*ಮೂಲಾ ನಕ್ಷತ್ರ ಮೂರುಲೋಕವಾಸ*
ಮೂಲಾ ನಕ್ಷತ್ರವು ಒಂದು ವರ್ಷದಲ್ಲಿ ತಲಾ ೪ ತಿಂಗಳಿನಂತೆ ಸ್ವರ್ಗ,ಮರ್ತ್ಯ,ಪಾತಾಳಗಳಲ್ಲಿ ವಾಸಮಾಡುತ್ತದೆ.
ಆಷಾಡ,ಆಶ್ವೀಜ,ಬಾದ್ರಪದ,ಮಾಘಮಾಸಗಳಲ್ಲಿ ಸ್ವರ್ಗಲೋಕದಲ್ಲಿಯು.
ವೈಶಾಖ,ಜ್ಯೇಷ್ಟ,ಮಾರ್ಗಶಿರ,ಪಾಲ್ಗುಣ ಮಾಸಗಳಲ್ಲಿ ಪಾತಾಳದಲ್ಲು.
ಚೈತ್ರ,ಶ್ರಾವಣ,ಕಾರ್ತೀಕ,ಪುಷ್ಯ ಮಾಸಗಳಲ್ಲಿ ಭೂಲೋಕದಲ್ಲಿಯು ವಾಸಮಾಡುತ್ತದೆ.
ಭೂಲೋಕದಲ್ಲಿ ಮೂಲಾ ನಕ್ಷತ್ರವು ವಾಸಮಾಡುತ್ತಿರುವಾಗ ಮಗು ಜನಿಸಿದರೆ(ಅಂದರೆ ಚೈತ್ರ,ಶ್ರಾವಣ,ಕಾರ್ತೀಕ,ಪುಷ್ಯ ಮಾಸಗಳಲ್ಲಿ)ಮಾತ್ರ ದೋಷ ಉಂಟಾಗುತ್ತದೆ.ಆಗ ಗೋಮುಖಪ್ರಸವ ಶಾಂತಿ ಮಾಡಿಸಬೇಕು.
ಪೂರ್ವಾಷಾಡ:-
ಈ ನಕ್ಷತ್ರದಲ್ಲಿ ಮಗು ಜನಿಸಿದರೆ ಮಗುವಿನ ತಂದೆ-ತಾಯಿಗೆ ದೋಷವುಂಟಾಗುತ್ತದೆ. ಆದ್ದರಿಂದ ಕಂಚಿನ ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ವಸ್ತ್ರ,ಫಲ,ತಾಂಬೂಲ,ದಕ್ಷಿಣೆ ಸಹಿತ ಪುರೋಹಿತರಿಗೆ/ಬಡವರಿಗೆ/ಗುರುಗಳಿಗೆ ದಾನಕೊಡಬೇಕು ಈ ಕಾರ್ಯ ಮಗು ಜನಿಸಿದ ೨೭ ದಿನದೊಳಗೆ ನಡೆಯಬೇಕು.
ಅಶ್ಲೇಷ:-
ಈ ನಕ್ಷತ್ರಕ್ಕೆ ಆದಿಶೇಷನು ಅಧಿಪತಿಯಾಗಿರುವುದರಿಂದ ಸರ್ಪದ ಹೆಡೆ ಅಗಲದಷ್ಟು ಇರುವ ಕಲಾಪತ್ತಿನ ಅಂಚುಳ್ಳ ಶಾಲನ್ನು ತಂದುಶಾಂತಿ ಮಾಡತಕ್ಕ ಸ್ಥಳದಲ್ಲಿ ಸಾರಿಸಿ ಗಣಪತಿಯನ್ನು ಸ್ಥಾಪಿಸಿ ಪೂಜಿಸಬೇಕು.ರಂಗವಲ್ಲಿಯಿಂದ ಕಮಲಾಕಾರದ ಮಂಡಲವನ್ನು ಬರೆದು ಒಂದು ಹೊಸ ಮೊರದಲ್ಲಿ ಭತ್ತವನ್ನು (ಅಕ್ಕಿ)ಹರವಿ ಒಂದು ದೊನ್ನೆಯಲ್ಲಿ ೯ವಿಧ ದಾನ್ಯವನ್ನು ಹಾಕಿ(ನವದಾನ್ಯ)೯ ವಿಧವಾದ ಪತ್ರೆಗಳಿಂದ(ಬಿಲ್ವ,ಭನ್ನಿ,ಎಕ್ಕ,ಅರಳಿ,ಮುತ್ತುಗ,ಉತ್ತರಾಣಿ,ಅತ್ತಿಚಿಗುರು,ಗರಿಕೆ,ದರ್ಭೆ)ಇವುಗಳನ್ನು ನವದಾನ್ಯಗಳಿಗೆ ಹಾಕಿ ಪೂಜಿಸಿ ಶಿಶುವನ್ನು ಮೊರದೊಳಗೆ ಮಲಗಿಸಿ ಶಾಲನ್ನು ಶಿಶುವಿನ ಬಲಬಾಗದಲ್ಲಿರಿಸಿ ಅದರ ಮೇಲೆ ಒಂದು ಬಿಳಿ ವಸ್ತ್ರ ಹೊದಿಸಿ ಒಂದು ಬೆಳ್ಳಿಯ ನಾಣ್ಯವನ್ನು ಪಂಚಪಾತ್ರೆಗೆ ಹಾಕಿ ಪೂಜಿಸಬೇಕು.
ತಾಯನ್ನು ಪೂರ್ವಾಭಿಮುಖವಾಗಿ ಕೂರಿಸಿ ತಂದೆಯಿಂದ ಮಂಡಲವನ್ನು ಪ್ರದಕ್ಷಿಣೆ ಮಾಡಿಸಿ ಆಚಾರ್ಯರು ಶಿಶುವನ್ನು ತಾಯ ಮಡಿಲಿಗೆ ಹಾಕಬೇಕು.
ಆನಂತರ ಗುರು ಹಿರಿಯರು ಮಗು+ತಾಯಿಗೆ ಆಶೀರ್ವದಿಸಬೇಕು.ತಂದೆಯು ಪೂಜೆಗೆ ಉಪಯೋಗಿಸಿದ ಎಲ್ಲಾ ಪದಾರ್ಥಗಳನ್ನು ಆಚಾರ್ಯನಿಗೆ ಕೊಟ್ಟು ಭೋಜನ ಮಾಡಿಸಿ ಆಶೀರ್ವಾದ ಪಡೇಯಬೇಕು.
*ತಿಥಿ,ನಕ್ಷತ್ರ,ಲಗ್ನಗಳ ಸಂಧಿಕಾಲಗಳಾಲ್ಲಿ ಜನಿಸಿದ ದೋಷ ಪರಿಹಾರ*
ತಿಥಿ ಮುಗಿಯುವ ಕಾಲದಲ್ಲಿ ಕೊನೆ ೨ಘಳಿಗೆ ಆನಂತರದ ಮುಂದಿನ ತಿಥಿ ಪ್ರಾರಂಭದಲ್ಲಿನ ೩ ಘಳೀಗೆಯಲ್ಲಿ ಮಗುವು ಜನಿಸಿದರೆ ಸಂಧಿದೋಷ ಉಂಟಾಗುತ್ತದೆ.ಹಾಗೆಯೇ ಲಗ್ನ ಸಂಧಿ,ನಕ್ಷತ್ರ ಸಂಧಿಗಳಲ್ಲಿಯು ಸಹ ದೋಷ ಉಂಟಾಗುತ್ತದೆ.
ಇಂತಹ ಸಂಧಿಕಾಲ ದೋಷಗಳಲ್ಲಿ ಮಗು ಜನಿಸಿದರೆ ಬದುಕುವುದು ಕಷ್ಟ.ಇದರ ನಿವಾರಣೆಗಾಗಿ ನವಗ್ರಹ ಶಾಂತಿ ಮಾಡಿಸಿ ಬೆಳ್ಳಿಯಲ್ಲಿ ಹಸು-ಕರು ಮಾಡಿಸಿ ಅದರ ಬೆಲೆ ಸಹಿತ ಅಕ್ಕಿ ತುಂಬಿದ ಕಂಚಿನ ಪಾತ್ರೆಯಲ್ಲಿರಿಸಿ ದಕ್ಷಿಣೆ,ತಾಂಬೂಲ ಸಹಿತ ಪುರೋಹಿತರಿಗೆ/ಬಡವರಿಗೆ/ಗುರುಗಳಿಗೆ ದಾನ ಕೊಡಬೇಕು.
*ಸ್ತ್ರೀ ಜನನ ನಕ್ಷತ್ರ ದೋಷ ವಿಚಾರ*
ಮೂಲ,ಅಶ್ಲೇಷ,ಜ್ಯೇಷ್ಟ,ವಿಶಾಖ,ಈ ೪ ನಕ್ಷತ್ರಗಳಲ್ಲಿ ಹೆಣ್ಣು ಮಗು ಜನಿಸಿದರೆ ದೋಷವುಂಟಾಗುವುದು.ಈ ದೊಷ ತಂದೆ ಮನೆಯವರಿಗೆ ಇರುವುದಿಲ್ಲ.ಆ ಹೆಣ್ಣು ಮಗು ದೊಡ್ಡವಳಾಗಿ ಮದುವೆಯಾಗಿ ಹೋದಮನೆಗೆ ದೋಷವುಂಟಾಗುವುದು.
ಮೂಲಾ ನಕ್ಷತ್ರದಲ್ಲಿ ಜನಿಸಿದ ಹೆಣ್ಣುಮಗು ತನ್ನ ಮಾವನಿಗೂ
ಅಶ್ಲೇಷದಲ್ಲಿ ಜನಿಸಿದವಳು ಅತ್ತೆಗೂ
ಜ್ಯೇಷ್ಟದಲ್ಲಿ ಜನಿಸಿದವಳು ತನ್ನ ಗಂಡನ ಅಣ್ಣನಿಗೂ
ವಿಶಾಖದಲ್ಲಿ ಜನಿಸಿದವಳು ತನ್ನ ಗಂಡನ ತಮ್ಮನಿಗೂ ಅರಿಷ್ಟವನ್ನುಂಟುಮಾಡುವಳು.
ಇದರ ಪರಿಹಾರಕ್ಕಾಗಿ ಬಂಗಾರದ ಅಥವ ಬೆಳ್ಳಿಯಲ್ಲಿ ದೇವಿಯ ಪ್ರತಿಮೆ ಮಾಡಿಸಿ ಅಕ್ಕಿ ತುಂಬಿದ ಬೆಳ್ಳಿತಟ್ಟೆಯಲ್ಲಿರಿಸಿ ವಸ್ತ್ರ,ಫಲ,ತಾಂಬೂಲ,ದಕ್ಷಿಣೆ ಸಹಿತ ಪುರೋಹಿತರಿಗೆ ದಾನ ಕೊಡಬೇಕು. ದೇವಿ ಪ್ರತಿಮೆಗೆ ತಗುಲಿದ ಬೆಲೆಯನ್ನು ತಟ್ಟೆಯಲ್ಲಿರಿಸುವುದನ್ನು ಮರೆಯ ಬಾರದು. ಈ ರೀತಿ ಮಾಡಿದರೆ ಮಗು ದೊಡ್ಡವಳಾಗಿ ಮದುವೆಯಾಗಿ ಹೋಗುವವರ ಮನೆಗೆ ಶುಭ ಪ್ರಾಯಳಾಗಿ ಮನೆಯನ್ನು ಬೆಳಗುವಳು ಮತ್ತು ಸೌಭಾಗ್ಯವನ್ನು ಪಡೇಯುವಳು.ಎಂದು ಹಲವಾರು ಜ್ಯೋತಿಷ್ಯಜ್ಞರ ಅಭಿಪ್ರಾಯವಾಗಿದೆ.
*ಜನನ ಮರಣ ನಕ್ಷತ್ರ ದೋಷ*
೧.ಅಶ್ವಿನಿ- ದೋಷ -ದೋಷವಿಲ್ಲ
೨.ಭರಣಿ- ದೋಷ -ದೋಷವಿಲ್ಲ
೩.ಕೃತಿಕಾ-ದೋಷವಿಲ್ಲ -೩ತಿಂಗಳು ದೋಷ
೪.ರೋಹಿಣಿ-ದೋಷ-೪ತಿಂಗಳು ದೋಷ
೫.ಮೃಗಶಿರ-ದೋಷವಿಲ್ಲ-೨ತಿಂಗಳು ದೋಷ
೬.ಆರಿದ್ರಾ-ದೋಷ-ದೋಷವಿಲ್ಲ
೭.ಪುನರ್ವಸು-ದೋಷವಿಲ್ಲ-೩ತಿಂಗಳು ದೋಷ
೮.ಪುಷ್ಯ-ದೋಷ-ದೋಷವಿಲ್ಲ
೯.ಅಶ್ಲೇಷ-ದೋಷ-ದೋಷವಿಲ್ಲ
೧೦.ಮುಖ-ದೋಷ-೪ತಿಂಗಳು ದೋಷ
೧೧.ಪುಬ್ಬ-ದೊಷವಿಲ್ಲ-ದೋಷವಿಲ್ಲ
೧೨.ಉತ್ತರ-ದೋಷ-೩ತಿಂಗಳು ದೋಷ
೧೩.ಹಸ್ತ-ದೋಷವಿಲ್ಲ-ದೋಷವಿಲ್ಲ
೧೪.ಚಿತ್ತ-ದೋಷ-೨ತಿಂಗಳುದೋಷ
೧೫.ಸ್ವಾತಿ-ದೋಷವಿಲ್ಲ-ದೋಷವಿಲ್ಲ
೧೬.ವಿಶಾಖ-ದೋಷವಿಲ್ಲ-ದೋಷವಿಲ್ಲ
೧೭.ಅನುರಾಧ-ದೋಷವಿಲ್ಲ-ದೋಷವಿಲ್ಲ
೧೮.ಜ್ಯೇಷ್ಟ-ದೋಷ-ದೋಷವಿಲ್ಲ
೧೯.ಮೂಲ-ದೋಷ-ದೋಷವಿಲ್ಲ
೨೦.ಪೂ-ಷಾಡ-ದೋಷ-ದೋಷವಿಲ್ಲ
೨೧.ಉ-ಷಾಡ-ದೋಷವಿಲ್ಲ-೩ತಿಂಗಳು ದೋಷ
೨೨.ಶ್ರವಣ-ದೋಷವಿಲ್ಲ-ದೋಷವಿಲ್ಲ
೨೩.ಧನಿಷ್ಟ-ದೋಷವಿಲ್ಲ-೫ತಿಂಗಳು ದೋಷ
೨೪.ಶತಭಿಷ-ದೋಷವಿಲ್ಲ-೪ತಿಂಗಳು ದೋಷ
೨೫.ಪೂ-ಬಾದ್ರ-ದೋಷವಿಲ್ಲ-೫ತಿಂಗಳು ದೋಷ
೨೬.ಉ-ಬಾದ್ರ-ದೋಷವಿಲ್ಲ-೫ತಿಂಗಳು ದೋಷ
೨೭.ರೇವತಿ-ದೋಷ-೫ತಿಂಗಳು ದೋಷ
ಮರಣ ನಕ್ಷತ್ರ ದೋಷಗಳಿಗೆ ಆಯಾ ನಕ್ಷತ್ರ ದೋಶಾನುಸಾರವಾಗಿ ದೋಷಗಳಿರುವಷ್ಟು ತಿಂಗಳುಗಳ ಕಾಲ ಮನೆಯನ್ನು ಬಿಡುವುದುಸೂಕ್ತ ಎಂದು ಅನೇಕ ಜ್ಯೋತಿಷ್ಯ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
*ನಕ್ಷತ್ರ ಕಂಟಕ*
ಯಾವುದೇ ನಕ್ಷತ್ರದ ಪ್ರಾರಂಭದ ೨ ಘಳಿಗೆಯಲ್ಲಿ ಶಿಶು ಜನಿಸಿದರೆ ಗಂಡಾಂತರ, ಜನಿಸಿದ ೧ನೇ ವರ್ಷದಲ್ಲಿ ಅಗ್ನಿ ಭಯ,೨ನೇ ವರ್ಷದಲ್ಲಿ ಜ್ವರಬಾದೆ,೩ನೇ ವರ್ಷದಲ್ಲಿ ಹೊಟ್ಟೆಶೂಲೆ,೫ನೇವರ್ಷದಲ್ಲಿ ವ್ರಣಬಾದೆ,೧೦ನೇ ವಯಸ್ಸಿನಲ್ಲಿ ಜ್ವರಬಾದೆ,೧೬-೨೦ವಯಸ್ಸಿನಲ್ಲಿ ಮೇಹರೋಗ,೨೪ನೇವಯಸ್ಸಿನಲ್ಲಿ ಪಶುಭಯ,ಹಾಗು ಚೋರರಿಂದ ತೊಂದರೆ, ೩೩ನೇ ವಯಸ್ಸಿನಲ್ಲಿ ಜ್ವರ ಗಂಡಾಂತರ,೪೦ನೇ ವಯಸ್ಸಿನಲ್ಲಿ ವಿವಿದ ಕಾಯಿಲೆ,೫೦ನೇ ವಯಸ್ಸಿನಲ್ಲಿ ಶೀತ,ಪಿತ್ತಬಾದೆ,೬೦ನೇ ವಯಸ್ಸಿನಲ್ಲಿ ಮೆದುಳಿನ ಕಾಯಿಲೆ ಇವೆಲ್ಲಾ ಕಳೆದರೆ ೭೦ವರ್ಷ ಜಾತಕನಿಗೆ ಪರಮಾಯುಷ್ಯ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments