ದೇವತಾ ಪ್ರತಿಷ್ಠಾಪನೆ
"ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ.
ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ.
ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿಗ್ರಹ,ಮಲಗಿರುವ ವಿಗ್ರಹ ಎಂದು ಪ್ರಕಾರಗಳಿವೆ. ಕೆಲವು ಕುಳಿತ ದೇವರುಗಳ ವಿಗ್ರಹಗಳು ಶ್ರೇಷ್ಠ,ಮತ್ತೆ ಕೆಲವು ನಿಂತ ವಿಗ್ರಹಗಳು ಶ್ರೇಷ್ಠ.ವಿಗ್ರಹವನ್ನು ಪ್ರತಿಷ್ಠಾಪನೆಗೆ ಬಳಸುವುದಾದಲ್ಲಿ ಕಲ್ಲಿನ ವಿಗ್ರಹ(ಕಪ್ಪು ಪಾಷಾಣ),ಚಿನ್ನ,ಬೆಳ್ಳಿ,ಪಂಚಲೋಹದ ವಿಗ್ರಹಗಳು ಉತ್ತಮ.ಮರದ ವಿಗ್ರಹಗಳನ್ನು ಬಳಸಬಹುದು. ಆದರೆ ಚಿತ್ರ ಬರೆದವು,ಗಾಜಿನ ವಿಗ್ರಹಗಳು ಪ್ರತಿಷ್ಠೆಗೆ ಯೋಗ್ಯವಲ್ಲ. ಮೂರ್ತಿಪ್ರತಿಷ್ಠೆಯನ್ನು ಮಾಡುವಾಗ ಪ್ರಾಕೃತಿಕವಾಗಿ ತಯಾರಿಸಿದ ಅಷ್ಠಬಂಧವೆಂಬ ದ್ರವ್ಯವನ್ನೇ ಬಳಸಬೇಕು. ಬಿಳಿ ಸಿಮೆಂಟನ್ನು ಬಳಸಬಾರದು.ಪ್ರತಿಷ್ಠಾಪನೆಗೆ ಮುನ್ನ ಮೂರ್ತಿಯ ಕೆಳಗೆ ಆ ದೇವರ ಯಂತ್ರ, ಸುವರ್ಣ, ನವರತ್ನಗಳನ್ನು ಹಾಕಬೇಕು. ಪ್ರತಿಷ್ಠಾಪಿಸಿದ ೪೮ ದಿನ,ಒಂದು ಮಂಡಲಗಳ ಕಾಲ ಜಲವನ್ನು ಪ್ರೋಕ್ಷಣೆ ಮತ್ತು ಷೋಡಷ ಉಪಚಾರಾದಿಗಳನ್ನು ಮತ್ತು ಮಹಾಪೂಜಾದಿಗಳನ್ನು ಮಾಡಬಹುದು. ೪೮ನೇ ದಿನ ಅಭಿಷೇಕಾದಿ ಮಹಾಪೂಜೆಯನ್ನು ಮಾಡಬೇಕು. ಆಮೇಲೆ ೧೨ನೇ ವರ್ಷವಾದಾಗ ಪುನ: ಪ್ರತಿಷ್ಠೆಯ ಬ್ರಹ್ಮ ಕಲಶೋತ್ಸವ ಆದಿಗಳನ್ನು ಮಾಡಿಸಬೇಕು.
ದೇವತಾ ಪ್ರತಿಷ್ಠೆಗಾಗಿ ಬಳಸುವ ಅಷ್ಠಬಂಧ ಮಾಡುವ ವಿಧಾನ ಮತ್ತು ದ್ರವ್ಯಗಳು.
ಒಳ್ಳೆಣ್ಣೆ_೪ ಪಾವು
ಬೆಲ್ಲ_ ೫ ಪಾವು)
ಕೆಂಪು ಕಲ್ಲು_ ೬ ಪಾವು
ಗುಗ್ಗೂಳ_ ೭ ಪಾವು
ಗುಲಗಂಜಿ_೮ ಪಾವು
ಕುರಂಗದ ಕಲ್ಲು_ ೯ ಪಾವು
ಸಜ್ಜರಸ_೧೦ ಪಾವು
ಅರಗು_೧೧ ಪಾವು
ಜೇನು ಮೇಣ_೧೧ ಪಾವು
ಈ ಎಲ್ಲಾ ವಸ್ತುಗಳನ್ನು ಚೂರ್ಣವಾಗಿ ಮಾಡಿಕೊಂಡು ಶೋಧಿಸಿಕೊಳ್ಳಬೇಕು. ಆಮೇಲೆ ಹೊಸ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಾಯಿಸಬೇಕು.ಸೌಟನ್ನು ಮೇಲೆತ್ತಿ ನೋಡಲು ನೂಲಿನಂತೆ ಪಾಕವು ಬಂದಾಗ ಅಷ್ಠಬಂಧದ ಹದವು ಸರಿಯಾಗುವುದು.ಸ್ವಲ್ಪವೂ ಹದ ಮೀರಬಾರದು. ಹೀಗೆ ಸರಿಯಾಗಿ ತಯಾರಿಸಿದ ಅಷ್ಠಬಂಧದಿಂದ ವಿಗ್ರಹಗಳನ್ನು ಸ್ಥಾಪಿಸಬೇಕು.
ನಾಲ್ಕನೇಯದಾಗಿ, ಮಂದಿರದಲ್ಲಿ ಸ್ಥಾಪಿಸುವ ಮೂರ್ತಿಯು ೧ ಅಂಗುಷ್ಟ ಪ್ರಮಾಣದಿಂದ ೧೬ ವಿತಸ್ತಿ(ಬಾಹು) ಪ್ರಮಾಣದವರೆಗೆ ಇರಬಹುದು. ಇದಕ್ಕಿಂತ ಜಾಸ್ತಿ ಇರಬಾರದು. ಮನೆಯಲ್ಲಿ ಪೂಜಿಸುವ ಮೂರ್ತಿಯು ೧ ಅಂಗುಷ್ಟ(ಹೆಬ್ಬೆರಳಿನಷ್ಟು)ಪ್ರಮಾಣವಿರಬೇಕು. ಆದರೆ ಮತ್ಸ ಪುರಾಣದಲ್ಲಿ ೧ ಅಂಗುಷ್ಟ ಪ್ರಮಾಣದಿಂದ ೧೨ ಅಂಗುಲ ಪ್ರಮಾಣವನ್ನು ಹೇಳಿವೆ.
ಐದನೇಯದಾಗಿ, ಪ್ರಧಾನ ದೇವತೆಯನ್ನು ಸ್ಥಾಪಿಸಿದ ನಂತರ ಆಯಾಯ ದೇವತಾ ವಾಹನವನ್ನು ಉದಾಹರಣೆಗೆ(ನಂದಿ,ಕೂರ್ಮ,ಸಿಂಹ) ಸ್ಥಾಪಿಸಬೇಕು.ಗರ್ಭಗುಡಿಯಲ್ಲಿ ಇರುವ ದೇವರ ಮತ್ತು ದೇವಸ್ಥಾನದ ಹೊರಗಿನ ಗೋಡೆಯ ನಡುವಿನ ಅಳತೆಯನ್ನು ಮಾಡಿ ೧,೩,೫,೭,೯,೧೧, ಈ ಅಳತೆಯನ್ನು ತೆಗೆದುಕೊಂಡು ಧ್ವಜ ಸ್ಥಂಬವನ್ನು ಸ್ತಾಪಿಸಬೇಕು.
ಮಂದಿರದ ಗೋಪುರವು ಮತ್ತು ಅದರಲ್ಲಿ ಸ್ಥಾಪಿಸುವ ಕಲಶವು ಭಗವಂತನ ಶಕ್ತಿಯನ್ನು ಆಕರ್ಷಿಸುವ ಮತ್ತು ಶಕ್ತಿಯನ್ನು ಬಿಡುಗಡೆ ಮಾಡುವ "ಎರಿಯಲ್"ಇದ್ದಂತೆ ಕೆಲಸವನ್ನು ಮಾಡುತ್ತದೆ. ಈ ಕಲಶದಲ್ಲಿ ಸಪ್ತ ಋಷಿಗಳು ನೆಲೆಸಿರುತ್ತಾರೆ. ಇದರ ದರ್ಶಮಾತ್ರದಿಂದ ಅಲ್ಲಿ ಸ್ಥಾಪಿಸಿರುವ ಭಗವಂತನ ದರ್ಶನದ ಪುಣ್ಯ ದೊರೆಯುತ್ತದೆ.ಇದನ್ನು ತಾಮ್ರ,ಹಿತ್ತಾಳೆ, ಇಲ್ಲವೇ ಚಿನ್ನದಿಂದ ಮಾಡಿಸಬಹುದು.
ವಿಶೇಷವಾಗಿ ದೇವತಾ ಪ್ರತಿಷ್ಠೆಯನ್ನು ೫ ದಿನಗಳು,೩ ದಿನಗಳು,ಕನಿಷ್ಠ ೧ ದಿನ ಮಾಡುತ್ತಾರೆ. ನಾವು ಇಲ್ಲಿ ೫ ದಿನದ ಪ್ರತಿಷ್ಠೆ ಬಗ್ಗೆ ತಿಳಿಸಿರುತ್ತೇವೆ.
೧ ನೇ ದಿನದಂದು
ಪುಣ್ಯಾಹ ವಾಚನ,ದೇವ ನಾಂದಿ,ಋತ್ವಿಕ್ ವರ್ಣನೆ, ರಕ್ಷಾ ಬಂಧನ,ಚಕ್ರರಾಜ ಸ್ಥಾಪನೆ(ಯಾಗಶಾಲೆಯ ಪ್ರವೇಶ,ದಿಕ್ಬಂಧನ,ಪಂಚಗವ್ಯ ಹೋಮ,ಮಂಟಪ ದೇವತಾ ಸ್ಥಾಪನೆ,ಅಗ್ನಿ ಪ್ರತಿಷ್ಠೆ),ಸಾಯಂಕಾಲದಲ್ಲಿ ದೀಕ್ಷಾಹೋಮ,ಅಂಕುರಾರ್ಪಣೆ,ಬಲಿಪ್ರದಾನ ಇವು ಮೊದಲನೇಯ ದಿನದ ವಿಧಿ.
೨ ನೇ ದಿನದಂದು
ನವಗ್ರಹ ಸ್ಥಾಪನೆ,ಮಂಡಲಾದಿ ದರ್ಶನ,ಯೂಪರೋಪಣೆ,ಶಾಂತಿ ಹೋಮ,ಮೂರ್ತಿಗೆ ಜಲಾಧಿವಾಸ,ಇವು ೨ ನೇ ದಿನದ ವಿಧಿ.
೩ ನೇ ದಿನದಂದು
ಜಲಾಧಿವಾಸದಿಂದ ಮೇಲೆತ್ತಿ ಮಹಾ ಸ್ನಾನ_ನೇತ್ರೋನ್ಮೀಲನ,ರಕ್ಷಾಬಂಧನ,ಶಾಂತಿಪಾಠ,ಮಹಾಪೂಜೆ,ಇವು ೩ ನೆ ದಿನದ ವಿಧಿ.
೪ ನೇ ದಿನದಂದು
ಧಾನ್ಯಾದಿವಾಸ,ಶಯ್ಯಾದಿವಾಸ,ತತ್ವಾದಿ ನ್ಯಾಸಗಳು,ರಕ್ಷಾಹೋಮ, ಶಾಂತಿ ಪಾಠ,ಇವು ೪ ನೇ ದಿನದ ವಿಧಿ.
೫ ನೇ ದಿನದಂದು
ಪ್ರತಿಷ್ಠಾಹೋಮ, ಮೂರ್ತಿ ಪ್ರತಿಷ್ಠೆ,ಯಂತ್ರ ಪ್ರತಿಷ್ಠೆ,ಪ್ರಧಾನ ಕಲಶ ಅಭಿಷೇಕ,ಪ್ರಾಣಪ್ರತಿಷ್ಠೆ,೧೬ ಕಲಾ ಆವಾಹನೆ ನೇತ್ರ ಉನ್ಮೀಲನ,ಬಲಿ ಪ್ರದಾನ,ಪೂರ್ಣಾಹುತಿ ಇತ್ಯಾದಿ, ಕಲಶೋದಕ ಮಾರ್ಜನ,ಸುವಾಸಿನಿ ದಂಪತಿ ಪೂಜೆ, ಕಲಶ ವಸ್ತ್ರ,ಪ್ರತಿಮಾದಾನಾದಿಗಳಿಂದ ಬ್ರಾಹ್ಮಣ ಪೂಜೆ, ಆಶೀರ್ವಾದ ಪಡೆಯುವುದು ಮತ್ತು ಅನ್ನದಾನಾದಿ ಸೇವೆ ಮಾಡುವುದು.
ಹೀಗೆ ೫ ದಿನಗಳ ವಿಧಿಗಳಿರುತ್ತದೆ.೩ ದಿನದಲ್ಲಿ ಮಾಡುವುದಾದರೆ, ಕೆಲವು ವಿಧಿಗಳನ್ನು ಸೇರಿಸಿ ಮಾಡುತ್ತಾರೆ. ಒಟ್ಟಿನಲ್ಲಿ ಆಗಮ ಪದ್ಧತಿಯಂತೆ ಮೂರ್ತಿ ಪ್ರತಿಷ್ಠೆ ಮಾಡಬೇಕು.
ನಮ್ಮ ಐಚ್ಚಿಕ ಭಗವಂತನ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಮಾಡಬಹುದು.ಇಲ್ಲಿ ನವಗ್ರಹ ಮೂರ್ತಿಗಳನ್ನು ಪ್ರತ್ಯೇಕ ಗ್ರಹಗಳಿಗೆ ತಿಳಿಸಿದ ಸ್ಥಳದಲ್ಲಿ,ಅವರವರ ದಿಕ್ಕಿಗೆ ಮುಖ ಮಾಡಿ ಸ್ಥಾಪಿಸಬೇಕು.ನಾನು ಕೆಲವು ಕಡೆ ನೋಡಿದ್ದೇನೆ ಮೂರ್ತಿಗಳನ್ನು ವಾರಗಳ ಕ್ರಮದಲ್ಲಿ ಸ್ಥಾಪಿಸಿದ್ದಾರೆ.ಇದು ಶುದ್ಧ ತಪ್ಪು.ಋತ್ವಿಜರು ಈ ರೀತಿ ಮಾಡಬಾರದೆಂದು ತಿಳಿಸುತ್ತೇನೆ. ಅದೇ ರೀತಿ ನಮ್ಮ ಸಂಸ್ಥೆಯಿಂದ ಅನುಭವೀ ಪಂಡಿತರುಗಳು ಸೇರಿ ಎಲ್ಲವನ್ನೂ ಶಾಸ್ತ್ರೋಕ್ತವಾಗಿ ಮಾಡುತ್ತಿದ್ದೇವೆ.ಬೇಕಾದಲ್ಲಿ ಸಲಹೆ,ಸೂಚನೆಗಳನ್ನು ಪಡೆಯಬಹುದು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments