ಧನುರ್ಮಾಸವನ್ನು ಶೂನ್ಯಮಾಸ ಎಂದು ಕರೆಯುವುದರ ಹಿಂದೆ ಒಂದಷ್ಟು ವೈಜ್ಞಾನಿಕ ಕಾರಣಗಳಿವೆ. ಶೂನ್ಯಭಾವದಲ್ಲಿ ಲಾಭಾ ಲಾಭಗಳ ಯೋಚನೆ ಇರುವುದಿಲ್ಲ. ಅದೊಂದು ರೀತಿಯ ನಿರ್ಯೋಚನಾ ಅಥವಾ ಏಕಾಂತ ಸ್ಥಿತಿ ಎಂತಲೂ ಕರೆಯಬಹುದು. ಶೂನ್ಯ ಮಾಸದ ಏಕಾಂತ ಸ್ಥಿತಿಗೆ ಭಕ್ತಿಯೆಂಬ ಅಂಕಿಯನ್ನು ಹಾಕಬೇಕು. ಆಗ ಮಾಸಕ್ಕೊಂದು ಬೆಲೆ. ಅದುವೇ ಶೂನ್ಯಮಾಸದ ಮಹತ್ವ. * ಗೌರಿಪುರ ಚಂದ್ರು
ಕಾಲಾಯ ತಸ್ಮೈ ನಮಃ. ನಾವೆಲ್ಲರೂ ಕಾಲನ ಅಧೀನರು. ಜ್ಯೋತಿಷ್ಯ ಶಾಸ್ತ್ರದ ರೀತ್ಯ ಕಾಲವನ್ನು ಘಟಿ ಮತ್ತು ವಿಘಟಿಯ ಮೂಲಕ ನಿರ್ಣಯಿಸುತ್ತೇವೆ. ಒಂದು ಗಂಟೆಗೆ (60 ನಿಮಿಷಕ್ಕೆ) 2.5 ಘಟಿ, ಒಂದು ನಿಮಿಷಕ್ಕೆ 2.5 ವಿಘಟಿ. ಹೀಗೆ ಕಾಲನಿರ್ಣಯದ ಮೇಲೆ ಫಲಾಫಲಗಳನ್ನು ಲೆಕ್ಕ ಹಾಕುತ್ತಾರೆ. ಅದನ್ನೇ ವೈಜ್ಞಾನಿಕವಾಗಿ ಗಂಟೆ, ನಿಮಿಷ, ಸೆಕೆಂಡ್‌ಗಳಂತಲೂ ಗುರುತಿಸುತ್ತೇವೆ. ಕಾಲಮಾನ ಸೂರ್ಯನ ಗತಿಯನ್ನು ಆಧರಿಸಿದೆ. ನಮಗೆ ಒಂದು ದಿನದಲ್ಲಿ ಹಗಲು, ರಾತ್ರಿಗಳಿದ್ದಂತೆ ದೇವತೆಗಳಿಗೂ ಹಗಲು, ರಾತ್ರಿಗಳಿವೆ. ದೇವತೆಗಳಿಗೆ ರಾತ್ರಿಯು ದಕ್ಷಿಣಾಯನ ಪುಣ್ಯಕಾಲವಾದರೆ, ಉತ್ತರಾಯಣ ಪುಣ್ಯಕಾಲವು ಹಗಲಾಗಿದೆ.
ಅಶುಭವಲ್ಲ ಶುಭಮಾಸ
ಉತ್ತರಾಯಣ ಪುಣ್ಯಕಾಲದ ಆರಂಭವೇ ಧನುರ್ಮಾಸ. ಕೆಲವರು ಇದನ್ನು ಶೂನ್ಯಮಾಸ ಎಂತಲೂ ಕರೆಯುತ್ತಾರೆ. ಧನುರ್ಮಾಸವನ್ನು ಶೂನ್ಯಮಾಸ ಎಂದು ಕರೆಯುವುದರ ಹಿಂದೆ ಒಂದಷ್ಟು ವೈಜ್ಞಾನಿಕ ಕಾರಣಗಳಿವೆ. ಶೂನ್ಯ ಎಂದರೆ ವ್ಯಾಕ್ಯೂಮ್. ಶೂನ್ಯಭಾವದಲ್ಲಿ ಲಾಭಾ ಲಾಭಗಳ ಯೋಚನೆ ಇರುವುದಿಲ್ಲ. ಅದೊಂದು ರೀತಿಯ ನಿರ್ಯೋಚನಾ ಅಥವಾ ಏಕಾಂತ ಸ್ಥಿತಿ ಎಂತಲೂ ಕರೆಯಬಹುದು. ಹೇಗೆ ಶೂನ್ಯದ ಹಿಂದೆ ಒಂದು ಅಂಕಿಯನ್ನು ಹಾಕಿದರೆ ಅದಕ್ಕೆ ಬೆಲೆ ಬರುತ್ತದೋ ಹಾಗೆ, ಶೂನ್ಯ ಮಾಸದ ಏಕಾಂತ ಸ್ಥಿತಿಗೆ ಭಕ್ತಿಯೆಂಬ ಅಂಕಿಯನ್ನು ಹಾಕಬೇಕು. ಆಗ ಮಾಸಕ್ಕೊಂದು ಬೆಲೆ. ಅದುವೇ ಶೂನ್ಯಮಾಸದ ಮಹತ್ವ. ತಾರ್ಕಿಕವಾಗಿ ಹೇಳುವುದಾದರೆ, ಉಳಿದೆಲ್ಲ ಮಾಸಗಳಲ್ಲಿ ನಮ್ಮ ಮನಸ್ಸನ್ನು ವಿಷಯಾಸಕ್ತಿಗಳೆಂಬ ಅಂಕಿಗಳಿಗೇ ಮೀಸಲಾಗಿಟ್ಟಿರುತ್ತೇವೆ. ಅಲ್ಲಿ ಶೂನ್ಯಭಾವಕ್ಕೆ ಬೆಲೆ ಕೊಡುವುದಿಲ್ಲ. ಆದರೆ ಈ ಮಾಸದಲ್ಲಿ ಲೌಕಿಕ ವ್ಯವಹಾರಗಳನ್ನು ಹೊರತುಪಡಿಸಿ ಭಗವದ್ಭಕ್ತಿಗೆ ಹೆಚ್ಚು ಒತ್ತು ಕೊಡುತ್ತೇವೆ. ಪೂರ್ಣ ಸ್ವರೂಪನಾದ, ಬ್ರಹ್ಮಾಂಡದ ಉತ್ಪತ್ತಿಗೆ ಕಾರಣನಾದ ಅನಂತ (ಶೂನ್ಯ) ನ ಆರಾಧನೆಗೆ ಮೀಸಲು. ಶೂನ್ಯಮಾಸವೆನ್ನುವುದು ಭಕ್ತಿಪರ್ವ. ಇದನ್ನು ತಪ್ಪಾಗಿ ತಿಳಿದುಕೊಂಡ ಜನರು ಶೂನ್ಯಮಾಸವೆಂದು ಕರೆದರು. ವಿವಾಹಾದಿಗಳಿಗೆ ಯೋಗ್ಯವಲ್ಲ ಎಂದರು.
ಧನುರ್ಮಾಸ ವಿಶೇಷ
ಮಾರ್ಘಶೀರ್ಷ ಶುದ್ಧ ಏಕಾದಶಿಯಿಂದ ಧನುರ್ಮಾಸ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಸೂರ್ಯನು ಧನು ರಾಶಿಗೆ ಪ್ರವೇಶಿಸುತ್ತಾನೆ. ಈ ಶುಭ ಘಳಿಗೆಯನ್ನೇ ಧನುರ್ ಸಂಕ್ರಮಣ ಎಂದು ಕರೆಯುತ್ತಾರೆ. ತಮಿಳುನಾಡಿನಲ್ಲಿ ಧನುರ್ಮಾಸವನ್ನು ಮಾರ್ಘಷಿ ತಿಂಗಳು ಎಂದೂ ಕರೆಯುವುದುಂಟು. ಮಾರ್ಗಶೀರ್ಷ ಪೌರ್ಣಮಿಯ ನಂತರ ಮೃಘಶಿರಾ ನಕ್ಷತ್ರ ಕಾಣಿಸಿಕೊಳ್ಳುತ್ತದೆ. ಆ ಕಾರಣದಿಂದಲೇ ಧನುರ್ಮಾಸವನ್ನು ತಮಿಳರು ಮಾರ್ಘಷಿ ಮಾಸ ಎಂತಲೂ ಗುರುತಿಸುತ್ತಾರೆ. ಅಂದಹಾಗೆ, ಧನುರ್ಮಾಸ ಒಂದು ಪ್ರತ್ಯೇಕ ಮಾಸವಲ್ಲ. ಅದು ಮಾರ್ಗಶಿರ ಮಾಸದ ಮಧ್ಯಭಾಗದಲ್ಲಿ ಬರುತ್ತದೆ. ಧನುರ್ಮಾಸದಿಂದ ಸೂರ್ಯನು ಉತ್ತರ ದಿಕ್ಕಿನತ್ತ ತನ್ನ ಸಂಚಾರ ಪ್ರಾರಂಭಿಸುತ್ತಾನೆ. ಅಂದರೆ ನಾವು ಕತ್ತಲಿನಿಂದ (ದಕ್ಷಿಣಾಯನ) ಬೆಳಕಿನತ್ತ (ಉತ್ತರಾಯಣ) ಸಾಗುತ್ತಿದ್ದೇವೆ ಎಂದರ್ಥ.
ಆಚರಣೆ ಹೇಗೆ?
ಧನುರ್ಮಾಸದಲ್ಲಿ, ಪೂಜಾರಾಧನೆಯನ್ನು ಸೂರ್ಯೋದಯಕ್ಕೆ ಮುನ್ನವೇ ಮಾಡಬೇಕು. ಈ ಕಾರಣದಿಂದಲೇ ಧನುರ್ಮಾಸದುದ್ದಕ್ಕೂ ಬ್ರಾಹ್ಮಿ ಮಹೂರ್ತದಲ್ಲಿ ಪೂಜಾದಿಗಳು ನಡೆಯುತ್ತವೆ. ಅದರಿಂದಾಗಿ ಸಂಪತ್ ವೃದ್ಧಿ, ದೀರ್ಘಾಯುಷ್ಯ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಮುಕ್ತಿ ದೊರೆಯುತ್ತದೆ ಎನ್ನುವ ನಂಬಿಕೆಯಿದೆ.
ಭಾಸ್ಕರೀಯ ಜ್ಯೋಷಿಶಾಸ್ತ್ರದ ಪ್ರಕಾರ, ಧನುರ್ಮಾಸದಲ್ಲಿ ತೀವ್ರವಾದ ಚಳಿಯಿಂದ ಕೂಡಿರುತ್ತದೆ. ಹಾಗಾಗಿ ವ್ಯಕ್ತಿ ನಿದ್ರೆಯಿಂದ ಎದ್ದೇಳಲು ಕಷ್ಟ ಪಡುತ್ತಾನೆ. ಅದರಲ್ಲೂ ಕೊರೆವ ಚಳಿಯಲ್ಲಿ ನದಿ, ಸರೋವರ, ಕಲ್ಯಾಣಿಗಳಲ್ಲಿ ಸ್ನಾನ ಮಾಡಲು ಹಿಂದೇಟು ಹಾಕುತ್ತಾನೆ. ಶ್ರೀಹರಿ ಸೇವೆಯನ್ನು ಮಡಿ ಬಟ್ಟೆಗಳನ್ನು ಉಟ್ಟುಕೊಂಡು ಮಾಡಬೇಕು. ಹಾಗಾಗಿ ಯಾವುದೇ ಅನನುಕೂಲ ಸ್ಥಿತಿ ಇದ್ದರೂ, ಉಷಕಾಲದಲ್ಲಿ ಎದ್ದೇಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ದೇವತಾರಾಧನೆಯನ್ನು ಮಾಡಬೇಕು.
ವೈಜ್ಞಾನಿಕ ಹಿನ್ನೆಲೆ
ಬ್ರಾಹ್ಮೀ ಮಹೂರ್ತದಲ್ಲಿ ಓಝೋನ್ ಪದರ ಸ್ವಚ್ಛವಾಗಿರುತ್ತದೆ. ಈ ಸಂದರ್ಭದಲ್ಲಿ ಶುದ್ಧ ಆಮ್ಲಜನಕವು ಪರಿಸರದಲ್ಲಿ ಹೇರಳವಾಗಿ ದೊರೆಯುತ್ತದೆ. ಅಂತಹ ಸುಂದರ ವಾತಾವರಣದಲ್ಲಿ ಸ್ನಾನ ಮಾಡಿ ಶುಚೀರ್ಭೂತರಾಗಿ ವೃಕ್ಷದ ಕೆಳಗೆ (ಅಶ್ವತ್ಥ ಅಥವಾ ಬೇವಿನ) ಕುಳಿತು ಮಂತ್ರ ಪಠಣ ಮಾಡುವುದರಿಂದ ಎರಡು ಬಗೆಯ ಲಾಭವುಂಟಾಗುತ್ತದೆ. ಬೇವಿನ ಗಾಳಿ ಮೈಗೆ ತಾಕುವುದರಿಂದ ಚರ್ಮ ವ್ಯಾಧಿಗಳು, ಸಕ್ಕರೆ ಕಾಯಿಲೆಗಳು ಉಪಶಮನಗೊಳ್ಳುತ್ತವೆ. ಅರಳಿ ಮರದ ಗಾಳಿಯ ಸೇವನೆಯಿಂದ ಗರ್ಭಕೋಶದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ಹಿರಿಯರ ಮಾತು ವೈಜ್ಞಾನಿಕವಾಗಿಯೂ ದೃಢ ಪಟ್ಟಿದೆ. ಜ್ಯೋತಿಷ್ಯ ಶಾಸ್ತ್ರದ ರೀತ್ಯ ರಾಹು, ಕೇತು, ಅಂಗಾರಕ ದೋಷಗಳು ನಿವಾರಣೆಯಾಗುತ್ತವೆ.
ನೈವೇದ್ಯ ಮಹತ್ವ
ಧನುರ್ಮಾಸದಲ್ಲಿ ದೇವರಿಗೆ ಮುದ್ಗಲಾನ್ನವನ್ನು ನಿವೇದನೆ ಮಾಡುತ್ತಾರೆ. ಶಚೀದೇವಿಯು ತನ್ನೆಲ್ಲ ಕಷ್ಟಗಳ ನಿವಾರಣೆಗಾಗಿ, ಮುದ್ಗಲಾನ್ನವನ್ನು ಭಗವಂತನಿಗೆ ಸಮರ್ಪಣೆ ಮಾಡಿದ್ದಳೆಂಬ ಉಲ್ಲೇಖವನ್ನು ಪುರಾಣಗಳಲ್ಲಿ ನೋಡಬಹುದು. ಮುದ್ಗಲಾನ್ನ (ಹೆಸರುಬೇಳೆ ಮತ್ತು ಅನ್ನ ಮತ್ತು ತುಪ್ಪದಿಂದ ತಯಾರಾದ ನೇವೇದ್ಯ) ಆಯುರ್ವೇದ ರೀತ್ಯ ಉತ್ತಮ ಆಹಾರ. ಚಳಿಗಾಲದಲ್ಲಿ ಆಹಾರವು ಬೇಗ ಜೀರ್ಣಿಸುವುದಿಲ್ಲ. ಆಹಾರ ಸರಿಯಾಗಿ ಜೀರ್ಣಿಸದ ಪರಿಣಾಮ ದೋಷಗಳಿಗೆ ಕಾರಣವಾಗುತ್ತದೆ. ಆದರೆ ಘೃತದಿಂದ ತಯಾರಾದ ಮುದ್ಗಲಾನ್ನ (ಹುಗ್ಗಿ) ಸಾತ್ವಿಕ ಆಹಾರವಾಗಿದ್ದು ಬೇಗನೇ ಪಚನವಾಗುತ್ತದೆ. ತುಪ್ಪವು ದೇಹದಲ್ಲಿನ ದೋಷಗಳನ್ನು ಹೀರಿಕೊಂಡರೆ, ಮೆಣಸು ಕಫವನ್ನು, ಜೀರಿಗೆ ಪಿತ್ತವನ್ನು, ಹಸಿಶುಂಠಿ ವಾತವನ್ನು ತಡೆಯುತ್ತದೆ
-ಸಂಗ್ರಹ
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments