Skip to main content

ಕನ್ಯಾ ತುಲಾ ವೃಶ್ಚಿಕ ಮಕರ ರಾಶಿಯವರು ಹೀಗಿರ್ತಾರೆ

ಸಾಡೇಸಾತಿಯನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ ಕನ್ಯಾ, ತುಲಾ ಮತ್ತು ವೃಶ್ಚಿಕ ರಾಶಿಯವರು. ಸಾಡೇಸಾತಿ ಬಗ್ಗೆ ಅಪನಂಬಿಕೆ ಅಥವಾ ಶನಿದೇವರ ಪ್ರಭಾವದ ಮೇಲೆ ಸಂಶಯವಿರುವವರು ಸಾಡೇಸಾತಿಯಲ್ಲಿರುವ ರಾಶಿಗಳವರನ್ನು ಮಾತನಾಡಿಸಿ ಗೊತ್ತಾಗುತ್ತೆ. ಅವರ ತಾಪತ್ರಯ ಕೇಳಿ ಸುಮ್ಮನಾಗದೇ ನಿಮ್ಮ ಕೈಲಾದ ಸಹಾಯ ಮಾಡಿ ಅವರಿಗೆ. ಶನಿಕಾಟ ನಿಮಗೂ ಮುಂದೊಂದು ದಿನ ಕಾದಿದೆ ಎಂಬುದು ಗೊತ್ತಿರಲಿ. ಇಲ್ಲಿ ರಾಶಿಗಳವರ ಕೆಲವೇ ಕೆಲವು ಉತ್ತಮ ಗುಣ ತಿಳಿಸಲಾಗಿದೆ. ಆದರೂ ಕೆಲವೊಂದು ರಾಶಿಗತವಾದ ಕೆಟ್ಟ ಗುಣಗಳೂ ಇರುತ್ತವೆ. ಕೆಟ್ಟ ಗುಣಗಳವರ ಸಹವಾಸದಿಂದ ಕೆಲವೊಮ್ಮೆ ಮತ್ತೊಬ್ಬರಿಗೆ ಕೆಟ್ಟದ್ದನ್ನು ಮಾಡುವಂತೆ ಮನಸ್ಸು ಪ್ರೋತ್ಸಾಹಿಸುತ್ತದೆ. ಅಲ್ಲದೇ ಶನಿದೇವನೂ ಕೂಡ ಕೆಟ್ಟ ಕೆಲಸ ಮಾಡಲು ಉತ್ತೇಜಿಸುತ್ತಾನೆ. ಅದಕ್ಕೆ ಸಾಡೇಸಾತಿ ಈ ಹಿಂದಿನ ಸರಣಿಯಿಂದಲೂ ಮತ್ತೊಬ್ಬರಿಗೆ ಕೆಟ್ಟದ್ದನ್ನು ಮಾಡಬೇಡಿ ಎಂದು ಹೇಳುತ್ತಿರುವುದು. ಕನ್ಯಾ : ರಾಶಿಯಿಂದ 2ನೇ ಸ್ಥಾನದಲ್ಲಿರುವ ಶನಿರಾಜನ ಏಳರಾಟದ 2 ಹಂತ ಮುಗಿಸಿ ಇನ್ನೂ ಪರೀಕ್ಷಾ ಕಾಲದಲ್ಲಿಯೇ ಇರುವ ಇವರು ತುಂಬಾ ಸಹನೆ, ತಾಳ್ಮೆ ಮತ್ತು ಶಾಂತ ಸ್ವಭಾವದವರಾಗಿರುತ್ತಾರೆ. ವೇಗದ ನಡಿಗೆಯೆಂದರೆ ಅಲಸ್ಯತನ. ಎಲ್ಲ ಕೆಲಸ ಶೀಘ್ರವಾಗಿ ಮುಗಿಸುವ ಮನೋಧೈರ್ಯವಿರುತ್ತದೆ. ಶ್ರೀಮಂತರಂತೆ ತಮ್ಮ ಜೀವನಶೈಲಿ ಇರಬೇಕು ಎಂದುಕೊಳ್ಳುವವರು. ಇತರರು ಇವರಿಂದ ಗೌರವ, ಮರ್ಯಾದೆ ಪಡೆಯುತ್ತಾರೆ. ಹಣ ಎಣಿಸಿ, ಎಣಿಸಿ ಬಳಸುತ್ತಾರೆ. ಒಂದಿಲ್ಲೊಂದು ವಿಶಿಷ್ಟ ಕಲೆಯಲ್ಲಿ ತಮ್ಮ ಮನಸ್ಸನ್ನು ತೊಡಗಿಸಿಕೊಂಡಿರುತ್ತಾರೆ. ಪರಿಚಿತರಿಗೆ ಸಹಾಯ ಮಾಡುತ್ತ, ಮನೆಯವರೊಂದಿಗೆ ಹಾಗೂ ವಯಸ್ಸಾದವರೊಂದಿಗೆ ಅತೀವ ಸಲುಗೆ ಮತ್ತು ಸ್ನೇಹ ಇಟ್ಟುಕೊಂಡಿರುತ್ತಾರೆ. ದೇವರೆಂದರೆ ಇವರಿಗಿಷ್ಟ. ಹೀಗಾಗಿ ಬಹಳಷ್ಟು ಸಮಯ ದೈವಭಕ್ತಿಗಾಗಿ ಮೀಸಲಿಡುತ್ತಾರೆ. ಕೆಲವೊಮ್ಮೆ ತಮ್ಮ ಅಜ್ಞಾನದಿಂದ ಮಾಡಿದ ತಪ್ಪಿನಿಂದ ಕಷ್ಟ ಅನುಭವಿಸುತ್ತ, ಪಶ್ಚಾತ್ತಾಪ ಪಡುತ್ತ ನೊಂದುಕೊಳ್ಳುತ್ತಾರೆ. ಏನಾದರೂ ಸಮಸ್ಯೆ ಅಥವಾ ತೊಂದರೆ ಇದ್ದರೆ ಅದನ್ನು ಬಗೆಹರಿಸಲು ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಮಾಡದೇ ಅದರಿಂದ ಪಾರಾಗಲು ಯಾವುದಾದರೂ ದಾರಿ ಹುಡುಕಿರುತ್ತಾರೆ. ಶಿಸ್ತಿನಿಂದ ಜೀವನಶೈಲಿ ನಡೆಸಿಕೊಂಡು, ಮನಸು ಬಯಸಿದರೆ ಊರೂರು ಸುತ್ತೋದು ಇವರಿಗಿಷ್ಟ. ಅತೀ ಕಡಿಮೆ ಹಣದಿಂದ ಹೆಚ್ಚು ದುಡ್ಡು ಮಾಡುವ ಬೆರಕಿ ಸ್ವಭಾವ ಇವರದು. ತುಲಾ : ಜನ್ಮರಾಶಿಯಲ್ಲಿ ಶನಿರಾಜನು ಏಳರಾಟದ ಒಂದನೇ ಹಂತ ಮುಗಿಸಿ 2ನೇ ಹಂತದಲ್ಲಿದ್ದಾನೆ. ಸಾಮಾನ್ಯವಾಗಿ ಈ ರಾಶಿಯವರು ಗಂಡಾಗಲಿ, ಹೆಣ್ಣಾಗಲಿ ಸ್ವಲ್ಪ ಸುಂದರವಾಗಿಯೇ ಇರುತ್ತಾರೆ. ಸದೃಢ ಮೈಕಟ್ಟು ಇವರದು. ಇವರನ್ನು ನೋಡುತ್ತಲಿದ್ದರೆ ನೋಡುತ್ತಲೇ ಇರಬೇಕು ಎನಿಸುವಷ್ಟು ಸುಂದರ ಮುಖಭಾವ ಇವರದು. ಇವರನ್ನು ಯಾರೇ ನೋಡಲಿ ಪ್ರೀತಿಯಿಂದಲೇ ಕಾಣುತ್ತಾರೆ. ಇವರಲ್ಲಿ ಎಷ್ಟೇ ವಿದ್ಯೆ, ಹಣ, ತೋಳ್ಬಲವಿದ್ದರೂ ಒಂದನ್ನೂ ದುರುಪಯೋಗ ಮಾಡಿಕೊಳ್ಳದೇ, ಸೊಕ್ಕಿನಿಂದಿರದೇ ಎಲ್ಲರೊಂದಿಗೆ ಸೂಕ್ಷ್ಮವಾಗಿಯೇ ನಡೆದುಕೊಳ್ಳುತ್ತಾರೆ. ದುಡುಕಿನ ಗುಣಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಕ್ರಮೇಣವಾಗಿ ಜೀವನದ ಮೆಟ್ಟಿಲೇರುತ್ತಾರೆ. ಎಲ್ಲ ಕೆಲಸ ಬುದ್ಧಿವಂತಿಕೆ ಮಾಡಿ ತೋರಿಸಿ ಇದೇ ತರಹ ಕೆಲಸ ಮಾಡಬೇಕು ಎಂದು ಇತರರನ್ನು ಹುರಿದುಂಬಿಸುತ್ತಾರೆ. ಪ್ರತಿದಿನ ಏನಾದರೊಂದು ಹೊಸ ವಿಚಾರ ತಿಳಿದುಕೊಳ್ಳುವ ಗುಣ ಇವರದು. ಸತ್ಯ, ನ್ಯಾಯ, ನೀತಿ, ಧರ್ಮದಿಂದ ಬಾಳುತ್ತ ಕಷ್ಟದಲ್ಲಿರುವವರನ್ನು ಕಂಡರೆ ಕೂಡಲೇ ತಮ್ಮಿಂದಾಗುವಷ್ಟು ಸಹಾಯ ಮಾಡುತ್ತಾರೆ. ಯಾವುದಾದರೊಂದು ಕಲೆಯು ಇವರಿಗೆ ಸಿದ್ಧಿಯಾಗಿಯೇ ಇರುತ್ತದೆ. ಇಷ್ಟಪಟ್ಟಂತೆ ಜೀವಿಸುವ ಗಟ್ಟಿಮನಸ್ಸು ಇವರದು. ದೇವರ ಬಗ್ಗೆ ನಂಬಿಕೆ ಸಾಕಷ್ಟಿದ್ದರೂ ಅನುಕೂಲಕ್ಕೆ ತಕ್ಕಂತೆ ಬದಲಾಗುವ ಊಸರವಳ್ಳಿ ಸ್ವಭಾವ ಇವರದು. ಕೆಲವೊಮ್ಮೆ ಇವರಾಡುವ ಮಾತಿನಿಂದಲೇ ಎಷ್ಟೋ ಜನರು ಇವರಿಂದ ದೂರ ಸರಿಯುತ್ತಾರೆ. ಅಷ್ಟೊಂದು ಮನಸಿಗೆ ನಾಟುವ ಹಾಗೆ ಮಾತನಾಡುತ್ತಾರೆ. ವೃಶ್ಚಿಕ : ಜನ್ಮರಾಶಿಯಿಂದ 12ನೇ ಸ್ಥಾನದಲ್ಲಿ ಶನಿರಾಜನು ಇವರಿಗೆ ಏಳರಾಟದ 1ನೇ ಹಂತದಲ್ಲಿ ಕಾಲಿಟ್ಟಿದ್ದಾನೆ. ನೋಡಲು ಸ್ವಲ್ಪ ಒರಟರಂತೆ ಕಾಣುವ ಇವರು, ತಮಗೆ ಬೇಕಾದ್ದನ್ನು ತಮ್ಮ ಮನಸ್ಸಿಗೆ ಹಿಡಿಸಿದ್ದನ್ನೇ ಮಾಡುತ್ತಾರೆ. ಛಲ, ಧೈರ್ಯದಿಂದಿದ್ದು, ಹಲವಾರು ರಹಸ್ಯಗಳು ತಮ್ಮಲ್ಲಿದ್ದರೂ ಯಾವುದನ್ನೂ ತೋರಗೊಡುವುದಿಲ್ಲ. ಎಲ್ಲರೊಂದಿಗೆ ಅತೀ ಸುಲಭವಾಗಿ ಸ್ನೇಹ ಗಳಿಸಿಕೊಳ್ಳುತ್ತಾರೆ. ಉಚ್ಚರು-ನೀಚರು ಎಂಬುದನ್ನು ಸಹ ಯೋಚಿಸದೇ ಎಲ್ಲರೂ ಬೇಕಿವರಿಗೆ. ಇವರೊಂಥರಾ ಕನ್ನಡಿಯಿದ್ದಂಗೆ ಹೇಗೆ ಬರುತ್ತೋ ಹಾಗಿರುತ್ತಾರೆ. ಯಾರಾದರೂ ಇವರನ್ನು ಹೊಗಳಿದರೆ ಇವರೂ ಹೊಗಳುತ್ತಾರೆ. ಇವರನ್ನು ತೆಗಳಿದರೆ ಅವರನ್ನು ಹಿಗ್ಗಾಮುಗ್ಗಾ ಬೈಯುತ್ತಾರೆ. ಒಳ್ಳೆಯದಕ್ಕೆ ಒಳ್ಳೆಯವರು, ಕೆಟ್ಟದ್ದಕ್ಕೆ ಅತೀ ಕೆಟ್ಟವರಿವರು. ಬುದ್ಧಿವಂತರು, ಸಮಾಜದಲ್ಲಿನ ಗಣ್ಯ ವ್ಯಕ್ತಿಗಳು ಅಥವಾ ಇವರಿಗಿಂತ ಅಂತಸ್ತಿನಲ್ಲಿ ದೊಡ್ಡವರು ಇವರಿಗೆ ಸ್ನೇಹಿತರು. ತಮಗೇನಾದರೂ ಹೆಚ್ಚು ಕಮ್ಮಿ ಆದರೆ ಎಲ್ಲಿಯ ನ್ಯಾಯ, ನೀತಿ, ಧರ್ಮ ಎಂದು ಗುರುಗುಡುತ್ತಾರೆ. ಬಹಳಷ್ಟು ಗೆಳೆತನದ ಕೊಂಡಿಗಳನ್ನು ಹೊಂದಿರುವ ಇವರು ಗೆಳೆಯರಿಂದಲೇ ಲಾಭ ಮಾಡಿಕೊಳ್ಳುತ್ತಾರೆ. ನಾಳೆ ಹೀಗೆಯೇ ಮಾಡಬೇಕು ಎಂಬ ಪ್ಲಾನ್ ಇವರ ಮನದಲ್ಲಿ ರೆಡಿಯಾಗಿಯೇ ಇರುತ್ತದೆ. ಆದರೆ ಇವರೆಲ್ಲರಿಗೂ ಸಹಾಯ ಮಾಡಿದರೂ ಯಾರೂ ಇವರ ಸಹಾಯವನ್ನು ನೆನೆಸುವುದಿಲ್ಲ. ಸ್ವಲ್ಪ ಬಿಜಿನೆಸ್ ಮೈಂಡ್ ಇದ್ದರೂ ಕುಟುಂಬದ ಸದಸ್ಯರು ಚೆನ್ನಾಗಿ ಇರಬೇಕೆಂದು ಬಯಸುವರು. ಕ್ರಮೇಣ ಯಶಸ್ಸಿನ ಮೆಟ್ಟಿಲು ಹತ್ತುವ ಸ್ವಭಾವ. ಎಲ್ಲವನ್ನೂ ತಾವೊಬ್ಬರೇ ಗಳಿಸುತ್ತ ಆಸ್ತಿ ಮಾಡುವ ಸೌಭಾಗ್ಯವಿರುತ್ತದೆ. ಮಕರ : ಶನಿರಾಜನು ಇವರಿಗೆ ಕರ್ಮಸ್ಥಾನವಾದ ದಶಮದಲ್ಲಿದ್ದಾನೆ ಈಗ. ಇವರು ಹೆಚ್ಚು ಹಠವಂತರು, ತಮ್ಮದೇ ಮಾತು ನಡೆಯಬೇಕು ಎನ್ನುತ್ತ ಅಧಿಕಾರಯುತವಾಗಿರುವರು. ಎಲ್ಲರಿಗೂ ಚೆನ್ನಾಗಿ ಕಾಣಿಸಬೇಕು ಎಂದು ಬಯಸುತ್ತ, ಮಾತಿನಲ್ಲಿ ಚತರರು. ಅಂದುಕೊಂಡ ಕೆಲಸವನ್ನು ಎಲ್ಲರಿಗಿಂತಲೂ ಬೇಗನೆ ಮುಗಿಸುತ್ತಾರೆ. ಏನೇ ಮಾಡಿದರೂ ಅದರ ಬಗ್ಗೆ ಮೊದಲೇ ಹತ್ತು ಬಾರಿ ಯೋಚಿಸುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ ಸೇವೆ ಮಾಡುವುದು ಇವರಿಗಿಷ್ಟ. ತಮ್ಮ ಪ್ರತಿಷ್ಠೆ ಇವರಿಗೆ ಎಲ್ಲರಿಗಿಂತ ಹೆಚ್ಚು. ಹೀಗಾಗಿ ಯಾವುದಕ್ಕೂ ಹೆದರುವುದಿಲ್ಲ. ಏನಾದರು ಮಾಡಬೇಕೆಂದು ಅಂದುಕೊಂಡರೆ ಆ ಕೆಲಸವನ್ನು ಮಾಡದೇ ಬಿಡಲ್ಲ. ಹೆಂಡತಿ ಮಕ್ಕಳೆಂದರೆ ಪಂಚಪ್ರಾಣ ಇವರಿಗೆ. ದುಡ್ಡೇ ದೊಡ್ಡಪ್ಪ ಎನ್ನುತ್ತಾ ಹಣವನ್ನು ಕೂಡಿಟ್ಟುಕೊಂಡು ಅದರಿಂದ ಏನಾದರೂ ಖರೀದಿಸುವುದು ಇವರ ಸ್ವಭಾವ. ಮೂಗಿನ ಮೇಲೆಯೆ ಕೋಪವಿರುವುದರಿಂದ ವೈರಿಗಳ ಪಡೆಯೇ ಇವರ ವಿರುದ್ಧ ಹಲ್ಲು ಕಡಿಯುತ್ತಿರುತ್ತದೆ. ಇವರ ಕೈಕೆಳಗಿನವರಿಂದ ದಬ್ಬಾಳಿಕೆಯಿಂದ ಕೆಲಸ ಮಾಡಿಸಿಕೊಳ್ಳುತ್ತ, ತನಗೆ ಶತ್ರುಗಳೇನಾದರೂ ಮಾಡುತ್ತಾರೆ ಎಂದು ಯಾವಾಗಲೂ ಎಚ್ಚರಿಕೆಯಿಂದಲೇ ಇರುತ್ತಾರೆ. ಹೆಡ್‌ಫೋನ್ ಹಾಕಿಕೊಂಡು ಇಷ್ಟವಾದ ಹಾಡುಗಳನ್ನು ಕೇಳುತ್ತ ವಾಕಿಂಗ್ ಮಾಡುವಾಗ ನಮ್ಮ ನಡಿಗೆಯ ವೇಗ ನಮಗರಿವಿಲ್ಲದಂತೆಯೇ ಹೆಚ್ಚುತ್ತ ಬೆವರಿನ ಹನಿಗಳು ಹೊರಹೊಮ್ಮುತ್ತಿರುತ್ತವೆ. ಇದೇ ರೀತಿ ಶನಿದೇವನ ಕಾಡಾಟದಲ್ಲಿ ಪರಿಹಾರಗಳನ್ನು ಮಾಡಿಕೊಂಡರೆ ಕಷ್ಟಗಳಿಂದ ಬರುವ ಕಣ್ಣೀರು ನಮಗರಿವಾಗುವುದಿಲ್ಲ. ಇನ್ನು ನಾವು ಪೂಜಿಸುವ ದೇವರು, ಶನಿಮಹಾರಾಜನ ಬಗ್ಗೆ ಹಣಬಲ, ತೋಳ್ಬಲ ಹೊಂದಿಕೊಂಡು ಅಜ್ಞಾನದಿಂದ, ದುರಂಹಕಾರದಿಂದ, ಸೊಕ್ಕಿನಿಂದ ಅಪ್ಪಿತಪ್ಪಿಯೂ ತಪ್ಪಾಗಿ ಮಾತನಾಡಬೇಡಿ. ಇಲ್ಲಾ ನಾನು ಮಾತನಾಡಿದ್ದೇನೆ ಈ ಮೊದಲು, ನನಗೇನೂ ಆಗಿಲ್ಲ, ಆಗೋದು ಇಲ್ಲಾ. ಬೇಕಾದ್ದಂತಹ ಕಷ್ಟ ಬರಲಿ ಎದುರಿಸುತ್ತೇನೆ ಅಷ್ಟೊಂದು ಧೈರ್ಯ, ಶಕ್ತಿ, ಸಾಮರ್ಥ್ಯ, ಬೆಂಬಲ ನನಗಿದೆ. "ಬರಲಿ ಶನಿ ನನಗೆ" ಏನು ಮಾಡುತ್ತಾನೋ ನೋಡಕೋಳ್ತಿನಿ ಎಂದು ಮಾತನಾಡುವವರು ನಮ್ಮ ನಿಮ್ಮೆಲ್ಲರ ನಡುವೆಯೇ ಇದ್ದಾರೆ. ಇರಲಿ, ನಾವೆಲ್ಲ ಇಂಥಹವರ ಮನೆಯವರಿಗೋಸ್ಕರ ಶನಿದೇವರಲ್ಲಿ ಪ್ರಾರ್ಥಿಸೋಣ, ಅವರ ಮನೆಯವರಿಗೆ ಅವರ ಬಾಡಿನಾದರೂ ಸಿಗಲಿ ಅಂತ. ವಾಸ್ತು ಟಿಪ್ಸ್ : ಮನೆಯ ಪೂರ್ವ, ಉತ್ತರ ದಿಕ್ಕಿನಲ್ಲಿ ಭಾರದ ವಸ್ತುಗಳನ್ನು ಇಡದೇ, ದಕ್ಷಿಣ ಮತ್ತು ಪಶ್ಚಿಮಕ್ಕಿಡಿ. -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ