Skip to main content

ಶ್ರಿಶನೈಶ್ಚರ ಪೀಡಾ ಪರಿಹಾರೋಪಾಯಗಳು

ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ | ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ || – ಗರುಡಪುರಾಣ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ. ಇಂಥಹ ಕರ್ಮಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯವೆಂಬ ದಿವ್ಯವಾದ ವಿದ್ಯೆಯನ್ನು ಪ್ರಾಚೀನರು ನಮಗೆ ದಯಪಾಲಿಸಿದ್ದಾರೆ. ವರಾಹಮಿಹಿರಾಚಾರ್ಯರು ಈ ಕುರಿತು “ಕರ್ಮಾರ್ಜಿತಂ ಪೂರ್ವಭವೇಸದಾದಿ ಯತ್ತಸ್ಯಪಂಕ್ತಿಂ ಸಮಭಿವ್ಯನಕ್ತಿ” ಪೂರ್ವಜನ್ಮದಲ್ಲಿ ಸಂಚಿತ ಶುಭಾಶುಭ ಕರ್ಮಫಲದ ಅನುಭವಕಾಲವನ್ನು ಈ ಶಾಸ್ತ್ರವು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಗ್ರಹ್ಣಂತೀತಿ ಗ್ರಹಾಃ ಸರ್ವೇ ಗ್ರಹಾ ಪೀಡಾಕರಾಃ ಸ್ಮೃತಾಃ | (ಇನ್ನೋಬ್ಬರನ್ನು) ಹಿಡಿದುಕೊಳ್ಳುತ್ತವೆ ಎಂಬರ್ಥದಲ್ಲಿ ಗ್ರಹ ಎಂದು ಕರೆಯುತ್ತಾರೆ. ಗ್ರಹಗಳು ಪೀಡೆಯನ್ನು ಮಾಡುತ್ತವೆ. ಛಾಯಾಸೂನುಶ್ಚ ದುಃಖದಃ (ಪರಾಶರಹೋರಾ) – ಶನಿದೇವನು ದುಃಖವನ್ನು ಉಂಟುಮಾಡುತ್ತಾನೆ (ಸೂಚಿಸುತ್ತಾನೆ). ಇಂಥಹ ಗ್ರಹಗಳ ಪೀಡಾಪರಿಹಾರಕ್ಕಾಗಿ ಶಾಸ್ತ್ರಗಳು ಅನೇಕ ವಿಧಿ-ನಿರ್ದೇಶಗಳನ್ನು ಸೂಚಿಸುತ್ತವೆ. ಯಥೋಕ್ತಮೌಷಧಿಸ್ನಾನಂ ಗ್ರಹವಿಪ್ರಾರ್ಚನಂ ತಥಾ | ಗ್ರಹಾನುದ್ದಿಷ್ಯ ಹೋಮೋ ವಾ ತ್ರಿಧಾಶಾಂತಿರ್ಬುಧೈಃ ಸ್ಮೃತಾ || ವಿಶಿಷ್ಟ ಔಷಧಿಗಳಿಂದ ಸ್ನಾನ, ಬ್ರಾಹ್ಮಣರ ಸೇವೆ (ದಾನಾದಿಗಳಿಂದ), ಗ್ರಹಗಳ ಉದ್ದಿಷ್ಟ ಮಾಡುವ ಹೋಮ-ಹವನಗಳು – ಇವು ಗ್ರಹಗಳ ಶಾಂತಿಕರ್ಮಗಳು. ಇವುಗಳಲ್ಲದೆ ಪಾರಾಯಣ, ಜಪಾದಿಗಳಿಂದಲೂ ಸಹ ಪರಿಹಾರ ಸಾಧ್ಯ. ಶ್ರದ್ಧೆ ಮತ್ತು ಭಕ್ತಿಗಳಿಂದ ಮಾಡಿದ ಸಮಸ್ತ ಉಪಾಯಗಳು ಶೀಘ್ರ ಫಲಪ್ರದಗಳಾಗಿವೆ. ಶನಿಕಾಟ, ಸಾಡೇಸಾತಿ, ಅಷ್ಟಮ ಪಂಚಮ ಶನಿ ಪೀಡೆಗಳಿಗೆ ಪರಿಹಾರವಾಗಿ ಶಾಸ್ತ್ರಗಳು ಅನೇಕ ಉಪಾಯಗಳನ್ನು ಹೇಳಿವೆ, ಕೆಲವು ಶೀಘ್ರಫಲಪ್ರದ ಉಪಾಯಗಳನ್ನು ಇಲ್ಲಿ ಕೊಡಲಿದ್ದೇನೆ, ಅತಿರಿಕ್ತ ವಿಶೇಷಗಳನ್ನು ಹಿರಿಯರಿಂದ, ಪಂಡಿತರಿಂದ ತಿಳಿದುಕೊಳ್ಳಬೇಕು. (೧) ಶನಿ ಪ್ರತಿಮಾ ದಾನ – ಇದು ವಿಶೇಷ ಉಪಾಯವಾಗಿದ್ದು ಇದರ ಹೆಚ್ಚಿನ ಮಾಹಿತಿಗಳನ್ನು ಪಂಡಿತರಿಂದ ತಿಳಿದುಕೊಳ್ಳಬೇಕು. (೨) ದಾನಗಳು – ಪ್ರತಿ ಶನಿವಾರ ಶನೈಶ್ಚರ ಪ್ರೀತ್ಯರ್ಥ ಉಪವಾಸ ಮಾಡಬೇಕು. ಆಂಜನೇಯ ಮತ್ತು ಶನೈಶ್ಚರರ ದರ್ಶನವನ್ನು ಪ್ರಾತಃ ಕಾಲದಲ್ಲಿ ಮಾಡಬೇಕು. ಈ ಕೆಳಗೆ ಹೇಳಿರುವ ದಾನದ ವಸ್ತುಗಳಲ್ಲಿ ಎಲ್ಲವನ್ನು ಅಥವಾ ಶಕ್ಯವಾದದನ್ನು ಶಕ್ಯವಿದ್ದಷ್ಟು ಶನಿವಾರದಂದು ದಾನಮಾಡಬೇಕು. ದಾನದ ವಸ್ತುಗಳು – ಕಬ್ಬಿಣದ ಪಾತ್ರೆ, ಎಳ್ಳಿನ ಎಣ್ಣೆ, ಕಪ್ಪು ಬಟ್ಟೆ, ನೀಲಮಣಿ, ಉದ್ದು, ಎಳ್ಳು, ನೀಲಿ ಬಣ್ಣದ ಹೂವುಗಳು, ದೀಪದಾನ ಇವುಗಳನ್ನು ದಕ್ಷಿಣಾಸಹಿತ ಯೋಗ್ಯ ವಿಪ್ರನಿಗೆ ದಾನ ಮಾಡಬೇಕು, ಈ ದಾನಗಳು ಹೆಚ್ಚೆಚ್ಚು ಮಾಡಿದಷ್ಟು ಫಲಪ್ರದ. ಧಾನ್ಯಗಳನ್ನು ಪಾತ್ರಸಹಿತ ದಾನಮಾಡಬೇಕು. (೩) ಅಶ್ವತ್ಥ ವೃಕ್ಷ ಪ್ರದಕ್ಷಿಣಾ-ನಮಸ್ಕಾರ ಪ್ರತಿದಿನ ಅಥವಾ ಕನಿಷ್ಟ ಪಕ್ಷ ಶನಿವಾರದಂದು ಪ್ರಾತಃ ಕಾಲದಲ್ಲಿ ಅಶ್ವತ್ಥವೃಕ್ಷದ ಪ್ರದಕ್ಷಿಣಾ ನಮಸ್ಕಾರಗಳನ್ನು ಮಾಡಬೇಕು. ಇದು ಅತೀಫಲಪ್ರದವಾದ ಉಪಾಯ. ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ | ಅಗ್ರತಃ ಶಿವರೂಪಾಯ ವೃಕ್ಷರಾಜಾಯ ತೇ ನಮಃ || ಈ ಸ್ತೋತ್ರವನ್ನು ಅನ್ನುತ್ತಾ ಅಶ್ವತ್ಥಪ್ರದಕ್ಷಿಣಾ ನಮಸ್ಕಾರಗಳನ್ನು ಮಾಡಿ ಶನಿಸ್ತೋತ್ರಾದಿಗಳನ್ನು ಅನ್ನಬೇಕು. (೪) ಶಮೀ ವೃಕ್ಷದ ಪ್ರದಕ್ಷಿಣಾ ನಮಸ್ಕಾರ ಶಮೀವೃಕ್ಷವು ಶನಿದೇವನ ವೃಕ್ಷವಾಗಿದೆ, ಮೇಲೆ ಹೇಳಿರುವಂತೆ ನಿತ್ಯ ಶಮೀವೃಕ್ಷದ ಪ್ರದಕ್ಷಿಣಾ ನಮಸ್ಕಾರಾದಿಗಳಿಂದ ಶನಿಬಾಧೆ ನಿವಾರಣೆಯಾಗುತ್ತದೆ. ಪ್ರದಕ್ಷಿಣಾ-ನಮಸ್ಕಾರ ಸ್ತೋತ್ರ ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶನೀ | ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ || (೫) ಜಪ – ಶನೈಶ್ಚರನ ಜಪಸಂಖ್ಯೆಯು 23000. ಈ ಕೆಳಕಂಡ ಮಂತ್ರಗಳನ್ನು ಸ್ವತಃ ಅಥವಾ ಬ್ರಾಹ್ಮಣ, ಪುರೋಹಿತರಿಂದ ಮಾಡಿಸಿ ಶನಿಶಾಂತಿಯನ್ನು ಮಾಡಿಸಬೇಕು. ವೇದೋಕ್ತ ಮಂತ್ರ – ಓಂ ಶಮಗ್ನಿರಗ್ನಿಭಿಃ ಕರಚ್ಛನ್ನಸ್ತಪತುಸೂರ್ಯಃ || ತಂತ್ರೋಕ್ತ ಮಂತ್ರ – ಓಂ ಶಂ ಶನೈಶ್ಚರಾಯ ನಮಃ || ಈ ಮೇಲ್ಕಂಡ ಮಂತ್ರಗಳಿಗೆ ಶುಚಿತ್ವಾಧಿ ವಿಧಾನಗಳಿದ್ದು ದಕ್ಷತೆಯ ಅವಶ್ಯಕತೆ ಇರುತ್ತದೆ. ಪುರಾಣೋಕ್ತ (ಕಲ್ಪೋಕ್ತ) ಮಂತ್ರಗಳು – (೧) ನೀಲಾಂಜನಸಮಾಭಾಸಂ ರವಿಪುತ್ರಂ ಯಮಾಗ್ರಜಂ | ಛಾಯಾಮಾರ್ತಾಂಡಸಂಭೂತಂ ತಂ ನಮಾಮಿ ಶನೈಶ್ಚರಮ್ || (೨) ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ | ಮಂದಚಾರಃ ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ || ಈ ಮೇಲ್ಕಂಡ ಪುರಾಣೋಕ್ತ ಮಂತ್ರಗಳನ್ನು ಪ್ರತಿನಿತ್ಯ ಪ್ರಾತಃಕಾಲದಲ್ಲಿ ಶುಚಿರ್ಭೂತರಾಗಿ 10 ಅಥವಾ 108 ಬಾರಿ ಪಾರಾಯಣ ಮಾಡುವುದರಿಂದ ಪೀಡಾ ಪರಿಹಾರವಾಗುತ್ತದೆ. (೬) ಸ್ತೋತ್ರ – ಪಾರಾಯಣ – ವಿಷ್ಣುಸಹಸ್ರನಾಮ ದಿವ್ಯ ಸ್ತೋತ್ರವಾಗಿದ್ದು ಸಮಸ್ತ ಗ್ರಹದೋಷ ಪರಿಹಾರಕವಾಗಿದೆ, ನಿತ್ಯ ಪಾರಾಯಣದಿಂದ ಸರ್ವಸಿದ್ಧಿಯಾಗುತ್ತದೆ. – ಶನೈಶ್ಚರವಿರಚಿತ ಶ್ರೀಲಕ್ಷ್ಮೀನರಸಿಂಹ ದೇವರ ಸ್ತೋತ್ರವು ಶನಿಕಾಟದ ಪರಿಹಾರಕ್ಕೆ ಅತ್ಯಂತ ಫಲಪ್ರದವಾದ ಸ್ತೋತ್ರವಾಗಿದೆ. ಇದರ ನಿತ್ಯಪಾರಾಯಣದಿಂದ ಅತಿಶೀಘ್ರ ಫಲವುಂಟಾಗುತ್ತದೆ. – ಆಂಜನೇಯ ಸ್ತೋತ್ರ. – ಶಿವಮಹಿಮ್ನ ಸ್ತೋತ್ರ. – ಪಿಪ್ಪಲಾದ ಕೃತಂ ಶ್ರೀಶನಿ ಸ್ತೋತ್ರಮ್ (ಸ್ಕಂದ ಪುರಾಣೋಕ್ತ) – ಶ್ರೀಬ್ರಹ್ಮಾಂಡಪುರಾಣೋಕ್ತಂ ಶ್ರೀಶನಿಕವಚಮ್ (ಶ್ರೀಶನಿವಜ್ರಪಂಜರ ಸ್ತೋತ್ರಮ್) – ಶ್ರೀಶನೈಶ್ಚರಸ್ತೋತ್ರಮ್ (ದಶರಥಕೃತ) ಈ ಸ್ತೋತ್ರಗಳನ್ನು ಪ್ರತಿನಿತ್ಯ ಪ್ರಾತಃಕಾಲದಲ್ಲಿ ಶುಚಿರ್ಭೂತರಾಗಿ ಶ್ರೀಶನಿದೇವರ ಸನ್ನಿಧಿಯಲ್ಲಿ, ಆಂಜನೇಯನ ಸನ್ನಿಧಿಯಲ್ಲಿ, ಅಶ್ವತ್ಥ-ಶಮೀ ವೃಕ್ಷಗಳ ಸನ್ನಿಧಿಯಲ್ಲಿ ಪಾರಾಯಣಮಾಡುವುದು ಅತ್ಯಂತ ಶ್ರೇಯಸ್ಕರ. ಅನುಕೂಲವಿಲ್ಲದವರು ನಿತ್ಯ ಮನೆಯಲ್ಲಿ ಮತ್ತು ಶನಿವಾರ ಮತ್ತು ರವಿವಾರಗಳಂದು ಈ ಸ್ತೋತ್ರಗಳನ್ನು ದೇವಸ್ಥಾನಗಳಲ್ಲಿ ಪಾರಾಯಣ ಮಾಡಬಹುದು. (೬) ದೇವತಾ ಸೇವೆ – ಉಪವಾಸ ಪ್ರತಿ ಶನಿವಾರದಂದು – ಶ್ರೀವೆಂಕಟರಮಣದೇವರ ದರ್ಶನ ಸೇವೆ. – ಹನುಮಂತದೇವರ ಭಕ್ತರಿಗೆ ಶನಿದೇವ ಅಭಯಪ್ರದನಾಗಿದ್ದಾನೆ. ಶನಿವಾರದಂದು ಹನುಮಂತನ ದೇವಸ್ಥಾನದಲ್ಲಿ ತೈಲಸಮರ್ಪಣೆ ಮಾಡಬೇಕು. ಪ್ರತಿ ಶನಿವಾರ ಸಂಪೂರ್ಣ ಉಪವಾಸ ಅಥವಾ ಒಪ್ಪತ್ತು ಉಪವಾಸವನ್ನು ಶನಿದೇವರ ಪ್ರೀತ್ಯರ್ಥ ಮಾಡಬೇಕು. (೭) ಶಾಂತಿ ಹೋಮ ಶ್ರೀಶನೈಶ್ಚರ ಶಾಂತಿಹೋಮವನ್ನು ಮಾಡಿಸುವುದು. (೮) ಪ್ರತಿ ಶನಿವಾರದಂದು ಎಣ್ಣೆಸ್ನಾನವನ್ನು ಮಾಡುವುದು. ತೀರ್ಥಕ್ಷೇತ್ರಸ್ನಾನ ಪುಣ್ಯಕರ. sangraha

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ