮನಸ್ಸು,ತಾಯಿಯು ಸಹ ಜೀವನದಲ್ಲಿ ಹಲವಾರು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸಿರುವರು,ಅಶಕ್ತತೆ,ದೇಹದಲ್ಲಿ ದ್ರವಗಳ ಕೊರತೆ,ತೂಕನಷ್ಟ,ಒಣಗಿದ ಚರ್ಮ,ಮಲಬದ್ದತೆ,ನರಗಳ ಊತ,ಮೂತ್ರಕೋಶದ ತೊಂದರೆ,ಶ್ವಾಸಕೋಶಗಳ ನಿರ್ಬಲತೆ,ತಾಪವನ್ನು ತಾಳಲಾರರು,ಔಷದಿಗಳು ಉಪಯೋಗವಾಗುವುದಿಲ್ಲ ಹೃದಯ ಅಥವ ಸ್ತನಗಳಲ್ಲಿ ತೊಂದರೆ,ಮದ್ಯವ್ಯಸನಿಗಳಾಗುವರು,ಸೊಸೆಯೊಂದಿಗೆ ವಿನಾಕಾರಣ ಕಲಹಗಳು,ಮಗಳು ಅತ್ತೆಮನೆಯಲ್ಲಿ ಅಸುಖಿ,ಮಕ್ಕಳವಿದ್ಯಾಬ್ಯಾಸದಲ್ಲಿ ತೊಂದರೆಗಳು,ಹಾಲುಕೊಡುವ ಹಸುಗಳು ಸಾಯುತ್ತವೆ,ಕೊಳವೆಬಾವಿ ಒಣಗುತ್ತದೆ,ಸಂಸಾರದಲ್ಲಿ ಒಡಕು ಹೆಚ್ಚಾಗುತ್ತದೆ,ಪರಸ್ತ್ರೀಯರ ಮೇಲೆ ಹಣವನ್ನು ವ್ಯೆಚ್ಚಮಾಡುವಿರಿ,ಅನಿರೀಕ್ಷಿತ ಅನಾರೋಗ್ಯ,ಹಣಕಾಸು ತೊಂದರೆ ಒಳ್ಳೆಕೆಲಸ ಮಾಡಿದರು ಕೆಟ್ಟಹೆಸರು ತಪ್ಪುವುದಿಲ್ಲ,ಗತವನ್ನು ಚಿಂತಿಸಿ ಅತಿಯಾಗಿ ಮರುಗುವಿರಿ,ಸ್ತ್ರೀಯರಲ್ಲಿ ಬಂಜೆತನ ಮತ್ತು ಮುಟ್ಟಿನತೊಂದರೆಗಳು. ಪರಿಹಾರಗಳು:- *ದುರ್ಗೆ ಅಥವ ಚಾಮುಂಡಿಯನ್ನು ಆರಾಧಿಸಿ,ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ(ಚಂದ್ರನು ಮೇಷ ಅಥವ ವೃಶ್ಚಿಕಗಳಿಇದ್ದರೆ) *ಹಾಲು ಮತ್ತು ನೀರನ್ನು ಕುಡಿಯಲು ಬೆಳ್ಳಿಯ ಲೋಟವನ್ನು ಉಪಯೋಗಿಸಿ. *ನಿಮ್ಮ ತಾಯಿಯ ಕೈಯಿಂದ ಹಳೆಯ ಅಕ್ಕಿ ಮತ್ತು ಬೆಳ್ಳಿಯ ನಾಣ್ಯವನ್ನು ತಗೆದುಕೊಂಡು ಒಂದು ಬಿಳಿಯ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿಟ್ಟಿರಿ. *ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಕಟ್ಟಿ ಸೋಮವಾರಗಳಂದು ಹರಿಯುವ ನೀರಲ್ಲಿ ಹಾಕಿ. *೪೦ದಿನಗಳಕಾಲ ಮಲಗುವಾಗ ತಲೆಯ ಬಳಿ ಒಂದುಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ಅಶ್ವತ್ತ ಮರದ ಬುಡಕ್ಕೆ ಹಾಕಿ. *ರಾತ್ರಿಯ ಹೊತ್ತು ಹಾಲನ್ನು ಕುಡಿಯಬೇಡಿ. *ಮಗನ ಜೊತೆ ಪ್ರಯಾಣಿಸುವಾಗ ಹರಿಯುವ ನೀರಿನಲ್ಲಿ ತಾಮ್ರದ ನಾಣ್ಯವನ್ನು ಹಾಕಿ. *ರುದ್ರಭೂಮಿಯಲ್ಲಿನ ಬಾವಿಯ ನೀರನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಿ. *ಎರಡು ಜೊತೆ ಬೆಳ್ಳಿ ಮತ್ತು ಮುತ್ತಿನ ಚೂರುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಜೊತೆಯನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ. *ತಾಯಿಯನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ. *ಮಗ ಮತ್ತು ಮೊಮ್ಮೊಗನೊಡನೆ ದೇವಸ್ಥಾನಕ್ಕೆ ಹೋಗಿ ಪಿತೃಕಾರ್ಯವನ್ನು ಮಾಡಿ *ಸರಿಯಾಗಿ ನಿದ್ರೆ ಬರದಿದ್ದರೆ ಮಂಚದ ನಾಲ್ಕು ಕಾಲುಗಳಿಗು ತಾಮ್ರದ ಮೊಳೆಯನ್ನು ಹೊಡೆಯಿರಿ. *೨೪ನೇ ವಯಸ್ಸಿಗೆ ಮುಂಚೆ ವಿವಾಹವಾಗಬಾರದು. *ಮೊದಲಬಾರಿಗೆ ಪತ್ನಿಯನ್ನು ಅವರ ಮನೆಯಿಂದ ಕರೆತರುವಾಗ ಸ್ವಲ್ಪ ಬೆಳ್ಳಿಯನ್ನು ಸಹ ಜೊತೆಯಲ್ಲಿ ತಗೆದುಕೊಂಡು ಬನ್ನಿ. *ಆಸ್ಪತ್ರೆ ಅಥವ ರುದ್ರಭೂಮಿಯಲ್ಲಿ ಬಾವಿಯನ್ನು ತೆಗೆಯಿಸಿ. *ಹಾಲು ತುಂಬಿದ ಪಾತ್ರೆ ಅಥವ ಬಾಟಲನ್ನು ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿ. *ಅನಾಥ ಮಕ್ಕಳೀಗೆ ಹಾಲನ್ನು ಕೊಡಿ. *ಸ್ವಲ್ಪ ಬೆಳ್ಳಿಯನ್ನು ಮನೆಯ ತಳಪಾಯದಲ್ಲಿ ಹುದುಗಿಸಿ ಅದರಲ್ಲಿನ ಸ್ವಲ್ಪಬಾಗವನ್ನು ಮನೆಯಲ್ಲಿ ಇರಿಸಿ. *ಚಂದ್ರಗ್ರಹಣದಲ್ಲಿ ಸ್ವಲ್ಪ ಇದ್ದಿಲು,ಬಾರ್ಲಿ,ಬಿಳಿಸಾಸಿವೆಕಾಳುಗಳನ್ನು ಹರಿಯುವ ನೀರಲ್ಲಿ ಹಾಕಿ. *ಹಸಿರು ವಸ್ತ್ರವನ್ನು ಕನ್ಯೆಗೆ ದಾನಮಾಡಿ. *ಬಿಳಿಯ ಮೊಲವನ್ನು ಸಾಕಿ. *ಕೆಲಸಕ್ಕೆ ಮೊದಲು ಹಾಲು ಅಥವ ನೀರು ಕುಡಿಯಿರಿ. *ಬೆಳ್ಳಿಯ ಉಂಗುರದಲ್ಲಿ ಮುತ್ತನ್ನು ಹಾಕಿ ಉಂಗುರದ ಬೆರಳಿಗೆ ಹಾಕಿಕೊಳ್ಳಿ ಮತ್ತು ಸೋಮವಾರಗಳಂದು ಉಪವಾಸ ಮಾಡಿ. *ನಿರ್ವೀರ್ಯತೆಗೆ ಬಂಗಾರದ ಕಡ್ಡಿಯನ್ನು ಕೆಂಪಗೆ ಕಾಯಿಸಿ ೧೧ ಸಲ ನೀರಲ್ಲಿ ಹದ್ದಿನಂತರ ಆ ನೀರನ್ನು ಕುಡಿಯಿರಿ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ