Skip to main content

ಶನಿದಶೆಯಲ್ಲಿ ಒಳಿತೂ ಆಗಬಹುದು, ಕೆಡಕೂ ಆಗಬಹುದು

ಶನಿದಶೆಯ 19 ವರ್ಷಗಳಲ್ಲಿ ಸಾಮಾನ್ಯವಾಗಿ ಕಿರಿಕಿರಿ ಇರುತ್ತದೆ ಎನ್ನಬಹುದು. ಯಾಕೆಂದರೆ ಈ ಸಂದರ್ಭದಲ್ಲಿ ಆಲಸ್ಯತನ ದೇಹ ಮತ್ತು ಮನಸ್ಸಿನಲ್ಲಿ ಮನೆ ಮಾಡುತ್ತದೆ. ದರಿದ್ರತನ, ಅರಿಷ್ಟತನ ಹೆಚ್ಚಾಗಿ, ಆರೋಗ್ಯವು ಅಷ್ಟಕಷ್ಟೇ ಇರುತ್ತದೆ. ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕಮ್ಮಿಯಾಗುತ್ತದೆ. ಕೆಟ್ಟ ಚಟ ಕಲಿಯಲು ನಾಲಿಗೆ ಹಂಬಲಿಸುತ್ತದೆ. ಕೆಲವರಿಗೆ ಚರ್ಮದ ಸುಖ ಬೇಕೇ ಬೇಕು ಎನಿಸುತ್ತದೆ. ಜಾತಿಯಿಂದ ಸಸ್ಯಾಹಾರಿಯಾಗಿದ್ದರೂ ಚರ್ಮದ ಹೊದಿಕೆಯಲ್ಲಿರುವ ಮಾಂಸ ಕಚ್ಚಿ ಮುದ್ದಾಡುವ ಬಯಕೆ ವಿಪರೀತ ಹೆಚ್ಚಾಗಿ, ಒಂಥರಾ ಇವರು ಮಾಂಸಾಹಾರಿಗಳೆನ್ನಿಸಿಕೊಳ್ಳುತ್ತಾರೆ. ಸುಖಕ್ಕಾಗಿ ತಮ್ಮತನವನ್ನೇ ಪಣಕ್ಕಿಟ್ಟು ತಮ್ಮನ್ನು ಸಂತೋಷಪಡಿಸಿಕೊಳ್ಳಲು ಹವಣಿಸುತ್ತಾರೆ. ಮಾನ, ಮರ್ಯಾದೆ ಹೋದರೂ ಚಿಂತೆಯಿಲ್ಲ. "ಮೂರು ಬಿಟ್ಟವರು ಊರಿಗೆ ದೊಡ್ಡವರು" ಎಂಬಂತಾಗುತ್ತಾರೆ. ಮನಸ್ಸು ಕ್ರೂರವಾಗುತ್ತದೆ. ಕೆಟ್ಟ ಕೆಲಸ ಮಾಡಲು ಉತ್ಸಾಹ ಮತ್ತು ಹುಮ್ಮಸ್ಸು ಬರುತ್ತದೆ. ಆದರೆ ಎಲ್ಲರೂ ಇದೇ ತರಹ ಇರಬೇಕಂತಿಲ್ಲ. ಜಾತಕದಲ್ಲಿ ಮಹಾತ್ಮನಿರುವ ಸ್ಥಾನ ನೋಡಿಕೊಂಡು ಅವನಿರುವ ಭಾವಕ್ಕೆ ಸಂಬಂಧಪಟ್ಟ ಒಳಿತು-ಕೆಡಕನ್ನು ನಿರ್ಧರಿಸಬಹುದು. ಹೀಗಾಗಿ ಜಾತಕವೇ ಬಯೋಡಾಟಾ ಆಗಿರುವುದರಿಂದ ತಮ್ಮ ಮತ್ತು ಕುಟುಂಬದ ಸದಸ್ಯರ ಎಲ್ಲ ಮಾಹಿತಿ ಮೊದಲೇ ನೋಟ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಹಿಂದು- ಮುಂದು ಗೊತ್ತಿಲ್ಲದಂತೆ ಮುನ್ನುಗ್ಗಿ, ಮುಕ್ಕರಿಸಿದ ಮೇಲೆನೆ ಜಾತಕ ಹಿಡಕೊಂಡು ತಿರುಗೋಕೆ ಶುರು ಮಾಡುತ್ತಾರೆ ಎಷ್ಟೋ ಜನ. ಆದರಿನ್ನೊಂದು ಮಾತು, ಶನಿದಶೆಯಲ್ಲಿರುವವರು ತಮ್ಮೂರು, ತಮ್ಮವರನ್ನು ಬಿಟ್ಟು ದೂರದಲ್ಲಿ ವಾಸಿಸಲೇಬೇಕಾಗುತ್ತದೆ. ಜೀವನ ಸಾಗಿಸಲು ಅನಿವಾರ್ಯವಾಗಿ ಬೇರೆ ಕಡೆಗೆ ಬಾಳಬೇಕಾಗುತ್ತದೆ. ಕೆಲವೊಬ್ಬರಿಗೆ ಪರದೇಶದಲ್ಲಿ ವಾಸಿಸುವ ಯೋಗ ಕೂಡಿ ಬರುತ್ತದೆ (ಎಷ್ಟೋ ಜನರು ಪರದೇಶಕ್ಕೆ ಹೋಗಬೇಕು ಎಂದು ಪರಿತಪಿಸುತ್ತಿರುತ್ತಾರೆ). ಕುಟುಂಬದವರಿಂದ ಬೇರ್ಪಡುವ ಸಂದರ್ಭ ಒದಗಿ ಬರುತ್ತದೆ. ಆದ್ದರಿಂದ ಮನೆಯವರು, ತಮ್ಮ ಕುಟುಂಬ ಸದಸ್ಯರು ಯಾರಾದರೂ ಶನಿದಶೆಯಲ್ಲಿದ್ದರೆ ಅವರಿಗೆ ಬೆಂಬಲವಾಗಿ ನಿಂತು ಅವರನ್ನು ಪ್ರೋತ್ಸಾಹಿಸುತ್ತ, ಜೀವನೋತ್ಸಾಹ ತುಂಬುತ್ತಿರಬೇಕು. ಶನಿಪ್ರಭಾವದ ಬಗ್ಗೆ ಏನೂ ಗೊತ್ತಿಲ್ಲದೆ ಕೆಲ ಮನೆಯಲ್ಲೆಲ್ಲರೂ ಜಗಳ ಮಾಡುತ್ತ ಕಣ್ಣೀರು ಕೂಳು ತಿನ್ನುತ್ತಿರುತ್ತಾರೆ. "ಅರಮನೆಯಿದ್ದರು, ನೆರೆಮನೆಯಿರಬೇಕು" ಎಂಬ ಮಾತಿನಂತೆ ಅಕ್ಕಪಕ್ಕದ ಮನೆಯವರೊಂದಿಗೆ ಈ ಕುರಿತು ವಿಷಯ ಕೇಳಿ ತಿಳಿದುಕೊಳ್ಳಬೇಕು. ಅರಿತವರಲ್ಲಿ ಕೇಳಿದರೆ ಮರ್ಯಾದೆ ಹೋಗುತ್ತದೆನ್ನುವಷ್ಟು ಸ್ವಾಭಿಮಾನ ಒಂದು ಕಡೆ. ಇನ್ನೊಂದೆಡೆ ಮಾಹಿತಿ ಕೇಳಿದರೆ ದಕ್ಷಿಣೆ ಕೊಡಬೇಕಾಗುತ್ತದಲ್ಲ ಎಂಬ ದುರಾಲೋಚನೆ ಬೇರೆ. ಒಟ್ಟಿನಲ್ಲಿ ಇಂಥವರಿಗೆ ಎಲ್ಲಾ ಪುಗ್ಸಟ್ಟೆನೆ ಆಗಬೇಕು. ತಮ್ಮ ಒಳಿತಿಗೆ ಖರ್ಚು ಮಾಡದಂಥಹವರು ಇನ್ನೊಬ್ಬರಿಗೆಂದು ಸಹಾಯ ಮಾಡಬಲ್ಲರು! ಅಂತರ್‌ಭುಕ್ತಿ ಸಮಯ : ಶನಿದಶೆಯ 19 ವರ್ಷಗಳಲ್ಲಿ ಎಲ್ಲ ಗ್ರಹಗಳ ಅಂತರ್‌ಭುಕ್ತಿ ಬರುತ್ತದೆ. ಅಂತರ್‌ಭುಕ್ತಿ ಇರುವ ಸಮಯ ಈ ರೀತಿ ಇರುತ್ತದೆ. 1) ಶನಿಭುಕ್ತಿ- 3 ವರ್ಷ 3 ದಿನ ; 2) ಬುಧ- 2 ವರ್ಷ 8 ತಿಂಗಳು, 9 ದಿನ; 3) ಕೇತು- 1 ವರ್ಷ 1 ತಿಂಗಳು 9 ದಿನ ; 4) ಶುಕ್ರ- 3 ವರ್ಷ 2 ತಿಂಗಳು ; 5) ರವಿ- 11 ತಿಂಗಳು 12 ದಿನ ; 6) ಚಂದ್ರ- 1 ವರ್ಷ 7 ತಿಂಗಳು ; 7) ಕುಜ- 1 ವರ್ಷ 1 ತಿಂಗಳು 9 ದಿನ ; 8) ರಾಹು- 2 ವರ್ಷ 10 ತಿಂಗಳು 6 ದಿನ ; 9) ಗುರುಭುಕ್ತಿ- 2 ವರ್ಷ 6 ತಿಂಗಳು 12 ದಿನಗಳಿರುತ್ತದೆ. ಈ ರೀತಿ ಶನಿದಶೆಯಲ್ಲಿ ವಿವಿಧ ಗ್ರಹಗಳ ಭುಕ್ತಿ ನಡೆಯುತ್ತವೆ. ಆದರೆ ಯಾವ ಗ್ರಹದ ಅಂತರ್‌ಭುಕ್ತಿ ಜೀವನಕ್ಕೆ ಲಾಭಕರ ಎಂಬುದನ್ನು ಜಾತಕದಲ್ಲಿ ಅದಿರುವ ಸ್ಥಾನ ನೋಡಿಕೊಂಡು ತಿಳಿದುಕೊಳ್ಳಬಹುದು. ಒಳಿತೂ ಆಗಬಹುದು, ಕೆಡಕೂ ಆಗಬಹುದು : ಶನಿದಶೆ ಜೀವನದಲ್ಲಿ ಶುರುವಾದರೆ ಕೆಲವೊಂದು ಒಳಿತು ಆಗಬಹುದು, ಕೆಡಕು ಆಗಬಹುದು. ಅವರವರ ಜಾತಕದವಿದ್ದಂತೆ ಆಗುತ್ತದೆ. ಜಾತಕದಲ್ಲಿ ಶನಿಮಹಾತ್ಮನು ಯಾವ ಸ್ಥಾನದಲ್ಲಿ ಇದ್ದಾನೆ ಎಂದು ನೋಡಿ ಪರಿಶೀಲಿಸಿ ಶನಿದೇವನ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬಹುದು. ಏಕೆಂದರೆ ಜಾತಕದಲ್ಲಿ ಮಹಾತ್ಮನು ತನ್ನ ಉಚ್ಚ, ನೀಚ, ಶತ್ರು ಹಾಗೂ ಮಿತ್ರ ರಾಶಿ ಇವುಗಳಲ್ಲಿ ಯಾವ ರಾಶಿಯಲ್ಲಿದ್ದಾನೆ ಎಂಬುದನ್ನು ಮೊದಲು ನೋಡಿಕೊಳ್ಳಬೇಕು. ಯಾವಾಗಲೂ ಜಾತಕ ಪರಿಶೀಲನೆ ಮಾಡುವಾಗ ಮಾಡುವ ಮೊದಲನೇ ಕೆಲಸವೆಂದರೆ ಆಯುಷ್ಯ ನೋಡುವುದು. ಏಕೆಂದರೆ ಸಕಲೈಶ್ವರ್ಯ ಸಿಗುವ ಭಾಗ್ಯವಿದ್ದರು ಆಯುಷ್ಯವೇ ಕಮ್ಮಿಯಿದ್ದರೇನು ಬಂತು? ಹೀಗಾಗಿ ಜಾತಕದಲ್ಲಿ ಮೊದಲು ಆಯುಷ್ಯ ತಿಳಿದುಕೊಂಡು ಉಳಿದವುಗಳನ್ನು ನಂತರ ಪರಿಶೀಲಿಸಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಜೀವನ ಚೆನ್ನಾಗಿರಬೇಕೆಂದರೆ ದುಡ್ಡು ಹಾಗೂ ಆರೋಗ್ಯ ಇದ್ದರೆ ಸಾಕು. ಆದರೆ ದುಡ್ಡಿಗೋಸ್ಕರ ಅನ್ಯಾಯದ ಹಾದಿ ಹಿಡಿಯಬಾರದಷ್ಟೆ. ಕೆಲವರು ಎಲ್ಲವನ್ನೂ ದುರುಪಯೋಗ ಮಾಡಿಕೊಳ್ಳುತ್ತ, ನಯಾಪೈಸೆ ಖರ್ಚು ಮಾಡದೆ ತಮ್ಮ ಹಣ ಗಂಟು ಮಾಡಿಟ್ಟುಕೊಳ್ಳುತ್ತಿರುತ್ತಾರೆ. ಆಮೇಲೆ ಆ ಹಣದ ಗಂಟು ಎಲ್ಲಿ ಹೋಯಿತು ಎಂಬುದೇ ಕಗ್ಗಂಟಾಗುತ್ತದೆ! ಇಂಥಹವರು ಪರ್ಸನಲ್ ಕೆಲಸಗಳಿಗೆ ತಮ್ಮ ಕುಟುಂಬಕ್ಕೆ ಅನ್ನ ಕೊಡುವ ಕಚೇರಿಯ ಫೋನ್, ವಸ್ತು, ವಾಹನ, ಸಿಬ್ಬಂದಿಗಳನ್ನು ವಿಪರೀತ ದುರುಪಯೋಗಪಡಿಸಿಕೊಳ್ಳುತ್ತಿರುತ್ತಾರೆ. ಇನ್ನು ಕೆಲವು ಮಹಾನ್ ವ್ಯಕ್ತಿಗಳೆನೆಸಿಕೊಂಡವರು ತಮ್ಮ ಹುದ್ದೆ ಹೆಸರು ಹೇಳಿ ಪುಗ್ಸಟ್ಟೆ ಕೆಲಸ ಮಾಡಿಸಿಕೊಳ್ಳುತ್ತ, ಬೆದರಿಸಿ ಹಣ ವಸೂಲು ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿರುತ್ತಾರೆ. ಬಂದ ಪಾಪದ ಹಣದಿಂದ ತಮ್ಮ ಸಂಸಾರದವರೆಲ್ಲರೂ ಸೇರಿಕೊಂಡು ತಮಗೆ ಬೇಕಾದ್ದನ್ನು ತಿಂದು ತೇಗುತ್ತಾರೆ. ಆದರೆ ಶನಿ ಮಹಾತ್ಮ ತಮ್ಮ ಮೇಲೆ ಕಣ್ಣಿಟ್ಟಿರುತ್ತಾನೆ ಎಂಬುದೇ ಇವರಿಗೆ ಅರಿವಿರುವುದಿಲ್ಲ. ಮಹಾತ್ಮನ ದೃಷ್ಟಿ ಬಿದ್ದಾಗ ತಿನ್ನಬೇಕಂದ್ರೆ ಹಿಡಿ ಅನ್ನ ಸಿಗಲ್ಲ. ಉಣ್ಣಲಿ ಬಿಡಿ ಪಾಪದ ಫಲ. ಶನಿಸ್ವಾಮಿಯ ಕಣ್ಣು ನೋಡಿರಬಹುದು ನೀವು. ಅವು ನೇರವಾಗಿರಲ್ಲ, ಬೇರೆಲ್ಲೊ ನೋಡುತ್ತಿರುತ್ತದೆ ಮಹಾತ್ಮನ ದೃಷ್ಟಿ. ನೇರ ದೃಷ್ಟಿ ಮಹಾತ್ಮನದು ಬೀಳಬಾರದೆಂದು ಆ ರೀತಿ ಮಾಡಿರುತ್ತಾರೆ. "ಶನಿಶಕ್ತಿ ಮೇಷರಾಶಿಗೆ ಹೀಗೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ) ವಾಸ್ತು ಟಿಪ್ಸ್ : ತುಳಸಿ ಗಿಡವನ್ನು ಕುಂಡದಲ್ಲಿ ಬೆಳೆಸಿದ್ದರೆ, ಅದನ್ನು ದಕ್ಷಿಣ ಅಥವಾ ಪಶ್ಚಿಮದಲ್ಲಿಡಿ. ಶನಿದೇವನ ಕೃಪೆಗೆ : ಶನಿರಕ್ಷಾ ಕವಚ ಧರಿಸಿಕೊಳ್ಳಿ ಅಥವಾ ಪೂಜಿಸಿ. -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...