Skip to main content

ಶನಿಕಾಟ ಶುರುವಾದರೆ ಆಗೋದು ಹೀಗೆ!

ಹಿಂದಿನ ದಿನಗಳಲ್ಲಿ ರಾಜ-ಮಹಾರಾಜರು ತಮ್ಮ ಆಸ್ಥಾನದ ರಾಜಗುರುಗಳಿಂದ ತಮ್ಮ ಜಾತಕ ಬರೆಯಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಹಲವಾರು ಕಥೆ ಪುರಾಣಗಳಲ್ಲಿವೆ. ಆದರೆ ಆಗಿನ ನಾಗರಿಕರು ರಾಜಗುರುಗಳಿಂದ ತಮ್ಮ ಜಾತಕ ಬರೆಯಿಸಿಕೊಳ್ಳುವುದು ಕಷ್ಟದ ಕೆಲಸವೆಂದುಕೊಂಡು ತಮ್ಮ ರಾಜನನ್ನೇ ದೇವರೆಂದು ಪೂಜಿಸುತ್ತಿದ್ದರು. ಅದೇ ರೀತಿ ದಶಕಗಳ ಹಿಂದಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳ ಜನ್ಮದ ಮಾಹಿತಿಯನ್ನು ಯಾವುದೋ ಕಾರಣದಿಂದ ಎಲ್ಲಿಯೂ ಬರೆದಿಟ್ಟಿರುತ್ತಿರಲಿಲ್ಲ. ಜಾತಕವು ಸಮಾಜದಲ್ಲಿನ ಕೆಲವೊಂದು ಉಚ್ಚ ಜಾತಿಯವರಿಗೆ ಮಾತ್ರ ಸೀಮಿತವೆಂಬಂತೆ ಪರಿಸ್ಥಿತಿ ಇತ್ತೇನೋ ಎನಿಸುತ್ತದೆ. ಇರಲಿ, ಈಗ ಜನ್ಮರಾಶಿ ಗೊತ್ತಿಲ್ಲದವರಿಗೆ ಶನಿಕಾಟ ನಡೀತಾ ಇದೆಯಾ ಎಂದು ಹೇಗೆ ತಿಳಿದುಕೊಳ್ಳಬಹುದು ಎಂಬುದನ್ನು ನೋಡೋಣ. ಶನಿಕಾಟ ಶುರುವಾದಾಗ ವ್ಯಕ್ತಿಗಳ ದೈನಂದಿನ ಜೀವನದಲ್ಲಿ ಕೆಲವೊಂದು ವಿಚಿತ್ರ ಲಕ್ಷಣ ಕಂಡು ಬರುತ್ತವೆ. ಆ ರೀತಿ ಲಕ್ಷಣ ನಿಮ್ಮ ಜೀವನದಲ್ಲಿ ನಡೆಯುತ್ತಿದ್ದರೆ, ಶನಿಕಾಟ ಇದೆ ಎಂದು ತಿಳಿದುಕೊಂಡು ಕೂಡಲೇ ಅಗತ್ಯ ಪರಿಹಾರ ಮಾಡಿಕೊಳ್ಳೋದು ಒಳ್ಳೆಯದು. ಈ ರೀತಿ ಲಕ್ಷಣಗಳು ನಮಗೆ ತುಂಬಾ ದಿನಗಳಿಂದ ಬರುತ್ತಲೇ ಇರುತ್ತವೆ. ಇದೆಲ್ಲಾ ಮೂಢನಂಬಿಕೆ ಎಂದುಕೊಂಡು ಸುಮ್ಮನಾಗುವವರು ಸುಮ್ಮನಾಗಬಹುದು. ಯಾಕೆಂದರೆ ದೇವರು ಯಾರಿಗೆ ವರ ಕೊಡುತ್ತಾನೋ ಶಾಪ ಕೊಡುತ್ತಾನೋ ಪಡೆದುಕೊಂಡವರಿಗೆ ಮಾತ್ರ ಗೊತ್ತು. ಆದರೆ ಶನಿದೇವನ ಪ್ರಭಾವವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅನುಭವಿಸಲೇಬೇಕು. ಶನಿಕಾಟದ ಲಕ್ಷಣಗಳು : ಜನ್ಮರಾಶಿ, ನಕ್ಷತ್ರ ಏನೂ ಗೊತ್ತಿಲ್ಲದವರಿಗೆ ಶನಿಕಾಟದ ಲಕ್ಷಣಗಳು ಈ ರೀತಿ ಇರುತ್ತವೆ ಗಮನಿಸಿ. ಎಲ್ಲಿಯೇ ಊಟ ಮಾಡುತ್ತಿರಲಿ, ತಟ್ಟೆಯಲ್ಲಿ ಕೂದಲು, ಹುಳು, ಕಲ್ಲು ಅಥವಾ ಇನ್ನಿತರ ವಸ್ತುಗಳು ಕಂಡು ಬರುತ್ತವೆ. ಕೆಲವೊಮ್ಮೆ ಊಟ ಮಾಡುವಾಗ ಬಾಯಲ್ಲಿ ಎನೋ ಇದೆ ಎಂದು ಗೊತ್ತಾಗಿ ತುತ್ತು ಉಗುಳಬೇಕಾಗುತ್ತದೆ. ಈ ಹಿಂದೆ ಊಟ ಮಾಡುವಾಗ ಎಲ್ಲವೂ ಚೆನ್ನಾಗಿ ಇತ್ತು. ಆದರೆ ಈಗೀಗ ಈ ತರಹ ಯಾಕೆ ಆಗ್ತಾ ಇದೆ ಅಂತಾ ನಿಮ್ಮ ಮನಸ್ಸಿನಲ್ಲಿ ಸಣ್ಣ ಯೋಚನೆ ಸುಳಿಯುತ್ತದೆ. ಮನೆಯಲ್ಲಿ ಹೇಳಿದರೆ ಯಾರಿಗೂ ಬರದಿರೋದು ನಿನಗೆ ಮಾತ್ರ ಬರುತ್ತಾ ಅಂತಾ ಬೈಯಿಸಿಕೊಳ್ಳಬೇಕಾಗುತ್ತದೆ. ಇನ್ನು ತಲೆಗೂದಲು ಸ್ವಲ್ಪ ಸ್ವಲ್ಪ ಉದರೋಕೆ ಆರಂಭವಾಗುತ್ತದೆ. ತಲೆಹೊಟ್ಟು ವಿಪರೀತವಾಗಿ ಹೆಚ್ಚುತ್ತೆ. ತಲೆಕೆರೆತವಾಗುತ್ತಿರುತ್ತದೆ. ತಲೆನೋವು ಮಾತ್ರೆ ನುಂಗಿದರೂ ಕಮ್ಮಿಯಾಗಂಗಿಲ್ಲ. ಹಲ್ಲು ನೋವು ನಿದ್ದೆಗೆಡಿಸುತ್ತದೆ. ಎಲ್ಲಿಂದಲೋ ಬಂದು ಕಾಗೆ ತಲೆ ಅಥವಾ ದೇಹದ ಇತರ ಯಾವುದಾದರೂ ಅಂಗವನ್ನು ಮುಟ್ಟುತ್ತದೆ ಅಥವಾ ಮನೆಯೊಳಗಡೆಗೆ ಬರುತ್ತದೆ. ಹೊರಗಡೆ ಸುತ್ತಾಡುವಾಗ ಮೈಮೇಲೆ ಮರದಲ್ಲಿರುವ ಕಾಗೆಯ ಶೌಚ ಬೀಳುತ್ತದೆ. ನಿಮಲ್ಲೇನಾದರೂ ಕಾರು ಇದ್ದರೆ ಅದರ ಗಾಜಿನ ಮೇಲೆ ಪದೇ ಪದೇ ಕಾಗೆಯ ಶೌಚ ಬೀಳ್ತಾನೆ ಇರುತ್ತದೆ. ಆದರೆ ಬೇರೆಯವರ ಕಾರಿನ ಗಾಜಿನ ಮೇಲೆ ಬೀಳದಿರುವುದು ನಿಮ್ಮ ಕಾರಿನ ಮೇಲೆ ಮಾತ್ರ ಬೀಳುತ್ತಾ ಇರುತ್ತದೆ ಎಂಬುದನ್ನು ನೀವು ಗಮನಿಸುವುದೇ ಇಲ್ಲ. ಇದಲ್ಲದೇ ಆವಾಗಾವಾಗ ಯಾವುದಾದರೊಂದು ಕೆಟ್ಟ ವಿಷಯ, ಸುದ್ದಿಗಳನ್ನೇ ಕೇಳುತ್ತಿರಬೇಕಾಗುತ್ತದೆ. ಏನಪ್ಪಾ ಇದು ಬರೀ ಕೆಟ್ಟದ್ದೇ ನನಗೆ ಕಾಣುತ್ತಿದೆಯಾ ಎಂದು ಬೇಸರ ಮಾಡಿಕೊಳ್ಳೋ ಹಾಗಾಗುತ್ತದೆ. ಹಲವಾರು ವರ್ಷಗಳಿಂದ ಜೋಪಾನದಿಂದ ಕೂಡಿಟ್ಟು, ಕಾಪಾಡಿಕೊಂಡು ಬಂದಂತಹ ನಿಮ್ಮ ಅತ್ಯಂತ ಪ್ರೀತಿಯ ವಸ್ತುಗಳು ಅದೇಗೋ ಕಳೆದುಹೋಗುತ್ತವೆ. ವೃಥಾ ಅಪವಾದ : ಇನ್ನು ನಿಮ್ಮ ಅತೀವ ಪ್ರೀತಿ ಪಾತ್ರರು ನಿಮ್ಮ ಮೇಲೆ ಏನೇನೋ ಅಪವಾದ ಹೊರಿಸಿ ನೀವೇನೂ ಮಾಡದಿದ್ದರೂ ನಿಮ್ಮನ್ನು ಒಂಟಿಯಾಗಿಸುತ್ತಾರೆ. ಇದರಿಂದ ದುಶ್ಚಟಗಳ ಬೆನ್ನು ಹತ್ತುವಂತಾಗುತ್ತದೆ. ಪ್ರೀತಿಯ ವಿಷಯದಲ್ಲಂತೂ ಮುಖ ಕೂಡ ನೋಡಲು ಹಿಂಜರಿಯುವಂತಾಗುತ್ತದೆ. ಪ್ರೀತಿಸಿದವರು ಈ ಹಿಂದೆ ಅದೇ ಮುಖ ಒಂದು ಕ್ಷಣ ನೋಡಲು ಪರಿತಪಿಸುವವರು ಈಗ ಮುಖ ತಿರುಗಿಸಿಕೊಂಡು ಬಿಟ್ಟಿರುತ್ತಾರೆ. ಹೆಚ್ಚಾಗಿ ಕಪ್ಪು ಬಣ್ಣದ ವಾಹನಗಳಿಂದ ಅಪಾಯವಾಗುವ ಸಂಭವವಿರುತ್ತದೆ. ಆದ್ದರಿಂದ ಕಪ್ಪು ಬಣ್ಣದ ವಾಹನವೇನಾದರೂ ಎದುರಿಗೆ ಬಂದರೆ ಮೈಯೆಲ್ಲಾ ಎಚ್ಚರವಾಗಿರಬೇಕು. ಎಷ್ಟೇ ಚಿಕಿತ್ಸೆ ಪಡೆಯುತ್ತಿದ್ದರೂ ಕಾಲು ನೋವು, ಮಂಡಿ ನೋವು ಹೆಚ್ಚಾಗುತ್ತಿರುತ್ತದೆ ಹೊರತು ಕಮ್ಮಿಯಾಗುವುದಿಲ್ಲ. ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದರೂ ಏನೂ ಪ್ರಯೋಜನವಾಗುವುದಿಲ್ಲ. ವಿವಿಧ ರೀತಿ ವಾದ-ವಿವಾದಗಳಿಂದಾಗಿ ಸಮಯ ಹಾಳಾಗುತ್ತ ಕಾನೂನಾತ್ಮಕವಾಗಿ ತೊಂದರೆಯಾಗಿ ಕೋರ್ಟ್ ಮೆಟ್ಟಿಲೇರಬಹುದು. ಅಥವಾ ಆರಕ್ಷಕರಿಂದಾಗಿ ತೊಂದರೆ ಕಾಣಿಸಿಕೊಳ್ಳುತ್ತವೆ. ದೇಹಕ್ಕೇನಾದರೂ ಗಾಯವಾಗುತ್ತಲೇ ಇರುತ್ತದೆ. ಕೆಲವರಿಗೆ ಮೂಳೆ ಮುರಿತದ ನೋವು ಕೂಡ ಅನುಭವಿಸಬೇಕಾಗುತ್ತದೆ. ಪ್ರತಿ ಶನಿವಾರ ಮಾತ್ರ ನಿದ್ದೆ ಬರದೇ ಹೆಚ್ಚಿನ ಆತಂಕ, ಉದ್ವೇಗದಿಂದಲೇ ರಾತ್ರಿ ಕಳೆಯಬೇಕಾಗಿರುತ್ತದೆ. ಪ್ರತಿನಿತ್ಯ ಚೆನ್ನಾಗಿದ್ದರೂ ಶನಿವಾರ ಅಥವಾ ಅಮವಾಸ್ಯೆ ಬಂದರೆ ಸಾಕು ವಿಚಿತ್ರವಾಗಿ ಬದಲಾವಣೆಯಾಗುತ್ತೆ ಮನಸ್ಸು. ಕೆಲವೊಮ್ಮೆ ವಿಕೃತ ಕೂಡ ಆಗಬಹುದು ಮನಸ್ಸು. ಈ ದಿನಗಳಂದೇ ಅಪಘಾತ ಅಥವಾ ಹೊಡೆದಾಟ, ಜಗಳ ಆಗುತ್ತವೆ. ಅಥವಾ ತಿಂಗಳಿನ 8, 17, 26ನೇ ತಾರೀಖಿನಂದೇ ಹೆಚ್ಚಿನ ತೊಂದರೆಗಳು ಉದ್ಭವಿಸುತ್ತಿರುತ್ತವೆ. ಆದ್ದರಿಂದ ಪುಷ್ಯ, ಅನುರಾಧ, ಉತ್ತರ ಭಾದ್ರಪದ ನಕ್ಷತ್ರಗಳಿರುವ ದಿನಗಳಂದು ಸ್ವಲ್ಪ ಜಾಗ್ರತೆ ವಹಿಸಿಕೊಂಡಿರಬೇಕು. ಶನಿದೇವನ ಕೃಪಾಕಟಾಕ್ಷದಿಂದ ಮಾತ್ರ : ನಿಮ್ಮ ಬಳಿ ಎಷ್ಟೇ ದುಡ್ಡಿದ್ದರೂ ಎಲ್ಲ ಸೌಲಭ್ಯಗಳಿದ್ದರೂ ಈ ದಿನಗಳಲ್ಲಿ ಆಗುವ ಈ ತೊಂದರೆ ಬಗೆಹರಿಯುವುದು ಶನಿದೇವನ ಕೃಪಾಕಟಾಕ್ಷದಿಂದ ಮಾತ್ರ. ಮೂತ್ರಕೋಶದಲ್ಲಿ ತೊಂದರೆ ಅಥವಾ ಹರಳು ಆಗುವುದು. ವಿಪರೀತ ನೋವು ತಡೆದುಕೊಳ್ಳಲಾಗದೇ ಸಂಕಟ ತರುತ್ತದೆ. ಜೀವನ ಆರಾಮಾಗಿರಬೇಕು ಎಂದು ಪರಿತಪಿಸುವಂತಾಗಿರುತ್ತದೆ. ಮನೆ, ಕಚೇರಿಯಲ್ಲಿ, ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಏನಾದರೂ ಚಿಕ್ಕ ಪುಟ್ಟ ಕಾರಣಕ್ಕಾಗಿ ಜಗಳ ಶುರುವಾಗುತ್ತದೆ. ಹೀಗಾಗಿ ಎಲ್ಲರೊಂದಿಗೆ ಮುಖ ಕೆಡಿಸಿಕೊಂಡು ಮಾತು ಬಿಡುವಂತಾಗಿರುತ್ತದೆ. ಹಣದ ಕೊರತೆ ವಿಪರೀತ ಕಾಡುತ್ತದೆ. ದುಡ್ಡಿಲ್ಲದೇ ತಲೆ ಕೆಟ್ಟವರ ತರಹ ಜೀವನವೇ ಮುಗೀತು ಎಂದುಕೊಳ್ಳುವಂತಾಗುತ್ತದೆ. ಏನಾದರೂ ಅಜ್ಞಾನದಿಂದ ತಪ್ಪು ಮಾಡಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡು, "ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡರು" ಎನ್ನುವ ಹಾಗೆ ಆಗುತ್ತದೆ. ಆಡುವ ಕೆಟ್ಟ ಮಾತು ಮೃತ್ಯು ಕೂಡ ತರಬಹುದು. ಆದ್ದರಿಂದ ಮುತ್ತಿನಂಥ ಮಾತು ಆಡಲು ಕಲಿಯಬೇಕು. ನಿಮ್ಮಲ್ಲಿ ನಾನೇ ಹೆಚ್ಚು ಎಂದು ಹೇಳಿಕೊಳ್ಳುವ ಗುಣವಿದ್ದರೆ ಮೊದಲು ಆ ಗುಣ ಬಿಡಬೇಕು. "ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ" ಎಂಬ ಮಾತು ನೀವು ಕೇಳಿರಬಹುದು. ಆದರೆ ಶನಿದೇವನ ಕಾಟದಲ್ಲಿ ಗುಣ ಬದಲಾವಣೆ ಮಾಡಿಕೊಳ್ಳದಿದ್ದರೆ, ನಿಮ್ಮ ಅತೀವ ಅಹಂಕಾರದಿಂದ "ಬೋರ್ಡ್‌ದಲ್ಲಿರದಂಗೆ ಹೋಗೋದು" ಗ್ಯಾರಂಟಿನೇ. ಬಡತನವು ಕಲಿಸುವ ಪಾಠ ಯಾವ ಯೂನಿವರ್ಸಿಟಿಯೂ ಕಲಿಸೋದಿಲ್ಲ. ನೀವು ಕಲಿಯಲೆಂದೇ ಶನಿದೇವನು ತನ್ನ ಕಾಡಾಟದಲ್ಲಿ ಬಡತನವನ್ನೂ ಕೊಟ್ಟು ನಿಮ್ಮನ್ನು ಜೀವನದ ಪಾಠ ಕಲಿಯುವಂತೆ ಮಾಡುತ್ತಾನೆ. ಅಧರ್ಮ, ಅನ್ಯಾಯ, ಅನೀತಿಯಿಂದ ಗಳಿಸಿದ್ದೆಲ್ಲ ಹಾಗೂ ಪ್ರೀತಿಪಾತ್ರರನ್ನು ಕಳೆದುಕೊಳ್ಳಬೇಕಾಗುತ್ತದೆ. ಮಾಡಿದ ಕುಕರ್ಮದಿಂದ ಮನೆಮಂದಿಯಲ್ಲ ದೂರವಾಗುತ್ತಾರೆ. ನಿಮಗೆ ಗೊತ್ತಿರಬಹುದು ಕೆಟ್ಟವರು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ನೀವು ಒಳ್ಳೆಯವರಾಗಿದ್ದರೆ ನಿಮ್ಮ ಮುಂದೆ ತಲೆಬಾಗುತ್ತಾರೆ. ನಿಮ್ಮ ಗುಣ ಹೇಗೆ, ಅವರ ಗುಣ ಹೇಗಿದೆ ಎಂದು ಅವರ ಆತ್ಮಕ್ಕೆ ಗೊತ್ತಿರುತ್ತದೆ! ಹೀಗಾಗಿಯೇ ಅವರ ತಲೆ ನಿಮ್ಮ ಮುಂದೆ ತಾನಾಗಿಯೇ ಬಾಗುತ್ತದೆ. ಕೆಲವೊಬ್ಬರು ಇರುತ್ತಾರೆ "ಬಾಯಲ್ಲಿ ಬಸಪ್ಪ, ಹೊಟ್ಟೆಯಲ್ಲಿ ವಿಷಪ್ಪ" ಎಂಬಂತೆ. ಅಂಥಹವರು ದೇವರೇ ಕಾಪಾಡಪ್ಪ ಎಂದು ಹಲುಬುವಂತಾಗುತ್ತದೆ ಶನಿಕಾಟದಲ್ಲಿ. ಶನಿದಶೆ ಎಂದರೇನು? ಎಂಬುದು ಮುಂದಿನ ಲೇಖನದಲ್ಲಿ. ವಾಸ್ತು ಟಿಪ್ಸ್ : ಮನೆಯ ದೇವರಸ್ಥಳವನ್ನು ಈಶಾನ್ಯ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ. ಈಶಾನ್ಯಕ್ಕೆ ದೇವರಿಡಲು ಆಗದಿದ್ದರೆ ಆ ದಿಕ್ಕಿಗೆ ಹತ್ತಿರದಲ್ಲಾದರೂ ವ್ಯವಸ್ಥೆ ಮಾಡಿ. ನಿಮಗೆ ಬೇಕಾದ, ಅನುಕೂಲದ ಸ್ಥಳಗಳಲ್ಲಿ ದೇವರನ್ನು ಇಟ್ಟು, ದೇವರಿಗೇನು ವರವ ಬೇಡಿಕೊಳ್ಳಬೇಡಿ. ಯಾವುದೂ ಈಡೇರಲ್ಲ. ಶನಿದೇವನ ಕೃಪೆಗೆ : ಕ್ರಿಮಿ-ಕೀಟಗಳಿಗೆ ಮನೆ ಮಾಡಲು ಅವಕಾಶ ಮಾಡಿಕೊಟ್ಟು ನಿಮ್ಮ ಮನೆಯನ್ನು ಹಾಳುಮನೆಯನ್ನಾಗಿಸಿಕೊಳ್ಳದೇ ಸ್ವಚ್ಛವಾಗಿಟ್ಟುಕೊಳ್ಳಿ. -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ