Skip to main content

*ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ಗುರು:-

ಗುರು:- ನಿರುತ್ಸಾಹ,ಚಂಚಲತೆ,ನಾಸ್ತಿಕತೆ,ನಿರಾಸೆ,ದುಗುಡ,ದುಖಃ,ಆರ್ಥಿಕ ತೊಂದರೆಗಳು,ಅನುಕಂಪ ರಹಿತವರ್ತನೆ,ದಬ್ಬಾಳಿಕೆ,ಸಂತಾನ ಇಲ್ಲದಿರುವಿಕೆ,ಇದ್ದರೂ ಅವರಿಗೆ ಕಷ್ಟಗಳು,ನಿರ್ವೀರ್ಯತೆ,ದೇಹವು ಕೃಷಗೊಳ್ಳುವುದು,ನರಗಳು ಮತ್ತು ಕೋಶಗಳು ಅಸಮರ್ಪಕವಾಗಿ ಕೆಲಸಮಾಡುವಿಕೆ,ಸದಾರೋಗಿ,ಮನೆಯಲ್ಲಿಟ್ಟ ಬಂಗಾರವು ಕಳವಾಗುವುದು ಅಥವ ಆಭರಣಗಳನ್ನು ಮಾರುವುದು,*ಅನಿರೀಕ್ಷಿತವಾಗಿ ವಿದ್ಯಾಬ್ಯಾಸವು ನಿಂತುಹೋಗುವುದು,*ಧರ್ಮದಲ್ಲಿ ಅನಾಸಕ್ತಿ,ಪತ್ನಿ ಅಥವ ಮಕ್ಕಳಿಗೆ ಅನಾರೋಗ್ಯ,ಸಂಪತ್ತು ಬರುವುದರಲ್ಲಿ ಅಡಚಣೆ,ಸಂತಾನದಿಂದ ಸುಖವಿಲ್ಲದಿರುವಿಕೆ,ಮದುವೆಯು ತಡವಾಗುವಿಕೆ,ಶೀಘ್ರ ಸ್ಖಲನ,ವಿಧವೆ ಅಥವ ಕೀಳು ಹೆಂಗಸಿನ ಸಂಪರ್ಕ,ಜಾತಕರ ತಂದೆಗೆ ಉಸಿರಾಟದ ತೊಂದರೆ ಅಥವ ಮಾನಸಿಕ ತೊಳಲಾಟ.ಕಿವಿನೋವು,ಮಧುಮೇಹತೊಂದರೆ,ಕಾಮಾಲೆ ಅಥವ ಮೂತ್ರ ಪಿಂಡತೊಂದರೆ, ಮಗಳ ಮದುವೆಗೆ ಅಡಚಣೆಗಳು.ವ್ಯಾಪಾರದಲ್ಲಿ ನಷ್ಟವಾಗುವಿಕೆ. ಪರಿಹಾರಗಳು:- *ಇಂದ್ರನನ್ನು ಆರಾಧಿಸಿ. *ಸಂತರನ್ನು,ಹಿರಿಯರನ್ನು,ಹೆಂಗಸರನ್ನು,ಹೆಣ್ಣುಮಕ್ಕಳನ್ನು ಆದರಿಸಿ, *ಬಂಗಾರದ ಸರವನ್ನು ಕೊರಳಲ್ಲಿ ಹಾಕಿಕೊಳ್ಳಿರಿ. *ದೇವಾಲಯಗಳಿಗೆ ನಿತ್ಯವೂ ಹೋಗಿಬನ್ನಿ. *ಸಿಧೂರವನ್ನು ಹಣೆಗೆ ತಿಲಕವಾಗಿ ಇಟ್ಟುಕೊಳ್ಳಿ. *ಕೊಟ್ಟ ಮಾತನ್ನು ಉಳಿಸಿಕೊಳ್ಳೀ. *ಗುರುವಾರಗಳಂದು ಪತ್ನಿಯು ಉಪವಾಸವನ್ನು ಮಾಡಾಬೇಕು. *ಮಕ್ಕಳಿಂದ ತೊಂದರೆ ಇದ್ದಲ್ಲಿ ವಿಷ್ಣುವನ್ನು ಪೂಜಿಸಿ. *ತಂದೆಗೆ ಅನಾರೋಗ್ಯ ಇದ್ದರೆ ಹರಿಯುವ ನೀರಲ್ಲಿ ೪೫ ದಿನಗಳ ಕಾಲ ತಾಮ್ರದ ನಾಣ್ಯವನ್ನು ಹಾಕಿರಿ. *ದಾಂಪತ್ಯದಿಂದ ಹೊರಗೆ ಸಂಬಂದಗಳನ್ನು ಇಟ್ಟುಕೊಳ್ಳಬೇಡಿ. *ಅಶ್ವತ್ತ ವೃಕ್ಷಕ್ಕೆ ೮ ಗುರುವಾರಗಳು ಅರಿಸಿನದ ದಾರವನ್ನು ೮ ಸುತ್ತು ಕಟ್ಟಿ. *ಗುರುವು ೭ರಲ್ಲಿ ಅಶುಭನಾಗಿದ್ದರೆ ಹಳದಿ ವಸ್ತ್ರವನ್ನು ಅರ್ಚಕರಿಗೆ ದಾನಮಾಡಿ *ಸೂರ್ಯ ಗ್ರಹಣದಲ್ಲಿ,ಬಾದಾಮಿ,ಸಿಪ್ಪೆ ಸಹಿತ ತೆಂಗಿನಕಾಯಿ ಮತ್ತು ಕಪ್ಪು ಉದ್ದಿನಕಾಳು ದಾನ ಮಾಡಿ. *ಮಗಳ ಮದುವೆಯಲ್ಲಿ ೨ ಒಂದೇ ಸಮನಾದ ಬಂಗಾರದ ನಾಣ್ಯಗಳನ್ನು ಮಾಡಿಸಿ ಒಂದನ್ನು ಹರಿಯುವ ನೀರಲ್ಲಿ ಹಾಕಿ,ಮತ್ತೊಂದನ್ನು ಮಗಳಿಗೆ ನೀಡಿ ಸದಾ ಕಾಲ ಜೋಪಾನವಾಗಿ ಅದನ್ನು ತಮ್ಮ ಬಳಿ ಇಟ್ಟುಕೊಳ್ಳುವಂತೆ ಮಾಡಿರಿ. *ಗುರುವು ಅಸ್ತನಾಗಿದ್ದರೆ ೪೦೦ಗ್ರಾಂ ಬೆಲ್ಲ ಅಥವ ಗೋಧಿಯನ್ನು ಭಾನುವಾರ ಹರಿಯುವ ನೀರಲ್ಲಿ ಹಾಕಿ. *ಬುಧನೊಡನೆ ಗುರುವಿದ್ದರೆ ಬುಧನಿಗೆ ಸಂಬಂದಿಸಿದ ವಸ್ತುಗಳನ್ನು ದಾನಮಾಡಿ. *ಗುರುಗಳ ಸೇವೆಯನ್ನು ಮಾಡಿರಿ. *ಓದುವ ಮಕ್ಕಳಿಗೆ ಉಚಿತ ಪಠ್ಯ,ಪಾಠಪ್ರವಚನಗಳನ್ನು ಮಾಡಿ. *ಗುರುಕುಲ,ಮಠಗಳಲ್ಲಿ ಪುಸ್ತಕ,ಪೆನ್ನು,ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ