ಹೌದು, ನಮಗೆ ಶನಿದಶೆಯು ಶುರುವಾದರೆ 19 ವರ್ಷವಿರುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ನವಗ್ರಹಗಳ ದಶಾಕಾಲ ಅನುಭವಿಸಲೇಬೇಕು. ನೀವು ಕೇಳಿರಬಹುದು "ಶುಕ್ರದಶೆ" ಎಂಬ ಮಾತನ್ನು. ಆದರೆ ಕೆಲವೊಬ್ಬರಿಗೆ ಜೀವನದಲ್ಲಿ ಶುಕ್ರದಶೆ ಬರುವುದೇ ಇಲ್ಲ. ಬಂದರೂ ಅವರ ಅಂತ್ಯ ಕಾಲಕ್ಕೆ ಬಂದಿರುತ್ತದೆ. ಅಥವಾ ಬಾಲ್ಯದಲ್ಲಿ ಮುಗಿದು ಹೋಗಿರುತ್ತದೆ! "ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ" ಎಂಬಂತೆ. ಕೆಲವರಿಗೆ ಮಾತ್ರ ಮಧ್ಯವಯಸ್ಸಿನಲ್ಲಿ 20 ವರ್ಷದ ಶುಕ್ರದಶೆ ಬರುತ್ತದೆ. ಜಾತಕದಲ್ಲಿ ಯಾವ ವಯಸ್ಸಿಗೆ ಯಾವ ದಶೆ ಶುರುವಾಗುತ್ತದೆ ಎಂಬುದನ್ನು ನಾವು ನಿಖರವಾಗಿ ನೋಡಿಕೊಳ್ಳಬಹುದು. ಕಂಕಣಭಾಗ್ಯ ಮತ್ತು ಸಂತಾನಭಾಗ್ಯಕ್ಕಾಗಿ ಶುಕ್ರ ಮತ್ತು ಗುರು ಗ್ರಹಗಳ ಬಲ ಬೇಕಾಗಿರುವುದರಿಂದ ಜಾತಕಗಳ ಮೂಲಕ ಅವರ ಬಲ ಯಾವಾಗ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಜಾತಕದಲ್ಲಿ ಶನಿದೇವ ಉತ್ತಮ ಸ್ಥಾನದಲ್ಲಿದ್ದರೆ ಶನಿದಶೆಯಲ್ಲಿ ಅಪರಿಮಿತ ಹಣ ಸಂಪಾದನೆ ಮಾಡಬಹುದು. ಇದೇ ರೀತಿ ಶನಿದಶೆ ಕೆಲವರಿಗೆ ಜನ್ಮಕಾಲದಿಂದ ಅಥವಾ ಮಧ್ಯವಯಸ್ಸಿನಲ್ಲಿ ಇಲ್ಲವೇ ವೃದ್ಧಾಪ್ಯದಲ್ಲಿ ಬರುತ್ತದೆ. ಶನಿದಶೆಯ ಕಾಲದಲ್ಲಿಯೇ ಸಾಡೇಸಾತಿ, ಅಷ್ಟಮ, ಪಂಚಮ ಶನಿಕಾಟ ಇದ್ದರೆ ಜೀವನಕ್ಕೆ ತೊಂದರೆ ಹೆಚ್ಚೇ ಇರುತ್ತದೆ. ಶನಿದಶೆಯಲ್ಲಿ ಶುಕ್ರಭುಕ್ತಿ ಬಂದರೆ ತುಂಬಾ ಒಳ್ಳೆಯದು ಜೀವನಕ್ಕೆ. ಇದು 3 ವರ್ಷ 2 ತಿಂಗಳುಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಸಾಕಷ್ಟು ಹಣ ಗಳಿಸಿ ಅನೇಕ ಮನೆಗಳ ಮಾಲೀಕರಾಗಬಹುದು, ಕಂಕಣಭಾಗ್ಯ ಕೂಡಿಬರುತ್ತದೆ. ಅಂದವಾಗಿ ಕಾಣಲು ಅವಶ್ಯವಿರುವ ಎಲ್ಲ ವಸ್ತುಗಳನ್ನು ಖರೀದಿ ಮಾಡಲು ಹಣದ ಅನುಕೂಲತೆ ಇರುತ್ತದೆ. ಮನಸ್ಸಿಗೆ ಹಿಡಿಸಿದ ವಾಹನ ಕೊಳ್ಳುವ ಯೋಗವಿರುತ್ತದೆ. ಸಂಸಾರ ಸುಖದಿಂದ ಸಂತಾನಭಾಗ್ಯ ಸಿಗುತ್ತದೆ. ಮನೋರಂಜನಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಧರ್ಮಾಸಕ್ತಿ ಹೆಚ್ಚಿ, ಎಲ್ಲ ದೇವರಿಗೂ ಪೂಜೆ, ಪುನಸ್ಕಾರ ಮಾಡಿಸಲು ಸಾಕಷ್ಟು ಅನುಕೂಲವಿರುತ್ತದೆ. ದೇವರಿಗೆಷ್ಟು ಖರ್ಚು ಮಾಡಿದರೂ ಅದರ ದುಪ್ಪಟ್ಟು ಲಾಭ ರೂಪದಲ್ಲಿ ಸಿಗುತ್ತದೆ. ಯಾವಾಗಲೂ ಒಳ್ಳೆಯ ಕೆಲಸ ಮಾಡುವಂತೆ ಮನಸ್ಸು ಪ್ರೇರೇಪಿಸುತ್ತಿರುತ್ತದೆ. ಅಧಿಕಾರದ ಗದ್ದುಗೆ ಏರಲು ದಾರಿ ಸುಲಭವಾಗಿ, ಅನೇಕರು ಸಹಾಯ-ಸಹಕಾರ ಮಾಡುತ್ತ ಸಾಕಷ್ಟು ಬೆಂಬಲ-ಪ್ರೋತ್ಸಾಹ ನೀಡುತ್ತಾರೆ. ಇದರಿಂದ ಅಧಿಕಾರದ ರುಚಿ ಅನುಭವಿಸಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ಶನಿದೇವನ ಪ್ರಿಯವಾದ ವಸ್ತುಗಳಾದ ಖಾದ್ಯತೈಲಗಳು, ಕಬ್ಬಿಣ ಉತ್ಪನ್ನಗಳ ಕಾರಖಾನೆಗಳಿಂದ ಲಾಭ ಸಿಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಜ್ಞಾನ ಸಂಪಾದಿಸಲು ಮನಸ್ಸು ಚಡಪಡಿಸುತ್ತಿರುತ್ತದೆ. ಮನಸ್ಸು ಮತ್ತು ದೇಹ ಯಾವಾಗಲೂ ಉತ್ಸಾಹದಿಂದಿರುತ್ತದೆ. ಶನಿದಶಾ ಮತ್ತು ಶನಿಭುಕ್ತಿಯು 3 ವರ್ಷ 3 ತಿಂಗಳಿರುತ್ತದೆ. ಈ ಸಮಯದಲ್ಲಿ ಯಾವಾಗಲೂ ರೋಗಿಷ್ಟರ ತರಹ ಅರಿಷ್ಟತನ, ದರಿದ್ರ, ಆಲಸ್ಯ, ಸೋಮಾರಿತನ ಮನೆ ಮಾಡಿರುತ್ತದೆ. ಯಾವ ಕೆಲಸ ಮಾಡಿದರೂ ಅರ್ಧಮರ್ಧವೇ ಆಗುತ್ತವೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುವುದಿಲ್ಲ. ಕೈಯಲ್ಲಿ ದುಡ್ಡೇ ಇರುವುದಿಲ್ಲ. ಒಮ್ಮೊಮ್ಮೆ ಭಿಕ್ಷೆ ಬೇಡಲು ಕೂಡ ಮನಸ್ಸಾಗುತ್ತೆ ಕೆಲವರಿಗೆ. ಸಾಕಷ್ಟು ಯೋಚಿಸಿ, ಮುಂದಾಲೋಚನೆ ಮಾಡಿ ಕೆಲಸ ಮಾಡಿದರೂ ತೊಂದರೆ ಕಾಡುತ್ತಲೇ ಇರುತ್ತದೆ. ಕಚೇರಿಯಲ್ಲಿ ಕೆಲಸ ಸರಿ ಮಾಡಲು ಮನಸ್ಸಾಗದೇ ಮೇಲಿನವರಿಂದ ಆವಾಗಾವಾಗ ಮಂಗಳಾರತಿ ಆಗುತ್ತಿರುತ್ತದೆ. ಇದರಿಂದ ಮನಸ್ಸು ನೊಂದುಕೊಂಡು ಮುದುಡುತ್ತದೆ. ಇನ್ನು ಶನಿದೇವನು ಜಾತಕದಲ್ಲಿ ಕೆಟ್ಟವನಾಗಿದ್ದರೆ ದೇಹಕ್ಕೆ ಊನ ಮಾಡಲು ಕೂಡ ಹಿಂಜರಿಯುವುದಿಲ್ಲ. ಸಂಸಾರಸ್ಥರಿಗೆ ದಾಂಪತ್ಯ ಸುಖ ಈ ಸಮಯದಲ್ಲಿ ಮುಳ್ಳಿನ ಹಾಸಿಗೆಯಂತಾಗುತ್ತದೆ. ಆದ್ದರಿಂದ ಶನಿದಶೆ ಅಥವ ಸಾಡೇಸಾತಿಯಲ್ಲಿ ಕಷ್ಟಪಡುವವರು ತಮ್ಮ ಕೈಲಾದಷ್ಟು ಪರಿಹಾರ ಮಾಡಿಕೊಳ್ಳಬೇಕು. ಕೆಲವರಿಗೆ ಪರಿಹಾರ ಮಾಡಿಕೊಳ್ಳುವುದಿರಲಿ ತಮ್ಮ ಆರೋಗ್ಯ ಸರಿಮಾಡಿಕೊಳ್ಳಲು ಕೂಡ ಹಣವಿರುವುದಿಲ್ಲ! ಆದರೆ ಅನಿವಾರ್ಯ ಜೀವನದ ಬಂಡಿ ಸಾಗಲೇಬೇಕು. ಪರಿಹಾರ ಮಾಡಿಕೊಳ್ಳಲು ಹಣವಿದ್ದವರು ಜಿಪುಣತನ ಮಾಡಿ ತಮ್ಮ ಮುಂದಿನ ದಿನಗಳಲ್ಲಿ ಹಣಕ್ಕಾಗಿಯೇ ಪರದಾಡುವಂತಾಗುತ್ತಾರೆ. ಇನ್ನೊಂದು ವಿಷಯ, ಇಂಗ್ಲಿಷ್ ಪದ್ಧತಿಯ ರಾಶಿ ನೋಡುವವರು ತಮ್ಮ ರಾಶಿಗ್ಯಾವಾಗ ಯಾವ ದಶೆ, ಭುಕ್ತಿ ಇದೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಯಾಕೆಂದರೆ ಇಂಗ್ಲಿಷ್ ಪದ್ಧತಿಯಲ್ಲಿ ಜನ್ಮದಿನಾಂಕ ಆಧರಿಸಿ ರಾಶಿಗಳನ್ನು ಹೆಸರಿಸುತ್ತಾರೆ. ಅವರಿಗೆ ಶನಿದಶೆ, ಶನಿದೇವನ ಸಾಡೇಸಾತಿ ಎಂಬುದೇನೂ ಇಲ್ಲ. ಹೀಗಾಗಿ ಇಂಗ್ಲಿಷ್ ರಾಶಿ ಭವಿಷ್ಯ ನೋಡುವವರು ತಮ್ಮ ಭವಿಷ್ಯದ ಬಗ್ಗೆ ನಿಖರವಾಗಿ ಏನೂ ತಿಳಿಯದಂತವರಾಗಿ ಮಂಗನಂತಾಗುತ್ತಾರೆ. ಇಷ್ಟೇ ಅಲ್ಲ ಶನಿದೇವನ ಸಾಡೇಸಾತಿ ಪೊಳ್ಳು ಎಂದು ತಮ್ಮಷ್ಟಕ್ಕೇ ತಾವೇ ನಿರ್ಧರಿಸಿ ಇತರರಿಗೆ ಸಾಡೇಸಾತಿ ಸುಳ್ಳು ಎಂದು ನಂಬಿಸುತ್ತಾರೆ. ಇಂಗ್ಲಿಷ್‌ನಲ್ಲಿ ಒಂದು ಗಾದೆಮಾತಿದೆ "ಲೈಫ್ ಬಿಗಿನ್ಸ್ ಆಫ್ಟರ್ ಫಾರ‍್ಟಿ" ಎಂದು. ಇದರರ್ಥ ಜೀವನ ಶುರುವಾಗೋದು ನಲ್ವತ್ತರ ನಂತರವೆಂದು. ಅವರೂ ಸಾಡೇಸಾತಿಯಿಂದ ಜೀವನದ ಪಾಠ ಕಲಿತು ಈ ಗಾದೆಮಾತು ಹುಟ್ಟಿಸಿದ್ದಾರೆ ಎಂದರೆ ತಪ್ಪೇನಲ್ಲ. ಯಾಕೆಂದರೆ ಸಾಡೇಸಾತಿ ಬರೋದು 30 ವರ್ಷಕ್ಕೊಮ್ಮೆ ಎಂಬುದು ನಿಮಗೆ ಗೊತ್ತಿದೆ. ಅವರೂ ಶನಿದೇವನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಇದೇ ರೀತಿ ನಲ್ವತ್ತರ ನಂತರ ವಯೋಸಹಜ ರೋಗಗಳು (ಕಣ್ಣಿನ ಬೇನೆ, ಬೆನ್ನು ನೋವು, ಮರೆವು ಮುಂತಾದವು) ದೇಹದಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತವೆ. ಇಂದಿನ ದಿನಗಳಲ್ಲಿ ಕಣ್ಣಿಗೆ ಕಾಣೋ ದೇವರೆಂದರೆ ವೈದ್ಯರು. ಎಂಥಾ ದೊಡ್ಡವರೇ ಇರಲಿ, ವೈದ್ಯರಿಗೆ ಮಾತ್ರ ನಮ್ಮ ಪಾಲಿನ ದೇವರು ನೀವು ನಮ್ಮವರನ್ನು ಉಳಿಸಿಕೊಡಿ ಎಂದು ಎಲ್ಲರೂ ಅವರಲ್ಲಿ ಕೇಳಿಕೊಳ್ಳುತ್ತಾರೆ. ಆದರೆ ವೈದ್ಯರು ರೋಗಿಗಳು ಕೆಟ್ಟವರು, ಒಳ್ಳೆಯವರು ಎಂಬ ಭೇದ ಮಾಡದೇ ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡುತ್ತ ರೋಗಿಗಳ ಪಾಲಿಗೆ ದೇವರೇ ಆಗಿರುತ್ತಾರೆ. ನಿಮಗೆ ಗೊತ್ತಿರಬಹುದು ನಮ್ಮ ನಿಮ್ಮೆಲ್ಲರ ಸುತ್ತಮುತ್ತಲೂ ಎರಡು ವರ್ಗದ ಜನರಿದ್ದಾರೆ. ಒಂದು ವರ್ಗ ಕೆಟ್ಟ ಗುಣಗಳವರದು ಇನ್ನೊಂದು ಒಳ್ಳೆಯ ಗುಣಗಳವರದು. ನೀವು ಯಾವ ವರ್ಗದಲ್ಲಿದ್ದೀರಿ ಎಂಬುದನ್ನು ನೀವೇ ಆತ್ಮವಿಮರ್ಶೆ ಮಾಡಿಕೊಳ್ಳಿ. ಅಥವಾ ಇನ್ನೊಬ್ಬರಲ್ಲಿ ಕೇಳಿ ತಿಳಿದುಕೊಳ್ಳಿ ನೀವು ಯಾವ ವರ್ಗದವರು ಎಂದು. ಏಕೆಂದರೆ ಕೆಟ್ಟ ಗುಣಗಳ ವರ್ಗದವರು ಮತ್ತೊಬ್ಬರ ಜೀವನದಲ್ಲಿ ಅಡ್ಡಗಾಲು ಹಾಕುತ್ತಾ ಅವರ ಏಳ್ಗೆ ಸಹಿಸದೆ ತಡೆಯೊಡ್ಡುತ್ತಿರುತ್ತಾರೆ. ಇಂಥವರು ಮಾಡುವ ಪಾಪದ ಕೆಲಸವನ್ನು ಮಹಾತ್ಮನು ನೋಡುತ್ತಲೇ ಇರುತ್ತಾನೆ. ಈ ತರಹ ಅಡ್ಡಗಾಲು ಹಾಕುವವರ ಕಾಲೇ ಅವನ ಟಾರ್ಗೆಟ್ ಆಗಿರುತ್ತದೆ! ಶನಿದೇವನು ತನ್ನ ಕಾಡಾಟದಲ್ಲಿ ತಾನಿಟ್ಟ ಟಾರ್ಗೆಟ್ ಮರೆಯೋದಿಲ್ಲ. ಬೇರೊಬ್ಬರಿಗೆ ಅಡ್ಡಗಾಲು ಹಾಕುವವರಿಗೆ ಆಮೇಲೆ ಗೊತ್ತಾಗುತ್ತೆ ಶನಿದೇವನ ಈ ಶಿಕ್ಷೆ ಯಾಕೆ ಎಂದು. ಜಾತಕವಿಲ್ಲದವರಿಗೆ ಶನಿಬಲ ಬಂದಿರೋದು ಗೊತ್ತಾಗೋದು ಹೀಗೆ? ಎಂಬುದು ಮುಂದಿನ ಲೇಖನದಲ್ಲಿ. ವಾಸ್ತು ಟಿಪ್ಸ್ : ಪೂಜೆ, ಧ್ಯಾನ ಮತ್ತು ಓದುವಾಗ ಪೂರ್ವದಿಕ್ಕಿಗೆ ನಿಮ್ಮ ಮುಖವಿರಲಿ. ಶನಿದೇವನ ಕೃಪೆಗೆ : ಶನಿಯಂತ್ರ ಮನೆಯಲ್ಲಿ ಸ್ಥಾಪಿಸಿ ಪೂಜಿಸಿ.
-ಸಂಗ್ರಹ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments