Skip to main content

ನಮ್ಮ ಆಹಾರ : ಆಹಾರದ ಗುಂಪುಗಳು

ನಮ್ಮ ಆಹಾರ : ಆಹಾರದ ಗುಂಪುಗಳು ಆಹಾರವಿಲ್ಲದೆ ಮನುಷ್ಯನು ಬದುಕುವುದು ಅಸಾಧ್ಯ. ಆಹಾರದಿಂದ ಲಭಿಸುವ ಇಂಧನವಿಲ್ಲದೆ ದೇಹದ ಜೀವಕೋಶಗಳು ತಮ್ಮ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾರವು. ಆದ್ದರಿಂದ ದೇಹದ ನಾನಾ ಕ್ರಿಯೆಗಳನ್ನು ಸರಿದೂಗಿಸಲು, ದೇಹದ ಅವಶ್ಯಕತೆಗೆ ಅನುಗುಣವಾಗಿ ಶರ್ಕರ ಪಿಷ್ಟ, ಸಸಾರಜನಕ, ಕೊಬ್ಬು, ಖನಿಜಗಳು ಮತ್ತು ಜೀವಸತ್ವಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕಾಗುವುದು. ಸಮತೂಕ ಆಹಾರವನ್ನು ಸೇವಿಸದಿದ್ದರೆ, ಆಹಾರದಲ್ಲಿ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲದೆ, ಅಪೌಷ್ಟಿಕತೆಯಿಂದ ಉಂಟಾಗುವ ರೋಗಗಳ ಜೊತೆಗೆ ರೋಗ ನಿರೋಧಕ ಶಕ್ತಿಯು ಕುಗ್ಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಅಪಾಯ ಉಂಟಾಗಬಹುದು. ಆದುದರಿಂದ ಸಮತೋಲನ ಆಹಾರದ ಸೇವನೆ ಅತ್ಯಾವಶ್ಯಕ. ಆಹಾರವನ್ನು ಐದು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಅವುಗಳ ವರ್ಗೀಕರಣಗಳನ್ನು ಕೆಳಗೆ ವಿವರಿಸಲಾಗಿದೆ. ಆಹಾರದ ಐದು ಗುಂಪುಗಳು ೧. ಧಾನ್ಯಗಳ ಗುಂಪು ೨. ಬೆಳವಣಿಗೆಗೆ ಸಹಾಯಕವಾಗುವ ಆಹಾರಗಳ ಗುಂಪು: ಬೇಳೆಕಾಳುಗಳು, ಹಾಲು, ಮೊಟ್ಟೆ, ಮಾಂಸ ಮತ್ತು ಮೀನು. ೩. ಸಂರಕ್ಷಕ ಆಹಾರಗಳಾದ ತರಕಾರಿ ಮತ್ತು ಹಣ್ಣುಗಳ ಗುಂಪು ಅ. ಸೊಪ್ಪು, ಹಳದಿ ಬಣ್ಣದ ತರಕಾರಿ ಮತ್ತು ಹಣ್ಣುಗಳು ಆ. ನೆಲ್ಲಿಕಾಯಿ, ಸೀಬೆಹಣ್ಣು- ಜಂಬೀರ ಜಾತೀಯ ಹಣ್ಣಗಳು ೪. ಇತರ ತರಕಾರಿ ಮತ್ತು ಹಣ್ಣುಗಳ ಗುಂಪು. ೫. ಎಣ್ಣೆ,ಕೊಬ್ಬು ಮತ್ತು ಸಕ್ಕರೆಯನ್ನೊಳಗೊಂಡ ಗುಂಪು. ಪ್ರತಿ ಗುಂಪಿನಿಂದ ದಿನಕ್ಕೆ ಎಷ್ಟು ಆಹರವನ್ನು ಸೇವಿಸಬೇಕು ಎಂಬ ಮಾಹಿತಿಯನ್ನು ಕೋಷಕ ೧ರಲ್ಲಿ ಕೊಟ್ಟಿದೆ. ಪ್ರತಿ ದಿನ ಐದು ಗುಂಪಿಗೂ ಸೇರಿರುವಂತಹ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ನಮ್ಮ ದೇಹಕ್ಕೆ ಸಮತೂಕ ಆಹಾರ ಲಭಿಸುತ್ತದೆ. ಆಹಾರದ ಐದು ಗುಂಪುಗಳಲ್ಲಿ ಬರುವ ವಿವಿಧ ಆಹಾರಗಳು ಮತ್ತು ಅವುಗಳಿಂದ ಸಿಗುವ ಪೋಷಕಾಂಷಕಾಂಶಗಳು ಹಾಗೂ ಅವುಗಳ ಪ್ರಮಾಣಗಳೊಂದಿಗೆ ಪ್ರತಿದಿನ ಸೇವಿಸಬೇಕಾದ ವಿವರಗಳನ್ನು ಕೆಳಗೆ ಕೊಡಲಾಗಿದೆ. ೧. ಧಾನ್ಯ ಮತ್ತು ಕಾಳುಗಳು ಈ ಗುಂಪಿನ ಆಹಾರಗಳು ಶರ್ಕರಪಿಷ್ಟ ಮತ್ತು ಸಸಾರಜನಕದ ಜೊತೆಗೆ ಥಯಾಮಿನ್ ಎನ್ನುವ ಬಿ ಗುಂಪಿನ ಜೀವಸತ್ವವನ್ನು ಒದಗಿಸುತ್ತವೆ. ೨೫ಗ್ರಾಂ ನಿಂದ ತಯಾರಿಸಲ್ಪಟ್ಟ ಯಾವುದೇ ಆಹಾರ ವಸ್ತುವನ್ನು ಒಂದು ಅಳತೆ ಎಂದು ತೆಗೆದುಕೊಂಡರೆ ಕನಷ್ಟ ೬ ಅಳತೆಯ ಆಹಾರವನ್ನು ಈ ಗುಂಪಿನಿಂದ ಪ್ರತಿದಿನ ಸೇವಿಸಬೇಕು. ಉದಾಹರಣೆಗೆ: ಅರ್ಧಬಟ್ಟಲು (ಕಟೋರಿ) ಅನ್ನ, ಒಂದು ಚಪಾತಿ ಅಥವಾ ರೊಟ್ಟಿ, ಎರಡು ಪೂರಿಗಳು. ೨. ಬೆಳವಣಿಗೆಗೆ ಸಹಾಯಕವಾಗುವ ಆಹಾರಗಳ ಗುಂಪು ಈ ಗುಂಪಿನ ಆಹಾರಗಳು ದೇಹಕ್ಕೆ ಬೇಕಾಗುವ ಸಸಾರಜನಕ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಜೀವಸತ್ವ ಬಿ ಯನ್ನು ಒದಗಿಸುತ್ತವೆ. ಹಾಲಿನಲ್ಲಿ ಸುಣ್ಣದಂಶ ಹಾಗೂ ಮೊಟ್ಟೆ ಮತ್ತು ಯಕೃತ್ತಿನಲ್ಲಿ ಕಬ್ಬಿಣಾಂಶ ಅಧಿಕವಾಗಿ ಇರುತ್ತವೆ. ಈ ಗುಂಪಿನಿಂದ ಸೇವಿಸಿದ ಒಂದು ಅಳತೆಯ ಆಹಾರ ೫-೬ ಗ್ರಾಂ ಸಸಾರಜನಕವನ್ನು ಒದಗಿಸುತ್ತದೆ. ೩. ಬೆಳವಣಿಗೆಗೆ ಸಹಾಯಕವಾಗುವ ಆಹಾರಗಳ ಗುಂಪು ೧) ಈ ಗುಂಪಿನಲ್ಲಿ ಜೀವಸತ್ವ ಎ ಹೆಚ್ಚಾಗಿರುತ್ತದೆ. ಎಲ್ಲಾ ತರಹದ ಸೊಪ್ಪುಗಳು, ಎಲೆಕೋಸು, ಈರುಳ್ಳಿ ಸೊಪ್ಪು, ಗಜ್ಜರಿ, ಸಿಹಿಕುಂಬಳಕಾಯಿ, ಕಿತ್ತಳೆಹಣ್ಣು, ಮಾವಿನಹಣ್ಣು, ಪಪಾಯ ಈ ಗುಂಪಿನಲ್ಲಿ ಬರುತ್ತವೆ. ಒಂದು ಅಳತೆ ಅಂದರೆ ಅರ್ಧ ಕಟೋರಿ ಅಥವಾ ೫೦-೭೫ಗ್ರಾಂ ಬೇಯಿಸಿದ ಸೊಪ್ಪು ಅಥವಾ ತರಕಾರಿ ಅಥವಾ ಒಂದು ಹಣ್ಣಿನ ಸೇವನೆಯಿಂದ ಅರ್ಧ ದಿನದ ಜೀವಸತ್ವ ಎ ನ ಅವಶ್ಯಕತೆಯನ್ನು ಭರಿಸಬಹುದು. ೨) ನೆಲ್ಲಿಕಾಯಿ, ನಿಂಬೆ, ಸೀಬೆಕಾಯಿ, ನುಗ್ಗೆ, ಕೆತ್ತಲೆ, ದ್ರಾಕ್ಷಿ, ಟೊಮೆಟೊ ಮುಂತಾದ ಹಣ್ಣುಗಳಲ್ಲಿ ಸಿ ಅಂಶ ಹೆಚ್ಚಾಗಿರುತ್ತದೆ. ಈ ಗುಂಪಿನಿಂದ ಪ್ರತಿದಿನ ಅರ್ಧ ಕಟೋರಿ ಅಥವಾ ೫೦-೭೫ ಗ್ರಾಂ ಹಣ್ಣು ಮತ್ತು ತರಕಾರಿಯನ್ನು ಸೇವಿಸಲೇಬೇಕು. ೪. ಇತರ ತರಕಾರಿ ಮತ್ತು ಹಣ್ಣುಗಳ ಗುಂಪು ಈ ಗುಂಪಿನಲ್ಲಿ ಬದನೆ, ಸೌತೆಕಾಯಿ, ಕುಂಬಳಕಾಯಿ, ಬೆಂಡೆಕಾಯಿ, ಸೋರೆಕಾಯಿ, ಬೂದುಗುಂಬಳ, ಬೀನ್ಸ್, ಬಟಾಣಿ, ಮೂಲಂಗಿ, ಬೀಟ್‌ರೂಟ್‌, ಆಲೂಗಡ್ಡೆ, ಸುವರ್ಣಗಡ್ಡೆ, ಮುಂತಾದ ತರಕಾರಿಗಳು ಹಾಗೂ ಬಾಳೆ, ಸೇಬು, ಕಲ್ಲಂಗಡಿ, ಕರ್ಬೂಜ ಮುಂತಾದ ಹಣ್ಣುಗಳು ಬರತ್ತವೆ. ಅರ್ಧ ಕಟೋರಿ ಅಥವಾ ೫೦-೭೫ ಗ್ರಾಂ ಅನ್ನು ಒಂದು ಅಳತೆಯೆಂದರೆ ಪ್ರತಿದಿನ ೨ ಅಥವಾ ಹೆಚ್ಚು ಅಳತೆಯ ಆಹಾರವನ್ನು ಈ ಗುಂಪಿನಿಂದ ಸೇವಿಸಬೇಕು. ೫. ಸಕ್ಕರೆ ಅಥವಾ ಬೆಲ್ಲ ಹಾಗೂ ಕೊಬ್ಬು ಅಥವಾ ಎಣ್ಣೆ ಈ ಗುಂಪಿನ ಆಹಾರಗಳಿಂದ ದೇಹಕ್ಕೆ ಮುಖ್ಯವಾಗಿ ಕ್ಯಾಲೋರಿ ಶಕ್ತಿ ಲಭಿಸುತ್ತದೆ. ದಿನಕ್ಕೆ ೨೫ ಗ್ರಾಂ ಸಕ್ಕರೆ ಅಥವಾ ಬೆಲ್ಲ ಮತ್ತು ೨೫ ಗ್ರಾಂ ಎಣ್ಣೆ ಅಥವಾ ಕೊಬ್ಬು ಬೇಕಾಗುತ್ತದೆ. ಎಣ್ಣೆ ಮತ್ತು ಕೊಬ್ಬಿನಿಂದ ಜೀವಸತ್ವ ಎ,ಡಿ,ಇ, ಮತ್ತು ಕೆ ಗಳೂ ಲಭಿಸುವುದಲ್ಲದೆ ಇವು ಆಹಾರಕ್ಕೆ ಸ್ವಾದವನ್ನು ಕೊಡುತ್ತವೆ. ಆದ್ದರಿಂದ ಎಣ್ಣೆ ಅಥವಾ ಕೊಬ್ಬನ್ನು ದಿನನಿತ್ಯ ಉಪಯೋಗಿಸಬೇಕು. ಕೋಷ್ಟಕ೧. ದೈನಿಕಆಹಾರದಮಾರ್ಗಸೂಚಿ ಆಹಾರದ ಗುಂಪುಗಳು ಆಹಾರ ಪದಾರ್ಥಗಳು ಒಂದು ಅಳತೆಯ ಆಹಾರ ಸೇವಿಸಬೇಕಾದ ಪ್ರಮಾಣ ೧. ಧಾನ್ಯ ಕಾಳುಗಳು ಜೋಳ, ಅಕ್ಕಿ, ಗೋಧಿ, ರಾಗಿ ೧ ಅಳತೆ ೩೦ಗ್ರಾಂ:ಅರ್ಧ ಕಟೋರಿ ಅನ್ನ/ಒಂದು ಚಪಾತಿ/ಒಂದು ಸ್ಲೈಸ್ ಬ್ರೆಡ್/೨ ಪೂರಿ ೬-೧೨ ಅಳತೆ ೨. ಬೆಳವಣಿಗೆಗೆ ಬೇಕಾಗುವ ಆಹಾರಗಳ ಗುಂಪು ಬೇಳೆಕಾಳುಗಳು ೧ ಅಳತೆ ೨೫ ಗ್ರಾಂ:ಒಂದು ಚಿಕ್ಕ ಕಟೋರಿ ಬೇಳೆಯ ಸಾರು/ಒಂದು ಲೋಟ ಕಾಳಿನ ಪಲ್ಯ ೩-೬ ಅಳತೆ ಹಾಲು ೧ ಅಳತೆ ೧೫೦ ಗ್ರಾಂ:ಒಂದು ಲೋಟ ಹಾಲು ಅಥವಾ ಮೊಸರು ೨ ಅಳತೆ ಮೊಟ್ಟೆ, ಮೀನು, ಕೋಳಿ ಹಾಗೂ ಕುರಿ ಮಾಂಸ ೧ ಅಳತೆ ಒಂದು ಮೊಟ್ಟೆ/೩೦ ಗ್ರಾಂ ಮಾಂಸ/ಒಂದು ಸಾಮಾನ್ಯ ಅಳತೆಯ ಮೀನು ಅಥವಾ ಒಂದು ಮಾಂಸದ ತುಂಡು ೧ ಅಳತೆ ೩. ಸಂರಕ್ಷಕ ಆಹಾರಗಳು ಸೊಪ್ಪು ಮತ್ತು ಹಳದಿ ಬಣ್ಣದ ತರಕಾರಿಗಳು ೧ ಅಳತೆ ೫೦-೭೫ ಗ್ರಾಂ:ಅರ್ಧ ಕಟೋರಿ ಬೇಯಿಸಿದ ಸೊಪ್ಪು/ಒಂದು ಹಣ್ಣು ೧ ಅಳತೆಗಿಂತ ಹೆಚ್ಚು ಜೀವಸತ್ವ ಸಿ ಭರಿತ ತರಕಾರಿ, ಪಪಾಯ/ಒಂದು ಚಿಕ್ಕ ಮೂಸಂಬಿ ಕಿತ್ತಳೆ, ಟೊಮೆಟೋ ಮುಂತಾದವು ೧ ಅಳತೆ ೫೦-೭೫ ಗ್ರಾಂ:೧-೨ ತುಂಡು ೧ ಅಳತೆಗಿಂತ ಹೆಚ್ಚು ೪. ಇತರ ತರಕಾರಿಗಳು ಬೆಂಡೆಕಾಯಿ, ಬದನೆ, ಹೀರೇಕಾಯಿ ಮುಂತಾದವು ೧ ಅಳತೆ ೫೦-೭೫ ಗ್ರಾಂ:ಅರ್ಧ ಕಟೋರಿ ಯಾವುದೇ ತರಕಾರಿಯ ಪಲ್ಯ ಅಥವಾ ಒಂದು ಹಣ್ಣು ೨ ಅಥವಾ ಹೆಚ್ಚು ೫. ಶಕ್ತಿಯನ್ನು ನೀಡುವ ಆಹಾರಗಳು ಎಣ್ಣೆ ಅಥವಾ ಕೊಬ್ಬು ೧ ಅಳತೆ ೨೫ ಗ್ರಾಂ ೧-೨ ಅಳತೆ ಬೆಲ್ಲ ಅಥವಾ ಸಕ್ಕರೆ ೧ ಅಳತೆ ೨೫ ಗ್ರಾಂ -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ