Skip to main content

ಧ್ವನಿಮುದ್ರಿಕೆ: ಎಲ್ಲಿ ಹನುಮನೋ ಅಲ್ಲಿ ರಾಮನು

ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ.ರಾಜ್‍ಕುಮಾರ್ ಎತ್ತಲೋ ಮಾಯವಾದ.. ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ಎತ್ತಿ ತಂದೆ ಎಲ್ಲಿಂದ ರಾಯ ಮುತ್ತೆತ್ತ ರಾಯ ಅಕ್ಕ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ ನಗೆಯ ತಂದೆಯ ಮಹನೀಯ.. ಆ.. ಮಾರುತಿ ರಾಯ ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ಎತ್ತಿ ತಂದೆ ಎಲ್ಲಿಂದ ರಾಯ ಮುತ್ತೆತ್ತ ರಾಯ ಸೀತಮ್ಮ ಸ್ನಾನ ಮಾಡಿ ಮೂಗುತಿಯ ಹುಡುಕಾಡಿ ನಿನ್ನ ಕೂಗಿದಳೇನು ಹನುಮಂತ ರಾಯ ನೀರಲ್ಲಿ ಬಾಲಬಿಟ್ಟು ನದಿಯನ್ಣೇ ಶೋಧಿಸಿದೆ ಎಂಥ ಶ್ರದ್ಧೆಯೋ ಮಹನೀಯ.. ಆ.. ಹನುಮಂತ ರಾಯ ಅಮ್ಮ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ ಮುತ್ತೆತ್ತ ರಾಯನೆಂದು ಹರಸಿದಳೇನು ನಿನ್ನಂಥ ದಾಸನನು ಪಡೆಯ ಆ ರಾಮನು ಎಂಧ ಭಾಗ್ಯವಂತನಯ್ಯ.. ಆ.. ಮಾರುತಿ ರಾಯ ನಿನ್ನಂತೆ ಭಕ್ತಿಯಿಲ್ಲ ನಿನ್ನಂತೆ ಶಕ್ತಿಯಿಲ್ಲ ಏನೂ ಇಲ್ಲದ ಜೀವ ನನ್ನದು ಸ್ವಾಮಿ ನಿನ್ನೇ ನಾ ನಂಬಿ ಬಂದೆ ನೀನೇ ನನ್ನ ತಾಯಿ ತಂದೆ ಕಾಪಾಡುವ ಹೊಣೆಯು ನಿನ್ನದು.. ತಂದೆ ನಿನ್ನದು ಆಂಜನೇಯನ ಮನದಲಿ ನೆನೆದರೆ ಸಾಲದೆ ಅವನಿಂದಾಗದ ಕಾರ್ಯ ಜಗದಲಿ ಏನಿದೆ ಆ ಸುಂದರ ಮೂರುತಿ ಮನದಲಿ ನಿಂತರೆ ಸಾಲದೆ ಮಾರುತಿ ರಾಯನು ಒಲಿದರೆ ಚಿಂತೆಯು ಏನಿದೆ ರಾಮಚಂದ್ರನ ದುಃಖವ ಕಳೆವನಲ್ಲವೆ ನಿನ್ನ ದುಃಖವ ಕಳೆವುದು ಅವನಿಗಸಾಧ್ಯವೆ ದುಷ್ಟರಕ್ಕಸರ ನಾಶ ಮಾಡಿದವನಲ್ಲವೆ ನಿನ್ನ ದುಷ್ಠಗುಣಗಳ ಅಳಿಸಲು ಅವನಿಗಸಾಧ್ಯವೆ ಸಾಗರವನ್ನೆ ದಾಟಿದ ಸಾಹಸಿಯಲ್ಲವೆ ಸಂಸಾರ ಸಾಗರವ ದಾಟಿಸಲವನಿಗಸಾಧ್ಯವೆ ಹನುಮನ ಹೃದಯವೆ ರಾಮನ ಮಂದಿರವಲ್ಲವೆ ಆ ಮಾರುತಿ ಒಲಿದರೆ ರಾಮನು ನಿನ್ನವನಲ್ಲವೆ ಮಾರುತಿ.. ಸೇವಕನ ಮಾಡು ಸೇವಕನ ಮಾಡು ನಿನ್ನಂತೆ ನನ್ನ ಸೇವಕನ ಮಾಡು ನಿನ್ನಂತೆ ನನ್ನ ಸೇವಕನ ಮಾಡು ರಾಮಚಂದ್ರನ ಸೇವಿಸಿ ಪೂಜಿಸಿ ರಾಮಚಂದ್ರನ ಸೇವಿಸಿ ಪೂಜಿಸಿ ಧನ್ಯನಾಗುವಂತೆ ಹರಸಿ ನನ್ನ ಧನ್ಯನಾಗುವಂತೆ ಹರಸಿ ನನ್ನ ಸೇವಕನ ಮಾಡು ಸೇವಕನ ಮಾಡು ನಿನ್ನಂತೆ ನನ್ನ ಸೇವಕನ ಮಾಡು ಮಾರುತಿ... ಸೇವಕನಾದರೆ ದೊರೆಯುವ ಪ್ರಭುವಿನ ಕರುಣೆಗೆ ಎಣೆಯೇ ಇಲ್ಲ ಸೇವೆಯು ನೀಡುವ ಮಹದಾನಂದ ಬಣ್ಣಿಸೆ ಮಾತುಗಳಿಲ್ಲ ಸೇವೆಯು ಕೊಡುವ ಫಲದ ಕಲ್ಪನೆ ಸೇವೆಯು ಕೊಡುವ ಫಲದ ಕಲ್ಪನೆ ಕಲ್ಪವೃಕ್ಷಕು ಇಲ್ಲ ಸೇವಕನ ಮಾಡು ಸೇವಕನ ಮಾಡು ನಿನ್ನಂತೆ ನನ್ನ ಸೇವಕನ ಮಾಡು ಮಾರುತಿ... ಸೇವಕನೆಂದೇ ನಂದಿಗೆ ದೊರಕಿತು ಕೈಲಾಸದಲಿ ಸ್ಥಾನ ಸೇವಕನಾಗೇ ಗರುಡನು ಪಡೆದ ವೈಕುಂಠದಲಿ ತಾಣ ಸೇವಕನಾದರೆ ನನ್ನಲಿ ಆಗ ಸೇವಕನಾದರೆ ನನ್ನಲಿ ಆಗ ಕರಗುವುದು ಅಜ್ಞಾನ ಸೇವಕನ ಮಾಡು ಸೇವಕನ ಮಾಡು ನಿನ್ನಂತೆ ನನ್ನ ಸೇವಕನ ಮಾಡು ಮಾರುತಿ... ಸೇವಕನಾಗೇ ಎಲ್ಲ ಶಕ್ತಿಯು ನಿನ್ನ ಕೈಸೇರಿತು ಹನುಮ ಪೂಜೆಯು ಹೊಂದುವ ಭಾಗ್ಯ ನೀಡಿತು ನಿನಗಾ ರಾಮನಾಮ ನನ್ನೀ ಜನುಮವು ಸಾರ್ಥಕ ತಂದೆ ಪಡೆದರೆ ನಿನ್ನಾ ಪ್ರೇಮಾ. ಸೇವಕನ ಮಾಡು ಸೇವಕನ ಮಾಡು ನಿನ್ನಂತೆ ನನ್ನ ಸೇವಕನ ಮಾಡು ಮಾರುತಿ...ಸೇವಕನ ಮಾಡು ಮಾರುತಿ... "ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋ ಕರಿಮುಗಿಲೆ ಕೇಶವೊ ಸೂರ್ಯ-ಚಂದ್ರರೇ ನಯನಗಳೊ ಸುಳಿವ ಮಿಂಚಿಗಳೆ ನಗೆಯೊ ಸಿಡಿಲುಗುಡುಗಳೆಲ್ಲ ನೀನಾಡುವ ನುಡಿಯೊ ಮೇರುಪರ್ವತವೇ ನೀ ಹಿಡಿದ ಗದೆಯೊ ಪಾದಕಮಲಗಳೆರಡು ಪಾತಾಳದಲ್ಲಿದೆಯೊ ಅಂಜನಾತನಯ ವೀರಾಂಜನೇಯ ಮಾರುತಿರಾಯ" ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು ನೋಡುವ ಬಗೆ ಹೇಗೆ ನಿನ್ನ ಬೇಡುವ ಬಗೆ ನಿನ್ನ ಪಾದ ಹುಡುಕಲಾರೆ ಹನುಮ ಮೊಗವ ಕಾಣಲಾರೆ ಕೋಟಿ ಕಣ್ಣು ಸಾಲದಯ್ಯ ನಿನ್ನ ರೂಪ ತುಂಬಿಕೊಳಲು ಹೇಗೆ ನಿನ್ನ ಕಾಣಲಯ್ಯ ಹೀಗೆ ನಿಲ್ಲಲು ನಿಂತ ರೀತಿಯೋ ತನುವ ಕಾಂತಿಯೋ ಉರಿವ ಸೂರ್ಯ ಹಣತೆ ದೀಪದಂತೆ ಕಾಣುತಿರಲು ಹೀಗೆ ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನೋ ನಿನ್ನ ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು ನಿನ್ನ ಭಾರ ತಾಳೆನೆಂದು ಭೂಮಿ ಕುಸಿದು ಹೋಗುತಿರಲು ಎಲ್ಲಿ ನಾನು ನಿಲ್ಲಲಯ್ಯ ನಿನ್ನ ನೋಡಲು ರೋಮ ರೋಮದಿ ರಾಮನಾಮವು ರೋಮ ರೋಮದಿ ರಾಮನಾಮವು ಶಂಖನಾದ ತಾಳವಾದ್ಯ ಶಂಖನಾದ ತಾಳವಾದ್ಯ ದಶದಿಕ್ಕಲು ಮೊಳಗುತಿರಲು ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ಋತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ....ನಮತಾಮ್ ಕಾಮಧೇನವೆ.... ಏನು ದಾಹ ಯಾವ ಮೋಹ..ಏನು ದಾಹ ಯಾವ ಮೋಹ ತಿಳಿಯದಾಗಿದೆ..ಸ್ವಾಮಿ ಇನ್ನು ನಿನ್ನ..ಹೆಸರ ಹೇಳೊ ಆಸೆಯಾಗಿದೆ ಏನು ದಾಹ ಯಾವ ಮೋಹ..ಏನು ದಾಹ ಯಾವ ಮೋಹ ತಿಳಿಯದಾಗಿದೆ..ಸ್ವಾಮಿ ಇನ್ನು ನಿನ್ನ..ಹೆಸರ ಹೇಳೊ ಆಸೆಯಾಗಿದೆ -----------------------೧------------------------- ಸಾಕು ಎಂಬ ಮಾತು ಮರೆತು..ಮನವು ನಿನ್ನ ಸೇರಿದೆ ಸಾಕು ಎಂಬ ಮಾತು ಮರೆತು..ಮನವು ನಿನ್ನ ಸೇರಿದೆ ಚರಣ ಕಮಲ ಸ್ಮರಿಸಿದೆ...ದುಂಬಿಯಾಗಿ ಹಾಡಿದೆ..ದುಂಬಿಯಾಗಿ ಹಾಡಿದೆ ------------------------೨----------------------- ಜೇನಿಗಿಂತ ಸಿಹಿಯು ನಿನ್ನ..ನಾಮದಲ್ಲಿ ತುಂಬಿದೆ ಜೇನಿಗಿಂತ ಸಿಹಿಯು ನಿನ್ನ..ನಾಮದಲ್ಲಿ ತುಂಬಿದೆ ನುಡಿಯೆ ಮಾತು ಸಾಲದು..ಮನವು ಅರಳಿನಲಿವುದು..ಮನವು ಅರಳಿನಲಿಯುವುದು -----------------------೩------------------------ ಬೆಳದಿಂಗಳ ಮಳೆಯಲ್ಲಿ..ನಡೆವಹಾಗೆ ನನ್ನಲಿ ಬೆಳದಿಂಗಳ ಮಳೆಯಲ್ಲಿ..ನಡೆವಹಾಗೆ ನನ್ನಲಿ ಏನೊ ಮಧುರ ಭಾವನೆ..ಏನೊ ಕಂಡ ಕಲ್ಪನೆ..ಏನೊ ಕಂಡ ಕಲ್ಪನೆ ------------------------೪------------------------ ಗಾಳಿಗಿಂತ ಹಗುರವಾಗಿ..ದೂರ ತೇಲಿ ಹೋಗುವೆ ಗಾಳಿಗಿಂತ ಹಗುರವಾಗಿ..ದೂರ ತೇಲಿ ಹೋಗುವೆ ಬೆಳಕಿನಲ್ಲಿ ಬೆರೆಯುವೆ..ನಿನ್ನನಾಗಕಾಣುವೆ..ನಿನ್ನನಾಗ ಕಾಣುವೆ ಏನು ದಾಹ ಯಾವ ಮೋಹ..ಏನು ದಾಹ ಯಾವ ಮೋಹ ತಿಳಿಯದಾಗಿದೆ..ಸ್ವಾಮಿ ಇನ್ನು ನಿನ್ನ..ಹೆಸರ ಹೇಳೊ ಆಸೆಯಾಗಿದೆ ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ ಯಾರು ಅರಿಯರು ಯಾವ ಹೂವು ಬೆರೆವುದೊ ನಿನ್ನ ಚರಣವ ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ --------------------೧-------------------- ಯಾರ ಕೊರಳಲಿ ಯಾವ ಇಂಪನು..ಗುರುವೆ ನೀನಿರಿಸಿರುವೆಯೊ ಯಾರ ಕೊರಳಲಿ ಯಾವ ಇಂಪನು..ಗುರುವೆ ನೀನಿರಿಸಿರುವೆಯೊ ಯಾರ ಮನದಲಿ ಯಾವ ಗುಣವನು ತಂದೆ ನೀ ಬೆರೆಸಿರುವೆಯೊ ಯಾರ ಬಾಳಲಿ ಕರುಣೆಯಿಂದ ನೆಮ್ಮದಿಯ ತುಂಬಿರುವೆಯೊ..ನೆಮ್ಮದಿಯ ತುಂಬಿರುವೆಯೊ ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ -------------------೨---------------------- ಯಾರು ಬಲ್ಲರು ಯಾರ ಪ್ರೇಮಕೆ ಸೋತು ನೀನು ಒಲುವೆಯೊ ಯಾರು ಅರಿಯರು ಯಾರ ಕೂಗಿಗೆ ನೀನು ಧಾವಿಸಿ ಬರುವೆಯೊ ಯಾರ ಹೃದಯದ ಗುಡಿಯಲೆಂದು ಜ್ಯೋತಿ ನೀನಾಗಿರುವೆಯೊ..ಜ್ಯೋತಿ ನೀನಾಗಿರುವೆಯೊ ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ -------------------೩----------------------- ಕೋಟಿ ಜನುಮವು ಸಾಲದಾಗಿದೆ ಗುರುವೆ ನಿನ್ನ ಅರಿಯಲು ಕೋಟಿ ಜನುಮವು ಸಾಲದಾಗಿದೆ ಗುರುವೆ ನಿನ್ನ ಅರಿಯಲು ದಾರಿ ಕಾಣದೆ ರಾಘವೇಂದ್ರನೆ ನಿನ್ನ ನಾನು ಸೇರಲು ನಿನ್ನ ಕೂಗಿದೆ ಕಣ್ಗಳು..ಬಂದು ನಿಲ್ಲೆಯ ಮನದೊಳು...ಬಂದು ನಿಲ್ಲೆಯ ಮನದೊಳು ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ ಯಾರು ಅರಿಯರು ಯಾವ ಹೂವು ಬೆರೆವುದೊ ನಿನ್ನ ಚರಣವ ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ ಸುಮ್ಮನಿರುವ ತಂತಿಯನ್ನು ಮೀಟಲಾರೆಯ ತಾಳಲಾರೆ ರಾಘವೇಂದ್ರ ಕೇಳುವಾಸೆಯ ಬಾಳಿನಲ್ಲಿ ಬೆರೆಸು ನಿನ್ನ ನಾದಮಹಿಮೆಯ ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ ------------------೧-------------------- ಗಾನ ಲಹರಿ ಜಗವನೆಲ್ಲ.... ಗಾನ ಲಹರಿ ಜಗವನೆಲ್ಲ ತುಂಬಿ ಕುಣಿಸಲಿ ಧ್ಯಾನದಲ್ಲಿ ಲೀನವಾಗಿ ಜೀವ ನಲಿಯಲಿ ನಾನು ಎಂಬ ಭಾವವಿಂದೆ ಕರಗಿ ಹೋಗಲಿ ನೀನೇ ತನುವ ಮನವ ತುಂಬಿ ಬಾಳ ಬೆಳಗಲಿ ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ ಸುಮ್ಮನಿರುವ ತಂತಿಯನ್ನು ಮೀಟಲಾರೆಯ -----------------೨--------------------- ವೇದಘೋಷ ಜೊತೆಗೆ ಸೇರಿ ಶೃತಿಯ ಬೆರಸಲಿ ವೇದಘೋಷ ಜೊತೆಗೆ ಸೇರಿ ಶೃತಿಯ ಬೆರಸಲಿ ನಾದಗಂಗೆಯಲ್ಲಿ..ಜೀವ ರಾಶಿ ಮುಳುಗಲಿ ಶಾರದೆಯೇ ಮೈ ಮರೆತು ತಲೆಯ ದೂಗಲಿ ಶಾರದೆಯೇ ಮೈ ಮರೆತು ತಲೆಯ ದೂಗಲಿ ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ ಸುಮ್ಮನಿರುವ ತಂತಿಯನ್ನು ಮೀಟಲಾರೆಯ ತಾಳಲಾರೆ ರಾಘವೇಂದ್ರ ಕೇಳುವಾಸೆಯ ಬಾಳಿನಲ್ಲಿ ಬೆರೆಸು ನಿನ್ನ ನಾದಮಹಿಮೆಯ ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ ನೀನಿರುವ ತನಕ ನಾನಿರಲೆ ಬೇಕು..ಗುರುವೆ... ಅದಕಿಂತ ಸೌಭಾಗ್ಯ ಇನ್ನೇನು ಬೇಕು..ಅದಕಿಂತ ಸೌಭಾಗ್ಯ ಇನ್ನೇನು ಬೇಕು ನೀನಿರುವ ತನಕ ನಾನಿರಲೆ ಬೇಕು ಅದಕಿಂತ ಸೌಭಾಗ್ಯ ಇನ್ನೇನು ಬೇಕು..ಅದಕಿಂತ ಸೌಭಾಗ್ಯ ಇನ್ನೇನು ಬೇಕು ---------------------------೧---------------------------- ನಿನ್ನ ರೂಪವು ಕಣ್ಣ ತುಂಬಿದರೆ ಸಾಕು... ನಿನ್ನ ರೂಪವು ಕಣ್ಣ ತುಂಬಿದರೆ ಸಾಕು ನಿನ್ನ ನುಡಿಗಳು ಕಿವಿಯ ಸೋಕಿದರೆ ಸಾಕು ನಿನ್ನ ಮಹಿಮೆಯ ಮನವು ಅರಿತರೆ ಸಾಕು ನಿನ್ನ ದಾರಿಯಲೆನ್ನ ನಡೆಸಿದರೆ ಸಾಕು ಅದಕಿಂತ ಸೌಭಾಗ್ಯ ಇನ್ನೇನು ಬೇಕು..ಅದಕಿಂತ ಸೌಭಾಗ್ಯ ಇನ್ನೇನು ಬೇಕು ---------------------------೨----------------------------- ನಿನ್ನ ಎದುರಲಿ ನನ್ನ ಇರಿಸಿದರೆ ಸಾಕು ನಿನ್ನ ತತ್ವವ ದಿನವು ತಿಳಿಸಿದರೆ ಸಾಕು ನಿನ್ನ ಪ್ರೇಮಾಮೃತವ ಕುಡಿಸಿದರೆ ಸಾಕು ನಿನ್ನ ಅರಿಯುವ ಶಕ್ತಿ ನೀಡಿದರೆ ಸಾಕು ಅದಕಿಂತ ಸೌಭಾಗ್ಯ ಇನ್ನೇನು ಬೇಕು..ಅದಕಿಂತ ಸೌಭಾಗ್ಯ ಇನ್ನೇನು ಬೇಕು ---------------------------೩----------------------------- ಪಯಣದಲಿ ಜೊತೆಯಿರಲು ಕೂಗಿದರೆ ಸಾಕು... ಪಯಣದಲಿ ಜೊತೆಯಿರಲು ಕೂಗಿದರೆ ಸಾಕು ಸನಿಹದಲಿ ನೆರಳಂತೆ ನದೆಸಿದರು ಸಾಕು ಪಾದ ಸೇವೆಯ ಭಾಗ್ಯ ದೊರೆತರೆ ಸಾಕು ರಾಮ ಹನುಮರ ಸ್ನೇಹ ಅರಳಿದರೆ ಸಾಕು ಅದಕಿಂತ ಸೌಭಾಗ್ಯ ಇನ್ನೇನು ಬೇಕು..ಅದಕಿಂತ ಸೌಭಾಗ್ಯ ಇನ್ನೇನು ಬೇಕು ನೀನಿರುವ ತನಕ ನಾನಿರಲೆ ಬೇಕು..ಗುರುವೆ...ಗುರುವೆ...ಗುರುವೆ ನೀನು ನಾನು ಒಂದೆಯೇನು..ಹೊನ್ನು ಮಣ್ಣು ಸರಿಸಮವೇನು ಎಲ್ಲ ಬಲ್ಲ ತಂದೆ ನೀನು..ನಿನಗೀ ಮೌನ ಸರಿಯೇನು ನೀನು ನಾನು ಒಂದ್ಯೇನು..ಹೊನ್ನು ಮಣ್ಣು ಸರಿಸಮವೇನು ಎಲ್ಲ ಬಲ್ಲ ತಂದೆ ನೀನು..ನಿನಗೀ ಮೌನ ಸರಿಯೇನು ---------------------೧------------------- ತಪ್ಪುಗಳನ್ನೆ ಮಾಡುವೆ ನಾನು...ಅರಿತು ಅರಿತು ದಿನವೆಲ್ಲ ತಪ್ಪುಗಳನ್ನೆ ಮಾಡುವೆ ನಾನು...ಅರಿತು ಅರಿತು ದಿನವೆಲ್ಲ ಮನವೊಪ್ಪದ ಕಾರ್ಯ ಮಾಡುವ ಬಯಕೆ ..ಕಾಡಿದೆ ನನ್ನ ಬಾಳೆಲ್ಲ ಮನಸಿಗೆ ಶಾಂತಿಯೆ ಇಲ್ಲ..ಆಸೆಗೆ ಮಿತಿಯೆ ಇಲ್ಲ ಮೇಕನೆ* ಕರಿಸಿ ನಡೆಸದೆ ಹೋದರೆ..ನರಕವೆ ನನಗೆ ವಿಧಿ ಇಲ್ಲ ನೀನು ನಾನು ಒಂದೆಯೇನು..ಹೊನ್ನು ಮಣ್ಣು ಸರಿಸಮವೇನು ಎಲ್ಲ ಬಲ್ಲ ತಂದೆ ನೀನು..ನಿನಗೀ ಮೌನ ಸರಿಯೇನು ------------------------೨-------------------- ಸುಖದಲಿ ಎಂದು ಮನದಲಿ ನಿನ್ನ...ನೆನೆದವನಂತು ನಾನಲ್ಲ ಸುಖದಲಿ ಎಂದು ಮನದಲಿ ನಿನ್ನ...ನೆನೆದವನಂತು ನಾನಲ್ಲ ಕಡುಕಷ್ಟದ ಬೇಗೆಯು ಸುಡುತಿರುವಾಗ..ಮೂಡಿತು ನಿನ್ನ ನೆನಪು ಸುಳ್ಳಲ್ಲ ಕೊರಗುತು ಕರೆಯುತ ಬಂದೆ...ಕರುಣೆಯೇ ಇಲ್ಲವೆ ಎಂದೆ ಇನ್ನು ನೀನು ಬಾರದೆ ಹೋದರೆ..ಸುಮ್ಮನೆ ಬಿಡುವವ ನಾನಲ್ಲ ನೀನು ನಾನು ಒಂದ್ಯೇನು..ಹೊನ್ನು ಮಣ್ಣು ಸರಿಸಮವೇನು ಎಲ್ಲ ಬಲ್ಲ ತಂದೆ ನೀನು..ನಿನಗೀ ಮೌನ ಸರಿಯೇನು ------------------------೩------------------------ ಶಕ್ತಿಯು ದೇಹದಿ ತುಂಬಿರುವಾಗ..ಮಂತ್ರಾಲಯಕೆ ಬರಲಿಲ್ಲ ಶಕ್ತಿಯು ದೇಹದಿ ತುಂಬಿರುವಾಗ..ಮಂತ್ರಾಲಯಕೆ ಬರಲಿಲ್ಲ ಗುರುಭಕ್ತರನೆಂದು ಕನಸಲ್ಲಾದರು..ಸೇವಿಸಿದಂತೆ ನೆನಪಿಲ್ಲ ಭಕ್ತನು ನಾನೇನಲ್ಲ..ಭಕ್ತಿಯ ಅರಿವೆನಿಗಿಲ್ಲ ಅಭಯವ ನೀನು ತೀಡುವ ತನಕ..ಪಾದವ ಬಿಡುವವ ನಾನಲ್ಲ ನೀನು ನಾನು ಒಂದೆಯೇನು..ಹೊನ್ನು ಮಣ್ಣು ಸರಿಸಮವೇನು ಎಲ್ಲ ಬಲ್ಲ ತಂದೆ ನೀನು..ನಿನಗೀ ಮೌನ ಸರಿಯೇನು ನೀ ತಂದೆ ನಾ ಕಂದ..ಇದು ನಮ್ಮ ಅನುಬಂಧ ಬೇರೇನು ನಾ ಅರಿಯೆನು..ನಿನ್ನಾಣೆ ನಿಜವನ್ನೆ ನಾ ನುಡಿವೆನು ನೀ ತಂದೆ ನಾ ಬಂದೆ..ನಡೆಸಿದಂತೆ ನಡೆದೆ ಕಲಿಸಿದ ಮಾತು ಕಲಿತೆ..ಗುರುರಾಯ ಇನ್ನೇಕೆ ನನಗೆ ಚಿಂತೆ ನೀ ತಂದೆ ನಾ ಕಂದ..ಇದು ನಮ್ಮ ಅನುಬಂಧ ಬೇರೇನು ನಾ ಅರಿಯೆನು..ನಿನ್ನಾಣೆ ನಿಜವನ್ನೆ ನಾ ನುಡಿವೆನು -------------------------೧-------------------------- ಎಡವಿದರು ನೀನಿರುವೆ ತೊದಲಿದರು ನೀನಿರುವೆ ಎಡವಿದರು ನೀನಿರುವೆ ತೊದಲಿದರು ನೀನಿರುವೆ ನಿನ್ನದೆ ಎಲ್ಲ ಎನುವೆ..ಗುರುರಾಯ ನನ್ನದೇನಿಲ್ಲ ಎನುವೆ ಎಡವಿದರು ನೀನಿರುವೆ ತೊದಲಿದರು ನೀನಿರುವೆ ನಿನ್ನದೆ ಎಲ್ಲ ಎನುವೆ..ಗುರುರಾಯ ನನ್ನದೇನಿಲ್ಲ ಎನುವೆ ನಗಿಸಿದರೆ ನಾ ನಗುವೆ..ಅಳಿಸಿದರೆ ನಾ ಅಳುವೆ ಕಾರಣ ನಾ ಕೇಳೆನು..ಗುರುರಾಯ ಬಲ್ಲೆ ನೀನೆಲ್ಲವನ್ನು..ಗುರುರಾಯ ಬಲ್ಲೆ ನೀನೆಲ್ಲವನ್ನು ನೋವಿನಲೆ ಮುಳುಗಿರಲಿ ಕಣ್ಣೀರು ಕರೆತಿರಿಲಿ ಕಾಪಾಡು ಬಾ ಎನ್ನೆನು ಕಂದನ ತಂದೆಯು ಮರೆವನೇನು ನೀ ತಂದೆ ನಾ ಕಂದ..ಇದು ನಮ್ಮ ಅನುಬಂಧ ಬೇರೆನು ನಾ ಅರಿಯೆನು..ನಿನ್ನಾಣೆ ನಿಜವನ್ನೆ ನಾ ನುಡಿವೆನು --------------------------೨--------------------- ಬಿಸಿಲಲ್ಲಿ ನೆರಳಲ್ಲಿ ಹಗಲಲ್ಲಿ ಇರುಳಲ್ಲಿ ಬಿಸಿಲಲ್ಲಿ ನೆರಳಲ್ಲಿ ಹಗಲಲ್ಲಿ ಇರುಳಲ್ಲಿ ಗುರುರಾಘವೇಂದ್ರ ಎನುವೆ..ಆ ಕ್ಷಣವೆ ಆನಂದವಾ ಹೊಂದುವೆ ಬಿಸಿಲಲ್ಲಿ ನೆರಳಲ್ಲಿ ಹಗಲಲ್ಲಿ ಇರುಳಲ್ಲಿ ಗುರುರಾಘವೇಂದ್ರ ಎನುವೆ..ಆ ಕ್ಷಣವೆ ಆನಂದವಾ ಹೊಂದುವೆ ಎಲ್ಲಿರಲಿ ಹೇಗಿರಲಿ ದೂರದಲೆ ನಾನಿರಲಿ ಭಯವನ್ನೆ ನಾ ಕಾಣೆನು..ಗುರುರಾಯ ರಕ್ಷಣೆಗೆ ಇರಲು ನೀನು..ಗುರುರಾಯ ರಕ್ಷಣೆಗೆ ಇರಲು ನೀನು --------------------------೩------------------------ ನೀ ಬಂದು ನಿಂತರು ವರವ ಕೇಳೆಂದರು ನೀ ಬಂದು ನಿಂತರು ವರವ ಕೇಳೆಂದರು ಎನೊಂದನು ಬೇಡೆನು..ಗುರುರಾಯ ಕೊಡುವೆ ನೀನೆಲ್ಲವನ್ನು ನೀ ಬಂದು ನಿಂತರು ವರವ ಕೇಳೆಂದರು ಎನೊಂದನು ಬೇಡೆನು..ಗುರುರಾಯ ಕೊಡುವೆ ನೀನೆಲ್ಲವನ್ನು ಹೂವಿನ ಹೃದಯದಲಿ ಪರಿಮಳವು ಬೆರೆತಂತೆ ನನ್ನೆದೆಯ ಗುಡಿಯಲ್ಲಿಯೆ ನೀನಿರಲು ಚಿಂತೆಯ ಮಾತೆಲ್ಲಿದೆ..ಗುರುರಾಯ ಚಿಂತೆಯ ಮಾತೆಲ್ಲಿದೆ ನೀ ತಂದೆ ನಾ ಕಂದ..ಇದು ನಮ್ಮ ಅನುಬಂಧ ಬೇರೆನು ಅರಿವೇನು..ನಿನ್ನಾಣೆ ನಿಜವನ್ನೆ ನಾ ನುಡಿವೆನು ನಿನ್ನಾಣೆ ಏನೊಂದ ನಾನಿರಿವೆನು..ನಿನ್ನಾಣೆ ನಿಜವನ್ನೆ ನಾ ನುಡಿವೆನು ನನ್ನವರಾರು ನನಗಿಲ್ಲ..ನೀನಲ್ಲದೆ ಬೇರೆ ಗತಿ ಇಲ್ಲ ನನ್ನಲಿ ಏಕೆ ಕೃಪೆ ಇಲ್ಲ..ಗುರುರಾಯನೆ ನೀನೆ ನನಗೆಲ್ಲ ನನ್ನವರಾರು ನನಗಿಲ್ಲ..ನೀನಲ್ಲದೆ ಬೇರೆ ಗತಿ ಇಲ್ಲ ನನ್ನಲಿ ಏಕೆ ಕೃಪೆ ಇಲ್ಲ..ಗುರುರಾಯನೆ ನೀನೆ ನನಗೆಲ್ಲ ನನ್ನವರಾರು ನನಗಿಲ್ಲ ---------------------೧---------------------- ಹೊಸ ಹೊಸ ಆಸೆಯು ದಿನವೆಲ್ಲ..ಈ ಮನವನು ಹಿಂಡಿದೆ ಸುಖವಿಲ್ಲ ಹೊಸ ಹೊಸ ಆಸೆಯು ದಿನವೆಲ್ಲ..ಈ ಮನವನು ಹಿಂಡಿದೆ ಸುಖವಿಲ್ಲ ಮೂಡುವ ಬಯಕೆಗೆ ಕೊನೆಯಿಲ್ಲ..ಮೂಡುವ ಬಯಕೆಗೆ ಕೊನೆಯಿಲ್ಲ ಅದು ಮುಗಿಯದೆ ಶಾಂತಿಯು ನನಗಿಲ್ಲ ನನ್ನವರಾರು ನನಗಿಲ್ಲ..ನೀನಲ್ಲದೆ ಬೇರೆ ಗತಿ ಇಲ್ಲ ನನ್ನಲಿ ಏಕೆ ಕೃಪೆ ಇಲ್ಲ..ಗುರುರಾಯನೆ ನೀನೆ ನನಗೆಲ್ಲ ನನ್ನವರಾರು ನನಗಿಲ್ಲ ----------------------೨---------------------- ಕತ್ತಲೆ ತುಂಬಿದೆ ಇಲ್ಲೆಲ್ಲ..ನೀ ಬೆಳಕನು ತೋರದೆ ಬದುಕಿಲ್ಲ ಕತ್ತಲೆ ತುಂಬಿದೆ ಇಲ್ಲೆಲ್ಲ..ನೀ ಬೆಳಕನು ತೋರದೆ ಬದುಕಿಲ್ಲ ಕಂಬನಿ ಮಿಡಿದರು ಯಾರಿಲ್ಲ..ಕಂಬನಿ ಮಿಡಿದರು ಯಾರಿಲ್ಲ ನಿನ್ನ ಬೆಂಬಲವಿಲ್ಲದೆ ಸುಖವಿಲ್ಲ ನನ್ನವರಾರು ನನಗಿಲ್ಲ..ನೀನಲ್ಲದೆ ಬೇರೆ ಗತಿ ಇಲ್ಲ ನನ್ನಲಿ ಏಕೆ ಕೃಪೆ ಇಲ್ಲ..ಗುರುರಾಯನೆ ನೀನೆ ನನಗೆಲ್ಲ ನನ್ನವರಾರು ನನಗಿಲ್ಲ ----------------------೩------------------------ ನೊಂದೆನು ನಾನು ಬಾಳೆಲ್ಲ..ಈ ಕಂದನ ನೆನಪು ಏಕಿಲ್ಲ ನೊಂದೆನು ನಾನು ಬಾಳೆಲ್ಲ..ಈ ಕಂದನ ನೆನಪು ಏಕಿಲ್ಲ ನೆಮ್ಮದಿಯೊಂದನೆ ಬೇಡುವೆನು..ನೆಮ್ಮದಿಯೊಂದನೆ ಬೇಡುವೆನು ನೀ ನೀಡದೆ ಹೋದರೆ ನಾನಿಲ್ಲ ನನ್ನವರಾರು ನನಗಿಲ್ಲ..ನೀನಲ್ಲದೆ ಬೇರೆ ಗತಿ ಇಲ್ಲ ನನ್ನಲಿ ಏಕೆ ಕೃಪೆ ಇಲ್ಲ..ಗುರುರಾಯನೆ ನೀನೆ ನನಗೆಲ್ಲ ಗುರುರಾಯನೆ ನೀನೆ ನನಗೆಲ್ಲ..ಗುರುರಾಯನೆ ನೀನೆ ನನಗೆಲ್ಲ ಮನವ ಮಂತ್ರಾಲಯವ ಮಾಡಿ...ಹೃದಯ ಬೃಂದಾವನವ ಮಾಡಿ ಭಕ್ತಿ ಎನ್ನುವ ತುಂಗೆಯಲ್ಲಿ..ಈಜುತಿರುವ ಸಮಯದಲ್ಲಿ.. ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು -----------------------೧---------------------- ಉಸಿರು ಉಸಿರಲಿ ರಾಘವೇಂದ್ರನ ಸ್ಮರಣೆ ಬೆರೆತಿರಲಾಗ.. ಉಸಿರು ಉಸಿರಲಿ ರಾಘವೇಂದ್ರನ ಸ್ಮರಣೆ ಬೆರೆತಿರಲಾಗ ಪ್ರಭೆಯಲಿ ಗುರುವು ಕಾಣಿಸುವ..ಬ್ರಹ್ಮಾನಂದ ತೋರಿಸುವ ಮನವ ಮಂತ್ರಾಲಯವ ಮಾಡಿ...ಹೃದಯ ಬೃಂದಾವನವ ಮಾಡಿ ಭಕ್ತಿ ಎನ್ನುವ ತುಂಗೆಯಲ್ಲಿ..ಈಜುತಿರುವ ಸಮಯದಲ್ಲಿ.. ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು ----------------------೨----------------------- ಮಡಿಗೆ ಪೂಜೆಗೆ ಒಲಿಯದಾತನ...ಮಂತ್ರ ತಂತ್ರಕೆ ಸೋಲದಾತನ.. ಮಡಿಗೆ ಪೂಜೆಗೆ ಒಲಿಯದಾತನ...ಮಂತ್ರ ತಂತ್ರಕೆ ಸೋಲದಾತನ ಭಕ್ತಿ ಗೆಲ್ಲುವುದು ಚಿತ್ತ ಶುದ್ಧಿ ನಿಲಿಸುವುದು ಮನವ ಮಂತ್ರಾಲಯವ ಮಾಡಿ...ಹೃದಯ ಬೃಂದಾವನವ ಮಾಡಿ ಭಕ್ತಿ ಎನ್ನುವ ತುಂಗೆಯಲ್ಲಿ..ಈಜುತಿರುವ ಸಮಯದಲ್ಲಿ.. ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು ----------------------೩------------------------- ನಿತ್ಯ ನಿರ್ಮಲ ಭಾವ ತುಂಬಿದ.. ಉತ್ತಮೋತ್ತಮ ಗುಣವ ಹೊಂದಿದ ಸತ್ಯ ಸುಂದರನು ದರುಷನ ನೀಡಿ ಹರಸುವನು ನಿತ್ಯ ನಿರ್ಮಲ ಭಾವ ತುಂಬಿದ ಉತ್ತಮೊತ್ತಮ ಗುಣವ ಹೊಂದಿದ ಸತ್ಯ ಸುಂದರನು ದರುಷನ ನೀಡಿ ಹರಸುವನು ಮನವ ಮಂತ್ರಾಲಯವ ಮಾಡಿ...ಹೃದಯ ಬೃಂದಾವನವ ಮಾಡಿ ಭಕ್ತಿ ಎನ್ನುವ ತುಂಗೆಯಲ್ಲಿ..ಈಜುತಿರುವ ಸಮಯದಲ್ಲಿ.. ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು..ಕಂಗಳ ಕಾಂತಿ ತುಂಬುವುದು..ಕಂಗಳ ಕಾಂತಿ ತುಂಬುವುದು ಹಗಲು ರಾತ್ರಿ ಮನಸು ಗುರುವೆ ನಿನ್ನ ಭಜಿಸಿದೆ ಹಸಿವು ನಿದ್ರೆ ತೊರೆದು ನಿನ್ನ ನಾಮ ಜಪಿಸಿದೆ ಹಗಲು ರಾತ್ರಿ ಮನಸು ಗುರುವೆ ನಿನ್ನ ಭಜಿಸಿದೆ ಹಸಿವು ನಿದ್ರೆ ತೊರೆದು ನಿನ್ನ ನಾಮ ಜಪಿಸಿದೆ ಕಾಮಕ್ರೋಧ ಗೆಲ್ಲಲೆಂದು ಶಕ್ತಿ ಬೇಡಿದೆ...ನಿನ್ನ ಪಾದ ಕಮಲದಲ್ಲಿ ಶಾಂತಿ ಹುಡುಕಿದೆ ಪೊರೆಯೋ* ಗುರುವೆ..ಭಾಗ್ಯದ ದೊರೆಯೆ...ಗುರುರಾಘವೇಂದ್ರ..ಯೋಗೇಂದ್ರ ----------------------೧----------------------- ತುಂಗಾ ನದಿಯ ಬಂಡೆಮೇಲೆ ಪಾದುಕೆ ನಾದ ಅದ ಕೇಳಿದಾಗ ತೇಲಿ ಬಂತು ಭಕ್ತಿ ನಿನಾದ ತುಂಗಾ ನದಿಯ ಬಂಡೆಮೇಲೆ ಪಾದುಕೆ ನಾದ ಅದ ಕೇಳಿದಾಗ ತೇಲಿ ಬಂತು ಭಕ್ತಿ ನಿನಾದ ಮಂತ್ರಾಲಯದ ಮಣ್ಣಿನ ಕಣಕಣವೆಲ್ಲ..ನಿನ್ನ ಪಾದ ಮಹಿಮೆಯ ಕಂಡಿವೆಯಲ್ಲ ಕರುಣಿಸೊ ಗುರುವೆ ಭಾಗ್ಯದ ಪ್ರಭುವೆ..ಗುರುರಾಘವೇಂದ್ರ..ಯೋಗೇಂದ್ರ ----------------------೨----------------------- ವಿದ್ಯೆ ಕಾಣದಂತ ಮೂಢ ಜ್ಞಾನವ ಪಡೆದ ಸತ್ತು ಹೋದ ಕಂದನಂದು ಮತ್ತೆ ಬದುಕಿದ ಆಂಗ್ಲರ ಅಧಿಕಾರಿಯೇ ನಿನ್ನ ಕಂಡು ಬೆರಗಾದ ಮಾಂಸ ಮಲ್ಲಿಗೆಯಾಯ್ತು ನಿನ್ನ ದೃಷ್ಟಿ ಇಂದ ಒಂದೆ ಎರಡೆ ಪವಾಡವು ಗುರುವೆ ನಿನ್ನದು..ಒಂದೆ ಎರಡೆ ಪವಾಡವು ಗುರುವೆ ನಿನ್ನದು ನಿನ್ನ ಸೇವೆ ಮಾಡಿ ನಲೆವ ಪುಣ್ಯ ನನ್ನದು ಮಹಿಮೇಯು ನಿನದೆ..ಆ ಹಿರಿಮೆಯು ನಿನದೆ...ಗುರುರಾಘವೇಂದ್ರ..ಯೋಗೇಂದ್ರ ರಾಘವೇಂದ್ರ..ಗುರುರಾಘವೇಂದ್ರ ರಾಘವೇಂದ್ರ..ಗುರುರಾಘವೇಂದ್ರ..ಗುರುರಾಘವೇಂದ್ರ..ಗುರುರಾಘವೇಂದ್ರ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ಋತಾಯಚ ಭಜತಾಂ ಕಲ್ಪವ್ರುಕ್ಶಾಯ ನಮತಾಂ ಕಾಮಧೇನವೆ....ನಮತಾಮ್ ಕಾಮಧೇನವೆ.... ರಾಘವೇಂದ್ರ ರಾಘವೇಂದ್ರ ರಾಘವೇಂದ್ರನೆನ್ನಿರಿ ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ ರಾಘವೇಂದ್ರ ರಾಘವೇಂದ್ರ ರಾಘವೇಂದ್ರನೆನ್ನಿರಿ ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ -----------------೧------------------------- ತಂದೆ ತಾಯಿ ಬಂಧು ಬಳಗ ಎಲ್ಲ ನೀನೆ ಎನ್ನಿರಿ ನಾನು ಎಂಬ ಮೋಹ ಮರೆತು ಎಂದು ಅವನ ನಂಬಿರಿ ತಂದೆ ತಾಯಿ ಬಂಧು ಬಳಗ ಎಲ್ಲ ನೀನೆ ಎನ್ನಿರಿ ನಾನು ಎಂಬ ಮೋಹ ಮರೆತು ಎಂದು ಅವನ ನಂಬಿರಿ ಹೇಗೆ ಇರಲಿ ಎಲ್ಲೆ ಇರಲಿ...ಅವನ ಸ್ಮರಣೆ ಮಾಡಿರಿ ಧ್ಯಾನದಿಂದ ಮನವ ಸುಡುವ ಚಿಂತೆ ದೂರ ಮಾಡಿರಿ ರಾಘವೇಂದ್ರ ರಾಘವೇಂದ್ರ ರಾಘವೇಂದ್ರನೆನ್ನಿರಿ ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ *ಕೋರಸ್* -----------------೨-------------------------- ಮಾನ ಪ್ರಾಣ ಧನವು ಎಲ್ಲ ಸ್ವಾಮಿ ನಿನ್ನದೆನ್ನಿರಿ ಗುರುವೆ ನಿನ್ನ ಕರುಣೆಯೊಂದೆ ಸಾಕು ನನಗೆ ಎನ್ನಿರಿ ಮಾನ ಪ್ರಾಣ ಧನವು ಎಲ್ಲ ಸ್ವಾಮಿ ನಿನ್ನದೆನ್ನಿರಿ ಗುರುವೆ ನಿನ್ನ ಕರುಣೆಯೊಂದೆ ಸಾಕು ನನಗೆ ಎನ್ನಿರಿ ಕಲ್ಲು ಮುಳ್ಳೊ ಸಿಡಿಲೊ ಮಳೆಯೊ ಅವನ ಕರುಣೆಯೆನ್ನಿರಿ ಏನೆ ಬರಲಿ ಅವನದೆಂದು ನಂಬಿ ಮುಂದೆ ನಡೆಯಿರಿ ರಾಘವೇಂದ್ರ ರಾಘವೇಂದ್ರ ರಾಘವೇಂದ್ರನೆನ್ನಿರಿ ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ *ಕೋರಸ್* -------------------೩------------------------- ನಿಮ್ಮ ಮನೆಯ ನಿಮ್ಮ ಮನದ ವಿಶಯವೆಲ್ಲ ಬಲ್ಲನು ಚಪಲದಿಂದ ಅಲೆವ ಮನದಲೆಂದು ಗುರುವು ನಿಲ್ಲನು ನಿಮ್ಮ ಮನೆಯ ನಿಮ್ಮ ಮನದ ವಿಶಯವೆಲ್ಲ ಬಲ್ಲನು ಚಪಲದಿಂದ ಅಲೆವ ಮನದಲೆಂದು ಗುರುವು ನಿಲ್ಲನು ಕೊಡುವುದೆಲ್ಲ ಕೊಡುವನವನು ಇನ್ನು ಆಸೆಯೇತಕೆ ಕಲ್ಪವೃಕ್ಷದಂತೆ ಗುರುವು ಇರಲು ಚಿಂತೆಯೇತಕೆ ರಾಘವೇಂದ್ರ ರಾಘವೇಂದ್ರ ರಾಘವೇಂದ್ರನೆನ್ನಿರಿ ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ *ಕೋರಸ್* ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ಋತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ....ನಮತಾಮ್ ಕಾಮಧೇನವೆ.... ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು ಚಿಂತೆಕಳೆದು ನಿಶ್ಚಿಂತೆಯಿಂದ..ಚಿಂತೆಕಳೆದು ನಿಶ್ಚಿಂತೆಯಿಂದ ಇರುವಂತೆ ಮಾಡುವ ಚಿಂತಾಮಣಿಯಿರೆ ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು ----------------------೧--------------------------- ಭೀತಿಯೇಕೆ ಮನವೆ..ಗುರುರಾಯ ಬಳಿಯಲ್ಲಿ ಇರಲು ಭೀತಿಯೇಕೆ ಮನವೆ..ಗುರುರಾಯ ಬಳಿಯಲ್ಲಿ ಇರಲು ಭೀತಿ ಕಳೆದು ನಿರ್ಭೀತಿಯಿಂದ..ಭೀತಿ ಕಳೆದು ನಿರ್ಭೀತಿಯಿಂದ ಇರುವಂತೆ ಮಾಡುವ..ಗುರುರಾಯನಿರಲು ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು -----------------------೨----------------------- ದುಖಃ ವೇತಕೆ ಮನವೆ... ದುಖಃ ವೇತಕೆ ಮನವೆ..ಸದ್ಗುರುನಾಮ ನಿನ್ನಲ್ಲಿರಲು ದುಖಃ ವೇತಕೆ ಮನವೆ..ಸದ್ಗುರುನಾಮ ನಿನ್ನಲ್ಲಿರಲು ದುಖಃ ಕಳೆದು ಸುಖನೀಡಲೆಂದೆ..ದುಖಃ ಕಳೆದು ಸುಖನೀಡಲೆಂದೆ ಗುರುಸಾರ್ವಭೌಮನು ಇರುವಾಗ ನಿನಗೆ ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು ----------------------೩------------------------ ಮುಳುಗಬೇಡ ಮನವೆ..ಆಸೆಯ ಕಡಲಲ್ಲಿ ನೀನು ಮುಳುಗಬೇಡ ಮನವೆ..ಆಸೆಯ ಕಡಲಲ್ಲಿ ನೀನು ತಾವರೆ ಎಲೆಯು ಜಲರಾಶಿಯಲ್ಲಿ..ತಾವರೆ ಯೆಲೆಯು ಜಲರಾಶಿಯಲ್ಲಿ ಇರುವಂತೆ ನೀನಿರೆ ಗುರುರಾಜ ಮೆಚ್ಚುವ ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು ಚಿಂತೆಕಳೆದು ನಿಶ್ಚಿಂತೆಯಿಂದ..ಚಿಂತೆಕಳೆದು ನಿಶ್ಚಿಂತೆಯಿಂದ ಇರುವಂತೆ ಮಾಡುವ ಚಿಂತಾಮಣಿಯಿರೆ ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು ಗುರುರಾಘವೇಂದ್ರನಿರಲು..ಗುರುರಾಘವೇಂದ್ರನಿರಲು

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ