ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ | ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ || – ಗರುಡಪುರಾಣ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ. ಇಂಥಹ ಕರ್ಮಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯವೆಂಬ ದಿವ್ಯವಾದ ವಿದ್ಯೆಯನ್ನು ಪ್ರಾಚೀನರು ನಮಗೆ ದಯಪಾಲಿಸಿದ್ದಾರೆ. ವರಾಹಮಿಹಿರಾಚಾರ್ಯರು ಈ ಕುರಿತು “ಕರ್ಮಾರ್ಜಿತಂ ಪೂರ್ವಭವೇಸದಾದಿ ಯತ್ತಸ್ಯಪಂಕ್ತಿಂ ಸಮಭಿವ್ಯನಕ್ತಿ” ಪೂರ್ವಜನ್ಮದಲ್ಲಿ ಸಂಚಿತ ಶುಭಾಶುಭ ಕರ್ಮಫಲದ ಅನುಭವಕಾಲವನ್ನು ಈ ಶಾಸ್ತ್ರವು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಗ್ರಹ್ಣಂತೀತಿ ಗ್ರಹಾಃ ಸರ್ವೇ ಗ್ರಹಾ ಪೀಡಾಕರಾಃ ಸ್ಮೃತಾಃ | (ಇನ್ನೋಬ್ಬರನ್ನು) ಹಿಡಿದುಕೊಳ್ಳುತ್ತವೆ ಎಂಬರ್ಥದಲ್ಲಿ ಗ್ರಹ ಎಂದು ಕರೆಯುತ್ತಾರೆ. ಗ್ರಹಗಳು ಪೀಡೆಯನ್ನು ಮಾಡುತ್ತವೆ. ಛಾಯಾಸೂನುಶ್ಚ ದುಃಖದಃ (ಪರಾಶರಹೋರಾ) – ಶನಿದೇವನು ದುಃಖವನ್ನು ಉಂಟುಮಾಡುತ್ತಾನೆ (ಸೂಚಿಸುತ್ತಾನೆ). ಇಂಥಹ ಗ್ರಹಗಳ ಪೀಡಾಪರಿಹಾರಕ್ಕಾಗಿ ಶಾಸ್ತ್ರಗಳು ಅನೇಕ ವಿಧಿ-ನಿರ್ದೇಶಗಳನ್ನು ಸೂಚಿಸುತ್ತವೆ. ಯಥೋಕ್ತಮೌಷಧಿಸ್ನಾನಂ ಗ್ರಹವಿಪ್ರಾರ್ಚನಂ ತಥಾ | ಗ್ರಹಾನುದ್ದಿಷ್ಯ ಹೋಮೋ ವಾ ತ್ರಿಧಾಶಾಂತಿರ್ಬುಧೈಃ ಸ್ಮೃತಾ || ವಿಶಿಷ್ಟ ಔಷಧಿಗಳಿಂದ ಸ್ನಾನ, ಬ್ರಾಹ್ಮಣರ ಸೇವೆ (ದಾನಾದಿಗಳಿಂದ), ಗ್ರಹಗಳ ಉದ್ದಿಷ್ಟ ಮಾಡುವ ಹೋಮ-ಹವನಗಳು – ಇವು ಗ್ರಹಗಳ ಶಾಂತಿಕರ್ಮಗಳು. ಇವುಗಳಲ್ಲದೆ ಪಾರಾಯಣ...