Skip to main content

ಸಾಡೇಸಾತಿ : ಶನಿದೇವನ ಪಾದಗಳೆಂದರೇನು?

ಜಾತಕದಲ್ಲಿನ ಲಗ್ನ, ಜನ್ಮರಾಶಿ ಹಾಗೂ ಸೂರ್ಯನಿರುವ ಸ್ಥಾನಗಳ ಹತ್ತಿರ ಶನಿದೇವ ಬಂದಾಗ ಏಳರಾಟ ಶುರುವಾಗುತ್ತದೆ ಎಂಬುದು ನಿಮಗೆ ಗೊತ್ತಿರುವ ವಿಷಯವೇ. ಆದರೆ ಜನ್ಮರಾಶಿಗೆ ಹತ್ತಿರ ಬಂದಾಗ ಮಾತ್ರ ಶನಿದೇವನ ಹೆಚ್ಚಿನ ಫಲಾಫಲ ಅನುಭವಕ್ಕೆ ಬರುವುದರಿಂದ ಇದನ್ನೇ ಮುಖ್ಯವಾದ ಏಳರಾಟ ಎನ್ನಲಾಗುತ್ತದೆ. ಅದಕ್ಕೆಂದೇ ಶನಿರಾಜನು ರಾಶಿಗೆ ಹತ್ತಿರ ಬರುವ ಸಾಡೇಸಾತಿಯನ್ನೇ ಹೆಚ್ಚು ವಿಶ್ಲೇಷಣೆ ಮಾಡಲಾಗುತ್ತದೆ. ಕೆಲವರ ರಾಶಿಗೆ ಅಷ್ಟಮ, ಪಂಚಮ ಅಥವಾ ಅರ್ಧಾಷ್ಟಮ ಶನಿಕಾಟವಿದ್ದರೆ, ಲಗ್ನಕ್ಕೆ ಸಾಡೇಸಾತಿ ನಡೆಯುತ್ತಿರುತ್ತದೆ. ಕೆಲವೊಬ್ಬರಿಗೆ ರಾಶಿ, ಲಗ್ನ ಒಂದೇ ಆದರೆ, ಕೆಲವರಿಗೆ ಬೇರೆಯಾಗಿರುತ್ತದೆ. ಆದ್ದರಿಂದ ಸಾಡೇಸಾತಿ ಶನಿಪ್ರಭಾವ ರಾಶಿಗೆ ಇದೆಯೋ ಅಥವಾ ಲಗ್ನಕ್ಕೆ ಆರಂಭವಾಗಿದೆಯಾ ಎಂದು ಜಾತಕದ ಮೂಲಕ ಮೊದಲು ತಿಳಿದುಕೊಳ್ಳಬೇಕು. ಯಾಕೆಂದರೆ ಕೆಲವೊಂದು ದೊಡ್ಡ ಕೆಲಸ ಅಥವಾ ಹಣ ಹೂಡಿಕೆ ಮಾಡುವ ಮೊದಲು ತಮ್ಮ ಜಾತಕದಲ್ಲಿ ಶನಿಕಾಟ ಇದೆಯಾ ಅಥವಾ ಶನಿಬಲ ಇದೆಯಾ ಎಂಬುದನ್ನು ತಿಳಿದುಕೊಳ್ಳುವುದು ಬುದ್ಧಿವಂತರ ಲಕ್ಷಣ. ಶನಿದೇವನ ಪಾದಗಳು : ಜಾತಕದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಶನಿದೇವನು ಸಂಚರಿಸುವದನ್ನು ನಾಲ್ಕು ಪಾದಗಳಲ್ಲಿ ವಿಂಗಡಿಸಲಾಗಿದೆ. ಅವುಗಳನ್ನೇ ಬಂಗಾರ, ಬೆಳ್ಳಿ, ತಾಮ್ರ ಹಾಗೂ ಕಬ್ಬಿಣ ಪಾದಗಳೆಂದು ಕರೆಯಲಾಗುತ್ತದೆ. ಜನ್ಮರಾಶಿಯಿಂದ 1, 6, 11ನೇ ಸ್ಥಾನಕ್ಕೆ ಶನಿ ಬಂದರೆ ಬಂಗಾರ ಪಾದ. 2, 5, 9ನೇ ಸ್ಥಾನಕ್ಕೆ ಬಂದರೆ ಬೆಳ್ಳಿ ಪಾದ. 3, 7, 10ನೇ ಸ್ಥಾನಕ್ಕೆ ಬಂದರೆ ತಾಮ್ರಪಾದ. 4, 8, 12ನೇ ಸ್ಥಾನಗಳಿಗೆ ಬಂದರೆ ಕಬ್ಬಿಣ ಪಾದವೆಂದು ಗುರುತಿಸಲಾಗುತ್ತದೆ. ಶನಿದೇವನು ಬರುವ ವಿವಿಧ ಪಾದಗಳಲ್ಲಿನ ಫಲಾಫಲ ಈ ಮೊದಲೇ ನೀವು ಓದಿದ್ದೀರಿ. ಸಾಮಾನ್ಯವಾಗಿ ಶನಿದೇವನ ಬಂಗಾರಪಾದದಲ್ಲಿ ಚಿಂತೆ, ದುಃಖ ಸಿಗುತ್ತದೆ. ಬೆಳ್ಳಿಪಾದದಲ್ಲಿ ಧನಲಾಭ, ಯಶಸ್ಸು, ಕೀರ್ತಿ ನಿಮ್ಮದಾಗುತ್ತದೆ. ತಾಮ್ರಪಾದದಿಂದ ಹಣಕಾಸಿನ ಅನುಕೂಲ, ಸುಖ, ಸಮೃದ್ಧಿ ಲಭಿಸುತ್ತದೆ. ಲೋಹಪಾದದಿಂದ ಅತೀವ ಸಂಕಷ್ಟ ಬರುತ್ತದೆ. ಎಷ್ಟೋ ಜನರಿಗೆ ಸಾಡೇಸಾತಿಯೊಂದಿಗೆ ಶನಿದೇವನು ರಾಶಿಗೆ ಬರುವ ಪಾದಗಳ ಬಗ್ಗೆ ಮಾಹಿತಿಯೇ ಗೊತ್ತಿರುವುದಿಲ್ಲ. ಜಾತಕದ ಮೂಲಕ ಈ ಬಗ್ಗೆ ಮೊದಲೇ ತಿಳಿದುಕೊಂಡು ಆಯುರಾರೋಗ್ಯ, ಐಶ್ವರ್ಯ ಹೆಚ್ಚಿಸಿಕೊಳ್ಳಬಹುದು. ಆದರೆ ಹೆಚ್ಚು ಜನರಿಗೆ "ಹಾಸಿಗೆ ಇದ್ದಷ್ಟೇ ಕಾಲು ಚಾಚು"ವ ಸ್ವಭಾವವಿರುವುದರಿಂದ ತಮ್ಮ ಜಾತಕವನ್ನೇ ನೋಡಲು ಹೋಗುವುದಿಲ್ಲ. ಉತ್ತಮ ಸಮಯವಿದ್ದರೂ ಗೊತ್ತಾಗದೇ ಸುಮ್ಮನೆ ಕಾಲಹರಣ ಮಾಡುತ್ತಾರೆ. ಅದೃಷ್ಟ ಬಂದು ಬಾಗಿಲು ಬಡಿದರೂ ಎದ್ದು ಬಾಗಿಲು ತೆಗೆಯದೇ, ಬಾಗಿಲು ತೆಗೆದರೆ ಎಂಥಾ ರಿಸ್ಕ್ ಇದೆಯೋ ಎಂದು ಸಂಶಯ ಪ್ರವೃತ್ತಿ, ಅಪನಂಬಿಕೆಯಿಂದ ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳುತ್ತಾರೆ. ಶನಿಬಲವಿದ್ದರೆ "ತಿಪ್ಪಿ ಹೋಗಿ ಉಪ್ಪರಿಗೆ" ಆಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡವರಿಗೆ ಭಾಗ್ಯೋದಯವಾಗಿ, ಸುಖದ ಸುಪ್ಪತ್ತಿಗೆ ಸುಲಭವಾಗಿ ಸಿಗುತ್ತದೆ. ಸಾಡೇಸಾತಿ ಸಮಯದಲ್ಲಿ ಶನಿದೇವನು ಬರುವ ಪಾದಗಳನ್ನು ಜಾತಕ ಮೂಲಕ ನಿಖರವಾಗಿ ದಿನಾಂಕ ಸಹಿತ ತಿಳಿದುಕೊಳ್ಳಬಹುದು. ಮುಂದಿನ ಭವಿಷ್ಯ ಚೆನ್ನಾಗಿರಬೇಕೆಂದರೆ ಈ ಸಮಯ ತಿಳಿದುಕೊಳ್ಳಬೇಕು. ಅಷ್ಟಮ ಶನಿ : ಜನ್ಮರಾಶಿಗೆ ಬರುವ ಅಷ್ಟಮಶನಿ ಸಮಯ ಇರುವುದು ಕೇವಲ ಎರಡೂವರೆ ವರ್ಷಗಳಷ್ಟೇ. ಆದರೆ ಈ ಎರಡೂವರೆ ವರ್ಷಗಳು ಸಾಡೇಸಾತಿ ದಿನಗಳಿಗಿಂತ ಕಠೋರವಾಗಿರುತ್ತವೆ. ಆದರೆ ಒಂದು ವಿಪರ್ಯಾಸ ಎಂದರೆ ಅಷ್ಟಮಶನಿಯಲ್ಲಿ ಬರೀ ಕೆಟ್ಟದ್ದೇ ಆಗುವುದು. ಸಾಡೇಸಾತಿಯಲ್ಲಿ ಆದಂಗೆ ಒಂದಿನಿತು ಒಳ್ಳೆಯದೇನೂ ಆಗುವುದಿಲ್ಲ. ಮೀನ ರಾಶಿಯವರಿಗೆ ಈಗ ಅಷ್ಟಮಶನಿ ನಡೀತಾ ಇದೆ. ಕರ್ಕ ರಾಶಿಗೆ ಅರ್ಧಾಷ್ಟಮ ಶನಿಕಾಟ ಇದೆ. ದೇವರು ನಮಗೆ ಎಷ್ಟು ನೆನಪಿನ ಶಕ್ತಿ ಕೊಟ್ಟಿದ್ದಾನೋ ಅಷ್ಟೇ ಮರೆವಿನ ಶಕ್ತಿಯನ್ನೂ ಕೊಟ್ಟಿದ್ದಾನೆ. ಒಮ್ಮೆ ನೆನಪಿಸಿಕೊಳ್ಳಿ ಹಿಂದೆ ನಿಮ್ಮ ಆತ್ಮೀಯರು, ಕುಟುಂಬದ ಸದಸ್ಯರು ಅಗಲಿದಾಗ ಆಗಿರುವ ಮಾನಸಿಕ ಆಘಾತ. ದೇಹಕ್ಕಾದ ಗಾಯಗಳಿಂದ ಅನುಭವಿಸಿದ ನೋವುಗಳನ್ನು. ಈಗ ಅವ್ಯಾವು ನೆನಪಿಗೆ ಬರಲ್ಲ. ಬಂದರೂ ಆ ಸಮಯದಲ್ಲಿ ಕೊಟ್ಟಷ್ಟು ಆಘಾತ ಕೊಡುವುದಿಲ್ಲ. ಇದನ್ನೇ ದೈವಶಕ್ತಿ ಎನ್ನುವುದು. ಜೀವನದಲ್ಲಿ ನಾವು ಮಾಡುವ ಕರ್ಮಗಳು ಒಂಥರಾ "ಜೈವಿಕ ಕ್ರಿಯೆ" ಇದ್ದಂತೆ. ನಾವು ಒಬ್ಬರಿಗೆ ಮೋಸ ಮಾಡಿದರೆ ನಮಗೆ ಮತ್ತೊಬ್ಬರು ಮೋಸ ಮಾಡಲು ರೆಡಿಯಾಗಿಯೇ ಇರುತ್ತಾರೆ. ಅವರಿಗೆ ಮೋಸ ಮಾಡಲು ಮತ್ತೊಬ್ಬರು ಹುಟ್ಟಿಕೊಂಡಿರುತ್ತಾರೆ. ಇದೊಂಥರಾ ಚೈನ್ ಸಿಸ್ಟೆಮ್ ಎನ್ನಬಹುದು. ಸಣ್ಣವರನ್ನು ದೊಡ್ಡವರು, ದೊಡ್ಡವರನ್ನು ಅತೀ ದೊಡ್ಡವರು, ಅತೀ ದೊಡ್ಡವರನ್ನು ದೇವರು ಶಿಕ್ಷಿಸುವ ಚೈನ್! "ಒಬ್ಬರಿಗೆ ಮಾಡಿದ ಮೋಸ, ಮನೆಮಂದಿಗೆಲ್ಲ ಶಾಪ" ಎಂಬ ಮಾತು ನೀವು ಕೇಳಿರಬಹುದು. ನೀವು ಮಾಡುವ ಒಂದು ಸಣ್ಣ ಮೋಸ ಕೂಡ ಮನೆಮಂದಿಗೆಲ್ಲ ಪಾಪವಾಗಿ ಸುತ್ತಿಕೊಳ್ಳುತ್ತದೆ. ತೊಂದರೆಗಳು ಬಂದಾಗ ಅರಿವಿಗೇನೆ ಬರುವುದಿಲ್ಲ. ಏಕಿಷ್ಟು ತೊಂದರೆಗಳು ಎಂದು ಚಿಂತಿಸುತ್ತ ಕೊರಗಬೇಕಾಗುತ್ತದೆ. ಕೆಲವರು ಇರುತ್ತಾರೆ "ಗೋಮುಖ ವ್ಯಾಘ್ರ"ರ ತರಹ. ಹಸು ಸ್ವಭಾವದವರಂತೆ ದೂರದಿಂದ ಕಾಣುತ್ತ ಎಲ್ಲರ ಮನಗೆದ್ದು, ಹತ್ತಿರವಾಗುತ್ತಿದ್ದಂತೆ ಕ್ರೂರಬುದ್ಧಿ ತೋರಿಸುವ ವಿಕೃತ ಮನಸ್ಸು ಹೊಂದಿರುತ್ತಾರೆ. ಇಂಥಹವರನ್ನು "ಆಕಳ ಮಾರಿ, ಕತ್ತಿ ಒದಕಿ"ಯವರು ಎನ್ನಬಹುದು. "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಎಂಬಂತೆ ಕೈಕೆಳಗಿನ ಕೆಲಸದವರಿಗೆ, ಬಡವ, ನಿರ್ಬಲರಿಗೆ ತೊಂದರೆ ನೀಡುತ್ತ ಸಂತಸಪಡುತ್ತಿರುತ್ತಾರೆ. ಆದರೆ ಇವರ ಮೇಲೆ ಶುರುವಾಗುತ್ತದೆ ನೋಡಿ ಶನಿದೇವನ ಬ್ರಹ್ಮಾಸ್ತ್ರಗಳ ಸುರಿಮಳೆ. ಆವಾಗ ಗೊತ್ತಾಗುತ್ತದೆ ಮಾಡಿದ ಪಾಪದ ಫಲ. ಕಣ್ಣಲ್ಲಿ ಕಣ್ಣೀರಲ್ಲ ರಕ್ತ ಬರುತ್ತದೆ. ಆದರೆ ಒಂದು ವಿಷಯ ಇವರಿಗೆ ಅರಿವಿರುವುದಿಲ್ಲ. ಇಂಥಹವರಿಗೆ ಕೆಟ್ಟದ್ದನ್ನು ಮಾಡುವುದು ಅತೀ ಸುಲಭದ ಕೆಲಸ. ನಿಮಗೆ ಗೊತ್ತಿರಬಹುದು. ಒಬ್ಬರಿಗೆ ಒಳ್ಳೆಯದು ಮಾಡುವುದು ತುಂಬಾ ಕಷ್ಟ. ಆದರೆ ಮತ್ತೊಬ್ಬರಿಗೆ ಕೆಟ್ಟದ್ದನ್ನ ಮಾಡಿ ಜೀವನ ಹಾಳು ಮಾಡುವುದು ಅತೀ ಸುಲಭ. ಆದರೆ ಎಷ್ಟೋ ಜನರು ಅತೀ ಸುಲಭದ ಕೆಲಸವನ್ನೇ ಮಾಡುತ್ತಿರುತ್ತಾರೆ. ಇಂಥಹವರಿಗೆ ಶನಿದೇವನ ಕುದೃಷ್ಟಿ ತಗುಲಿದಾಗ ಗೊತ್ತಾಗುತ್ತದೆ ಕಷ್ಟದ ಕೆಲಸ ಮಾಡಿದ್ದರೆ ಜೀವನಪೂರ್ತಿ ಕಷ್ಟಪಡಬೇಕಾಗಿರಲಿಲ್ಲ ಎಂಬುದು. ಆದರೆ ಇಂಥವರಿಗೆ ಬೇಕಾಗಿರಲ್ಲ ಶನಿದೇವನ ಪ್ರಭಾವ ಬಗ್ಗೆ ತಿಳಿಸುವುದು. ಏಕೆಂದರೆ ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದೆ. ವಾಸ್ತು ಟಿಪ್ಸ್ : ಆಗ್ನೇಯ ಮೂಲೆಯಲ್ಲಿ ಅಪ್ಪಿತಪ್ಪಿಯೂ ನೀರಿರುವ ವಸ್ತುಗಳನ್ನು ಇಡಬೇಡಿ. ಇಟ್ಟರೆ ಮನೆಯಲ್ಲಿ ಎಲ್ಲರೂ ಜಗಳವಾಡುತ್ತ ಎಲ್ಲರ ಮನ ಬಿಸಿಯಾಗಿಯೇ ಇರುತ್ತದೆ. ವಾಸ್ತು ಟಿಪ್ಸ್ : ಆಗ್ನೇಯ ಮೂಲೆಯಲ್ಲಿ ಅಪ್ಪಿತಪ್ಪಿಯೂ ನೀರಿರುವ ವಸ್ತುಗಳನ್ನು ಇಡಬೇಡಿ. ಇಟ್ಟರೆ ಮನೆಯಲ್ಲಿ ಎಲ್ಲರೂ ಜಗಳವಾಡುತ್ತ ಎಲ್ಲರ ಮನ ಬಿಸಿಯಾಗಿಯೇ ಇರುತ್ತದೆ. ಶನಿದೇವನ ಕೃಪೆಗೆ : ಯಾವುದೇ ದೇವಸ್ಥಾನಕ್ಕೆ ಹೋದರೂ ಕನಿಷ್ಠ ಹತ್ತು ನಿಮಿಷ ಅಲ್ಲಿರಬೇಕು. ನಿಜವಾದ ಭಕ್ತಿ ನಿಮ್ಮಲ್ಲಿದ್ದರೆ ಶನಿಕಾಟದಿಂದ ಮುಕ್ತಿ ಸಿಗುತ್ತದೆ. -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ