ಮನುಷ್ಯ ಜೀವನವೇ ಹಾಗೆ. ಸುಖವನ್ನು ಬಯಸುವಂಥದ್ದು. ಅಷ್ಟೇ ಅಲ್ಲ, ಜಿಜ್ಞಾಸೆಯಿಂದಲೇ ಕಾಲ ತಳ್ಳುವ ಜೀವನವದು. ತನ್ನ ಜಾತಕದಲ್ಲಿ ಕಷ್ಟ-ಸುಖ, ಶುಭ- ಅಶುಭಗಳ ಹಿಂದಿರುವ ರಹಸ್ಯ ಹುಡುಕಿಕೊಂಡು ಹೋಗುವ ಮನೋಧರ್ಮ ಕೆಲವರದಾದರೆ, ತನಗೆ ಬಂದ ಕಷ್ಟದ ಮೂಲ ಹುಡುಕಿಕೊಂಡು ಹೋಗಿ ಪರಿಹಾರ ಪಡೆಯಲು ಹವಣಿಸುವುದು ಹಲವರ ಮಾನವ ಸಹಜ ಗುಣ. ಕಷ್ಟ ಪರಿಹರಿಸಿ ಸುಖ ನೆಲೆಯಾಗಲು ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ದಾರಿ ಕಾಣದೆ ಕಂಗಾಲಾಗುವವರೂ ಅನೇಕರು.
ಬಹುತೇಕರು ಸಾಡೇಸಾತ್ ಶನಿಗೆ ಹೆದರಿದರೆ ಇನ್ನೂ ಅನೇಕರು ತಮ್ಮ ಜಾತಕದಲ್ಲಿ ತಮಗೆ ಕಾಳಸರ್ಪ ಯೋಗವಿದೆಯೆಂದು ತಿಳಿದು ಭಯಭೀತರಾಗುತ್ತಾರೆ. ಕಾಳ ಸರ್ಪ ಯೋಗದ ಬಗ್ಗೆ ಜನರಲ್ಲಿ ಭಯವಿರುವ ಜೊತೆಗೇ ಸಾಕಷ್ಟು ತಪ್ಪುತಿಳುವಳಿಕೆಗಳೂ ಇವೆ. ಹಾಗಾಗಿ ಕಾಳಸರ್ಪ ಯೋಗದ ಬಗ್ಗೆ ಹಾಗೂ ಪರಿಹಾರ ಉಪಾಯಗಳ ಬಗ್ಗೆ ಈ ಲೇಖನದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ
ಒಂದೇ ಪರಿವಾರದಲ್ಲಿ ಅಣ್ಣತಮ್ಮಂದಿರು ಅಕ್ಕತಮ್ಮಂದಿರು ಇರುತ್ತಾರೆ. ನಾವು ಒಂದೇ ಕುಟುಂಬದವರೆಂದು ಅಣ್ಣ ತಮ್ಮ ಅಕ್ಕ ತಂಗಿಯರೆಂದು ಹೇಳಿಕೊಂಡರೂ ಅವರೆಲ್ಲರಲ್ಲೂ ವ್ಯತ್ಯಾಸಗಳಿದ್ದೇ ಇರುತ್ತದೆ. ಅಭಿರುಚಿ, ರೀತಿ ನೀತಿ, ಭಾವನೆ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ. ಅವರವರ ಕರ್ಮವನ್ನವಲಂಬಿಸಿಕೊಂಡು ಅವರವರ ಜೀವನಕ್ರಮ, ಆಸಕ್ತಿ ಭಿನ್ನವಾಗಿರುತ್ತದೆ. ಹಾಗಾಗಿಯೇ ಅವರವರ ಕರ್ಮಕ್ಕನುಗುಣವಾಗಿ ಫಲವಾದ ಭೋಗವೂ ಕೂಡಾ ಭಿನ್ನಭಿನ್ನವೇ.
ನಿಮ್ಮ ಜಾತಕದಲ್ಲಿ ಗ್ರಹಬಲವಿದ್ದಾಗ..
ಜಾತಕನ ಜಾತಕದಲ್ಲಿನ ಗ್ರಹಗಳಲ್ಲಿನ ಸ್ಥಾನ ,ದಶಾಭುಕ್ತಿ, ಅಂತರ್ದಶಾಭುಕ್ತಿ , ಕಾಲಚಕ್ರ ನಿರ್ಣಯ ಹೀಗೆ ಇವೆಲ್ಲವನ್ನೂ ಅರಿತು ನಿರ್ಣಯಿಸುವ ಫಲವೇ ಭವಿಷ್ಯ ಎಂಬುದಾಗಿ ಜ್ಯೋತಿಷ್ಯ ಸಿದ್ಧಾಂತವು ಪ್ರಚುರಪಡಿಸಿದೆ. ಇದರಲ್ಲಿ ಗ್ರಹಬಲ ಎಂಬುದು ವಿಶೇಷವಾಗಿ ನಾಲ್ಕು ಪ್ರಕಾರದ ಬಲವೆಂಬುದಾಗಿ ಬಿಂಬಿಸಲ್ಪಟ್ಟಿದೆ.
೧ ಸ್ಥಾನ ಬಲ: ಜಾತಕದಲ್ಲಿ ಯಾವುದೇ ಗ್ರಹವು ತನ್ನ ಉಚ್ಛ ಸ್ಥಾನದಲ್ಲಿ ಸ್ಥಿತವಾಗಿದ್ದರೆ ತನ್ನ ಮಿಶ್ರರಾಶಿ ಹಾಗೂ ಸ್ವಕ್ಷೇತ್ರದಲ್ಲಿದ್ದರೆ ಅದರ ಮೂಲ ತ್ರಿಕೋಣ ಹಾಗೂ ನವಾಂಶದಲ್ಲಿದ್ದರೆ ಅದನ್ನು ಸ್ಥಾನ ಬಲವೆಂದು ಕರೆಯುತ್ತಾರೆ. ಜಾತಕದಲ್ಲಿ ಈ ಸ್ಥಾನ ಬಂದಿರುವಾಗ ಜಾತಕನಿಗೆ ಅತಿಶಯವಾದ ಐಶ್ವರ್ಯ ವೃದ್ಧಿಯಾಗುವುದಲ್ಲದೇ ಸಾಮಾಜಿಕ ಹಾಗೂ ರಾಜಕೀಯದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯಾಗುತ್ತದೆ. ಇನ್ನು ಚಂದ್ರ ಶುಕ್ರರು ಸ್ತ್ರೀ ಕ್ಷೇತ್ರದಲ್ಲಿರುವಾಗಲೂ, ಉಳಿದ ಗ್ರಹಗಳು ಪುರುಷ ಕ್ಷೇತ್ರದಲ್ಲಿದ್ದಾಗಲೂ ಉತ್ತಮವಾದ ಶುಭಫಲಗಳು ದೊರೆಯುತ್ತವೆ.
೨ ಜೇಷ್ಠಬಲ : ಗ್ರಹಗಳಿಗೆ ವಕ್ರ, ಅತಿವಕ್ರ , ಕುಟಿಲ, ಮಂದಾ,ಮಂದರಕ, ಸಮ, ಶೀಘ್ರ ,ಅತಿಶೀಘ್ರ, ಎಂಬ ಎಂಟು ಪ್ರಕಾರದ ಗತಿಗಳಿದ್ದು ಈ ಗ್ರಹಗಳಿಗೆ ಯುದ್ಧದಂತಹ ಸಮಯದಲ್ಲಿ ಉತ್ತರ ದಿಕ್ಕಿನಲ್ಲಿರುವ ಗ್ರಹಗಳೇ
ಬಲಶಾಲಿಯೆಂಬ ನಿಯಮವಿದೆ.ಹಾಗಾಗಿ ಜಯಶಾಲಿಯಾದ ಗ್ರಹಕ್ಕೆ ಅಧಿಕಬಲವೆಂದು , ಸೋತ ಗ್ರಹಕ್ಕೆ ಕ್ಷೀಣ ಬಲವೆಂದೂ ಕಲ್ಪಿಸಿ ಅವುಗಳ ಬಲಾಬಲವನ್ನು ವಿಮರ್ಶಿಸಿ ಜಾತಕನ ಭವಿಷ್ಯ ಫಲವನ್ನು ನಿರ್ಣಯಿಸಲಾಗುತ್ತದೆ. ಹಾಗಾಗಿ ಗ್ರಹಗಳು ತಮ್ಮ ಜೇಷ್ಠ ಬಲದಲ್ಲಿದ್ದರೆ ಜಾತಕನಿಗೆ ಉತ್ತಮ ಸ್ಥಾನಮಾನ, ಗೌರವ ಪ್ರಾಪ್ತಿ, ಯಶಸ್ಸು ಹಾಗೂ ಅತಿಶಯವಾದ ಕೀರ್ತಿ ದೊರೆಯುತ್ತದೆ.
೩ ದಿಗ್ಪಲ: ಸೂರ್ಯ,ಮಂಗಳನು ದಕ್ಷಿಣ ದಿಕ್ಕಿನಲ್ಲಿದ್ದಾಗ ಚಂದ್ರ-ಶುಕ್ರರು ಉತ್ತರ ದಿಕ್ಕಿನಲ್ಲಿದ್ದಾಗ, ಬುಧ-ಗುರು ಗ್ರಹಗಳು ಪೂರ್ವ ದಿಕ್ಕಿನಲ್ಲಿದ್ದಾಗ ಹಾಗೂ ಶನಿಯು ಪಶ್ಚಿಮ ದಿಕ್ಕಿನಲ್ಲಿದ್ದಾಗ ಜಾತಕನು ದಿಗ್ಬಲ ಉಳ್ಳವನಾಗಿರುತ್ತಾನೆ. ಈ ಸಂದರ್ಭದಲ್ಲಿ ಜಾತಕನಿಗೆ ಈ ದಿಗ್ಬಲವುಳ್ಳ ಗ್ರಹಗಳು ಉತ್ತಮ ಸಂಪತ್ತು, ಕೀರ್ತಿ ದೊರೆಯುವಂತೆ ಮಾಡುವುದಲ್ಲದೇ ವಾಹನ ಯೋಗ, ಅಧಿಕಾರ ಪ್ರಾಪ್ತಿಯಂತಹ ಉತ್ತಮ ಫಲಗಳನ್ನೇ ನೀಡುತ್ತದೆ.
೪ ಕಾಲಬಲ : ಚಂದ್ರ,ಮಂಗಳ, ಶನಿಗ್ರಹಗಳು ರಾತ್ರಿ ಕಾಲದಲ್ಲಿ ಬಲವಾಗಿದ್ದು, ಬುಧನು ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿಯೂ ಬಲವಾಗಿರುತ್ತಾನೆ. ಅಲ್ಲದೇ ಸೌಮ್ಯಗ್ರಹಗಳು ಶುಕ್ಲ ಪಕ್ಷದಲ್ಲಿಯೂ , ಕ್ರೂರ ಗ್ರಹಗಳು ಕೃಷ್ಣ ಪಕ್ಷದಲ್ಲಿಯೂ ಬಲವಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಜಾತಕನಿಗೆ ಗ್ರಹಗಳ ಬಲವಿರುವ ಸಮಯದಲ್ಲಿ ಉತ್ತಮವಾದ ಫಲಗಳನ್ನು ನೀಡುವುದು ಮಾತ್ರವಲ್ಲ, ನಿಶ್ಚಯಿಸಿದ ಕಾರ್ಯದಲ್ಲಿ ಯಶಸ್ಸು,ಅಧಿಕಾರ, ಉತ್ತಮ ಸ್ಥಾನಗಳನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
-ಸಂಗ್ರಹ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments