*ಮೂಲಾ ನಕ್ಷತ್ರ ಮೂರುಲೋಕವಾಸ* ಮೂಲಾ ನಕ್ಷತ್ರವು ಒಂದು ವರ್ಷದಲ್ಲಿ ತಲಾ ೪ ತಿಂಗಳಿನಂತೆ ಸ್ವರ್ಗ,ಮರ್ತ್ಯ,ಪಾತಾಳಗಳಲ್ಲಿ ವಾಸಮಾಡುತ್ತದೆ. ಆಷಾಡ,ಆಶ್ವೀಜ,ಬಾದ್ರಪದ,ಮಾಘಮಾಸಗಳಲ್ಲಿ ಸ್ವರ್ಗಲೋಕದಲ್ಲಿಯು. ವೈಶಾಖ,ಜ್ಯೇಷ್ಟ,ಮಾರ್ಗಶಿರ,ಪಾಲ್ಗುಣ ಮಾಸಗಳಲ್ಲಿ ಪಾತಾಳದಲ್ಲು. ಚೈತ್ರ,ಶ್ರಾವಣ,ಕಾರ್ತೀಕ,ಪುಷ್ಯ ಮಾಸಗಳಲ್ಲಿ ಭೂಲೋಕದಲ್ಲಿಯು ವಾಸಮಾಡುತ್ತದೆ. ಭೂಲೋಕದಲ್ಲಿ ಮೂಲಾ ನಕ್ಷತ್ರವು ವಾಸಮಾಡುತ್ತಿರುವಾಗ ಮಗು ಜನಿಸಿದರೆ(ಅಂದರೆ ಚೈತ್ರ,ಶ್ರಾವಣ,ಕಾರ್ತೀಕ,ಪುಷ್ಯ ಮಾಸಗಳಲ್ಲಿ)ಮಾತ್ರ ದೋಷ ಉಂಟಾಗುತ್ತದೆ.ಆಗ ಗೋಮುಖಪ್ರಸವ ಶಾಂತಿ ಮಾಡಿಸಬೇಕು. ಪೂರ್ವಾಷಾಡ:- ಈ ನಕ್ಷತ್ರದಲ್ಲಿ ಮಗು ಜನಿಸಿದರೆ ಮಗುವಿನ ತಂದೆ-ತಾಯಿಗೆ ದೋಷವುಂಟಾಗುತ್ತದೆ. ಆದ್ದರಿಂದ ಕಂಚಿನ ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ವಸ್ತ್ರ,ಫಲ,ತಾಂಬೂಲ,ದಕ್ಷಿಣೆ ಸಹಿತ ಪುರೋಹಿತರಿಗೆ/ಬಡವರಿಗೆ/ಗುರುಗಳಿಗೆ ದಾನಕೊಡಬೇಕು ಈ ಕಾರ್ಯ ಮಗು ಜನಿಸಿದ ೨೭ ದಿನದೊಳಗೆ ನಡೆಯಬೇಕು. ಅಶ್ಲೇಷ:- ಈ ನಕ್ಷತ್ರಕ್ಕೆ ಆದಿಶೇಷನು ಅಧಿಪತಿಯಾಗಿರುವುದರಿಂದ ಸರ್ಪದ ಹೆಡೆ ಅಗಲದಷ್ಟು ಇರುವ ಕಲಾಪತ್ತಿನ ಅಂಚುಳ್ಳ ಶಾಲನ್ನು ತಂದುಶಾಂತಿ ಮಾಡತಕ್ಕ ಸ್ಥಳದಲ್ಲಿ ಸಾರಿಸಿ ಗಣಪತಿಯನ್ನು ಸ್ಥಾಪಿಸಿ ಪೂಜಿಸಬೇಕು.ರಂಗವಲ್ಲಿಯಿಂದ ಕಮಲಾಕಾರದ ಮಂಡಲವನ್ನು ಬರೆದು ಒಂದು ಹೊಸ ಮೊರದಲ್ಲಿ ಭತ್ತವನ್ನು (ಅಕ್ಕಿ)ಹರವಿ ಒಂದು ದೊನ್ನೆಯಲ್ಲಿ ೯ವಿಧ ದಾನ್ಯವನ್ನು ಹಾಕಿ(ನವದಾನ್ಯ)೯ ವಿಧವಾದ ಪತ್ರೆಗಳಿಂದ(ಬಿಲ್ವ,ಭನ್ನಿ,ಎಕ್ಕ,ಅರಳ...