Skip to main content

ಕಾಲಗಣನೆ – ಯುಗಗಳು, ಮನ್ವಂತರಗಳು

ಕಾಲಗಣನೆ – ಯುಗಗಳು, ಮನ್ವಂತರಗಳು ಯುಗಗಳ ಗಣನೆ ಎರಡು ಪ್ರಕಾರದ್ದಾಗಿರುತ್ತದೆ. ವೇದಾಂಗ ಜ್ಯೋತಿಷ್ಯದಲ್ಲಿ ಐದು ವರ್ಷಗಳ ಯುಗ ಪರಿಕಲ್ಪನೆ ಇದೆ. ಆದರೆ ಈ ಲೇಖನದಲ್ಲಿ ಹೆಚ್ಚು ಪ್ರಖ್ಯಾತವಾದ ಪಂಚಾಂಗಗಣಿತರೀತ್ಯಾ ಬಳಕೆಯಲ್ಲಿರುವ ಯುಗಮಾನಗಳನ್ನು ನೋಡಲಿದ್ದೇವೆ. ನಾಲ್ಕು ಯುಗಗಳಿವೆ. ಅವುಗಳ ವರ್ಷಪ್ರಮಾಣ ಅಘಾದವಷ್ಟೇ ಅಲ್ಲ ಆಶ್ಚರ್ಯಕಾರಕವೂ ಆಗಿದೆ. ವೈದಿಕ ಶಾಸ್ತ್ರಗಳನ್ನು ಬಿಟ್ಟು ಜಗತ್ತಿನ ಯಾವುದೇ ಬೇರೆ ಸಭ್ಯತೆಗಳಲ್ಲಾಗಲಿ, ಧರ್ಮಗ್ರಂಥಗಲ್ಲಾಗಲಿ ಇಷ್ಟು ಅಗಾಧ ಮೊತ್ತದ ಸಂಖ್ಯೆಗಳು ಕಂಡುಬರುವುದಿಲ್ಲ. ಕಾಲಕ್ಕೆ ಆದಿ ಮತ್ತು ಅಂತ್ಯಗಳು ಇಲ್ಲ ಎಂಬ ಚಿಂತನೆಯೆ ಈ ಗಣಿತಕ್ಕೆ ತಳಹದಿಯಾಗಿರುತ್ತದೆ. ಕಾಲಚಕ್ರ ಎಂಬುವುದು ಎಂದಿಗೂ ನಿಲ್ಲದ, ನಿರಂತರ ತಿರುಗುತ್ತಿರುವ ಚಿತ್ರಣ ನಮ್ಮ ವೈದಿಕ ಶಾಸ್ತ್ರಗಳು ನಮಗೆ ಕೊಡುತ್ತವೆ. ಚತ್ವಾರಿ ಭಾರತೇ ವರ್ಷೇ ಯುಗಾನಿ ಕವಯೋsಭ್ರುವನ್ | ಕೃತಂ ತ್ರೇತಾ ದ್ವಾಪರಂ ಚ ಕಲಿಶ್ಚೇತಿ ಚತುಷ್ಟಯಮ್ || (ಬ್ರಹ್ಮಾಂಡ ಪುರಾಣ ೨೯-೩೨) ಕೃತಯುಗ (ಸತ್ಯಯುಗ), ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ – ಎಂಬ ನಾಲ್ಕು ಯುಗಗಳು ಭರತಖಂಡದಲ್ಲಿವೆ ಎಂದು ಜ್ಞಾನಿಗಳು ಹೇಳಿರುತ್ತಾರೆ. ಈ ನಾಲ್ಕು ಯುಗಗಳನ್ನು ಸೇರಿಸಿ ಒಂದು “ಮಹಾಯುಗ’ ಅಥವಾ ಕೇವಲ “ಯುಗ’ ಎಂಬ ಸಂಜ್ಞೆಯಿಂದ ಕರೆಯುತ್ತಾರೆ. ಯುಗಗಳ ಪ್ರಮಾಣ : ಯುಗಗಳ ಗಣಿತವು ಎರಡು ಮಾನಗಳಿಂದ ಮಾಡಬಹುದಾಗಿದೆ ದೇವತಾಮಾನ ಮತ್ತು ಮನುಷ್ಯಮಾನ. ಪುರಾಣಗಳು ದೇವತಾಮಾನದ ಎಣಿಕೆಯನ್ನು ಹೇಳಿವೆ. ನಾಲ್ಕು ಪ್ರಕಾರದ ದಿವಸಗಳ ಜ್ಞಾನ ಈ ಮಾನದ ತಿಳುವಳಿಕೆಗೆ ಅವಶ್ಯಕ, ಆದ್ದರಿಂದ ಈ ಮಾನದ ಎಣಿಕೆಯ ಪದ್ಧತಿಯನ್ನು ಮುಂದಿನ ಲೇಖನಗಳಲ್ಲಿ ಹೇಳಲಿದ್ದೇನೆ, ಪ್ರಸಕ್ತ ನಾವು ಸುಲಭವಾದ ಮನುಷ್ಯಮಾನವನ್ನು ನೋಡೋಣ. ದ್ವಾತ್ರಿಂಶದ್ಭಿಃ ಸಹಸ್ರೈಶ್ಚ ಯುಕ್ತಂ ಲಕ್ಷಚತುಷ್ಟಯಮ್ | ಪ್ರಮಾಣಂ ಕಲಿವರ್ಷಾಣಾಂ ಪ್ರೋಕ್ತಂ ಪೂರ್ವಮಹರ್ಷಿಭಿಃ || ಯುಗಾನಾಂ ಕೃತಮುಖ್ಯಾನಾಂ ಕ್ರಮಾನ್ಮಾನಂ ಪ್ರಜಾಯತೆ | ಕಲೇರ್ಮಾನಂ ಕ್ರಮಾನ್ನಿಘ್ನಂ ಚತುಸ್ತ್ರಿದ್ವಿಮಿತೈಸ್ತದಾ || ಪೂರ್ವಾಚಾರ್ಯರ ಮತದಂತೆ ಕಲಿಯುಗದ ಪ್ರಮಾಣವು 4,32,000 ವರ್ಷಗಳಷ್ಟಾಗಿದೆ. ಈ ಕಲಿಯುಗ ವರ್ಷಗಳನ್ನು ಒಂದು ಗುಣಕವನ್ನಾಗಿ ಪರಿಗಣಿಸಿ ಇದಕ್ಕೆ ಕ್ರಮವಾಗಿ 4,3,2 ರಿಂದ ಗುಣಿಸಿದರೆ ಕ್ರಮವಾಗಿ ಕೃತ, ತ್ರೇತಾ, ದ್ವಾಪರಯುಗಗಳ ವರ್ಷಸಂಖ್ಯೆಗಳು ದೊರೆಯುತ್ತದೆ. ಕಲಿಯುಗ ಮಾನ 4,32,000 ವರ್ಷಗಳು. ಕೃತಯುಗ 4,32,000 X 4 = 17,28,000 ತ್ರೇತಾಯುಗ 4,32,000 X 3 = 12,96,000 ದ್ವಾಪರಯುಗ 4,32,000 X 2 = 8,64,000 ಕಲಿಯುಗ 4,32,000 X 1 = 4,32,000 ——————————————————— ೧ ಮಹಾಯುಗ 4,32,000 X 10 = 43,20,000 ಮೇಲೆ ಹೇಳಿರುವಂತೆ ಒಂದು ಮಹಾಯುಗವು ನಾಲ್ಕು ಯುಗಗಳ ಮೊತ್ತವಾಗಿರುತ್ತದೆ. ಜ್ಯೋತಿಷ್ಯ ಗ್ರಂಥಗಳಲ್ಲಿ ಮಹಾಯುಗಕ್ಕೆ ಕೇವಲ “ಯುಗ’ ಎಂತಲೂ, ಕೃತಾದಿ ಚತುರ್ಯುಗಗಳನ್ನು “ಯುಗಾಂಘ್ರಿ’ ಎಂದು ಸಂಬೋಧಿಸಲಾಗಿದೆ. ಮೇಲೆ ಹೇಳಲ್ಪಟ್ಟಿರುವ ಎಲ್ಲ ವರ್ಷಗಣನೆ “ಸೌರವರ್ಷ” ಪ್ರಮಾಣದಲ್ಲಿರುತ್ತದೆ. ಪ್ರತಿಯುಗಗಳಿಗು ಅದರ ಪ್ರಮಾಣದ ಹನ್ನೆರಡನೆಯ ಭಾಗದಷ್ಟು ಪ್ರಾರಂಭ ಮತ್ತು ಅಂತ್ಯ ಸಂಧಿಗಳಿರುತ್ತವೆ. ಒಂದು ಯುಗವು ಮುಗಿದು ಮುಂದಿನ ಯುಗ ಪ್ರಾರಂಭವಾಗಬೇಕಾದಾಗ ಅದು ಮೊದಲನೇಯ ಯುಗ ಅಂತ್ಯಸಂಧಿಯಲ್ಲಿ ಹಾಗು ಮುಂದಿನದರ ಪ್ರಾರಂಭ ಸಂಧಿಯಲ್ಲಿ ಶುರುವಾಗುತ್ತದೆ. ಉದಾ: ಕಲಿವರ್ಷಗಳಾದ 4,32,000 ವರ್ಷಗಳಲ್ಲಿ ಅದರ ಹನ್ನೆರಡನೆಯ ಭಾಗವಾದ 36,000 ವರ್ಷಗಳಷ್ಟು ಪ್ರಮಾಣ ಕಲಿಯುಗ ಪ್ರಾರಂಭಕ್ಕೆ ಮತ್ತು ಅಂತ್ಯದಲ್ಲಿ ಸಂಧಿಕಾಲ ಇರುತ್ತದೆ. ಪ್ರಾರಂಭ ಮತ್ತು ಅಂತ್ಯ (36000+36000=72000) ಸಂಧಿವರ್ಷಗಳನ್ನು ಕಳೆದಾಗ ಉಳಿಯುವ 3,60,000 ವರ್ಷಗಳು ನಿಜವಾದ ಕಲಿಯುಗ. ಇದೇ ರೀತಿಯಾದ ವಿಧಾನ ಎಲ್ಲ ಯುಗಗಳಿಗೂ ಅನ್ವಯಿಸುತ್ತದೆ. ಯುಗ ಪ್ರಾರಂಭಸಂಧಿ + ನಿಜವರ್ಷ + ಅಂತ್ಯಸಂಧಿ = ಒಟ್ಟು ಕೃತಯುಗ 144000+1440000+144000 = 1728000 ತ್ರೇತಾಯುಗ 108000+1080000+108000 = 1296000 ದ್ವಾಪರಯುಗ 72000+720000+72000 = 864000 ಕಲಿಯುಗ 36000+360000+36000 = 432000 ಮನ್ವಂತರಗಳು : ಯುಗಾನಾಂ ಸಪ್ತತಿಃ ಸೈಕಾ ಭವನ್ತರಮಿಹೋಚ್ಯತೆ | ಕೃತಾಬ್ದಸಂಖ್ಯಾ ತಸ್ಯಾಂತೇ ಸಂಧಿಃ ಪ್ರೋಕ್ತೊ ಜಲಪ್ಲವಃ || 71 ಮಹಾಯುಗಗಳು ಸೇರಿ ಒಂದು ಮನ್ವಂತರವಾಗುತ್ತದೆ. ಒಂದು ಮನ್ವಂತರ ಮುಗಿದು ಮುಂದಿನ ಮನ್ವಂತರ ಶುರುವಾಗುವ ಮಧ್ಯದಲ್ಲಿ ಒಂದು ಕೃತಯುಗ ಪ್ರಮಾಣವರ್ಷದಷ್ಟು (1728000 ವರ್ಷ) ಸಮಯ ಸಂಧಿಕಾಲ (ವಿರಾಮಕಾಲ) ವಿರುತ್ತದೆ. ಈ ಸಂಧಿಕಾಲದಲ್ಲಿಯೇ ಜಲಪ್ರಳಯ ಉಂಟಾಗುತ್ತದೆ. 71 ಮಹಾಯುಗಗಳು = 71 X 43,20,000 ವರ್ಷಗಳು. 1 ಮನ್ವಂತರ = 30,67,20,000 ವರ್ಷಗಳು. 1 ಮನ್ವಂತರ ಸಂಧಿಕಾಲ = 17,28,000 ವರ್ಷಗಳು. ಪುರಾಣ-ಸಂಹಿತೆಗಳಲ್ಲಿ ಮನುಗಳ ಸಂಖ್ಯೆಯನ್ನು 14 ಎಂದು ಹೇಳಿದ್ದಾರೆ. ಈ ಮನುಗಳು ಆಯಾ ಮನ್ವಂತರಗಳ ಅಧಿಪತಿಗಳಾಗಿರುತ್ತಾರೆ. ಈ 14 ಮನುಗಳ ಹೆಸರುಗಳಲ್ಲಿ ಶಾಸ್ತ್ರಗಳಲ್ಲಿ ವಿವರ ಭೇದವಿದೆ. 14 ಮನುಗಳ ವಿವರ ಹೀಗೆ ಇದೆ - 1 – ಸ್ವಾಯಂಭುವ, 2 – ಸ್ವಾರೋಚಿಷ, 3 – ಉತ್ತಮ, 4 – ತಾಮಸ, 5 – ರೈವತ, 6 – ಚಾಕ್ಷುಷ, 7 – ವೈವಸ್ವತ, 8 – ಸಾವರ್ಣಿ, 9 – ದಕ್ಷಸಾವರ್ಣಿ, 10 – ಬ್ರಹ್ಮಸಾವರ್ಣಿ, 11 – ಧರ್ಮಸಾವರ್ಣಿ, 12 – ರುದ್ರಸಾವರ್ಣಿ, 13 – ದೇವಸಾವರ್ಣಿ (ರುಚಿ – ಪಾಠಾಂತರ), 14 – ಇಂದ್ರಸಾವರ್ಣಿ (ಭೂತಿ – ಪಾಠಾಂತರ). ಮೊದಲಿನ ಆರು ಮನ್ವಂತರಗಳು ಸಂದು ಈಗ ನಾವು ಎಳನೇಯದಾದ ವೈವಸ್ವತ ಮನ್ವಂತರದಲ್ಲಿ ಇದ್ದೇವೆ. ಈ ವೈವಸ್ವತ ಮನ್ವಂತರದಲ್ಲಿ 27 ಮಹಾಯುಗಗಳು ಮುಗಿದೆವೆ, 28ನೇಯ ಮಹಾಯುಗದ ಕಲಿಯುಗದ ಪ್ರಾರಂಭಸಂಧಿಯು ಸಧ್ಯ ನಡೆದಿದೆ. ಕಾಲಗಣನೆ – ಕಲ್ಪಗಣನೆ, ಪಿತಾಮಹ ಆಯುಃ ಪ್ರಮಾಣ ಸಮಸ್ತ ಚರಾಚರ ಜಗತ್ತಿನಲ್ಲಿ ಎಲ್ಲ ಜೀವ-ಜಡವಸ್ತುಗಳು, ಈ ಸಮಸ್ತ ಪ್ರಕೃತಿಯ ಸೃಷ್ಟಿಕರ್ತನಾದ ಎಲ್ಲ ಜೀವರುಗಳಲ್ಲಿ ಸರ್ವಶ್ರೇಷ್ಟನಾದ, ಪಿತಾಮಹ ಚತುರ್ಮುಖ ಬ್ರಹ್ಮದೇವನ ಒಂದು ದಿವಸಕಾಲವನ್ನು ‘ಕಲ್ಪ’ವೆಂದು ಕರೆಯಲಾಗಿದೆ. ಇದರ ಪ್ರಮಾಣ ಅಗಾಧವಾಗಿದೆ. ಇತ್ಥಂ ಯುಗಸಹಸ್ರೇಣ ಭೂತಸಂಹಾರಕಾರಕಃ | ಕಲ್ಪೋ ಬ್ರಾಹ್ಮಮಹಃ ಪ್ರೋಕ್ತಂ ಶರ್ವರೀ ತಸ್ಯ ತಾವತೀ || ಒಂದು ಸಹಸ್ರಮಹಾಯುಗಗಳ ಪ್ರಮಾಣದ ಕಾಲರಾಶಿಯನ್ನು ‘ಭೂತಸಂಹಾರಕ ಕಲ್ಪ‘ ಅಥವಾ ‘ಬ್ರಾಹ್ಮಕಲ್ಪ‘ವೆಂದು ಕರೆಯುತ್ತಾರೆ. ಇದು ಚತುರ್ಮುಖ ಬ್ರಹ್ಮದೇವನ ಒಂದು ಹಗಲಿನಷ್ಟಾಗಿದ್ದು, ರಾತ್ರಿಯ ಪ್ರಮಾಣವೂ ಇದರಷ್ಟೆ ಇರುತ್ತದೆ. ಸಮಸ್ತ ಜೀವರಾಶಿಗಳ, ಎಂದರೆ ಭೂತರಾಶಿಗಳ ಸಂಹಾರವು ಈ ಕಾಲಾಂತರದಲ್ಲಿ ಆಗುವುದರಿಂದ ‘ಭೂತಸಂಹಾರಕ‘ ಎಂದು ಇದನ್ನು ಕರೆಯಲಾಗುತ್ತದೆ. 1000 ಮಹಾಯುಗಗಳು = 1000×43,20,000 ವರ್ಷಗಳು = 4320000000 ವರ್ಷಗಳು ಇದು ಚತುರ್ಮುಖನ ಒಂದು ಹಗಲಿನ ಪ್ರಮಾಣ, ಇದರಷ್ಟೆ ಪ್ರಮಾಣದ ರಾತ್ರಿ, ಆದ್ದರಿಂದ ಚತುರ್ಮುಖ ಬ್ರಹ್ಮದೇವನ ಒಂದು ದಿನ (ಹಗಲು+ರಾತ್ರಿ) 8640000000 ವರ್ಷಗಳಷ್ಟು ಆಗಿರುತ್ತದೆ. ಸಸಂಧಯಸ್ತೇ ಮನವಃ ಕಲ್ಪೇ ಜ್ಞೇಯಾಶ್ಚತುರ್ದಶ | ಕೃತಪ್ರಮಾಣಃ ಕಲ್ಪಾದೌ ಸಂಧಿಃ ಪಂಚದಶಃ ಸ್ಮೃತಃ || ಒಂದು ಕಲ್ಪಕಾಲದಲ್ಲಿ 14 ಮನ್ವಂತರಗಳು ಮತ್ತು 14 ಸಂಧಿಗಳು ಸೇರಿರುತ್ತವೆ. ಕಲ್ಪಾರಂಭದಲ್ಲಿ ಕೃತಯುಗಪ್ರಮಾಣದಷ್ಟು ಹೆಚ್ಚಿನ ಕಲ್ಪಾರಂಭಸಂಧಿಯೊಂದು ಸಹ ಸೇರಿರುತ್ತದೆ. ಮೇಲಿನ ಲೆಕ್ಖದ ಪ್ರಕಾರ 14 ಮನುವರ್ಷಗಳು (4294080000 ವರ್ಷಗಳು) ಮತ್ತು 15 ಸಂಧಿಗಳು (25920000 ವರ್ಷಗಳು) ಸೇರಿ 4320000000 ವರ್ಷಗಳಷ್ಟಾಗುತ್ತದೆ. ಈ ಕಾಲಮಾನ 1000 ಮಹಾಯುಗ ಪ್ರಮಾಣಕ್ಕೆ ಸಮವಾಗಿದೆ. ಬ್ರಾಹ್ಮೋ ನೈಮಿತ್ತಿಕೋ ನಾಮ ತಸ್ಯಾಂತೇ ಪ್ರತಿಸಂಚರಃ | ತದಾ ಹಿ ದಹ್ಯತೇ ಸರ್ವಂ ತ್ರೈಲೋಕ್ಯಂ ಭೂರ್ಭುವಾದಿಕಮ್ || (ವಿಷ್ಣು ಪುರಾಣ 1-3-22/23) ಚತುರ್ಮುಖ ಬ್ರಹ್ಮದೇವನ ಹಗಲಿನ ಕಡೆಯಲ್ಲಿ ಪ್ರಳಯವಾಗುತ್ತದೆ. ಬ್ರಹ್ಮಸಂಬಂಧಿಯಾದ್ದರಿಂದ ಈ ಪ್ರಳಯಕ್ಕೆ ‘ಬ್ರಾಹ್ಮ‘ ಎಂಬ ನೈಮಿತ್ತಿಕವಾದ ಹೆಸರು. ಈ ಪ್ರಳಯದಲ್ಲಿ ಭೂಲೋಕ, ಭುವರ್ಲೋಕ, ಸುವರ್ಲೋಕಗಳೆಂಬ ಲೋಕತ್ರಯಗಳು ನಾಶವಾಗಿ ಹೋಗುತ್ತ್ತವೆ. ತತ್ಪ್ರಮಾಣಂ ಹಿ ತಾಂ ರಾತ್ರಿಂ ತದಂತೇ ಸೃಜತೇ ಪುನಃ || (ವಿಷ್ಣು ಪುರಾಣ 1-3-25) ಹಗಲಿನಷ್ಟೆ ಪ್ರಮಾಣದ ರಾತ್ರಿಯನ್ನು ಕಳೆದು ಬ್ರಹ್ಮನು ಪುನಃ ಮತ್ತೆ ಸೃಷ್ಟಿಕಾರ್ಯದಲ್ಲಿ ತೊಡಗುತ್ತಾನೆ. ಮಹಾತ್ಮನಾದ ಬ್ರಹ್ಮದೇವನು ಪ್ರತಿನಿತ್ಯ ಸೃಷ್ಟಿಕಾರ್ಯವನ್ನು ಮಾಡುತ್ತಲೇ ಇರುತ್ತಾನೆ. ಸಹಸ್ರಯುಗಪರ್ಯಂತಮಹರ್ಯದ್ ಬ್ರಹ್ಮಣೋ ವಿದುಃ | ರಾತ್ರಿಂ ಯುಗಸಹಸ್ರಾಂತಾಂ ತೇಽಹೋರಾತ್ರವಿದೋ ಜನಾಃ || (ಗೀತಾ 8-17) ಬ್ರಹ್ಮದೇವನ ಒಂದು ಹಗಲು ಒಂದು ಸಾವಿರ ಚತುರ್ಯುಗಗಳ ಅವಧಿಯುಳ್ಳದ್ದು ಮತ್ತು ರಾತ್ರಿಯೂ ಸಹ ಒಂದು ಸಾವಿರ ಚತುರ್ಯುಗಗಳ ಅವಧಿಯುಳ್ಳದ್ದು ಎಂದು ಯಾರು ತತ್ತ್ವಶಃ ತಿಳಿಯುತ್ತಾರೋ ಅವರೇ ಅಹೋರಾತ್ರವಿದರಾಗಿರುತ್ತಾರೆ, ಎಂದರೆ ಕಾಲತತ್ತ್ವವನ್ನು ತಿಳಿದವರಾಗಿರುತ್ತಾರೆ. ಅವ್ಯಕ್ತಾದ್ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ | ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತಸಂಜ್ಞಕೇ || (ಗೀತಾ 8-18) ಬ್ರಹ್ಮದೇವನ ಹಗಲಿನ ಪ್ರಾರಂಭದಲ್ಲಿ ಎಲ್ಲ ಜೀವಿಗಳು ಅವ್ಯಕ್ತಸ್ಥಿತಿಯಿಂದ ಅಭಿವ್ಯಕ್ತಿ ಪಡೆಯುತ್ತಾರೆ; ಅನಂತರ ರಾತ್ರಿಯಾದಾಗ ಅವರು ಮತ್ತೆ ಅವ್ಯಕ್ತದಲ್ಲಿ ಲೀನವಾಗುತ್ತಾರೆ. ಭೂತಗ್ರಾಮಃ ಸ ಏವಾಯಂ ಭೂತ್ವಾ ಭೂತ್ವಾ ಪ್ರಲೀಯತೇ | ರಾತ್ರ್ಯಾಗಮೇಽವಶಃ ಪಾರ್ಥ ಪ್ರಭವತ್ಯಹರಾಗಮೇ || (ಗೀತಾ 8-19) ಮತ್ತೆ ಬ್ರಹ್ಮನಿಗೆ ಹಗಲಾದಾಗ ಈ ಎಲ್ಲ ಜೀವಿಗಳು ಮತ್ತೆ ಹುಟ್ಟುತ್ತವೆ; ಬ್ರಹ್ಮನಿಗೆ ರಾತ್ರಿಯಾದಾಗ, ಅವೆಲ್ಲ ಮತ್ತೆ ನಾಶಾವಾಗುತ್ತವೆ. ನಿಜೇನ ತಸ್ಯ ಮಾನೇನ ಆಯುರ್ವರ್ಷಶತಂ ಸ್ಮೃತಮ್ | ತತ್ಪರಾಖ್ಯಂ ತದರ್ದ್ಧಂ ಚ ಪರಾರ್ದ್ಧಮಭಿಧೀಯತೇ || (ವಿಷ್ಣು ಪುರಾಣ 1-3-5) ಶತಂ ಹಿ ತಸ್ಯ ವರ್ಷಾಣಾಂ ಪರಮಾಯುರ್ಮಹಾತ್ಮನಃ || (ವಿಷ್ಣು ಪುರಾಣ 1-3-26) ಬ್ರಹ್ಮದೇವನಿಗೆ ತನ್ನ ಬ್ರಹ್ಮಮಾನದಿಂದ ಆಯಸ್ಸು ನೂರು ವರ್ಷಗಳು. ಬ್ರಹ್ಮನ ಈ ನೂರು ವರ್ಷಗಳಿಗೆ ‘ಪರ‘ವೆಂದೂ ಅದರ ಅರ್ಧಪ್ರಮಾಣಕ್ಕೆ ‘ಪರಾರ್ಧ‘ವೆಂದು ಹೆಸರು. ಶತಾಯುಃ ಶತಾನಂದಂ ಎವಂ ಪ್ರದಿಷ್ಟಸ್ತದಾಯುರ್ಮಹಾಕಲ್ಪ ಇತ್ಯುಕ್ತಮಾದ್ದೈಃ | ಯತೋಽನಾದಿಮಾನೇಷ ಕಾಲಸ್ತತೋಽಹಂ ನ ವೇದ್ಮ್ಯ ಪದ್ಮೋದ್ಭವಾ ಯೇ ಗತಾಸ್ತಾನ್ || (ಸಿದ್ಧಾಂತಶಿರೋಮಣಿ) ಶತಾನಂದನೆಂಬ ಹೆಸರಿರುವ ಚತುರ್ಮುಖ ಬ್ರಹ್ಮನ ಆಯುಷ್ಯ ನೂರು ವರ್ಷಗಳಷ್ಟಾಗಿದ್ದು, ಈ ಕಾಲಪ್ರಮಾಣಕ್ಕೆ ‘ಮಹಾಕಲ್ಪ‘ ಎಂದು ಕರೆಯುತ್ತಾರೆ. ಕಾಲವು ಅನಾದಿಯಾಗಿರುವುದರಿಂದ ಇವತ್ತಿನವರೆಗೆ ಎಷ್ಟು ಪದ್ಮಸಂಭವರಾದ ಬ್ರಹ್ಮದೇವರುಗಳು ಆಗಿ ಹೋಗಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಎರಡು ಸಹಸ್ರಮಹಾಯುಗಗಳಷ್ಟು ಅಗಾಧ ದಿನಮಾನವುಳ್ಳ ಚತುರ್ಮುಖನ ಒಟ್ಟು ಆಯುಃಪ್ರಮಾಣದ ಲೆಕ್ಖ - 1 ವರ್ಷ = 360 ಅಹೋರಾತ್ರಗಳು x 2000 ಮಹಾಯುಗಗಳು ಇಂತಹ ಒಟ್ಟು 100 ವರ್ಷಗಳ ಮೊತ್ತ 311040000000000 ಸೌರವರ್ಷಗಳು. (3.1104×10^14) ಚತುರ್ಮುಖನ ಒಂದು ಮಾಸವು 30 ದಿನಗಳದ್ದಾಗಿದ್ದು, ಶಾಸ್ತ್ರಗಳಲ್ಲಿ ಈ 30 ದಿನಗಳನ್ನು 30 ಕಲ್ಪಗಳೆಂದು ಹೆಸರಿಸಿದ್ದಾರೆ. ಅವುಗಳು ಕೆಳಕಂಡಂತೆ ಇವೆ - (1) ಶ್ವೇತವಾರಾಹ (16) ನಾರಸಿಂಹ (2) ನೀಲಲೋಹಿತ (17) ಸಮಾನ (3) ವಾಮದೇವ 18) ಆಗ್ನೇಯ (4) ರಥಂತರ 19) ಸೋಮ (5) ರೌರವ 20) ಮಾನವ (6) ಪ್ರಾಣ ಅಥವಾ ದೇವ 21) ಪುಮಾನ್ ಅಥವಾ ತತ್ಪುರುಷ (7) ಬೃಹತ್ಕಲ್ಪ 22) ವೈಕುಂಠ (8) ಕಂದರ್ಪ 23) ಲಕ್ಷ್ಮೀ (9) ಸತ್ಯ ಅಥವಾ ಸದ್ಯ 24) ಸಾವಿತ್ರೀ (10) ಈಶಾನ 25) ಘೋರ (11) ವ್ಯಾನ ಅಥವಾ ತಮ 26) ವಾರಾಹ (12) ಸಾರಸ್ವತ 27) ವೈರಾಜ (13) ಉದಾನ 28) ಗೌರೀ (14) ಗಾರುಡ 29) ಮಾಹೇಶ್ವರ (15) ಕೌರ್ಮ –(ಇದು ಬ್ರಹ್ಮನ ಪೌರ್ಣಿಮೆಯಾಗಿದೆ).(30) ಪಿತೃ – (ಇದು ಬ್ರಹ್ಮನ ಅಮಾವಾಸ್ಯೆ) ಸಧ್ಯ ಅಧಿಕಾರದಲ್ಲಿರುವ ಬ್ರಹ್ಮದೇವನ ಆಯಸ್ಸಿನ ಐವತ್ತು ವರ್ಷಗಳು ಮುಗಿದಿವೆ, ಐವತ್ತೊಂದನೇಯ ವರ್ಷದ ಪ್ರಥಮ ದಿನವು ನಡೆದಿದೆ ಎಂದು ಪಂಚಾಂಗಗಣಿತಕಾರರು ಹೇಳುತ್ತಾರೆ. ಕೆಲಗ್ರಂಥಗಳಲ್ಲಿ ಬ್ರಹ್ಮದೇವನಿಗೆ ಎಂಟುವರೆ ವರ್ಷಗಳು ಮುಗಿದಿವೆ ಎಂದು ಉಲ್ಲೇಖ ಬರುತ್ತದೆ. (ಬ್ರಹ್ಮಾದಿ ದೇವತೆಗಳಿಗೆ ಮನುಷ್ಯರಂತೆ ಬಾಲ್ಯಾದಿ ಅವಸ್ಥೆಗಳು ಇರುವುದಿಲ್ಲ್, ಅವರು ಜನ್ಮತಃ ಸೃಷ್ಟ್ಯಾದಿ ಸಾಮರ್ಥ್ಯವುಳ್ಳವರಾಗಿರುತ್ತಾರೆ.) ಈ ಎಲ್ಲ ಕಾಲಪ್ರಮಾಣಗಳು ಮಾನುಷ ಪರಿಮಿತಿಗೆ ಮೀರಿರುವುದರಿಂದ ಸಂಹಿತಾ ಗಣಿತಕಾರರು ಇವುಗಳನ್ನು ಪರಿಗಣಿಸುವುದಿಲ್ಲ. ಸಂಹಿತೆಗಳಲ್ಲಿ ಪ್ರಸಕ್ತ ಕಲ್ಪಾರಂಭದಿಂದಾದಿ ಗಣಿತನಿರ್ದೇಶಗಳು ಕೊಡಲ್ಪಟ್ಟಿವೆ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ