ಎಷ್ಟು ಹಣ ಇದ್ದರೇನು ಪ್ರಯೋಜನ...ಆ ಹಣವನ್ನು ಅನುಭವಿಸಲು ಮನುಷ್ಯನ ಆರೋಗ್ಯವೇ ಸರಿಯಿಲಿಲ್ಲವಾದರೆ ಏನು ಉಪಯೋಗ..?' ಎಂದು ಬಲ್ಲವರು ಹೇಳುತ್ತಾರೆ. ಹೌದು. ಎಲ್ಲಕ್ಕೂ ಆರೋಗ್ಯವೇ ಮೂಲ. ಬಡವರಾಗಲಿ, ಸಿರಿವಂತರಾಗಲೀ, ರೋಗ ಎಂಬುದು ಯಾರ ಮೇಲೂ ಯಾವ ಬೇಧವನ್ನೂ ಮಾಡಿಲ್ಲ. ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಎಂಥವನನ್ನೂ ರೋಗ ದಾಳಿ ಮಾಡುತ್ತದೆ ಎಂಬುದು ಸಾರ್ವಕಾಲಿಕ ಸತ್ಯ.
ಹಾಗಿದ್ದೂ, ಸಂಖ್ಯಾಶಾಸ್ತ್ರಗಳ ಪ್ರಕಾರ ಪಂಡಿತರು ಮೂಲಾಂಕಗಳ ಪ್ರಕಾರ ಯಾರ‌್ಯಾರಿಗೆ ಯಾವ ಯಾವ ರೋಗಗಳು ಬರುವ ಸಾಧ್ಯತೆ ಹೆಚ್ಚು ಎಂದು ಲೆಕ್ಕಾಚಾರ ಹಾಕಿದ್ದಾರೆ. ದೇಹಾರೋಗ್ಯ ಕಾಪಾಡಿಕೊಳ್ಳದಿದ್ದರೆ, ಯಾರ‌್ಯಾರು ಎಂತೆಂಥ ರೋಗಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂಬ ವಿವರ ಇಲ್ಲಿದೆ. ಈ ಲೇಖನದಲ್ಲಿ ಮೂಲಾಂಕಗಳಿಗೆ ಅನುಗುಣವಾಗಿ ರೋಗಸಾಧ್ಯತೆಯನ್ನು ವಿವರಿಸಲಾಗಿದೆ. ಆ ಮೂಲಕ ಪ್ರತಿಯೊಬ್ಬರೂ ಅವರವರ ಮೂಲಾಂಕ ಪತ್ತೆಹಚ್ಚಿ ತಮ್ಮ ರೋಗ ಪತ್ತೆ ಹಚ್ಚಬಹುದು.
ಮೂಲಾಂಕ ಪತ್ತೆ ಹಚ್ಚುವುದು ಕಷ್ಟವೇನಲ್ಲ. ಅವರವರು ಹುಟ್ಟಿದ ದಿನಾಂಕವನ್ನು ಕೂಡಿಸಿ ಬರುವ ಏಕಂಕಿಯೇ ಅವರವರ ಮೂಲಾಂಕ. ಮೂಲಾಂಕ ಪತ್ತೆಹಚ್ಚುವಲ್ಲಿ ನೀವು ಹುಟ್ಟಿದ ಇಸವಿ ಹಾಗೂ ತಿಂಗಳು ಮುಖ್ಯವಾಗುವುದಿಲ್ಲ. ಕೇವಲ ನೀವು ಹುಟ್ಟಿದ ತಾರೀಕಷ್ಟೇ ಮುಖ್ಯ. ಉದಾಹರಣೆಗೆ, ನೀವು ಹುಟ್ಟಿದ್ದು ಆಗಸ್ಟ್ 27 ಎಂದಾದಲ್ಲಿ 27 ಸಂಖ್ಯೆಯ 2 ಹಾಗೂ 7ನ್ನು ಪರಸ್ಪರ ಕೂಡಿಸಿರಿ. ಆಗ 9 ಬರುತ್ತದೆ. ಹಾಗಾಗಿ ನಿಮ್ಮ ಮೂಲಾಂಕ 9. ನೀವು ಸೆಪ್ಟೆಂಬರ್ 29ಕ್ಕೆ ಹುಟ್ಟಿದ್ದಲ್ಲಿ, 2 ಹಾಗೂ 9ನ್ನು ಕೂಡಿಸಿದರೆ ಬರುವ ಮೊತ್ತ 11. ಈಗ ಮತ್ತೆ 11ರಲ್ಲಿ 1 ಹಾಗೂ 1ನ್ನು ಕೂಡಿರಿ. ಆಗ ಬರುವ ಸಂಖ್ಯೆ 2. ಹಾಗಾಗಿ ಸೆಪ್ಟೆಂಬರ್ 29ಕ್ಕೆ ಹುಟ್ಟಿದವರ ಮೂಲಾಂಕ 2. ಹೀಗೆ ನಿಮ್ಮ ನಿಮ್ಮ ಹುಟ್ಟಿದ ದಿನಾಂಕದ ಮೂಲಾಂಕವನ್ನು ಕಂಡುಹಿಡಿದು, ನಿಮಗಿರುವ ರೋಗ ಸಾಧ್ಯತೆಯನ್ನು ಈ ಕೆಳಗೆ ಕೊಟ್ಟವುಗಳಲ್ಲಿ ಹುಡುಕಿಕೊಂಡು ಆ ರೋಗ ಬರದಂತೆ ಮೊದಲೇ ಮುಂಜಾಗ್ರತಾ ಕ್ರಮಗಳ್ನು ಕೈಗೊಳ್ಳಬಹುದು.
ಮೂಲಾಂಕ 1- ರಕ್ತದೊತ್ತಡ, ಹೃದಯ ರೋಗ, ಕಣ್ಣಿನ ಸಂಬಂಧೀ ರೋಗ.
ಮೂಲಾಂಕ 2- ಉದರ ಸಂಬಂಧೀ ರೋಗ, ಪಚನಕ್ರಿಯೆ ತೊಂದರೆ, ಗಡ್ಡೆ ಅಥವಾ ಟ್ಯೂಮರ್‌ಗಳಾಗುವ ಸಂಭವ, ಉಸಿರಾಟ ಸಂಬಂಧೀ ಹಾಗೂ ಕಿವಿಯ ತೊಂದರೆಗಳು ಉಂಟಾಗಬಹುದು.
ಮೂಲಾಂಕ 3- ಮಾನಸಿಕ ಒತ್ತಡ, ಚರ್ಮ ಸಂಬಂಧೀ ರೋಗಗಳ ಸಾಧ್ಯತೆ, ನರ ಸೆಳೆತ ಸಾಧ್ಯತೆ.
ಮೂಲಾಂಕ 4- ಮಾನಸಿಕ ಕ್ಲೇಶ, ಮನೋರೋಗ, ರಕ್ತ ಸಂಬಂಧೀ ರೋಗಗಳು, ತಲೆ ನೋವು, ಕಿಡ್ನಿ, ಮೂತ್ರಾಶಯ ಸಂಬಂಧೀ ರೋಗಗಳ ಸಾಧ್ಯತೆ.
ಮೂಲಾಂಕ 5- ಅನಿದ್ರೆ, ಕಣ್ಣಿನ ಸಂಬಂಧೀ ರೋಗಗಳು, ನರಸಂಬಂಧೀ ಕಾಯಿಲೆ, ಲಕ್ವಾ ಹೊಡೆಯುವ ಸಾಧ್ಯತೆಗಳಿವೆ.
ಮೂಲಾಂಕ 6- ಕತ್ತು, ಮೂಗು ಅಥವಾ ಶ್ವಾಸಕೋಶಗಳ ತೊಂದರೆ, ರಕ್ತ ಸಂಚಾರದಲ್ಲಿ ಕಷ್ಟ ಸಾಧ್ಯತೆ ಅಥವಾ ಹೃದಯ ಸಂಬಂಧೀ ರೋಗಗಳು ಬರುತ್ತವೆ.
ಮೂಲಾಂಕ 7- ರಕ್ತ ಪರಿಚಲನೆಯಲ್ಲಿ ತೊಂದರೆ, ಪಚನ ಕ್ರಿಯೆಯಲ್ಲಿ ತೊಂದರೆ, ಮೊಡವೆ ಹಾಗೂ ಚರ್ಮ ಸಂಬಂಧೀ ರೋಗ, ಮೂಲವ್ಯಾಧಿ ತೊಂದರೆಗಳಾಗುವ ಸಾಧ್ಯತೆ.
ಮೂಲಾಂಕ 8- ತಲೆನೋವು, ಪಿತ್ತಕೋಶದ ತೊಂದರೆಗಳು, ಸ್ನಾಯುಸೆಳೆತ, ಸಂಧಿವಾತ ಕಾಡುವ ಸಾಧ್ಯತೆಗಳಿವೆ.
ಮೂಲಾಂಕ 9- ದಡಾರ, ಜ್ವರ, ಇನ್ಫೆಕ್ಷನ್, ರಕ್ತಹೀನತೆ, ಚರ್ಮ ರೋಗಗಳು ಕಾಡುವ ಭಯವಿದೆ.
(ಗಮನಿಸಿ- ಮೂಲಾಂಕಗಳಿಂದ ರೋಗಗಳ ಸಾಧ್ಯತೆಗಳನ್ನು ಮೊದಲೇ ಅರಿವಿಟ್ಟುಕೊಳ್ಳಬಹುದಾದರೂ, ಅವರವರ ಆರೋಗ್ಯ ಅವರವರ ಕೈಯಲ್ಲೇ ಇದೆ. ಹಾಗಾಗಿ ದುಶ್ಚಟಗಳಿಂದ ದೂರವಿದ್ದು, ಕಾಲಕಾಲಕ್ಕೆ ಉತ್ತಮ ಆಹಾರ, ವ್ಯಾಯಾಮ ಮಾಡುತ್ತಿದ್ದು, ಬರಲಿರುವ ರೋಗಗಳಿಗೆ ಮುಂಜಾಗ್ರತೆ ವಹಿಸುತ್ತಾ ಬಂದಲ್ಲಿ, ಎಂಥಾ ರೋಗವನ್ನೂ ಜಯಿಸಬಹುದು.)
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments