ಅಶ್ವಿನಿ:-
ಈ ನಕ್ಷತ್ರದಲ್ಲಿ ಗಂಡು ಮಗು ಜನಿಸಿದರೆ ತಂದೆಗೆ ಅರಿಷ್ಟ ಇದು ೩ತಿಂಗಳವರೆಗು ಇರುತ್ತದೆ.ಆದ್ದರಿಂದ ಇದರ ಪರಿಹಾರಕ್ಕಾಗಿ ಮಗು ಜನಿಸಿದ ೫ದಿನದೊಳಗಾಗಿ ಒಂದು ಗುಲಗಂಜಿ ತೂಕದ ಬಂಗಾರ ಮತ್ತು ಬಿಳಿವಸ್ತ್ರವನ್ನು ಫಲ,ತಾಂಬೂಲ ಸಹಿತ ಪುರೋಹಿತರಿಗೆ ಅಥವ ಗುರುಗಳಿಗೆ ಅಥವ ತೀರಾ ಬಡವರಿಗೆ ದಕ್ಷಿಣೆ ಸಮೇತ ದಾನಕೊಡುವುದು. ಆನಂತರ ತಂದೆಯು ಮಗುವಿನ ಮುಖವನ್ನು ನೋಡಬೇಕು.ದಾನಕೊಡದೆ ತಂದೆ ಮಗುವಿನ ಮುಖವನ್ನು ನೋಡಬಾರದು.
ಭರಣಿ:-
ಈ ನಕ್ಷತ್ರದಲ್ಲಿ ಜನಿಸಿದ ಕೂಸಿಗೆ ಅರಿಷ್ಟ ಉಂಟಾಗುವುದು. ಜನಿಸಿದ ೨೭ದಿನದೊಳಗಾಗಿ ತಾಮ್ರದ ಪಾತ್ರೆಯಲ್ಲಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಮಾತಾಪಿತೃಗಳು ಜಂಗಮರಿಗೆ ದಾನಕೊಡಬೇಕು.
ರೋಹಿಣಿ:-
ಈ ನಕ್ಷತ್ರದಲ್ಲಿ ಶ್ರೀ ಕೃಷ್ಣ ಜನಿಸಿ ಸೋದರ ಮಾವನಾದ ಕಂಸನಿಗೆ ಕಂಟಕನಾದನು ಆದ್ದರಿಂದ ಮಗುವಿನ ಸೋದರಮಾವಂದಿರಿಗೆ ಅರಿಷ್ಟ ಉಂಟಾಗುವುದರಿಂದ ಬೆಳ್ಳಿಪಾತ್ರೆಯಲ್ಲಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಸೋದರಮಾವಂದಿರು ಪುರೋಹಿತರಿಗೆ ದಾನಮಾಡಿದ ಮೇಲೆ ಮಗುವಿನ ಮುಖವನ್ನು ನೋಡಬೇಕು.ಈ ಕಾರ್ಯವನ್ನು ಮಗು ಜನಿಸಿದ ೨೭ದಿನದೊಳಗಾಗಿ ಮಾಡಬೇಕು.
ಆರಿದ್ರಾ:-
ಈ ನಕ್ಷತ್ರದಲ್ಲಿ ಮಗು ಜನಿಸಿದರೆ ತಾಯಿಗೆ ಅರಿಷ್ಟ ಉಂಟಾಗುವುದರಿಂದ ಹಿತ್ತಾಳೆ ಪಾತ್ರೆಯಲ್ಲಿ ೨೭ದಿನದೊಳಗಾಗಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಮಾತಾಪಿತೃಗಳು ಪುರೋಹಿತರಿಗೆ ದಾನಕೊಡಬೇಕು.
ಪುಷ್ಯ:-
ಈ ನಕ್ಷ್ತತ್ರದಲ್ಲಿ ಹಗಲು ಗಂಡು ಮಗು ಜನಿಸಿದರೆ ತಂದೆಗು ರಾತ್ರಿ ಹೆಣ್ಣು ಮಗು ಜನಿಸಿದರೆ ತಾಯಿಗು ಅರಿಷ್ಟ ಉಂಟಾಗುವುದು.ಗಂದದ ಮರದಲ್ಲಿ ಹಸು ಕರು ಮಾಡಿಸಿ ಅಕ್ಕಿ ತುಂಬಿದ ಹಿತಾಳೆ ಪಾತ್ರೆಯಲ್ಲಿಟ್ಟು ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ೨೭ದಿನದೊಳಗಾಗಿ ಮಾತಾಪಿತೃಗಳು ಪುರೋಹಿತರಿಗೆ ದಾನಕೊಡಬೇಕು.
ಅಶ್ಲೇಷ:-
ಈ ನಕ್ಷತ್ರದಲ್ಲಿ ಮಗು ಜನಿಸಿದರೆ ಜನಿಸಿದ ಶಿಶುವಿಗು,ಮಗುವಿನ ತಂದೆಗು,ತಾಯಿಗು ಅರಿಷ್ಟ ಉಂಟಾಗುತ್ತದೆ. ಜನಿಸಿದ ೨೭ದಿನದೊಳಗಾಗಿ ಬೆಳ್ಳಿಯಲ್ಲಿ ಹಸು ಕರುವನ್ನು ಮಾಡಿಸಿ ಅಕ್ಕಿ ತುಂಬಿದ ತಾಮ್ರದ ಪಾತ್ರೆಯಲ್ಲಿರಿಸಿ ಫಲ,ದಕ್ಷಣೆ,ತಾಂಬೂಲ ದೊಡನೆ ಪುರೋಹಿತರಿಗೆ ಅಥವ ತುಂಬಾ ಬಡವರಿಗೆ ಅಥವ ಗುರುಗಳಿಗೆ ದಾನವನ್ನು ಕೊಡಬೇಕು.
ಈ ನಕ್ಷತ್ರದ ಕೊನೆ ೨ ಘಳಿಗೆಯಲ್ಲಿ ಮಗು ಜನಿಸಿದರೆ ನವಗ್ರಹ ಶಾಂತಿ ಮತ್ತು ಬೆಳ್ಳಿ ಕುರಿದಾನ ಮಾಡಬೇಕು.
ಮುಖ:-
ಈ ನಕ್ಷತ್ರದಲ್ಲಿ ಕೂಸು ಜನಿಸಿದರೆ ತಂದೆಗೆ ಅರಿಷ್ಟ ಉಂಟಾಗುತ್ತದೆ.ಬೆಳ್ಳಿಯಲ್ಲಿ ಕುದುರೆಯನ್ನು ಮಾಡಿಸಿ ಹಿತ್ತಾಳೆಯಪಾತ್ರೆಯಲ್ಲಿ ಅಕ್ಕಿ ತುಂಬಿ ಅದರಲ್ಲಿ ವಸ್ತ್ರ,ಫಲ,ತಾಂಬೂಲ,ದಕ್ಷಿಣೆಯೊಂದಿಗೆ ದಾನವನ್ನು ೨೭ನೇ ದಿನದೊಳಗಾಗಿ ಕೊಡಬೇಕು.
ಉತ್ತರ:-
ಈ ನಕ್ಷತ್ರದಲ್ಲಿ ಕೂಸು ಜನಿಸಿದರೆ ತಂದೆ ಮತ್ತು ತಂದೆಯ ಅಣ್ಣ-ತಮ್ಮಂದಿರಿಗೆ ದೋಷ ಉಂಟಾಗುತ್ತದೆ.ಜನಿಸಿದ ೯ದಿನದೊಳಗಾಗಿ ಎಳ್ಳು ತುಂಬಿದ ಕಂಚಿನ ಪಾತ್ರೆಯಲ್ಲಿ ವಸ್ತ್ರ,ಫಲ,ತಾಂಬೂಲ,ದಕ್ಷಿಣೆಯೊಂದಿಗೆ ಪುರೋಹಿತರಿಗೆ ದಾನವನ್ನು ಕೊಡಬೇಕು.
ಚಿತ್ತ:-
ತಂದೆ-ತಾಯಿ- ಮಗುವಿನ ಸೋದರರಿಗೆ ಅರಿಷ್ಟ ಉಂಟಾಗುವುದು. ಬೆಳ್ಳಿಯಲ್ಲಿ ಕುರಿಯನ್ನು ಮಾಡಿಸಿ ಅಕ್ಕಿ ತುಂಬಿದ ತಾಮ್ರದ ಪಾತ್ರೆಯಲ್ಲಿ ವಸ್ತ್ರ,ಫಲ,ತಾಂಬೂಲ,ದಕ್ಷಿಣೆಯೊಂದಿಗೆ ಪುರೋಹಿತರಿಗೆ ದಾನವನ್ನು ಮಗು ಜನಿಸಿದ ೨೭ನೇ ದಿನದೊಳಗಾಗಿ ಕೊಡಬೇಕು.
ಜ್ಯೇಷ್ಟ:-
ತಂದೆ-ತಾಯಿ ಮತ್ತು ಅಜ್ಜ-ಅಜ್ಜಿಯರಿಗೆ ದೋಷ ಉಂಟಾಗುತ್ತದೆ.ಇದಕ್ಕೆ ಗೋಮುಖ ಪ್ರಸವಶಾಂತಿಯನ್ನು ವಿದಾನೋಕ್ತವಾಗಿ ಮಾಡಿಸಿ ಅನ್ನದಾನ ನವಗ್ರಹದ ಶಾಂತಿಯನ್ನು ಮಗು ಜನಿಸಿದ ೨೭ ದಿನದೊಳಗಾಗಿ ಮಾಡಿಸುವುದು. ಈ ನಕ್ಷತ್ರದ ಕೊನೆಯ ೨ಘಳಿಗೆಯಲ್ಲಿ ಜನಿಸಿದ ಮಗುವಿನ ಮುಖವನ್ನು ದಾನ ಶಾಂತಿ ಆದಮೇಲೆ ಎಣ್ಣೆಯಲ್ಲಿ ನೋಡಬೇಕು.
ಮೂಲ:-
ಮೂಲಾ ನಕ್ಷತ್ರವನ್ನು ಒಂದು ವೃಕ್ಷವಾಗಿ ಮಾಡಿಕೊಂಡು ನಕ್ಷತ್ರದ ಒಟ್ಟು ಘಳಿಗೆ ಗಳನ್ನು ಮುಂದೆ ಸೂಚಿಸಿರುವಂತೆ ಪ್ರತ್ಯೇಕವಾಗಿ ವೃಕ್ಷದ ಅಂಗಗಳಿಗೆ ಇಟ್ಟು ಫಲವನ್ನು ನಿರ್ದರಿಸಬೇಕು. ಮೂಲಾ ನಕ್ಷತ್ರದ ಆರಂಬದ ೪ ಘಳಿಗೆ ಬೇರಿನಲ್ಲಿರಿಸಿ,ಇದರಲ್ಲಿ ಮಗು ಜನಿಸಿದರೆ ಸರ್ವನಾಶ,ಮುಂದಿನ ೭ ಘಳಿಗೆ ಕಾಂಡದಲ್ಲಿರಿಸಿ ಇದರಲ್ಲಿ ಮಗು ಜನಿಸಿದರೆ ದ್ರವ್ಯನಾಶ,ಮುಂದಿನ ೧೦ ಘಳಿಗೆಗಳನ್ನು ಸಿಪ್ಪೆಯಲ್ಲಿರಿಸಿ(ತೊಗಟೆ) ಇದರಲ್ಲಿ ಮಗು ಜನಿಸಿದರೆ ಸೋದರರಿಗೆ ತೊಂದರೆ,ಆನಂತರದ ೮ ಘಳಿಗೆಗಳನ್ನು ಗಿಡದ ಕೊಂಬೆಯಲ್ಲಿರಿಸಿ ಇದರಲ್ಲಿ ಮುಗು ಜನಿಸಿದರೆ ತಾಯಿಗೆ ಅರಿಷ್ಟ.ಮುಂದಿನ ೯ಘಳಿಗೆಗಳನ್ನು ವೃಕ್ಷದ ಎಲೆಗಳಲ್ಲಿರಿಸಿ ಇದರಲ್ಲಿ ಮಗು ಜನಿಸಿದರೆ ಭಂದು-ಬಳಗದವರಿಗೆ ಅರಿಷ್ಟ ಉಂಟಾಗುತ್ತದೆ,ಮುಂದಿನ ೫ಘಳಿಗೆಯನ್ನು ಪುಷ್ಪದಲ್ಲಿರಿಸಿ ಇದರಲ್ಲಿ ಮಗು ಜನಿಸಿದರೆ ಯಾರಿಗೂ ತೊಂದರೆ ಇಲ್ಲ ಅದಕ್ಕೆ ಬದಲಾಗಿ ಮಗು ದೊಡ್ಡವನಾಗಿ ರಾಜಾಥವ ಮಂತ್ರಿಯಾಗುತ್ತಾನೆ.
ನಂತರದ ೬ಘಳಿಗೆಗಳನ್ನು ಗಿಡದ ಫಲದಲ್ಲಿರಿಸಿ ಇದರಲ್ಲಿ ಮಗು ಜನಿಸಿದರೆ ಐಶ್ವರ್ಯವಂತನಾಗಿ/ಳಾಗಿ ಬಾಳುವನು.ಉಳಿದ ೧೧ ಘಳಿಗೆಗಳನ್ನು ಗಿಡದ ರೆಂಬೆಯಲ್ಲಿರಿಸಿ ಇದರಲ್ಲಿ ಮಗು ಜನಿಸಿದರೆ ಆ ಮಗು ಅಲ್ಪಾಯುವಾಗುತ್ತದೆ.
ವಿಷಯ ಸೂಚನೆ:-
ಮೊದಲ ೪ ಘಳಿಗೆ ಬೇರು ಸರ್ವನಾಶ
೨ನೇ ಬಾಗದ ೭ ಘಳಿಗೆ ಕಾಂಡ ದ್ರವ್ಯನಾಶ
೩ನೇ ಬಾಗದ ೧೦ ಘಳಿಗೆ ತೊಘಟೆ ಸಹೋದರರಿಗೆ ತೊಂದರೆ
೪ನೇ ಬಾಗದ ೮ ಘಳಿಗೆ ಕೊಂಬೆ ತಾಯಿಗೆ ಅರಿಷ್ಟ
೫ನೇ ಬಾಗದ ೯ ಘಳಿಗೆ ಎಲೆ ಭಂದು -ಬಳಗದವರಿಗೆ ಅರಿಷ್ಟ.
೭ನೇ ಬಾಘದ ೬ಘಳಿಗೆ ಫಲ ಐಶ್ವರ್ಯಪ್ರಾಪ್ತಿ.
೮ನೇ ಬಾಗದ ೧೧ ಘಲಿಗೆ ಗಿಡದ ರೆಂಬೆ ಅಲ್ಪಾಯುವಾಗುತ್ತದೆ.
ಮೂಲಾ ನಕ್ಶತ್ರ ಜನನದ ದೋಷ ನಿವಾರಣೆಗೆ ಗೋಮುಖ ಪ್ರಸವ ಶಾಂತಿ.ವಿಧಿ-ವಿದಾನ.
ಮನೆಯನ್ನು ಶುಚಿಗೊಳಿಸಿ ರಂಗವಲ್ಲಿಯಿಂದ ಅಷ್ಟದಳ ಕಮಲ ಬರೆದು ಅದರ ಮೇಲೆ ಭತ್ತವನ್ನು ಹರಡಿ(ಅಥವ ಅಕ್ಕಿಯನ್ನು ಹಾಸಿ) ಒಂದು ಹೊಸ ಮೊರದಲ್ಲಿ ಕೆಂಪು ವಸ್ತ್ರವನ್ನು ಹಾಕಿ ಅದರ ತುಂಬಾ ಎಳ್ಳನ್ನು ಹರವಿ ನಂತರ ಒಂದು ಹಾಲು ಕರೆಯುವ ಹಸುವನ್ನು ಹಿಡಿದು ತಂದು ಅದನ್ನು ಶುಚುಗೊಳಿಸಿ ಶೃಂಗಾರ ಮಾಡಿ (ಹೂವು,ಅರಿಸಿನ ಕುಂಕುಮ,ಬಳೆ,ಕುಪ್ಪಸ,ಸೀರೆಯಿಂದ ಅಲಂಕರಿಸಿ) ಹಾಲು ಕರೆದು ಹಸುವಿನ ಹಾಲು,ಮೊಸರು,ತುಪ್ಪ,ಮೂತ್ರ,ಸಗಣಿ(ಪಂಚಗವ್ಯ)ಗಳನ್ನು ಸೇರಿಸಿ ಮಗುವಿನ ತಲೆಗೆ ಮುಟ್ಟಿಸಿ"ಪಯಃ ಪೃಥುವ್ಯಾಪಯ ಓಷುದೀಷು ಪಯೋ ದಿವ್ಯಂತರಿಕ್ಷೇ ಪಯೋದಾಃ"ಪ್ರದಿಶಃ ಸಂತುಮಹ್ಯಂ" ಎಂಬಮಂತ್ರವನ್ನು ಹೇಳುತ್ತಾ ಮಗುವನ್ನು ಮೊರದಲ್ಲಿ ಪೂರ್ವಾಭಿಮುಖವಾಗಿ ಮಲಗಿಸಿ ದಾರ ಮತ್ತು ದರ್ಬೆಹುಲ್ಲಿನ ಸೂತ್ರದಿಂದ ಮೊರವನ್ನು ಸುತ್ತಿ "ಪಿತಾಮಃ ಪಿತೃಪಿತಾತಕ್ತಿತಾ ತಸ್ಯ ವಂಶಜಾಃ ತೇಸರ್ವೇತೃಪ್ತಿಮಾಯಾಂತಿ ನೀಲ ಪುಶ್ಚೇಷು ತರ್ಪಿತಾ "ಯಜ್ಞ ಸಾದನ ಭೂತಾಯ ವಿಶ್ವ ಸ್ಯಾಘಪ್ರಸೌವಿನೀ ವಿಶ್ವರೂಪಧರೋ ದೇವಂ ಪ್ರಿಯತಾ ಮನಯಾಗವ ಗವಾಮಂಗೇಷು ತಿಷ್ಯಂತಿ ಭುವನಾನಿ ಚತುರ್ಧಶ ಯಸ್ಮಾತ್ ಸ್ಮಾಚ್ಚೇವಮ್ಮೇ ಸ್ಯಾದತ ಶಾಂತಿಂ ಪಯಚ್ಚುಮೇ"ಎಂಬಮಂತ್ರವನ್ನು ಹೇಳುತ್ತಾ ಹಸುವಿವ ಪ್ರಸವ ಸ್ಥಾನದಿಂದ ಕೂಸನ್ನು ಜನಿಸಿದಂತೆ ಮಾಡಿ ಹಸುವಿನ ಮುಂದೆ ಕೂಸನ್ನು ಹಿಡಿದು ಮೂಸಿನೋಡಿಸಿ ತಾಯಿಯ ಮಡಿಲಲ್ಲಿ ಕೂಸನ್ನು ಹಾಕಬೇಕು ಗುರು ಹಿರಿಯರು ಕೂಸಿಗೆ ಆಯುಷ್ಮಂತನಾಗಿ ಬಾಳೆಂದು ಆಶೀರ್ವಾದ ಮಾಡಬೇಕು.ಆನಂತರ ತಂದೆ ಮಗುವಿನ ಮುಖವನ್ನು ನೋಡಿ."ಅಸ್ಯ ಗೋಮುಖಸ್ಯ ಪ್ರಸವಸ್ಯ ಪುಣ್ಯಾಹಂ ಭವಂತೋ ಭವಂತು" ಎಂದು ಹೇಳುತಾ ಹಸುವನ್ನು ಕರು ಸಮೇತ ಪುರೋಹಿತರಿಗೆ ದಕ್ಷಿಣೆ,ಫಲ,ತಾಂಬೂಲದೊಡನೆ ದಾನಕೊಡಬೇಕು ಹಾಗಾದಲ್ಲಿ ದಾನ ಸಿಂಧುವಾಗುವುದು ಎಂದು ಜ್ಯೋತಿಷ್ಯಾಧಾರವಿದೆ.
(ಗ್ರಂಥ ಕೃಪೆ -ಬೃ.ಪ.ಹೋ.ಶಾ)(ಬಿ.ಪಿ.ಎಚ್.ಎಸ್)
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments