Skip to main content

ಶನಿಬಲ ಹೊಂದಿರುವ ರಾಶಿಗಳವರ ಗುಣಗಳಿವು

ಶನಿಬಲ ಬಂದರೆ ಏನೇನು ಬದಲಾವಣೆಯಾಗುತ್ತದೆ ಎಂದು ಈ ಮೊದಲು ನೀವು ಓದಿದ್ದೀರಿ. ಇನ್ನೊಂದು ಮಾತು ನೆನಪಿಟ್ಟುಕೊಳ್ಳಿ, ಶನಿದೇವನು ತನ್ನ ಕಾಡಾಟದಲ್ಲಿ ಬೇಡವೆಂದರೂ ಕಷ್ಟ ಕೊಡುತ್ತಾನೆ. ಅದೇ ರೀತಿ ಪ್ರಸನ್ನನಾಗಿರುವ ಶನಿದೇವ, ರಾಶಿಗೆ ಬಲ ಹೊಂದಿದ್ದರೆ ಏನೂ ಕೇಳದಿದ್ದರೂ ಎಲ್ಲವನ್ನೂ ಕೊಡುತ್ತಾನೆ. ಆದರೆ ಜಾತಕದ ಮೂಲಕ ಬಂದಿರುವ ಅವಕಾಶ ತಿಳಿದುಕೊಂಡು ಸದುಪಯೋಗ ಮಾಡಿಕೊಳ್ಳುವ ಬುದ್ಧಿವಂತಿಕೆ ತೋರಿಸಬೇಕು. ಈಗ ವೃಷಭ, ಸಿಂಹ, ಧನಸ್ಸು ಹಾಗೂ ಕುಂಭ ರಾಶಿಯವರಿಗೆ ಶನಿದೇವನ ಬಲವಿದೆ. ಈ ರಾಶಿಗಳವರ ವಿಭಿನ್ನ ಗುಣ ತಿಳಿದುಕೊಳ್ಳೋಣ ಈ ಬಾರಿ. ವೃಷಭ ರಾಶಿ : ಇವರಿಗೆ ರಾಶಿಯಿಂದ 6ನೇ ಸ್ಥಾನದಲ್ಲಿ ಶನಿದೇವನಿದ್ದಾನೆ. ಇವರು ಯಾವಾಗಲೂ ಮೈ ಬಗ್ಗಿಸಿ, ಬೆವರು ಸುರಿಸಿ ದುಡಿಯುವವರು. ಒಂದು ನಿಮಿಷ ಕೂಡ ಸುಮ್ಮನೇ ಕೂರಲ್ಲ. ಒಟ್ಟಿನಲ್ಲಿ ದಣಿವಿಲ್ಲದೆ ಯಾವುದಾದರೂ ಕೆಲಸ ಮಾಡುತ್ತಲೇ ಇರುವಂಥಹ ಗುಣ ಇವರದು. ಅಲ್ಲದೇ ಯಾವಾಗಲೂ ಏನಾದರೊಂದು ಹೊಸದನ್ನು ಹುಡುಕುತ್ತಲೇ ಬಿಜಿಯಾಗಿಯೇ ಇರುತ್ತಾರೆ. ಕಷ್ಟಕರ ಕೆಲಸಗಳನ್ನು ನಗುಮುಖದಿಂದ ಮಾಡಿ ಮುಗಿಸಿ ಎಲ್ಲರನ್ನು ಅಚ್ಚರಿಗೊಳಿಸುತ್ತಾರೆ. ಏನಿದು, ಇಷ್ಟೊಂದು ಕೆಲಸ ಮಾಡಿದರೂ ಎಷ್ಟೊಂದು ಉತ್ಸಾಹವಿದೆಯಲ್ಲ ಇವರಿಗೆ ಎನ್ನುತ್ತಾರೆ ಉಳಿದವರು. ಬೇರೆಯವರು ಏನಾದರೂ ಸಹಾಯ, ಸಹಕಾರ ಕೇಳಿದರೆ ಸಾಕು. ತಾವೇ ಮುಂದೆ ನಿಂತು ಎಲ್ಲ ರೀತಿಯಿಂದ ಸಹಾಯ ಮಾಡುವಷ್ಟು ದೊಡ್ಡ ಗುಣ ಇವರಲ್ಲಿರುತ್ತದೆ. ಇವರೇನಾದರು ಮಾತು ಕೊಟ್ಟರೆ ಮುಗೀತು. ಖಡಾಖಂಡಿತ ಮನಸ್ಸು ಇವರದು. ಎಲ್ಲರೊಂದಿಗೆ ಆಸಕ್ತಿ, ಸಂತಸದಿಂದ ಮಾತನಾಡುವುದು ಇವರಿಗೆ ಒಂಥರಾ ಹವ್ಯಾಸವಿದ್ದಂಗೆ. ಯಾರಿಗೂ ನೋವು ಆಗುವಂತೆ ಮಾತನಾಡುವುದಿಲ್ಲ. ಚಿಂತೆ ಎಂಬುದು ಇವರಿಗೆ ಗೊತ್ತೇ ಇಲ್ಲ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದೆ ಏನಾದರೂ ಉಪಯೋಗವಿದೆಯಾ ಎಂದು ತಿಳಿದುಕೊಂಡೇ ಮುಖ್ಯವಾದ ಕೆಲಸ ಮಾಡುವ ಗುಣ ಇವರಲ್ಲಿರುತ್ತದೆ. ಇವರ ತಾಳ್ಮೆ, ಸಹನೆ ನೋಡಿ ಎಂಥಹವರಾದರೂ ಇವರನ್ನೇ ಮೆಚ್ಚುತ್ತಾರೆ. ತಮಗೆ ಎಂತಹುದೇ ಕಠಿಣ ಕಷ್ಟ ಬಂದರೂ ತಲೆಕೆಡಿಸಿಕೊಳ್ಳದೇ ನಗುತ್ತಲೇ ಇರುವಷ್ಟು ಧೈರ್ಯವಂತರು. ಸಿಂಹ : ಈ ರಾಶಿಯಿಂದ ತೃತೀಯ ಸ್ಥಾನದಲ್ಲಿದ್ದಾನೆ ಮಹಾತ್ಮ. ಈಗ್ಗೆ ಎರಡೂವರೆ ವರ್ಷ ಹಿಂದೆ ಇವರು ಸಾಡೇಸಾತಿಯ ಬಿಗಿಮುಷ್ಟಿಯಿಂದ ಹೊರಬಂದಿದ್ದಾರೆ. ಯಾವಾಗಲೂ ಆತ್ಮವಿಶ್ವಾಸದಿಂದ ಗಾಂಭೀರ್ಯದ ಮಾತು ಮತ್ತು ನಡತೆ ಇವರಲ್ಲಿ ಇರೋದ್ರಿಂದ ಇವರನ್ನು ನೋಡಿದವರು ಗೌರವ ಕೊಡಲೇಬೇಕಾಗುತ್ತದೆ. ಬೇಕಾದಂಥಹ ದೊಡ್ಡವರಿರಲಿ, ಇವರು ಸುಮ್ಮನೇ ಅವರ ಮನಮೆಚ್ಚಿಸಲು ಸೆಲ್ಯೂಟ್ ಹೊಡೆಯುವುದಿಲ್ಲ. ತಪ್ಪು ಮಾಡಿದವರನ್ನು ಸುಲಭವಾಗಿ ಕ್ಷಮಿಸುವ ದೊಡ್ಡ ಗುಣ ಇವರಿಗೆ. ಎಂಥಹದೇ ಕಠಿಣ ಸಮಸ್ಯೆ ಬಂದರೂ ಅದರ ಬಗ್ಗೆ ಚರ್ಚಿಸದೇ, ಯಾರ ಮಾತು ಕೇಳದೆ ತಮ್ಮದೇ ನಿರ್ಧಾರ ಸರಿ ಎನ್ನುತ್ತಾರೆ. ಈ ಗುಣ ಇವರಲ್ಲಿ ಹುಟ್ಟಿದಾಗಿನಿಂದಲೇ ಇರುತ್ತದೆ. ಅಂದುಕೊಂಡಿದ್ದನ್ನು ಸಾಧಿಸಿಯೇ ತೀರಬೇಕು ಎನ್ನುವ ಛಲ ಕೂಡ ಹೆಚ್ಚು ಇವರಲ್ಲಿ. ಇವರು ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತು, ಸಂಯಮ, ದೈವಭಕ್ತಿ ಹಾಗೂ ನಡತೆ ಎಲ್ಲರೂ ಹೊಗಳುತ್ತಾರೆ. ವೈರಿಗಳು ಇವರ ಮುಂದೆ ಬರಲೂ ಹೆದರುತ್ತಾರೆ. ಇದರರ್ಥ ಮನಸ್ಸಿನಿಂದ ಮತ್ತು ವ್ಯಕ್ತಿಗತವಾಗಿ ಇವರು ಗಟ್ಟಿಮುಟ್ಟಾಗಿರುತ್ತಾರೆ. ಇವರಿಗೆ ಹಲವಾರು ಜನ ಸೇವಕರು ಬೇಕು. ಸ್ನೇಹಿತರನ್ನು, ಮನೆ ಮಂದಿಯನ್ನು ತಮ್ಮ ಸೇವಕರಂತೆ ಬಳಸಿಕೊಳ್ಳುತ್ತಾರೆ. ಬಡವ-ಶ್ರೀಮಂತ, ಮೇಲ್ಜಾತಿ-ಕೀಳ್ಜಾತಿ ಎಂದು ಮೇಲು-ಕೀಳು ಮಾಡದೇ ಎಲ್ಲರೊಂದಿಗೆ ಸಂತಸದಿಂದ ಇರುವ ವಿಶಾಲ ಗುಣ ಇವರಲ್ಲಿರುತ್ತದೆ. ಧನಸ್ಸು : ಈ ರಾಶಿಗೆ ಹನ್ನೊಂದನೆಯವನಾಗಿದ್ದಾನೆ ಶನಿರಾಜನು. ಇವರು ಬಹಳ ಗಟ್ಟಿಮನಸ್ಸಿನವರು. ತಮ್ಮ ಮನಸ್ಸಿನಲ್ಲೇನು ಇರುತ್ತದೆಯೋ ಅದನ್ನೇ ಮಾತನಾಡುತ್ತಾರೆ. ಮನದಲ್ಲೊಂದು, ಹೊರಗೊಂದು ಎಂಬಂತಹ ಗುಣ ಇವರಲ್ಲಿರೋದಿಲ್ಲ. ಬೇರೆಯವರಿಗಿಂತ ವಿಭಿನ್ನ ರೀತಿಯ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಏನೇ ಮಾಡಿದರೂ ಹತ್ತು ಸಲ ಯೋಚನೆ ಮಾಡಿ ಮುಂದುವರೆಯುತ್ತಾರೆ. ಅಲ್ಲದೇ ಬೇರೊಬ್ಬರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂದು ಸ್ವತಃ ತಾವೇ ಅರಿತುಕೊಳ್ಳಲು ಪ್ರಯತ್ನಿಸುತ್ತಾ ಒಂಥರಾ ಮತ್ತೊಬ್ಬರ ಮನಸ್ಸನೇ ಅರಿಯುವಷ್ಟು ಬುದ್ಧಿವಂತ ಕಿಲಾಡಿಗಳಿವರು. ಅಪ್ಪಿತಪ್ಪಿಯೂ ಅಡ್ಡದಾರಿ ಹಿಡಿಯುವವರಲ್ಲ. ಯಾವಾಗಲೂ ದೊಡ್ಡ ದೊಡ್ಡ ಆಲೋಚನೆಗಳು ಇವರ ಮನದಲ್ಲಿರುತ್ತವೆ. ಏನೇ ಮಾಡಿದರೂ ತಾವು ಮಾಡಿದ ನಿರ್ಧಾರ ಬದಲಿಸೋದಿಲ್ಲ. ಸ್ವಲ್ಪ ಹುಡುಗಾಟಿಕೆ ಬುದ್ದಿ ಹೆಚ್ಚಿದ್ದರೂ ತಾಳ್ಮೆಯಿಂದಲೇ ವರ್ತಿಸುತ್ತಿರುತ್ತಾರೆ. ತಮಗೆ ಬೇಕಾದವರನ್ನು ಮತ್ತು ತಮ್ಮ ಮನಸ್ಸಿಗೆ ಹಿಡಿಸಿದವರೊಂದಿಗೆ ಮಾತ್ರ ಗೆಳೆತನ ಮಾಡುವುದು ಇವರಿಗೆ ಇಷ್ಟ. ತಮಗಿಷ್ಟವಿಲ್ಲದ ಅಂತಿಂಥ ವಸ್ತುಗಳನ್ನಾಗಲಿ, ಸ್ನೇಹಿತರನ್ನಾಗಲಿ ಹತ್ತಿರ ಕೂಡ ಸೇರಿಸಲ್ಲ. ಎಲ್ಲದರಲ್ಲೂ ಒಳ್ಳೆ ಕ್ವಾಲಿಟಿ ನೋಡುತ್ತಾರೆ. ಮಹತ್ವದ ಆಸೆ ಇಟ್ಟುಕೊಂಡಿರುತ್ತಾರೆ. ತಮ್ಮ ಆಸೆ ಈಡೇರಿಸಿಕೊಳ್ಳಲು ರಿಸ್ಕ್ ತೆಗೆದುಕೊಂಡು, ಯಾವ ರೀತಿ ಜೀವನ ಮಾಡಬೇಕೆಂದು ಬಯಸಿರುತ್ತಾರೋ ಹಾಗೇಯೇ ಜೀವಿಸುವಂಥಹ ಜೀವಿ ಇವರು. ಎಲ್ಲರೊಂದಿಗೆ ಬೆರೆಯಲು ಸ್ವಲ್ಪ ನಾಚಿಕೊಂಡರೂ ಹಣ ಖರ್ಚು ಮಾಡುವ ಸಂದರ್ಭ ಬಂದರೆ ಮುಖವನ್ನು ಗಡಿಗೆ ತರಹ ಮಾಡಿಕೊಳ್ಳುತ್ತಾರೆ. ಕುಂಭ : ಈ ರಾಶಿಗೆ ನವಮ ಸ್ಥಾನದಲ್ಲಿದ್ದಾನೆ ಶನಿದೇವನು. ಇವರು ನೋಡಲು ಸಾಫ್ಟ್ ಆಗಿ ಮುದ್ದು ಮುದ್ದಾಗಿ ಕಾಣುತ್ತಿದ್ದರೂ ಇವರ ದೇಹ ಮತ್ತು ಮನಸ್ಸು ಬಹಳ ಸ್ಟ್ರಾಂಗ್ ಆಗಿರುತ್ತದೆ. ಎಲ್ಲೇ ಇದ್ದರೂ, ಯಾವುದೇ ಸಮಯದಲ್ಲೂ ಉತ್ಸಾಹ ತುಂಬಿ ತುಳುಕುತ್ತಿರುತ್ತದೆ ಇವರಲ್ಲಿ. ತಮಗೆ ವಯಸ್ಸಾದರೂ ಕೂಡ ಹುರುಪಿನಿಂದಲೇ ಇರುವಷ್ಟು ಚುರುಕುತನ ಇವರಲ್ಲಿರುತ್ತದೆ. ಬೇರೆಯವರನ್ನು ಬೇಗನೇ ಅರ್ಥ ಮಾಡಿಕೊಂಡು ಅವರ ಜೊತೆ ಹೇಗಿರಬೇಕೋ ಹಾಗೆಯೇ ಇರುವಂತಹ ತಿಳಿವಳಿಕೆಯುಳ್ಳವರಿವರು. ಮುಂದಾಲೋಚನೆ ಜಾಸ್ತಿಯೇ ಇರುವುದರಿಂದ ಇವರು ತಮ್ಮ ಮನಸ್ಸನ್ನು ಯಾವಾಗಲೂ ಜಾಗೃತವಾಗಿಯೇ ಇಟ್ಟುಕೊಂಡಿರುತ್ತಾರೆ. ಎಲ್ಲದರಲ್ಲೂ ಆಸಕ್ತಿ ಹೆಚ್ಚಿಸಿಕೊಂಡು ಏನೇ ಹೊಸದನ್ನು ನೋಡಿದರೂ ಅದರ ಬಗ್ಗೆ ತಿಳಿದುಕೊಳ್ಳಲು ತವಕಿಸುತ್ತಾರೆ. ಇವರ ಬಳಿ ಏನಾದರು ರಹಸ್ಯವಾದ ವಿಷಯವನ್ನು ಹೇಳಿದ್ದರೆ ಅದನ್ನು ಅಪ್ಪಿತಪ್ಪಿಯೂ ಬೇರೆಯವರಲ್ಲಿ ಹೇಳುವುದಿಲ್ಲ ಅಷ್ಟೊಂದು ಮನಸ್ಸು ಮತ್ತು ನಾಲಿಗೆ ಮೇಲೆ ಹತೋಟಿ ಇರುತ್ತದೆ ಇವರಿಗೆ. ತಮ್ಮ ಕುಟುಂಬದವರ ವಿಷಯಕ್ಕೆ ಬಂದರೆ ಯಾರನ್ನೂ ಬಿಡಲ್ಲ. ತಕ್ಕ ಶಾಸ್ತಿ ಮಾಡಲು ಸಿದ್ಧರಾಗಿಯೇ ಇರುತ್ತಾರೆ. ಎಲ್ಲರನ್ನ ಬೇಗನೇ ನಂಬಿ ಅವರೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಾರೆ. ತಾವೇನೆ ಮಾಡಿದರೂ ಅದು ಶಾಶ್ವತವಾಗಿರಬೇಕು ಎಂದು ಬಯಸುತ್ತಾರೆ. ಯಾವಾಗಲೂ ಕುಟುಂಬದವರ ಅಥವಾ ಸ್ನೇಹಿತರ ಕಾರ್ಯಕ್ರಮಗಳಲ್ಲಿ ಹುರುಪಿನಿಂದ ಭಾಗವಹಿಸಿ, ಸಂತಸ ಪಡುತ್ತಾರೆ. ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡು ಒಂದೊಂದಾಗಿ ಈಡೇರಿಸಿಕೊಳ್ಳುವಂತ ಗುಣ ಇವರದು. ಬೇರೆಯವರಿಗೆ ಸಹಾಯ ಮಾಡುವುದಾದರೆ ಏನಾದರೂ ಲಾಭ ಬೇಕು ಇವರಿಗೆ. ಈಗಾಗಲೇ ಈ ರಾಶಿಗಳವರು ಶನಿದೇವನ ಬಲದಿಂದ ಯಾವುದೇ ತೊಂದರೆ, ತಾಪತ್ರಯವಿಲ್ಲದೆ ಜೀವನವನ್ನು ಆನಂದಿಸುತ್ತಿದ್ದಾರೆ. ಆದರೂ ಈ ರಾಶಿಗಳವರಲ್ಲಿ ಕೆಲವೊಂದು ದುರ್ಗುಣಗಳು ಇರುತ್ತವೆ. ಆ ಗುಣಗಳು ಅವರಿಗೇನೆ ಗೊತ್ತಿದೆ. ಅಂತಹ ಗುಣ ಕಮ್ಮಿ ಮಾಡಿಕೊಂಡು ಜೀವನವನ್ನು ಸುಂದರಗೊಳಿಸಿಕೊಳ್ಳಬೇಕು. ಶನಿದೇವನು ಬಲವಾಗಿರುವ ಈ ಸಮಯದಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ ಇವರಿಗೆ. ಈ ಸುಸಂದರ್ಭದಲ್ಲಿ ದುರ್ಗುಣಗಳು ತುಂಬಿ ತುಳುಕುತ್ತಿದ್ದರೆ ಶನಿದೇವನ ಬಲವನ್ನು, ಶನಿಕಾಟವನ್ನಾಗಿ ಪರಿವರ್ತಿಸಿಕೊಂಡು "ಸುಮ್ಮನಿರಲಾರದೇ ಹುಳು ಬಿಟ್ಟುಕೊಂಡರು" ಎನ್ನುವ ಹಾಗೆ ಆಗುತ್ತದೆ. ಇವರೆಲ್ಲ ಮೈಯೆಲ್ಲಾ ಕಣ್ಣಾಗಿರಬೇಕು : ಕನ್ಯಾ, ತುಲಾ, ವೃಶ್ಚಿಕದವರಿಗೆ ಸಾಡೇಸಾತಿ, ಮೀನಕ್ಕೆ ಅಷ್ಟಮ, ಮೇಷಕ್ಕೆ ಸಪ್ತಮ, ಮಿಥುನಕ್ಕೆ ಪಂಚಮ, ಮಕರಕ್ಕೆ ದಶಮ, ಕರ್ಕ ರಾಶಿಗೆ ಅರ್ಧಾಷ್ಟಮ, ಶನಿ ಕಾಡಾಟವಿದೆ. ಮಹಾರಾಜನ ಕಾಡಾಟದಲ್ಲಿನ ಈ ರಾಶಿಗಳವರು ಮೈಯೆಲ್ಲಾ ಕಣ್ಣಾಗಿರಬೇಕು. ತಮ್ಮನ್ನು ತಾವೇ ಮಗುವಿನ ತರಹ ನೋಡಿಕೊಳ್ಳುತ್ತ ಕಾಳಜಿಯಾಗಿರಬೇಕು. ಎಲ್ಲಿಯೂ "ಎಡವದಂತೆ" ಹುಷಾರಾಗಿರಬೇಕು. ಎಲ್ಲಾ ಆದ ಮೇಲೆ "ಅಯ್ಯ ಅಂದರೂ ಬರಲ್ಲ, ಅಪ್ಪ ಅಂದರೂ ಬರಲ್ಲ" ಹೋಗಿದ್ದು. ಸದ್ಭಕ್ತಿಯು ಇದ್ದರೆ, ದೇವರು "ನೆನದವರ ಮನದಲ್ಲಿ, ಕರೆದವರ ಎದುರಲ್ಲಿ" ಎಂಬ ಮಾತನ್ನು ಮನದಲ್ಲಿಟ್ಟುಕೊಳ್ಳಬೇಕು. . ವಾಸ್ತು ಟಿಪ್ಸ್ : ಮನೆಗೆ ಬಂದವರು ಮಾತನಾಡುವಾಗ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಮುಖ ಮಾಡಿರಬೇಕು. ನೀವು ಮನೆಯಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿಗೆ ಎದುರಾಗಿ ಕುಳಿತುಕೊಂಡಿರಬೇಕು. ಶನಿದೇವನ ಕೃಪೆಗೆ : ನಿಮಗೆ ಗೊತ್ತಿರುವ ಬಡವರ ಮಕ್ಕಳೊಬ್ಬರಿಗೆ ಹೊಸ ಬೂಟು ತೆಗೆದುಕೊಳ್ಳಲು ಅಥವಾ ವಿದ್ಯಾಭ್ಯಾಸದ ಅನುಕೂಲಕ್ಕಾಗುವಷ್ಟು ಹಣ ನೀಡಿ -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...