1. ಅಡುಗೆಯಲ್ಲಿ ಕೆನೆ ರಹಿತ ಅಥವಾ ಕಡಿಮೆ ಕೊಬ್ಬುಯುಕ್ತ ಹಾಲಿನ ಉತ್ಪನ್ನಗಳನ್ನು (ಹಾಲು, ಯೋಗರ್ಟ್, ಚೀಸ್, ಬೆಣ್ಣೆ, ಕೆನೆ, ಐಸ್‌ಕ್ರೀಂ ಇತ್ಯಾದಿ) ಉಪಯೋಗಿಸಿ.
2. ಒಂದುವೇಳೆ ಯಾವುದಾದರೂ ಅಡುಗೆಗೆ ಎಣ್ಣೆ/ಬೆಣ್ಣೆ/ತುಪ್ಪ ಅತ್ಯವಶ್ಯ ಎನಿಸಿದರೆ, ಕ್ಯಾನೊಲ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸಣ್ಣ ಪ್ರಮಾಣದಲ್ಲಿ ಉಪಯೋಗಿಸಬಹುದು. ಕಾವಲಿ ಅಥವಾ ಬಾಣಲೆಗೆ ಎಣ್ಣೆಯನ್ನು ಸುರಿಯುವುದಕ್ಕೆ ಬದಲಾಗಿ, ಎಣ್ಣೆಯನ್ನು ಸವರುವ ಅಥವಾ ಉಜ್ಜುವ ಅಭ್ಯಾಸವನ್ನು ಮಾಡ್ಕೊಳ್ಳಿ.
3. ಅಡುಗೆಗೆ ನಾನ್-ಸ್ಟಿಕ್ ಪಾತ್ರೆಗಳನ್ನೇ ಉಪಯೋಗಿಸಿ.
4. ಮೊದಲು ಪಾತ್ರೆಯನ್ನು ಬಿಸಿಮಾಡಿಕೊಳ್ಳಿ, ಆ ಮೇಲೆ ಎಣ್ಣೆಯನ್ನು ಸ್ಪ್ರೆà ಮಾಡಿ ಅಥವಾ ಪಾತ್ರೆಗೆ ಸವರಿ. ಕಾವಲಿ ಬಿಸಿಯಾಗಿದ್ದರೆ, ಅದರಲ್ಲಿ ಎಣ್ಣೆ ಚೆನ್ನಾಗಿ ಹರಡುತ್ತದೆ.
5. ಕರಿಯುವುದಕ್ಕೆ ಬದಲಾಗಿ ಸಾಧ್ಯವಿದ್ದರೆ, ಹಬೆಯಲ್ಲಿ ಬೇಯಿಸಿ, ಬಾರ್ಬೆಕ್ಯೂ ಮಾಡಿ ಅಥವಾ ಗ್ರಿಲ್ ಮಾಡಿ.
6. ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಬೇಡಿ. ಹೀಗೆ ಮಾಡುವುದರಿಂದ ಆಹಾರದ ಪೋಷಕಾಂಶಗಳು ನಷ್ಟವಾಗುತ್ತವೆ.
7. ತರಕಾರಿಗಳನ್ನು ಪೊಟ್ಯಾಷಿಯಂ ಪರಮಾಂಗನೇಟ್ ಸೇರಿಸಿದ ನೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ, ಅದರಲ್ಲಿರಬಹುದಾದ ರಾಸಾಯನಿಕಗಳು ಅಥವಾ ಕೀಟನಾಶಕಗಳು ನಾಶವಾಗುತ್ತವೆ. ಆ ಮೇಲೆ, ತರಕಾರಿಗಳನ್ನು ಶುದ್ಧ ನೀರಿನಲ್ಲಿ ತೊಳೆಯಿರಿ.
8. ತರಕಾರಿಗಳನ್ನು ಅತಿಯಾಗಿ ಬೇಯಿಸಬೇಡಿ. ಹೀಗೆ ಮಾಡುವುದರಿಂದ, ಅವುಗಳಲ್ಲಿರುವ ಹೆಚ್ಚುವರಿ ಪೋಷಕಾಂಶಗಳು ನಷ್ಟವಾಗಿ, ಸ್ವಲ್ಪ$ ಅಂಶವಷ್ಟೇ ನಿಮಗೆ ದೊರಕುತ್ತದೆ.
9. ಈರುಳ್ಳಿಯನ್ನು ಸರ್ವ್ ಮಾಡುವುದಕ್ಕೆ 15 ನಿಮಿಷಕ್ಕೆ ಮೊದಲು ಅದನ್ನು ಕತ್ತರಿಸಿ ಇಡಿ. ಹೀಗೆ ಮಾಡುವುದರಿಂದ, ಕ್ವೆರ್ಸೆಟಿನ್ ಎಂಬ ಫೈಟೋ ಕೆಮಿಕಲ್ ಮತ್ತು ಆಂಟಿಆಕ್ಸಿಡಾಂಟ್ ಕ್ರಿಯಾಶೀಲವಾಗಿ, ಆಕ್ಸಿಡೇಷನ್ ಹೊಂದಲು ಸಹಾಯಮಾಡುತ್ತದೆ.
10. ಆಹಾರ ಪದಾರ್ಥಗಳ ಪೊಟ್ಟಣದ ಹೊರಮೈಗೆ ಅಂಟಿಸಿರುವ ಲೇಬಲ್‌ನ್ನು ಸರಿಯಾಗಿ ಗಮನಿಸಿ, ಪಟ್ಟಿಯಲ್ಲಿ ಕಡಿಮೆ ಕೊಬ್ಬು ಅಥವಾ ಇಳಿಸಿದ ಕೊಬ್ಬು ಎಂದು ನಮೂದಾಗಿದೆಯೇ ಎಂದು ನೋಡಿ. ಕೊಲೆಸ್ಟ್ರಾಲ್ ರಹಿತ ಪಟ್ಟಿಯನ್ನು ನೋಡಿ ಮೈಮರೆಯದಿರಿ. ಅಧಿಕಾಂಶ ತರಕಾರಿಯ ಉತ್ಪನ್ನಗಳು ಕೊಲೆಸ್ಟ್ರಾಲ್ ರಹಿತವಾಗಿಯೇ ಇರುತ್ತವೆ. ಆದರೆ ಇದು ಆಹಾರದಲ್ಲಿ ಗಮನಿಸಲೇಬೇಕಾದ ಕೊಬ್ಬಿನ ಅಂಶವಾಗಿದೆ.
11. ರೂಢಿಯಲ್ಲಿರುವ ದಿಢೀರ್ ಆಹಾರಗಳನ್ನು ಬಿಟ್ಟುಬಿಡಿ. ಅದಕ್ಕೆ ಬದಲಾಗಿ, ಸಲಾಡ್‌ಗಳು, ಸ್ಯಾಂಡ್‌ವಿಚ್‌ಗಳು, ಮತ್ತು ತಾಜಾ ಹಣ್ಣುಗಳು ಉತ್ತಮ ದಿಢೀರ್ ಆಹಾರಗಳಾಗಬಹುದು.
12. ನೀವು ಹೊಟೇಲ್‌ಗೆ ಹೋಗುತ್ತೀರಾದರೆ, ಅಡುಗೆಯಲ್ಲಿ ಅತ್ಯಲ್ಪ$ ಪ್ರಮಾಣದಲ್ಲಿ ಎಣ್ಣೆಯನ್ನು ಉಪಯೋಗಿಸಲು ಅವರಿಗೆ ವಿಶೇಷ ಸೂಚನೆಯನ್ನು ಕೊಡಿ.
13. ನಿಮಗೆ ಹಸಿವಾಗಿದ್ದರೆ ಮಾತ್ರವೇ ತಿನ್ನಿ.
14. ಟಿ.ವಿ. ನೋಡುತ್ತಿರುವಾಗ, ಆಹಾರ ಸೇವಿಸಬೇಡಿ. ಟಿ.ವಿ. ನೋಡುತ್ತಿರುವಾಗ ಆಹಾರ ಸೇವಿಸಿದರೆ, ಎಷ್ಟು ಆಹಾರ ತಿಂದೆವು ಎಂದೇ ಗೊತ್ತಾಗುವುದಿಲ್ಲ.
15. ಸೀಸ ಅಥವಾ ಅಲ್ಯುಮೀನಿಯಂ ಬಾಣಲೆ ಅಥವಾ ಕಾವಲಿವನ್ನು ಯಾವತ್ತೂ ಅಡಿಗೆಗಾಗಿ ಉಪಯೋಗಿಸಬಾರದು. ಸೀಸವು ಜೀರ್ಣಾಂಗದ ತೀವ್ರ ಅಸಹಜತೆಗಳನ್ನು ಉಂಟುಮಾಡುತ್ತದೆ. ಅಲ್ಯುಮೀನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ, ಅದರಿಂದ ಬಿಡುಗಡೆಯಾಗುವ ಅಲ್ಯುಮೀನಿಯಂ ಮೆದುಳಿನ ಅಂಗಾಂಶ ಗಳಲ್ಲಿ ಸಂಗ್ರಹವಾಗುತ್ತದೆ, ಮತ್ತು ಈ ಕಾರಣದಿಂದ ಅಲಿlಮರ್ಸ್ ಕಾಯಿಲೆ ಬರಬಹುದು.
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments