Skip to main content

ಜೋಕಿನ ಜೋಕು

ಸೆಂಡ್ ಆಫ್ ಕಮಿಟಿ... ರಿಸೆಪ್ಷನ್ ಕಮಿಟಿ ಆದಾಗ... ಖ್ಯಾತ ಶಿಕ್ಷಣ ತಜ್ಞ, ವಿಚಾರವಾದಿ ಡಾ. ಎಚ್. ನರಸಿಂಹಯ್ಯ ಅವರು, ತಮ್ಮ ಸಾವಿನ ಬಳಿಕ ತಮ್ಮ ಅಂತ್ಯಕ್ರಿಯೆ ಹೇಗೆ ನಡೆಯಬೇಕು, ತಮ್ಮ ಅಂಗಾಂಗಗಳನ್ನು ಹೇಗೆ ದಾನ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ತಾವೇ ನಿರ್ಧರಿಸಿ ತಮ್ಮ ಆತ್ಮೀಯರನ್ನು ಒಳಗೊಂಡ ಸಮಿತಿಯೊಂದನ್ನು ಮಾಡಿದ್ದರು. ಆದರೆ, ಡಾ.ಎಚ್.ನರಸಿಂಹಯ್ಯ ಅವರಿಗೆ ಮೊದಲೇ ಸಮಿತಿಯಲ್ಲಿದ್ದ ಇಬ್ಬರು ಸಾವನ್ನಪ್ಪಿದರು. ಆಗ ಎಚ್.ಎನ್. ಹೇಳಿದ್ದು ಏನು ಗೊತ್ತೆ... ಅಲ್ಲ ಇವರನ್ನು ಸೆಂಡ್‌ಆಫ್ ಕಮಿಟಿಗೆ ಮೆಂಬರ್ ಮಾಡಿದ್ರೆ, ನನಗಿಂತ ಮೊದಲೇ ಮೇಲೆ ಹೋಗಿ, ರಿಸೆಪ್‌ಷನ್ ಕಮಿಟಿ ರಚನೆ ಮಾಡಿದ್ದಾರೆ... (ಈ ಘಟನೆ ಸ್ಮರಿಸಿಕೊಂಡವರು, ಡಾ. ಮಹೇಶ್ ಜೋಶಿ, ಹಿರಿಯ ನಿರ್ದೇಶಕರು, ದೂರದರ್ಶನ ಕೇಂದ್ರ, ಬೆಂಗಳೂರು) ಜೋಕಿನ ಜೋಕು ಗುಂಡನ ಬಾಸ್ ಗೆ ಜೋಕು ಹೇಳುವ ಚಪಲ. ಆದರೆ ಅವರಿಗೆ ಗೊತ್ತಿದ್ದು ಒಂದೇ ಒಂದು ಕೆಟ್ಟ ಜೋಕು. ಪದೇಪದೇ ಅದನ್ನೇ ಹೇಳುತ್ತಿದ್ದರು. ಆದರೂ ಗುಂಡ ಗಹಗಹಿಸಿ ನಗುತ್ತಿದ್ದ. ಇದನ್ನು ನೋಡಿದ ವ್ಯಕ್ತಿಯೊಬ್ಬರು, ಗುಂಡನನ್ನು ಪಕ್ಕಕ್ಕೆ ಕರೆದು ಕೇಳಿದ್ರು. ಎನ್ ಸಾರ್ ಅಷ್ಟು ಜೋರಾಗಿ ನಕ್ತಾ ಇದ್ದೀರಿ. ಆ ಜೋಕು ಕೇಳಿದ್ರೆ ನಗೂನೇ ಬರಲ್ಲ? ಜೊತೆಗೆ ಅವನು ಹೇಳಿದ ಜೋಕೇ ಹೇಳ್ತಾ ಇದ್ದಾನೆ ಆದ್ರೂ ನೀವು ನಕ್ತಾನೇ ಇದ್ದೀರಿ ಏಕೆ ಎಂದು ಪ್ರಶ್ನಿಸಿದರು. ಗುಂಡ ಹೇಳಿದ ಏನ್ ಮಾಡ್ಲಿ ಸ್ವಾಮಿ, ಅವರು ನನ್ನ ಬಾಸ್. ನಾನು ಈಗ ನಗದೇ ಇದ್ರೆ ಅವರು ಮತ್ತೆ ಅದೇ ಜೋಕನ್ನು ಇನ್ನೂ ನಾಲ್ಕಾರು ಸಾರಿ ಹೇಳ್ತಾರೆ ಅದಕ್ಕೆ ವಿಧಿ ಇಲ್ಲದೆ ನಕ್ತಾನೇ ಇರ್ತೀನಿ. ಪುಸ್ತಕ ಓದಿ ಸೊಸೆ ಮಾಡಿದ ಅಡುಗೆ... ಮದುವೆಯಾಗಿ ಮನೆ ತುಂಬಿಸಿಕೊಂಡ ಸಾಫ್ಟ್‌ವೇರ್ ಸೊಸೆಗೆ ಅಡಿಗೆ ಮಾಡಕ್ಕೆ ಬರಲ್ಲ ಅಂತ ಅತ್ತೆ ದಿನಾ ದೂರುತ್ತಿದ್ರು. ಕೊನೆಗೊಂಡು ದಿನ ಸೊಸೆ ಒಂದು ಅಡುಗೆ ಪುಸ್ತಕ ತಂದು. ಅಡುಗೆ ಮಾಡಲು ಆರಂಭಿಸಿದಳು. ಚಪಾತಿ ಹಿಟ್ಟು ಕಲೆಸಿ, ಅದರ ಮೇಲೆ ದೇವರ ಗೂಡಲ್ಲಿದ್ದ ಗಂಟೆ ತೆಗೆದು ಇಟ್ಟಳು. ಇದರಿಂದ ಸಿಡಿಮಿಡಿಗೊಂಡ ಅತ್ತೆ ಕೇಳಿದ್ರು. ಏನಮ್ಮ ದೇವರ ಪೂಜೆಗೆ ಬಾರಿಸೋ ಗಂಟೆನ ತೆಗೆದು ಚಪಾತಿ ಹಿಟ್ಟಿನ ಮೇಲೆಕೆ ಇಟ್ಟೆ. ನಿಮಗೆ ಒಂಚೂರೂ ಮಡಿ, ಮೈಲಿಗೆ ಇಲ್ಲ. ಸೊಸೆ ಅಷ್ಟೇ ನಯವಾಗಿ ಉತ್ತರಕೊಟ್ಲು. ಪುಸ್ತಕದಲ್ಲಿ ಚಪಾತಿ ಹಿಟ್ಟು ಕಲೆಸಿ ಒಂದು ಗಂಟೆ ಇಡಿ ಅಂತ ಬರೆದಿದ್ದಾರೆ ಗೊತ್ತಾ.... ಅದಕ್ಕೆಲ್ಲಾ ಹೆದರಲ್ಲ ೭೫ ವರ್ಷದ ವೃದ್ಧ ನಾಲ್ಕನೇ ಮದುವೆ ಸಿದ್ಧತೆ ನಡೆಸಿದ್ದ. ತಾತನ ಈ ನಿರ್ಧಾರದಿಂದ ಬೇಸತ್ತ ಮೊಮ್ಮಗ ಧೈರ್ಯ ಮಾಡಿ ಹೇಳಿದ. ತಾತಾ ನೀವು ಮದುವೆ ಆಗ್ತಿರೋ ಹುಡುಗೀಗೆ ಕೇವಲ ೨೧ ವರ್ಷ. ಈ ವಯಸ್ಸಿನಲ್ಲಿ ನೀವು ಮದುವೆ ಆಗೋದು ತರವಲ್ಲ. ನಿಮ್ಮ ದಾಂಪತ್ಯ ದುರಂತದಲ್ಲಿ ಕೊನೆಯಾಗಬಹುದು ಎಚ್ಚರ!!! ತಾತ ಉತ್ತರ ಕೊಟ್ಟ ನಾನು ಅದಕ್ಕೆಲ್ಲಾ ಹೆದರಲ್ಲ. ಅವಳು ಸತ್ತರೆ ಮತ್ತೊಂದು ಮದುವೆ ಆಗೇ ಆಕ್ತೀನಿ. ಅಮ್ಮನಿಗೆ ಮಗಳ ಸಜೆಷನ್ ಖ್ಯಾತ ಚಿತ್ರನಟಿಯೊಬ್ಬಳು ಸತತ ಹದಿನೆಂಟನೇ ಬಾರಿ ತನ್ನ ೧೮ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಳು. ಈ ಶುಭ ಸಂದರ್ಭದಲ್ಲಿ ಆಕೆಯ ೧೮ ವರ್ಷದ ಮಗಳೊಂದು ಸಜೆಷನ್ ಕೊಟ್ಲು. ಮಮ್ಮಿ ಆಟ್‌ಲೀಸ್ಟ್ ನನಗಿಂತ ಒಂಬತ್ತು ತಿಂಗಳಾದ್ರೂ ನಿನ್ನ ವಯಸ್ಸು ಜಾಸ್ತಿ ಹೇಳು.... ಅರೇಂಜ್ ಲೋಕಲಿ... ಅದೊಂದು ಹಳ್ಳಿಯ ಬ್ಯಾಂಕ್, ಸ್ಟಾಫ್ ಸಂಖ್ಯೆ ಕಡಿಮೆ. ಯಾರಾದರೂ ರಜೆ ಹೋದರೆ, ಬದಲಿ ವ್ಯವಸ್ಥೆ ಮಾಡುವುದು ವಾಡಿಕೆ. ಒಮ್ಮೆ ಒಬ್ಬ ಉದ್ಯೋಗಿಯ ಹೆಂಡತಿ ಕಾಯಿಲೆ ಮಲಗಿದರು. ಇಂಗ್ಲಿಷ್ ಅಷ್ಟಾಗಿ ಬಾರದ ಆತ ಕೂಡಲೆ ಹೆಡ್ ಆಫೀಸ್‌ಗೆ ಹೀಗೆ ಟೆಲಿಗ್ರಾಂ ಕೊಟ್ಟ... ಸಾರ್ ಮೈ ವೈಫ್ ಈಸ್ ಇಲ್. ಪ್ಲೀಸ್ ಅರೇಂಜ್ ಸಬ್‌ಸ್ಟಿಟ್ಯೂಟ್.. ಹೆಡ್ ಆಫೀಸ್‌ನಿಂದ ಟೆಲಿಗ್ರಾಂ ರಿಪ್ಲೆ ಬಂತು... ಅದರಲ್ಲಿ ಹೀಗೆ ಬರೆದಿತ್ತು... ಸಾರಿ... ಯು.. ಪ್ಲೀಸ್ ಅರೇಂಜ್ ಲೋಕಲಿ... ಎಲ್ಲಾ ಬಿಡ್ತೀನಿ ಗುಂಡಾ ಒಂದೇ ಹುಡುಗೀನ ೫ ವರ್ಷದಿಂದ ಪ್ರೀತಿಸ್ತಾ ಇದ್ದ. ಕೊನೆಗೂ ಇಬ್ರೂ ಮದುವೆ ಆಗೋ ನಿರ್ಧಾರ ಮಾಡಿದ್ರು. ಆ ಹುಡುಗಿ ಕೇಳಿದ್ಲು. ನಾನು ನಿನ್ನ ಮದುವೆ ಆಗಕ್ಕೆ ಸಿದ್ಧ ಆದರೆ ನೀನು ಸಿಗರೇಟ್ ಸೇದೋದು ಬಿಡ್ತೀಯಾ? ಗುಂಡ ಓಕೆ ಎಂದ. ಕುಡಿಯೋದೂ ಬಿಡ್ತಾಯಾ ? ಗುಂಡ ವಿ ಇಲ್ಲದೆ ಸರಿ ಎಂದ. ಇಸ್ಪೀಟ್ ಆಡೋದು? ಖಂಡಿತಾ ಬಿಡ್ತೀನಿ ಅಂದ ಗುಂಡ. ಹುಡುಗಿ ಮತ್ತೆ ಕೇಳಿದ್ಲು ನನ್ನ ಮದುವೆ ಆಗಕ್ಕೆ ನೀನು ಇನ್ನೂ ಏನೇನು ಬಿಡ್ತೀಯಾ ? ಗುಂಡ ಹೇಳ್ದ ಮದ್ವೆ ಆಗೋ ಯೋಚನೇನೇ ಬಿಟ್ಟು ಬಡ್ತೀನಿ. ಮಾರಾಟ ಒಬ್ಬಾಕೆ. ತನ್ನ ಮೃತ ಪತಿಯ ಬೆನ್ಜ್ ಕಾರನ್ನು ಕೇವಲ ೧ ರುಪಾಯಿಗೆ ಮಾರಾಟ ಮಾಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದಳು. ಇದನ್ನು ನೋಡಿದ ಹಿತೈಷಿಗಳು ಕೇಳಿದರು. ಅಲ್ಲಾ ಮೇಡಂ ಈ ಕಾರನ್ನು ಕಳ್ಳನಿಗೆ ಕೊಟ್ಟರೂ ಒಂದು ಲಕ್ಷಾಂತರ ರುಪಾಯಿ ಕೊಡ್ತಾನೆ. ಅಂತಹುದರಲ್ಲಿ ಬರಿ ೧ ರುಪಾಯಿಗೆ ಏಕೆ ಮಾರುತ್ತಾ ಇದ್ದೀರಿ? ಆಕೆ ಉತ್ತರಿಸಿದಳು: ಏನು ಮಾಡ್ಲೀ ಹೇಳಿ. ನನ್ನ ಗಂಡ ವಿಲ್‌ನಲ್ಲಿ ಈ ಕಾರನ್ನು ಮಾರಿ, ಬರುವ ಹಣವನ್ನು ಅವರ ಲೇಡಿ ಸೆಕ್ರೇಟರಿಗೆ ಕೊಡಲು ಹೇಳಿದ್ದಾರೆ. ಈಗೆಷ್ಟೋ ಪರವಾಗಿಲ್ಲ ಏಕೋಪಾಧ್ಯಾಯ ಶಾಲೆಗೆ ಇನ್‌ಸ್ಪೆಕ್ಟರ್ ಬಂದಿದ್ರು. ಆಗ ಆರನೇ ಕ್ಲಾಸಲ್ಲಿ ಗಣಿತ ಪಾಠ ನಡೀತಿತ್ತು. ಇನ್‌ಸ್ಪೆಕ್ಟರ್ ಕೇಳಿದ್ರು ಏನ್ರೀ ಮೇಸ್ಟ್ರೇ ಹೇಗೆ ಪಾಠ ಮಾಡಿದ್ದೀರಿ. ಮೇಸ್ಟ್ರಂದ್ರು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀನಿ ಸಾರ್. ಬೇಕಾದ್ರೆ ನೀವೇ ಪರೀಕ್ಷೆ ಮಾಡಿ.. ಓಕೆ. ಎಂದ ಇನ್‌ಸ್ಪೆಕ್ಟರ್ ಒಬ್ಬ ಹುಡುಗನ್ನ ಕೇಳಿದ್ರು ನಾಲ್ಕ ನಾಲ್ಕಿ ಎಷ್ಟು.? ಹುಡುಗ ಹೇಳಿದ ೧೬೦೦ ಸಾರ್. ಗಾಬರಿ ಆದ ಇನ್‌ಸ್ಪೆಕ್ಟರ್ ಮತ್ತೊಬ್ಬ ಹುಡುಗನ್ನ ಕೇಳಿದ್ರು ಎಂಟೆಂಟ್ನಿ ಎಷ್ಟೋ ? ಅವ ಹೇಳ್ದ ೬೪,೦೦೦ ಸಾರ್. ಸಿಟ್ಟಾದ ಇನ್‌ಸ್ಪೆಕ್ಟರ್ ಕೇಳಿದ್ರು ಇದೇ ಏನ್ರೀ ಮೇಸ್ಟ್ರೇ ನೀವು ಮಕ್ಳಿಗೆ ಹೇಳಿಕೊಟ್ಟಿರೋದು. ಎಲ್ಲಾ ಸಾವಿರಗಟ್ಲೇ ಹೇಳ್ತಾರಲ್ರೀ. ಸಮಾಧಾನದಿಂದ ಮೇಸ್ಟ್ರು ಹೇಳಿದ್ರು. ಈಗೆಷ್ಟೋ ಪರವಾಗಿಲ್ಲ ಸಾರ್ ನಾನು ಬಂದ ಹೊಸದ್ರಲ್ಲಿ ಲಕ್ಷಗಟ್ಲೆ ಹೇಳ್ತಿದ್ರು. ನಾನು ಸಾವಿರಕ್ಕೆ ಇಳ್ಸಿದೀನಿ. ನಾಟಕಕ್ಕೆ ಬರಲು ಕಾರಣ ಕಲಾಕ್ಷೇತ್ರವೊಂದರಲ್ಲಿ ನಾಟಕ ನಡೆಯುತ್ತಿತ್ತು. ಪ್ರವೇಶ ಉಚಿತ. ಕಾರ್ಯಕ್ರಮ ಸಂಯೋಜಕರು ಹೊರಗೆ ಒಂದು ಪುಸ್ತಕ ಇಟ್ಟು ನೀವು ಈ ನಾಟಕಕ್ಕೆ ಬರಲು ಕಾರಣ ಏನು? ಎಂಬ ಪ್ರಶ್ನೆ ಕೇಳಿ ವೀಕ್ಷಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಮಹಿಳೆಯೊಬ್ಬರು ಆ ಪ್ರಶ್ನೆಗೆ ಹೀಗೆ ಉತ್ತರ ಬರೆದಿದ್ದರು. ಹೊರಗೆ ಜೋರು ಮಳೆ ಬರುತ್ತಿತ್ತು. ಹೀಗಾಗಿ ವಿಧಿ ಇಲ್ಲದೆ ಒಳಗೆ ಬಂದೆ. ನಿಂದೇ ಪರ್ವಾಗಿಲ್ಲ.. ಇಬ್ಬರು ಸ್ನೇಹಿತರು ಮಾತಾಡ್ತಾ ಇದ್ರು. ಒಬ್ಬ ಹೇಳ್ದಾ ನೋಡಯ್ಯಾ ಮೊನ್ನೆ ನಾನೂ ನನ್ನ ಹೆಂಡತಿ ಮನೆಗೆ ಬರೋವಾಗ ಸಣ್ಣ ಕಲ್ಲೊಂದು ನನ್ನ ಹೆಂಡತಿ ಕಣ್ಣಿಗೆ ಬಿತ್ತು. ಅದನ್ನ ತೆಗೆಸಕ್ಕೆ ಡಾಕ್ಟ್ರಗೆ ೧೦೦ ರುಪಾಯಿ ಖರ್ಚಾಯ್ತು.ಎರಡನೆಯವ ಹೇಳಿದ ನಿಂದೇ ಪರ್ವಾಗಿಲ್ಲ. ನಿನ್ನ ಹೆಂಡ್ತಿ ಕಣ್ಣಿಗೆ ಕಲ್ಲು ಬಿತ್ತು. ಆದರೆ, ನನ್ನ ಹೆಂಡತಿ ಕಣ್ಣಿಗೆ ರೇಷ್ಮೆ ಸೀರೆ ಬಿತ್ತು. ಅದನ್ನು ತೆಗಸಿಕೊಡಕ್ಕೆ ೫೦೦೦ ಖರ್ಚಾಯ್ತು. ಯಾರನ್ನೂ ಮುಟ್ಟಲ್ಲ ಗುಂಡ ಕಟಕಟೆಯಲ್ಲಿ ಸಾಕ್ಷಿ ಹೇಳಲು ಬಂದು ನಿಂತಿದ್ದ. ವಕೀಲರು ಕೋರ್ಟ್‌ನಲ್ಲಿ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಗೀತೆಯನ್ನು ಮುಟ್ಟಿ ಪ್ರಮಾಣ ಮಾಡು ಎಂದರು. ಕೂಡಲೆ ಗುಂಡ ಹೇಳಿದ. ಬೇಡ ಸ್ವಾಮಿ. ಖಂಡಿತ ಬೇಡ. ನಾನು ಯಾರನ್ನೂ ಮುಟ್ಟಲ್ಲ. ಕಳೆದ ವರ್ಷ ಗೊತ್ತಿಲ್ದೆ ಆ ಲಕ್ಷ್ಮೀನ ಮುಟ್ಟಿ, ಪಂಚಾಯ್ತಿಲಿ ಛಡಿ ಏಟು ತಿಂದಿದ್ದೆ. ಇಲ್ಲಿ ನಾನು ಯಾವ ಗೀತನ್ನೂ ಮುಟ್ಟಲ್ಲ , ನನ್ನ ಬಿಟ್ಟು ಬಿಡಿ, ನಾನು ಹಳ್ಳಿಗೆ ಹೋಗ್ತೀನಿ ಅಂದ. ನೆಂಟಸ್ಥನ ಮೀನನ್ನ, ಕನಕ ಕೇಳಿದ್ಲು. ಆ ಕೊನೆ ಮನೆಗೆ ಹೊಸದಾಗಿ ಬಂದಿದ್ದಾರಲ್ಲ ಅವರು ನಿಮಗೆ ನೆಂಟ್ರಾಗಬೇಕಂತೆ ಹೇಗೆ? ಮೀನಾ ಹೇಳಿದ್ಲು... ಓ ಅದ. ಅವರ ಮನೆ ನಾಯಿ ಟಾಮೀನೂ, ನಮ್ಮನೆ ನಾಯಿ ಬ್ರೌನಿನೂ ಅವಳಿ ಜವಳಿ. ಮನುಷ್ಯನ ಆಯಸ್ಸು - ಏಷ್ಟು - ಏನು? ಸೃಷ್ಟಿಕರ್ತನಾದ ಬ್ರಹ್ಮದೇವ, ಸೃಷ್ಟಿ ಕಾರ್ಯ ಆರಂಭಿಸಿದ ಹೊಸತರಲ್ಲಿ ಮನುಷ್ಯನಿಗೆ, ಕತ್ತೆಗೆ, ನಾಯಿಗೆ ಹಾಗೂ ಗೂಬೆಗೆ ೪೦- ೪೦ ವರ್ಷ ವಯಸ್ಸು ನಿಗ ಮಾಡಿದನಂತೆ, ಗಾಬರಿಗೊಂಡ ಈ ಮೂರು ಪ್ರಾಣಿಗಳು ಬ್ರಹ್ಮನ ಬಳಗೆ ಡೆಲಿಗೇಷನ್ ಹೋಗಿ, ತಂದೆಯೇ ಮನುಷ್ಯನಿಗೆ ಮಾತು ಹೇಳಿಕೊಟ್ಟಿರುವೆ, ಬುದ್ಧಿ ಕೊಟ್ಟಿರುವೆ ಅವನಿಗೂ ನಮಗೂ ೪೦ -೪೦ ವರ್ಷ ವಯಸ್ಸು ಕೊಟ್ಟರೆ, ಅವನು ನಮ್ಮನ್ನು ಶೋಷಿಸುತ್ತಾನೆ. ದಯಮಾಡಿ ನಮ್ಮ ಅರ್ಧ ಆಯಸ್ಸು ಕಡಿಮೆ ಮಾಡು ಎಂದು ಕೋರಿದವಂತೆ. ಬ್ರಹ್ಮ ಆಗಬಹುದು. ಆದರೆ ನಿಮ್ಮ ಅರ್ಧ ಆಯಸ್ಸನ್ನು ಮನುಷ್ಯ ತೆಗೆದುಕೊಂಡರೆ ಮಾತ್ರ ಅದು ಸಾಧ್ಯ ಎಂದನಂತೆ. ಪ್ರಾಣಿಗಳೆಲ್ಲ ಮನುಷ್ಯನನ್ನು ಕೋರಿದವಂತೆ.ಮನುಷ್ಯ ಓಕೆ ಎಂದ. ಅಂದಿನಿಂದ ಕತ್ತೆ, ನಾಯಿ, ಗೂಬೆಗೆ ೨೦ ವರ್ಷವಷ್ಟೇ ಆಯಸ್ಸು. ಮನುಷ್ಯನಿಗೆ ನೂರು. ಅದಕ್ಕೆ ಮನುಷ್ಯ ೪೦ ವರ್ಷ ಮನುಷ್ಯನಾಗೇ ಬದುಕುತ್ತಾನೆ. ೪೦ರಿಂದ ೬೦ ವರ್ಷ ಕತ್ತೆಯದು, ಅದಕ್ಕೆ ಮನೆ ಕಟ್ಟಬೇಕು, ಮಗಳ ಮದುವೆ ಮಾಡಬೇಕು ಎಂದು ಕತ್ತೆಯಂತೆ ದುಡಿಯುತ್ತಾನೆ. ೬೦ರಿಂದ ೮೦ತ್ತು ನಾಯಿಯ ವಯಸ್ಸು, ರಿಟೈರ್ ಬೇರೆ ಆಗಿರುತ್ತಾನೆ, ಮಾಡಲು ಕೆಲಸ ಇಲ್ಲ ಹೀಗಾಗಿ ನಾಯಿಯಂತೆ ಅಲೆಯುತ್ತಾನೆ. ಇನ್ನು ೮೦ರಿಂದ ೧೦೦ ಗೂಬೆಯ ವಯಸ್ಸು, ಕೈಲಾಗದೆ ಮೂಲೆಯಲ್ಲಿ ಗೂಬೆಯಂತೆ ಕುಳಿತಿರುತ್ತಾನಂತೆ. ಸ್ನೇಹಿತರು ಖಾಸಗಿ ಟಿ.ವಿ ಚಾನೆಲ್‌ನಲ್ಲಿ ಕೋಟ್ಯಪತಿಯೊಬ್ಬರ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗ್ತಿತ್ತು. ಸಂದರ್ಶಕರು ಕೇಳಿದರು. ಬಡವರಾಗಿದ್ದ ನೀವು ಈಗ ಶ್ರೀಮಂತರಾಗಿದ್ದೀರಿ. ನೀವು ಬಡವರಾಗಿದ್ದಾಗ ಇದ್ದ ನಿಮ್ಮ ಹಳೆ ಸ್ನೇಹಿತರು, ಈಗ ಬಂದು ತೊಂದರೆ ಕೊಡುವುದಿಲ್ಲವೇ? ಶ್ರೀಮಂತ ಉತ್ತರಿಸಿದ. ಇಲ್ಲ. ನಾನು ಬಡವನಾಗಿದ್ದಾಗ ನನಗೆ ಯಾರೂ ಸ್ನೇಹಿತರೇ ಇರಲಿಲ್ಲ. ದೀರ್ಘಸೇವೆಯ ರಹಸ್ಯ ಒಂದು ದಿನ ಗುಂಡ ತನ್ನ ಅಂಗಡಿ ಮಾಲಿಕನಿಗೆ ಕೇಳಿದ. ಸಾರ್ ನಾನು ಕಳೆದ ೨೦ ವರ್ಷದಿಂದ ನಿಮ್ಮ ಅಂಗಡೀಲಿ ನಿಷ್ಠೆಯಿಂದ ಕೆಲಸ ಮಾಡ್ತಾ ಇದ್ದೀನಿ. ಎಂದಾದ್ರೂ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದೀನಾ.. ಈಗ.... ಎಂದು ತೊದಲಿದ. ಮಾಲಿಕ ಅಂದ ನೀನು ಸಂಬಳ ಜಾಸ್ತಿ ಕೇಳ್ದೇ ಇರೋದಕ್ಕೇ ಇಷ್ಟು ದಿನ ಇಲ್ಲಿ ಕೇಲಸ ಮಾಡ್ತಾ ಇರೋದು ಗುಂಡನ ಲಾಜಿಕ್ಕು... ಗುಂಡ ಕನ್ನಡಕದಂಗಡಿಗೆ ಹೋದ. ಅಂಗಡಿಯವ ಹೇಳಿದ. ನೋಡಿ ಈ ಕನ್ನಡಕ ಹಾಕ್ಕೊಳ್ಳಿ ನೀವು ಏನು ಬೇಕಾದರೂ ಓದಬಹುದು. ಗುಂಡ ಕೇಳಿದ ಈ ಕನ್ನಡಕ ಹಾಕ್ಕೊಂಡ್ರೆ ಇಂಗ್ಲಿಷ್ ಓದಬಹುದಾ? ಅಂಗಡಿಯವ ಹೇಳಿದ, ಇಂಗ್ಲಿಷೇನು, ತೆಲುಗು, ತಮಿಳು, ಕನ್ನಡ ಯಾವ ಭಾಷೆ ಬೇಕಾದ್ರೂ ಓದಬಹುದು. ಗುಂಡ ಹೇಳಿದ ಅಯ್ಯೋ ದೇವ್ರೆ... ಈ ಕನ್ನಡಕ ಹಾಕ್ಕೊಂಡ್ರೆ ಅಷ್ಟೊಂದು ಭಾಷೆ ಓದಬಹುದಾ? ಹಾಗಾದ್ರೆ ನನಗೆ 6 ಕನ್ನಡಕ ಕೊಡಿ, ನಮ್ಮನೇಲಿ ಯಾರಿಗೂ ಓದಕ್ಕೆ, ಬರೆಯಕ್ಕೆ ಬರಕ್ಕಿಲ್ಲ.... ನಗಲು ಅವಕಾಶವನ್ನೇ ಕೊಡಲ್ಲ ಮೀನಳಿಗೆ ಮದುವೆ ಫಿಕ್ಸ್ ಆಗಿತ್ತು. ಆಕೆಯ ಗೆಳತಿ ಹೇಳಿದಳು. ಹುಡುಗ ಚೆನ್ನಾಗೇನೋ ಇದ್ದಾನೆ ಕಣೆ. ಆದರೆ, ಅವನು ನಕ್ಕರೆ ಮಾತ್ರ ಆ ಉಬ್ಬಹಲ್ಲು ಕೆಟ್ಟದಾಗಿ ಕಾಣತ್ತೆ. ಮೀನ ಹೇಳಿದ್ಲು. ಪರ್ವಾಗಿಲ್ಲ ಬಿಡು ಮದುವೆ ಆದ್‌ ಮೇಲೆ ನಾನು ಅವನಿಗೆ ನಗಲು ಅವಕಾಶವನ್ನೇ ನೀಡಲ್ಲ. ಕಪ್ಪಗೆ ಮಾಡು... ಎಪ್ಪತ್ತು ವರ್ಷದ ಬೊಕ್ಕುತಲೆಯ ಬೋಡ ತೈಲ ಕಂಪನಿಯೊಂದರ ಹೊಸ ಕೇಶತೈಲ ಬಳಸಿದ. ಆತನ ತಲೆಯಲ್ಲಿ ನಾಲ್ಕು ಬಿಳಿ ಕೂದಲು ಮೊಳೆತೇ ಬಿಟ್ಟವು. ಬಹಳ ಸಂತೋಷದಿಂದ ನಾಲ್ಕು ಕೂದಲಿನ ಬೋಡ.. ಕಟ್ಟಿಂಗ್‌ಷಾಪ್‌ಗೆ ಹೋದ. ಈ ಬೋಡನ ನೋಡಿ ನಗು ತಡೆಯಲಾರದ ಕಟಿಂಗ್‌ಷಾಪ್ ಮಾಲಿಕ ಕೇಳ್ದ. ಏನ್ ತಾತಾ ನಾನು ಕೂದಲು ಎಣಿಸಬೇಕೋ ಅಥವಾ ಹೇರ್ ಸೆಟ್ಟಿಂಗ್ ಮಾಡಬೇಕೋ... ತಾತ ಹೇಳಿದ... ಎರಡೂ ಬೇಡ.. ನನ್ನ ಕೂದಲಿಗೆ ಡೈ ಮಾಡು. ರೋಗಿಗಳ ಬಳಿಯೆಲ್ಲಾ ಒಂದೇ ಕಾದಂಬರಿ.. ಸಾಹಿತಿಯೊಬ್ಬರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದರು. ವಾರ್ಡಿನಲ್ಲಿ ಎಲ್ಲ ರೋಗಿಗಳ ಪಕ್ಕದಲ್ಲೂ ಇವರು ಬರೆದ ಕಾದಂಬರಿ ಇತ್ತು. ಇದನ್ನು ನೋಡಿ, ತೀವ್ರ ಆನಂದಗೊಂಡ ಸಾಹಿತಿ ವೈದ್ಯರನ್ನು ಕೇಳಿದರು. ಏನ್‌ಸಾರ್ ಈ ಆಸ್ಪತ್ರೇಲಿ ಎಲ್ಲರಿಗೂ ಇದೇ ಕಾದಂಬರಿ ಕೊಟ್ಟಿದ್ದೀರಲ್ಲ. ಇದು ಅಷ್ಟು ಚೆನ್ನಾಗಿದೆಯೇ.. ವೈದ್ಯರು ಹೇಳಿದರು. ಅದರ ಗುಟ್ಟೇ ಬೇರೆ. ಇವರೆಲ್ಲಾ ನಿದ್ದೇ ಬಾರದಿರೋ ರೋಗಿಗಳು. ಎಷ್ಟೇ ಸ್ಲೀಪಿಂಗ್ ಟ್ಯಾಬ್‌ಲೆಟ್ ಕೊಟ್ರು ಇವರಿಗೆ ನಿದ್ದೇನೆ ಬರ್ತಿರಲಿಲ್ಲ. ಈ ಕಾದಂಬರಿ ಕೊಟ್ವಿ ನೋಡಿ ಎಲ್ಲರೂ ಐದೇ ನಿಮಿಷಕ್ಕೆ ನಿದ್ದೇ ಮಾಡ್ತಾರೆ... ವೆರಿ ಅಕೇಶನಲಿ ಹೈಫೈ ಹುಡುಗಿಯೊಬ್ಬಳು ಕಾಲೇಜಿಗೆ ಸೇರಲು ಅಪ್ಲಿಕೇಷನ್ ಭರ್ತಿ ಮಾಡುತ್ತಿದ್ದಳು. ನೇಮ್, ಅಡ್ರೆಸ್ ಫಿಲ್ ಮಾಡಿದ ಬಳಿಕ sex ಎಂದಿದ್ದ ಕಾಲಂನಲ್ಲಿ ಏನು ಬರೆಯಬೇಕು ಎಂದು ಯೋಚಿಸಿ, ಯೋಚಿಸಿ ಕೊನೆಗೆ ಹೀಗೆ ಬರೆದಳು. ವೆರಿ ಅಕೇಶನಲಿ. ಅಭ್ಯಾಸಬಲ ಬಿಟಿಎಸ್ ಬಸ್ ಡ್ರೈವರ್ ಆಗಿದ್ದ ಗುಂಡ, ಕಷ್ಟ ಪಟ್ಟು ಟ್ರೈನಿಂಗ್ ಮಾಡಿ ಫೈಲಟ್ ಆಗೇ ಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವ ಇದ್ದಕ್ಕಿದ್ದ ಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅಭ್ಯಾಸ ಬಲದಂತೆ ಗುಂಡ ಹೇಳ್ದ, ರೀ ಎಲ್ಲ ಕೆಳಗೆ ಇಳಿದು ಸ್ವಲ್ಪ ದೂರ ತಳ್ಳಿ.. ಎಂಜಿನ್ ಆಫ್ ಆಗಿದೆ ಪೆದ್ದ ಗುಂಡನ ತರ್ಕ ಪೆದ್ದ ಗುಂಡ ಸ್ಟ್ರೀಟ್ ಲೈಟ್ ಕೆಳಗೆ ಏನೋ ಹುಡುಕುತ್ತಿದ್ದ. ಅದನ್ನು ನೋಡಿದ ಪಾದಚಾರಿಯೊಬ್ಬರು ಕೇಳಿದರು. ಏನು ಸ್ವಾಮಿ ಏನು ಹುಡುಕುತ್ತಿದ್ದೀರಿ. ಗುಂಡ ಹೇಳಿದ ಪಕ್ಕದ ಬೀದೀಲಿ ನನ್ನ ಪರ್ಸ್ ಬಿದ್ದು ಹೋಯ್ತು ಅದನ್ನು ಇಲ್ಲಿ ಹುಡುಕುತ್ತಿದ್ದೇನೆ. ಪಾದಚಾರಿ ಹೇಳಿದ್ರು. ಅಲ್ರೀ ಪಕ್ಕದ ಬೀದಿಲಿ ಪರ್ಸ್‌ಬಿದ್ರೆ. ಇಲ್ಲಿ ಹುಡುಕುದ್ರೆ ಸಿಗತ್ತಾ... ಗುಂಡ ಹೇಳ್ದ ನನ್ನನ್ನೇನು ಅಷ್ಟು ದಡ್ಡ ಅಂದುಕಂಡ್ರ. ಪಕ್ಕದ ಬೀದಿಲಿ ಕರೆಂಟೇ ಇಲ್ಲ. ಕತ್ತಲಲ್ಲಿ ಬಿದ್ದಿರೋದು ಸಿಗತ್ತಾ... ಅದಕ್ಕೆ ಲೈಟ್ ಇರೋಕಡೆ ಹುಡುಕುತ್ತಿದ್ದೇನೆ. ಮೆಂತೆಸೊಪ್ಪಿನ ವಡೆ ಬೇಕಾಗುವ ಪದಾರ್ಥ :೪ ಲೋಟದಷ್ಟು ಕಡಲೆ ಹಿಟ್ಟು, ೬ ಕಟ್ಟು ಮೆಂತೆಸೊಪ್ಪು, ೧ ಕಟ್ಟು ಕೊತ್ತಂಬರಿಸೊಪ್ಪು, ೧೦- ೧೨ ಹಸಿ ಮೆಣಸಿನಕಾಯಿ, ೧ ಚಮಚ ಜೀರಿಗೆ ಪುಡಿ, ೧ ಚಮಚದಷ್ಟು ಖಾರಾಪುಡಿ, ೪ ಆಲೂಗೆಡ್ಡೆ, ಕರಿಬೇವಿನ ಎರಡು ಮೂರು ಎಸಳು, ಕಾಲು ಚಮಚದಷ್ಟು ಅಡಿಗೆ ಸೋಡ, ಚಿಟಿಕೆ ಇಂಗು ಮತ್ತು ಕರಿಯಲು ಎಣ್ಣೆ. ತಯಾರಿಸುವ ವಿಧಾನ : ಮೊದಲು ಮೆಂತೆ ಸೊಪ್ಪು, ಆಲೂಗೆಡ್ಡೆಯನ್ನು ನೀರಲ್ಲಿ ತೊಳೆದು ಸಣ್ಣಗೆ ಹೆಚ್ಚಿ ಪಾತ್ರೆಯೊಂದರಲ್ಲಿ ಹಾಕಿ. ಅದಕ್ಕೆ ಅರ್ಧ ಲೋಟ ನೀರು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಣ್ಣ ಉರಿಯ ಒಲೆಯ ಮೇಲೆ ಐದು ನಿಮಿಷ ಇಟ್ಟು ಬೇಯಿಸಿ. ಆನಂತರ ಹಸಿ ಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಕರಿಬೇವನ್ನು ಸಣ್ಣಗೆ ಹೆಚ್ಚಿಟ್ಟುಕೊಂಡು ಅದನ್ನು ಕಡಲೇ ಹಿಟ್ಟಿನೊಂದಿಗೆ ಸೇರಿಸಿ, ಇಂಗು, ಜೀರಿಗೆ ಬೆರೆಸಿ ಕಡಲೇ ಹಿಟ್ಟಿನೊಂದಿಗೆ ಕಲೆಸಿ, ಆನಂತರ ಬೆಂದ ಮೆಂತೆಸೊಪ್ಪು, ಆಲೂಗೆಡ್ಡೆಯನ್ನು ಕಡಲೆ ಹಿಟ್ಟಿನ ಮಿಶ್ರಣಕ್ಕೆ ಬೆರೆಸಿ. ಅದಕ್ಕೆ ಅಡಿಗೆ ಸೋಡ, ಕಾರಾಪುಡಿ ಮತ್ತು ನೀರು ಸೇರಿಸಿ ಹದವಾಗಿ ಕಲೆಸಿ. ಆ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ನಂತರ ತಟ್ಟಿ (ಸಣ್ಣ ಉರಿ) ಕಾದ ಎಣ್ಣೆಯ ಬಾಣಲೆಯಲ್ಲಿ ಕರಿದರೆ ಬಿಸಿಬಿಸಿ ಮೆಂತೆಸೊಪ್ಪಿನ ವಡೆ ಸಿದ್ಧ. ಅಲಸಂದೆ ವಡೆ ಬೇಕಾಗುವ ಪದಾರ್ಥ: 2 ಲೋಟದಷ್ಟು ಅಲಸಂದೆ ಕಾಳು, ಒಂದು ಕಟ್ಟು ಸಬ್ಬಸಿಗೆ ಸೊಪ್ಪು, ಅರ್ಧ ಲೋಟ ಉದ್ದಿನಬೇಳೆ, ನಾಲ್ಕೈದು ಆಲೂಗೆಡ್ಡೆ, 1 ಕಟ್ಟಷ್ಟು ಕೊತ್ತಂಬರಿ ಸೊಪ್ಪು, 5-6 ಹಸಿ ಮೆಣಸಿನ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ವಡೆ ಕರಿಯಲು ಎಣ್ಣೆ. ಮಾಡುವ ವಿಧಾನ : ಅಲಸಂದೆಕಾಳನ್ನೂ ಹಾಗೂ ಉದ್ದಿನಬೇಳೆಯನ್ನೂ ಮೊದಲು ಚೆನ್ನಾಗಿ ನೀರಿನಲ್ಲಿ ತೊಳೆದು ೩ ಗಂಟೆ ಕಾಲ ನೆನೆ ಹಾಕಬೇಕು. ಚೆನ್ನಾಗಿ ನೆಂದ ಬಳಿಕ ನುಣುಪಾಗಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಸಬ್ಬಸಿಗೆಸೊಪ್ಪು, ಕೊತ್ತಂಬರಿಸೊಪ್ಪು, ಮುರಿದ ಹಸಿ ಮೆಣಸಿನಕಾಯಿ ಹಾಗೂ ಉಪ್ಪು ಬೆರೆಸಿ ಕಲಸಬೇಕು. ಆನಂತರ ಅಂಗೈಮೇಲೆ ಸ್ವಲ್ಪ ಸ್ವಲ್ಪವೇ ಹಿಟ್ಟು ಹಾಕಿಕೊಂಡು ತಟ್ಟಿ, ಕಾದ ಎಣ್ಣೆಯ ಬಾಣಲಿಯಲ್ಲಿ ಕರಿದರೆ ರುಚಿರುಚಿಯಾದ ಅಲಸಂದೆ ವಡೆ ರೆಡಿ. ರುಚಿರುಚಿ ಹುಳಿಯನ್ನ ವಾರಾಂತ್ಯಕ್ಕೆ ಬಿಸಿಬಿಸಿ ಹುಳಿಯನ್ನ ಮಾಡೋಣ.. ಕಡಲೆಕಾಯಿ ಬೀಜ, ಹದವಾದ ಒಗ್ಗರಣೆ ಹಾಕಿದ ಹುಳಿಯನ್ನ ತಿನ್ನಲು ಬಲು ರುಚಿ. ಬನ್ನಿ ಮಾಡಿ ತಿನ್ನೋಣ.. ಬೇಕಾಗುವ ಪದಾರ್ಥ: ಅರ್ಧ ಕೆಜಿ ಅಕ್ಕಿ, ನೂರು ಗ್ರಾಂನಷ್ಟು ಹುಣಸೆಹಣ್ಣು, ಮೂರು ಚಮಚದಷ್ಟು ಎಳ್ಳು, ಅರ್ಧ ಅಚ್ಚು ಬೆಲ್ಲ, (2 ಉಂಡೆ ಬೆಲ್ಲ ಇದ್ದರೆ ಮತ್ತೂ ಒಳ್ಳೆಯದು) ತುಸು ಕಡಲೇಬೆಳೆ, ನಾಲ್ಕಾರು ಕರಿ ಮೆಣಸು, ೫೦ ಗ್ರಾಂನಷ್ಟು ಹಸಿ ಕಡಲೆಕಾಯಿಬೀಜ, ಕರಿಬೇವು, ಒಂದು ಬಟ್ಟಲು ಎಣ್ಣೆ, ಒಂದು ಹೋಳು ತೆಂಗಿನಕಾಯಿ, ೨ ಚಮಚ ಸಾಸಿವೆ, ಎರಡು ಚಮಚ ಮೆಣಸಿನಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ: ಅಕ್ಕಿಯನ್ನು ಒಳ್ಳೆಯ ನೀರಿನಲ್ಲಿ ಮೂರು ಬಾರಿ ತೊಳೆದು, ಉದುರು ಉದುರಾಗಿ ಅನ್ನ ಮಾಡಿಕೊಳ್ಳಿ. ಹುಣಸೆ ಹಣ್ಣನ್ನು ಬಿಸಿ ನೀರಲ್ಲಿ ಹಾಕಿ ನೆನಸಿ ತೆಂಗಿನತುರಿ, ಸಾಸಿವೆ, ಮೆಣಸಿನಕಾಯಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಮತ್ತೆರಡು ಚಮಚ ಸಾಸಿವೆ ಹಾಕಿ ಸಿಡಿಸಿ, ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಬಾಡಿಸಿ, ಹುಣಸೆಹಣ್ಣಿನ ರಸವನ್ನೂ ಅದಕ್ಕೆ ಹಿಂಡಿ, ಎರಡು ಚಮಚ ಮೆಣಸಿನ ಪುಡಿ, ಉಪ್ಪು ಮತ್ತು ಚಚ್ಚಿದ ಉಂಡೆ ಬೆಲ್ಲವನ್ನು ಬೆರೆಸಿ ಮಿಶ್ರಣ ಮಾಡಿ, ಕುದಿಸಿ. ತಳ ಹಿಡಿಯದಂತೆ ಎಚ್ಚರ ವಹಿಸಿ. ಅಗಲ ಬಾಯಿಯ ಪಾತ್ರೆಯಲ್ಲಿ ಉದುರು ಉದುರಾಗಿರುವ ಅನ್ನ ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ಚೆನ್ನಾಗಿ ಕುಟ್ಟಿದ ಎಳ್ಳಿನ ಪುಡಿ ಬೆರೆಸಿ ಕಲೆಸಿ. ನಂತರ ಅದಕ್ಕೆ ಹದವಾಗಿ ಒಗ್ಗರಣೆ ಹಾಕಿ, ಮೇಲೆ ನಾಲ್ಕಾರು ಕೊಬ್ಬರಿ ತುರಿ ಉದುರಿಸಿದರೆ ರುಚಿ ರುಚಿ ಹುಳಿಯನ್ನ ಸಿದ್ದ. ಗರ್ಮಾ ಗರಂ ಮಸಾಲೆ ವಡೆ ಅಥವಾ ಆಂಬೋಡೆ ಬೇಕಾಗುವ ಪದಾರ್ಥ : ಅರ್ಧ ಕೇಜಿಯಷ್ಟು ಕಡಲೇಬೇಳೆ, ಏಳೆಂಟು ಒಣ ಮೆಣಸಿನಕಾಯಿ, ಒಂದು ಹೋಳು ತೆಂಗಿನಕಾಯಿ ತುರಿ, ಕೊತ್ತಂಬರಿಸೊಪ್ಪು ಒಂದು ಕಂತೆ, ನಾಲ್ಕಾರು ಎಸಳು ಕರಿಬೇವಿನ ಸೊಪ್ಪು, ಎಣ್ಣೆ, ಉಪ್ಪು ಮತ್ತು ಶುಂಠಿ ಹಾಗೂ ಕರಿಯಲು ಎಣ್ಣೆ. ಮಾಡುವ ವಿಧಾನ :ಮೊದಲು ಕಡಲೇಬೇಳೆಯನ್ನು ನೀರಿನಲ್ಲಿ ತೊಳೆದು ನೆನೆಹಾಕಿ. ಕಡಲೇಬೇಳೆ ಚೆನ್ನಾಗಿನೆಂದ ಬಳಿಕ ಒಣಮೆಣಸಿನಕಾಯಿ, ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನೂ ಸೇರಿಸಿ ಮಿಕ್ಸರ್ ಅಥವಾ ಗ್ರೈಂಡರ್‌ನಲ್ಲಿ ತರಿತರಿಯಾಗಿ ರುಬ್ಬಿ. ಅದಕ್ಕೆ ಸಣ್ಣಗೆ ಹೆಚ್ಚಿದ ಕರಿಬೇವು ಮತ್ತು ಹಸಿಶುಂಠಿಯನ್ನು ಸೇರಿಸಿ. ಈ ಎಲ್ಲ ಮಸಾಲೆ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಟ್ಟು ಕೊಳ್ಳಿ, ಉಂಡೆಗಳನ್ನು ಅಂಗೈಮೇಲೆ ತಟ್ಟಿ ಕಾದ ಎಣ್ಣೆಯ ಬಾಣಲೆಯಲ್ಲಿ ಕರಿದರೆ ಬಿಸಿಬಿಸಿ, ರುಚಿರುಚಿ ಆಂಬೊಡೆ ರೆಡಿ. ಅಗತ್ಯವೆನಿಸಿದರೆ, ಸಣ್ಣಗೆ ಹೆಚ್ಚಿದ ಪುದೀನ ಸೊಪ್ಪು ಮತ್ತು ಈರುಳ್ಳಿಯನ್ನೂ ಕಡಲೇ ಹಿಟ್ಟಿನ ಮಿಶ್ರಣಕ್ಕೆ ಬೆರೆಸಬಹುದು. ಮಾವಿನಕಾಯಿ ಪಚಡಿ ಬಹು ಉಪಯೋಗಿ ದಿಢೀರ್ ಖಾದ್ಯ ಬೇಕಾಗುವ ಪದಾರ್ಥಗಳು – ಗಿಣಿಮೂತಿ ಮಾವಿನಕಾಯಿ, ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಸಾಸಿವೆ. ಮಾಡುವ ವಿಧಾನ : ಮಾವಿನ ಕಾಯಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಹೋಳು ಮಾಡಿಕೊಳ್ಳಿ. ನಾಲ್ಕು ಜನರ ಕುಟುಂಬಕ್ಕಾದರೆ ಅರ್ಧ ಹೋಳು ಗಿಣಿಮೂತಿ ಮಾವಿನ ಕಾಯಿ ಸಾಕು. ಅರ್ಧ ಹೋಳನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಕತ್ತರಿಸಿಕೊಂಡು ತುಸು ಗಟ್ಟಿಯಾಗುವಂತೆ ನೋಡಿಕೊಂಡು ನೀರು ಹಾಕಿ ಚೆನ್ನಾಗಿ ಬೇಯಿಸಬೇಕು. ನೀರು ಕುದಿಯುತ್ತಿದ್ದಾಗ ತುಸು ಅಡುಗೆ ಅರಿಶಿನ ಹಾಕಿ. ಬೆಂದಾದ ಬಳಿಕ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ. ಅರ್ಧ ಹೋಳು ತೆಂಗಿನಕಾಯಿಯನ್ನು ತುರಿದು ಅದಕ್ಕೆ ಕತ್ತರಿಸಿದ ನಾಲ್ಕು ಹಸಿರು ಮೆಣಸಿನ ಕಾಯಿ ಮತ್ತು ಐದಾರು ಕಾಳು ಸಾಸಿವೆ ಹಾಕಿ ಒರಳಿನಲ್ಲಿ ಅಥವಾ ಮಿಕ್ಸರ್ ಗ್ರೈಂಡರ್ ನಲ್ಲಿ ರುಬ್ಬಿಕೊಳ್ಳಬೇಕು. ಬೆಂದಿರುವ ಮಾವಿನಕಾಯಿಗೆ ರುಬ್ಬಿರುವ ಮಸಾಲೆಯನ್ನು ಬೆರೆಸಿ, ಮತ್ತೆ ಕುದಿಯಲು ಇಡಬೇಕು. ಸಿಹಿ ಬಯಸುವವರು ಬೆಲ್ಲದ ಅಚ್ಚನ್ನು ಕತ್ತರಿಸಿ ಒಂದು ತುಂಡು ಬೆಲ್ಲ ಸೇರಿಸಬಹುದು. ಹದವಾಗಿ ಕುದ್ದ ಬಳಿಕ, ಮೆಂತ್ಯ, ಕರಿಬೇವು, ಸಾಸಿವೆ ಒಗ್ಗರಣೆ ಹಾಕಿದರೆ ಪಚಡಿ ರೆಡಿ. ಈ ಪಚಡಿಯನ್ನು ಚಪಾತಿ, ಪೂರಿಗೆ ನೆಂಚಿಕೊಳ್ಳಲು ಬಳಸಬಹುದು. ಅನ್ನಕ್ಕೆ ಹಾಕಿ ಕಲಸಿಕೊಳ್ಳಬಹುದು. ಊಟದ ಜೊತೆ ಹೆಚ್ಚುವರಿ ಖಾದ್ಯವಾಗಿಯೂ ಬಳಸಬಹುದು. ಪಾಕಶಾಲೆಯಲ್ಲಿ ತೆಂಗಿನಕಾಯಿ, ಹುರಿಗಡಲೆ ಚಟ್ನಿಯ ಸಂಭ್ರಮ ಸೊಗಸಾದ ಇಡ್ಲಿ ಮಾಡೋದು ತಿಳಿಸಿದ್ದೀರಿ? ಆದರೆ ಚೆಟ್ನಿ ಎಲ್ಲಿ ಎಂದು ಹೈದರಾಬಾದಿನ ರಾಜ್ಯಶ್ರೀ ಪ್ರಶ್ನಿಸಿದ್ದಾರೆ. ಹೌದು ಖಂಡಿತಾ ತಪ್ಪು ನಮ್ಮದೆ. ಚಟ್ನಿ ಇಲ್ಲದೆ ಇಡ್ಲಿ ತಿನ್ನಕ್ಕಾಗತ್ತ್ಯೇ? ಬನ್ನಿ ಚೆಟ್ನಿಯನ್ನೂ ಮಾಡೇ ಬಿಡೋಣ... ಚಟ್ನಿಯಲ್ಲಿ ಹಲವು ಬಗೆ, ತೆಂಗಿನಕಾಯಿ ಚಟ್ನಿ, ಪುದೀನಾ ಚಟ್ನಿ, ಹುರಿಗಡಲೆ ಚೆಟ್ನಿ, ಮೆಣಸಿನಕಾಯಿ ಚಟ್ನಿ, ಸೀ ಚಟ್ನಿ, ಸವಾರಿ ಚಟ್ನಿ.... ಈ ಹೊತ್ತು ನಾವು ಕೆಂಪು ಮೆಣಸಿನ ಕಾಯಿ ಚಟ್ನಿ ಮತ್ತು ಹುರಿಗಡಲೆ ಚಟ್ನಿ ಮಾಡೋಣ. ಬೇಕಾಗುವ ಪದಾರ್ಥ : ಒಂದು ಅರ್ಧ ಹೋಳು ತೆಂಗಿನಕಾಯಿ, ೫,೬ ಕೆಂಪು ಒಣಮೆಣಸಿನ ಕಾಯಿ, ನಾಲ್ಕಾರು ಎಸಳು ಕೊತ್ತಂಬರಿ ಸೊಪ್ಪು, ಉಪ್ಪು, ಸಾಸಿವೆ ಒಗ್ಗರಣೆ ಪದಾರ್ಥ. ತಯಾರಿಸುವ ವಿಧಾನ : ಮೊದಲು ತೆಂಗಿನಕಾಯಿ ತುರಿದು, ತೆಂಗಿನ ತುರಿ, ಮೆಣಸಿನ ಕಾಯಿಗೆ ರುಚಿಗೆ ತಕ್ಕ ಉಪ್ಪು ಹಾಕಿ ಹದವಾಗಿ ನೀರನ್ನು ಬೆರೆಸಿ ಮಿಕ್ಸರ್ ಅಥವಾ ಗ್ರೈಂಡರ್‌ನಲ್ಲಿ ರುಬ್ಬಿ . ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ, ಮತ್ತೆ ಒಂದು ಸುತ್ತು ರುಬ್ಬಿ. ತರಿತರಿಯಾಗಿದ್ದರೆ ಚಟ್ನಿಯ ರುಚಿಯೇ ರುಚಿ. ಅದಕ್ಕೆ ತುಸು ಸಾಸಿವೆ ಅಥವಾ ಜೀರಿಗೆ ಇಂಗಿನ ಒಗ್ಗರಣೆ ಹಾಕಿದರೆ ಚಟ್ನಿ ಮತ್ತೂ ರುಚಿ. ಹುರಿಗಡಲೆ ಚಟ್ನಿ ಬೇಕಾಗುವ ಪದಾರ್ಥ : ಒಂದು ಅರ್ಧ ಹೋಳು ತೆಂಗಿನಕಾಯಿ, ಒಂದು ಚೂರು ಬೆಲ್ಲ, ಗಜ್ಜುಗದ ಗಾತ್ರ ಹುಣಸೆಹಣ್ಣು, ಚೂರು ಶುಂಠಿ, ಹುರಿಗಡಲೆ ನೂರೈವತ್ತು ಗ್ರಾಂ, ಎರಡು ಮೂರು ಎಸಳು ಕೊತ್ತಂಬರಿಸೊಪ್ಪು, ನಾಲ್ಕಾರು ಹಸಿ ಮೆಣಸಿನಕಾಯಿ, ರುಚಿಗೆ ತಕ್ಕ ಉಪ್ಪು, ಒಗ್ಗರಣೆ ಪದಾರ್ಥ. ತಯಾರಿಸುವ ವಿಧಾನ : ಹುರಿಗಡಲೆ, ಶುಂಠಿ, ತೆಂಗಿನ ತುರಿ, ಉಪ್ಪು, ಹುಣಸೆ ಬೆರೆಸಿ ಮಿಕ್ಸರ್ ಅಥವಾ ಗ್ರೈಂಡರ್‌ನಲ್ಲಿ ರುಬ್ಬಿ. ಒರಳು ಕಲ್ಲಿನಲ್ಲಿ ಕಸರತ್ತು ಮಾಡುವುದಾದರೂ ಅಡ್ಡಿ ಇಲ್ಲ. ನುಣುಪಾಗಿ ಅಥವಾ ಕೊಂಚ ತರಿತರಿಯಾಗಿ ರುಬ್ಬಿದ ಚಟ್ನಿಗೆ ಸಾಸಿವೆ ಇಂಗಿನ ಒಗ್ಗರಣೆ ಸೇರಿಸಿದರೆ ಚಟ್ನಿ ಸಿದ್ಧ. ಚಪಾತಿ, ಇಡ್ಲಿ, ಪೂರಿ, ರೊಟ್ಟಿಯ ಜೊತೆ ಹುರಿಗಡಲೆ ಚಟ್ನಿಯ ರುಚಿಯ ಗಮ್ಮತ್ತೇ ಗಮ್ಮತ್ತು. ಇದಕ್ಕೆ ಜೀರಿಗೆ ಒಗ್ಗರಣೆ ಹಾಕಿದರೆ ಮತ್ತೂ ರುಚಿಯಾಗಿರುತ್ತದೆ. ದುಂಡು ಮಲ್ಲಿಗೆಯ ಹೂವಿನಂಥ ಬಿಳುಪಾದ, ಸವಿಯಾದ ಅಕ್ಕಿ ಇಡ್ಲಿ ಇಡ್ಲಿ ಹಿಟ್ಟು ರೆಡಿ ಇದ್ದರೆ, ಇಡ್ಲಿ ಮಾಡೋದು ಬಹಳ ಸುಲಭ. ಈಗಂತೂ ಇನ್‌ಸ್ಟೆಂಟ್ ದೋಸೆ ಹಿಟ್ಟು, ಇಡ್ಲಿ ಹಿಟ್ಟು ಸಿಗತ್ತೆ. ಆದರೂ, ಮನೆಯಲ್ಲಿ ಉದ್ದಿನ ಬೇಳೆ ನೆನೆಸಿ, ರುಬ್ಬಿ ತಯಾರಿಸುವ ಇಡ್ಲಿಯ ರುಚಿಯೇ ಬೇರೆ. ಜೊತೆಗಿದು ಎಕಾನಾಮಿಕಲ್ ಕೂಡ. ಇಡ್ಲಿ ತಯಾರಿಸಲು ಬೇಕಾಗುವ ಪದಾರ್ಥ : 1 ಲೋಟದಷ್ಟು ಅಕ್ಕಿ, ಎರಡು ಲೋಟದಷ್ಟು ಉದ್ದಿನಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡಿಗೆ ಸೋಡಾ, ಕಾಲು ಲೋಟದಷ್ಟು ಗಟ್ಟಿ ಅವಲಕ್ಕಿ ಹಾಗೂ ನಾಲ್ಕಾರು ಕಾಳು ಮೆಣಸು. ತಯಾರಿಸುವ ವಿಧಾನ : ಮೊದಲು ಉದ್ದಿನಬೇಳೆ ಹಾಗೂ ಅಕ್ಕಿಯನ್ನು -ಅವಲಕ್ಕಿಯನ್ನು ಪ್ರತ್ಯೇಕವಾಗಿ ತೊಳೆದು, ಬೇರೆ ಬೇರೆ ಪಾತ್ರೆಗಳಲ್ಲಿ ಸುಮಾರು ನಾಲ್ಕೈದು ಗಂಟೆ ಕಾಲ ನೆನೆಸಿಡಿ. ಆನಂತರ ನೀರನ್ನು ಬಸಿದು ಗ್ರೈಂಡರ್ ಅಥವಾ ಮಿಕ್ಸರ್‌ನಲ್ಲಿ ಅಕ್ಕಿಯನ್ನೂ, ಉದ್ದಿನಬೇಳೆಯನ್ನೂ ಪ್ರತ್ಯೇಕವಾಗಿ ನುಣುಪಾಗಿ ರುಬ್ಬಿ. ಬಳಿಕ ಅಕ್ಕಿಹಿಟ್ಟು ಹಾಗೂ ಉದ್ದಿನಬೇಳೆ ಹಿಟ್ಟನ್ನು ಸೇರಿಸಿ ಕಲೆಸಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಕಾಳು, ಚಿಟಿಕೆ ಸೋಡ ಸೇರಿಸಿ ದೊಡ್ಡಪಾತ್ರೆಯಲ್ಲಿ ಮುಕ್ಕಾಲು ಭಾಗದಷ್ಟು ಹಾಕಿ ತಟ್ಟೆ ಮುಚ್ಚಿಡಿ. (ಪಾತ್ರೆಯಲ್ಲಿ ಕಂಠಭರ್ತಿ ಇದ್ದರೆ ಹುದುಗು ಹೆಚ್ಚಾದಾಗ ಹಿಟ್ಟು ನೆಲಕ್ಕೆ ಚೆಲ್ಲುತ್ತದೆ) ಇಷ್ಟು ಕೆಲಸವನ್ನು ರಾತ್ರಿಯೇ ಮಾಡಿಟ್ಟರೆ ಬೆಳಗ್ಗೆ ಹೊತ್ತಿಗೆ ಇಡ್ಲಿಹಿಟ್ಟು ಚೆನ್ನಾಗಿ ಹುದುಗು ಬಂದಿದ್ದು ಇಡ್ಲಿ ಸೊಗಸಾಗಿರುತ್ತದೆ. ಬೆಳಗ್ಗೆ ಇಡ್ಲಿ ಸ್ಟಾಂಡ್‌ನಲ್ಲಿರುವ ಪ್ಲೇಟ್‌ಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಒಂದು ಸೌಟಿನಲ್ಲಿ ಇಡ್ಲಿ ಹಿಟ್ಟು ಹಾಕಿ, ಕುಕ್ಕರಿನಲ್ಲಿ ಬೇಯಿಸಲು ಇಡಿ. ಕುಕ್ಕರ್‌ಗೆ ವೈಟ್ ಹಾಕುವ ಅಗತ್ಯವೇನಿಲ್ಲ. ಬೇಕಿದ್ದರೆ ಪುಟ್ಟದೊಂದು ಲೋಟ ಮುಚ್ಚಿದರೆ ಸಾಕು. ಐದು ಹತ್ತು ನಿಮಿಷದಲ್ಲೇ ಇಡ್ಲಿ ಸೊಗಸಾಗಿ ಬೆಂದಿರುತ್ತದೆ. ಗಮಗಮಿಸುವ ತುಪ್ಪದೊಂದಿಗೆ ಇಡ್ಲಿಗೆ ಸಾಂಬರ್, ಕಾಯಿಚೆಟ್ನಿ ಹಾಕಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು... ಹುರುಳಿಕಾಯಿ, ಕ್ಯಾರೆಟ್, ಬಟಾಣಿ, ಆಲೂಗಡ್ಡೆ ಮುಂತಾದ ತರಕಾರಿ ಹಾಕಿ ಮಾಡಿದ ಬಿಸಿ ಬೇಳೆ ಬಾತ್ ತಿನ್ನಲು ಬಲು ರುಚಿ. ಬೇಳೆ ಬಾತನ್ನು ಕೆಲವರು ಕಾಂಕ್ರೀಟ್ ಅಂತ ಛೇಡಿಸುವುದೂ ಉಂಟು. ಆದರೆ, ಹಲವರಿಗೆ ಪ್ರಿಯವಾದ ಈ ತಿಂಡಿ ತಯಾರಿಸುವ ವಿ ವಿಧಾನ ಇಲ್ಲಿದೆ. ಬೇಕಾಗುವ ಪದಾರ್ಥ: ಅರ್ಧ ಕೆಜಿಯಷ್ಟು ಅಕ್ಕಿ, ಅರ್ಧ ಕೆಜಿ ತೊಗರಿ ಬೇಳೆ, ೧೦೦ ಗ್ರಾಂನಷ್ಟು ತುಪ್ಪ, ಎಂಟು ಹತ್ತು ಒಣಮೆಣಸಿನಕಾಯಿ, ಒಂದು ಪುಟ್ಟ ಚಮಚದಷ್ಟು ಇಂಗು, ಚೂರು ಹುಣಸೆ ಹಣ್ಣು, ಒಂದರ್ಧ ಗಿಟುಕು ಕೊಬ್ಬರಿತುರಿ, ಸ್ವಲ್ಪ ತೆಂಗಿನತುರಿ, ಅರಿಶಿನಪುಡಿ, ಎರಡು ಮೂರು ಚೂರು ದಾಲ್ಚಿನ್ನಿ ಚಕ್ಕೆ, ಒಂದೊಂದು ಹಿಡಿ ಕಡಲೆಬೇಳೆ, ಉದ್ದಿನಬೇಳೆ, ಒಂದು ಚಮಚ ಸಾಸಿವೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ: ಒಂದು ಪ್ಯಾನ್‌ಗಳಲ್ಲಿ ಶುದ್ಧವಾಗಿ ತೊಳೆದ ತೊಗರಿಬೇಳೆ, ಹೆಚ್ಚಿದ ತರಕಾರಿ, ಉಪ್ಪು ಹಾಕಿಡಿ, ಮತ್ತೊಂದು ಪ್ಯಾನ್‌ನಲ್ಲಿ ಅನ್ನ ಮಾಡಲು ಅಕ್ಕಿ ಹಾಕಿ ಕುಕ್ಕರ್‌ನಲ್ಲಿ ಹಾಕಿ ಒಲೆಯ ಮೇಲಿಡಿ. ಅದು ಬೆಂದ ಬಳಿಕ, ಒಣಮೆಣಸಿನಕಾಯಿ, ಕಡಲೆಬೇಳೆ, ಉದ್ದಿನಬೇಳೆ, ದಾಲ್ಚಿನ್ನಿ ಚಕ್ಕೆ, ಕೊತ್ತಂಬರಿಬೀಜ ಹುರಿದು ಪುಡಿ ಮಾಡಿ ತಯಾರಿಸಿದ ಹುಳಿಪುಡಿಗೆ ಕೊಬ್ಬರಿತುರಿ, ಹಾಗೂ ತೆಂಗಿನತುರಿ ಮತ್ತು ಕಿವುಚಿದ ಹುಣಸೆಹಣ್ಣು ನೀರು ಸೇರಿಸಿ ಮಿಕ್ಸರ್‌ನಲ್ಲಿ ರುಬ್ಬಿದರೆ, ಮಸಾಲೆ ತಯಾರಾಗುತ್ತದೆ. ಈ ಮಸಾಲೆಯನ್ನು ಬೆಂದ ಬೆಳೆ-ತರಕಾರಿ ಜೊತೆ ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಅನ್ನ ಹಾಕಿ ಕಲೆಸಿ, ಮುರಿದ ಕೆಂಪು ಮೆಣಸಿನಕಾಯಿ, ಕರಿಬೇವು, ಇಂಗು -ಸಾಸಿವೆ ಒಗ್ಗರಣೆ ಹಾಕಿದರೆ, ಬಿಸಿಬೇಳೆ ಬಾತ್ ಸಿದ್ಧ. ಬಾತ್ ಜೊತೆಗೆ ಕರಿದ ಖಾರಾ ಬೂಂದಿಕಾಳು ಅಥವಾ ಚಿಪ್ಸ್ ಇದ್ದರೆ ಅದರ ರುಚಿಯೇ ಬೇರೆ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ