ಯಾವ ದಾನ ಮಾಡಿದರೆ ಯಾವ ಫಲ?
ದಾನದಿಂದ ಮನುಷ್ಯ ದೊಡ್ಡವನಾಗುತ್ತಾನೆ. ಇದರಿಂದಲೇ ಶ್ರೇಯಸ್ಸು ಲಭಿಸುತ್ತದೆ. ದಾನದಿಂದ ಪಾಪ ಪರಿಹಾರವಾಗುತ್ತದೆ ಎನ್ನಲಾಗುತ್ತದೆ. ದಾನದ ಹಿಂದೆ ಇಲ್ಲದವರಿಗೆ ಇರುವವರು ನೀಡುವ ಮೂಲಕ ಮತ್ತೊಬ್ಬರ ಅಗತ್ಯ ಪೂರೈಕೆಯಾಗುವ ಆಶಯವಿರುವುದು ಸತ್ಯ. ಅನೇಕ ಬಗೆಯ ದಾನಗಳನ್ನು ನಾವು ಗುರುತಿಸಬಹುದು.
ಬನ್ನಿ ಜೋತಿಷ್ಯದಂತೆ ಯಾವ ದಾನದಿಂದ ಯಾವ ರೀತಿಯ ಲಾಭವಾಗುತ್ತದೆ ಎಂದು ನೋಡೋಣ.
1.ಅನ್ನ ದಾನ ಮಾಡಿದರೆ:- ದಾರಿದ್ರ ನಾಶವಾಗುತ್ತದೆ, ಸಾಲಗಳು ತೀರುತ್ತದೆ.
2.ವಸ್ತು ದಾನ ಮಾಡಿದರೆ:- ಆಯುಷ್ಯ ಹೆಚ್ಚುತ್ತದೆ.
3.ಜೇನು ತುಪ್ಪ ದಾನಮಾಡಿದರೆ:- ಪುತ್ರ ಭಾಗ್ಯ ಕಾಣಿಸುತ್ತದೆ.
4.ದೀಪ ದಾನಮಾಡಿದರೆ:- ಕಣ್ಣು ಚನ್ನಾಗಿ ಕಾಣಿಸುತ್ತದೆ.
5.ಅಕ್ಕಿ ದಾನಮಾಡಿದರೆ:- ಪಾಪ ಪರಿಹಾರವಾಗುತ್ತದೆ.
6.ತುಪ್ಪ ದಾನಮಾಡಿದರೆ:- ರೋಗ ನಿವಾರಣೆಯಾಗುತ್ತದೆ.
7. ಹಾಲು ದಾನಮಾಡಿದರೆ:- ದುಖಃ ತೀರುತ್ತದೆ.
8. ಮೊಸರು ದಾನಮಾಡಿದರೆ:-ಇಂದ್ರಿಯಗಳು ವೃದ್ಧಿಯಾಗುತ್ತವೆ.
9.ಹಣ್ಣು ಗಳನ್ನು ದಾನಮಾಡಿದರೆ:- ಬುದ್ಧಿ,ಸಿದ್ಧಿಯು ಲಭಿಸುತ್ತದೆ.
10.ಬಂಗಾರ ದಾನಮಾಡಿದರೆ:- ಕುಟುಂಬದಲ್ಲಿ ಇರುವ ದೋಷ ನೀಗುತ್ತದೆ.
11.ಬೆಳ್ಳಿ ದಾನಮಾಡಿದರೆ:- ಮನಸ್ಸಿನ ಚಿಂತೆ ನೀಗುತ್ತದೆ.
12.ಹಸು(ಗೋವು) ದಾನಮಾಡಿದರೆ:- ಖುಷಿ,ದೇವರುಗಳು,ಪಿತೃಗಳಿಂದ ವಿಮೋಚನೆ
13.ತೆಂಗಿನಕಾಯಿ ದಾನಮಾಡಿದರೆ:- ನೆನೆದ ಕಾರ ಸಿದ್ಧಿಸುತ್ತದೆ.
14. ನೆಲ್ಲಿಕಾಯಿ ದಾನಮಾಡಿದರೆ:- ಜ್ಞಾನ ದಕ್ಕುತ್ತದೆ.
15. ಭೂಮಿ ದಾನಮಾಡಿದರೆ:- ಈಶ್ವರ ದರ್ಶನವಾಗುತ್ತದೆ.
- ಟಿ.ಎನ್.ಸರೋಜಾ ನಂಜುಡಸ್ವಾಮಿ
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments