Skip to main content

ಜಾತಕದಲ್ಲಿ ಅಭಿಚಾರ ಯೋಗ

ಶಾಸ್ತ್ರಿಗಳೇ ನನ್ನ ಮಗ ವಿಪರೀತ ಕಷ್ಟ ಪಡ್ತಾನೆ. ಹಗಲಿರುಳು ಆಟಕ್ಕೂ ಹೋಗದೆ ಓದ್ತಾನೆ. ಆದ್ರೆ ಅದೇಕೋ ಅವನ ವಿದ್ಯಾಭ್ಯಾಸದಲ್ಲಿ ಏಳ್ಗೆಯಾಗ್ತಾ ಇಲ್ಲ. ಏನಾದ್ರೂ ಮೆಮೊರಿ ಪ್ರಾಬ್ಲಂ ಅಂತಾ ಅವರಿವರಲ್ಲಿ ತೋರಿಸಿದೆ. ಒಂದಿಷ್ಟು ಔಷದೋಪಚಾರಾನೂ ಮಾಡಾಯ್ತು. ಆದ್ರೂ ಪ್ರಯೋಜನವಾಗಲಿಲ್ಲ. ಅವನ ಜಾತಕ ಕುಂಡಲೀನಾ ಒಮ್ಮೆ ನೋಡಿ... ಅಂತ ಜಾತಕವನ್ನು ಮುಂದಿಟ್ಟಳು. ಸುಶೀಲ ನೋಡೋಕೆ ಸ್ಫುರದ್ರೂಪಿ ಯುವಕ. 16ರ ವಯಸ್ಸು. ಅವನ ಕುಂಡಲಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ನೋಡಿದೆ. ಜಾತಕದಲ್ಲಿ ಅಭಿಚಾರ ಯೋಗವಿತ್ತು. ಅದು ಜನ್ಮದಿಂದಲೇ ಬಂದ ಕಾರಣ, ಅವನ ವಿದ್ಯಾಭ್ಯಾಸಕ್ಕೆ ಹಿನ್ನಡೆ ಉಂಟಾಗಿತ್ತು. ಜನ್ಮ ಜಾತಕದಲ್ಲಿ ಆಭಿಚಾರ ಯೋಗದ ಬಗ್ಗೆ ತಿಳಿದುಕೊಳ್ಳುವ ಮುನ್ನ ಒಂದೆರಡು ಸಂಗತಿಗಳತ್ತ ಗಮನ ಹರಿಸೋಣ. ಆಭಿಚಾರದಲ್ಲಿ ಎರಡು ಬಗೆಗಳಿವೆ. ಅದೆಂದರೆ ಕ್ಷುದ್ರಾಭಿಚಾರ ಮತ್ತು ಮಹಾಭಿಚಾರ. ಪ್ರಶ್ನೆ ಕೇಳುವ ಮೂಲಕ ವ್ಯಕ್ತಿಯ ಮೇಲೆ ಆಭಿಚಾರ ಪ್ರಯೋಗ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಜಾತಕದಲ್ಲಿ ಅಭಿಚಾರ ಜನ್ಮ ಕುಂಡಲಿಯ ಆರನೆ ಮನೆಯಲ್ಲಿರುವ ಗ್ರಹ ಮತ್ತು ಅದರ ವರ್ಣವನ್ನು ಗುರುತಿಸುವ ಮೂಲಕ ಆಭಿಚಾರ ದೋಷವನ್ನು ಪತ್ತೆ ಮಾಡಬಹುದು. ಯಾರ ಜಾತಕದಲ್ಲಿ ಬುಧನು ಬಾಧಕ ಸ್ಥಾನದಲ್ಲಿ ಇರುತ್ತಾನೋ ಅವನು ಅಭಿಚಾರ ದೋಷದಿಂದ ಬಳಲುತ್ತಾನೆ. ಒಂದು ವೇಳೆ ಜಾತಕನ ಕುಂಡಲಿಯಲ್ಲಿ ಅಭಿಚಾರ ದೋಷವಿದ್ದರೂ ಇತರೆ ಸ್ಥಾನಗಳು ಶುಭಸ್ಥಾನದಲ್ಲಿದ್ದರೆ ಅಭಿಚಾರ ದೋಷ ಕಾಣಬರುವುದಿಲ್ಲ. ಜಾತಕದಲ್ಲಿ ಕೆಳಕಂಡ ಗ್ರಹಗಳು ಸ್ಥಾನದ ಆಧಾರದ ಮೇಲೆ ಅಭಿಚಾರ ಯೋಗವನ್ನು ಲೆಕ್ಕಾಚಾರ ಹಾಕಬಹುದು. ಅದರಲ್ಲೂ ಷಟ್ ಸ್ಥಾನವು ಮುಖ್ಯವಾಗಿದೆ. ಜಾತಕದಲ್ಲಿ ಅಭಿಚಾರ ದೋಷವನ್ನು ಲೆಕ್ಕಾಚಾರ ಹಾಕುವಾಗ, ವಿಶೇಷವಾಗಿ ಕುಜ ಸ್ಥಾನವನ್ನು ಗಮನಿಸಬೇಕು. ಆರು ಮತ್ತು ಎಂಟನೆಯ ಸ್ಥಾನದಲ್ಲಿ ಯಾವ ಗ್ರಹಗಳಿವೆ ಅದರ ಅಧಿಪತಿಗಳೇನು ಎಂಬುದನ್ನು ಗಮನಿಸಬೇಕು. ಇದರ ಆಧಾರದ ಮೇಲೆ ಜಾತಕನಿಗೆ ಮಹಾ ಅಭಿಚಾರ ಅಥವಾ ಕ್ಷುದ್ರ ಅಭಿಚಾರ ದೋಷದಿಂದ ಪೀಡಿಸಲ್ಪಟ್ಟಿದ್ದಾನೆಯೇ ಎಂಬುದನ್ನು ಲೆಕ್ಕ ಹಾಕಬಹುದು. ಆರನೆ ಮನೆಯಲ್ಲಿರುವ ಗ್ರಹ ಅದರ ಬಣ್ಣ, ಸ್ವರೂಪದ ಆಧಾರದ ಮೇಲೆ ಯಾವ ವರ್ಣದವರಿಂದ ಅಭಿಚಾರ ಪ್ರಯೋಗ ಆಗಿದೆ, ಆತನ ಸ್ಥಳವೆಲ್ಲಿಯದು ಎಂಬುದನ್ನೂ ತಿಳಿದುಕೊಳ್ಳಬಹುದು. ಒಂದು ವೇಳೆ ಷಷ್ಠಮ ಸ್ಥಾನದಲ್ಲಿ ಗುರುವಿದ್ದರೆ ಮಾಟಮಂತ್ರದಂತಹ ಅಭಿಚಾರ ವಿದ್ಯೆಗಳಲ್ಲಿ ಪರಿಣತನೂ, ಶತ್ರುಗಳನ್ನು ನಾಶಮಾಡುವವನೂ,ಅತ್ಯಂತ ಆಲಸಿಯೂ ಆಗುವ ಲಕ್ಷಣಗಳನ್ನು ಹೊಂದಿರುತ್ತಾನೆ. ಜಾತಕದಲ್ಲಿ ಅಭಿಚಾರ ದೋಷವಿದೆ ಅಥವಾ ನೀವು ಅಭಿಚಾರ ಪ್ರಯೋಗಕ್ಕೆ ಒಳಗಾಗಿದ್ದೀರೆಂದಾಕ್ಷಣ ಹೆದರುವ ಅಗತ್ಯವಿಲ್ಲ. 'ಪ್ರತಿ ಪಕ್ಷ ನಾಶಿನಿ ಪ್ರತಿ ಮಂತ್ರ ಭಕ್ಷಿಣಿ' ಆದ ಪ್ರತ್ಯಂಗಿರಿ ದೇವಿಯ ಆರಾಧನೆಯಿಂದ ದೋಷ ಪರಿಹಾರವಾಗುತ್ತದೆ. ಪ್ರತ್ಯಂಗಿರಾ ದೇವಿಯನ್ನು ಅಥರ್ವಣ ಭದ್ರಕಾಳಿ ಅಥವಾ ನಿಕುಂಭಿಲಾ ಎಂತಲೂ ಕರೆಯುತ್ತಾರೆ. ದೋಷ ಪರಿಹಾರಕ್ಕಾಗಿ ಪ್ರತ್ಯಂಗಿರಾ ದೇವತೆಯ ಉಪಾಸನೆಯನ್ನು ಅಮಾವಾಸ್ಯೆ, ಹುಣ್ಣಿಮೆಯ ದಿನಗಳಂದು ಮಾಡಬೇಕು. ಅದರಲ್ಲೂ ವಿಶೇಷವಾಗಿ ವಿಷಚೂರ್ಣ ಪ್ರಯೋಗ, ಭಾನಾಮತಿ ಪ್ರಯೋಗ ಮತ್ತಿತರ ಋಣಬಾಧೆಗಳಿಂದ ನರಳುತ್ತಿರುವವರೂ ದೋಷ ಪರಿಹಾರಾರ್ಥವಾಗಿ ಪ್ರತ್ಯಂಗಿರಾ ದೇವಿಯ ಪೂಜೆಯನ್ನು ಮಾಡಬಹುದು. ಹೋಮಕ್ಕೆ ಕೆಂಪು ಮೆಣಸಿನಕಾಯಿ, ದಾಳಿಂಬೆ ಬೀಜ ಮತ್ತು ಕೆಲ ಗಿಡ ಮೂಲಿಕೆಗಳನ್ನು ಬಳಸುವ ಪದ್ಧತಿಯಿದೆ. ಸಮಸ್ಯೆ ಪರಿಹಾರಕ್ಕೊಂದು ಸೂತ್ರ * ಪ್ರತಿನಿತ್ಯ ಪ್ರತ್ಯಂಗಿರಾ ಮಂತ್ರ ಜಪ ಮಾಡಿದರೆ ಶತ್ರುಗಳು ಕ್ರಮವಾಗಿ ಕಡಿಮೆಯಾಗುತ್ತಾರೆ. * ಕಳಶ ಸ್ಥಾಪನೆ ಮಾಡಿ ಅಕ್ಕಿ ರಾಶಿಯಲ್ಲಿ ಪ್ರತ್ಯಂಗಿರ ಯಂತ್ರ ಇಟ್ಟು ಪ್ರಾಣ ಪ್ರತಿಷ್ಠೆ ಮಾಡಿ ಆವರಣ ಪೂಜೆ, ಸಹಸ್ರ ನಾಮಾವಳಿಯಿಂದ ಅರ್ಚನೆ ಮಾಡಿ 1.25 ಲಕ್ಷ ನಾರಾಯಣೆ ಪ್ರತ್ಯಂಗಿರ ಜಪ ಮಾಡಿ. ಬಿಳಿ ಎಕ್ಕದ ಸವಿತ್ತು, ಮೆಣಸು, ತುಪ್ಪ, ಎಳ್ಳು, ಹೋಮ ಮಾಡಿದರೆ ದುಷ್ಟಶಕ್ತಿ ನಿವಾರಣೆಯಾಗುತ್ತದೆ. -ಅಶ್ವತ್ಥನಾರಾಯಣ ಗಡಿದಂ -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...