Skip to main content

ಜಾತಕ ಫಲ ತರುವುದು ಭಾಗ್ಯ

ಭಾಗ್ಯಕ್ಕಾಗಿ ಚಿಂತೆ ಮಾಡುವ ಜನರೇ ಇರುವರು. ಭಾಗ್ಯಕ್ಕಾಗಿ ಬಹಳ ಪ್ರಯತ್ನ ಮಾಡುವವರೂ ಇರುತ್ತಾರೆ. ಆದರೆ ಪ್ರಯತ್ನ ಮಾಡದೆ ಭಾಗ್ಯ ಬರುವುದು ಇದೆ. ಇದು ಅವರವರ ಗ್ರಹಗಳಿಂದ ಬರುತ್ತದೆ. ರಾಷ್ಟ್ರದ ಪ್ರಧಾನಿಯ ಜಾತಕದಲ್ಲಿ ಶುಕ್ರ ಮತ್ತು ಶನಿಯ ದೃಷ್ಟಿ ಗುರುವಿನ ಮೇಲೆ ಇರುವುದರಿಂದ ಇವರು ರಾಷ್ಟ್ರದ ಮುಖಂಡರಾದರು. ಸಾಮಾನ್ಯವಾಗಿ ಜಾತಕದಲ್ಲಿ ಲಗ್ನ ಅಥವಾ ಚಂದ್ರನ ನವಮ ಸ್ಥಾನ ಭಾಗ್ಯ ಸ್ಥಾನ. ಇದರಲ್ಲಿ ಬಲಿಷ್ಠವಾಗಿರುವವನ ಭಾವದಿಂದ ಭಾಗ್ಯವನ್ನು ನೋಡಬೇಕು. ಭಾಗ್ಯದ ಅಧಿಪತಿ ಇರುವ ಸ್ಥಾನ, ಭಾಗ್ಯದಲ್ಲಿರುವ ಬಲಿಷ್ಠ ಅಥವಾ ಬಲಹೀನ ಗ್ರಹರು ಇದನ್ನೆಲ್ಲ ನೋಡಿ ಲೆಕ್ಕಾಚಾರ ಮಾಡಬೇಕು. ಭಾಗ್ಯ ಸ್ಥಾನದಲ್ಲಿ ಭಾಗ್ಯಾಧಿಪತಿ ಇದ್ದರೆ ಅಥವಾ ಭಾಗ್ಯ ಸ್ಥಾನವನ್ನು ನೋಡಿದರೆ ಜಾತಕನು ಭಾಗ್ಯ ಫಲ ಪಡೆಯುತ್ತಾನೆ. ತೃತೀಯ ಪಂಚಮ ಅಥವಾ ಲಗ್ನದಲ್ಲಿರುವ ಗ್ರಹರು ಬಲಿಷ್ಠವಾಗಿ ಭಾಗ್ಯ ಭಾವವನ್ನು ಪೂರ್ಣ ದೃಷ್ಟಿಯಿಂದ ನೋಡಿದರೆ ಇಂತಹವರು ಅತಿ ಭಾಗ್ಯವಂತರಾಗುತ್ತಾರೆ. ಗುರುವು ಭಾಗ್ಯ ಭಾವದಲ್ಲಿ ಇದ್ದಾಗ ಜಾತಕನು ಮಂತ್ರಿ ಆಗುತ್ತಾನೆ. ನವಮದ ಗುರುವನ್ನು ಚಂದ್ರನು ನೋಡಿದರೆ ಜಾತಕನು ಭೋಗವಂತನಾಗುತ್ತಾನೆ. ಭಾಗ್ಯದಲ್ಲಿರುವ ಗುರುವನ್ನು ಕುಜನು ನೋಡಿದರೆ ಜಾತಕನಲ್ಲಿ ಬಂಗಾರ ಇರುತ್ತದೆ. ಭಾಗ್ಯದಲ್ಲಿರುವ ಗುರುವನ್ನು ಬುಧನು ನೋಡಿದರೆ ಇವರು ಧನವಂತರಾಗುತ್ತಾರೆ. ನವಮದಲ್ಲಿರುವ ಗುರುವನ್ನು ಶುಕ್ರನು ನೋಡಿದರೆ ಮನೆ, ವಾಹನ ಮತ್ತು ಧನದಿಂದ ಕೂಡಿದವನಾಗುತ್ತಾನೆ. ನವಮದಲ್ಲಿರುವ ಗುರುವನ್ನು ಶನಿ ನೋಡಿದರೆ ಆಸ್ತಿ, ವಾಹನಗಳನ್ನು ಹೊಂದುತ್ತಾನೆ. ಭಾಗ್ಯ ಸ್ಥಾನದಲ್ಲಿರುವ ಗುರುವಿಗೆ ರವಿ, ಕುಜರ ದೃಷ್ಟಿ ಇದ್ದರೆ ಜಾತಕನು ಐಶ್ವರ್ಯ, ಬೆಳ್ಳಿ, ಬಂಗಾರ, ವಾಹನ ಮತ್ತು ಹಲವು ಮಂದಿ ಆಳುಗಳನ್ನು ಹೊಂದುತ್ತಾರೆ. ನಮವದ ಗುರುವಿನ ಮೇಲೆ ರವಿ, ಚಂದ್ರರ ದೃಷ್ಟಿ ಇದ್ದರೆ ಜಾತಕನು ಸಂಪತ್ತು ಗಳಿಸಿ, ಅಭಿವೃದ್ಧಿ ಹೊಂದಿ ತಾಯಿ ತಂದೆಯರ ಭಕ್ತನೂ, ಬಹಳ ಪ್ರಖ್ಯಾತಿಯನ್ನೂ ಹೊಂದುತ್ತಾನೆ. ಭಾಗ್ಯದ ಗುರುವಿನ ಮೇಲೆ ರವಿ ಬುಧರ ದೃಷ್ಟಿ ಇದ್ದರೆ ಭಾಗ್ಯವಂತನೂ, ಸೌಂದರ್ಯವತಿ ಹೆಂಡತಿ, ಆಭರಣ ಎಲ್ಲ ರೀತಿಯಿಂದಲೂ ಸಂಪನ್ನರಾಗುತ್ತಾರೆ. ಲೇಖಕರಾಗುತ್ತಾರೆ, ಬುದ್ಧಿವಂತರಾಗುತ್ತಾರೆ. ಭಾಗ್ಯದ ಗುರುವಿಗೆ ರವಿ ಶುಕ್ರ ದೃಷ್ಟಿ ಇದ್ದರೆ ಇವರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾಗುತ್ತಾರೆ. ಪಂಡಿತರೂ, ಗುಣವಂತರೂ, ಧನವಂತರೂ ಆಗುತ್ತಾರೆ. ಭಾಗ್ಯದಲ್ಲಿರುವ ಗುರುವಿನ ಮೇಲೆ ಚಂದ್ರ ಕುಜರ ದೃಷ್ಟಿ ಇದ್ದರೆ ಇವರು ಮಂತ್ರಿಯಾಗುತ್ತಾರೆ. ಎಲ್ಲ ರೀತಿಯ ಸುಖ ಪಡೆದು ಭೋಗವಂತರಾಗುತ್ತಾರೆ. ಭಾಗ್ಯದಲ್ಲಿರುವ ಗುರುವಿನ ಮೇಲೆ ಚಂದ್ರ, ಬುಧನ ದೃಷ್ಟಿ ಇದ್ದರೆ ಮನೆ, ಸುಖ, ಭೋಗವನ್ನು ಹೊಂದಿ ತೇಜಸ್ವಿಯೂ, ಅತಿ ಬುದ್ಧಿವಂತರೂ ಆಗುತ್ತಾರೆ. ಭಾಗ್ಯದಲ್ಲಿರುವ ಗುರುವಿನ ಮೇಲೆ ಚಂದ್ರ ಶುಕ್ರ ದೃಷ್ಟಿ ಇದ್ದರೆ ಇವರು ಶ್ರೀಮಂತರೂ, ಕಾರ್ಯದಲ್ಲಿ ತಲ್ಲೀನರೂ ಆಗುತ್ತಾರೆ. ಇವರಿಗೆ ಸಂತಾನದ ಕೊರತೆ ಇರುತ್ತದೆ. ಭಾಗ್ಯದಲ್ಲಿರುವ ಗುರುವಿನ ಮೇಲೆ ಚಂದ್ರ, ಶನಿ ದೃಷ್ಟಿ ಇದ್ದರೆ ಇವರು ದೀರ್ಘಾಯುಷ್ಯವನ್ನು ಹೊಂದುತ್ತಾರೆ. ಪರ ದೇಶದಲ್ಲಿ ಇರುತ್ತಾರೆ. ವಾದ ವಿವಾದ ಪ್ರವೃತ್ತಿಯವರೂ, ಗುಣಹೀನರೂ ಆಗಿರುತ್ತಾರೆ. ಭಾಗ್ಯದಲ್ಲಿರುವ ಗುರುವಿನ ಮೇಲೆ ಕುಜ ಬುಧರ ದೃಷ್ಟಿ ಇದ್ದರೆ ಇವರು ಉತ್ತಮ ಪಂಡಿತರೂ, ಒಳ್ಳೆಯ ಗುಣವಂತರೂ, ವಿದ್ಯಾವಂತರೂ, ಒಳ್ಳೆಯ ವೇಷಧಾರಿಗಳೂ ಆಗಿರುತ್ತಾರೆ. ಭಾಗ್ಯದಲ್ಲಿರುವ ಗುರುವಿನ ಮೇಲೆ ಕುಜ ಶುಕ್ರರ ದೃಷ್ಟಿ ಇದ್ದರೆ ಇವರು ಧನವಂತರೂ, ವಿದ್ಯಾವಂತರೂ, ವಿದೇಶವಾಸಿಗಳೂ, ಅತಿ ನಿಪುಣರೂ ಆಗಿರುತ್ತಾರೆ. ಭಾಗ್ಯದಲ್ಲಿರುವ ಗುರುವಿನ ಮೇಲೆ ಕುಜ ಶನಿ ಇದ್ದರೆ ಇವರು ನೀಚರೂ, ದುರ್ಜನರೂ, ಚಾಡಿಕೋರರೂ ಆಗಿರುತ್ತಾರೆ. ಬೇರೆ ಜನರೊಂದಿಗೆ ಬೆರೆಯುವವರಾಗಿರುತ್ತಾರೆ. ಭಾಗ್ಯದಲ್ಲಿರುವ ಗುರುವಿನ ಮೇಲೆ ಬುಧ ಶುಕ್ರನ ದೃಷ್ಟಿ ಇದ್ದರೆ ವಿದ್ಯಾವಂತರೂ, ಭಾಗ್ಯವಂತರೂ, ಹೇಳಿದ ವಚನ ಪಾಲಿಸುವವರೂ, ಅತಿ ಸುಶೀಲರೂ ಆಗುತ್ತಾರೆ. ಭಾಗ್ಯದಲ್ಲಿರುವ ಗುರುವಿನ ಮೇಲೆ ಬುಧ, ಶನಿಯ ದೃಷ್ಟಿ ಇದ್ದರೆ ಇವರು ಭಾಗ್ಯವಂತರೂ, ವಿದ್ಯಾವಂತರೂ, ಶೂರರೂ, ಸುಖವಂತರೂ ಮತ್ತು ವಿನಯಶೀಲತೆ ಉಳ್ಳವರೂ ಆಗುತ್ತಾರೆ. ಭಾಗ್ಯದಲ್ಲಿರುವ ಗುರುವಿನ ಮೇಲೆ ಶುಕ್ರ, ಶನಿಯ ದೃಷ್ಟಿ ಇದ್ದರೆ ರಾಷ್ಟ್ರದ ಮುಖಂಡರೂ, ಧನ ಸಂಪತ್ತು ಉಳ್ಳವರೂ ಆಗುತ್ತಾರೆ. ಭಾಗ್ಯ ಸ್ಥಾನದಲ್ಲಿರುವ ಗುರುವನ್ನು ಭಾಗ್ಯಾಧಿಪತಿ ನೋಡಿದರೆ ಇವರು ಮಂತ್ರಿಯಾಗುತ್ತಾರೆ. ಭಾಗ್ಯ ಸ್ಥಾನದಲ್ಲಿರುವ ಗುರುವಿನ ಮೇಲೆ ಎಲ್ಲ ಗ್ರಹಗಳ ದೃಷ್ಟಿ ಇದ್ದಾಗ ಇವರು ಮಂತ್ರಿಗಳೂ, ಐಶ್ವರ್ಯವಂತರೂ, ಶ್ರೇಷ್ಠ ವ್ಯಕ್ತಿಯೂ ಆಗುತ್ತಾರೆ. ಇವರಿಗೆ ಉತ್ತಮ ರೂಪ, ಗುಣವಂತರೂ, ಧೈರ್ಯವಂತರೂ ಆಗುತ್ತಾರೆ. ಭಾಗ್ಯ ಭಾವದಲ್ಲಿ ಬಲಿಷ್ಠ ಗ್ರಹಗಳು ಇದ್ದರೆ ಜಾತಕನು ಮಂತ್ರಿಯಂತೆ ಇರುವವನೂ ಇವರಲ್ಲಿ ಸ್ಥಿರ ಧನ ಇರುತ್ತದೆ. ಧರ್ಮದಿಂದ ನಡೆಯುತ್ತಾರೆ. ಜನನ ಕಾಲದಲ್ಲಿ ಬಲಿಷ್ಠರಾದ ಕುಜ, ಶನಿ ಮತ್ತು ಬುಧ ಬಲಿಷ್ಠರಾಗಿ ಪೂರ್ಣ ಚಂದ್ರನಿಂದ ಕೂಡಿ ಭಾಗ್ಯ ಸ್ಥಾನದಲ್ಲಿ ಇದ್ದರೆ ಜಾತಕರು ಮಂತ್ರಿಯಾಗುತ್ತಾರೆ. ಭಾಗ್ಯ ಭಾವದಲ್ಲಿರುವ ಉಚ್ಚದ ಗ್ರಹ ಜಾತಕನಿಗೆ ರಾಜ ಪದವಿಯನ್ನು ಕೊಡುತ್ತಾನೆ. ಶತ್ರುಗಳನ್ನು ನಾಶ ಮಾಡುತ್ತಾನೆ. ಉತ್ತಮ ಕೀರ್ತಿವಂತರಾಗುತ್ತಾರೆ. ಗುರು ಮತ್ತು ಶುಕ್ರರು ಭಾಗ್ಯ ಸ್ಥಾನದಲ್ಲಿದ್ದಾಗ ಜನಿಸಿದವರು ರಾಜರಾಗುತ್ತಾರೆ. ದೀರ್ಘಾಯುವೂ ಉತ್ತಮವಾದ ಮಾತು ಮತ್ತು ನಾನಾ ವಿಧದ ಸುಖ ಸಂಪತ್ತು ಉಳ್ಳವನಾಗುತ್ತಾರೆ. ಭಾಗ್ಯ ಸ್ಥಾನದಲ್ಲಿ ಸೂರ್ಯ, ಬುಧ ಶುಕ್ರ ಯೋಗದಲ್ಲಿ ಜನಿಸಿದವನು ರಾಜ ಸಮಾನನೂ, ಪ್ರಖ್ಯಾತರೂ ಆಗುತ್ತಾರೆ. ಭಾಗ್ಯ ಸ್ಥಾನದಲ್ಲಿ ಚಂದ್ರ, ಗುರು, ಶುಕ್ರ ಇದ್ದರೆ ರಾಜನಿಗೆ ಸಮಾನನಾದವರು ಮತ್ತು ರಾಜ ಕುಲದಲ್ಲಿ ಜನಿಸಿದವರೂ ಆಗುತ್ತಾರೆ. ಭಾಗ್ಯ ಸ್ಥಾನದಲ್ಲಿ ಬುಧ, ಗುರು, ಶುಕ್ರರು ಇರುವಾಗ ಜನಿಸಿದವರು ಮಂತ್ರಿಗಳೂ, ಪಂಡಿತರೂ ಆಗುತ್ತಾರೆ. ಭಾಗ್ಯ ಸ್ಥಾನದಲ್ಲಿ ರವಿ ಚಂದ್ರ ಬುಧ, ಗುರು ಯೋಗದಲ್ಲಿ ಜನಿಸಿದವರು ಮಂತ್ರಿಯಿಂದ ಪೂಜಿತರೂ ಮತ್ತು ಸಂತೋಷವಂತರೂ ಆಗುತ್ತಾರೆ.- ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ -ಸಂಗ್ರಹ

Comments

Unknown said…
27/9/85. ,10PM please read my horoscope and reply me
Please please follow me
Unknown said…
Hi sir this is shiva Kumar 27/9/85,10pm please send My horoscope remedy

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...