ಪ್ರೇಮ ವಿವಾಹ ಯಾಕೆ ಸಫಲವಾಗುವುದಿಲ್ಲ?: ಉತ್ತರ
ಪ್ರೀತಿ. ಯಾರಿಗೆ ಆಗುವುದಿಲ್ಲ ಹೇಳಿ. ಇಂತಹ ಪ್ರೀತಿಯ ಬಗ್ಗೆ, ಪ್ರೇಮ ವಿವಾಹದ ಬಗ್ಗೆ ಜ್ಯೋತಿಷ್ಯದಲ್ಲೂ ಕೆಲವಾರು ವಿವರಗಳು ಸಿಗುತ್ತವೆ.
ವರ್ತಮಾನದ ಆಧುನಿಕತೆ ಪ್ರವೇಶ, ಬಿಚ್ಚುಸಂಸ್ಕೃತಿ, ಟಿವಿ, ಸಿನಿಮಾ, ವ್ಯಾಲೆಂಟೈನ್ ಡೇ... ನಮ್ಮ ಸಂಸ್ಕೃತಿ ಹಲವನ್ನು ಒಳಗೊಂಡು ಮುಂದೆ ಹೋಗುತ್ತಲೇ ಇದೆ. ಹೀಗಾಗಿ ಪ್ರೀತಿ, ಪ್ರೇಮಗಳ ಪ್ರಕರಣಗಳೂ ಹೆಚ್ಚಾಗುತ್ತಲೇ ಇವೆ. ಜತೆಗೆ ಪ್ರೇಮ ವಿವಾಹ ಬೆಳೆದಂತೆಯೇ ವಿಚ್ಚೇದನವೂ ಹೆಚ್ಚಾಗುತ್ತಲೇ ಇವೆ.
ಯಾವ ಗ್ರಹಗಳ ಕಾರಣದಿಂದ ವ್ಯಕ್ತಿಯೊಬ್ಬ ಪ್ರೇಮಕ್ಕೆ ಬೀಳುತ್ತಾನೋ.. ಅದೇ ಗ್ರಹಗಳ ಕಾರಣದಿಂದಲೇ ಆ ವ್ಯಕ್ತಿ ತನ್ನ ಪ್ರೇಮದಲ್ಲಿ ವಿಫಲನೂ/ಳೂ ಆಗುತ್ತಾನೆ/ಳೆ ಎಂಬುದು ಜ್ಯೋತಿಷ್ಯದ ವಿಶೇಷ ಕುತೂಹಲಕರ ವಿಷಯ. ಪ್ರೇಮ ವಿವಾಹಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸ್ಪಷ್ಟ ವಿವರಗಳು ಸಿಗದಿದ್ದರೂ,
ಪ್ರೇಮ ವಿವಾಹ ಯಾಕೆ ಸಫಲವಾಗುವುದು ಕಡಿಮೆ ಎಂಬುದಕ್ಕೆ ಹಲವು ಕಾರಣಗಳು ಸಿಗುತ್ತವೆ.
1. ಶುಕ್ರ ಅಥವಾ ಮಂಗಳನ ಸ್ಥಿತಿ ಪ್ರೇಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಯವುದೇ ಜಾತಕದ ಕುಂಡಲಿಯಲ್ಲಿ ಶುಕ್ರ ಹಾಗೂ ಮಂಗಳ ಅನುಕೂಲ ಸ್ಥಿತಿಯಲ್ಲಿ ಇಲ್ಲದಿದ್ದರೆ, ಪ್ರೇಮ ಸಂಬಂಧದಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗುತ್ತದೆ. ಅಂದರೆ ಪ್ರೇಮ ವಿಫಲವಾಗಿ ನೋವಿನಲ್ಲಿ ನರಳಬೇಕಾಗುತ್ತದೆ.
2. ಸಪ್ತಮ ಭಾವ ಅಥವಾ ಸಪ್ತಮೇಶದ ಪಾಪ ಪೀಡಿತನಾದರೂ ಪ್ರೇಮ ವಿಫಲವಾಗುತ್ತದೆ. ಅಂದರೆ ಸಪ್ತಮೇಶ ಹಾಗೂ ಪಂಚಮೇಶಗಳ ಸ್ಥಿತಿ ಸಪ್ತಮ ಹಾಗೂ ಪಂಚಮದ ಜತೆ ಸಂಬಂಧ ಹೊಂದಿರದಿದ್ದಲ್ಲಿ ಪ್ರೇಮದಲ್ಲಿ ವಿರಸ ಉಂಟಾಗುತ್ತದೆ.
3. ಸೂರ್ಯನಲ್ಲಿರುವ ಶುಕ್ರನ ಮೇಲೆ ಚಂದ್ರನ ಪ್ರಭಾವವಿದ್ದರೆ ಪ್ರೇಮ ಸಂಬಂಧ ಮದುವೆಯವರೆಗೆ ತಲುಪಿದರೂ ಮದುವೆಯ ನಂತರ ವಿಚ್ಚೇದನದಲ್ಲೇ ಅಂತ್ಯವಾಗುತ್ತದೆ. ಸೂರ್ಯ ಹಾಗೂ ಚಂದ್ರನ ಮಧ್ಯೆ ಶುಕ್ರ ಬಂದಲ್ಲಿ ಅದು ಪ್ರೇಮದ ಅವಸಾನ ಎಂದೇ ಅರ್ಥ.
4. ಪ್ರೇಮವಿವಾಹಕ್ಕಾಗಿ ಜನ್ಮ ಕುಂಡಲಿಯಲ್ಲಿ ಮೊದಲು ಐದನೇ ಸಪ್ತಮ ಭಾವದ ಜತೆ ಜತೆಗೆ 12ನೇ ಭಾವವನ್ನೂ ನೋಡಬೇಕು. ಯಾಕೆಂದರೆ ಮದುವೆಯ ಸಮದಲ್ಲಿ 12ನೇ ಮನೆ ಶಯನ ಸುಖದ ಭಾವವಾದ್ದರಿಂದ ಅದ್ನನೂ ಮದುವೆಯ ಸಮಯ ಕುಂಡಲಿ ಹೊಂದಣಿಕೆಯ ಸಮಯದಲ್ಲಿ ನೋಡುತ್ತಾರೆ.
ಇದರಲ್ಲೂ ತೊಂದರೆಯಿದ್ದರೆ ವಿವಾಹ ನಂತರ ವಿರಸದಲ್ಲಿ ಅಂತ್ಯವಾಗುವ ಸಂಭವಗಳಿವೆ.
ಪ್ರೇಮ ವಿವಾಹ ಚೆನ್ನಾಗಿರಬೇಕಾದರೂ ಜ್ಯೋತಿಷ್ಯದ್ಲಲಿ ಸಾಕಷ್ಟು ಸೂತ್ರಗಳಿವೆ.
1. ಶುಕ್ರನನ್ನು ಆರಾಧಿಸಿ.
2. ಪಂಚಮೇಶ ಅಥವಾ ಸಪ್ತಮೇಶನ ಪೂಜೆ ಮಾಡಿ.
3. ಪಂಚಮೇಶನ ರತ್ನ ಧಾರಣೆ ಮಾಡಿ.
-ಸಂಗ್ರಹ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments