Skip to main content

ದಾಂಪತ್ಯದಲ್ಲಿ ಅಡೆತಡೆಗಳ ನಿವಾರಣೆಗಾಗಿ ಜ್ಯೋತಿಷ್ಯದಲ್ಲಿನ ಪರಿಹಾರೋಪಾಯಗಳು

ಸ್ವರ್ಗದಲ್ಲಿ ಮದುವೆ ನಿಶ್ಚಯವಾಗಿರುತ್ತವೆ ಎಂದು ಹೇಳುತ್ತಾರೆ ನಂಬಬಹುದು.ಆದರೆ ಕಲಹವನ್ನು ಅಲ್ಲಿಂದಲೇ ತಂದಿರುತ್ತಾರೋ ಏನೋ ಎಂದು ಒಂದೋಂದುಸಲ ಅನ್ನಿಸುತ್ತದೆ.ಸುಕಕರವಾದ ದಾಂಪತ್ಯ ಜೀವನ ಯಾರದಾಗಿರುತ್ತದೋ ಅವರೇ ಪುಣ್ಯವಂತರು.ಅಲವಾರು ಸಂಸಾರಗಳಲ್ಲಿ ಪತಿ ಹೊಂದಾಣಿಕೆಯಿದ್ದರೆ ಸತಿ ಇರುವುದಿಲ್ಲ.ಸತಿ ಇದ್ದಲ್ಲಿ ಪತಿ ಇರುವುದಿಲ್ಲ. ಸತಿ-ಪತಿಯಲ್ಲಿ ಯಾವುದಾದರು ವಿಚಾರಕ್ಕೆ ಜಗಳವಿಲ್ಲದೆ ದಿನವೊಂದು ಕಳೆದರೆ ಅದರಂಥ ಶುಭ ದಿನವೇ ಇನ್ನೊಂದಿಲ್ಲ ಎನ್ನಬೇಕಾಗುತ್ತದೆ. ಸತಿ-ಪತಿಯರಲ್ಲಿ ಚಿಕ್ಕಪುಟ್ಟ ಮಾತುಗಳಿಗು ಜಗಳವಾಗಬುದು.ಗಂಡ ಹೆಂಡಿರ ಜಗಳ ಉಂಡುಮಲಗುವತನಕ ಇದ್ದರೆ ಚೆಂದ ಜಗಳ ವಿಕೋಪಕ್ಕೆ ಹೋದರೆ ಸಂಸಾರಜೀವನ ಅಧೋಗತಿ. ಸಾಮಾನ್ಯವಾಗಿ ಸತಿ-ಪತಿಗಳಲ್ಲಿ ಉಂಟಾಗುವ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದೆ ಓದುಗರು ತಮಗೆ ಆಗಬಹುದಾದ ತೊಂದರೆಯಾನುಸಾರ ಯತಾಶಕ್ತಿ ಸೂಚಿಸಿದಂತೆ ಪರಿಹಾರಮಾಡಿಕೊಂಡರೆ ತಾವು ನೆಮ್ಮದಿಯ ಜೀವನಮಾಡಬಹುದು. ೧.ಗಂಡ ಶ್ರೀರಾಮನಂತಿದ್ದರೂ ಹೆಂಡತಿ ಆತನನ್ನು ಅನುಮಾನದಿಂದನೋಡುವುದು.ಮನೆಗೆ ಬಂದರೆ ಆತನಿಗೆ ಮನೆ ನರಕವೆಂದೆನಿಸುದು,ಹಾಸಿಗೆ ಮುಳ್ಳಿನಂತಾಗುವುದು.ಜೀವನವೇ ಬೇಸರವೆನಿಸುವುದು. ಪರಿಹಾರ:-ಪತಿಯು ೯ ಶುಕ್ರವಾರ ಹಸುವಿಗೆ ಹಸಿಹುಲ್ಲನ್ನು ತಿನ್ನಿಸುವುದು. ೨.ಪತಿ ಸಮಾದಾನಿಯಿದ್ದರೂ ಪತ್ನಿಗೆ ತಾಳ್ಮೆ ಇರುವುದಿಲ್ಲ ಪ್ರತಿಮಾತಿಗು ಜಗಳ ಪತಿಯು ತನ್ನ ಪತ್ನಿಗೆ ಹೆದರುವಂತ ಪರಿಸ್ಥಿತಿ ಇದ್ದರೆ. ಪರಿಹಾರ:-ಪತಿಯು ಯಾವುದೇ ಸೋಮವಾರ ಹೆಂಡತಿಗೆ ಬಿಳಿ ವಸ್ತ್ರ,ವಡವೆ,ಬಳೆ ಇತ್ಯಾದಿಗಳನ್ನು ಕೊಡಿಸಬೇಕು. ೩.ಗಂಡ ಹೆಂಡತಿ ಇಬ್ಬರೂ ಯಾವಾಗಲೂ ಜಗಳ ಆಡುವುದಿಲ್ಲ ಮುನಿಸಿಕೊಳ್ಳುವುದಿಲ್ಲ ಆದರೂ ಇಬ್ಬರಲ್ಲು ಬಿನ್ನಾಬಿಪ್ರಾಯ ಉಂಟಾಗಿ ಇಬ್ಬರು ಮಾತಾಡುವುದನ್ನು ನಿಲ್ಲಿಸಿರುತ್ತಾರೆ ಮಲಗಿದಾಗ ಇಬ್ಬರ ಮುಖಗಳು ಪರಸ್ಪರ ವಿರುದ್ದದಿಕ್ಕಿನತ್ತ ತಿರುಗುತ್ತವೆ. ಪರಿಹಾರ: ಬಿಳಿವಸ್ತುವೊಂದರಲ್ಲಿ ಹಿಡಿಯಷ್ಟು ಗೋಧಿ,ಉಪ್ಪು,ಬೆಲ್ಲ,ಮತ್ತು ಬೆಳ್ಳಿಯ ೨ ನಾಣ್ಯಗಳನ್ನು ಸೇರಿಸಿ ಮಲಗುವ ಕೋಣೆಯಲ್ಲಿ ಕಟ್ಟಿಡಬೇಕು,ಕೋಪ,ತಾಪ.ಮುನಿಸು ದೂರ ಸರಿಯುತ್ತವೆ. ೪.ದಾಂಪತ್ಯ ಜೀವನದಲ್ಲಿ ಸುಖವೆಂಬುದೇ ಇಲ್ಲ ದಂಪತಿಗಳು ವಿರೋಧ ಸಾದಿಸುತ್ತಾರೆ ಪರಸ್ಪರ ಕಂಡರು ಆಗದು.ಹಾವುಮುಂಗುಸಿಯಂತೆ ವರ್ತಿಸುತ್ತಾರೆ. ಪರಿಹಾರ:ಶಿವ-ಪಾರ್ವತಿ,ಗಣೇಶ ಇರುವ ಪ್ರತಿಮೆ ಅಥವ ಭಾವಚಿತ್ರಕ್ಕೆ ಪ್ರತಿ ಸೋಮವಾರ ಬಿಲ್ವಪತ್ರೆ ಏರಿಸಿ ಪೂಜಿಸುವುದರಿಂದ ದಾಂಪತ್ಯಜೀವನದಲ್ಲಿನ ತೊಡಕು ನಿವಾರಣೆಯಾಗಿ ಸಂತೋಷಕರವಾಗುತ್ತದೆ. ೫.ಬಿರು ಅಥವ ಕಟುನುಡಿ ಯಾರಿಗೂ ಒಳಿತಲ್ಲ ಮಡದಿ ಪೇಟೆಯಲ್ಲಿ ಕೊಂಡುತಂದ ವಸ್ತುವಲ್ಲ ಹೆಂಡತಿಯನ್ನು ಕೀಳಾಗಿ ಕಾಣುವುದು ಮನುಷ್ಯತ್ವವಲ್ಲ ಹೆಂಡತಿಯಾದವಳಿಗೆ ಇದು ಒಂದು ರೀತಿಯ ಮುಜುಗರವನ್ನು ಉಂಟುಮಾಡುತ್ತದೆ. ಪರಿಹಾರ:ಮಡದಿಯಾದವಳು ಯಾವುದೇ ಬುದವಾರ ದಿಂದ ಆರಂಭಿಸಿ ಮುಂದಿನ ಬುಧವಾರದ ವರೆಗೆ ಒಂದೊತ್ತು ಉಪವಾಸವಿದ್ದು ಮೌನವ್ರತ ಆಚರಿಸಿದರೆ ಈ ಸಮಸ್ಯೆಯಿಂದ ಬಿಡುಗಡೆ ಹೊಂದಬಹುದು. ೬.ಚಿಕ್ಕ ಪುಟ್ಟ ಮಾತಿಗೆ ದಂಪತಿಗಳಲ್ಲಿ ವಿರಸ ಉಂಟಾಗಿರಬಹುದು ಬಹುಕಾಲದವರೆಗೂ ಮಾತು ನಿಲ್ಲಬಹುದು.ಪರಸ್ಪರ ಒಬ್ಬರಿಗೊಬ್ಬರು ತಾನಾಗಿಯೇ ಮಾತಾಡಲಿ ಅಂತ ಮಾತು ಬಿಟ್ಟಿರುತಾರೆ.ನಾಲಿಗೆ ತುದಿವರೆಗೂ ಮಾತು ಬಂದರು ತಾನೇಕೆ ಮಾತಾಡಲಿ ಎಂಬ ಯೋಚನೆ ಬರುತ್ತಿರುತ್ತದೆ. ಪರಿಹಾರ: ೧) ೧೦೮ ಭುಜಪತ್ರೆಗಳನ್ನು ತಗೆದುಕೊಂಡು ಅದರೊಂದಿಗೆ ಜೇನುಡಬ್ಬವನ್ನು ತಗೆದುಕೊಂಡು ಹರಿಯುವನೀರಿನಬಳಿ ಬಂದು ಇಬ್ಬರು ತಮ್ಮ ತಮ್ಮ ಹೆಸರನ್ನು ಭುಜಪತ್ರೆಯಲ್ಲಿ ಬರೆದು ಜೇನಿನಲ್ಲಿ ಅದ್ದಿ ನೀರಿಗೆ ಭುಜಪತ್ರೆಎಲೆಯನ್ನು ಬಿಡಬೇಕು ಇದರಿಂದ ಇಬ್ಬರಲ್ಲು ಪ್ರೀತಿ ಹುಟ್ಟುತ್ತದೆ. ಅಥವ ಬಿಳಿಸಾಸಿವೆಗಳನ್ನು ಅಗ್ನಿಗೆ ಆಹುತಿ ನೀಡುವುದರಿಂದ ಸಂಸಾರದ ತೊಡಕು ದೂರಾಗುತ್ತವೆ. ೨) ಶುಕ್ರವಾರದಂದು ಸುಗಂಧಎಣ್ಣೆಯನ್ನು ಮೈಗೆ ಸಿಂಪಡಿಸಿಕೊಂಡು ಮಲಗುವುದರಿಂದಲೂ ತೊಂದರೆ ದೂರಾಗುತ್ತದೆ. ೩) ಗುರುವಾರ ಪುಷ್ಯ ನಕ್ಷತ್ರವಿರುವ ದಿನದಂದು ಹಸಿರು ರತ್ನವನ್ನು(ಪಚ್ಚೆ)ಗೋಮೊತ್ರದಲ್ಲಿ ತೊಳೆದು ಧರಿಸುವುದರಿಂದ ಸತಿ-ಪತಿಗಳಲ್ಲಿ ಪ್ರೇಮತ್ವ ಚಿಗುರುತ್ತದೆ. ೪) ಪ್ರತಿ ಗುರುವಾರ ಪತಿ-ಪತ್ನಿ ಸೇರಿಕೊಂಡು ಶ್ರೀ ರಾಮ ಮಂಡಿರದಲ್ಲಿ ಪೂಜೆ ನಡೆಸುವುದರಿಂದ ಸಂಸಾರದಲ್ಲಿ ಸುಖವು ಅಧಿಕವಾಗುತ್ತದೆ. ೭.ಮಾತಿನಲ್ಲಿ ವ್ಯತ್ಯಾಸವಾಗಿ ಗಂಡ-ಹೆಂಡತಿಯರಲ್ಲಿ ಜಗಳ ಉಂಟಾಗಿದ್ದರೆ ಹೆಚ್ಚಿನ ಮಾತುಗಳೇ ಜಗಳಕ್ಕೆ ಕಾರಣವಾಗಿರುತ್ತದೆ.ಯಾರಮಾತಿಗೂ ಮಣಿಯದ ಸ್ವಭಾವ ಇಬ್ಬರದೂ ಆಗಿರುತ್ತದೆ. ಪರಿಹಾರ:ಸತಿ -ಅಪತಿ ಇಬ್ಬರು ಅಥವ ಯಾರಾದರು ಒಬ್ಬರು ಕಂಚಿನ ಪಾತ್ರೆಯಲ್ಲಿ ತುಪ್ಪವನ್ನು ತುಂಬಿ ಅದನ್ನು (ತುಪ್ಪವನ್ನು ಮಾತ್ರ)ದೇವಾಲಯದ ದೀಪಕ್ಕೆ ನೀದಿದರೆ ವಾದ-ವಿವಾದ ದೂರ ಸರಿಯುತ್ತದೆ.೯ಸೋಮವಾರ ಸಿಹಿ-ಹಾಲನ್ನು ಶಿವಲಿಂಗಕ್ಕೆ ಅಭಿಷೇಕಕ್ಕೆ ನೀಡುವುದರಿಂದ ಸತಿ-ಪತಿಯರಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ. ೮.ಮದುವೆಯ ನಂತರ ಕನ್ಯೆಯು ಗಂಡನ ಮನೆ ಪ್ರವೇಶಿಸ ಬೇಕಾಗಿರುತ್ತದೆ.ಅತ್ತೆ ಮಾವಂದಿರನ್ನೇ ತನ್ನ ತಂದೆ ತಾಯಿ ಎಂದು ತಿಳಿಯಬೇಕಾಗುತ್ತದೆ.ಹಲವು ಕನ್ಯೆಯರು ಅತ್ತೆ ಮಾವಂದಿರ ಉಪದ್ರವದಿಂದ ಬೇಸತ್ತಿರುತ್ತಾರೆ. ಪರಿಹಾರ:ವೃಕ್ಷಗಳಿಗೆ ನೀರು ಗೊಬ್ಬರದ ವ್ಯವಸ್ಥೆ ಮಾಡಬೇಕು ಭಾನುವಾರ ಭೈರವನನ್ನು ಪೂಜಿಸಬೇಕು ರೊಟ್ಟಿಯೊಂದಿಗೆ ಬೆಲ್ಲವನ್ನು ಸೇರಿಸಿ ಆಕಳುಗಳಿಗೆ ತಿನ್ನಿಸುವುದು.ಬೆಳ್ಳಿಯ ಆಭರಣ ದೇವಾಲಯಗಳಿಗೆ ದಾನನೀದುವುದು.ಮತ್ತು ತಾವು ಬೆಳ್ಳಿಯ ಆಭರಣ ಯಾವಾಗಲು ಹಾಕಿಕೊಂಡಿರಬೇಕು.ನಾಯಿಗೆ ಆಹಾರ ಒದಗಿಸಬೇಕು. ಇರುವೆಗಳಿಗೆ ಸಕ್ಕರೆ ಹಾಕಬೇಕು. ೯.ಗಂಡ ಹೆಂಡತಿ ಎಷ್ಟೇ ಹೊಂದಾಣಿಕೆಯಿಂದಿದ್ದರು ಮನಸ್ಥಾಪವಾಗುತ್ತಿರುತ್ತದೆ.ಕುಟುಂಬದಲ್ಲಿ ಒಬ್ಬರಿಗೊಬ್ಬರು ಸೇರುವುದಿಲ್ಲ ಕಲಹಗಳು ಅಧಿಕವಾಗುತ್ತಿರುತ್ತವೆ. ಪರಿಹಾರ:ರಾತ್ರಿ ಮಲಗುವಾಗ ಪತಿಯ ತಲೆದಿಂಬಿನ ಕೆಳಗೆ ಸಿಂದೂರ.ಸತಿಯ ತಲೆದಿಂಬಿನಕೆಳಗೆ ಕರ್ಪೂರ ಇಟ್ತುಕೊಂಡು ಮಲಗಬೇಕು ಮುಂಜಾನೆ ಅವುಗಳನ್ನು ಯಾವುದಾದರು ಮರದ ಬುಡಕ್ಕೆ ಹಾಕುವುದು.ಮಂಗಳವಾರ ಬೆಲ್ಲ ರೊಟ್ಟಿನಾಯಿಗೆ ನೀಡಬೇಕು. ೧೦.ಹಲವು ಕಾಲದವರೆಗೆ ಸರಿಯಾಗಿ ಸಂಸಾರ ನಡೆಸಿ,ಮದ್ಯೆದಲ್ಲಿ ಸತಿ-ಪತಿ ಒಬ್ಬರಿಗೊಬ್ಬರು ಸಂಶಯ ಮನೋಭಾವತಾಳುತ್ತಾರೆ. ಪರಿಹಾರ:ಮಲಗುವಕೋಣೆಯಲ್ಲಿ ನವಿಲುಗರಿಯನ್ನು ಇಡುವುದು. ೧೧.ಸತಿ-ಪತಿಯರ ಜಾತಕದಲ್ಲಿ ಶನಿದೋಷವಿದ್ದಾಗ ಕಲಹಗಳು ಅಧಿಕವಾಗುತ್ತವೆ. ಪರಿಹಾರ:ನದಿಯಲ್ಲಿ ಖಾದ್ಯ ಪದಾರ್ಥಗಳನ್ನು ಹರಿಯಬಿಡಬೇಕು. ೧೨.ಯಾವುದೇ ಕಾರಣದಿಂದ ಸತಿ-ಪತಿಯರಲ್ಲಿ ವಿರಸ ಉಂಟಾಗಿದ್ದರೆ ಅದೇ ದೊಡ್ಡದಾಗುತ್ತದೆ. ಪರಿಹಾರ:ತಾಮ್ರದ ತಂಬಿಗೆಯಲ್ಲಿ ನೀರು ಮತ್ತು ಜೇನು ತುಂಬಿ ರಾತ್ರಿ ಮಲಗುವಾಗ ತಲೆದಿಂಬುನ ಹತ್ತಿರ ಇಡಬೇಕು ಬೆಳಗ್ಗೆ ಅದನ್ನು ಸತಿ-ಪತಿ ಇಬ್ಬರು ಸೇವಿಸಬೇಕು. ೧೩.ದೃಷ್ಟಿ ದೋಷ ಅಥವ ದುರ್ಬುದ್ದಿಯವರ ಕೈಚಳಕ(ಮಾಟ,ಮರೆವು,ಮಂತ್ರ)ದಿಂದ ಸತಿ-ಪತಿಯರು ಸದಾ ಜಗಳ ಕಾಯುತ್ತಾರೆ.ಕದನ ವಿವಾಹ ವಿಚ್ಚೇದನದ ವರೆಗೂ ಹೋಗುತ್ತದೆ. ಪರಿಹಾರ:೭ತಾಂತ್ರಿಕ ತೆಂಗು,೭ಮುತ್ತು,೭ಚಿಟಿಕೆ ಉಪ್ಪು,ಒಂದು ಬಟ್ಟೆಯಲ್ಲಿ ಸೇರಿಸಿ ಕಟ್ಟಬೇಕು ಅದನ್ನು ಪತಿ ಅಥವ ಪತ್ನಿ ಮಲಗಿ ನಿದ್ರಿಸುವಾಗ ೭ಬಾರಿ ಇಳೆತಗೆದು ಬೆಳಗ್ಗೆ ಮೊರುದಾರಿ ಕೂಡುವಲ್ಲಿ ಇಟ್ಟುಬರಬೇಕು. ೧೪.ಯಾವುದೇ ಶನಿವಾರದಿಂದ ಸತಿ-ಪತಿಯರಲ್ಲಿ ಕ್ಲೇಷ ಉಂಟಾಗಿದ್ದರೆ ಇಬ್ಬರಲ್ಲು ಮಾತುನಿಂತು ಮೌನವಾಗಿದ್ದರೆ. ಪರಿಹಾರ: ಎಣ್ಣೆ, ಲೋಹದ ಪಾತ್ರ, ಉಪ್ಪು ಕಪ್ಪುವಸ್ತ್ರ ದಾನನೀಡಬೇಕು. ೧೫.ವೈವಾಹಿಕ ಜೀವನದಲ್ಲಿ ಆಕಸ್ಮಾತ್ ಅಸಂತೋಷದ ಛಾಯೆ ಮೊಡಿ ಬರುತ್ತದೆ. ಪರಿಹಾರ:ಶುಕ್ಲಪಕ್ಷದ ಯಾವುದೇ ಬುಧವಾರ ನಪುಂಸಕರಿಗೆ ಸಾದ್ಯವಿರುವ ವಸ್ತುಗಳನ್ನು ದಾನಮಾಡಬೇಕು. ೧೬.ಪತಿಯು ಪತ್ನಿಯ ಜೊತೆ ಸರಿಯಾಗಿ ವರ್ತಿಸುವುದಿಲ್ಲ ಆತನು ಪರಸ್ತ್ರೀ ಜೊತೆಯಲ್ಲಿರುತ್ತಾನೆ. ಪರಿಹಾರ:ಪ್ರತಿನಿತ್ಯ ಸಂಜೆ ಮನೆಯ ಹೊಸ್ತಿಲ ಬಳಿ ಎಳ್ಳೆಣ್ಣೆದೀಪ ಉರಿಸಿ ಹೊಸ್ತಿಲನ್ನು ಪೂಜಿಸಿ. ೧೭.ಪತಿಯು ಎಷ್ಟೇ ಪ್ರೀತಿಯಿಂದಿದ್ದರು ಸತಿಯು ಆತನನ್ನು ತಿರಸ್ಕರಿಸುತ್ತಾಳೆ.ಪತಿಯೊಂದಿಗೆ ಪ್ರೀತಿಯಿಂದ ವ್ಯವಹರಿಸುವುದಿಲ್ಲ. ಪರಿಹಾರ:ಶುಕ್ಲಪಕ್ಷದ ಅಷ್ಟಮಿಯಂದು ಗಂಡ ಸ್ವತಃ ತನ್ನ ಕೈಯಾರ ಹೆಂಡತಿಗೆ ಸಿಂಧೂರ ಹಚ್ಚಬೇಕು. * ಮದುವೆಗೆ ಮುಂಚೆ ಬರುವ ಅಡೆತಡೆಗಳಿಗೆ ಮಾಡಬೇಕಾದ ಪರಿಹಾರಗಳು: ಮದುವೆಗೆ ಮುನ್ನ ಸುಖ ಸಂಸಾರಕ್ಕೆ ವಿಶಿಷ್ಟ ಸೂತ್ರಗಳಿರುತ್ತವೆ.ಇವನ್ನು ಆಚರ‍ಣೆಯಲ್ಲಿ ತರಬೇಕು. * ವಿವಾಹಕ್ಕೆ ಮುನ್ನ ಶ್ರೀ ಕೃಷ್ಣ ಪರಮಾತ್ಮನ ಸೇವೆ ಮಾಡುತ್ತಿರಬೇಕು.ವಿವಾಹದ ನಂತರ ಎಲ್ಲಕ್ಕೂಮೊದಲು ಶ್ರೀಕೃಷ್ಣನ ದೇವಾಲಯದಲ್ಲಿ ದಂಪತಿ ಸಮೇತ ಪೂಜೆ ಸಲ್ಲಿಸಬೇಕು.ಇದರಿಂದ ವಿವಾಹ ಪರ್ಯಂತ ಸುಖ ಜೀವನ ನಡೆಸುವಿರಿ. *ವಿವಾಹಕ್ಕೆ ಒಂದು ವಾರ ಮುಂಚೆ ೭ಅರಿಸಿನಕೊಂಬು ೩ಹಿತ್ತಾಳೆತ ನಾಣ್ಯ,ಚಿಟಿಕೆ ಕೇಸರಿ,ಕರಣೆಬೆಲ್ಲ,ಕಡಲೇಬೇಳೆ ಇವೆಲ್ಲವುಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಗಂಡನ ಮನೆಯತ್ತ ಮುಖಮಾಡಿ ಅಥವ ಆ ದಾರಿಗೆ ಇಡಬೇಕು.ಇದರಿಂದ ಅತ್ತೆ ಮಾವರ ಮುದ್ದಿನಸೊಸೆಯಾಗಿ ಆನಂದದಿಂದ ಜೀವನಕಳೆಯುವಂತಾಗುತ್ತದೆ. * ಪ್ರತಿ ತಿಂಗಳು ಯಾವುದೇ ಸೋಮವಾರದಂದು ನಿಯಮಿತವಾಗಿ ಶಿವಲಿಂಗಕ್ಕೆ ಅಥವ ಹುತ್ತಗಳಿಗೆ ಹನಿಹಾಲು ಅರ್ಪಿಸಿ ಬರುವುದರಿಂದ ಉತ್ತಮ ಜೋಡಿ ದೊರೆತು ದಾಂಪತ್ಯ ಜೀವನದಲ್ಲಿ ಸುಖವಾಗಿರುತ್ತದೆ. * ಶಿವ ಪಾರ್ವತಿ,ಗಣೇಶರ ಬಾವಚಿತ್ರವನ್ನು ನಿಯಮಿತವಾಗಿ ಪೂಜಿಸುವುದರಿಂದ ದಾಂಪತ್ಯಜೀವನದಲ್ಲಿ ಯಾವುದೇ ತೊಂದರೆಗಳು ಬರುವುದಿಲ್ಲ. * ಯೋಗ್ಯ ಪತಿ ದೊರಕಲು ಕನ್ಯೆಯು ನಿಯಮಿತವಾಗಿ ಪಾರ್ವತಿ ದೇವಿಯನ್ನು ಪೂಜಿಸುತ್ತಾ ಈ ಕೆಳಗಿನ ಮಂತ್ರವನ್ನು ನಿತ್ಯ ೯ಸಲ ಜಪಿಸಬೇಕು. "ಗೌರೀ ಶಂಕರಾರ್ಧಾಂಗಿ ಯಥಾತ್ರಂ ಶಂಕರಪ್ರಿಯಾ ತಥಾಮಾಂ ಕುರು ಕಲ್ಯಾಣಿ ಕಾಂತಿ ಕಾಂತಾ ಸುದುರ್ಲಭಂ" * ನವರಾತ್ರಿಯ ಪಂಚಮಿಯಂದು ಕನಿಷ್ಟ ೩ಬಾಲೆಯರನ್ನು ಕರೆದು ಅವರಿಗೆ ಕೆಂಪುವಸ್ತ್ರ ಉಡುಗೋರೆಯಾಗಿ ನೀಡುವುದರಿಂದ ದಾಂಪತ್ಯಜೀವನ ಸುಖಕರವಾಗಿರುತ್ತದೆ. * ಹಳದಿ ವರ್ಣವುಳ್ಳ ಸ್ವಲ್ಪ ದಪ್ಪನೆಯ ದಾರಕ್ಕೆ ಮದ್ಯದಲ್ಲಿ ೫ಗಂಟುಗಳನ್ನು ಮಾಡಿ ಅದನ್ನು ಬಲಗೈಗೆ ಬಳೆಯಂತೆ ಧರಿಸುವುದರಿಂದ ಮತ್ತದು ಧರಿಸಿರುವ ಬಳೆಗಳಿಗೆ ಸ್ಪರ್ಶಿಸುತ್ತಿರಬೇಕು.ಮದುವೆಯಾದಬಳಿಕ ಆ ದಾರವನ್ನು ಬಿಚ್ಚಿ ಯಾವುದಾದರು ಗಿಡದಕೊಂಬೆಗೆ ಕಟ್ಟಿಬರುವುದರಿಂದ ದಾಂಪತ್ಯಜೀವನ ಸುಖಮಯದಿಂದ ಕೂಡಿರುತ್ತದೆ. * ಶುಕ್ಲಪಕ್ಷದ ಸಪ್ತಮಿ ಮತ್ತು ಕೃಷ್ಣಪಕ್ಷದಅಷ್ಟಮಿಯಂದು ವಟವೃಕ್ಷಕ್ಕೆ ಬೆಲ್ಲ, ಕೇಸರಿ,ಇಟ್ಟು ಪೂಜಿಸಿ ಬರಲು ದಾಂಪತ್ಯಜೀವನ ಸುಖಮಯದಿಂದ ಕೂಡಿರುತ್ತದೆ. * ಪ್ರತಿ ಹುಣ್ಣಿಮೆಯಂದು ಮುಂಜಾನೆ ಗಂಗಾಜಲದೊಂದಿಗೆ ವಟವೃಕ್ಷಕ್ಕೆ ಪೂಜಿಸಿ ಬರಲು ದಾಂಪತ್ಯಜೀವನ ಸುಖಮಯದಿಂದ ಕೂಡಿರುತ್ತದೆ. * ಪ್ರತಿ ನಿತ್ಯ ತಂದೆ-ತಾಯಿ/ಅತ್ತೆ-ಮಾವಂದಿರಿಗೆ ನಮಸ್ಕರಿಸುವುದರಿಂದ ಒಳ್ಳೆಯ ವರ/ವಧು ದೊರೆತು ಪೂರ್ಣ ದಾಂಪತ್ಯ ಸುಖವನ್ನು ಅನುಭವಿಸುವಿರಿ. *ಚಿತ್ರಮೊಲಹೂಗಳನ್ನು(ಬಿಳಿಮತ್ತು ಹಳದಿ)ಪುಷ್ಯ ನಕ್ಷತ್ರ ವಿರುವದಿವಸ ತಂದು ಅದನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದು(೨೧ ದಿನಗಳವರೆಗೆ ಸತತವಾಗಿ ಇಟ್ಟುಕೊಳ್ಳುವುದು)ಆದರೆ ಯಾವುದೇ ಕಾರಣಕ್ಕೂ ಇವುಗಳು ದಂಪತಿಗಳ ಕೆಳಕ್ಕೆ ಅಂದರೆ ಬೆನ್ನಿಗೆ ಈ ಹೂವುಗಳು ಸಿಕ್ಕಿಕೊಳ್ಳಬಾರದು)ಇದು ಕಷ್ಟವೆನಿಸಿದರೆ ಎರಡು ತುಂಡು ಈ ಕಡ್ಡಿಯನ್ನು ಅಥವ ಎರಡು ಹೂಗಳನ್ನು ದಂಪತಿಗಳು ಮಲಗುವ ಕೋಣೆಯಲ್ಲಿ ತಮ್ಮದೇ ಬಾವಚಿತ್ರದ ಹಿಂಬಾಗದಲ್ಲಿ ಇಟ್ಟು ೨೧ ದಿನದ ನಂತರ ಹರಿಯುವ ನೀರಲ್ಲಿ ಬಿಡುವುದು. ದಾಂಪತ್ಯ ಜೀವನದಲ್ಲಿ ಪಸ್ಪರ ಪ್ರೀತಿ-ವಾತ್ಸಲ್ಯ ಸ್ಥಿರವಾಗಿ ಉಳಿಯಲಿಕ್ಕಾಗಿ ಈ ಪ್ರಯೋಗ ಮಾಡಬಹುದು. * ರಸಾಯನ ಅಥವ ಬೆಲ್ಲದಿಂದ ಶಿವಲಿಂಗ ಮಾಡಿ ಪ್ರಾಣ ಪ್ರತಿಷ್ಟೆ ಮಾಡಿ ಪೂಜಿಸುವುದು,ಇದು ಪ್ರತಿ ದಿನ ಮುಸ್ಸಂಜೆ(ಗೋದೂಳಿಸಮಯ)ಮಾಡಬೇಕು.ನಂತರ ಅದನ್ನು ಶಿವಾಲಯದಲ್ಲಿ ಇಡಬೇಕು.ಈ ಪ್ರಯೋಗ ೫ ಮಂಗಳವಾರ ಮಾಡುವುದರಿಂದ ದಾಂಪತ್ಯಜೀವನದಲ್ಲಿ ನೆಮ್ಮದಿ ಉಂಟಾಗುತ್ತದೆ. *ವೀಳೆಯದ ಎಲೆಗೆ ಯಡಮುರಿ ಮೊಲಿಕೆ ಅದರಲ್ಲಿ ಒಂದು ಕರ್ಜೂರದ ಬೀಜವನ್ನು ಇಟ್ಟು ಎಲೆಯನ್ನು ಸುತ್ತಿ ದಾರದಿಂದ ಬಂದಿಸಿ ದಂಪತಿಗಳು ಮಲಗುವ ಕೋಣೆಯಲ್ಲಿ ಒಂದು ಮೊಲೆಯಲ್ಲಿ ಕಟ್ಟುವುದು.೧೧ ದಿನದ ನಂತರ ಹರಿಯುವ ನೀರಲ್ಲಿ ಬಿಡುವುದು.(ಈ ಕಾರ್ಯಮಾಡುವುದು ದಂಪತಿಗಳಿಗೇ ತಿಳಿಯದಂತೆ ಮಾಡಬೇಕು.ಕಟ್ಟಿದವರು ಕೂಡ ಅದನ್ನು ೧೧ ದಿನದ ವರೆಗೆ ನೋಡಬಾರದು.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ