Skip to main content

ಏನಿದು ಶನಿರಾಜನ ತಾಮ್ರಪಾದದ ಮಹತ್ವ?

ಸಾಡೇಸಾತಿಯಲ್ಲಿ ಬರೀ ಕೆಟ್ಟದ್ದೇ ಆಗುತ್ತಾ ಎನ್ನುವವರು, ಕೆಟ್ಟದ್ದನ್ನು ಮಾಡಿದವರಿಗಷ್ಟೇ ಕೆಟ್ಟದ್ದಾಗುತ್ತದೆ ಎಂಬುದು ತಿಳಿದುಕೊಳ್ಳಿ. "ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿದ್ರಂತೆ" ಎಂಬ ಮಾತು ನೀವು ಕೇಳಿರಬಹುದು. "ಕಳ್ಳನ ಮನಸ್ಸು ಹುಳ್ಳುಳ್ಳಗೆ" ಅನ್ನೋ ಹಾಗೆ ಸಾಡೇಸಾತಿಯಲ್ಲಿರುವವರು ನನಗೆ ಕೆಟ್ಟದ್ದಾಗುತ್ತೆ ಅಂತ ಚಿಂತಿಸುವುದು ತಪ್ಪು. ನೀವು ಮಾಡಿದ್ದು ನಿಮಗೆ ಮರಳಿ ಬರುತ್ತದೆ ಅಷ್ಟೆ. ತಾಮ್ರಪಾದದಲ್ಲಿ ಬಂದ ಮಹಾತ್ಮನು, ಬಹಳಷ್ಟು ದಿನಗಳಿಂದ ಪಟ್ಟ ಶ್ರಮಕ್ಕೆ ತಕ್ಕ ಫಲ ಒದಗಿಸುತ್ತಾನೆ. ಹಣಕಾಸಿನ ತೊಂದರೆಯಿದ್ದರೆ ಸುಗಮವಾಗಿ ಬಗೆಹರಿಯುತ್ತದೆ. ಹಣವೇನಾದರೂ ನೀವು ಬೇರೆಯವರಿಗೆ ಕೊಟ್ಟಿದ್ದರೆ ಮರಳಿ ಬರಲಾರಂಭಿಸುತ್ತದೆ. ಹೂಡಿಕೆಯಿಂದಲೂ ಲಾಭವಾಗುತ್ತದೆ. ಆರೋಗ್ಯ ಸುಧಾರಣೆಯಾಗುತ್ತದೆ. ರೋಗರುಜಿನಗಳು ಗುಣವಾಗಲಾರಂಭಿಸುತ್ತವೆ. ಈ ರೀತಿಯಾಗಿ ತಾಮ್ರ ಪಾದದಲ್ಲಿ ಲಾಭವೇ ಆಗುತ್ತದೆ. ಸಾಡೇಸಾತಿಯಲ್ಲಿ ಮಹಾತ್ಮನು ಎಷ್ಟು ದಿನಗಳಿಂದ ಎಷ್ಟು ದಿನಗಳವರೆಗ ತಾಮ್ರಪಾದದಲ್ಲಿ ಬಂದಿದ್ದಾನೆ ಎಂಬುದನ್ನು ಅವರವರ ಜಾತಕದ ಮೂಲಕ ತಿಳಿದುಕೊಳ್ಳಬಹುದು. ವೃಶ್ಚಿಕ ರಾಶಿಗೆ 2ನೇ ಹಂತದಲ್ಲೇನಾಗುತ್ತದೆ? : ವೃಶ್ಚಿಕ ರಾಶಿಗೆ ಮಹಾತ್ಮನು ಬಂದಾಗ ಈ ರಾಶಿಗೆ ಸಾಡೇಸಾತಿ 2ನೇ ಹಂತ ಶುರುವಾಗುತ್ತದೆ. ಅಂದರೆ ಕುತ್ತಿಗೆಯಿಂದ ನಡದವರೆಗೆ. ಈ ಹಿಂದೆ ಚಟಗಳನ್ನು ಮಾಡಿದ್ದರೆ, ಚಟಗಳಿಂದುಟಾಗುವ ರೋಗಗಳು ದೇಹದಿಂದ ಹೊರಬರಲಾರಂಭಿಸುತ್ತವೆ. ವೃಶ್ಚಿಕವು ಶನಿದೇವನ ಶತ್ರು ರಾಶಿ. ಮಾಡಬಾರದ್ದನ್ನು ಮಾಡಿದವರಿಗೆ ಎಂದೂ ಅನುಭವಿಸದ ಕಷ್ಟಗಳು ಕೊರಳಿಗೆ ಸುತ್ತಿಕೊಳ್ಳುತ್ತವೆ. ಮನಸ್ಸು ಕಠೋರವಾಗುತ್ತದೆ. ಶ್ರಮ ವಹಿಸಿ ಕೆಲಸ ಮಾಡಬೇಕಾಗುತ್ತದೆ. ವಿಪರೀತ ಸಿಟ್ಟು ಆವರಿಸಿಕೊಂಡು ತನ್ನ ಕಾಲ ಮೇಲೆ ತಾನೇ ಕಲ್ಲು ಚೆಲ್ಲಿಕೊಳ್ಳುವಂತಾಗುತ್ತದೆ. ಕೆಲವೊಮ್ಮೆ ಅರಿವಿಲ್ಲದೆ ಮಾನ ಹೋಗುವಂತಹ ಕೆಲಸ ಮಾಡುವ ಮನಸ್ಸಾಗುತ್ತದೆ. ಕುಟುಂಬದಲ್ಲಿನ ಜಗಳ ವಿಪರೀತಕ್ಕೆ ಹೋಗುತ್ತದೆ. ಸುಖ, ಶಾಂತಿ, ಆನಂದ, ಉತ್ಸಾಹ ಎಲ್ಲವೂ ಮರೀಚಿಕೆಯಾಗುತ್ತದೆ. ಅವಿವೇಕತನ ಮನೆ ಮಾಡುತ್ತದೆ. ಹಣ ಹೊಂದಿಸಿಕೊಳ್ಳಲು ಕೆಟ್ಟ ಕೆಲಸಕ್ಕೂ ಮನಸ್ಸು ಸೈ ಎನ್ನುತ್ತದೆ. ಆದ್ದರಿಂದ ವೃಶ್ಚಿಕ ರಾಶಿಯವರು ಸಾಡೇಸಾತಿಯ ಮುಂದಿನ ದಿನಗಳನ್ನು ಸುಗಮವಾಗಿಸಿಕೊಳ್ಳಬೇಕೆಂದರೆ ಈಗಿನಿಂದಲೇ ದೈವಭಕ್ತಿಗೆ ಮೊರೆ ಹೋಗಬೇಕು. ದೈವಭಕ್ತಿಯನ್ನು ಮೂಢನಂಬಿಕೆ ಎನ್ನುತ್ತ, ದೇವರೆಲ್ಲಿದ್ದಾನೆ ಎನ್ನುವವರಿಗೆ ಸಾಡೇಸಾತಿಯಲ್ಲಿ ಗೊತ್ತಾಗುತ್ತದೆ ದೇವರ ಪಾದ ಎಲ್ಲಿದೆ ಎಂದು. ದೇವರ ಪಾದ ಹಿಡಿದುಕೊಂಡರೋ ಬದುಕುತ್ತಾರೆ. ಇಲ್ಲವಾದರೆ ಶಿವನಪಾದವೇ. ಕೆಲವರು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಸಾಕ್ಷರರಾಗಿ ಬಂಗಾರದ ಪದಕ ಪಡೆದಿರುತ್ತಾರೆ. ಆದರೇನು, ಇಂಥಹವರಲ್ಲಿ ಕೆಲವೊಬ್ಬರಿಗೆ ಮತ್ತೊಬ್ಬರ ಬಾಳು ಬಂಗಾರವಾಗಿರುವುದು ನೋಡುವುದಾಗುವುದಿಲ್ಲ. ಹೀಗಾಗಿ ಸಾಕ್ಷರರಾಗಿದ್ದೂ ಕೂಡ ರಾಕ್ಷಸರರಂತೆ ವರ್ತಿಸುತ್ತ ಬಂಗಾರದಂಥ ಮನುಷ್ಯರಿಗೆ ತೊಂದರೆ ಕೊಡುತ್ತ ಇವರೇ ದೇವರಾಗಿ ಬಿಟ್ಟಿರುತ್ತಾರೆ. ಯಾವ ದೇವರಿಗೂ ಕೈ ಮುಗಿಯುವುದಿಲ್ಲ. ಇಂಥಹವರನ್ನು ಶನಿದೇವ ನೋಡಿ ನೋಡಿ ಅವರ ಕೈಗೆ ಕೊಳ ತೊಡಿಸಿ ಅವರ ಅಟ್ಟಹಾಸವನ್ನು ಮಟ್ಟ ಹಾಕುತ್ತಾನೆ. ಎಷ್ಟೋ ಜನ ಅನ್ಯಾಯ, ಅಸತ್ಯ, ಅನೀತಿ, ಲಂಚತನ, ಭ್ರಷ್ಟತನ ಮಾಡುತ್ತ ಆರಾಮಾಗಿಯೇ ಇರುವುದು ನೀವು ನೋಡಿರಬಹುದು. ಈಗ ಸಾಡೇಸಾತಿ ನಡೆಯುತ್ತಿರುವ ಕನ್ಯಾ, ತುಲಾ, ವೃಶ್ಚಿಕ ರಾಶಿಯವರಲ್ಲಿ ಈ ತರಹದ ಜನರಿದ್ದರೆ, ನೀವೇ ಕಣ್ಣಾರೆ ನೋಡಬಹುದು ಅವರು ಪಡುತ್ತಿರುವ ಪಾಡನ್ನು. ವೃಶ್ಚಿಕ ಮತ್ತು ತುಲಾ ರಾಶಿಯವರು ಸಾಡೇಸಾತಿಯು ಉಗ್ರರೂಪ ಪಡೆದುಕೊಳ್ಳುವ ಮುನ್ನವೇ ತಾಳ್ಮೆಯಿಂದ, ಮುಂಜಾಗ್ರತೆ ತೆಗೆದುಕೊಂಡು ಪರಿಹಾರ ಮಾಡಿಕೊಳ್ಳಬೇಕು. ಇಲ್ಲವಾದರೆ ಕಷ್ಟಗಳನ್ನು ಆನಂದದಿಂದ ಅನುಭವಿಸುವ ಗುಣ ಬೆಳೆಸಿಕೊಳ್ಳಿ. ಯಾವ ವಿಷಘಳಿಗೆಯಲ್ಲಿ ಕರಳು ಚುರುಕ್ ಎನ್ನುತ್ತದೋ, ಯಾವಾಗ ಮೈ ಜುಮ್ ಎನ್ನುತ್ತದೋ, ಯಾವಾಗ ಎದೆ ಝಲ್ಲೆನ್ನುತ್ತದೋ ಎಂಬುದು ಅನುಭವಿಸಿದ ಮೇಲೇನೆ ಗೊತ್ತಾಗೋದು. ಅನುಭವಿಸಿದ ನಂತರ ಇತರರಿಗೆ ಹೇಳಿ ಸಾಡೇಸಾತಿಯಲ್ಲಿ ಬಂದ ಸಂಕಷ್ಟಗಳನ್ನು. ಧನಸ್ಸು ರಾಶಿಯವರೆ ಈಗಲೇ ಎಚ್ಚೆತ್ತುಕೊಳ್ಳಿ : ಜಾಣನಿಗೆ ಮಾತಿನ ಪೆಟ್ಟು ಎಂಬ ಮಾತಿನಂತೆ ಧನಸ್ಸು ರಾಶಿಯವರು ಈಗಿನಿಂದಲೇ ಸಾಡೇಸಾತಿ ಪರಿಹಾರೋಪಾಯಗಳನ್ನು ತಿಳಿದುಕೊಳ್ಳಬೇಕು. ಗಂಡೆದೆಯಿಂದ ಗುಂಡಿಗೆ ಗುಡಾರದಂಗೆ ಮಾಡಿಕೊಳ್ಳಬೇಕು. ಮುಂದಿನ ಅನುಕೂಲಕ್ಕೆ ಹಣ ಹೊಂದಿಸಿಟ್ಟುಕೊಳ್ಳಬೇಕು. ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು. ಸಾಡೇಸಾತಿಯಲ್ಲಿ ಸಣ್ಣ ಸಣ್ಣ ವಿಷಯಗಳನ್ನು ನಿರ್ಲಕ್ಷ್ಯ ಮಾಡುವುದು ಒಳಿತಲ್ಲ. ಯಾಕಂದ್ರೆ ಆಪತ್ತು, ದುಃಖ ಹೇಳಿಕೊಂಡು ಬರುವುದಿಲ್ಲ. ಮತ್ತು ಬಂದಿದ್ದನ್ನು ತಿರಸ್ಕರಿಸಲು ಬರುವುದಿಲ್ಲ. ಅನುಭವಿಸಲೇಬೇಕು. ಏಳರಾಟದಲ್ಲಿ ಪಾರಾಗುವ ಬಗೆಯನ್ನು ತಿಳಿದುಕೊಳ್ಳದೇ, ಚಾಣಾಕ್ಷತೆಯಿಂದ ತಪ್ಪಿನ ಮೇಲೆ ತಪ್ಪು ಮಾಡುತ್ತ ಹೋದಿರೆನ್ನಿ. ನೀವೇ ಕೈ ತಪ್ಪಿ ಹೋಗುತ್ತಿರಿ ಈ ಜಗದಿಂದ. ವಿನಾಶಕ್ಕೆ ವಿಪರೀತ ಬುದ್ಧಿ ಕಾರಣವಾಗುತ್ತದೆ ಎಂಬ ಮಾತು ಅರಿತುಕೊಂಡು ಸಾಡೇಸಾತಿಯಲ್ಲಿರುವವರು ವಿಪರೀತ ಬುದ್ಧಿ ತೋರಿಸದೆ ಜೀವನ ಬಂದಂಗೆ ಸ್ವೀಕರಿಸಿ. ಯಾಕೆಂದರೆ 30 ವರ್ಷಗಳಿಗೊಮ್ಮೆ ಜೀವನವನ್ನು ರಿನೀವಲ್ ಮಾಡೋಕೆ ಸಾಡೇಸಾತಿ ಬಂದಿರುತ್ತದೆ. ಶನಿದೇವನ ಕಾಡಾಟವನ್ನು "ಛಡಿ ಛಂ ಛಂ ವಿದ್ಯೆ ಘಂ ಘಂ" ಎಂದು ಅರಿತುಕೊಂಡು, ಕೆಟ್ಟು, ಪೆಟ್ಟು ಬಿದ್ದ ಮೇಲೆ ಬುದ್ಧಿ ಬರೋದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜಾತಕ ನೋಡಿ ಪರಿಹಾರ : ಮದುವೆ ಆಗ್ತಿಲ್ಲಾ, ಮಕ್ಕಳಾಗಲಿಲ್ಲ ಅಂತ ಎಷ್ಟೋ ಜನ ಹರಕೆ ಹೊರುತ್ತಾರೆ. ಆದರೆ ಮದುವೆಯಾದ ಕೆಲವರ ಸಂಸಾರ ಸುಖವಾಗಿರದೇ ಬೇರೆಯಾಗುತ್ತಾರೆ. ಮಕ್ಕಳಿದ್ದವರು ಮಕ್ಕಳು ವಿದ್ಯಾವಂತ, ಬುದ್ದಿವಂತರಾಗಲಿಲ್ಲವಲ್ಲ ಎಂದು ಕೊರಗುತ್ತಿರುತ್ತಾರೆ. ಕಾರಣ, ಜಾತಕ ಹೊಂದಿಸಿಕೊಂಡೇ ಮದುವೆ ಮಾಡಿಕೊಳ್ಳಬೇಕು ಎನ್ನುವುದು. ಮಕ್ಕಳ ಜಾತಕ ನೋಡಿ ಅವರ ಮುಂದಿನ ಹಾದಿ ಹೇಗಿದೆ ಎಂದು ತಿಳಿದುಕೊಳ್ಳಬಹುದು. ಅಥವಾ ಜಾತಕದಲ್ಲಿ ಏನಾದರೂ ದೋಷವಿದ್ದರೆ ಪರಿಹಾರ ಕಂಡುಕೊಂಡು ಜೀವನ ಸಂತಸವಾಗಿಸಿಕೊಳ್ಳಬೇಕು. ಶನಿದೇವನ ಕೃಪೆಗೆ : ಶನಿವಾರದಂದು ಎಳ್ಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ. -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...