Skip to main content

ಉದ್ಯೋಗ ದೊರೆಯತ್ತಿಲ್ಲವೆ? ಉದ್ಯೋಗ ಪಡೆಯಲು ಇಲ್ಲಿವೆ ಜ್ಯೋತಿಷ್ಯ ಸಲಹೆಗಳು

ಒಂದು ವೇಳೆ ನಿಮಗೆ ಉದ್ಯೋಗ ಬೇಕು ಎಂದರೆ ಯಾವುದಾದರು ಜ್ಯೋತಿಷಿಯನ್ನು ಭೇಟಿಯಾಗಿ. ಯಾವ ಗ್ರಹದ ಕಾರಣ ನಿಮಗೆ ಉದ್ಯೋಗ ದೊರೆಯುತ್ತಿಲ್ಲ ಎಂದು ತಿಳಿದುಕೊಳ್ಳಿ. ಯಾವ ಗ್ರಹದಿಂದ ಉದ್ಯೋಗ ಸಿಗುತ್ತಿಲ್ಲ ಎಂದು ಗೊತ್ತಾದರೆ ಈ ಕೆಳಗೆ ನೀಡಿದ ತರಹದ ಉಪಾಯ ಓದಿ ಮತ್ತು ನೌಕರಿ ಗಿಟ್ಟಿಸಿಕೊಳ್ಳಿ. * ಸೂರ್ಯನ ಕಾರಣ ನಿಮಗೆ ನೌಕರಿ ಸಿಗಲಿಲ್ಲ ಎಂದಾದರೆ ಆಕಳಿಗೆ ರೊಟ್ಟಿ ನೀಡಲು ಪ್ರಾರಂಭಿಸಿ. ಕಪ್ಪು ಅಥವಾ ಹಳದಿ ಆಕಳಿಗೆ ಮಾತ್ರ ರೊಟ್ಟಿ ತಿನಿಸಿ. * ಚಂದ್ರ ದೋಷವಿದ್ದರೆ , ರಾತ್ರಿ ಹಾಲನ್ನು ಸೇವಿಸಬೇಡಿ ಮತ್ತು ಪ್ರತಿನಿತ್ಯ ರಾತ್ರಿ ನಿಮ್ಮ ತಂದೆಗೆ ನೀವೇ ಸ್ವತಃ ಹಾಲನ್ನು ಕುಡಿಸಿರಿ. * ಬುಧ ಗ್ರಹದ ದೋಷವಿದ್ದರೆ ಬೆಳ್ಳಿಯ ಆಭರಣ ಧರಿಸಿ ಮತ್ತು ಚಿನ್ನವನ್ನು ಖರೀದಿಸಿ. ಮನೆಯಲ್ಲಿ ನಿಮ್ಮ ಸ್ನಂತ ಕೈಯಿಂದ ಗಿಡ-ಬಳ್ಳಿಗಳನ್ನು ಹಚ್ಚಬೇಡಿ. * ಗುರ ಗ್ರಹದ ದೋಷವಿದ್ದರೆ ಕೆಂಪು ಬಣ್ಣದ ಗುಲಗಂಜಿ ಅಥವಾ ಚಿನ್ನದ ನಾಣ್ಯ ಹಳದಿ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿ ಯಾವುದಾದರು ಒಂದು ಸ್ಥಾನದಲ್ಲಿ ಇಡಿ. ಮತ್ತು ಚಿನ್ನದ ಆಭರಣ ಧರಿಸಬೇಡಿ. ಆಕಳಿಗೆ ಬೆಲ್ಲ ಮತ್ತು ಬೇಳೆ ತಿನಿಸಿ. *ಶುಕ್ರ ಗ್ರಹದ ಕಾರಣ ನಿಮಗೆ ಉದ್ಯೋಗ ಸಿಗದಿದ್ದರೆ, ಮನೆಯ ಹಿರಿಯ ಮಹಿಳೆಯರ ಪಾದ ಸ್ಪರ್ಶ ಮಾಡಿರಿ ಈ ನಿಯಮ ಪ್ರತಿನಿತ್ಯ ಅನುಸರಿಸಿ. * ಶನಿಯ ದೋಷದಿಂದ ನಿಮಗೆ ಉದ್ಯೋಗ ಲಭಿಸಲಿಲ್ಲ ಎಂದಾದರೆ, ಎಳ್ಳಿನ ಎಣ್ಣೆಯಲ್ಲಿ ನಿಮ್ಮ ಪ್ರತಿಬಿಂಬ ನೋಡಿ ನಂತರ ಬಿಕ್ಷುಕರಿಗೆ ದಾನ ಮಾಡಿ. * ರಾಹುವಿನ ಕಾರಣ ನಿಮಗೆ ಉದ್ಯೋಗ ಲಭಿಸಲಿಲ್ಲ ಎಂದಾದರೆ , ಸೋಪು , ಕೆಂಪು ಗುಲಗಂಜಿ , ಕೆಂಪು ವಸ್ತ್ರದಲ್ಲಿ ಕಟ್ಟಿ ನಿಮ್ಮ ಮಲಗುವ ಕೋಣೆಯಲ್ಲಿ ಇಡಿ. * ಕೇತುವಿನ ಕಾರಣ ನಿಮಗೆ ಉದ್ಯೋಗ ಸಿಗಲಿಲ್ಲ ಎಂದಾದರೆ, ಎಣ್ಣೆ ಹೆಚ್ಚಿದ ರೊಟ್ಟಿ ನಿತ್ಯವು ನಾಯಿಗೆ ತಿನಿಸಿ. ಶನಿ ಹೇಗಲೇರಿ ಕುಳಿತರೆ .. ಯಾವ ರಾಶಿಯವರಿಗೆ ಎಷ್ಟೆಷ್ಟು ಪರಿಣಾಮ ಮೇಷ: ಮೇಷ ರಾಶಿಗೆ ಈಗ ಶನಿ ಸ್ವಾಸ್ಥ್ಯ ನೀಡುತ್ತಾನೆ. ಅಷ್ಟೇ ಅಲ್ಲ, ಧನಲಾಭವನ್ನೂ ಕೂಡಾ. ಆದರೆ ಚಿಂತೆಯನ್ನೂ ಇದೇ ಲಾಭಕಾರಕ ಶನಿ ಈ ರಾಶಿಯವರಿಗೆ ನೀಡುತ್ತಾನೆ. ಕುಟುಂಬ, ಸಂತಾನ ಹಾಗೂ ವ್ಯಾಪಾರ, ನೌಕರಿ ಸಂಬಂಧ ಚಿಂತೆ ಹೆಚ್ಚುತ್ತದೆ. ವೃಷಭ: ಸಮಸ್ಯೆಗಳಿಂದ ಮುಕ್ತಿ ದೊರೆತರೂ, ಸ್ತ್ರೀ ಪುತ್ರರ ಸ್ವಾಸ್ಥ್ಯಕ್ಕೆ ಕಷ್ಟ ಸಾಧ್ಯತೆಗಳಿವೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭವೂ ತುಂಬ ಯೋಚಿಸಿ ಮುಂದುವರಿಯುವುದು ಉತ್ತಮ. ಮಿಥುನ: ಈ ರಾಶಿಯವರಿಗೆ ಈಗ ಶನಿ ತುಂಬ ಪೀಡಾಕಾರಕನಾಗಿರುತ್ತಾನೆ. ಕುಟುಂಬ ಕಲಹ, ಸಹೋದರರೊಂದಿಗೆ ಮನಸ್ತಾಪ, ಪ್ರವಾಸದಿಂದ ಕಷ್ಟ, ಚಿಂತೆ ಇವೆಲ್ಲ ತೊಂದರೆಗಳು ಸಂಭವಿಸುತ್ತದೆ. ವೃತ್ತಿ ಜೀವನದಲ್ಲೂ ಈ ರಾಶಿಯವರು ತುಂಬ ಜಾಗರೂಕರಾಗಿರಬೇಕು. ಕರ್ಕ: ಈ ರಾಶಿಯವರಿಗೆ ಉತ್ತಮ ಸಮಯ. ಪರಾಕ್ರಮ ವೃದ್ಧಿ, ಶತ್ರು ವಿಜಯ, ಧನಲಾಭ, ಉದ್ಯೋಗದಲ್ಲಿ ಬಡ್ತಿ ಅಥವಾ ಸ್ಥಾನಾಂತರ (ಟ್ರಾನ್ಸ್‌ಫರ್) ಸಾಧ್ಯತೆಗಳನ್ನು ಶನಿ ತರುತ್ತಾನೆ. ಆದರೆ ನಿಮಗೆ ಶನಿ ಶುಭಕಾರಕನು. ಸಿಂಹ: ತುಂಬ ಕಷ್ಟನಷ್ಟಗಳಿದ್ದರೂ ಧನಲಾಭದ ಯೋಗವಿದೆ. ಸಣ್ಣ ಪುಟ್ಟ ಗಾಯಗಳಾಗುವ, ಅಫಘಾತಗಳಾಗುವ ಭಯವಿದೆ. ಹಾಗಾಗಿ ಜಾಗ್ರತೆ ಅಗತ್ಯ. ನೌಕರಿಯ್ಲಲೂ ಕಷ್ಟನಷ್ಟಗಳ ಸಾಧ್ಯತೆಯಿದೆ. ಯಾವುದಾದರೂ ನಿರ್ಣಯ ತೆಗೆದುಕೊಳ್ಳುವ ಸಂದರ್ಭ ತುಂಬ ಯೋಚಿಸಿ ಮುಂದುವರಿಯುವುದು ಉತ್ತಮ. ಕನ್ಯಾ: ಆಲಸ್ಯ, ಮಾನಸಿಕ ಚಿಂತೆ ಈ ರಾಶಿಯವರಿಗೆ ಈಗ ಸಾಮಾನ್ಯ. ಧನಹಾನಿಯಾಗುವ ಸಂಭವವಿದೆ. ತುಂಬ ವಾದ ವಿವಾದಗಳಲ್ಲಿ ತೊಡಗಿ ಮಾನಸಿಕ ಚಿಂತೆ ಹುಟ್ಟುತ್ತದೆ. ಈ ರಾಶಿಯವರು ಈಗ ತುಂಬ ಸಾವಧಾನಿಗಳಾಗಿ ಸಮಾಧಾನ ಚಿತ್ತರಾಗಿರುವುದು ಉತ್ತಮ. ತುಲಾ: ತುಲಾರಾಶಿಗೆ ಈಗ ಸಾಡೇಸಾತಿ (ಏಳುವರೆ) ಶನಿ ದೆಶೆ ಆರಂಭ. ಇದರಿಂದಾಗಿ ಈ ರಾಶಿಯಲ್ಲಿ ಜನಿಸಿದವರ ಶ್ರಮ, ಕಷ್ಟಗಳು ಹೆಚ್ಚುತ್ತವೆ. ಆದರೆ ವಾಹನ ಯೋಗ, ಧನಲಾಭ ಮುಂತಾದ ಸುಖಭೋಗಗಳಿಗೆ ಕೊರತೆಯಿರುವುದಿಲ್ಲ. ವೃಶ್ಚಿಕ: ಈ ರಾಶಿಯವರಿಗೆ ಈಗ ಉತ್ತಮ ಸಮಯ. ಮಾನ, ಸಮ್ಮಾನ, ಪ್ರತಿಷ್ಠೆ ಹೆಚ್ಚುತ್ತದೆ. ಧನಲಾಭವೂ ಕೂಡಾ ಇದೆ. ವಾಹನ, ಯಂತ್ರಗಳಿಂದ ಲಾಭವಿದೆ. ಮಾನಸಿಕ ಕಷ್ಟನಷ್ಟಗಳೆಲ್ಲ ದೂರವಾಗುತ್ತದೆ. ಧನು: ಧನಲಾಭ, ಆರ್ಥಿಕ ಅನುಕೂಲತೆಗಳಿದ್ದರೂ ಖರ್ಚೂ ಹೆಚ್ಚುತ್ತದೆ. ಶ್ರಮ ಹೆಚ್ಚಿದರೂ, ಸ್ತಾನಪಲ್ಲಟವಾಗುವ ಸಾಧ್ಯತೆಯಿದೆ. ಉದರ ಸಂಬಂಧೀ ರೋಗಗಳ ಭಯವಿರುವುದರಿಂದ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಮಕರ: ಚಿಂತೆ ನಿಮಗೀಗ ಸಾಮಾನ್ಯ. ಕಾರ್ಯ ಸಫಲತೆಗೆ ತುಂಬ ಶ್ರಮ ಪಡಬೇಕಾಗುತ್ತದೆ. ಶಾರೀರಿಕ ಶ್ರಮ ಹೆಚ್ಚುತ್ತದೆ. ವಾಹನ ಚಲಾಯಿಸುವವರು ತುಂಬ ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು. ಕುಂಭ: ಸ್ವರಾಶಿಯಾಗಿರುವುದರಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಶನಿಯಿಂದ ತೊಂದರೆ ಕಡಿಮೆ, ಅನುಕೂಲತೆಗಳೇ ಹೆಚ್ಚು. ಸುಖ ಸಮೃದ್ಧಿ ಹೆಚ್ಚುತ್ತದೆ. ಆದರೂ ಶನಿಯ ಪ್ರಭಾವದಿಂದ ಜೀವನ ಸ್ವಲ್ಪ ಅಸ್ತವ್ಯಸ್ಥವಾಗುವ ಸಂಭವವಿದೆ. ತುಂಬ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಮೀನ: ಮಾನಸಿಕ ಕ್ಲೇಷ ಹಾಗೂ ತುಂಬ ಭಾಗ್ಯದೋಷಗಲಿದ್ದರೂ, ಶನಿ ಿಮಗೆ ಧನಲಾಭ ನೀಡುತ್ತಾನೆ. ವ್ಯರ್ಥ ಚಿಂತೆ ಮಾಡುವುದು ನಿಮಗೆ ಈಗ ಅಗತ್ಯವಿಲ್ಲ. ದೂರ ಪ್ರಯಾಣ ಮಾಡುವ ಸಂಭವವಿದೆ. ಆದರೆ ಹಣ ವ್ಯಯ ಮಾಡುವ ಸಂದರ್ಭ ಯೋಚಿಸಿ, ಲೆಕ್ಕಾಚಾರ ಹಾಕಿ ಖರ್ಚು ಮಾಡುವುದು ಉತ್ತಮ. ಭವಿಷ್ಯ ಪುರಾಣ 102ನೇ ಅಧ್ಯಾಯದಲ್ಲಿ ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ವ್ಯಕ್ತಿಗಳ ಜನ್ಮಕಾಲದಲ್ಲಿಯ ನಕ್ಷತ್ರವನ್ನು ತಿಳಿದು ಆಚರಿಸಿದರೆ. ದೋಷಗಳು ಪರಿಹಾರವಾಗಿ, ಶುಭಫಲವನ್ನೇ ನೀಡುತ್ತವೆ. ನಿಯಮಗಳನ್ನು ತಿಳಿದು ಆಚರಿಸಬೇಕು. ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರಾಗಿದ್ದು, ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು ಉಂಟಾಗುತ್ತದೆ. ಭರಣಿ ನಕ್ಷತ್ರದ ಅಧಿದೇವತೆ ಯಮನಾಗಿದ್ದು, ಭರಣಿ ನಕ್ಷತ್ರದ ದಿವಸ ಯಮನನ್ನು ನೀಲಿ ಬಣ್ಣದ ಹೂವುಗಳಿಂದ ಪೂಜಿಸಿದರೆ, ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು. ಕೃತಿಕೆ ನಕ್ಷತ್ರದ ಅಧಿದೇವತೆ ಅಗ್ನಿಯಾಗಿದ್ದು, ಕೃತಿಕ ನಕ್ಷತ್ರದ ದಿವಸ ಅಗ್ನಿ ದೇವತೆಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ, ಅಪೇಕ್ಷಿಸಿದ ಕಾರ್ಯಗಳು ಫಲಿಸುತ್ತದೆ. ರೋಹಿಣಿ ನಕ್ಷತ್ರದ ಅಧಿದೇವತೆ ಬ್ರಹ್ಮನಾಗಿದ್ದು, ರೋಹಿಣಿ ನಕ್ಷತ್ರದ ದಿವಸ ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ಅಭಿವೃದ್ದಿ ಹೊಂದುತ್ತದೆ. ಮೃಗಶಿರ ನಕ್ಷತ್ರದ ಅಧಿದೇವತೆ ಚಂದ್ರನಾಗಿದ್ದು, ಮೃಗಶಿರ ನಕ್ಷತ್ರದ ದಿವಸ ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ವೃದ್ದಿಯಾಗುತ್ತದೆ. ಆರಿದ್ರ ನಕ್ಷತ್ರದ ಅಧಿದೇವತೆ ಶಿವನಾಗಿದ್ದು, ಆರಿದ್ರಾ ನಕ್ಷತ್ರದ ದಿವಸ ಶಿವನನ್ನು ತಾವರೆ ಹೂವುಗಳಿಂದ ಪೂಜಿಸಿದರೆ, ಸ್ಪರ್ಧೆಗಳಲ್ಲಿ ಜಯ ಉಂಟಾಗುತ್ತದೆ. ಪುನರ್ವಸು ನಕ್ಷತ್ರದ ಅಧಿದೇವತೆ ಅದಿತಿ (ಕಾಷ್ಯಪ ಮಹರ್ಷಿಯ ಪತ್ನಿ - ದೇವತೆ ತಾಯಿ) ಯಾಗಿದ್ದು, ಪುನರ್ವಸು ನಕ್ಷತ್ರದ ದಿವಸ ಅದಿತಿಯನ್ನು ಪೂಜಿಸಿದರೆ, ತಾಯಿಯ ಮತ್ತು ಹಸು ಕರುಗಳ ರಕ್ಷಣೆ ಉಂಟಾಗುತ್ತದೆ ಸಂತಾನಾಪೇಕ್ಷಿಗಳು ಸಹಾ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ. ಪುಷ್ಯ ನಕ್ಷತ್ರದ ಅಧಿದೇವತೆ ಬೃಹಸ್ಪತಿಯಾಗಿದ್ದು, ಪುಷ್ಯ ನಕ್ಷತ್ರದ ದಿವಸ ಬೃಹಸ್ಪತಿಯನ್ನು (ಗುರು) ಪೂಜಿಸಿದರೆ ಹೆಚ್ಚಿನ ವ್ಯವಹಾರಿಕ ಜ್ಞಾನ, ಜಾಣ್ಮೆ ಅಭಿವೃದ್ದಿ ಉಂಟಾಗುತ್ತದೆ. ಆಶ್ಲೇಷ ನಕ್ಷತ್ರದ ಅಧಿದೇವತೆ ನಾಗನಾಗಿದ್ದು, ಆಶ್ಲೇಷ ನಕ್ಷತ್ರದ ದಿವಸ ನಾಗ (ಸರ್ಪ) ನನ್ನು ಪೂಜಿಸಿದರೆ, ನಾಗದೋಷ ನಿವಾರಣೆಯಾಗುತ್ತದೆ. ಮಖ ನಕ್ಷತ್ರದ ಅಧಿದೇವತೆ ಪಿತೃ ದೇವತೆಯಾಗಿದ್ದು, ಮಖ ನಕ್ಷತ್ರದ ದಿವಸ ಪಿತೃದೇವತೆಯನ್ನು ಪೂಜಿಸಿದರೆ ಧನ, ಸಂತಾನ, ಹಸುಕರುಗಳು ವೃದ್ದಿಯಾಗುತ್ತದೆ. ಪೂರ್ವಪಲ್ಗುಣಿ ನಕ್ಷತ್ರದ ಅಧಿದೇವತೆ ಪುಶ ಮಹರ್ಷಿಯಾಗಿದ್ದು, ಪೂರ್ವಪಲ್ಗುಣಿ ನಕ್ಷತ್ರದ ದಿವಸ ಪುಶ ಮಹರ್ಷಿಯನ್ನು ಪೂಜಿಸಿದರೆ, ಅಪೇಕ್ಷಣಿಯ ವಧು/ವರ ಸಿಗುತ್ತಾರೆ. ಧನ ವೃದ್ದಿ ಹಾಗು ಚಟುವಟಿಕೆ ಉಳ್ಳವರಾಗುತ್ತಾರೆ. ಉತ್ತರಾಪಲ್ಗುಣಿ ನಕ್ಷತ್ರದ ಅಧಿದೇವತೆ ಆರ್ಯಮ ದೇವತೆಯಾಗಿದ್ದು, ಉತ್ತರಾಪಲ್ಗುಣಿ ನಕ್ಷತ್ರದ ದಿವಸ ಆರ್ಯಮ ದೇವತೆಯನ್ನು ಪೂಜಿಸಿದರೆ, ಈ ದೇವತೆ ವಿವಾಹ, ಕರಾರುಗಳ ಪೋಷಕ ಹಾಗೂ ಶೌರ್ಯ ಮತ್ತು ದೀನರ ರಕ್ಷಣೆ ಉಂಟಾಗುತ್ತದೆ. ಹಸ್ತ ನಕ್ಷತ್ರದ ಅಧಿದೇವತೆ ಸೂರ್ಯನಾಗಿದ್ದು, ಹಸ್ತ ನಕ್ಷತ್ರದ ದಿವಸ ಸೂರ್ಯನನ್ನು ಗಂಧ ಹಾಗೂ ಪುಪ್ಪಗಳಿಂದ ಪೂಜಿಸಿದರೆ, ಧನ, ಅಭಿವೃದ್ದಿಯಾಗುತ್ತದೆ ನೆಮ್ಮದಿ ಉಂಟಾಗುತ್ತದೆ. ಚಿತ್ತಾ ನಕ್ಷತ್ರದ ಅಧಿದೇವತೆ ತ್ವಷ್ಟ ದೇವತೆಯಾಗಿದ್ದು, ಚಿತ್ತಾ ನಕ್ಷತ್ರದ ದಿವಸ ತ್ವಷ್ಟ ದೇವತೆಯನ್ನು ಪೂಜಿಸಿದರೆ, ಆರೋಗ್ಯ, ಜ್ಞಾನ, ಆಹಾರ ಧಾನ್ಯ ಅಭಿವೃದ್ದಿ ಉಂಟಾಗುತ್ತದೆ. ಸ್ವಾತಿ ನಕ್ಷತ್ರದ ಅಧಿಪತಿ ವಾಯುದೇವನಾಗಿದ್ದು, ಸ್ವಾತಿ ನಕ್ಷತ್ರದ ದಿವಸ ವಾಯುದೇವನನ್ನು ಪೂಜಿಸಿದರೆ, ದೈವಿಕ ಶಕ್ಷಿಯನ್ನು ನೀಡುತ್ತಾನೆ. ವಿಶಾಖ ನಕ್ಷತ್ರದ ಅಧಿದೇವತೆ ಇಂದ್ರಾಗ್ನಿಯಾಗಿದ್ದು, ವಿಶಾಖನಕ್ಷತ್ರದ ದಿವಸ ಇಂದ್ರಾಗ್ನಿಯನ್ನು ಕೆಂಪು ಹೂವುಗಳಿಂದಪೂಜಿಸಿದರೆ ಧನ ಮತ್ತು ಇಷ್ಟಾರ್ಥಗಳು ಈಡೇರುತ್ತವೆ. ಅನುರಾಧ ನಕ್ಷತ್ರ ಅಧಿದೇವತೆ ಮಿತ್ರದೇವನಾಗಿದ್ದು, ಅನುರಾಧ ನಕ್ಷತ್ರ ದಿವಸ ಮಿತ್ರದೇವನನ್ನು ಪೂಜಿಸಿದರೆ, ಲಕ್ಷ್ಮಿ ಒಲಿಯುತ್ತಾಳೆ, ಧೀರ್ಘಾಯುವಾಗುತ್ತಾರೆ. ಜೇಷ್ಟ ನಕ್ಷತ್ರದ ಅಧಿದೇವತೆ ಇಂದ್ರನಾಗಿದ್ದು, ಜೇಷ್ಟ ನಕ್ಷತ್ರದ ದಿವಸ ಇಂದ್ರನನ್ನು ಪೂಜಿಸಿದರೆ ಪೌರುಷವಂತ, ಧನವಂತ, ಧಾರ್ಮಿಕ ಸ್ವಭಾವ ಉಂಟಾಗುತ್ತದೆ. ಮೂಲ ನಕ್ಷತ್ರದ ಅಧಿದೇವತೆ ಶಿನಿರುತಿಷಿ ದೇವತೆಯಾಗಿದ್ದು, ಮೂಲ ನಕ್ಷತ್ರದ ದಿವಸ ನಿರುತಿ ದೇವತೆಯನ್ನು ಪೂಜಿಸಿದರೆ, ನರಕಯಾತನೆಯಿಂದ ಮುಕ್ತನಾಗುತ್ತಾನೆ. ದೋಷಗಳು ಪರಿಹಾರವಾಗುತ್ತದೆ. ಪೂರ್ವಾಷಾಡ ನಕ್ಷತ್ರದ ಅಧಿದೇವತೆ ಜಲದೇವತೆಯಾಗಿದ್ದು, ಪೂರ್ವಾಷಾಡ ನಕ್ಷತ್ರದ ದಿವಸ ಜಲದೇವತೆ ಅಥವಾ ಗಂಗಾ ಮಾತೆಯನ್ನು ಪೂಜಿಸಿದರೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳು ನಿವಾರಣೆಯಾಗುತ್ತದೆ. ಉತ್ತರಾಷಾಡ ನಕ್ಷತ್ರದ ಅಧಿದೇವತೆ ವಿಶ್ವದೇವನಾಗಿದ್ದು, ಉತ್ತರಾಷಾಡ ನಕ್ಷತ್ರದ ದಿವಸ ವಿಶ್ವ ದೇವನನ್ನು ಹೂವುಗಳಿಂದ ಪೂಜಿಸಿದರೆ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುತ್ತದೆ. ಶ್ರವಣ ನಕ್ಷತ್ರದ ಅಧಿದೇವತೆ ವಿಷ್ಣುವಾಗಿದ್ದು, ಶ್ರವಣ ನಕ್ಷತ್ರದ ದಿವಸ ವಿಷ್ಣುವನ್ನು ಹಳದಿ ಮತ್ತು ನೀಲಿ ಹೂವುಗಳಿಂದ ಪೂಜಿಸಿದರೆ, ಧನ ವೃದ್ದಿ, ಸ್ಪರ್ಧೆಗಳಲ್ಲಿ ಜಯಶಾಲಿಗಳಾಗುತ್ತಾರೆ. ಧನಿಷ್ಟ ನಕ್ಷತ್ರದ ಅಧಿದೇವತೆ ವಸುದೇವತೆಯಾಗಿದ್ದು, ಧನಿಷ್ಟ ನಕ್ಷತ್ರದ ದಿವಸ ವಸುದೇವತೆಯನ್ನು ಗಂಧ, ಪುಪ್ಪಗಳಿಂದ ಪೂಜಿಸಿದರೆ, ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ. ಶತಭೀಷ ನಕ್ಷತ್ರದ ಅಧಿದೇವತೆ ವರುಣ ದೇವತೆಯಾಗಿದ್ದು, ಶತಬೀಷ್ ನಕ್ಷತ್ರದಿವಸ ವರುಣ ದೇವತೆಯನ್ನು ಪೂಜಿಸಿದರೆ, ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗಿ ಶಕ್ತಿ, ಧನ, ವೃದ್ದಿಯಾಗುತ್ತದೆ. ಪೂರ್ವಾಬಾದ್ರ ನಕ್ಷತ್ರದ ಅಧಿದೇವತೆ ಅಜನ್ಮ (ರುದ್ರನ ಇನ್ನೊಂದು ಹೆಸರು) ನಾಗಿದ್ದು, ಪೂರ್ವಾಬಾದ್ರ ನಕ್ಷತ್ರದ ದಿವಸ ಅಜನ್ಮನನ್ನು ಪೂಜಿಸಿದರೆ, ಶ್ರದ್ದಾವಂತ, ಧರ್ಮನಿಷ್ಟನಾಗುತ್ತಾನೆ. ಉತ್ತರಾಬಾದ್ರ ನಕ್ಷತ್ರದ ಅಧಿದೇವತೆ ಅಹಿರ್ಬುದ್ನ (ರುದ್ರ ನ ಮತ್ತೊಂದು ಹೆಸರು) ನಾಗಿದ್ದು, ಉತ್ತರಾಬಾದ್ರ ನಕ್ಷತ್ರದಿವಸ ಅಹಿರ್ಬುದ್ನ ದೇವತೆಯನ್ನು ಪೂಜಿಸಿದರೆ, ದೇವತಾಶಾಸ್ತ್ತ್ರ ನಿಪುಣನಾಗುತ್ತಾನೆ. ರೇವತಿ ನಕ್ಷತ್ರದ ಅಧಿದೇವತೆ ಪೂಷ ದೇವತೆ (ಸೂರ್ಯನ ಇನ್ನೊಂದು ಹೆಸರು) ಯಾಗಿದ್ದು, ರೇವತಿ ನಕ್ಷತ್ರದ ದಿವಸ ಪೂಷ ದೇವತೆಯನ್ನು, ಬಿಳಿ ಹೂವುಗಳಿಂದ ಪೂಜಿಸಿದರೆ, ಶುಭ ಉಂಟಾಗುತ್ತದೆ. ಸಾಹಸವಂತರಾಗುತ್ತಾರೆ. ದೋಷಗಳು ನಿವಾರಣೆಯಾಗುತ್ತದೆ. ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ. -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...