ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ.
ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು.
ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ, ಮನೋಸ್ಥೈರ್ಯ, ಪಾಪಕೃತ್ಯಗಳು, ವೀರ್ಯ, ಕಾಮಾಸಕ್ತಿ, ಉಂಟಾಗುವ ಗಾಯಗಳು, ರಕ್ತ ಮತ್ತು ತತ್ಸಂಬಂಧೀ ದೋಷಗಳು, ಉಷ್ಣ ವಿಕಾರಗಳು, ಗುಪ್ತರೋಗಗಳು, ಸಹೋದರರ ಜೊತೆ ಸಂಬಂಧ, ಸುಳ್ಳು ಮಾತನಾಡುವೆಕೆ ಮೊದಲಾದವುಗಳನ್ನು ವಿಚಾರಿಸಬಹುದು.
ರಾಹುವಿನಿಂದ ಜನ್ಮ ಕುಂಡಲಿಯಲ್ಲಿ ರಾಜ್ಯ, ಸಂಪಾದನೆ, ಕುತರ್ಕ, ವಾದವಿವಾದ, ಜಗಳಗಳು, ಕಟು ಮಾತುಗಳು, ಗೈಯಾಳಿತನ, ಪತಿತ ಸ್ವಭಾವ, ಅಧಾರ್ಮಿಕ ಪ್ರವೃತ್ತಿ, ಅಯೋಗ್ಯ ಸಹವಾಸ, ಅನೀತಿ, ಮಾನಸಿಕ ಗೊಂದಲ, ಅಶಾಂತಿ, ದುಃಖ, ಹಾವು ಮೊದಲಾದ ಸರೀಸೃಪಗಳು, ಕನಸುಗಳು, ಕುಮಾರ್ಗದಿಂದ ಸಂಪಾದನೆ, ವಿಪರೀತ ಕಾಮುಕತೆ, ಗುಳ್ಳೆ ಕಜ್ಜಿ ಮೊದಲಾದ ಗಾಯಗಳು, ದುಷ್ಟ ಸ್ತ್ರೀಸಹವಾಸ, ಅಭಕ್ಷ್ಯ ಭೋಜನ, ಅಮಾನುಷ ಶಕ್ತಿಗಳು, ವಾಮಾಚಾರದಲ್ಲಿ ನಂಬಿಕೆ ಮೊದಲಾದ ಅನೇಕ ವಿಷಯಗಳನ್ನು ನೋಡಬೇಕು.
ರಾಹು-ಕೇತುಗಳು ಛಾಯಾಗ್ರಹರಾಗಿದ್ದು ಸ್ವತಃ ಬಿಂಬಹೀನರಾಗಿದ್ದಾರೆ. ಆದುದರಿಂದ ಇವರು ಗೋಚಾರದಲ್ಲಿ ಯಾವ ಗ್ರಹದ ಜೊತೆಗೆ ಇರುತ್ತಾರೋ ಆ ಗ್ರಹದ ಫಲಾದೇಶವನ್ನೇ ಉಂಟುಮಾಡುತ್ತಾರೆ. ಮೂಲತಃ ಇವರು ಮಾರಕ ಗ್ರಹಗಳು. ಆದುದರಿಂದ ಇನ್ನೊಂದು ಮಾರಕ ಗ್ರಹದ ಜೊತೆಗೆ ಯುತಿ ಅಥವಾ ಯೋಗವನ್ನು ಹೊಂದಿದಾಗ ಸ್ಪಷ್ಟವಾಗಿ ಅಶುಭ ಫಲದಾಯಕರಾಗುತ್ತಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಯುತಿಯಲ್ಲಿರುವ ಗ್ರಹ ಅತ್ಯಂತ ಶುಭಪ್ರದ ಅಥವಾ ಸ್ವಕ್ಷೇತ್ರ, ಉಚ್ಚರಾಶಿ, ಮೂಲತ್ರಿಕೋಣಸ್ಥರಾಗಿದ್ದಾಗ ರಾಹುವು ಅನೀರೀಕ್ಷಿತ ಶುಭ ಫಲವನ್ನು ಕೊಡುತ್ತಾನೆ.
ಪ್ರಸಕ್ತ ವೃಶ್ಚಿಕ ರಾಶಿಯಲ್ಲಿ ಉಂಟಾಗಿರುವ ಕುಜ-ರಾಹು ಯೋಗವು ಎಲ್ಲ ದ್ವಾದಶ ರಾಶಿಯವರ ಮೇಲೂ ಪ್ರಭಾವವನ್ನು ಬೀರಲಿದೆ. ಅಷ್ಟೇ ಅಲ್ಲದೇ ಈ ತಿಂಗಳು ಜನ್ಮವಾಗುವ ಎಲ್ಲ ಜಾತಕರ ಕುಂಡಲಿಗಳಲ್ಲಿ ಈ ಯೋಗ ಉಂಟಾಗುತ್ತದೆ. ಈ ಯೋಗವು ಜಾತಕದಲ್ಲಿ ಯಾವ ಸ್ಥಾನದಲ್ಲಿ ಇದೆ ಎಂಬುದನ್ನು ಪರಿಶಿಲಿಸಿ ಯೋಗ್ಯ ಪರಿಹಾರೋಪಾಯಗಳನ್ನು ಹೇಳಬೇಕು.
ವೃಶ್ಚಿಕದಲ್ಲಿ ಜನ್ಮರಾಶಿಯಲ್ಲಿ ಈ ಯೋಗವು ಇರುತ್ತದೆ. ಪರಿಣಾಮವಾಗಿ ಮಾನಸಿಕವಾಗಿ ತೊಂದರೆಗಳು ಹೆಚ್ಚುತ್ತವೆ. ಆರ್ಥಿಕವಾಗಿ ತೊಂದರೆಯನ್ನು ಸಹ ಎದುರಿಸಬೇಕಾಗಬಹುದು. ವ್ಯರ್ಥವಾದ ವಾದ ವಿವಾದಗಳು ಬೇಡ, ಕೈಲಾಗದ ಕೆಲಸಗಳನ್ನು ತೆಗೆದುಕೊಳ್ಳುವುದು, ದೊಡ್ಡಸ್ಥಿಕೆಯ ವಾಗ್ದಾನಗಳು ಸಹ ಸಮಸ್ಯೆಯನ್ನುಂಟುಮಾಡಬಹುದು. ಸಾಹಸ, ಧೈರ್ಯವು ಹೆಚ್ಚಾಗಿರುತ್ತದೆ, ಆದರೆ ದುಡುಕು ಬುದ್ದಿ ಬೇಡ. ಹಿರಿಯರಿಂದ ಮತ್ತು ಕುಟುಂಬದವರಿಂದ ಸಹಾಯವು ಸಹ ಸಿಗುತ್ತದೆ. ಎಲ್ಲ ಕೆಲಸಗಳನ್ನು ಎರಡುಬಾರಿ ವಿಚಾರಿಸಿ ಸಲಹೆಗಳನ್ನು ಪಡೆದುಕೊಂಡು ಮಾಡುವುದು ಉತ್ತಮ. ವೃಶ್ಚಿಕ ರಾಶಿಗೆ ಸಾಡೇಸಾತಿಯು ಸಹ ನಡೆದಿರುವುದರಿಂದ ಸ್ವಲ್ಪ ಬಾಧೆಯ ಅನುಭವವು ಹೆಚ್ಚಾಗಿ ಆಗಬಹುದು. ಶನೈಶ್ಚರ ಜಪ, ಕುಜ ಜಪ ಮತ್ತು ರಾಹು ಜಪಗಳನ್ನು ಅವಶ್ಯ ಮಾಡಬೇಕು.
ತುಲಾ ಮತ್ತು ಧನು ರಾಶಿಯವರು ಅನವಶ್ಯಕ ಪ್ರವಾಸಾದಿಗಳನ್ನು ಮಾಡದೇ ಇರುವುದೇ ಉತ್ತಮ. ಆರೋಗ್ಯವು ಸಹ ಕೆಡಲಿದೆ. ಸಣ್ಣ ಪುಟ್ಟ ಗಾಯಗಳು ಮತ್ತು ವಾಹನ ಅಪಘಾತಾದಿಗಳ ಯೋಗವಿದೆ, ಎಚ್ಚರಿಕೆ ವಹಿಸುವುದು. ಖರ್ಚು ಹೆಚ್ಚುವುದು, ಹೊಸ ಯೋಜನೆಗಳಲ್ಲಿ ಹಣದ ವಿನಿಯೋಗ ಸಧ್ಯಕ್ಕೆ ಬೇಡ. ಸಾಲ ಕೊಡುವುದಾಗಲಿ, ತೆಗೆದುಕೊಳ್ಳುವುದಾಗಲಿ ಸಹ ಮುಂದುಡೂವುದು ಉತ್ತಮ.
ಮೇಷದವರಿಗೆ ಕುಜ-ರಾಹು ಗೋಚಾರ ಅಷ್ಟಮಗತವಾಗಿ ಬರಲಿದ್ದು ಆರೋಗ್ಯದ ಸಮಸ್ಯೆಗಳನ್ನುಂಟುಮಾಡಲಿದೆ. ಯಾವುದೋ ಹಳೆಯ ರೋಗ ಮತ್ತೆ ಮರುಕಳಿಸುವ ಸಂಭವವಿದೆ. ರಕ್ತದ ಒತ್ತಡ, ಉದ್ವೇಗ, ಉಷ್ಣವಿಕಾರಗಳು ಸಂಭವನೀಯ. ಆಹಾರದ ವಿಷಮತೆಯುಂದ ಉದರವ್ಯಾಧಿ ಸಂಭವ. ಜಗಳ, ಸಂಬಂಧಿಕರ ಜೊತೆ ಕಿರಿಕಿರಿ, ಮನೆಯಲ್ಲಿ ಹೆಂಡತಿಯ ಜೊತೆಗೆ ಜಗಳ ಹೀಗೆ ಸಂದಿಗ್ಧ ಸ್ಥಿತಿ. ಎಲ್ಲದರಲ್ಲೂ ಹಗುರವಾದ ಮನಸ್ಸನ್ನಿಟ್ಟುಕೊಳ್ಳುವುದು ಸಹಾಯಕ.
ವೃಷಭಕ್ಕೆ ಸಪ್ತಮವಾಗುವ ಈ ಯೋಗ ಹೆಂಡತಿ ಅಥವಾ ಪ್ರೀಯಕರರ ಜೊತೆಗೆ ವಿರಸವನ್ನುಂಟು ಮಾಡುತ್ತದೆ. ಹೊಸ ಪ್ರೇಮಪ್ರಕರಣಗಳೂ ಸಹ ಘಟಿಸಬಹುದು.
ಕರ್ಕರಾಶಿಯವರಿಗೆ ತಮಗಿಂದ ದೊಡ್ಡವರ ಜೊತೆಗೆ ಅಧಿಕಾರಿ ವರ್ಗದ ಜೊತೆಗೆ ಕಲಹವುಂಟಾಗುತ್ತದೆ. ಮಿಥುನಕ್ಕೆ ಈ ಯೋಗ ಶುಭ ಫಲದಾಯಕವಾದರೂ ರೋಗಕಾರಕವಾಗಿದೆ, ಉದರ ಸಂಬಂಧಿ ವ್ಯಾಧಿಗಳಾಗುವ ಸಧ್ಯತೆಯಿದೆ.
ಸಿಂಹರಾಶಿಯವರಿಗೆ ವಿನಾಕಾರಣ ಅಂಜಿಕೆಯಾಗುವಂಥಹ ಮಾನಸಿಕತೆ. ದೈಹಿಕವಾಗಿಯೂ ಕಿರಿಕಿರಿ.
ಅಶುಭ ಫಲವಿರುವವರು ದಾನ ಮತ್ತು ಜಪಗಳಿಂದ ಲಾಭ ಪಡೆಯಬಹುದು. ಕುಜ-ರಾಹು ದೋಷಕ್ಕಾಗಿ ರಜತ (ಬೆಳ್ಳಿ) ಮತ್ತು ತಾಮ್ರದ ದಾನವನ್ನು ಮಾಡಬೇಕು. ತೊಗರಿ ಮತ್ತು ಉದ್ದಿನ ದಾನವನ್ನು ಮಾಡಬಹುದು. ಎಲ್ಲ ದಾನಗಳು ಸದಕ್ಷಿಣಾಕವಾಗಿರಬೇಕು. ಶ್ರೀನರಸಿಂಹ ದೇವರ ದರ್ಶನ ಮತ್ತು ಸ್ತೋತ್ರ, ಸುಬ್ರಹ್ಮಣ್ಯನ ಉಪಾಸನೆ, ದುರ್ಗಾ ದೇವಿಯ ಪೂಜೆಗಳಿಂದ ಸಹ ಕುಯೋಗ ಪರಿಹಾರ. ನಾಗಾರಧನೆ ಮತ್ತು ಅಶ್ವತ್ಥ ಪ್ರದಕ್ಷಿಣೆಗಳು ಬಹಳ ಸಹಾಯಕ. ಕುಜ ಸ್ತೋತ್ರ-ಜಪ ಮತ್ತು ರಾಹು ಕವಚ-ಜಪಗಳಿಂದ ಪೀಡಾ ಪರಿಹಾರ.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments