Skip to main content

ಆಸ್ತಮ ಮತ್ತು ಆಹಾರದ ಪಥ್ಯ

ಆಸ್ತಮ ಮತ್ತು ಆಹಾರದ ಪಥ್ಯ ಆಸ್ತಮ ರೋಗಿಗಳು ಸಮಯಕ್ಕೆ ಸರಿಯಾಗಿ ತಮ್ಮ ಶರೀರಕ್ಕೆ ಒಗ್ಗುವ ಪೌಷ್ಠಿಕ ಆಹಾರವನ್ನು ಸೇವಿಸುವುದರಿಂದ ಅಸ್ತಮ ಅಟ್ಯಾಕ್‌ನ್ನು ತಡೆಗಟ್ಟಿಕೊಳ್ಳಬಹುದಲ್ಲದೆ, ಅದರ ತೀವ್ರತೆಯು ಕಡಿಮೆಯಾಗುತ್ತದೆ. ಆಹಾರ ಪೌಷ್ಠಿಕಾಂಶಗಳಿಂದ ಕೂಡಿರಬೇಕಲ್ಲದೆ, ಸಮತೋಲನ ಆಹಾರವಾಗಿರಬೇಕು. ಕೆಲವರಲ್ಲಿ ತಣ್ಣನೆಯ ಪಾನೀಯಗಳನ್ನು (ಕೂಲ್‌ಡ್ರಿಂಕ್ಸ್‌) ಸೇವಿಸುವುದರಿಂದ ಹುಳಿಯಿಂದ ಕೂಡಿದ ಆಹಾರವನ್ನು ತಿನ್ನುವುದರಿಂದ, ಚಟ್ನಿ ಮತ್ತು ಉಪ್ಪಿನ ಕಾಯಿಯನ್ನು ತಿನ್ನುವುದರಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಆದುದರಿಂದ, ಕೆಮ್ಮು ಉಂಟುಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಆಸ್ತಮ ರೋಗಿಗಳು ಹೊಟ್ಟ ಬಿರಿಯುವಂತೆ ಅಂದರೆ, ಹೊಟ್ಟೆ ತುಂಬಾ ವಿಶೇಷವಾಗಿ ರಾತ್ರಿಯ ಹೊತ್ತು ತಿನ್ನಬಾರದು; ಇದರಿಂದ ಉಸಿರಾಟಕ್ಕೆ ಅನಾನುಕೂಲತೆ ಉಂಟಾಗುತ್ತದೆ. ತಮ್ಮ ಮೈಗೆ ಒಗ್ಗುವ ತರಕಾರಿಗಳನ್ನು, ಹಣ್ಣು-ಹಂಪಲನ್ನು ಹೆಚ್ಚಾಗಿ ಸೇವಿಸಬಹುದು. ಮನೆಯ ಹೊರಗಡೆ ಅಂದರೆ ಪಾರ್ಟಿಗಳಿಗೆ ಹೋಗಿ ಭೋಜನ ಮಾಡುವುದನ್ನು ತಪ್ಪಿಸಬೇಕು. ಪಾರ್ಟಿ, ಭೋಜನಗಳಲ್ಲಿ ಕೊಬ್ಬಿನ ಪದಾರ್ಥಗಳು ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಹೆಚ್ಚಿರುವುದರಿಂದ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಆಹಾರ ನಿಯಮಗಳು ಈ ಕೆಳಕಂಡ ಆಹಾರ ಪದಾರ್ಥಗಳಿಂದ ದೂರವಿರಿ: ಮಸಾಲೆ ಅಥವಾ ಸಾಂಬಾರು ಪದಾರ್ಥಗಳು. ಎಣ್ಣೆಯಲ್ಲಿ ಕರಿದ ತಿಂಡಿಗಳು, ಕೊಬ್ಬಿನ ಪದಾರ್ಥಗಳು. ರಾತ್ರಿಯ ವೇಳೆ ಸಿಹಿ ತಿಂಡಿಗಳು. ರಾತ್ರಿಯ ವೇಳೆ ಊಟ ಮಾಡಿದ ನಂತರ, ತಣ್ಣನೆಯ ಗಾಳಿ ಬೀಸುವ ಕಡೆ ಹೋಗಬೇಡಿರಿ. ಅತಿ ಹೆಚ್ಚಾಗಿ ಊಟವನ್ನು ಮಾಡಬೇಡಿರಿ. ರಾತ್ರಿ ಮಲಗುವ ಮೂರು ಘಂಟೆಯ ಮೊದಲೇ ಲಘುಭೋಜನವನ್ನು ಮಾಡಿರಿ. ಉಪವಾಸ ಮಲಗಬೇಡಿರಿ. ಹಗಲು ಹೊತ್ತು ದೀರ್ಘಕಾಲ ಆಹಾರವನ್ನು ಸೇವಿಸದೆ ಉಪವಾಸವಿರಬೇಡಿರಿ. ಪ್ರತಿ ದಿನ ಎರಡು ಅಥವಾ ಮೂರು ವೇಳೆ ದೊಡ್ಡ ಭೋಜನವನ್ನು ಮಾಡಿರಿ ಅಥವಾ ಆಗಿಂದಾಗ್ಗೆ ವಿರಾಮವನ್ನು ಕೊಟ್ಟು ಸಣ್ಣ ಪ್ರಮಾಣದಲ್ಲಿ ಲಘು ಉಪಾಹಾರವನ್ನು ಸೇವಿಸಿರಿ. ತುಂಬಾ ಹುಳಿಯಾದ ಆಹಾರವನ್ನು ಸೇವಿಸಬೇಡಿರಿ. ತುಂಬಾ ತಣ್ಣಗಿರುವ ಆಹಾರವನ್ನು ತಿನ್ನಬೇಡಿರಿ. ಮೊಸರು ಅಥವಾ ಗಿಣ್ಣನ್ನು ತಿನ್ನಬೇಡಿರಿ. ಬಿಯರ್ ಮತ್ತು ವೈನನ್ನು ಸೇವಿಸಬೇಡಿರಿ. ಅತಿ ಹೆಚ್ಚಾಗಿ ಯೀಸ್ಟ್‌ ಇರುವ ಬ್ರೆಡ್ಡನ್ನು ತಿನ್ನಬೇಡಿರಿ. ಹುಳಿಯಿರುವ ಮಜ್ಜಿಗೆಯನ್ನು ಕುಡಿಯಬೇಡಿರಿ. ಆಸ್ತಮ ಅಟ್ಯಾಕ್‌ ಆದಾಗ ಕಾಯಿಸಿ ಆರಿಸಿದ ಶುದ್ಧವಾದ ನೀರನ್ನು ಹೆಚ್ಚಾಗಿ ಕುಡಿಯಿರಿ. ಮಾನಸಿಕ ಸಂಗತಿಗಳು ಆಸ್ತಮ, ಮನೋದೈಹಿಕ ಬೇನೆಯಲ್ಲ (Psychosomatic illness) ಆದರೆ, ಮನೋಭಾವ ಅಥವಾ ಭಾವೋದ್ವೇಗದಿಂದಾಗಿ ಆಸ್ತಮ ತ್ರಿಗುಣಗೊಳ್ಳುತ್ತದೆ ಅಥವಾ ಹದಗೆಡುತ್ತದೆ. ಅಲ್ಲದೆ, ರೋಗಿ ಭಾವೋದ್ವೇಗದ ಭಾವನೆಗಳಿಗೆ ಹೊಂದಿಕೊಂಡು, ವಿಶ್ರಾಂತಿಯನ್ನು ಪಡೆಯುವುದರಿಂದ, ಆಸ್ತಮ ತೊಂದರೆ ಉಪಶಮನಗೊಳ್ಳುತ್ತದೆ. ಆಸ್ತಮದಿಂದ ತೊಂದರೆಪಡುತ್ತಿರುವವರು ಯಾವಾಗ, ಯಾವ ಸಂದರ್ಭದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ದಿನಚರಿಯನ್ನು ಬರೆದಿಟ್ಟು (ಅದನ್ನು ಅಗತ್ಯವಿದ್ದರೆ ವೈದ್ಯರಿಗೂ ತೋರಿಸಿರಿ) ಕೊಂಡು, ಅದನ್ನು ನಿಯಂತ್ರಿಸಿಕೊಳ್ಳುವ ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ, ವಿಶ್ರಾಂತಿಯನ್ನು ಪಡೆದರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಆಸ್ತಮ ರೋಗ ಲಕ್ಷಣಗಳು ಯಾವಾಗ ಹೆಚ್ಚುತ್ತವೆ; ಅಸಹಾಯಕತೆ ಉಂಟಾಗುತ್ತದೆ ಎಂಬುದನ್ನು ನಿಮ್ಮ ವೈದ್ಯರಿಗೆ ತಿಳಿಸಿದರೆ ಅವರು ಪರಿಹಾರವನ್ನು ಸೂಚಿಸಲು ಸಹಾಯಕವಾಗುತ್ತದೆ. ಅಲ್ಲದೆ, ನಿಮ್ಮ ವೈದ್ಯರು ಬರೆದುಕೊಟ್ಟಿರುವ ಔಷಧಿಗಳನ್ನು ಕ್ರಮವಾಗಿ ಸೇವಿಸಬೇಕು. ಅವುಗಳಿಂದ ರೋಗ ಲಕ್ಷಣಗಳು ಕಡಿಮೆಯಾಗದಿದ್ದರೆ ಅಥವಾ ತೊಂದರೆ ಹೆಚ್ಚಾದರೆ ವೈದ್ಯರಿಗೆ ತಿಳಿಸಬೇಕು. ಅಷ್ಟೇ ಅಲ್ಲದೆ, “ನಾನು ಆಸ್ತಮ ರೋಗಿ” ಎಂಬ ಮನೋಭಾವವನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗಬಾರದು. ಮಾನಸಿಕ ಚಿಂತೆ, ಕೊರಗನ್ನು ನೀವು ನಿವಾರಿಸಿಕೊಳ್ಳದಿದ್ದರೆ, ವೈದ್ಯರು ನೀಡುವ ಚಿಕಿತ್ಸೆ ಪರಿಣಾಮ ಬೀರುವುದಿಲ್ಲ. ಕ್ರಮಬದ್ಧವಾದ ಜೀವನ, ಆಹಾರ ಸೇವನೆ, ಮನೋರಂಜನೆ ಹಾಗೂ ಶಾಂತಿಯುತವಾದ ಜೀವನ, ಧ್ಯಾನ, ಏಕಾಗ್ರತೆಯಿಂದ ಹಾಗೂ ಕ್ರಮವಾದ ಯೋಗ-ಪ್ರಾಣಾಯಾಮ (ಉಸಿರಾಟದ ವ್ಯಾಯಾಮ) ದಿಂದಾಗಿ ಮಾನಸಿಕ ಒತ್ತಡ ಕಡಿಮೆಯಾಗಲು ನಿಶ್ಚಿತವಾಗಿ ಸಹಾಯಕವಾಗುತ್ತದೆ. ಆಹಾರ ಚಿಕಿತ್ಸೆ ಆಸ್ತಮ ರೋಗಿಗಳು ಬೆಳಗಿನ ಉಪಾಹಾರ (ಟಿಫನ್‌)ದ ಜೊತೆ ಸಿಹಿ ಕಿತ್ತಳೆ ಹಣ್ಣು, ಸಿಹಿ ಮೂಸಂಬಿ, ಪರಂಗಿಹಣ್ಣು, ಮಾವಿನ ಹಣ್ಣು ಅಥವಾ ಸೇಬಿನ ಹಣ್ಣನ್ನು ಸೇವಿಸಬೇಕು. ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ಬೇಯಿಸಿದ ತರಕಾರಿಗಳನ್ನು ಉಪಯೋಗಿಸಬೇಕು.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ