Skip to main content

ಶನಿರಾಜನ ಬೆಳ್ಳಿಪಾದದಿಂದ ಬದುಕು ಬಂಗಾರ

ಕೆಟ್ಟವರಿಗೆ ಬರೀ ಕೆಟ್ಟದ್ದೇ ಕಾಣುತ್ತದೆ. ಮತ್ತೊಬ್ಬರು ಹಾಳಾಗಿ ಹೋಗಲಿ ಅದು ನಿಮಗೆ ಬೇಕಾಗಿಲ್ಲ. ನಿಮ್ಮ ಎಡೆಯಲ್ಲಿ ಕತ್ತೆ ಬಿದ್ದಿರುತ್ತದೆ ಅದನ್ನು ನೋಡುವುದನ್ನು ಬಿಟ್ಟು, ಮತ್ತೊಬ್ಬರ ಎಡೆಯಲ್ಲಿನ ನೊಣ ಹೊಡೆಯಾಕೆ ಯಾಕೆ ಹೋಗ್ತೀರಾ? ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೇನೆ ಗೊತ್ತು. ಹೀಗಾಗಿ ಬೇರೆಯವರ ಬಗ್ಗೆ ನೀವೇನೂ ಚಿಂತಿಸಬೇಕಾಗಿಲ್ಲ. ಅವರ ಲೆವೆಲ್‌ಗೆ ಅವರವರು ಅನುಭವಿಸುತ್ತಾರೆ. ಇಂತಹದ್ದನ್ನೇ ನೋಡಿಕೊಳ್ಳಲೆಂದು ಇದ್ದಾನೆ ಶನಿಮಹಾತ್ಮ. ಮತ್ತೊಬ್ಬರ ಸುದ್ದಿ ಮಾತನಾಡುವ ಗುಣ ನಿಮ್ಮಲ್ಲಿದ್ದರೆ "ಹಚ್ಚಗಿದ್ದಲ್ಲಿ ಮೇಯ್ದು, ಬೆಚ್ಚಗಿದ್ದಲ್ಲಿ ಮಲಗೋರು" ಅಂತಾರೆ ಜನ ನಿಮ್ಮನ್ನ. ಯಾಕೆಂದರೆ ಇಂಥ ಗುಣ ನಿಮ್ಮಲ್ಲಿದ್ದರೆ "ಕಷ್ಟಕ್ಕೆ ಕರೀಬೇಡಿ, ಊಟಕ್ಕೆ ಮರೀಬೇಡಿ" ಎನ್ನುವವರು ನೀವು ಎಂದು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ. ಅರ್ಥ ಮಾಡಿಕೊಳ್ಳದಿದ್ದರೆ "ದಂಡಂ ದಶಗುಣಂ" ಎಂಬಂತೆ ಮತ್ತೊಬ್ಬರ ಬಗ್ಗೆ ಮಾತಾಡಿ ಹೊಡೆತ ಬಿದ್ದಾಗ ಗೊತ್ತಾಗುತ್ತದೆ ಮಾಡುತ್ತಿದ್ದ ತಪ್ಪು. ಹೊಡೆತ ಬಿದ್ದ ಮೇಲೆ ತೆಪ್ಪಗಿರಬೇಕಾಗುತ್ತದೆ. ಅದಕ್ಕೆ ಹಿರಿಯರೊಂದು ಮಾತು ಹೇಳಿದ್ದರು "ನಮ್ಮ ಬೆನ್ನು ನಮಗೇನೆ ಕಾಣುವುದಿಲ್ಲ" ಎಂದು. ಬೆಳ್ಳಿಪಾದ : ಸಾಡೇಸಾತಿ ನಡೆಯುತ್ತಿರುವ ಸಂದರ್ಭದಲ್ಲಿ ಮಹಾತ್ಮನು ಬೆಳ್ಳಿಪಾದದಿಂದ ಬಂದರೆ ಬದುಕು ಬಂಗಾರವಾಗಿಸಿಕೊಳ್ಳುವ ಸಮಯವೆಂದು ತಿಳಿದುಕೊಳ್ಳಬೇಕು. ಬೆಳ್ಳಿಪಾದ ಎಲ್ಲಿಂದ ಎಲ್ಲಿಯವರೆಗೆ ಇರುತ್ತದೆ ಎಂಬುದನ್ನು ಮೊದಲೇ ಜಾತಕದ ಮೂಲಕ ಗುರ್ತಿಸಿಟ್ಟುಕೊಳ್ಳುವುದು ಒಳ್ಳೆಯದು ಸಾಡೇಸಾತಿ ನಡೆಯುತ್ತಿರುವ ರಾಶಿಗಳವರು. ಬೆಳ್ಳಿಪಾದ ನಡೆಯುತ್ತಿರುವ ಸಂದರ್ಭದಲ್ಲಿ ತುಂಬಾನೇ ಒಳ್ಳೆಯದಾಗುತ್ತೆ ಎನ್ನಬಹುದು. ಈ ಸಮಯದಲ್ಲಿ ಮಾಡುವ ಎಲ್ಲ ಕೆಲಸಗಳಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಯಾವುದೋ ಮೂಲದಿಂದ ಹಣಕಾಸಿನ ಸಹಾಯ ಸಿಗುತ್ತದೆ. ಹೀಗಾಗಿ ಹಣದ ಉಳಿತಾಯವನ್ನು ಮಾಡುವಂತಾಗಿ ಗಳಿಕೆ ಹೆಚ್ಚುತ್ತದೆ. ಈ ಸುಸಂದರ್ಭವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳುವಂತಹ ಬುದ್ಧಿವಂತಿಕೆ ತೋರಿಸಬೇಕು. ಮಾನಸಿಕವಾಗಿ ಹೆಚ್ಚಿನ ಉತ್ಸಾಹ ಹಾಗೂ ಮನಸ್ಸು ಕೂಡ ಉಲ್ಲಸಿತವಾಗಿರುವದರಿಂದ ದೇಹವೂ ಕೂಡ ಚೈತನ್ಯವಾಗಿರುತ್ತದೆ ಈ ಸಮಯದಲ್ಲಿ. ಅದಕ್ಕೆಂದೇ ಹೇಳುವುದು ಸಾಡೇಸಾತಿಯಲ್ಲಿ ಬರೀ ಕಷ್ಟಗಳೇ ಬರುವುದಿಲ್ಲ ಎಂದು. ತುಲಾ ರಾಶಿಯವರ ಸಾಡೇಸಾತಿ 3ನೇ ಹಂತ ಹೀಗಿರುತ್ತೆ : ಶನಿದೇವನು ತನ್ನ ಶತ್ರು ರಾಶಿ ವೃಶ್ಚಿಕವನ್ನು ಪ್ರವೇಶಿಸಿದಾಗ ತುಲಾ ರಾಶಿಯವರಿಗೆ 3ನೇ ಹಂತದ ಸಾಡೇಸಾತಿ ಶುರುವಾಗುತ್ತದೆ. ಅಂದರೆ ನಡದಿಂದ ಕಾಲಿನವರೆಗೆ. ಇದಕ್ಕೇನೆ ಸಾಡೇಸಾತಿ ಇಳಿಯುತ್ತಿದೆ ಎನ್ನುವುದು. ಸಾಡೇಸಾತಿ 2 ಹಂತ ಕಷ್ಟಪಟ್ಟು ದಾಟಿ 3ನೇ ಹಂತ ಬಂದ ತಕ್ಷಣ ತುಲಾ ರಾಶಿಯವರು ಕಠೋರವಾಗಿ ಬಿಡುತ್ತಾರೆ. ಸಿಕ್ಕಾಪಟ್ಟೆ ಸಿಟ್ಟು, ಸಿಟ್ಟಿನಿಂದ ದುರಹಂಕಾರ ಹೆಚ್ಚುತ್ತದೆ. ಇತರರನ್ನು ಮೋಸ ಮಾಡಲು ಹಿಂಜರಿಯುವುದಿಲ್ಲ. ಮಾತಿಗೆ ತಕ್ಕಂತೆ ನಡೆದುಕೊಳ್ಳುವುದಿಲ್ಲ. ಕೆಲವೊಬ್ಬರಂತೂ ಹೊಡೆದಾಟಕ್ಕೂ ಇಳಿದು ರಕ್ತಪಾತ ಮಾಡಿಕೊಂಡು ಶಿಕ್ಷೆ ಅನುಭವಿಸುವಂತಾಗುತ್ತದೆ. ಕಾಲಿಗೆ ಗಾಯಗಳಾಗುವ ಸಂಭವವಿರುವುದರಿಂದ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ. ವಿರೋಧಿಗಳು ಇವರನ್ನು ಮುಗಿಸಲು ಹೊಂಚು ಹಾಕಿ ಯಶಸ್ವಿಯಾಗಲು ತವಕಿಸುತ್ತಾರೆ. ಹಣವನ್ನು ನೀರಿನಂತೆ ಖರ್ಚು ಮಾಡುತ್ತ ಏತಕ್ಕಾಗಿ ಖರ್ಚು ಮಾಡುತ್ತಿದೇನೆ ಎನ್ನುವ ಜ್ಞಾನವೇ ಇರುವುದಿಲ್ಲ ತುಲಾ ರಾಶಿಯವರಿಗೆ ಸಾಡೇಸಾತಿಯ 3ನೇ ಹಂತದಲ್ಲಿ. ಸಾಡೇಸಾತಿಯಲ್ಲಿನ ರಾಶಿಗಳವರು ತಮ್ಮ ತಲೆಯಿಂದ ಪಾದದವರೆಗಿನ ಆರೋಗ್ಯದ ತೊಂದರೆಗಳನ್ನು ಮೊದಲು ಪಟ್ಟಿ ಮಾಡಿಕೊಳ್ಳಬೇಕು. ಪಟ್ಟಿಗಳಲ್ಲಿ ಅತೀ ಮುಖ್ಯ ಆರೋಗ್ಯ ತೊಂದರೆಗಳನ್ನು ಆರಿಸಿಕೊಂಡು ಒಂದೊಂದನ್ನಾಗಿ ನಿವಾರಿಸಿಕೊಳ್ಳಲು ಆರಂಭಿಸಬೇಕು. ಇಲ್ಲವಾದರೆ ದೇಹದ ತೊಂದರೆಗಳು ಹೆಚ್ಚಾಗಿ ನೋವಿನ ಅನುಭವ ಪಡೆಯಬೇಕಾಗುತ್ತದೆ. ಇನ್ನು ಹಳೆಯ ಗಾಯ, ನೋವುಗಳನ್ನೂ ಕೂಡ ಮರೆಯದೇ ಟಿಪ್ಪಣಿಯಲ್ಲಿ ಸೇರಿಸಿಕೊಂಡು ಅವುಗಳನ್ನೂ ಪರೀಕ್ಷಿಸಿಕೊಳ್ಳಬೇಕು. ಚೆನ್ನಾಗಿ ಬಾಳಿ ಬದುಕಬೇಕೆಂದರೆ ಈ ರೀತಿ ಮಾಡಬೇಕು. ಕರ್ಮಫಲ ಪಟ್ಟಿ ತಯಾರಿಸಿ : ಹೀಗೇಯೇ ಹಲವಾರು ವರ್ಷಗಳಿಂದ ನೀವ್ಯಾರಿಗೆ ಏನೇನು ಅನ್ಯಾಯ ಮಾಡಿದ್ದೀರಿ, ಅಸತ್ಯವನ್ನಾಡಿದ್ದೀರಿ, ಎಷ್ಟು ಜನರಿಗೆ ಮೋಸ ಮಾಡಿದ್ದೀರಿ ಇನ್ನೇನು ಕೆಟ್ಟ ಕೆಲಸ ಮಾಡಿದ್ದೀರಿ ಎಂಬುದನ್ನೂ ಪಟ್ಟಿ ಮಾಡಿಟ್ಟುಕೊಳ್ಳಿ. ಯಾಕೆಂದರೆ ನೀವು ಮಾಡಿದ್ದೆಲ್ಲವೂ ಚಕ್ರಬಡ್ಡಿ ಸಮೇತ ನಿಮಗೆ ಮರಳಿ ಬರುತ್ತವೆ ಸಾಡೇಸಾತಿಯಲ್ಲಿ. ಎಷ್ಟು ಜನರಿಗೆ ಒಳ್ಳೆಯದನ್ನು ಮಾಡಿದ್ದೀರಿ ಎಂಬುದನ್ನು ಕೂಡ ಪಟ್ಟಿ ಮಾಡಿಟ್ಟುಕೊಳ್ಳಿ. ಶನಿದೇವನು ನೀವೆಷ್ಟು ಒಳ್ಳೆಯದನ್ನು ಮಾಡಿದ್ದೀರೋ ಅದರ ನೂರು ಪಟ್ಟು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ ಸಾಡೇಸಾತಿಯಲ್ಲಿ. ಶನಿದೇವನು ನೀಡುವ ಕರ್ಮಫಲಗಳನ್ನು ಯಾವ ದೇವರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡರೆ ಮಹಾತ್ಮನ ಶಕ್ತಿ ಗೊತ್ತಾಗುತ್ತದೆ. ನಿಮ್ಮ ಕರ್ಮಫಲಗಳ ಪಟ್ಟಿಯನ್ನೊಮ್ಮೆ ನೋಡಿಕೊಳ್ಳಿ. ನೀವೆಷ್ಟು ಒಳ್ಳೆಯದನ್ನು ಮಾಡಿದ್ದೀರಿ ಎಷ್ಟು ಕೆಟ್ಟದ್ದನ್ನು ಮಾಡಿದ್ದೀರಿ ಎಂಬುದನ್ನು ಅರಿತುಕೊಂಡು ಸುಖ, ದುಃಖ ಅನುಭವಿಸುವ ಧೈರ್ಯ ಬೆಳೆಸಿಕೊಳ್ಳಿ ಸಾಡೇಸಾತಿಯ ಸಮಯದಲ್ಲಿ. ಇನ್ನು ಸಾಡೇಸಾತಿಯಲ್ಲಿ ಪರಿಹಾರಗಳನ್ನು ಮಾಡಿಕೊಂಡರೆ ಆಗಿರುವ ನೋವುಗಳನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ. ಹಾಗೆಯೇ ಬರುವ ಸಂಕಷ್ಟಗಳು ಸ್ವಲ್ಪ ಕಮ್ಮಿ ನೋವು ಕೊಡುತ್ತವೆ. ನಿಮಗೆ ಗೊತ್ತಿರಬಹುದು ಬಿದಿರಿನ ಸಣ್ಣ ಕೋಲನ್ನು ತಪ್ಪು ಮಾಡಿದವರಿಗೆ ಹೊಡೆಯಲೂ ಬಳಸಬಹುದು. ಅದೇ ಕೋಲನ್ನು ಸ್ವಲ್ಪ ಮಾರ್ಪಾಟು ಮಾಡಿ ಕೊಳಲನ್ನಾಗಿ ಮಾಡಿಕೊಂಡು ಇಂಪಾದ ಸಂಗೀತ ಕೇಳಬಹುದು. ಇದೇ ರೀತಿ ಶನಿದೇವನ ಪ್ರಭಾವವನ್ನು ತಿಳಿದುಕೊಳ್ಳಬೇಕು. ಬಿದಿರಿನ ಕೋಲಿನಿಂದ ಹೊಡೆತ ತಿನ್ನಬೇಕೋ ಅಥವಾ ಬಿದಿರಿನಿಂದಲೇ ಮಾಡಿದ ಕೊಳಲಿನಿಂದ ಸುಮಧುರ ಸಂಗೀತ ಕೇಳಿ ಮನಸ್ಸನ್ನು ಉಲ್ಲಸಿತವಾಗಿಟ್ಟುಕೊಳ್ಳಬೇಕಾ ಎಂಬುದನ್ನು ನಿಮ್ಮ ಆತ್ಮಕ್ಕೊಮ್ಮೆ ಕೇಳಿಕೊಳ್ಳಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ : "ನಡಕೊಂಡ ಪಡಕೋಬೇಕಂತ" ಎಂಬ ಮಾತನ್ನು ಸ್ವಲ್ಪ ನೆನಸಿಕೊಳ್ಳಿ. ನಿಮ್ಮ ಪರಿಚಯದವರನ್ನು ನೀವು ದೂರದಿಂದ ನೋಡಿದಾಗ ಅವರ ಗುಣ ನೆನಸುತ್ತೀರಿ ಹೊರತು ಅವರ ಹೆಸರನ್ನ ಆಮೇಲೆ. ಒಳ್ಳೆಯ ಗುಣದವರಿದ್ದರೆ ಅವರ ಹೆಸರು ಹೇಳುತ್ತಾ ತುಂಬಾ ಒಳ್ಳೆಯವರು ಅನ್ನುತ್ತೀರಾ. ಆದರೆ ಅವರೇನೂ ಹೇಳಿರುವುದಿಲ್ಲ ನಿಮಗೆ, ನನಗೆ ಒಳ್ಳೆಯವನು ಅನ್ನಿ ಅಂತ. ಅದೇ ರೀತಿ ನಿಮ್ಮನ್ನೂ ಒಳ್ಳೆಯವರು ಅಂತ ಬೇರೆಯವರು ಹೇಳುವ ಹಾಗೆ ನಿಮ್ಮನ್ನು ನೀವು ರೂಪಿಸಿಕೊಳ್ಳಿ. ದೇವನ ಕೃಪೆಗೆ : ಈ ಶ್ರಾವಣದಲ್ಲಿ ರುದ್ರನಿಗೆ ರುದ್ರಾಭಿಷೇಕ ಮಾಡಿಸಿ. -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...